ವಿಶ್ವ ಆರ್ಥಿಕ ವೇದಿಕೆ

World Economic Forum
World Economic Forum logo.svg
ಸ್ಥಾಪನೆ1971
ಶೈಲಿNon-profit organization
Legal statusFoundation
HeadquartersCologny, Switzerland
Region served
Worldwide
CEO
Klaus Martin Schwab
ಜಾಲತಾಣhttp://www.weforum.org/

ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌-WEF ) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‌ಲೆಂಡ್‌‌‌ನ ದಾವೋಸ್‌‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ; ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.[೧] ಚೀನಾದಲ್ಲಿ "ಹೊಸ ಚಾಂಪಿಯನ್ನರ ವಾರ್ಷಿಕ ಸಭೆ"ಯನ್ನೂ (ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌) WEF ಸಂಘಟಿಸುತ್ತದೆ ಹಾಗೂ ವರ್ಷದಾದ್ಯಂತವೂ ಪ್ರಾದೇಶಿಕ ಸಭೆಗಳ ಒಂದು ಸರಣಿಯನ್ನು ಆಯೋಜಿಸುತ್ತದೆ. 2008ರಲ್ಲಿ ನಡೆದ ಆ ಪ್ರಾದೇಶಿಕ ಸಭೆಗಳಲ್ಲಿ, ಯುರೋಪ್‌ ಮತ್ತು ಮಧ್ಯ ಏಷ್ಯಾ, ಪೂರ್ವ ಏಷ್ಯಾ, ರಷ್ಯಾ CEO ದುಂಡುಮೇಜಿನ ಪರಿಷತ್ತು, ಆಫ್ರಿಕಾ, ಮಧ್ಯ ಪ್ರಾಚ್ಯ ಇವುಗಳ ಕುರಿತಾದ ಸಭೆಗಳು, ಮತ್ತು ಲ್ಯಾಟಿನ್‌ ಅಮೆರಿಕಾದ ಕುರಿತಾದ ವಿಶ್ವ ಆರ್ಥಿಕ ವೇದಿಕೆ ಇವೆಲ್ಲವೂ ಸೇರಿದ್ದವು. 2008ರಲ್ಲಿ ಇದು ದುಬೈನಲ್ಲಿ "ಸಮಿಟ್‌ ಆನ್‌ ದಿ ಗ್ಲೋಬಲ್‌ ಅಜೆಂಡಾ" ಎಂಬ ಶೃಂಗಸಭೆಯನ್ನು ಪ್ರಾರಂಭಿಸಿತು.

Other Languages
беларуская (тарашкевіца)‎: Сусьветны эканамічны форум
Bahasa Indonesia: Forum Ekonomi Dunia
Lingua Franca Nova: Foro Economial Mundial
Bahasa Melayu: Forum Ekonomi Dunia
srpskohrvatski / српскохрватски: Svjetski ekonomski forum
Simple English: World Economic Forum