ಮ್ಯಾಂಚೆಸ್ಟರ್

ಮ್ಯಾಂಚೆಸ್ಟರ್‌‌ (pronounced /ˈmæntʃɛstə/ ( listen)) ಇಂಗ್ಲೆಂ‌ಡ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ನ ನಗರ ಮತ್ತು ಪ್ರಧಾನನಗರ ವಿಭಾಗವಾಗಿದೆ. ಇಸವಿ ೨೦೦೮ರಲ್ಲಿ, ನಗರದ ಜನಸಂಖ್ಯೆ ೪೬೪,೨೦೦ [೨] ಎಂದು ಅಂದಾಜು ಮಾಡಲಾಗಿದ್ದು, ಇಂಗ್ಲೆಂಡ್‌ನ ಏಳನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳೀಯ ಆಡಳಿತ ಜಿಲ್ಲೆಯಾಗಿದೆ. ಮ್ಯಾಂಚೆಸ್ಟರ್‌ UKದ ಅತಿ ದೊಡ್ಡ ಪ್ರಧಾನನಗರ ಪ್ರದೇಶಗಳೊಂದರಲ್ಲಿದೆ. ಗ್ರೇಟರ್‌ ಮ್ಯಾಂಚೆಸ್ಟರ್‌ನ ಪ್ರಧಾನನಗರದ ಕೌಂಟಿಯ ಅಂದಾಜು ಜನಸಂಖ್ಯೆ ೨,೫೬೨,೦೦೦. ಗ್ರೇಟರ್‌ ಮ್ಯಾಂಚೆಸ್ಟರ್‌ ನಗರ ಪ್ರದೇಶದ ಜನಸಂಖ್ಯೆಯು ೨,೨೪೦,೨೩೦ [೩] ಹಾಗೂ ಮ್ಯಾಂಚೆಸ್ಟರ್‌ ಸುತ್ತ ಇರುವ ಲಾರ್ಜರ್‌ ಅರ್ಬನ್‌ ಜೋನ್‌ UKಯ ಎರಡನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ೨೦೦೪ ಅರ್ಬನ್‌ ಆಡಿಟ್‌ ಪ್ರಕಾರ ೨,೫೩೯,೧೦೦ ಅಂದಾಜು ಜನಸಂಖ್ಯೆ ಹೊಂದಿದೆ.[೪] ಮ್ಯಾಂಚೆಸ್ಟರ್‌ನ ಡೆಮೊನಿಂ(ನಿರ್ದಿಷ್ಟ ಸ್ಥಳದ ನಿವಾಸಿಗಳನ್ನು ಕರೆಯುವುದು)ನ್ನು ಮ್ಯಾನ್ಕುನಿಯನ್ ಎನ್ನಲಾಗಿದೆ.

ಮ್ಯಾಂಚೆಸ್ಟರ್‌ ವಾಯುವ್ಯ ಇಂಗ್ಲೆಂಡ್‌ನ ದಕ್ಷಿಣ ಮಧ್ಯ ಭಾಗದಲ್ಲಿದೆ. ಇದರ ದಕ್ಷಿಣದಲ್ಲಿ ಚೆಷೈರ್‌ ಬಯಲು ಪ್ರದೇಶ ಮತ್ತು ಉತ್ತರ ಮತ್ತು ಪೂರ್ವದಲ್ಲಿ ಪೆನೀನ್ಸ್‌ ಇವೆ. ಮಾಮುಸಿಯಮ್‌ ರೋಮನ್‌ ಕೋಟೆಯೊಂದಿಗೆ ಸಂಬಂಧ ಹೊಂದಿದ ನಾಗರಿಕ ವೈಕಸ್‌ ನೊಂದಿಗೆ ದಾಖಲಿತ ಮ್ಯಾಂಚೆಸ್ಟರ್‌ ಇತಿಹಾಸ ಆರಂಭವಾಯಿತು. ಇದನ್ನು ಮೆಡ್ಲಾಕ್‌ ಮತ್ತು ಇರ್ವೆಲ್‌ ನದಿಗಳ ಸಂಗಮದ ಬಳಿ ಮರಳುಗಲ್ಲಿನಲ್ಲಿ ಸ್ಥಾಪಿಸಲಾಗಿತ್ತು. ಐತಿಹಾಸಿಕವಾಗಿ, ನಗರದ ಬಹಳಷ್ಟು ಭಾಗವು ಲಂಕಾಷೈರ್‌ಗೆ ಸೇರಿತ್ತು. ಆದರೂ, ಮರ್ಸೀ ನದಿಯ ದಕ್ಷಿಣದಲ್ಲಿರುವ ಕೆಲವು ಪ್ರದೇಶಗಳು ಚೆಷೈರ್‌ನಲ್ಲಿದ್ದವು. ಮಧ್ಯಯುಗವಿಡೀ ಮ್ಯಾಂಚೆಸ್ಟರ್‌ ಒಂದು ಜಹಗೀರಿನ ಪಟ್ಟಣವಾಗಿತ್ತು. ಆದರೆ, ೧೯ನೆಯ ಶತಮಾನದ ತಿರುವಿನಲ್ಲಿ ಅಚ್ಚರಿಯ ಪ್ರಮಾಣದಲ್ಲಿ ವಿಸ್ತರಣೆ ಆರಂಭಿಸಿತು.ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಜವಳಿ ಉತ್ಪಾದನೆಯಲ್ಲಿ ಚೇತರಿಕೆಯಿಂದ ಯೋಜನೆರಹಿತ ನಗರೀಕರಣದ ಪ್ರಕ್ರಿಯೆ ಭಾಗವಾಗಿ ಈ ಬೆಳವಣಿಗೆ ಉಂಟಾಯಿತು.[೫] ಮ್ಯಾಂಚೆಸ್ಟರ್‌ನ ನಗರೀಕರಣವು, ಕೈಗಾರಿಕಾ ಕ್ರಾಂತಿ ಮತ್ತು ವಿಕ್ಟೊರಿಯನ್‌ ಯುಗದ ಸಮಯಕ್ಕೆ ಹೆಚ್ಚಾಗಿ ಹೊಂದಿಕೆಯಾಗಿತ್ತು, ಇದರ ಫಲವಾಗಿ ವಿಶ್ವದ ಮೊದಲ ಕೈಗಾರಿಕೀಕೃತ ನಗರವಾಯಿತು.[೬] ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಕೈಗಾರಿಕಾ ಕಟ್ಟಡ ನಿರ್ಮಾಣದಲ್ಲಿ ಚೇತರಿಕೆಯ ಫಲವಾಗಿ, ಪಟ್ಟಣವಾಗಿದ್ದ ಮ್ಯಾಂಚೆಸ್ಟರ್ ಒಂದು ಪ್ರಮುಖ ಗಿರಣಿ ಪಟ್ಟಣ, ಪ್ರಧಾನನಗರ ವಿಭಾಗ‌ವಾಗಿ ಪರಿವರ್ತನೆ ಹೊಂದಿ ಅಂತಿಮವಾಗಿ ೧೮೫೩ರಲ್ಲಿ ಗೌರವಸೂಚಕ 'ನಗರ ಸ್ಥಾನಮಾನ' ಗಳಿಸಿತು.

ಇಂಗ್ಲಿಷ್‌ ಕೋರ್‌ ಸಿಟೀಸ್‌ ಗ್ರೂಪ್‌ನ ಅಂಗವಾಗಿರುವ ಮ್ಯಾಂಚೆಸ್ಟರ್ ನಗರವು ಇಂದು ಕಲೆ, ಮಾಧ್ಯಮ, ಉನ್ನತ ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇವೆಲ್ಲ ಅಂಶಗಳು ೨೦೦೨ರಲ್ಲಿನ ಸಮೀಕ್ಷೆಯಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಕಿಂಗ್ಡಮ್‌ನ ಎರಡನೆಯ ಪ್ರಮುಖ ನಗರ ಎಂದು ಗುರುತಿಸಲು ಕೊಡುಗೆ ನೀಡಿತು.[೭] ಇಸವಿ ೨೦೦೬ರಲ್ಲಿ ಪ್ರಕಟಿಸಲಾದ ಬ್ರಿಟಿಷ್‌ ವಾಣಿಜ್ಯ ಉದ್ಯಮಿಗಳ ಸಮೀಕ್ಷೆಯಲ್ಲಿ, ಉದ್ದಿಮೆಯೊಂದನ್ನು ಆರಂಭಿಸಲು ಮ್ಯಾಂಚೆಸ್ಟರ್‌ ಅತ್ಯುತ್ತಮ ನಗರವೆಂದು ಪರಿಗಣಿಸಲಾಯಿತು.[೮] ಇಸವಿ ೨೦೦೭ರಲ್ಲಿ ಪ್ರಕಟಿತ, ಮ್ಯಾಂಚೆಸ್ಟರ್‌ ಪಾರ್ಟ್‌ನರ್‌ಶಿಪ್ ನಿರೂಪಿಸಿದ‌ ವರದಿಯ ಪ್ರಕಾರ, ಮ್ಯಾಂಚೆಸ್ಟರ್‌ "ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ" ಎಂದು ತೋರಿಸಿತು.[೯] GaWC ಜಾಗತಿಕ ನಗರಗಳ ಪಟ್ಟಿಗಳಲ್ಲಿ, ಮ್ಯಾಂಚೆಸ್ಟರ್‌ ಗಾಮಾ ನಗರ(ಜಾಗತಿಕ ನಗರ) ಎಂದು ಶ್ರೇಯಾಂಕಿತವಾಗಿದೆ.[೧೦] ವಿದೇಶೀ ಪ್ರವಾಸಿಗರ ಪಾಲಿಗೆ, ಮ್ಯಾಂಚೆಸ್ಟರ್‌ ಯುನೈಟೆಡ್‌ ಕಿಂಗ್ಡಮ್‌ನ ಮೂರನೆಯ ಅತಿ ಹೆಚ್ಚು ಪ್ರವಾಸಿ ನಗರವಾಗಿದೆ, ಹಾಗೂ ಲಂಡನ್‌ ಹೊರತುಪಡಿಸಿ, ಇಂಗ್ಲೆಂಡ್‌ನಲ್ಲೇ ಅತಿ ಹೆಚ್ಚು ಪ್ರವಾಸಿ ನಗರವಾಗಿದೆ.[೧೧] ಮ್ಯಾಂಚೆಸ್ಟರ್‌ 2002 ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು. ಅದರ ಇತರೆ ಕ್ರೀಡಾ ಸಂಬಂಧಗಳೆಂದರೆ ಅದರ ಎರಡು ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ತಂಡಗಳಾದ ಮ್ಯಾಂಚೆಸ್ಟರ್‌ ಯುನೈಟೆಡ್‌ ಹಾಗೂ ಮ್ಯಾಂಚೆಸ್ಟರ್‌ ಸಿಟಿ.[೧೨]

