೧೯೪೦

ಶತಮಾನಗಳು:೧೯ನೇ ಶತಮಾನ - ೨೦ನೇ ಶತಮಾನ - ೨೧ನೇ ಶತಮಾನ
ದಶಕಗಳು:೧೯೧೦ರ ೧೯೨೦ರ ೧೯೩೦ರ  - ೧೯೪೦ರ -  ೧೯೫೦ರ  ೧೯೬೦ರ  ೧೯೭೦ರ
ವರ್ಷಗಳು:೧೯೩೭ ೧೯೩೮ ೧೯೩೯ - ೧೯೪೦ - ೧೯೪೧ ೧೯೪೨ ೧೯೪೩
೧೯೪೦ರ ವಿಷಯಗಳು:
ವಿಷಯ:      ಪುರಾತತ್ವ ಶಾಸ್ತ್ರ - ವಾಸ್ತುಶಾಸ್ತ್ರ - ಕಲೆ
ಉಡ್ಡಯನಶಾಸ್ತ್ರ - ಚಲನಚಿತ್ರ - ಸಾಹಿತ್ಯ (ಕಾವ್ಯ)
ಪವನ ವಿಜ್ಞಾನ - ಸಂಗೀತ (ದೇಶೀಯ ಸಂಗೀತ)
ರೈಲು ಸಾರಿಗೆ - ರೇಡಿಯೋ - ವಿಜ್ಞಾನ
ಕ್ರೀಡೆ - ದೂರದರ್ಶನ
ದೇಶಗಳು:      ಆಸ್ಟ್ರೇಲಿಯಾ - ಕ್ಯಾನಡಾ - ಭಾರತ - ಆಯರ್ಲಂಡ್‍‍ - ಮಲೇಶಿಯ‍‍ - ನ್ಯೂ ಜೀಲಂಡ್‍‍ - ನಾರ್ವೆ - ಸಿಂಗಾಪೂರ‍್‍‍ - ದಕ್ಷಿಣ ಆಫ್ರಿಕಾ - ಸೋವಿಯಟ್ ಒಕ್ಕೂಟ - ಬ್ರಿಟನ್‍‍ - ಜಿಂಬಾಬ್ವೆ
ನಾಯಕರು:    ಗಣರಾಜ್ಯಗಳು - ರಾಜಕೀಯ ನಾಯಕರು
ಧಾರ್ಮಿಕ ನಾಯಕರು - ನ್ಯಾಯ
ವರ್ಗಗಳು: ಜನನಗಳು - ಮರಣಗಳು - ಕೃತಿಗಳು - ಪರಿಚಯಗಳು
ಪ್ರತಿಷ್ಠಾನಗಳು - ಅಳಿವುಗಳು - ಪ್ರಶಸ್ತಿಗಳು

೧೯೪೦ (MCMXL) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೯೪೦ ರ ಘಟನೆಗಳು

ಜನವರಿ

ಫೆಬ್ರವರಿ

 • ಫೆಬ್ರವರಿ ೧ - ಎರಡನೇ ವಿಶ್ವಯುದ್ಧ: ಶೀತ ಯುದ್ಧ - ರಷ್ಯಾದ ಸೈನ್ಯಗಳು ಕರೀಲಿಯಾದ ಭೂಸಂಧಿಯನ್ನು ವಶಪಡಿಸಿಕೊಂಡಿದ್ದ ಫಿನ್ಲಂಡ್‍ನ ಸೇನೆಗಳ ಮೇಲೆ ಪ್ರಮುಖವಾದ ಆಕ್ರಮಣ ಪ್ರಾರಂಭಿಸಿದವು.
 • ಫೆಬ್ರವರಿ ೭ - ಆರ್‍‍ಕೆಒ, ವಾಲ್ಟ್ ಡಿಸ್ನಿಯ ಎರಡನೇ ಪೂರ್ಣ ಸಮಯದ ಅನುಪ್ರಾಣಿತ ಚಲನಚಿತ್ರ, ಪಿನೊಕ್ಕಿಯೊವನ್ನು ಬಿಡುಗಡೆ ಮಾಡಿತು.
 • ಫೆಬ್ರವರಿ ೧೬ - ಎರಡನೇ ವಿಶ್ವಯುದ್ಧ: ಆಲ್ಟ್‍‍ಮಾರ್ಕ್ ಪ್ರಸಂಗದಲ್ಲಿ ಬ್ರಿಟಿಷ್ ವಿಧ್ವಂಸಕ ನೌಕೆ ಕೊಸ್ಯಾಕ್ ಜರ್ಮನಿಯ ತೈಲನೌಕೆ ಆಲ್ಟ್‍‍ಮಾರ್ಕನ್ನು ನೈಋತ್ಯ ನಾರ್ವೆಯ ಯೋಯ್ಸಿಂಗ್‍‍ಫ್ಯೋರ್ಡ್‍‍ನ ಒಳಗೆ ಹಿಂಬಾಲಿಸಿತು.
 • ಫೆಬ್ರವರಿ ೨೭ - ಮಾರ್ಟಿನ್ ಕಾಮೆನ್ ಮತ್ತು ಸ್ಯಾಮ್ ರೂಬನ್ ಕಾರ್ಬನ್-೧೪ನ್ನು ಕಂಡುಹಿಡಿದರು.

ಮಾರ್ಚಿ

 • ಮಾರ್ಚಿ ೨ - ಎಲ್ಮರ್ ಫಡ್ ಎಲ್ಮರ್'ಸ್ ಕ್ಯಾಂಡಿಡ್ ಕ್ಯಾಮರಾ ಎಂಬ ಕಿರುಚಿತ್ರದಲ್ಲಿ ತನ್ನ ರಂಗಪ್ರವೇಶ ಮಾಡಿದನು.
 • ಮಾರ್ಚಿ ೩ - ಸ್ವೀಡನ್‍‍ನಲ್ಲಿ, ಒಂದು ಟೈಂ ಬಾಂಬ್ ಸ್ವೀಡನ್‍‍ನ ಸಮತಾವಾದಿಗಳ ವೃತ್ತಪತ್ರಿಕೆ ನೋರ್ಸ್ಕೆನ್‍‍ಫ್ಲಮಾನ್‍‍ನ ಕಚೇರಿಯನ್ನು ಧ್ವಂಸಮಾಡಿತು- ಐವರ ಸಾವು.
 • ಮಾರ್ಚಿ ೫- ಸೋವಿಯಟ್‍‍ನ ಪ್ರಧಾನ ಸಮಿತಿಯ ಸದಸ್ಯರು: ಸ್ಟಾಲಿನ್, ಮೊಲಟಾಫ್, ಲಜಾರ್ ಕಗನೋವಿಚ್, ಮ್ಯಿಖಯೀಲ್ ಕಲೀನಿನ್, ಕ್ಲ್ಯಿಮ್ಯೆಂಟ್ ವಾವ್ರಶೀಲಫ್ ಮತ್ತು ಲವ್ರೆಂಟಿ ಬೇರಿಯಾ, ಬೇರಿಯಾ ತಯಾರಿಸಿದ ಒಂದು ಆದೇಶಕ್ಕೆ ಸಹಿ ಹಾಕಿದರು. ಈ ಆದೇಶದಲ್ಲಿ ೧೪,೭೦೦ ಪೋಲಂಡ್‍‍ನ ಯುದ್ಧಕೈದಿಗಳ ಸಹಿತ, ೨೫,೭೦೦ ಪೋಲಂಡ್‍‍ನ ಪ್ರಾಜ್ಞ ವರ್ಗದವರನ್ನು ಶಿಕ್ಷಿಸುವುದೆಂದು ಬರೆದಿತ್ತು. ಈ ಕ್ರಮವು ಕಟಿನ್ ನರಮೇಧ ಎಂಬುದಾಗಿ ಕರೆಯಲ್ಪಡುತ್ತದೆ.
 • ಮಾರ್ಚಿ ೧೨ - ಸೋವಿಯಟ್ ಒಕ್ಕೂಟ ಮತ್ತು ಫಿನ್ಲಂಡ್, ಶೀತ ಯುದ್ಧವನ್ನು ಸಮಾಪ್ತ ಮಾಡುವುದಾಗಿ ಒಂದು ಶಾಂತಿ ಒಪ್ಪಂದಕ್ಕೆ ಮಾಸ್ಕೊದಲ್ಲಿ ಸಹಿಹಾಕಿದವು . ಫಿನ್ಲಂಡ್‍‍ನ ಜನರು, ಇಡೀ ಜಗತ್ತಿನ ಸಹಿತ, ಕಠೋರ ಶರತ್ತುಗಳಿಂದ ತಲ್ಲಣಿಸಿದರು.
 • ಮಾರ್ಚಿ ೧೮ - ಎರಡನೇ ವಿಶ್ವಯುದ್ಧ: ಆಕ್ಸಿಸ್ ಶಕ್ತಿಗಳು - ಅಡೋಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೊಲಿನಿ, ಆಲ್ಪ್‍‍ಸ್‍‍ನಲ್ಲಿರುವ ಬ್ರೆನರ್ ಕಣಿವೆಯಲ್ಲಿ ಭೇಟಿಯಾಗಿ, ಫ್ರಾನ್ಸ್ ಮತ್ತು ಬ್ರಿಟನ್ ವಿರುದ್ಧ ಒಂದು ಒಕ್ಕೂಟ ರಚಿಸಲು ಒಪ್ಪಿದರು.
 • ಮಾರ್ಚಿ ೨೧ - ಏಡ್ವಾರ್ ಡಾಲಾಡ್ಯೇ ಫ್ರಾನ್ಸ್‍‍ನ ಪ್ರಧಾನ ಮಂತ್ರಿ ಪದಕ್ಕೆ ರಾಜೀನಾಮೆ ಕೊಟ್ಟರು. ಅವರ ಸ್ಥಳಕ್ಕೆ ಬದಲಾಗಿ ಪಾಲ್ ರೆನೋ ಬಂದರು.
 • ಮಾರ್ಚಿ ೨೩ - ಪಾಕಿಸ್ತಾನ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ಒಕ್ಕೂಟವು ಚೇತನಗೊಳಿಸಿತು: ಭಾರತದ ಎಲ್ಲ ಮೂಲೆಯಿಂದ ಮುಸ್ಲಿಮರು ಇಕ್ಬಾಲ್ ಉದ್ಯಾನವನ, ಲಾಹೋರ‍್‍‍ನಲ್ಲಿ (ಈಗಿನ ಪಾಕಿಸ್ತಾನದಲ್ಲಿ) ಸೇರಿದರು.

