ಯುತಿ (ಖಗೋಳಶಾಸ್ತ್ರ)

ಯುತಿ - ಇದು ಸ್ಥಾನಿಕ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಉಪಯೋಗಿಸಲಾಗುವ ಒಂದು ಪದ. ಇದರರ್ಥವೇನೆಂದರೆ, ಒಂದು ನಿಗದಿತ ಸ್ಥಳದಿಂದ (ಸಾಮಾನ್ಯವಾಗಿ ಭೂಮಿಯಿಂದ) ನೋಡಿದಾಗ, ಎರಡು ಆಕಾಶಕಾಯಗಳು ಆಗಸದಲ್ಲಿ ಪರಸ್ಪರ ಒಂದರ ನಿಕಟದಲ್ಲಿ ಇನ್ನೊಂದು ಇರುವಂತೆ ಕಾಣುವುದು.

ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಯುತಿಯನ್ನು ಈ ಚಿಹ್ನೆಯಿಂದ ತೋರಿಸಲಾಗುತ್ತದೆ. Astronomical conjunction symbol.png

ಹತ್ತಿರದಲ್ಲಿ ಹಾದುಹೋಗುವುದು

ಸಾರ್ವತ್ರಿಕವಾಗಿ ಎರಡು ಗ್ರಹಗಳ ಸನ್ನಿವೇಶದಲ್ಲಿ ಹತ್ತಿದರ ಹಾಯುವಿಕೆಯೆಂದರೆ ಅವೆರಡೂ ಒಂದೇ ವಿಷುವದಂಶವನ್ನು (ಆದ್ದರಿಂದ ಒಂದೇ ಘಂಟಾ ಕೋನವನ್ನು) ಹೊಂದಿವೆ ಎಂದರ್ಥ. ಆದರೆ, ಕ್ರಾಂತಿವೃತ್ತೀಯ ರೇಖಾಂಶದ ಯುತಿ ಆಗುವುದೂ ಉಂಟು. ಈ ರೀತಿಯ ಯುತಿಯಲ್ಲಿ ಎರಡು ಕಾಯಗಳೂ ಒಂದೇ ಕ್ರಾಂತಿವೃತ್ತೀಯ ರೇಖಾಂಶವನ್ನು ಹೊಂದಿರುತ್ತವೆ. ವಿಷುವದಂಶದ ಯುತಿ ಮತ್ತು ಕ್ರಾಂತಿವೃತ್ತೀಯ ರೇಖಾಂಶದ ಯುತಿಗಳು ಸಮಾನ್ಯವಾಗಿ ಒಂದೇ ಸಮಯದಲ್ಲಿ ಆಗದಿದ್ದರೂ, ಬಹುತೇಕ ಸನ್ನಿವೇಶಗಳಲ್ಲಿ ಇವೆರಡೂ ಸ್ವಲ್ಪವೇ ಕಾಲಾವಧಿಯ ನಡುವೆ ಆಗುತ್ತವೆ. ಆದರೆ, ತ್ರಿಯುತಿಯು ಆದಾಗ, ಕೇವಲ ವಿಷುವದಂಶ ಯುತಿ (ಅಥವಾ ಕೇವಲ ಕ್ರಾಂತಿವೃತ್ತೀಯ ರೇಖಾಂಶದ ಯುತಿ) ಉಂಟಾಗಬಹುದು. ಯುತಿಯ ಸಮಯದಲ್ಲಿ - ಅದು ಯಾವುದೇ ಬಗೆಯ ಯುತಿ ಆಗಿದ್ದರೂ - ಖಗೋಳದಲ್ಲಿನ ಎರಡು ಆಕಾಶಕಾಯಗಳು ಹತ್ತಿರದಲ್ಲಿರುವಂತೆ ಕಾಣುತ್ತವೆ. ಬಹುತೇಕ ಯುತಿಗಳಲ್ಲಿ ಒಂದು ಕಾಯವು ಇನ್ನೊಂದರ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವಂತೆ ಕಾಣುತ್ತದೆ.

Other Languages
فارسی: مقارنه
Bahasa Indonesia: Konjungsi (astronomi)
日本語: 合 (天文)
한국어: 합 (천문학)
Lëtzebuergesch: Konjunktioun (Astronomie)
മലയാളം: അന്തര്യുതി
srpskohrvatski / српскохрватски: Konjunkcija (astronomija)
Türkçe: Kavuşum
українська: Сполучення