ಇತಿಹಾಸ

ಶಬ್ದ ನಿಷ್ಪತ್ತಿ

ಮ್ಯಾಂಚೆಸ್ಟರ್‌ ಎಂಬ ಹೆಸರು ಪುರಾತನ ರೋಮನ್‌ ಹೆಸರಾದ ಮಾಮುಸಿಯಮ್ ‌ನಿಂದ ಉದ್ಭವವಾಗಿದೆ. ಮಾಮುಸಿಯಮ್‌ ಎಂಬುದು ರೋಮನ್‌ ಕೋಟೆ ಮತ್ತು ವಸಾಹತಿನ ಹೆಸರಾಗಿದೆ. ಇದನ್ನು ಸಾಮಾನ್ಯವಾಗಿ ಮೂಲ ಸೆಲ್ಟಿಕ್‌ ಹೆಸರಿನ (ಮ್ಯಾಮ್‌- (ಸ್ತನ) ಬಹುಶಃ ಅರ್ಥ: ಸ್ತನದಂತಹ ಬೆಟ್ಟ) ಲ್ಯಾಟಿನೀಕರಣವೆಂದು ಭಾವಿಸವಾಗಿದೆ. ಜೊತೆಗೆ, ಲ್ಯಾಟಿನ್‌ ಕ್ಯಾಸ್ಟ್ರಾ (ಶಿಬಿರ (ಕ್ಯಾಂಪ್‌))ದಿಂದ ಜನ್ಯವಾದ ಪ್ರಾಚೀನ ಇಂಗ್ಲಿಷ್‌ ಭಾಷೆಯ ಸೀಸ್ಟರ್ ‌= (ಪಟ್ಟಣ).[೧೩] ಇನ್ನೊಂದು ಪರ್ಯಾಯ ಸಿದ್ಧಾಂತದ ಪ್ರಕಾರ,ಇದರ ಮೂಲವು ಬ್ರಿಟಿಷ್‌ ಸೆಲ್ಟಿಕ್‌ನ 'ಮಮ್ಮಾ = "ತಾಯಿ" ಪದದಿಂದ ಜನ್ಯವಾಗಿದೆ. ಈ 'ತಾಯಿ'ಯು, ಕೋಟೆಯ ಕೆಳಗೆ ಹರಿಯುವ ಮೆಡ್ಲಾಕ್‌ ನದಿಯ ನದಿದೇವತೆಯಾಗಿದ್ದಳು. ಮ್ಯಾಮ್ ‌ ಎಂದರೆ, ಐರಿಷ್‌ ಗೇಯಿಲಿಕ್‌ ಭಾಷೆಯಲ್ಲಿ ಹೆಣ್ಣಿನ ಸ್ತನ ಹಾಗೂ ವೆಲ್ಷ್‌ ಭಾಷೆಯಲ್ಲಿ 'ತಾಯಿ' ಎಂಬ ಅರ್ಥ ನೀಡುತ್ತದೆ.[೧೪]

ಆರಂಭಿಕ ಇತಿಹಾಸ

ಬ್ರಿಗ್ಯಾಂಟಸ್‌ ಎಂಬ ಪ್ರಮುಖ ಸೆಲ್ಟಿಕ್‌ ಬುಡಕಟ್ಟು ಜನಾಂಗದವರು ಇಂದಿನ ಉತ್ತರ ಇಂಗ್ಲೆಂಡ್‌ಸ್ಥಳದಲ್ಲಿ ವಾಸಿಸುತ್ತಿದ್ದರು. ಇರ್ವೆಲ್‌ ನದಿಯ ದಡದ ಎದುರು, ಇಂದು ನಿಂತಿರುವ ಮ್ಯಾಂಚೆಸ್ಟರ್‌ ಕಥಿಡ್ರಲ್‌ ಬಳಿ ಮರಳುಗಲ್ಲಿನ ಶಿಲಾಸ್ತರವುಳ್ಳ ಆ ಸ್ಥಳದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದರು.[೧೫] ಇವರ ಪ್ರಾಂತ್ಯವು ಇಂದಿನ ಸ್ಯಾಲ್ಫರ್ಡ್ ಮತ್ತು ಸ್ಟ್ರೆಟ್ಫರ್ಡ್‌‌ನ ಫಲವತ್ತಾದ ತಗ್ಗುಪ್ರದೇಶದುದ್ದಕ್ಕೂ ವಿಸ್ತರಿಸಿತ್ತು. ಮೊದಲ ಶತಮಾನದಲ್ಲಿ ಬ್ರಿಟನ್‌ ಮೇಲೆ ರೋಮನ್‌ರ ವಿಜಯದ ನಂತರ, ೭೯ನೆಯ ಇಸವಿಯಲ್ಲಿ ಜನರಲ್‌ ಅಗ್ರಿಕೋಲಾ ಡಿವಾ ವಿಕ್ಟ್ರಿಕ್ಸ್‌ ( ಚೆಸ್ಟರ್‌) ಮತ್ತು ಇಬೊರಾಕಮ್‌ ( ಯಾರ್ಕ್‌) ಒಂದಿಗೆ ರೋಮನ್‌ ಹಿತಾಸಕ್ತಿಗಳನ್ನು ಬ್ರಿಗ್ಯಾಂಟಸ್‌‌ನಿಂದ ರಕ್ಷಿಸಿಕೊಳ್ಳಲೆಂದು, ಮಾಮುಸಿಯಮ್‌ ಎಂಬ ರೋಮನ್‌ ಕೋಟೆಯನ್ನು ನಿರ್ಮಿಸುವಂತೆ ಆದೇಶ ಹೊರಡಿಸಿದ.[೧೫]

ಈ ಸಮಯದಿಂದಲೂ, ಕೇಂದ್ರೀಯ ಮ್ಯಾಂಚೆಸ್ಟರ್‌ ಕಾಯಂ ಆಗಿ ಸ್ಥಾಪಿತವಾಗಿದೆ.[೧೬] ರೋಮನ್‌ ಕೋಟೆಯ ಅಂತಿಮ ಆವೃತ್ತಿಯ ಅಡಿಪಾಯಗಳ ಸ್ಥಿರ ಅವಶೇಷವು ಕ್ಯಾಸ್ಲ್‌ಫೀಲ್ಡ್‌ನಲ್ಲಿ ಕಾಣಬಹುದಾಗಿದೆ. ಸುಮಾರು ೩ ಶತಮಾನದ ಆಸುಪಾಸಿನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ರೋಮನ್ ವಸಾಹತು ಬಹುಶಃ ಅಂತ್ಯಗೊಂಡಿತು. ವೈಕಸ್ ‌ ಅಥವಾ ನಾಗರಿಕ ವಸಾಹತು ೩ನೇ ಶತಮಾನದ ಮಧ್ಯದಲ್ಲಿ ತೊರೆದಿರುವಂತೆ ಕಂಡುಬಂದಿದೆ. ಆದರೂ, ಕೋಟೆಯು ೩ನೇ ಶತಮಾನದ ಅಂತ್ಯ ಅಥವಾ ೪ನೆಯ ಶತಮಾನದ ವರೆಗೆ ಸಣ್ಣ ದಂಡಿಗೆ ಆಸರೆಯಾಗಿರಬಹುದು ಎನ್ನಲಾಗಿದೆ.[೧೭] ಇಸವಿ ೧೦೬೬ರಲ್ಲಿ ನಾರ್ಮನ್‌ ವಿಜಯದ ಸಮಯದಲ್ಲಿ, ವಸಾಹತಿನ ಗಮನವು ಇರ್ವೆಲ್ ಮತ್ತು ಇರ್ಕ್‌ ನದಿಗಳ ಸಂಗಮದತ್ತ ತಿರುಗಿತ್ತು.[೧೮] ಆನಂತರದ ಹ್ಯಾರಿಯಿಂಗ್‌ ಆಫ್‌ ದಿ ನಾರ್ತ್‌(ದಂಡಯಾತ್ರೆಗಳ ಸರಣಿ)ನಲ್ಲಿ ವಿಶಾಲ ವಲಯವನ್ನು ಹಾಳುಗೆಡವಲಾಯಿತು.[೧೯][೨೦]

ಸುಮಾರು 1650 ಇಸವಿಯಲ್ಲಿ ಮ್ಯಾಂಚೆಸ್ಟರ್‌ನ ನಕ್ಷೆ.
ಇಸವಿ 1801ರಲ್ಲಿ ಮ್ಯಾಂಚೆಸ್ಟರ್‌ ಮತ್ತು ಸ್ಯಾಲ್ಫರ್ಡ್‌ನ ನಕ್ಷೆ.

ಜಹಗೀರಿನ ಒಡೆಯ ಥಾಮಸ್‌ ಡಿ ಲಾ ವಾರ್‌ ಪಾದ್ರಿ ಹೋಬಳಿಗಾಗಿ ಒಂದು ಕೊಲೇಜಿಯೇಟ್ ಚರ್ಚ್‌ನ್ನು ೧೪೨೧ರಲ್ಲಿ ಸಂಸ್ಥಾಪಿಸಿ ನಿರ್ಮಿಸಿದ. ಈ ಚರ್ಚ್ ಇಂದು ಮ್ಯಾಂಚೆಸ್ಟರ್‌ ಕ್ಯಾಥಿಡ್ರಲ್‌ ಆಗಿದೆ. ಕಾಲೇಜ್‌ನ ಸ್ಥಳೀಯ ಆವರಣಗಳಲ್ಲಿ ಚೆಟ್‌ಹ್ಯಾಮ್ಸ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ ಮತ್ತು ಚೆಟ್‌ಹ್ಯಾಮ್ಸ್‌ ಲೈಬ್ರರಿ ಇವೆ.[೧೮][೨೧] ಇಸವಿ ೧೬೫೩ಯಲ್ಲಿ ಆರಂಭಗೊಂಡ ಗ್ರಂಥಾಲಯವು ಇಂದಿಗೂ ಸಹ ಸಾರ್ವಜನಿಕರಿಗಾಗಿ ತೆರೆದಿದೆ. ಇದು ಯುನೈಟೆಡ್‌ ಕಿಂಗ್ಡಮ್‌ನಲ್ಲಿಯೇ ಅತಿ ಹಳೆಯ ಸಾರ್ವಜನಿಕ ಉಚಿತ ಆಕರ ಗ್ರಂಥಾಲಯವಾಗಿದೆ.[೨೨]