ಎಪ್ರಿಲ್

 • ಎಪ್ರಿಲ್ ೫ - ನೆವಲ್ ಚೇಂಬರ್ಲಿನ್, ದುಃಖಕರವಾದ ಅಚಾತುರ್ಯದ ನಿರ್ಣಯವೆಂದು ಸಮರ್ಥಿಸಲಾಗಿರುವ, ಒಂದು ಪ್ರಮುಖ ಸಾರ್ವಜನಿಕ ಭಾಷಣದಲ್ಲಿ ಹಿಟ್ಲರನು ಪರಿಸ್ಥಿತಿಯನ್ನು ತಡವಾಗಿ ಅರ್ಥಮಾಡಿಕೊಂಡಿದ್ದಾನೆಂದು ಘೋಷಿಸಿದರು.
 • ಎಪ್ರಿಲ್ ೭ - ಬುಕರ್ ಟಿ. ವಾಷಿಂಗ್‍‍ಟನ್, ಅಮೇರಿಕಾದ ಒಂದು ಅಂಚೆ ಚೀಟಿಯ ಮೇಲೆ ಚಿತ್ರಿಸಲಾದ ಮೊದಲ ಆಫ್ರಿಕಾ ಮೂಲದ ಅಮೇರಿಕಾದ ಪ್ರಜೆಯಾದನು.
 • ಎಪ್ರಿಲ ೯ - ಎರಡನೇ ವಿಶ್ವಯುದ್ಧ: ಜರ್ಮನಿ ವೀಸರ್ಬುಂಗ್ ಕಾರ್ಯಾಚರಣೆಯ ಮೂಲಕ ಡೆನ್ಮಾರ್ಕ್ ಮತ್ತು ನಾರ್ವೆಯ ಮೇಲೆ ದಾಳಿಮಾಡಿತು. ಏಕಕಾಲದಲ್ಲಿ ನಾರ್ವೆಯಲ್ಲಿ ಬ್ರಿಟನ್‍‍ನ ದಂಡಯಾತ್ರೆ ಪ್ರಾರಂಭವಾಯಿತು.
 • ಎಪ್ರಿಲ್ ೧೨ - ನಾಜೀ ಜರ್ಮನಿಯಿಂದ ಡೆನ್ಮಾರ್ಕ್‍‍ ಮೇಲಿನ ಆಕ್ರಮಣದ ತರುವಾಯ, ಫೇರೊ ದ್ವಿಪಗಳು ಬ್ರಿಟನ್‍‍ನ ಸೈನ್ಯಗಳಿಂದ ವಶಪಡಿಸಲ್ಪಟ್ಟವು. ಈ ಕಾರ್ಯವನ್ನು ಜರ್ಮನಿಯಿಂದ ಸಂಭವಿಸಬಹುದಾಗಿದ್ದ ದ್ವೀಪಗಳ ಸ್ವಾಧೀನವನ್ನು ನಿವಾರಿಸಲು, ಮತ್ತು ಅಟ್ಲಾಂಟಿಕ್‍‍ನ ಯುದ್ಧದ ಗತಿಗೆ ಬಹಳ ಗಂಭೀರವಾದ ಪರಿಣಾಮಗಳ ಸಾಧ್ಯತೆಯನ್ನು ನಿವಾರಿಸಲು ಕೈಗೊಳ್ಳಲಾಯಿತು.
 • ಎಪ್ರಿಲ್ ೧೫ - ಜಮೈಕಾದ ಓಟದ ಹಾದಿಯ ಪ್ರಾರಂಭದ ದಿನದಂದು ಮುಖ್ಯವಾಗಿ, ಇಲ್ಲಿಯವರೆಗೆ ನ್ಯೂ ಯಾರ್ಕ್ ರಾಜ್ಯದ ಎಲ್ಲ ಕಡೆಯೂ ಏಕಮಾತ್ರವಾಗಿ ಉಪಯೋಗಿಸಲಾಗುತ್ತಿದ್ದ ಬಾಜಿಗಾರಿಕೆಯಿಂದ ಭಿನ್ನವಾದ, ಪರಸ್ಪರ-ಬಾಜಿ ಜೂಜು ಸಲಕರಣೆಯ ಉಪಯೋಗವನ್ನು ತೋರಿಸಲಾಯಿತು. ಇತರ ನ್ಯೂ ಯಾರ್ಕ್ ಹಾದಿಗಳು ಅದನ್ನು ೧೯೪೦ರಲ್ಲಿ ತರುವಾಯ ಅನುಸರಿಸಿದವು.
 • ಎಪ್ರಿಲ್ ೨೧ - ಟೇಕ್ ಇಟ್ ಆರ್ ಲೀವ್ ಇಟ್ ಸಿಬಿಎಸ್ ರೇಡಿಯೊದ ಮೇಲೆ, ಬಾಬ್ ಹಾಕ್ ಆತಿಥೇಯನಾಗಿದ್ದು, ತನ್ನ ಪ್ರಥಮ ಪ್ರವೇಶ ಮಾಡಿತು.
 • ಎಪ್ರಿಲ್ ೨೩ - ರ‍್ಹಿದಮ್ ರಾತ್ರಿಕ್ಲಬ್ಬು, ನ್ಯಾಚಿಜ್, ಮಿಸಸಿಪಿಯಲ್ಲಿ, ಸುಟ್ಟಿತು: ೧೯೮ ಸಾವು.

ಮೇ

 • ಮೇ ೧೦ - ಎರಡನೇ ವಿಶ್ವಯುದ್ಧ:
  • ಫ್ರಾನ್ಸ್‍‍ನ ಯುದ್ಧ ಪ್ರಾರಂಭವಾಯಿತು - ಜರ್ಮನಿಯ ದಳಗಳು ತಗ್ಗು ದೇಶಗಳ ಮೇಲೆ ದಾಳಿಮಾಡಿದವು.
  • ಬ್ರಿಟನ್‍‍ನಿಂದ ಆಯ್ಸ್‍‍ಲಂಡ್‍‍ನ ಮುತ್ತಿಗೆ.
  • ನೆವಲ್ ಚೇಂಬರ್ಲಿನ್‍‍ರ ರಾಜೀನಾಮೆಯ ತರುವಾಯ, ವಿನ್‍‍ಸ್ಟನ್ ಚರ್ಚಿಲ್ ಬ್ರಿಟನ್‍‍ನ ಪ್ರಧಾನ ಮಂತ್ರಿಯಾದರು.
 • ಮೇ ೧೩
  • ವಿನ್‍‍ಸ್ಟನ್ ಚರ್ಚಿಲ್, ಪ್ರಧಾನಿಯಾಗಿ ತಮ್ಮ ಮೊದಲ ಭಾಷಣದಲ್ಲಿ, ಕೆಳಮನೆಯನ್ನುದ್ದೇಶಿಸಿ ಹೇಳಿದರು, "ರಕ್ತ, ಶ್ರಮ, ಕಂಬನಿ, ಮತ್ತು ಬೆವರಲ್ಲದೆ ನಿಮಗೆ ಕೊಡಲು ನನ್ನ ಬಳಿ ಬೇರೇನೂ ಇಲ್ಲ." (ಐ ಹ್ಯಾವ್ ನಥಿಂಗ್ ಟು ಆಫರ್ ಯು ಬಟ್ ಬ್ಲಡ್, ಟಾಯಿಲ್, ಟಿಯರ್ಸ್, ಆಂಡ್ ಸ್ವೆಟ್).
  • ಎರಡನೇ ವಿಶ್ವಯುದ್ಧ: ಜರ್ಮನಿಯ ಭೂಸೇನೆಗಳು ಸಿಡ್ಯಾನ್‍‍ನ ಮ್ಯಾಜನೋ ರೇಖೆಯಲ್ಲಿ ೬೦-ಮೈಲಿ ಅಗಲದ ಕಂಡಿಯನ್ನು ತೆರೆದವು.
 • ಮೇ ೧೪
  • ನೆದರ್ಲಂಡ್ಸ್‍‍ನ ರಾಣಿ ವಿಲಮೀನಾ ಮತ್ತು ಅವಳ ಸರ್ಕಾರ ಲಂಡನ್‍‍ಗೆ ಪಲಾಯನ ಮಾಡಿದರು; ರಾಟರ್ಡ್ಯಾಮ್ ಲುಫ್ಟ್‍‍ವಾಫದಿಂದ ಬರ್ಬರ ಹಿಂಸಕ ಬಾಂಬ್ ದಾಳಿಗೆ ಈಡಾಯಿತು - ೯೮೦ ಸಾವು, ೨೦,೦೦೦ ಕಟ್ಟಡಗಳ ನಾಶ.
  • ಬ್ರಿಟನ್‍‍ನಲ್ಲಿ ಸ್ಥಳೀಯ ರಕ್ಷಣಾ ಸ್ವಯಂಸೇವಕರು (ಲೋಕಲ್ ಡಿಫೆನ್ಸ್ ವಾಲಂಟೀರ್ಸ್) ಎಂಬ, ನಂತರ ಗೃಹ ಕಾವಲು ಪಡೆಯೆಂದು ಗುರುತಿಸಲಾದ, ಒಂದು ಗೃಹ ರಕ್ಷಣಾ ದಳಕ್ಕಾಗಿ ನೌಕರಿ ಭರ್ತಿ ಆರಂಭವಾಯಿತು.
 • ಮೇ ೧೫
 • ಮೇ ೧೬ - ಅಮೇರಿಕಾದ ರಾಷ್ಟ್ರಪತಿ ಫ್ರ್ಯಾಂಕ್ಲಿನ್ ಡಿ. ರೂಸವೆಲ್ಟ್, ಶಾಸನಸಭೆಯ ಒಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಾಗ, ಪ್ರತಿ ವರ್ಷ ಕನಿಷ್ಠ ಪಕ್ಷ ೫೦,೦೦೦ ವಿಮಾನಗಳ ನಿರ್ಮಾಣಕ್ಕೆ ಹಣಹೊಂದಿಸಲು ಒಂದು ಅಸಾಧಾರಣವಾದ ಉದ್ದರಿಯಾದ ಸರಿಸುಮಾರು ೯೦೦ ದಶಲಕ್ಷ ಅಮೇರಿಕಾ ಡಾಲರ್ ಕೇಳಿದರು.
 • ಮೇ ೧೭ - ಬ್ರಸಲ್ಸ್ ಜರ್ಮನಿಯ ದಳಗಳಿಗೆ ಶರಣಾಯಿತು; ಬೆಲ್ಜಿಯಮ್‍‍ನ ಸರ್ಕಾರ ಆಸ್ಟೆಂಡ್‍‍ಗೆ ಪಲಾಯನ ಮಾಡಿತು.
 • ಮೇ ೧೮ - ಸೈನ್ಯಾಧಿಕಾರಿ ಆನ್ರಿ ಪೆಟಾನ್‍‍ರನ್ನು ಫ್ರಾನ್ಸ್‍‍ನ ಉಪ-ಪ್ರಧಾನಿಯಾಗಿ ಹೆಸರಿಸಲಾಯಿತು.
 • ಮೇ ೧೯ - ಸೈನ್ಯಾಧಿಪತಿ ಮಾಕ್ಸೀಮ್ ವೇಗ್ಞಾ, ಮಾರೀಸ್ ಗ್ಯಮ್ಲಾನ್ ಬದಲಾಗಿ ಫ್ರಾನ್ಸ್‍‍ನ ಎಲ್ಲ ಸೈನ್ಯಗಳ ಮಹಾದಂಡನಾಯಕನಾದರು.
 • ಮೇ ೨೦ - ಎರಡನೇ ವಿಶ್ವಯುದ್ಧ: ಜರ್ಮನಿಯ ಸೈನ್ಯಗಳು, ಸೈನ್ಯಾಧಿಪತಿ ಅರ್ವಿನ್ ರಾಮಲ್ ಅಧೀನದಲ್ಲಿ, ಇಂಗ್ಲಿಷ್ ಕಾಲುವೆಯನ್ನು ಮುಟ್ಟಿದವು. ಸಾಮೂಹಿಕ ಹತ್ಯಾಕಾಂಡ: ಸೆರೆಯಾಳುಗಳ ಕೂಡಿಡುವ ಮತ್ತು ಮೃತ್ಯು ಶಿಬಿರ, ಔಷ್ವಿಟ್ಸ್-ಬರ್ಕನಾವ್ ಪೋಲಂಡ್‍‍ನಲ್ಲಿ ತೆರೆಯಿತು.
 • ಮೇ ೨೨ - ಎರಡನೇ ವಿಶ್ವಯುದ್ಧ: ಬ್ರಿಟನ್‍‍ನ ಸಂಸತ್ತು, ಸರ್ಕಾರಕ್ಕೆ ಎಲ್ಲ ವ್ಯಕ್ತಿಗಳ ಮತ್ತು ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರಣ ಕೊಡುವ, ತುರ್ತು ಅಧಿಕಾರಗಳ ಕಾಯಿದೆಯನ್ನು ಅಂಗೀಕರಿಸಿತು.
 • ಮೇ ೨೬ - ಎರಡನೇ ವಿಶ್ವಯುದ್ಧ: ಬ್ರಿಟನ್‍‍ನ ವಿದೇಶಿ ಕಾರ್ಯಾಚರಣೆ ಸೈನ್ಯದ (ಬ್ರಿಟಿಷ್ ಎಕ್‍‍ಸ್ಪಿಡಿಷನರಿ ಫೋರ್ಸ್) ಡಂಕರ್ಕ್ ಸ್ಥಳಾಂತರಣ ಆರಂಭಗೊಂಡಿತು.
 • ಮೇ ೨೮
  • ಎರಡನೇ ವಿಶ್ವಯುದ್ಧ: ರಾಜ ಮೂರನೇ ಲಿಯಪೋಲ್ಡ್ ಬೆಲ್ಜಿಯಮ್‍‍ನ ಸೈನ್ಯಗಳಿಗೆ ಕದನವನ್ನು ನಿಲ್ಲಿಸುವಂತೆ ಆದೇಶಿಸಿದನು. ಫ್ರಾನ್ಸ್‍‍ನ ಪ್ರದೇಶದ ಮೇಲಿದ್ದ ಬೆಲ್ಜಿಯಮ್ ಸರ್ಕಾರದ ನಾಯಕರು ಲಿಯಪೋಲ್ಡನ್ನು ರಾಜಗದ್ದುಗೆಯಿಂದ ತೆಗೆಯಲಾಗಿದೆಯೆಂದು ಪ್ರಕಟಿಸಿದರು.
  • ವಿನ್‍‍ಸ್ಟನ್ ಚರ್ಚಿಲ್ ಕೆಳಮನೆಗೆ "... ಕಠಿನ ಮತ್ತು ತ್ರಾಸದಾಯಕ ಏರಿಳಿತಗಳಿಗೆ ತಾವು ಸಿದ್ಧವಾಗಿ." ಎಂದು ಮುನ್ನೆಚ್ಚರಿಸಿದರು.
 • ಮೇ ೨೯ - ಎರಡನೇ ವಿಶ್ವಯುದ್ಧದಲ್ಲಿ ಉಪಯೋಗಿಸಲಾದ ಅಮೆರಿಕದ ಎಫ್೪ಯು ಕೋರ್ಸೇರ್ ಯುದ್ಧ ವಿಮಾನದ ಪರೀಕ್ಷಣ ಮಾದರಿಯಾದ ವಾಟ್ ಎಕ್ಸ್‍‍ಎಫ್೪ಯು-೧ರ ಮೊದಲ ಹಾರಾಟ.