ಮ್ಯಾಂಚೆಸ್ಟರ್‌ ೧೨೮೨ರಲ್ಲಿಯೇ ಮಾರುಕಟ್ಟೆಯೊಂದನ್ನು ಹೊಂದಿತ್ತೆಂದು ತಿಳಿಸಲಾಗಿದೆ.[೨೩] ಸುಮಾರು ೧೪ನೆಯ ಶತಮಾನದಲ್ಲಿ, ಫ್ಲೆಮಿಷ್‌ ನೇಕಾರರು ಮ್ಯಾಂಚೆಸ್ಟರ್‌ಗೆ ವಲಸೆ ಬಂದರು. ಈ ಗುಂಪಿನವರು ವಲಯದ ಜವಳಿ ಉದ್ದಿಮೆಯ ಅಡಿಪಾಯ ಎಂದು ಕೆಲವುಬಾರಿ ಮನ್ನಣೆ ನೀಡಲಾಗಿದೆ.[೨೪] ಮ್ಯಾಂಚೆಸ್ಟರ್‌ ಉಣ್ಣೆಯ ಮತ್ತು ನಾರಿನ ಬಟ್ಟೆಯ ಉತ್ಪಾದನೆ ಮತ್ತು ವಹಿವಾಟಿನ ಪ್ರಮುಖ ಕೇಂದ್ರವಾಯಿತು. ಸುಮಾರು ೧೫೪೦ ಇಸವಿಯಲ್ಲಿ ಇನ್ನಷ್ಟು ವಿಸ್ತರಿಸಿ, ಜಾನ್‌ ಲೇಯ್ಲೆಂಡ್ ವರ್ಣಿಸಿದಂತೆ, ಈ ನಗರವು ಇಡೀ ಲ್ಯಾಂಕಾಷೈರ್‌ನಲ್ಲಿಯೇ "ಅತ್ಯಂತ ಸಮರ್ಪಕ, ಅತ್ಯುತ್ತಮವಾಗಿ ನಿರ್ಮಿತ, ಅತಿ ವೇಗವಾಗಿ ಬೆಳೆದ ಹಾಗೂ ಅತಿ ಜನನಿಬಿಡ ನಗರವಾಯಿತು".[೧೮] ಲೇಯ್ಲೆಂಡ್‌ ಬಣ್ಣಿಸಿದ ಮ್ಯಾಂಚೆಸ್ಟರ್‌ ನಗರದ ಕೇವಲ ಕಥಿಡ್ರಲ್ ಮತ್ತು ಚೆಟ್‌ಹ್ಯಾಮ್‌ನ ಕಟ್ಟಡಗಳು ಗಮನಾರ್ಹವಾಗಿ ಉಳಿದುಕೊಂಡಿವೆ.[೧೯]

ಇಂಗ್ಲಿಷ್‌ ಅಂತರ್ಯುದ್ಧದ ಸಮಯ, ಮ್ಯಾಂಚೆಸ್ಟರ್‌ ಸಂಸತ್ತಿನ ಹಿತಾಸಕ್ತಿಯನ್ನು ಸಮರ್ಥಿಸಿತು. ಈ ಹಕ್ಕು ಅಲ್ಪಾವಧಿಯದಾಗಿದ್ದರೂ, ತನ್ನದೇ MPಯನ್ನು ಚುನಾಯಿಸಲು ಕ್ರೊಮ್ವೆಲ್‌ಅದಕ್ಕೆ ಅನುಮತಿ ನೀಡಿದ. ನಗರವನ್ನು ಕೇವಲ ಒಂದು ವರ್ಷದ ಕಾಲ ಪ್ರತಿನಿಧಿಸಿದ ಚಾರ್ಲ್ಸ್‌ ವೊರ್ಸ್ಲೆ, ಆನಂತರ ರೂಲ್‌ ಆಫ್‌ ದಿ ಮೇಜರ್‌ ಜನರಲ್ಸ್‌ ಸಂದರ್ಭದಲ್ಲಿ, ಲ್ಯಾಂಕಾಷೈರ್, ಚೆಷೈರ್‌ ಮತ್ತು ಸ್ಟ್ಯಾಫರ್ಡ್‌ಷೈರ್‌ ಕೌಂಟಿಗಳ ಮೇಜರ್‌ ಜನರಲ್‌ ಆಗಿ ನೇಮಕಗೊಂಡರು. ಅವರು ಒಬ್ಬ ದಕ್ಷ ಪ್ಯೂರಿಟನ್; ಏಲ್‌ ಮದ್ಯದ ಸಂತೋಷಕೂಟದ ಮನೆಗಳನ್ನು ಮುಚ್ಚಿಸಿ, ಕ್ರಿಸ್ಮಸ್‌ ಆಚರಣೆಯನ್ನು ಬಹಿಷ್ಕರಿಸಿದ್ದರು. ಇಸವಿ ೧೬೫೬ರಲ್ಲಿ ಅವರು ನಿಧನರಾದರು.

ಸುಮಾರು ೧೬೦೦ ಇಸವಿಯ ನಂತರ, ಹತ್ತಿಯನ್ನು ಗಮನಾರ್ಹ ಪ್ರಮಾಣದಲ್ಲಿ, ಮೊದಲಿಗೆ ನಾರಿನ/ಹತ್ತಿಯ ದಪ್ಪ ಹತ್ತಿ ಬಟ್ಟೆಗಳಲ್ಲಿ ಬಳಸಲಾಯಿತು. ಆದರೆ, ಸುಮಾರು ೧೭೫೦ ಇಸವಿಯಲ್ಲಿ, ಶುದ್ಧ ಹತ್ತಿಯ ಜವಳಿಗಳನ್ನು ಉತ್ಪಾದಿಸಲಾಯಿತು ಮ್ತತು ಹತ್ತಿಯು ಉಣ್ಣೆಗಿಂತಲೂ ಹೆಚ್ಚು ಪ್ರಾಮುಖ್ಯತೆ ಗಳಿಸಿತು.[೧೮] ಸುಮಾರು ೧೭೩೬ ಇಸವಿಯಲ್ಲಿ ಇರ್ವೆಲ್‌ ಮತ್ತು ಮರ್ಸಿ ನದಿಗಳನ್ನು ನೌಕಾ ಸಂಚಾರಯೋಗ್ಯವಾಗಿ ಮಾಡಲಾಯಿತು. ಮ್ಯಾಂಚೆಸ್ಟರ್‌ನಿಂದ ಮರ್ಸಿಯ ಸಮುದ್ರಧಕ್ಕೆಗೆ ಮಾರ್ಗವನ್ನು ತೆರೆಯಲಾಯಿತು. ಬ್ರಿಟನ್‌ನ ಮೊದಲ ಪೂರ್ಣ ಮಾನವನಿರ್ಮಿತ ಜಲಮಾರ್ಗವಾದ ಬ್ರಿಡ್ಜ್‌ವಾಟರ್ ಕಾಲುವೆಯನ್ನು ೧೭೬೧ರಲ್ಲಿ ತೆರೆಯಲಾಯಿತು. ವೊರ್ಸ್ಲಿಯ ಗಣಿಗಳಿಂದ ಕಲ್ಲಿದ್ದಲನ್ನು ಮಧ್ಯ ಮ್ಯಾಂಚೆಸ್ಟರ್‌ಗೆ ಈ ಕಾಲುವೆಯ ಮೂಲಕ ಸಾಗಿಸಲಾಯಿತು. ಇಸವಿ ೧೭೭೬ರಲ್ಲಿ ಈ ಕಾಲುವೆಯನ್ನು ರನ್ಕಾರ್ನ್‌ನಲ್ಲಿ ಮರ್ಸಿ ನದಿಯ ತನಕ ವಿಸ್ತರಿಸಲಾಯಿತು. ಪೈಪೋಟಿ ಮತ್ತು ಸುಧಾರಿತ ದಕ್ಷತೆಯ ಸಂಯೋಗದಿಂದ ಕಲ್ಲಿದ್ದಿಲಿನ ಬೆಲೆಯನ್ನು ಅರ್ಧಮಟ್ಟಕ್ಕಿಳಿಸಲಾಯಿತು ಹಾಗೂ ಕಚ್ಚಾ ಹತ್ತಿಯ ಸಾರಿಗೆ ವೆಚ್ಚವನ್ನು ಸಹ ಅರ್ಧಕ್ಕೆ ಇಳಿಸಲಾಯಿತು.[೧೮][೨೧] ಸುತ್ತಮುತ್ತಲಿನ ಪಟ್ಟಣಗಳಲ್ಲಿ ಉತ್ಪಾದನೆಯಾದ ಜವಳಿಗಳಿಗಾಗಿ ಮ್ಯಾಂಚೆಸ್ಟರ್‌ ಪ್ರಮುಖ ಮಾರುಕಟ್ಟೆಯ ಸ್ಥಳವಾಯಿತು.[೧೮] ಇಸವಿ ೧೭೨೯ರಲ್ಲಿ ಆರಂಭಿಸಲಾದ ಸರಕು ವಿನಿಮಯ ಕೇಂದ್ರ [೧೯] ಹಾಗೂ ಹಲವು ದೊಡ್ಡ ಗೋದಾಮುಗಳು, ವಾಣಿಜ್ಯ ಚಟುವಟಿಕೆಗೆ ನೆರವಾದವು.

ಇಸವಿ ೧೭೮೦ರಲ್ಲಿ, ರಿಚರ್ಡ್‌ ಆರ್ಕ್ರೈಟ್‌ ಮ್ಯಾಂಚೆಸ್ಟರ್‌ನ ಮೊದಲ ಹತ್ತಿಯ ಗಿರಣಿಯ ನಿರ್ಮಾಣ ಆರಂಭಿಸಿದ.[೧೯][೨೧]

ಕೈಗಾರಿಕಾ ಕ್ರಾಂತಿ

ಸುಮಾರು 1820 ಇಸವಿಯಲ್ಲಿ ಆನ್ಕೋಟ್ಸ್‌ನಲ್ಲಿರುವ ಹತ್ತಿ ಗಿರಣಿಗಳು.
ಇಸವಿ 1857ರಲ್ಲಿ ಕರ್ಸಾಲ್‌ ಮೂರ್‌ನಿಂದ ಮ್ಯಾಂಚೆಸ್ಟರ್‌, ವಿಲಿಯಮ್‌ ವೈಲ್ಡ್‌ರಿಂದ ರಚನೆ.ನಗರದಲ್ಲಿ ಹಲವಾರು ಜವಳಿ ಕೈಗಾರಿಕೆಗಳಿದ್ದ ಕಾರಣ, 19ನೆಯ ಶತಮಾನದ ಆರಂಭದಲ್ಲಿ ಮ್ಯಾಂಚೆಸ್ಟರ್‌ ಕಾಟನ್‌ಪೊಲಿಸ್‌ ಎಂಬ ಉಪನಾಮ ಗಳಿಸಿತ್ತು.