ಜೂನ್

 • ಜೂನ್ ೩
  • ಸಾಮೂಹಿಕ ಹತ್ಯಾಕಾಂಡ: ಫ್ರಾನ್ಜ್ ರಾಡೆಮಾಕರ್ ಮ್ಯಾಡಗ್ಯಾಸ್ಕರ್ ಯೋಜನೆಯನ್ನು ಪ್ರಸ್ತಾಪಿಸಿದನು.
  • ಎರಡನೇ ವಿಶ್ವಯುದ್ಧ: ಪ್ಯಾರಿಸ್ ಲುಫ್ಟ್‍‍ವಾಫದಿಂದ ಮೊದಲ ಸಲ ಬಾಂಬ್ ದಾಳಿಗೆ ಈಡಾಯಿತು.
 • ಜೂನ್ ೪
  • ಡಂಕರ್ಕ್ ಸ್ಥಳಾಂತರಣ ಮುಗಿಯಿತು - ಬ್ರಿಟನ್‍‍ನ ಸೇನೆಗಳು ಫ್ರಾನ್ಸ್‍‍ನ ಡಂಕರ್ಕ್‍‍ದಿಂದ ೩,೦೦,೦೦೦ ಸೈನಿಕರನ್ನು ಸ್ಥಳಾಂತರಿಸುವುದನ್ನು ಮುಗಿಸಿದವು.
  • ವಿನ್‍‍ಸ್ಟನ್ ಚರ್ಚಿಲ್ ಕೆಳಮನೆಗೆ, "ನಾವು ಕುಗ್ಗುವುದಿಲ್ಲ ಅಥವಾ ಸೋಲುವುದಿಲ್ಲ. ನಾವು ಸಮುದ್ರತೀರಗಳ ಮೇಲೆ ಹೋರಾಡುತ್ತೇವೆ...ಇಳಿಯುವ ಭೂಪ್ರದೇಶಗಳ ಮೇಲೆ...ಗದ್ದೆ ಮತ್ತು ರಸ್ತೆಗಳಲ್ಲಿ...ನಾವು ಯಾವ ಸಂದರ್ಭದಲ್ಲೂ ಶರಣಾಗುವುದಿಲ್ಲ." ಎಂದು ತಿಳಿಸಿದರು.
 • ಜೂನ್ ೯ - ಎರಡನೇ ವಿಶ್ವಯುದ್ಧ: ಬ್ರಿಟನ್‍‍ನ ಸೇನಾತಂಡದ ಸದಸ್ಯರ (ಬ್ರಿಟಿಷ್ ಕಮಾಂಡೋಸ್) ರಚನೆಯಾಯಿತು.
 • ಜೂನ್ ೧೦ - ಎರಡನೇ ವಿಶ್ವಯುದ್ಧ
  • ಇಟಲಿ, ಫ್ರಾನ್ಸ್ ಮತ್ತು ಬ್ರಿಟನ್ ಮೇಲೆ ಯುದ್ಧ ಘೋಷಿಸಿತು.
  • ಅಮೇರಿಕಾ ರಾಷ್ಟ್ರಪತಿ ಫ್ರ್ಯಾಂಕ್ಲಿನ್ ಡಿ. ರೋಸವೆಲ್ಟ್, "ನಂಬಿಕೆ ದ್ರೋಹ" ಭಾಷಣದ ಮೂಲಕ, ಇಟಲಿಯ ಕಾರ್ಯಗಳನ್ನು ದೂಷಿಸಿದರು.
  • ಕೆನಡಾ ಇಟಲಿಯ ಮೇಲೆ ಯುದ್ಧ ಘೋಷಿಸಿತು.
  • ನಾರ್ವೆ ಜರ್ಮನಿಯ ಸೇನೆಗಳಿಗೆ ಶರಣಾಯಿತು.
  • ಫ್ರಾನ್ಸ್‍‍ನ ಸರ್ಕಾರ ಟೂರ್‍‍ಗೆ ಪಲಾಯನ ಮಾಡಿತು.
 • ಜೂನ್ ೧೨ - ಎರಡನೇ ವಿಶ್ವಯುದ್ಧ: ೧೩,೦೦೦ ಬ್ರಿಟನ್ ಮತ್ತು ಫ್ರಾನ್ಸ್‍‍ನ ಸೇನೆಗಳು ಮುಖ್ಯ ಸೈನ್ಯಾಧಿಕಾರಿ ಅರ್ವಿನ್ ರಾಮಲ್‍‍ಗೆ ಸೇಂಟ್ ವ್ಯಾಲರಿ-ಆನ್-ಕೋದಲ್ಲಿ ಶರಣಾದವು.
 • ಜೂನ್ ೧೩ - ಎರಡನೇ ವಿಶ್ವಯುದ್ಧ: ಪ್ಯಾರಿಸನ್ನು ಮುಕ್ತ ನಗರವೆಂದು ಘೋಷಿಸಲಾಯಿತು.
 • ಜೂನ್ ೧೪ - ಎರಡನೇ ವಿಶ್ವಯುದ್ಧ:
  • ಫ್ರಾನ್ಸ್‍‍ನ ಸರ್ಕಾರ ಬಾರ್ಡೋಗೆ ಪಲಾಯನ ಮಾಡಿತು.
  • ಪ್ಯಾರಿಸ್ ಜರ್ಮನಿಯ ಸ್ವಾಧೀನದಲ್ಲಿ ಪತನಗೊಂಡಿತು.
  • ಅಮೇರಿಕಾ ರಾಷ್ಟ್ರಪತಿ ಫ್ರ್ಯಾಂಕ್ಲಿನ್ ಡಿ. ರೋಸವೆಲ್ಟ್ ಅಮೇರಿಕಾದ ನೌಕಾದಳದ (ಯುನಾಯ್ಟಡ್ ಸ್ಟೇಟ್ಸ್ ನೇವಿ) ತೂಕದ ಪ್ರಮಾಣವನ್ನು ೧೧ ಪ್ರತಿಶತದಷ್ಟು ಹೆಚ್ಚಿಸುವ ಗುರಿಹೊಂದಿ, ಕಾನೂನಾಗಿ ಬರಲು ನೌಕಾದಳ ವಿಸ್ತರಣ ಕಾಯಿದೆಗೆ (ನೇವಲ್ ಇಕ್‍‍ಸ್ಪ್ಯಾನ್ಷನ್ ಆಕ್ಟ್) ಸಹಿ ಹಾಕಿದರು.
  • ತಾರ್ನೂಫ್‍‍ದಿಂದ ಬಂದ ಪೋಲಂಡ್‍‍ನ ೭೨೮ ರಾಜಕೀಯ ಬಂದಿಗಳ ಒಂದು ಗುಂಪು ಔಷ್ವಿಟ್ಜ್ ಸೆರೆಯಾಳು ಶಿಬಿರದ ಮೊದಲ ನಿವಾಸಿಗಳಾದರು.
 • ಜೂನ್ ೧೫ - ಎರಡನೇ ವಿಶ್ವಯುದ್ಧ: ವರ್ಡನ್ ಜರ್ಮನಿಯ ಸೇನೆಗಳಿಗೆ ಪತನಗೊಂಡಿತು.
 • ಜೂನ್ ೧೬ : ಸ್ಟರ್ಜಿಸ್ ಮೋಟರ್‍‍ಸೈಕಲ್ ಸ್ಪರ್ಧೆ, ಸ್ಟರ್ಜಿಸ್, ದಕ್ಷಿಣ ಡಕೋಟಾದಲ್ಲಿ ಮೊದಲ ಸಲ ಏರ್ಪಡಿಸಲಾಯಿತು.
 • ಜೂನ್ ೧೭
  • ಫಿಲಿಪ್ ಪೆಟಾನ್ ಫ್ರಾನ್ಸ್‍‍ನ ಪ್ರಧಾನ ಮಂತ್ರಿಯಾದರು ಮತ್ತು ತಡವಿಲ್ಲದೆಯೇ ಜರ್ಮನಿಯನ್ನು ಶಾಂತಿ ಕರಾರುಗಳಿಗೆ ಕೇಳಿದರು.
  • ಸೋವಿಯಟ್ ಸೇನೆ ಬಾಲ್ಟಿಕ್ ರಾಜ್ಯಗಳಾದ ಎಸ್ಟೋನಿಯಾ, ಲಾಟ್ವಿಯಾಗಳನ್ನು ಪ್ರವೇಶಿಸಿತು.
  • ಏರಿಯಲ್ ಕಾರ್ಯಾಚರಣೆ ಪ್ರಾರಂಭಗೊಂಡಿತು - ಜರ್ಮನಿಯು ಪ್ಯಾರಿಸ್ ಮತ್ತು ರಾಷ್ಟ್ರದ ಬಹುಪಾಲು ಭಾಗಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ತರುವಾಯ, ಮಿತ್ರ ರಾಷ್ಟ್ರಗಳ ಸೇನೆಗಳು ಫ್ರಾನ್ಸನ್ನು ಸ್ಥಳಾಂತರಿಸುವುದನ್ನು ಆರಂಭಿಸಿದವು.
  • ಲುಫ್ಟ್‍‍ವಾಫದ ಯುಂಕರ್ಸ್ ೮೮ ಸಿಡಿಗುಂಡುಗಳನ್ನೆಸೆಯುವ ವಿಮಾನ, ಸ್ಯಾನ್-ನಜೇರ್, ಫ್ರಾನ್ಸ್‍‍ನ ಹತ್ತಿರದಿಂದ ಸೇನೆಗಳನ್ನು ಸ್ಥಳಾಂತರಿಸುತ್ತಿದ್ದ ಬ್ರಿಟನ್‍‍ನ ಹಡಗು ಆರ್‍‍ಎಮ್‍ಎಸ್ ಲ್ಯಾಂಕ್ಯಾಸ್ಟ್ರಿಯಾವನ್ನು ಮುಳುಗಿಸಿತು. ಸತ್ತವರ ಸಂಖ್ಯೆ ೨೫೦೦ಕ್ಕಿಂತ ಅಧಿಕ. ಯುದ್ಧಕಾಲದ ನಿಯಂತ್ರಣವು ವರದಿಯು ಬಹಿರಂಗವಾಗುವುದನ್ನು ತಪ್ಪಿಸಿತು.
 • ಜೂನ್ ೧೮
  • ವಿನ್‍‍ಸ್ಟನ್ ಚರ್ಚಿಲ್ ಕೆಳಮನೆಗೆ ಹೇಳಿದರು: "... ಫ್ರಾನ್ಸ್‍‍ನ ಯುದ್ಧವು ಮುಗಿಯಿತು. ಬ್ರಿಟನ್‍‍ನ ಯುದ್ಧವು ಪ್ರಾರಂಭವಾಗಲಿದೆ."
  • ಸೈನ್ಯಾಧಿಪತಿ ಚಾರ್ಲ್ಸ್ ಡ ಗೊಲ್ , ಎಲ್ಲ ಫ್ರಾನ್ಸ್‍‍ನ ಜನರಿಗೆ ನಾಜಿ ಜರ್ಮನಿಯ ವಿರುದ್ಧದ ಯುದ್ಧವನ್ನು ಮುಂದುವರಿಸುವಂತೆ ಕೇಳಿಕೊಳ್ಳುತ್ತ ಲಂಡನ್‍‍ನಿಂದ ಪ್ರಕಟಿಸಿದರು: "ಫ್ರಾನ್ಸ್ ಒಂದು ಕದನವನ್ನು ಸೋತಿದೆ. ಆದರೆ ಫ್ರಾನ್ಸ್ ಯುದ್ಧವನ್ನು ಸೋತಿಲ್ಲ."
 • ಜೂನ್ ೨೧ - ಎರಡನೇ ವಿಶ್ವಯುದ್ಧ: ವಿಷಿ ಫ್ರಾನ್ಸ್ ಮತ್ತು ಜರ್ಮನಿ, ಕೊಂಪ್ಯೇನ್‍‍ನಲ್ಲಿ ಸೈನ್ಯಾಧಿಕಾರಿ ಫರ್ಡಿನ್ಯಾಂಡ್ ಫಾಷ್‍‍ನಿಂದ ೧೯೧೮ರಲ್ಲಿ ಜರ್ಮನಿಯ ಶರಣಾಗತಿಯನ್ನು ಒಪ್ಪಿಕೊಳ್ಳಲು ಉಪಯೋಗಿಸಲ್ಪಟ್ಟ ಅದೇ ಪ್ರಯಾಣಿಕರ ರೈಲು ಬೋಗಿಯಲ್ಲಿ, ಯುದ್ಧವಿರಾಮಕ್ಕೆ ಸಹಿ ಹಾಕಿದವು.
 • ಜೂನ್ ೨೩ - ಎರಡನೇ ವಿಶ್ವಯುದ್ಧ: ಜರ್ಮನಿಯ ನಾಯಕ ಅಡೋಲ್ಫ್ ಹಿಟ್ಲರ್ ಹೊಸದಾಗಿ ಪರಾಭವಗೊಂಡ, ಈಗಿನ ಆಕ್ರಮಿತ ಫ್ರಾನ್ಸ್‍‍ನಲ್ಲಿನ, [೧]
 • ಜೂನ್ ೨೪
  • ಅಮೇರಿಕಾ ರಾಜಕೀಯ: ರಿಪಬ್ಲಿಕನ್ ಪಕ್ಷವು ಅದರ ರಾಷ್ಟ್ರೀಯ ಸಮ್ಮೇಳನವನ್ನು ಫಿಲಡೆಲ್ಫಿಯಾದಲ್ಲಿ ಪ್ರಾರಂಭಿಸಿತು ಮತ್ತು ವೆಂಡೆಲ್ ವಿಲ್‍‍ಕೀಯವರನ್ನು ಅದರ ರಾಷ್ಟ್ರಪತಿ ಅಭ್ಯರ್ಥಿಯೆಂದು ಹೆಸರಿಸಿತು.
  • ಎರಡನೇ ವಿಶ್ವಯುದ್ಧ: ವಿಷಿ ಫ್ರಾನ್ಸ್ ಇಟಲಿಯೊಂದಿಗೆ ಯುದ್ಧವಿರಾಮ ಕರಾರುಗಳಿಗೆ ಸಹಿ ಹಾಕಿತು.
 • ಜೂನ್ ೨೮ - ಸೈನ್ಯಾಧಿಪತಿ ಚಾರ್ಲ್ಸ್ ಡ ಗೊಲ್, "ಎಲ್ಲಿದ್ದರೂ ಕೂಡ, ಮುಕ್ತ ಫ್ರಾನ್ಸ್‍‍ನ ಎಲ್ಲ ಪುರುಷರ ನಾಯಕ." ನೆಂದು ಬ್ರಿಟನ್‍‍ನಿಂದ ಅಧಿಕೃತವಾಗಿ ಗುರುತಿಸಲ್ಪಟ್ಟರು.
 • ಜೂನ್ ೩೦ - ಎರಡನೇ ವಿಶ್ವಯುದ್ಧ: ಜರ್ಮನಿಯ ದಳಗಳು ೫-ವರ್ಷದ ಚ್ಯಾನಲ್ ದ್ವೀಪಗಳ ಆಕ್ರಮಣದ ಆರಂಭವನ್ನು ಸೂಚಿಸುತ್ತ ಗರ್ನ್‍‍ಸೀಯಲ್ಲಿ ಇಳಿದವು.