ಮ್ಯಾಂಚೆಸ್ಟರ್‌ನ ಇತಿಹಾಸದ ಬಹುಪಾಲು, ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಜವಳಿ ಉತ್ಪಾದನೆಯೊಂದಿಗೆ ಸಂಬಂಧ ಹೊಂದಿದೆ. ಹತ್ತಿ ನೂಲುವಿಕೆ ಪ್ರಕ್ರಿಯೆಯ ಬಹುಪಾಲು ದಕ್ಷಿಣ ಲ್ಯಾಂಕಾಷೈರ್‌ ಮತ್ತು ಉತ್ತರ ಚೆಷೈರ್‌ನಲ್ಲಿ ನಡೆಯಿತು. ಮ್ಯಾಂಚೆಸ್ಟರ್‌ ಕೆಲ ಕಾಲ ಬಹುತೇಕ ಹತ್ತಿ ಸಂಸ್ಕರಣೆಯ ಉತ್ಪಾದನಾ ಕೇಂದ್ರವಾಗಿತ್ತು.[೨೫] ಆನಂತರ ಹತ್ತಿ ಉತ್ಪನ್ನಗಳಿಗೆ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಯಿತು.[೧೮][೨೬] ವಿಕ್ಟೋರಿಯನ್‌ ಯುಗದಲ್ಲಿ ಮ್ಯಾಂಚೆಸ್ಟರ್‌ನ್ನು ಕಾಟನೊಪೊಲಿಸ್‌ (ಹತ್ತಿ ನಗರಿ) ಹಾಗೂ 'ವೇರ್ಹೌಸ್‌ ಸಿಟಿ' ಎನ್ನಲಾಗುತ್ತಿತ್ತು.[೨೫] ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಲ್ಲಿ, ಮನೆಬಳಕೆಯ ನಾರುಬಟ್ಟೆಗಳಾದ ಹಾಸಿಗೆ-ಹೊದಿಕೆಗಳು, ದಿಂಬುಗಳು, ಟವೆಲ್‌ ಇತ್ಯಾದಿಗಳಿಗೆ ಇಂದಿಗೂ ಸಹ ಮ್ಯಾಂಚೆಸ್ಟರ್‌ ಪದವನ್ನು ಬಳಸಲಾಗುತ್ತದೆ.[೨೭]

ಕೈಗಾರಿಕಾ ಕ್ರಾಂತಿಯು ತಂದ ಯೋಜನಾರಹಿತ ನಗರೀಕರಣ[೨೮] ದ ಪ್ರಕ್ರಿಯೆ ಕಾರಣ, ಮ್ಯಾಂಚೆಸ್ಟರ್‌ ೧೯ನೆಯ ಶತಮಾನದ ಹೊಸ್ತಿಲಲ್ಲಿ "ಅಚ್ಚರಿಗೊಳಿಸುವ ವೇಗ"ದಲ್ಲಿ ವಿಸ್ತರಿಸಲಾರಂಭಿಸಿತು.[೨೯]

ಇದರಿಂದ ವಿವಿಧ ವ್ಯಾಪ್ತಿಯ ಕೈಗಾರಿಕೆಗಳು ಅಭಿವೃದ್ಧಿಯಾಯಿತು. ಇದರಿಂದಾಗಿ,೧೮೩೫ರಷ್ಟರಲ್ಲಿ 'ಮ್ಯಾಂಚೆಸ್ಟರ್‌ ಯಾವುದೇ ಪೈಪೋಟಿಯಿಲ್ಲದೆ ವಿಶ್ವದ ಪ್ರಥಮ ಮತ್ತು ಪ್ರಧಾನ ಕೈಗಾರಿಕಾ ನಗರವಾಯಿತು.' [೨೬] ಎಂಜಿನಿಯರಿಂಗ್‌ ಉದ್ದಿಮೆಗಳು ಹತ್ತಿ ವಹಿವಾಟಿಗಾಗಿ ಆರಂಭದಲ್ಲಿ ಯಂತ್ರೋಪಕರಣಗಳನ್ನು ಉತ್ಪಾದಿಸಿದವು, ಆದರೆ ಆನಂತರ ಅವು ಸಾಮಾನ್ಯ ಉತ್ಪಾದನೆಗಳತ್ತ ವೈವಿಧ್ಯದ ಹಾದಿ ಹಿಡಿದವು. ಇದೇ ರೀತಿ, ಬಟ್ಟೆಗಳನ್ನು ಬಿಳಿದಾಗಿಸುವ ವಸ್ತುಗಳು ಮತ್ತು ವರ್ಣದ್ರವ್ಯಗಳ ಉತ್ಪಾದನೆಯೊಂದಿಗೆ, ರಾಸಾಯನಿಕ ಕೈಗಾರಿಕೆಗಳು ಆರಂಭವಾದವು. ಆದರೆ, ಆನಂತರ ಇತರೆ ಕ್ಷೇತ್ರಗಳತ್ತ ವಿಸ್ತರಿಸಿದವು. ಬ್ಯಾಂಕಿಂಗ್‌ ಹಾಗೂ ವಿಮೆಯಂತಹ ಹಣಕಾಸು ಸೇವಾ ಉದ್ದಿಮೆಗಳು ವಾಣಿಜ್ಯ ಕ್ಷೇತ್ರಕ್ಕೆ ಬೆಂಬಲ ನೀಡಿದವು. ವಹಿವಾಟು ಮತ್ತು ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಕಾರ್ಯಗಳಿಗೆ ವಿಶಾಲವಾದ ಸಾರಿಗೆ ಮತ್ತು ವಿತರಣಾ ಮೂಸಸೌಲಭ್ಯದ ಅಗತ್ಯವಿತ್ತು. ಜಲಕಾಲುವೆ ವ್ಯವಸ್ಥೆಯನ್ನು ವಿಸ್ತರಿಸಲಾಯಿತು. ಮ್ಯಾಂಚೆಸ್ಟರ್‌ ವಿಶ್ವದಲ್ಲಿಯೇ ಮೊಟ್ಟಮೊದಲ ಅಂತರ-ನಗರ ಪ್ರಯಾಣಿಕ ರೈಲು ಮಾರ್ಗವೆನಿಸಿದ ' ಲಿವರ್ಪೂಲ್‌-ಮ್ಯಾಂಚೆಸ್ಟರ್‌ ರೈಲ್ವೆಯ ಒಂದು ಕೊನೆಯಾಯಿತು. ವಿವಿಧ ರೀತಿಯ ಸಾರಿಗೆಗಳ ನಡುವಿನ ಪೈಪೋಟಿಗಳ ಕಾರಣ, ಸಾರಿಗೆ ದರಗಳನ್ನು ಕಡಿಮೆಯಾಗಿಸಿದವು.[೧೮] ಇಸವಿ ೧೮೭೮ರಲ್ಲಿ, ಬ್ರಿಟಿಷ್‌ ಟೆಲಿಕಾಮ್‌ನ ಪೂರ್ವದಲ್ಲಿದ್ದ GPO, ಮ್ಯಾಂಚೆಸ್ಟರ್‌ನ ಒಂದು ವಾಣಿಜ್ಯ ಉದ್ದಿಮೆಗೆ ತನ್ನ ಮೊದಲ ದೂರವಾಣಿ ಉಪಕರಣವನ್ನು ಒದಗಿಸಿತು.[೩೦]

ಸ್ಯಾಲ್ಫರ್ಡ್‌ನಿಂದ ಉಬ್ಬರವಿಳಿತದ ಮರ್ಸಿಯಲ್ಲಿರುವ ಈಸ್ಟ್‌ಹ್ಯಾಮ್‌ ಲಾಕ್ಸ್‌ನತ್ತ ಹರಿಯುವ‌ 58 kilometres (36 mi) [೩೧] ಇರ್ವೆಲ್ ಮತ್ತು ಮರ್ಸಿ ನದಿಗಳಲ್ಲಿ ಕಾಲುವೆ ಮಾರ್ಗಗಳನ್ನು ನಿರ್ಮಿಸುವುದರ ಮೂಲಕ, ೧೮೯೪ರಲ್ಲಿ,ಕೆಲವು ವಿಭಾಗಗಳಲ್ಲಿ ಮ್ಯಾಂಚೆಸ್ಟರ್‌ ಷಿಪ್‌ ಕೆನಾಲ್‌ನ್ನು ನಿರ್ಮಿಸಲಾಯಿತು. ಇದರಿಂದ, ಸಾಗರದಲ್ಲಿ ಸಾಗುವ ಹಡಗುಗಳು ನೇರವಾಗಿ ಮ್ಯಾಂಚೆಸ್ಟರ್‌ ಬಂದರಿನೊಳಗೆ ಬರಲು ಅನುಕೂಲವಾಯಿತು. ಪ್ರಧಾನನಗರ ವಿಭಾಗದ ಸ್ವಲ್ಪಆಚೆ ಕಾಲುವೆಯ ದಂಡೆಗಳಲ್ಲಿರುವ ಟ್ರ್ಯಾಫರ್ಡ್‌ ಪಾರ್ಕ್‌ನಲ್ಲಿ, ವಿಶ್ವದ ಮೊದಲ ಕೈಗಾರಿಕಾ ಪ್ರದೇಶವನ್ನು ರಚಿಸಲಾಯಿತು.[೧೮] ಹತ್ತಿ ಸಂಸ್ಕರಿಸುವ ಘಟಕಗಳೂ ಸೇರಿದಂತೆ,ದೊಡ್ಡ ಪ್ರಮಾಣದ ಹತ್ತಿ ಯಂತ್ರೋಪಕರಣಗಳು ವಿಶ್ವದ ಹಲವೆಡೆಗೆ ರಫ್ತಾಗುತ್ತಿದ್ದವು.

ಇಸವಿ 1819ರಲ್ಲಿ ಸಂಭವಿಸಿದ ಪೀಟರ್ಲೂ ಸಾಮೂಹಿಕ ಹತ್ಯಾಕಾಂಡದಲ್ಲಿ 15 ಸಾವುಗಳು ಹಾಗೂ ನೂರಾರು ಗಾಯಗಳು ಸಂಭವಿಸಿದವು.