ಜುಲೈ

 • ಜುಲೈ ೧ ೮-ಅಡಿ ತೊಲೆಯಿಂದ ಕಟ್ಟಲ್ಪಟ್ಟ ಮತ್ತು ನೀರಿನ ೧೯೦ ಅಡಿ ಮೇಲಿರುವ ಮೊದಲ ಟಕೋಮಾ ಜಲಸಂಧಿಯ ಸೇತುವೆ ಸಂಚಾರಕ್ಕೆ ತೆರೆಯಿತು. ಈ ಸೇತುವೆ ಜಗತ್ತಿನಲ್ಲಿ ಮೂರನೆ ಅತಿ ಉದ್ದವಾದ ತೂಗು ಸೇತುವೆಯೆಂದು ತೆರೆಯಿತು.
 • ಜುಲೈ ೩ - ಎರಡನೇ ವಿಶ್ವಯುದ್ಧ: ಬ್ರಿಟನ್‍‍ನ ನೌಕಾದಳದ ಘಟಕಗಳು ಅಲ್ಜೀರಿಯಾದ ಬಂದರುಗಳಾದ ಒರಾನ್ ಮತ್ತು ಮೆರ‍್ಸ್-ಎಲ್-ಕಬಿರ್‍‍ಗಳಲ್ಲಿ ಲಂಗರು ಹಾಕಿದ ಫ್ರಾನ್ಸ್‍‍ನ ನೌಕಾಬಲದ ಹಡಗುಗಳನ್ನು ಮುಳುಗಿಸಿದವು ಅಥವಾ ವಶಪಡಿಸಿಕೊಂಡವು. ಮರುದಿನ, ವಿಷಿ ಫ್ರಾನ್ಸ್ ಬ್ರಿಟನ್‍‍ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿತು.
 • ಜುಲೈ ೧೦ - ಎರಡನೇ ವಿಶ್ವಯುದ್ಧ: ವಿಷಿ ಫ್ರಾನ್ಸ್ ಕೇವಲ ಸಂಸತ್ತಿನ ೮೦ ಸದಸ್ಯರು ವಿರುದ್ಧ ಮತ ಚಲಾಯಿಸಬಹುದಾದಂಥ ಒಂದು ಸಾಂವಿಧಾನಿಕ ಕಾನೂನಿನೊಂದಿಗೆ ಪ್ರಾರಂಭಿಸಿತು.
 • ಜುಲೈ ೧೫ - ಅಮೇರಿಕಾ ರಾಜಕೀಯ: ಡೆಮೊಕ್ರ್ಯಾಟಿಕ್ ಪಕ್ಷವು ತನ್ನ ರಾಷ್ಟ್ರೀಯ ಸಮ್ಮೇಳನವನ್ನು in ಷಿಕಾಗೋದಲ್ಲಿ ಆರಂಭಿಸಿತು ಮತ್ತು ಫ್ರ್ಯಾಂಕ್ಲಿನ್ ಡಿ. ರೂಸವೆಲ್ಟ್‍‍ರನ್ನು ಅಭೂತಪೂರ್ವ ಮೂರನೇ ಬಾರಿ ರಾಷ್ಟ್ರಪತಿ ಪದಕ್ಕೆ ನಾಮಕರಣ ಮಾಡಿತು.
 • ಜುಲೈ ೧೯ - ಎರಡನೇ ವಿಶ್ವಯುದ್ಧ: ಅಡೋಲ್ಫ್ ಹಿಟ್ಲರ್ ರೈಸ್‍‍ಸ್ಟಾಗ್‍‍ಗೆ ಉದ್ದೇಶಿಸಿ ಒಂದು ಭಾಷಣದಲ್ಲಿ ಬ್ರಿಟನ್‍‍ಗೆ ಶಾಂತಿ ಮನವಿಯನ್ನು ಮಾಡಿದನು. ವರಿಷ್ಠ ಹ್ಯಾಲಿಫ್ಯಾಕ್ಸ್, ಬ್ರಿಟನ್‍‍ನ ವಿದೇಶ ಮಂತ್ರಿ, ಜುಲೈ ೨೨ರಂದು ಒಂದು ಪ್ರಸಾರ ಉತ್ತರದಲ್ಲಿ, ಶಾಂತಿ ಮನವಿಗಳನ್ನು ನೀರಸವಾಗಿ ತಿರಸ್ಕರಿಸಿದರು.
 • ಜುಲೈ ೨೧ - ಎಸ್ಟೋನಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯ, ಲಾಟ್ವಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯ ಮತ್ತು ಲಿಥುಏನಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯಗಳು ಘೋಷಿಸಲ್ಪಟ್ಟವು.

ಆಗಸ್ಟ್

 • ಆಗಸ್ಟ್ ೩ - ಲಿಥುಏನಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯ, ಲಾಟ್ವಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯ (ಆಗಸ್ಟ್ ೫) ಮತ್ತು ಎಸ್ಟೋನಿಯಾದ ಸೋವಿಯಟ್ ಸಮಾಜವಾದಿ ಗಣರಾಜ್ಯಗಳು (ಆಗಸ್ಟ್ ೬) ಸೋವಿಯಟ್ ಒಕ್ಕೂಟದಲ್ಲಿ ಸೇರಿಸಲ್ಪಟ್ಟವು.
 • ಆಗಸ್ಟ್ ೪ - ಸೈನ್ಯಾಧಿಪತಿ ಜಾನ್ ಜೆ. ಪರ್ಷಿಂಗ್, ಒಂದು ದೇಶಾದ್ಯಂತ ಬಾನುಲಿ ಪ್ರಸಾರದಲ್ಲಿ, ಅಮೇರಿಕಾ ಖಂಡಗಳನ್ನು ರಕ್ಷಿಸಲು ಬ್ರಿಟನ್‍‍ಗೆ ಸರ್ವಾಧಿಕ ಸಹಾಯಕ್ಕೆ ಒತ್ತಾಯಿಸಿದರು, ಹಾಗೆ ಚಾರ್ಲ್ಸ್ ಲಿಂಡ್‍‍ಬರ್ಗ್ ಒಂದು ಪ್ರತ್ಯೇಕವಾದಿ ಸಭೆಯನ್ನುದ್ದೇಶಿಸಿ ಷಿಕಾಗೋದ ಸೈನಿಕ ಸ್ಮಾರಕ ಭೂಮಿಯಲ್ಲಿ ಭಾಷಣ ಮಾಡಿದರು.
 • ಆಗಸ್ಟ್ ೮ - ವಿಲ್‍‍ಹಾಮ್ ಕೈಟಲ್ " ಆಫ್‍‍ಬಾಉ ಆಸ್ಟ್" ನಿರ್ದೇಶಕ್ಕೆ ಸಹಿ ಹಾಕಿದರು.
 • ಆಗಸ್ಟ್ ೨೦
  • ವಿನ್‍‍ಸ್ಟನ್ ಚರ್ಚಿಲ್ ಕೆಳಮನೆಯಲ್ಲಿ ಅರಸೊತ್ತಿಗೆಯ ವಿಮಾನ ಬಲಕ್ಕೆ ಪ್ರಶಂಸೆ ಸಲ್ಲಿಸಿದರು: "ಮಾನವ ಸಂಘರ್ಷಣೆಯ ಮೈದಾನದಲ್ಲಿ ಇಷ್ಟೊಂದು ಅತ್ಯಲ್ಪ ಸಂಖ್ಯೆಗೆ ಇಷ್ಟೊಂದು ಹೆಚ್ಚಿನ ಸಂಖ್ಯೆಯು ಇಷ್ಟು ಹೆಚ್ಚು ಯಾವತ್ತೂ ಋಣಿಯಾಗಿರಲಿಲ್ಲ."
  • ಲೆಯೋನ್ ಟ್ರಾಟ್‍‍ಕೀ, ಮೆಕ್ಸಿಕೋದಲ್ಲಿ ಒಬ್ಬ ಸೋವಿಯಟ್ ಗೂಢಚಾರಿ, ರಾಮೋನ್ ಮರ್‍‍ಕ್ಯಾಡೋರ್‍‍ನಿಂದ ಒಂದು ಹಿಮ ಕೊಡಲಿಯಿಂದ ಕೊಲ್ಲಲ್ಪಟ್ಟರು.
 • ಆಗಸ್ಟ್ ೨೬ - ಚ್ಯಾಡ್, ಮಿತ್ರ ರಾಷ್ಟ್ರಗಳ ಪ್ರತಿ ತನ್ನ ಸಮರ್ಥನೆಯನ್ನು ಘೋಷಿಸಿದ ಫ್ರಾನ್ಸ್‍‍ನ ಮೊದಲ ವಸಾಹತು ಆಯಿತು.