ಬಂಡವಾಳಶಾಹಿಯ ಕೇಂದ್ರವಾಗಿದ್ದ ಮ್ಯಾಂಚೆಸ್ಟರ್‌ನಲ್ಲಿ‌ ಹಿಂದೊಮ್ಮೆ ಆಹಾರ ಮತ್ತು ಕಾರ್ಮಿಕರ ಗಲಭೆಗಳು ಸಂಭವಿಸಿದವು ಹಾಗೂ ನಗರದ ಕಾರ್ಮಿಕ ಮತ್ತು ಹೆಸರು-ರಹಿತ ವರ್ಗಗಳು ಹೆಚ್ಚಿನ ರಾಜಕೀಯ ಮಾನ್ಯತೆಗಾಗಿ ಕರೆಗಳನ್ನು ನೀಡಿದ್ದವು. ಇಂತಹ ಒಂದು ಗಲಭೆಯ ಪರಿಣಾಮವಾಗಿ, ೧೬ ಆಗಸ್ಟ್‌ ೧೮೧೯ರಂದು ಪೀಟರ್ಲೂ ಹತ್ಯಾಕಾಂಡ ಸಂಭವಿಸಿತು. ಮ್ಯಾಂಚೆಸ್ಟರ್‌ ಬಂಡವಾಳಶಾಹಿಯ ಆರ್ಥಿಕ ಶಾಲೆಯು ಅಲ್ಲಿ ಅಭಿವೃದ್ಧಿ ಹೊಂದಿತು. ಇಸವಿ ೧೮೩೮ರಿಂದ ಮ್ಯಾಂಚೆಸ್ಟರ್‌ ಕಾರ್ನ್‌ ಲಾ ವಿರೋಧಿ ಲೀಗ್‌ನ ಕೇಂದ್ರವಾಯಿತು.

ಮಾರ್ಕ್ಸ್‌ವಾದ ಮತ್ತು ವಾಮಪಂಥೀಯ ರಾಜಕೀಯದ ಇತಿಹಾಸದಲ್ಲಿ ಮ್ಯಾಂಚೆಸ್ಟರ್‌ ಗಮನಾರ್ಹ ಸ್ಥಾನ ಗಿಟ್ಟಿಸಿದೆ. ಫ್ರೆಡ್ರಿಕ್‌ ಎಂಜೆಲ್ಸ್‌ರ ಕೃತಿಯ ವಿಷಯ ದಿ ಕಂಡಿಷನ್‌ ಆಫ್‌ ದಿ ವರ್ಕಿಂಗ್‌ ಕ್ಲ್ಯಾಸ್‌ ಇನ್‌ ಇಂಗ್ಲೆಂಡ್‌ ಇನ್ 1844 ಆಗಿತ್ತು. ಎಂಜಲ್ಸ್‌ ತಮ್ಮ ಜೀವನದ ಹೆಚ್ಚು ಭಾಗವನ್ನು ಮ್ಯಾಂಚೆಸ್ಟರ್‌ ಹಾಗೂ ಸುತ್ತಮುತ್ತಲಿನಲ್ಲಿ ಕಳೆದಿದ್ದರು. ಕಾರ್ಲ್‌ ಮಾರ್ಕ್ಸ್‌ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದಾಗ, ಎಂಜೆಲ್ಸ್‌ ಮತ್ತು ಮಾರ್ಕ್ಸ್‌ ಚೆಟ್‌ಹ್ಯಾಮ್‌ ಗ್ರಂಥಾಲಯದಲ್ಲಿ ಭೇಟಿಯಾದರು. ಆ ಸಮಯದಲ್ಲಿ ಕಾರ್ಲ್ ಮಾರ್ಕ್ಸ್‌ ಓದುತ್ತಿದ್ದ ಅರ್ಥಶಾಸ್ತ್ರದ ಪುಸ್ತಕಗಳನ್ನು ಆ ಗ್ರಂಥಾಲಯದ ಗೂಡುಗಳಲ್ಲಿ ಇಂದಿಗೂ ಕಾಣಬಹುದು. ಇದಲ್ಲದೆ, ಮಾರ್ಕ್ಸ್‌ ಮತ್ತು ಎಂಜೆಲ್ಸ್‌ ಭೇಟಿಯಾಗುತ್ತಿದ್ದ ಕಿಟಕಿ ಬಳಿಯ ಆಸನವನ್ನೂ ಸಹ ಕಾಣಬಹುದು.[೨೨] ಮೊದಲ ಟ್ರೇಡ್ಸ್‌ ಯೂನಿಯನ್‌ ಕಾಂಗ್ರೆಸ್‌ ಸಮ್ಮೇಳನವು ಮ್ಯಾಂಚೆಸ್ಟರ್‌ನ ಡೇವಿಡ್‌ ಸ್ಟ್ರೀಟ್‌ನಲ್ಲಿರುವ ಮೆಕ್ಯಾನಿಕ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ೨ರಿಂದ ೬ ಜೂನ್‌ ೧೮೬೮ರ ವರೆಗೆ ನಡೆಯಿತು. ಮ್ಯಾಂಚೆಸ್ಟರ್‌ ಲೇಬರ್‌ ಪಾರ್ಟಿ ಮತ್ತು ಸಫ್ರಾಗೆಟ್‌ ಆಂದೋಳನದ ಪ್ರಮುಖ ಉಗಮಸ್ಥಾನವಾಗಿತ್ತು.[೩೨]

ಆ ಸಮಯದಲ್ಲಿ, ಮ್ಯಾಂಚೆಸ್ಟರ್‌ ಎಂತಹ ಘಟನೆಯೂ ಸಂಭವಿಸಬಹುದಾದ ನಗರವಾಗಿತ್ತು. ಹೊಸ ಕೈಗಾರಿಕಾ ಪ್ರಕ್ರಿಯೆಗಳು, ನೂತನ ಚಿಂತನ ರೀತಿಗಳು ( ಮುಕ್ತ ವಹಿವಾಟು ಮತ್ತು ತಾಟಸ್ಥ್ಯ ನೀತಿ ಗಳನ್ನು ಉತ್ತೇಜಿಸಿದ ಮ್ಯಾಂಚೆಸ್ಟರ್‌ ಶಾಲೆ), ಸಮಾಜದಲ್ಲಿ ಹೊಸ ವರ್ಗ ಮತ್ತು ಸಮುದಾಯಗಳು, ಹೊಸ ಧಾರ್ಮಿಕ ಪಂಥಗಳು ಹಾಗೂ ಕಾರ್ಮಿಕ ಸಂಘಟನೆಯ ಹೊಸ ರೂಪಗಳು. ಇದು ಬ್ರಿಟನ್‌ ಹಾಗೂ ಯುರೋಪ್‌ನಿಂದ ವಿದ್ಯಾವಂತ ಪ್ರವಾಸಿಗಳನ್ನು ತನ್ನತ್ತ ಸೆಳೆಯಿತು. ನಾವೀನ್ಯದ ಪ್ರಜ್ಞೆಯನ್ನು ಸೆರೆಹಿಡಿದ ಬಗ್ಗೆ ಒಂದು ಮಾತು ಇಂದಿಗೂ ಉಳಿದುಕೊಂಡಿದೆ,'ಮ್ಯಾಂಚೆಸ್ಟರ್‌ ಇಂದೇನು ಮಾಡುತ್ತದೆಯೋ, ಇಡೀ ವಿಶ್ವವು ನಾಳೆ ಮಾಡುತ್ತದೆ.' [೩೩] ಮ್ಯಾಂಚೆಸ್ಟರ್‌ನ ಸ್ವರ್ಣಯುಗವು ಬಹುಶಃ ೧೯ನೆಯ ಶತಮಾನದ ಕೊನೆಯ ಕಾಲುಭಾಗವಾಗಿತ್ತು. ಪುರಭವನ ಸೇರಿದಂತೆ ನಗರದ ಹಲವು ಪ್ರಧಾನ‌ ಸಾರ್ವಜನಿಕ ಭವನಗಳು ಆ ಕಾಲಕ್ಕೆ ಸೇರಿದ್ದವು. ನಗರದ ಕಾಸ್ಮೋಪಾಲಿಟನ್ ವಾತಾವರಣವು, ಹ್ಯಾಲೆ ವಾದ್ಯಗೋಷ್ಠಿ ಸೇರಿದಂತೆ ಚೈತನ್ಯಶೀಲ ಸಂಸ್ಕೃತಿಗೆ ಕೊಡುಗೆ ನೀಡಿತು. ಇಸವಿ ೧೮೮೯ರಲ್ಲಿ ಇಂಗ್ಲೆಂಡ್‌ನಲ್ಲಿ ಕೌಂಟಿ ಸಭೆಗಳನ್ನು ರಚಿಸಿದಾಗ, ಪೌರಸಭೆಯ ಪ್ರಧಾನನಗರ ವಿಭಾಗವು ಕೌಂಟಿ ವಿಭಾಗವಾಗಿ, ಇನ್ನಷ್ಟು ಸ್ವಾಯತ್ತತೆ ಹೊಂದಿತು.

ಕೈಗಾರಿಕಾ ಕ್ರಾಂತಿಯು ನಗರಕ್ಕೆ ಸಂಪತ್ತು ನೀಡಿದರೂ, ಜನಸಂಖ್ಯೆಯ ಹೆಚ್ಚು ಪಾಲಿಗೆ ಬಡತನ ಮತ್ತು ಕೊಳಕುತನವನ್ನು ತಂದುಕೊಟ್ಟಿತು. 'ಮ್ಯಾಂಚೆಸ್ಟರ್‌ ಅತ್ಯುತ್ತಮ ಹಾಗೂ ಭಯಾನಕ ಪರಮಾವಧಿಗಳಿಗೆ ಒಯ್ಯುವ ತೀರಾ ಕೆಟ್ಟಸ್ಥಿತಿಯನ್ನು ನಿರೂಪಿಸುವ ನಗರ; ಪ್ರಪಂಚದಲ್ಲೇ ಹೊಸ ತರಹದ ನಗರ, ಅದರ ಕೈಗಾರಿಕಾ ಹೊರವಲಯಗಳಲ್ಲಿರುವ ಹೊಗೆ-ಕೊಳವೆಗಳು ಹೊಗೆಗಳನ್ನು ಉಗುಳುತ್ತ ನಿಮ್ಮನ್ನು ಬರಮಾಡುಕೊಳ್ಳುತ್ತವೆ' ಎಂದು ಇತಿಹಾಸಜ್ಞ ಸೈಮನ್‌ ಸ್ಕಾಮಾ ಗಮನಸೆಳೆದಿದ್ದಾರೆ. ಮ್ಯಾಂಚೆಸ್ಟರ್‌ನ ಇಂತಹ ಕಪ್ಪುಚುಕ್ಕೆಗಳ ಪ್ರದೇಶಕ್ಕೆ ಭೇಟಿ ನೀಡಿದ ಅಮೆರಿಕನ್‌ ಪ್ರವಾಸಿಯಬ್ಬರು ಅಲ್ಲಿ 'ದರಿದ್ರವಾದ, ವಂಚಿತ, ದಮನಿತ, ಜರ್ಜರಿತ ಮನುಷ್ಯ ರೂಪವನ್ನು ಮಲಗಿದ ಮತ್ತು ರಕ್ತಸಿಕ್ತ ತುಣುಕುಗಳಲ್ಲಿ ಕಂಡಿದ್ದಾಗಿ'ಹೇಳಿದ್ದಾರೆ.[೩೪]