ಸೆಪ್ಟೆಂಬರ್

 • ಸೆಪ್ಟೆಂಬರ್ - ಅಮೇರಿಕಾ ಸೇನೆಯ ೪೫ನೇ ಪದಾತಿ ಪಡೆ ವಿಭಾಗವನ್ನು (ಪೂರ್ವದಲ್ಲಿ ಆರಿಜೋನಾ, ಕೊಲೊರ‍್ಯಾಡೋ, ನ್ಯೂ ಮೆಕ್ಸಿಕೋ, ಮತ್ತು ಓಕ್ಲಹೋಮಾದಲ್ಲಿನ ಒಂದು ರಾಷ್ಟ್ರೀಯ ರಕ್ಷಾ ವಿಭಾಗ), ಕ್ರಿಯಾ ಮುಖವಾಗಿಸಲಾಯಿತು ಮತ್ತು ಎರಡನೇ ವಿಶ್ವಯುದ್ಧದಲ್ಲಿ ಸೇವೆಗೆ ಮೊದಲು, ಒಂದು ವರ್ಷಕ್ಕೋಸ್ಕರ ಸಂಘೀಯ ಸೇವೆಯಲ್ಲಿ ಸಿಲ್ ಕೋಟೆ ಮತ್ತು ಲುಇಸಿಯಾನಾದಲ್ಲಿ ಒಂದು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆದೇಶಿಸಲಾಯಿತು.
 • ಸೆಪ್ಟೆಂಬರ್ ೨ - ಎರಡನೇ ವಿಶ್ವಯುದ್ಧ: ಅಮೇರಿಕಾ ಮತ್ತು ಬ್ರಿಟನ್ ನಡುವೆ ಒಡಂಬಡಿಕೆಯನ್ನು ಪ್ರಕಟಿಸಲಾಯಿತು. ಬೆಂಗಾವಲು ಕಾರ್ಯಕ್ಕೆ ಬೇಕಾದ ಐವತ್ತು ಅಮೇರಿಕಾ ಧ್ವಂಸಕಗಳನ್ನು ಬ್ರಿಟನ್‍‍ಗೆ ಸ್ಥಳಾಂತರಿಸಲಾಯಿತು. ಇದರ ಫಲವಾಗಿ, ಅಮೇರಿಕಾ ಉತ್ತರ ಅಟ್ಲ್ಯಾಂಟಿಕ್, ವೆಸ್ಟ್ ಇಂಡೀಸ್ ಮತ್ತು ಬರ್‍‍ಮ್ಯೂಡಾಗಳಲ್ಲಿನ ಬ್ರಿಟನ್‍‍ನ ನೆಲೆಗಳ ಮೇಲೆ ೯೯-ವರ್ಷದ ಗುತ್ತಿಗೆಗಳನ್ನು ಪಡೆಯಿತು.
 • ಸೆಪ್ಟೆಂಬರ್ ೭
 • ಸೆಪ್ಟೆಂಬರ್ ೧೨
  • ಲಾಸ್ಕೋ, ಫ್ರಾನ್ಸ್ - ೧೭,೦೦೦-ವರ್ಷ-ಹಳೆಯ ಗುಹಾ ವರ್ಣಚಿತ್ರಗಳು ದಕ್ಷಿಣ ಫ್ರಾನ್ಸ್‍‍ನಲ್ಲಿ ತಿರುಗಾಡುತ್ತಿದ್ದ ಫ್ರಾನ್ಸ್‍‍ನ ಒಂದು ಯುವಕರ ಗುಂಪಿನಿಂದ ಶೋಧಿಸಲ್ಪಟ್ಟವು. ವರ್ಣಚಿತ್ರಗಳು ಪ್ರಾಣಿಗಳನ್ನು ಚಿತ್ರಿಸುತ್ತವೆ ಮತ್ತು ಶಿಲಾಯುಗದ ಕಾಲಮಾನದ್ದಾಗಿವೆ.
  • ಹರ್ಕ್ಯುಲೀಸ್ ಯುದ್ಧಸಾಮಗ್ರಿ ಕಾರ್ಖಾನೆ ಕೆನ್ವಿಲ್, ನ್ಯೂ ಜರ್ಸಿಯಲ್ಲಿ ಸ್ಫೋಟಿಸಿ ೫೫ ಜನ ಬಲಿಯಾದರು.
 • ಸೆಪ್ಟೆಂಬರ್ ೧೬ - ಎರಡನೇ ವಿಶ್ವಯುದ್ಧ: ೧೯೪೦ರ ಚಯನಾತ್ಮಕ ತರಬೇತಿ ಮತ್ತು ಸೇವಾ ಕಾಯಿದೆ ಫ್ರ್ಯಾಂಕ್ಲಿನ್ ಡಿ. ರೂಸವೆಲ್ಟ್‍‍ರಿಂದ ಕಾನೂನಾಗಿ ಸಹಿ ಪಡೆದು ಅಮೇರಿಕಾ ಇತಿಹಾಸದಲ್ಲಿ ಮೊದಲ ಶಾಂತಿಕಾಲದ ದಸ್ತಾವೇಜು ಸೃಷ್ಟಿಯಾಯಿತು.
 • ಸೆಪ್ಟೆಂಬರ್ ೨೬ - ಎರಡನೇ ವಿಶ್ವಯುದ್ಧ: ಅಮೇರಿಕಾ ಜಪಾನ್‍‍ಗೆ ಹೋಗುವ ನಿರುಪಯೋಗಿ ಲೋಹದ ಚೂರುಪಾರಿನ ಎಲ್ಲ ಹಡಗು ಸರಕುಗಳ ಮೇಲೆ ಸಂಪೂರ್ಣ ಪ್ರತಿಬಂಧಕಾಜ್ಞೆ ಹೇರಿತು.
 • ಸೆಪ್ಟೆಂಬರ್ ೨೭ - ಎರಡನೇ ವಿಶ್ವಯುದ್ಧ: ಜರ್ಮನಿ, ಇಟಲಿ ಮತ್ತು ಜಪಾನ್ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಿದವು.

ಅಕ್ಟೋಬರ್

ನವೆಂಬರ್

 • ನವೆಂಬರ್ ೫ - ಅಮೇರಿಕಾ ರಾಷ್ಟ್ರಪತಿ ಚುನಾವಣೆ, ೧೯೪೦: ಡೆಮೊಕ್ರ್ಯಾಟಿಕ್ ಪಕ್ಷದ ಅಧಿಕಾರದಲ್ಲಿದ್ದ ಫ್ರ್ಯಾಂಕ್ಲಿನ್ ಡಿ. ರೂಸವೆಲ್ಟ್ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ವೆಂಡೆಲ್ ವಿಲ್‍‍ಕೀಯವರನ್ನು ಸೋಲಿಸಿದರು ಮತ್ತು ಅಮೇರಿಕಾದಲ್ಲಿ ಸತತ ಮೂರನೇ ಬಾರಿ ರಾಷ್ಟ್ರಪತಿಯಾದ ಮೊದಲ ವ್ಯಕ್ತಿಯಾದರು.
 • ನವೆಂಬರ್ ೭ - ಟಕೋಮಾ, ವಾಷಿಂಗ್‍‍ಟನ್‍‍ನಲ್ಲಿ, ಟಕೋಮಾ ಜಲಸಂಧಿಯ ಸೇತುವೆ (ಗ್ಯಾಲೊಪಿಂಗ್ ಗರ್ಟಿ ಎಂದು ಗುರುತಿಸಲಾದ) ಗಂಟೆಗೆ ೪೨-ಮೈಲಿ ವೇಗದ ಒಂದು ಬಿರುಗಾಳಿಯಲ್ಲಿ ಕುಸಿಯಿತು ಮತ್ತು ಸೇತುವೆಯ ಕೇಂದ್ರ ಹರವು ಓಲಾಡುವುದಕ್ಕೆ ಕಾರಣವಾಯಿತು. ಅದು ಕುಸಿದಾಗ, ಕೇಂದ್ರ ಹರವಿನ ಒಂದು ೬೦೦ ಅಡಿ-ಉದ್ದದ ರಚನೆ ನೀರಿನ ೧೯೦ ಅಡಿ ಮೇಲೆ ಬಿದ್ದು ಒಂದು ಕಪ್ಪು ಗಂಡು ಕಾಕರ್ ಸ್ಪ್ಯಾನಿಯಲ್ ನಾಯಿ, ಟಬ್ಬಿ, ಬಲಿಯಾಯಿತು.
 • ನವೆಂಬರ್ ೯ - ಬಾರ್ಸಲೋನಾ, ಸ್ಪೇನಲ್ಲಿ ವಾಕೀನ್ ರೊಡ್ರೀಗೊರ ಕೊನ್‍‍ಚೆರ್ಟೊ ಡ ಅರಾನ್‍‍ವೆಥ್‍‍ದ ಪ್ರಥಮ ಪ್ರದರ್ಶನ.
 • ನವೆಂಬರ್ ೧೦ - ರೊಮೇನಿಯಾದ ಬುಕರೆಸ್ಟ್‍‍ನಲ್ಲಿ ಭೂಕಂಪ - ೧,೦೦೦ ಜನ ಸಾವು.
 • ನವೆಂಬರ್ ೧೧ - ಎರಡನೇ ವಿಶ್ವಯುದ್ಧ:
  • ಟಾರಂಟೊದ ಯುದ್ಧ - ಅರಸೊತ್ತಿಗೆಯ ನೌಕಾಪಡೆ ಟಾರಂಟೊದಲ್ಲಿನ ಇಟಲಿಯ ನೌಕಾಬಲದ ಮೇಲೆ ಇತಿಹಾಸದ ಮೊದಲ ವಿಮಾನ ನೌಕೆಯ ದಾಳಿ ಪ್ರಾರಂಭಿಸಿತು.
  • ಜರ್ಮನಿಯ ಹಿಸ್‍‍ಕೊಯಿಟ್ಜಾ (ಯುದ್ಧನೌಕೆ) ಅಟ್ಲ್ಯಾಂಟಿಸ್ ಬ್ರಿಟನ್‍‍ನ ಅತಿ ರಹಸ್ಯ ಅಂಚೆಯನ್ನು ಸೆರೆಹಿಡಿದು ಜಪಾನ್‍‍ಗೆ ಕಳುಹಿಸಿತು.
  • ಯುದ್ಧವಿರಾಮ ದಿನದ ಹಿಮಗಾಳಿ: ಒಂದು ಅನಿರೀಕ್ಷಿತ ಹಿಮಗಾಳಿಯಿಂದಾಗಿ ಮಧ್ಯ ಪಶ್ಚಿಮ ಅಮೇರಿಕಾದಲ್ಲಿ ೧೪೪ ಬಲಿ.
 • ನವೆಂಬರ್ ೧೩ - ವಾಲ್ಟ್ ಡಿಸ್ನಿಯ ಫ್ಯಾಂಟೇಜಿಯಾ ಬಿಡುಗಡೆಯಾಯಿತು. ಇದು ಡಿಸ್ನಿಗೆ ಮೊದಲ ಗಲ್ಲಾಪೆಟ್ಟಿಗೆ ಸೋಲಾಯಿತು, ಆದರೂ ಇದು ಅಂತಿಮವಾಗಿ ಸುಮಾರು ವರ್ಷಗಳ ನಂತರ ತನ್ನ ನಷ್ಟವನ್ನು ತಡೆಹಿಡಿದು ಡಿಸ್ನಿಯ ಚಲನಚಿತ್ರಗಳ ಪೈಕಿ ಅತ್ಯಂತ ಹೆಚ್ಚು ಮನ್ನಣೆಗಳಿಸಿದ್ದರಲ್ಲೊಂದಾಯಿತು.
 • ನವೆಂಬರ್ ೧೪ - ಎರಡನೇ ವಿಶ್ವಯುದ್ಧ: ಬ್ರಿಟನ್‍‍ನಲ್ಲಿ, ಕವಿಂಟ್ರಿ ನಗರ ೫೦೦ ಜರ್ಮನಿಯ ಲುಫ್ಟ್‍‍ವಾಫ ಸಿಡಿಗುಂಡುಗಳನ್ನೆಸೆಯುವ ವಿಮಾನಗಳಿಂದ ಧ್ವಂಸವಾಯಿತು (೧೫೦,೦೦೦ ಅಗ್ನಿ ಬಾಂಬುಗಳು, ೫೦೩ ಟನ್‍‍ಗಳಷ್ಟು ಹೆಚ್ಚು ಶಕ್ತಿಯ ಸಿಡಿಮದ್ದುಗಳು, ೧೩೦ ಇಳಿಕೊಡೆ ಗಣಿಗಳು ನಗರದ ೭೫,೦೦೦ ಕಟ್ಟಡಗಳ ಪೈಕಿ ೬೦,೦೦೦ ರಷ್ಟನ್ನು ನೆಲಸಮ ಮಾಡಿದವು; ೫೬೮ ಜನರ ಸಾವು).
 • ನವೆಂಬರ್ ೧೬
  • ಎರಡನೇ ವಿಶ್ವಯುದ್ಧ: ಜರ್ಮನಿ ಕವಿಂಟ್ರಿಯನ್ನು ಎರಡು ದಿನದ ಹಿಂದೆ ನೆಲಸಮ ಮಾಡಿದ್ದರ ಪ್ರತ್ಯುತ್ತರವಾಗಿ, ಅರಸೊತ್ತಿಗೆಯ ವಿಮಾನ ಬಲವು ಹ್ಯಾಂಬರ್ಗನ್ನು ಬಾಂಬ್ ಮಾಡಲು ಪ್ರಾರಂಭಿಸಿತು (ಯುದ್ಧ ಮುಗಿದಾಗ, ೫೦,೦೦೦ ಹ್ಯಾಂಬರ್ಗ್ ನಿವಾಸಿಗಳು ಮಿತ್ರ ರಾಷ್ಟ್ರಗಳ ದಾಳಿಗಳಿಗೆ ಬಲಿಯಾದರು).
  • ಸ್ಫೋಟಗೊಳ್ಳದಿದ್ದ ನಳಿಕೆ ಬಾಂಬು ಕನ್ಸಾಲಿಡೇಟಡ್ ಎಡಿಸನ್ ಕಚೇರಿ ಕಟ್ಟಡದಲ್ಲಿ ಸಿಕ್ಕಿತು. (ವರ್ಷಗಳ ನಂತರ ಮಾತ್ರ ಅಪರಾಧಿ, ಜ್ಯಾರ್ಜ್ ಮೆಟೆಸ್ಕಿಯನ್ನು ಬಂಧಿಸಲಾಯಿತು.)
  • ಜಮೈಕಾ ಸ್ಥಳೀಯ ಸರ್ಕಾರಿ ಅಧಿಕಾರಿಗಳ ಸಂಘ ಸ್ಥಾಪಿಸಲಾಯಿತು.
 • ನವೆಂಬರ್ ೧೮ - ಎರಡನೇ ವಿಶ್ವಯುದ್ಧ: ಜರ್ಮನಿಯ ನಾಯಕ ಅಡೋಲ್ಫ್ ಹಿಟ್ಲರ್ ಮತ್ತು ಇಟಲಿಯ ವಿದೇಶ ಮಂತ್ರಿ ಗಾಲಿಯಾಟ್ಜೊ ಚಾನೊ ಬೆನಿಟೊ ಮುಸ್ಸೊಲಿನಿಯ ಗ್ರೀಸ್‍‍ನ ವಿಪದ್ಯುಕ್ತ ಮುತ್ತಿಗೆಯನ್ನು ಚರ್ಚಿಸಲು ಭೇಟಿಯಾದರು.
 • ನವೆಂಬರ್ ೨೦ - ಎರಡನೇ ವಿಶ್ವಯುದ್ಧ: ಹಂಗರಿ, ರೊಮೇನಿಯಾ ಮತ್ತು ಸ್ಲೊವಾಕಿಯಾ ಆಕ್ಸಿಸ್ ಶಕ್ತಿಗಳನ್ನು ಸೇರಿದವು.
 • ನವೆಂಬರ್ ೨೭
  • ರೊಮೇನಿಯಾದಲ್ಲಿ, ಕ್ರಾಂತಿಯ ನಾಯಕ ಸೈನ್ಯಾಧಿಪತಿ ಯಾನ್ ಆಂಟೊನೆಸ್ಕುವಿನ ಉಕ್ಕಿನ ರಕ್ಷೆಯು ೬೦ಕ್ಕು ಹೆಚ್ಚು ಗಡಿಪಾರಾದ ರಾಜ ರೊಮೇನಿಯಾದ ಎರಡನೇಯ ಕ್ಯಾರೊಲ್‍‍ನ ಅಧಿಸಹಾಯಕರನ್ನು ಸೆರೆಹಿಡಿದು ಮರಣ ದಂಡನೆ ವಿಧಿಸಿತು . ಸತ್ತವರಲ್ಲಿ ಮಾಜಿ ಮಂತ್ರಿ ಮತ್ತು ಗೌರವಾನ್ವಿತ ಇತಿಹಾಸಕಾರ ನಿಕೊಲಾಯ್ ಯೊರ್ಗಾ ಕೂಡ ಇದ್ದರು.
  • ಎರಡನೇ ವಿಶ್ವಯುದ್ಧ: ಅರಸೊತ್ತಿಗೆಯ ನೌಕಾಪಡೆ ಮತ್ತು ರಿಜಿಯಾ ಮರೀನಾ ಸ್ಪಾರ್ಟಿವೆಂಟೊ ಭೂಶಿರದ ಯುದ್ಧವನ್ನು ಹೋರಾಡಿದರು.

ಡಿಸೆಂಬರ್

 • ಡಿಸೆಂಬರ್ ೮ - ಷಿಕಾಗೋ ಬೇರ‍್ಸ್, ರಾಷ್ಟ್ರೀಯ ಕಾಲ್ಚೆಂಡಾಟ ಒಕ್ಕೂಟದ ಇತಿಹಾಸದಲ್ಲಿ ಅತ್ಯಂತ ಏಕಪಕ್ಷೀಯ ವಿಜಯವೆನಿಸಲಿರುವ ಫಲಿತಾಂಶದಲ್ಲಿ, ವಾಷಿಂಗ್‍‍ಟನ್ ರೆಡ್‍‍ಸ್ಕಿನ್ಸನ್ನು ೭೩-೦ ಅಂಕಗಳಿಂದ ೧೯೪೦ ರ ಎನ್‍ಎಫ್‍ಎಲ್ ಛಾಂಪಿಯನ್‍‍ಷಿಪ್ ಪಂದ್ಯದಲ್ಲಿ ಪರಾಭವಗೊಳಿಸಿತು.
 • ಡಿಸೆಂಬರ್ ೧೨ ಮತ್ತು ಡಿಸೆಂಬರ್ ೧೫ - ಎರಡನೇ ವಿಶ್ವಯುದ್ಧ: " ಷೆಫೀಲ್ಡ್ ವಿಮಾನದಾಳಿ". ಷೆಫೀಲ್ಡ್ ನಗರ ಜರ್ಮನಿಯ ವಿಮಾನ ದಾಳಿಗಳಿಂದ ಬಹಳ ಹೆಚ್ಚು ಹಾನಿಗೊಳಗಾಯಿತು.
 • ಡಿಸೆಂಬರ್ ೧೪ - ಪ್ಲೂಟೋನಿಯಮ್, ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ರಾಸಾಯನಿಕವಾಗಿ ಬೇರ್ಪಡಿಸಲ್ಪಟ್ಟಿತು.
 • ಡಿಸೆಂಬರ್ ೨೩ - ವಿನ್‍‍ಸ್ಟನ್ ಚರ್ಚಿಲ್, ಇಟಲಿಯ ಜನತೆಗೆ ಸಂಬೋಧಿಸಿದ ಒಂದು ಪ್ರಸಾರ ಭಾಷಣದಲ್ಲಿ, ತಮ್ಮ ದೇಶದ ಜೊತೆಗಿದ್ದ ಇಟಲಿಯ ಐತಿಹಾಸಿಕ ಮೈತ್ರಿಗೆ ವಿರುದ್ಧವಾಗಿ ತನ್ನ ದೇಶವನ್ನು ಬ್ರಿಟನ್ ವಿರುದ್ಧ ಯುದ್ಧಕ್ಕೆ ಕರೆದುಕೊಂಡು ಹೋದದಕ್ಕೆ, ಬೆನಿಟೊ ಮುಸ್ಸೊಲಿನಿಯನ್ನು ಸಂಪೂರ್ಣವಾಗಿ ದೂಷಿಸಿದರು.
 • ಡಿಸೆಂಬರ್ ೨೬ - ದ ಫಿಲಡೆಲ್ಫಿಯಾ ಸ್ಟೋರಿಯ ಚಲನಚಿತ್ರ ರೂಪಾಂತರ, ಕ್ಯಾಥರೀನ್ ಹೆಪ್‍‍ಬರ್ನ್, ಕ್ಯಾರಿ ಗ್ರ್ಯಾಂಟ್, ಜೇಮ್ಸ್ ಸ್ಟೂಅರ್ಟ್ ಮತ್ತು ರೂಥ್ ಹಸ್ಸಿ ತಾರಾಗಣದಲ್ಲಿ, ನ್ಯೂ ಯಾರ್ಕ್ ನಗರದ ರೇಡಿಯೊ ಸಿಟಿ ಮ್ಯೂಸಿಕ್ ಹಾಲ್‍‍ನಲ್ಲಿ ಪ್ರಥಮ ಪ್ರದರ್ಶನ ಕಂಡಿತು.
 • ಡಿಸೆಂಬರ್ ೨೯
  • ಫ್ರ್ಯಾಂಕ್ಲಿನ್ ಡಿ. ರೂಸವೆಲ್ಟ್, ರಾಷ್ಟ್ರಕ್ಕೆ ಸಂಬೋಧಿಸಿದ ಒಂದು ಅಗ್ಗಿಷ್ಟಿಕೆ ಪಕ್ಕದ ಸಲ್ಲಾಪದಲ್ಲಿ, ಅಮೇರಿಕಾ "... ಪ್ರಜಾಪ್ರಭುತ್ವದ ಶ್ರೇಷ್ಠ ಶಸ್ತ್ರಾಗಾರ" ಆಗಬೇಕೆಂದು ಘೋಷಿಸಿದರು.
  • ಎರಡನೇ ವಿಶ್ವಯುದ್ಧ: "ಲಂಡನ್‍‍ನ ಎರಡನೇ ದೊಡ್ಡ ಜ್ವಾಲೆ"; ಲುಫ್ಟ್‍‍ವಾಫ ಭಾರಿ ಬೆಂಕಿ ಹೊತ್ತಿಸುವ ಬಾಂಬು ದಾಳಿಯನ್ನು ಕಾರ್ಯಗತಗೊಳಿಸಿ ೧೫೦೦ ಜ್ವಾಲೆಗಳನ್ನು ಮೊದಲುಮಾಡಿತು. ಅನೇಕ ಪ್ರಸಿದ್ಧ ಕಟ್ಟಡಗಳು, ಗಿಲ್ಡ್‍‍ಹಾಲ್ ಮತ್ತು ಟ್ರಿನಿಟಿ ಗೃಹಗಳೂ ಸೇರಿ, ಹಾನಿಗೊಳಗಾದವು ಇಲ್ಲ ಧ್ವಂಸವಾದವು.
 • ಡಿಸೆಂಬರ್ ೩೦ - ಕ್ಯಾಲಿಫೋರ್ನಿಯಾದ ಮೊದಲ ಆಧುನಿಕ ಹೆದ್ದಾರಿ, ಭವಿಷ್ಯದ ರಾಜ್ಯ ಮಾರ್ಗ ೧೧೦, ಅರ್ರೊಯೊ ಸೆಕೊ ದಾರಿ ಹೆಸರಿನಲ್ಲಿ ಪ್ಯಾಸಡೀನಾ, ಕ್ಯಾಲಿಫೋರ್ನಿಯಾದಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ಈಗ ಇದು ಪ್ಯಾಸಡೀನಾ ಹೆದ್ದಾರಿ ಎಂದು ಕರೆಯಲ್ಪಡುತ್ತದೆ.