ಇಸವಿ ೧೮೫೩ರಲ್ಲಿ, ಮ್ಯಾಂಚೆಸ್ಟರ್‌ ಒಂದರಲ್ಲೇ ಹತ್ತಿ ಗಿರಣಿಗಳ ಸಂಖ್ಯೆ ೧೦೮ರ ಶೃಂಗಕ್ಕೆ ಏರಿತು.[೨೫] ಆನಂತರ,ಸಂಖ್ಯೆಯು ಕುಸಿಯಲಾರಂಭಿಸಿತು. ೧೮೫೦ರ ದಶಕದಲ್ಲಿ ಬೊಲ್ಟನ್‌ ಹಾಗೂ ೧೮೬೦ರ ದಶಕದಲ್ಲಿ ಓಲ್ಡ್‌ಹ್ಯಾಮ್‌ ಮ್ಯಾಂಚೆಸ್ಟರ್‌‌ನ್ನು ಮೀರಿ ಅತಿ ಹೆಚ್ಚು ಹತ್ತಿ ಗಿರಣಿಗಳನ್ನು ಹೊಂದಿದ ನಗರಗಳಾದವು.[೨೫] ಆದರೆ, ಹತ್ತಿ ಗಿರಣಿಗಳ ಸಂಖ್ಯೆಯಲ್ಲಿ ಕುಸಿತದ ಅವಧಿಯು ನಗರವು ಆರ್ಥಿಕ ಕೇಂದ್ರವಾಗಿ ಅಭಿವೃದ್ಧಿಯಾಗುವುದಕ್ಕೆ ಹೊಂದಿಕೆಯಾಯಿತು.[೨೫] ಮ್ಯಾಂಚೆಸ್ಟರ್‌ನಲ್ಲಿ ಹತ್ತಿ ಸಂಸ್ಕರಣಾ ಉದ್ದಿಮೆಯು ಮುಂದುವರೆಯಿತು. ಇಸವಿ ೧೯೧೩ರಲ್ಲಿ, ವಿಶ್ವದ ಹತ್ತಿ ಉತ್ಪಾದನೆಯ ೬೫%ರಷ್ಟು ಇಲ್ಲಿ ಸಂಸ್ಕರಣೆಯಾಗುತ್ತಿತ್ತು.[೧೮] ಮೊದಲ ಪ್ರಧಾನಯುದ್ಧದಿಂದ ರಫ್ತು ಮಾರುಕಟ್ಟೆಗಳ ಪ್ರವೇಶಕ್ಕೆ ಅಡಚಣೆಯಾಯಿತು. ವಿಶ್ವದ ಇತರೆಡೆ ಹತ್ತಿ ಸಂಸ್ಕರಣೆಯು ಹೆಚ್ಚಾಗತೊಡಗಿತು; ಇದಕ್ಕಾಗಿ ಸಾಮಾನ್ಯವಾಗಿ ಮ್ಯಾಂಚೆಸ್ಟರ್‌ನಲ್ಲಿ ತಯಾರಿಸಲಾದ ಯಂತ್ರಗಳನ್ನು ಬಳಸಲಾಯಿತು. ಮ್ಯಾಂಚೆಸ್ಟರ್ ಮಹಾ ಹಿಂಜರಿತ/೦}ದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಯಿತು. ಜವಳಿ ಉತ್ಪಾದನೆ ಸೇರಿದಂತೆ ಹಳೆಯ ಉದ್ದಿಮೆಗಳ ಸ್ಥಾನವನ್ನು ತುಂಬುವ ರಚನಾತ್ಮಕ ಪರಿವರ್ತನೆಗಳು ನಡೆದವು.

ಮಹಾಯುದ್ಧ ಮತ್ತು ಮ್ಯಾಂಚೆಸ್ಟರ್‌ ಮೇಲೆ ಮಿಂಚಿನದಾಳಿ

UKಯ ಬಹುತೇಕ ಭಾಗದಂತೆ, ಮಹಾಯುದ್ಧ IIದ ಸಮಯದಲ್ಲಿ ಮ್ಯಾಂಚೆಸ್ಟರ್‌ ವ್ಯಾಪಕ ಸನ್ನದ್ಧತೆ ಹೊಂದಿತು. ಉದಾಹರಣೆಗೆ, ಬೇಯರ್‌‌, ಪೀಕಾಕ್‌ನಲ್ಲಿರುವ ಕ್ಯಾಸ್ಟಿಂಗ್ ಮತ್ತು ಯಂತ್ರ ತಜ್ಞತೆ, ಗೋರ್ಟನ್‌ನ ಕಂಪನಿಯ ಹತ್ತಿ ತಯಾರಿಕೆಯಲ್ಲಿ ಯಂತ್ರಗಳ ಕೆಲಸಗಳನ್ನು ಬಾಂಬ್ ತಯಾರಿಕೆಗೆ ಪರಿವರ್ತಿಸಲಾಯಿತು. ಚಾರ್ಲ್ಟನ್‌-ಆನ್‌-ಮೆಡ್ಲಾಕ್‌ನಲ್ಲಿರುವ ಡನ್ಲಪ್‌ ರಬ್ಬರ್ ಉದ್ದಿಮೆಯು ಬ್ಯಾರೆಜ್‌ ಬಲೂನ್‌ಗಳನ್ನು ಉತ್ಪಾದಿಸಲಾರಂಭಿಸಿತು. ನಗರದಾಚೆ ಟ್ರ್ಯಾಫರ್ಡ್‌ ಪಾರ್ಕ್‌ನಲ್ಲಿರುವ ಮೆಟ್ರೊಪೊಲಿಟನ್‌-ವಿಕರ್ಸ್‌ ಉದ್ದಿಮೆಯು ಆವ್ರೊ ಮ್ಯಾಂಚೆಸ್ಟರ್‌ ಮತ್ತು ಆವ್ರೊ ಲ್ಯಾಂಕ್ಯಾಸ್ಟರ್‌ ಬಾಂಬರ್‌ಗಳನ್ನು ಉತ್ಪಾದಿಸಿತು. ಈ ಬಾಂಬರ್‌ಗಳನ್ನು ಚಲಾಯಿಸಲು ಫೊರ್ಡ್‌ ಉದ್ದಿಮೆಯು ರೊಲ್ಸ್‌-ರಾಯ್ಸ್‌ ಮರ್ಲಿನ್‌ ಎಂಜಿನ್‌ಗಳನ್ನು ತಯಾರಿಸಿತು. ಮ್ಯಾಂಚೆಸ್ಟರ್‌ ಲಫ್ಟ್‌ವಾಫ್ ನಿಂದ ಬಾಂಬ್‌ ದಾಳಿಗೆ ಗುರಿಯಾಯಿತು. ಇಸವಿ ೧೯೪೦ರ ಅಪರಾರ್ಧದಲ್ಲಿ ಮಿಲಿಟರಿಯೇತರ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಯುತ್ತಿದ್ದವು. ಕ್ರಿಸ್ಮಸ್‌ ಬ್ಲಿಟ್ಜ್‌ಸಂದರ್ಭದಲ್ಲಿ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ೨೨/೨೩ ಮತ್ತು ೨೩/೨೪ ಡಿಸೆಂಬರ್‌ ೧೯೪೦ರ ಇರುಳಿನಲ್ಲಿ ನಡೆಯಿತು. ಅಂದಾಜು ೪೬೭ ಟನ್‌ (೪೭೫ ಟನ್ನ್‌ಗಳು) ಭಾರೀ ಸ್ಫೋಟಕವಸ್ತುಗಳು ಹಾಗೂ ೩೭,೦೦೦ಕ್ಕಿಂತಲೂ ಹೆಚ್ಚು ಬೆಂಕಿಜನ್ಯ ಬಾಂಬ್‌ಗಳನ್ನು ಮ್ಯಾಂಚೆಸ್ಟರ್‌ ಮೇಲೆ ಉದುರಿಸಲಾಯಿತು. ಈ ದಾಳಿಯಲ್ಲಿ ೧೬೫ ಗೋದಾಮುಗಳು, ೨೦೦ ವಾಣಿಜ್ಯ ಕೇಂದ್ರಗಳು ಮತ್ತು ೧೫೦ ಕಚೇರಿಗಳು ಸೇರಿದಂತೆ ಐತಿಹಾಸಿಕ ನಗರ ಕೇಂದ್ರದ ಬಹುಭಾಗ ನಾಶವಾಯಿತು. ೩೭೬ ಜನರು ಮೃತಪಟ್ಟು ೩೦,೦೦೦ ಮನೆಗಳಿಗೆ ಹಾನಿಯುಂಟಾಯಿತು.[೩೫] ತೀವ್ರವಾಗಿ ಹಾನಿಯಾದ ಕಟ್ಟಡಗಳಲ್ಲಿ ಮ್ಯಾಂಚೆಸ್ಟರ್‌ ಕಥಿಡ್ರಲ್‌ ಸಹ ಸೇರಿತ್ತು. ಇದನ್ನು ದುರಸ್ತಿ ಮಾಡಿ ಮರುಸ್ಥಿತಿಗೆ ತರಲು ೨೦ ವರ್ಷಗಳು ಬೇಕಾದವು.[೩೬]