ಅನಿರ್ಧಾರಿತ ದಿನಾಂಕ

 • ಗ್ವೀಲಿನ್, ಚಾಯ್‍‍ನಾ, ಪ್ರಚಲಿತ ಹೆಸರನ್ನು ಪಡೆಯಿತು.
 • ಟಿಬೆಟ್, ಆಮ್ಡೋ ಪ್ರಾಂತ: ಐದು ವರ್ಷದ ಟೆನ್‍‍ದ್ಜಿನ್ ಕ್ಯಾಟ್ಸೊನನ್ನು ಹದಿಮೂರನೇ ಡಾಲಾಯ್ ಲಾಮಾರ ಟುಲ್ಕು (ಪುನರ್ಜನ್ಮ) ಎಂದು ಘೋಷಿಸಲಾಯಿತು.
 • ಕೊರಿಯಾ ಹನ್‍‍ಮಿನ್ ಚಿಂಗ್-ಯುಮ್ ಹೇಯರೀ (೧೪೪೬) ಯನ್ನು ಶೋಧಿಸಲಾಯಿತು ಮತ್ತು ಹಾಂಗೂಲ್‍‍ನ ಆಧಾರವನ್ನು ವಿವರಿಸಲಾಯಿತು.
 • ಟ್ರುತ್ ಆರ್ ಕಾನ್ಸೀಕ್ವೆನ್ಸಸ್ ಎನ್‍‍ಬಿಸಿ ಬಾನುಲಿ ಮೇಲೆ ಪ್ರಥಮ ಪ್ರವೇಶ ಮಾಡಿತು.

ಪ್ರಗತಿಯಲ್ಲಿರುವ

Other Languages
Аҧсшәа: 1940
Afrikaans: 1940
Alemannisch: 1940
አማርኛ: 1940 እ.ኤ.አ.
aragonés: 1940
العربية: 1940
مصرى: 1940
asturianu: 1940
авар: 1940
Aymar aru: 1940
azərbaycanca: 1940
башҡортса: 1940 йыл
Boarisch: 1940
žemaitėška: 1940
Bikol Central: 1940
беларуская: 1940
беларуская (тарашкевіца)‎: 1940
български: 1940
भोजपुरी: 1940
Bahasa Banjar: 1940
বাংলা: ১৯৪০
বিষ্ণুপ্রিয়া মণিপুরী: মারি ১৯৪০
brezhoneg: 1940
bosanski: 1940.
català: 1940
Mìng-dĕ̤ng-ngṳ̄: 1940 nièng
нохчийн: 1940 шо
Cebuano: 1940
کوردی: ١٩٤٠
qırımtatarca: 1940
čeština: 1940
kaszëbsczi: 1940
Чӑвашла: 1940
Cymraeg: 1940
dansk: 1940
Deutsch: 1940
Zazaki: 1940
dolnoserbski: 1940
Ελληνικά: 1940
emiliàn e rumagnòl: 1940
English: 1940
Esperanto: 1940
español: 1940
eesti: 1940
euskara: 1940
estremeñu: 1940
فارسی: ۱۹۴۰
suomi: 1940
Võro: 1940
føroyskt: 1940
français: 1940
arpetan: 1940
Nordfriisk: 1940
Frysk: 1940
Gaeilge: 1940
Gagauz: 1940
贛語: 1940年
Gàidhlig: 1940
galego: 1940
Avañe'ẽ: 1940
Gaelg: 1940
客家語/Hak-kâ-ngî: 1940-ngièn
עברית: 1940
हिन्दी: १९४०
Fiji Hindi: 1940
hrvatski: 1940.
hornjoserbsce: 1940
Kreyòl ayisyen: 1940 (almanak gregoryen)
magyar: 1940
Հայերեն: 1940
interlingua: 1940
Bahasa Indonesia: 1940
Ilokano: 1940
Ido: 1940
íslenska: 1940
italiano: 1940
日本語: 1940年
la .lojban.: 1940moi
Basa Jawa: 1940
ქართული: 1940
Qaraqalpaqsha: 1940
Kabɩyɛ: 1940
қазақша: 1940 жыл
ភាសាខ្មែរ: ឆ្នាំ​ ១៩៤០
한국어: 1940년
къарачай-малкъар: 1940 джыл
Ripoarisch: Joohr 1940
kurdî: 1940
коми: 1940-ӧд во
kernowek: 1940
Кыргызча: 1940
Latina: 1940
Lëtzebuergesch: 1940
лезги: 1940 йис
Limburgs: 1940
Ligure: 1940
lumbaart: 1940
lingála: 1940
lietuvių: 1940 m.
latviešu: 1940. gads
मैथिली: १९४०
Basa Banyumasan: 1940
Malagasy: 1940
олык марий: 1940
Māori: 1940
Baso Minangkabau: 1940
македонски: 1940
മലയാളം: 1940
монгол: 1940 он
मराठी: इ.स. १९४०
кырык мары: 1940 и
Bahasa Melayu: 1940
မြန်မာဘာသာ: ၁၉၄၀
эрзянь: 1940 ие
Dorerin Naoero: 1940
Nāhuatl: 1940
Napulitano: 1940
Plattdüütsch: 1940
Nedersaksies: 1940
नेपाली: सन् १९४०
नेपाल भाषा: ई सं १९४०
Nederlands: 1940
norsk nynorsk: 1940
norsk: 1940
Novial: 1940
Nouormand: 1940
Sesotho sa Leboa: 1940
occitan: 1940
Livvinkarjala: 1940
ଓଡ଼ିଆ: ୧୯୪୦
Ирон: 1940-æм аз
ਪੰਜਾਬੀ: 1940
Kapampangan: 1940
Papiamentu: 1940
पालि: १९४०
polski: 1940
پنجابی: 1940
português: 1940
Runa Simi: 1940
română: 1940
русский: 1940 год
русиньскый: 1940
саха тыла: 1940
sardu: 1940
sicilianu: 1940
Scots: 1940
سنڌي: 1940ع
davvisámegiella: 1940
srpskohrvatski / српскохрватски: 1940
සිංහල: 1940
Simple English: 1940
slovenčina: 1940
slovenščina: 1940
shqip: 1940
српски / srpski: 1940
Seeltersk: 1940
Basa Sunda: 1940
svenska: 1940
Kiswahili: 1940
ślůnski: 1940
தமிழ்: 1940
తెలుగు: 1940
tetun: 1940
тоҷикӣ: Соли 1940
ไทย: พ.ศ. 2483
Türkmençe: 1940
Tagalog: 1940
Tok Pisin: 1940
Türkçe: 1940
татарча/tatarça: 1940 ел
reo tahiti: 1940
удмурт: 1940 ар
українська: 1940
اردو: 1940ء
oʻzbekcha/ўзбекча: 1940
vèneto: 1940
Tiếng Việt: 1940
West-Vlams: 1940
Volapük: 1940
walon: 1940
Winaray: 1940
хальмг: 1940 җил
მარგალური: 1940
ייִדיש: 1940
Yorùbá: 1940
Zeêuws: 1940
中文: 1940年
Bân-lâm-gú: 1940 nî
粵語: 1940年