ಮಹಾಯುದ್ಧ II ನಂತರ

ಹತ್ತಿಯ ಸಂಸ್ಕರಣೆ ಮತ್ತು ವಹಿವಾಟು ಚಟುವಟಿಕೆಯು ಶಾಂತಿಕಾಲದಲ್ಲಿ ಕುಸಿತಗೊಂಡಿತು ಹಾಗೂ ವಿನಿಮಯ ಕೇಂದ್ರವನ್ನು ೧೯೬೮ರಲ್ಲಿ ಮುಚ್ಚಲಾಯಿತು.[೧೮] ಇಸವಿ ೧೯೬೩ರಲ್ಲಿ ಮ್ಯಾಂಚೆಸ್ಟರ್‌ ಬಂದರು UKಯಲ್ಲಿ ಮೂರನೆಯ ಅತಿದೊಡ್ಡ ಬಂದರೆನಿಸಿತು.[೩೭] ೩,೦೦೦ಕ್ಕಿಂತಲೂ ಹೆಚ್ಚು ನೌಕರರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಅದರ ಕಾಲುವೆಯು ದೊಡ್ಡ ಗಾತ್ರದ ಕಂಟೇನರ್‌ ಸರಕು ಹಡಗುಗಳ ಸಂಚಾರವನ್ನು ನಿಭಾಯಿಸಲು ಅಸಮರ್ಥವಾಯಿತು. ಸಂಚಾರ ಕಡಿಮೆಯಾಗಿ, ಬಂದರನ್ನು ೧೯೮೨ರಲ್ಲಿ ಮುಚ್ಚಲಾಯಿತು.[೩೮] ಭಾರೀ ಕೈಗಾರಿಕೆಗಳು ೧೯೬೦ರ ದಶಕದಲ್ಲಿ ಇಳಿಮುಖ ಕಂಡವು. ಇಸವಿ ೧೯೭೯ರ ನಂತರ, ಮಾರ್ಗರೆಟ್‌ ಥ್ಯಾಚರ್‌ ಸರ್ಕಾರ ಅನುಸರಿಸಿದ ಆರ್ಥಿಕ ನೀತಿಗಳಿಂದ ತೀವ್ರ ಕುಸಿತಕ್ಕೊಳಗಾಯಿತು. ಉತ್ಪಾದನಾ ಕ್ಷೇತ್ರದಲ್ಲಿ ಇಸವಿ ೧೯೬೧ರಿಂದ ೧೯೮೩ರ ವರೆಗೆ ಮ್ಯಾಂಚೆಸ್ಟರ್‌ನ ೧೫೦,೦೦೦ ನೌಕರಿಗಳ ನಷ್ಟವಾಯಿತು.[೧೮]

೧೯೮೦ರ ದಶಕದ ಅಪರಾರ್ಧದಲ್ಲಿ ಪುನಶ್ಚೇತನ ಕಾಣಲಾರಂಭಿಸಿತು. ಮೆಟ್ರೊಲಿಂಕ್‌, ಬ್ರಿಡ್ಜ್‌ವಾಟರ್‌ ಕನ್ಸರ್ಟ್‌ ಹಾಲ್‌, ಮ್ಯಾಂಚೆಸ್ಟರ್‌ ಈವನಿಂಗ್‌ ನ್ಯೂಸ್‌ ಅರೆನಾ ಹಾಗೂ (ಸ್ಯಾಲ್ಫರ್ಡ್‌ನಲ್ಲಿ) ಬಂದರನ್ನು ಸ್ಯಾಲ್ಫರ್ಡ್‌ ಕ್ವೇಯ್ಸ್‌ ಎಂಬ ಮರುನಾಮಕರಣ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಾಯಿತು. ನಗರದ ಅಂತಾರಾಷ್ಟ್ರೀಯ ಚಿತ್ರಣವನ್ನು ಹೆಚ್ಚಿಸುವ ಪ್ರಕ್ರಿಯೆಯ ಭಾಗವಾಗಿ ಅಲ್ಲಿ ಒಲಂಪಿಕ್ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸುವುದಕ್ಕಾಗಿ ಎರಡು ಬಿಡ್ ಮಾಡಲಾಯಿತು.[೩೯]

ಐರಿಷ್‌ ಗಣತಂತ್ರವಾದಿಗಳು ಎನ್ನಲಾದ ಗುಂಪುಗಳಿಂದ ಮ್ಯಾಂಚೆಸ್ಟರ್‌ ಮೇಲೆ ದಾಳಿಗಳು ನಡೆದ ಇತಿಹಾಸವಿದೆ. ಇದರಲ್ಲಿ, ೧೮೬೭ರಲ್ಲಿ ಮ್ಯಾಂಚೆಸ್ಟರ್‌ ಹುತಾತ್ಮ‌ರ ದಾಳಿ, ೧೯೨೦ರಲ್ಲಿ ನಡೆದ ಅಗ್ನಿಸ್ಪರ್ಷ, ೧೯೩೯ರಲ್ಲಿ ನಡೆದ ಸರಣಿ ಸ್ಫೋಟಗಳು ಹಾಗೂ ೧೯೯೨ರಲ್ಲಿ ನಡೆದ ಎರಡು ಬಾಂಬ್‌ ಸ್ಫೋಟಗಳು ಸೇರಿವೆ. ಶನಿವಾರ, ೧೫ ಜೂನ್‌ ೧೯೯೬ರಂದು ಪ್ರಾವಿಷನಲ್‌ ಐರಿಷ್‌ ರಿಪಬ್ಲಿಕನ್‌ ಆರ್ಮಿ (IRA) 1996 ಮ್ಯಾಂಚೆಸ್ಟರ್‌ ಬಾಂಬ್‌ ಸ್ಫೋಟ ನಡೆಸಿತು. ನಗರದ ಕೇಂದ್ರದಲ್ಲಿರುವ ಸರಕಿನ ಮಳಿಗೆಯ ಪಕ್ಕದಲ್ಲಿಯೇ ದೊಡ್ಡ ಬಾಂಬ್‌ನ್ನು ಸಿಡಿಸಿತ್ತು. ಬ್ರಿಟಿಷ್‌ ನೆಲದಲ್ಲಿ ಸಿಡಿಸಲಾದ ಅತ್ಯಂತ ದೊಡ್ಡ ಬಾಂಬ್‌ ಅದಾಗಿತ್ತು. ಇದು ೨೦೦ಕ್ಕಿಂತಲೂ ಹೆಚ್ಚು ಜನರನ್ನು ಗಾಯಗೊಳಿಸಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯೊಡ್ಡಿ, ಅರ್ಧ ಮೈಲು ದೂರದ ಕಟ್ಟಡದ ಕಿಟಕಿ ಗಾಜುಗಳನ್ನು ಒಡೆದುಹಾಕಿತ್ತು. ಹಾನಿಯ ಪ್ರಮಾಣವನ್ನು ಮೊದಲಿಗೆ £೫೦ ದಶಲಕ್ಷ ಎಂದು ಅಂದಾಜಿಸಲಾಗಿತ್ತು. ಆದರೆ, ಇದನ್ನು ತಕ್ಷಣವೇ ಇನ್ನೂ ಹೆಚ್ಚಿನ ಮೊತ್ತಕ್ಕೆ ಪರಿಷ್ಕರಿಸಲಾಗಿತ್ತು.[೪೦] ಅಂತಿಮ ವಿಮಾ ಪಾವತಿಯ ಮೊತ್ತ £೪೦೦ ದಶಲಕ್ಷಕ್ಕಿಂತಲೂ ಹೆಚ್ಚಾಗಿತ್ತು. ಹಾನಿಗೀಡಾದ ವಾಣಿಜ್ಯ ಉದ್ದಿಮೆಗಳು ವಹಿವಾಟಿನ ನಷ್ಟದಿಂದ ಚೇತರಿಸಿಕೊಳ್ಳಲೇ ಇಲ್ಲ.[೪೧]

ಎಕ್ಸ್‌ಚೇಂಜ್‌ ಸ್ಕ್ವೇರ್‌ನಲ್ಲಿ BBC ಬಿಗ್ ಸ್ಕ್ರೀನ್‌ನಲ್ಲಿ ಪ್ರಸಾರವಾಗುತ್ತಿರುವ FIFA ವಿಶ್ವಕಪ್‌ ಫುಟ್ಬಾಲ್‌‌ನ ಒಂದು ಪಂದ್ಯ.

ಇಸವಿ ೧೯೯೬ರ ಬಾಂಬ್‌ ಸ್ಫೋಟದ ನಂತರ ಹೆಚ್ಚಿದ ಹೂಡಿಕೆ ಹಾಗೂ XVII ಕಾಮನ್ವೆಲ್ತ್ ಕ್ರೀಡಾಕೂಟದ ನೆರವು ಪಡೆದ ಮ್ಯಾಂಚೆಸ್ಟರ್‌ನ ನಗರ ಕೇಂದ್ರವು ವ್ಯಾಪಕ ಪುನಶ್ಚೇತನಕ್ಕೆ ಒಳಗಾಯಿತು.[೩೯] ದಿ ಪ್ರಿಂಟ್ವರ್ಕ್ಸ್‌ ಮತ್ತು ಟ್ರಯಾಂಗಲ್‌ನಂತಹ ಹೊಸದಾದ ಮತ್ತು ನವೀಕೃತ ಮಳಿಗೆಗಳು ಇಂದು ಜನಪ್ರಿಯ ವ್ಯಾಪಾರ ಮತ್ತು ಮನರಂಜನಾ ಕೇಂದ್ರಗಳಾಗಿವೆ. ಮ್ಯಾಂಚೆಸ್ಟರ್‌ ಅರ್ನ್‌ಡೇಲ್‌ UKನಲ್ಲಿಯೇ ಅತಿ ದೊಡ್ಡ ನಗರ ಕೇಂದ್ರೀಯ ವ್ಯಾಪಾರ ಮಳಿಗೆಯಾಗಿದೆ.[೪೨]

೧೯೬೦ರ ದಶಕದಲ್ಲಿ ನಿರ್ಮಿಸಿದ ನಗರದ ದೊಡ್ಡ ಭಾಗಗಳನ್ನು ನೆಲಸಮಮಾಡಲಾಗಿದೆ ಮತ್ತು ಮರುಅಭಿವೃದ್ಧಿಗೊಳಿಸಲಾಗಿದೆ ಅಥವಾ ಗಾಜು ಮತ್ತು ಉಕ್ಕಿನ ಬಳಕೆಯಿಂದ ಆಧುನೀಕರಿಸಲಾಗಿದೆ. ಹಳೆಯ ಗಿರಣಿಗಳನ್ನು ಆಧುನಿಕ ವಸತಿಸಂಕೀರ್ಣಗಳನ್ನಾಗಿ ಪರಿವರ್ತಿಸಲಾಯಿತು. ಹುಲ್ಮ್‌ ದೊಡ್ಡ ಪ್ರಮಾಣದಲ್ಲಿ ವ್ಯಾಪಕ ಪುನರುಜ್ಜೀವನ ಕಾರ್ಯಕ್ರಮಗಳಿಗೆ ಒಳಗಾಯಿತು. ಆಗಿನಿಂದ ದಶಲಕ್ಷ-ಪೌಂಡ್‌ ಮೌಲ್ಯದ ಲಾಫ್ಟ್‌ಹೌಸ್‌ ವಸತಿನಿಲಯಗಳನ್ನು ಅಭಿವೃದ್ಧಿಪಡಿಸಲಾಯಿತು. ಇಸವಿ ೨೦೦೬ರಲ್ಲಿ ನಿರ್ಮಾಣ ಪೂರ್ಣಗೊಂಡ ೧೬೯-ಮೀಟರ್‌ ಎತ್ತರದ, ೪೭-ಅಂತಸ್ತಿನ ಬೀಟ್‌ಹ್ಯಾಮ್‌ ಟವರ್ಸ್‌ ಲಂಡನ್‌ನಾಚೆಗಿರುವ UKದಲ್ಲಿ ಅತಿ ಎತ್ತರದ ಕಟ್ಟಡ ಹಾಗೂ ಇಡೀ ಪಶ್ಚಿಮ ಯುರೋಪ್‌ನಲ್ಲೇ ಅತೀ ಎತ್ತರದ ವಾಸಸ್ಥಳದ ಕಟ್ಟಡವಾಗಿದೆ. ಕೆಳಭಾಗದ ೨೩ ಅಂತಸ್ತುಗಳಲ್ಲಿ ಹಿಲ್ಟನ್‌ ಹೋಟೆಲ್‌ ರೂಪುಗೊಂಡಿದ್ದು,ಇದರ ೨೩ನೆಯ ಅಂತಸ್ತಿನಲ್ಲಿ ಸ್ಕೈಬಾರ್‌ ಹೊಂದಿದೆ. ಇದರ ಮೇಲ್ಭಾಗದ ೨೪ ಅಂತಸ್ತುಗಳಲ್ಲಿ ವಸತಿನಿಲಯಗಳಿವೆ.[೪೩] ಜನವರಿ ೨೦೦೭ರಲ್ಲಿ, ನಗರದ ಈಸ್ಟ್‌ಲೆಂಡ್ಸ್‌ ಕ್ಷೇತ್ರದ ಪುನಶ್ಚೇತನಕ್ಕಾಗಿ UKಯ ಏಕೈಕ ಸೂಪರ್ಕ್ಯಾಸಿನೊವನ್ನು ನಿರ್ಮಿಸಲು, ಸ್ವತಂತ್ರ ಮಂಡಳಿಯಾದ ಕ್ಯಾಸಿನೊ ಸಲಹಾ ಮಂಡಳಿಯು ಮ್ಯಾಂಚೆಸ್ಟರ್‌ಗೆ ಪರವಾನಗಿ ನೀಡಿತ್ತು.[೪೪] ಆದರೆ, ಅದೇ ಮಾರ್ಚ್‌ ತಿಂಗಳಲ್ಲಿ ಹೌಸ್‌ ಆಫ್‌ ಲಾರ್ಡ್ಸ್‌ ಈ ನಿರ್ಧಾರವನ್ನು ಮೂರು ಮತಗಳಿಂದ ತಿರಸ್ಕರಿಸಿತು. ಇದರಿಂದಾಗಿ ಮುಂಚಿನ ಹೌಸ್‌ ಆಫ್‌ ಕಾಮನ್ಸ್‌ಅಂಗೀಕಾರವು ಅರ್ಥಹೀನವೆನಿಸಿತು. ಇದು ಸೂಪರ್ಕ್ಯಾಸಿನೊ ಮತ್ತು ೧೪ ಇತರೆ ಸಣ್ಣ ಪ್ರಮಾಣದ ರಿಯಾಯತಿಗಳನ್ನು ಅಂತಿಮ ನಿರ್ಧಾರದ ತನಕ ಸಂಸದೀಯ ತ್ರಿಶಂಕು ಸ್ಥಿತಿಗೆ ತಳ್ಳಿತು.[೪೫] ದಿನಾಂಕ ೧೧ ಜುಲೈ ೨೦೦೭ರಂದು ಸರ್ಕಾರಕ್ಕೆ ನಿಕಟವಾದ ಮೂಲವು ಇಡೀ ಸೂಪರ್ಕ್ಯಾಸಿನೊ ಯೋಜನೆಯು "ಯಾವುದೇ ಪ್ರಗತಿ ಸಾಧಿಸಿಲ್ಲ" ಎಂದು ಘೋಷಿಸಿತು.[೪೬] ಮ್ಯಾಂಚೆಸ್ಟರ್‌ ವಾಣಿಜ್ಯ ಮಂಡಳಿಯ ಸದಸ್ಯರೊಬ್ಬರು ಅಚ್ಚರಿ ಮತ್ತು ಆಘಾತದ ಪ್ರತಿಕ್ರಿಯೆ ನೀಡಿ, ಈ ಕುರಿತು ಬಹಳಷ್ಟು ಸಮಯ ಮತ್ತು ಹಣ ವ್ಯರ್ಥ ಮಾಡಲಾಗಿದೆ ಎಂದು ಉದ್ಗರಿಸಿದರು.[೪೭] ಪ್ರಧಾನ ಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರ, ಮ್ಯಾಂಚೆಸ್ಟರ್‌ ನಗರ ಮಂಡಳಿಯು ೨೪ ಜುಲೈ ೨೦೦೭ರಂದು ಪತ್ರಿಕಾ ಪ್ರಕರಣೆ ನೀಡಿ, 'ಕೆಲವು ವರದಿಗಳಿಗೆ ವ್ಯತಿರಿಕ್ತವಾಗಿ,ಪ್ರಾದೇಶಿಕ ಕ್ಯಾಸಿನೊಗೆ ಬಾಗಿಲು ಮುಚ್ಚಲಾಗಿಲ್ಲ' ಎಂದು ಸ್ಪಷ್ಟಪಡಿಸಿತು.[೪೮] ಫೆಬ್ರವರಿ ೨೦೦೮ರಲ್ಲಿ ಸೂಪರ್‌ಕ್ಯಾಸಿನೊ ಅಧಿಕೃತವಾಗಿ ರದ್ದಾಗಿದೆ ಎಂದು ಘೋಷಿಸಲಾಯಿತು. ಮಾಧ್ಯಮಗಳು ಇದರ ಪರಿಹಾರ ಯೋಜನೆಯನ್ನು 'ಬೇಕಾಬಿಟ್ಟಿ ಪರಿಹಾರ ಯೋಜನೆ, ಲೊಳಲೊಟ್ಟೆ ಎಂಬಂತಹ ಆಶ್ವಾಸನೆಗಳ ಕಂತೆ' ಎಂದು ಟೀಕಿಸಿದವು.[೪೯]

೨೧ನೆಯ ಶತಮಾನದ ಆರಂಭದಿಂದಲೂ, ಅಂತಾರಾಷ್ಟ್ರೀಯ ಮಾಧ್ಯಮ,[೫೦] ಬ್ರಿಟಿಷ್‌ ಸಾರ್ವಜನಿಕರು,[೫೧] ಸರ್ಕಾರದ ಸಚಿವರು[೫೨] ಮ್ಯಾಂಚೆಸ್ಟರ್ ಯುನೈಟೆಡ್‌ ಕಿಂಗ್ಡಮ್‌ನ ಎರಡನೆಯ ನಗರವೆಂದು ಪರಿಗಣಿಸಿದ್ದಾರೆ. BBC ೨೦೦೭ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಇಂಗ್ಲೆಂಡ್‌ನ ಎರಡನೇ ನಗರ ವರ್ಗದಲ್ಲಿ, ಮ್ಯಾಂಚೆಸ್ಟರ್‌‌ನ್ನು ಬರ್ಮಿಂಗ್ಹ್ಯಾಮ್‌ ಮತ್ತು ಲಿವರ್ಪೂಲ್‌ ನಗರಗಳಿಗಿಂತಲೂ ಮುಂದಿರಿಸಿದ್ದು,ಮೂರನೆಯ ನಗರ ವರ್ಗದಲ್ಲೂ ಮುಂದಿರಿಸಿದೆ. ಇವೆರಡೂ ವರ್ಗಗಳು ಅಧಿಕೃತವಾಗಿ ಅಂಗೀಕಾರ ಪಡೆದಿಲ್ಲ.ಜೊತೆಗೆ ಎರಡನೆಯ ನಗರ ಎಂದು ನಿರ್ಣಯಿಸಲು ತೆಗೆದುಕೊಳ್ಳಲಾದ ಮಾನದಂಡಗಳು ಅಸ್ಪಷ್ಟವಾಗಿದೆ. ಜನಸಂಖ್ಯೆಯ ದೃಷ್ಟಿಯಿಂದ ಮ್ಯಾಂಚೆಸ್ಟರ್‌ ಎರಡನೆಯ ಅತಿ ದೊಡ್ಡ ನಗರವಲ್ಲ. ಆದರೂ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಾನದಂಡಗಳು ಹೆಚ್ಚು ಮುಖ್ಯ ಎಂದು ವಾದಿಸಲಾಗಿದೆ.[೫೩] ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಪುನರಾಭಿವೃದ್ಧಿಯು ಮ್ಯಾಂಚೆಸ್ಟರ್‌‌ UKಯ ಎರಡನೆಯ ನಗರ ಎಂಬ ವಾದಗಳಿಗೆ ಪುಷ್ಠಿ ನೀಡಿವೆ ಎಂದು BBC ವರದಿ ಮಾಡಿದೆ.[೫೪] ಆದರೂ, UKದಲ್ಲಿ ಅನಧಿಕೃತವಾಗಿರುವ ಈ ಬಿರುದನ್ನು ಬರ್ಮಿಂಗ್ಹ್ಯಾಮ್‌ ೨೦ನೆಯ ಶತಮಾನದ ಆರಂಭದಿಂದಲೂ ಸಾಂಪ್ರದಾಯಿಕವಾಗಿ ಅಲಂಕರಿಸಿದೆ.[೫೫]

Other Languages
Afrikaans: Manchester
አማርኛ: ማንችስተር
aragonés: Manchester
Ænglisc: Mameceaster
العربية: مانشستر
مصرى: مانشستر
asturianu: Mánchester
azərbaycanca: Mançester
تۆرکجه: منچستر
беларуская: Манчэстэр
беларуская (тарашкевіца)‎: Манчэстэр
български: Манчестър
brezhoneg: Manchester
bosanski: Manchester
català: Manchester
нохчийн: Манчестер
کوردی: مەنچستەر
čeština: Manchester
Cymraeg: Manceinion
dansk: Manchester
Deutsch: Manchester
Ελληνικά: Μάντσεστερ
English: Manchester
Esperanto: Manĉestro
español: Mánchester
eesti: Manchester
euskara: Manchester
estremeñu: Manchester
فارسی: منچستر
suomi: Manchester
føroyskt: Manchester
français: Manchester
Frysk: Manchester
Gaeilge: Manchain
Gàidhlig: Manchester
galego: Manchester
Gaelg: Manchuin
Hausa: Manchester
客家語/Hak-kâ-ngî: Manchester
עברית: מנצ'סטר
हिन्दी: मैन्चेस्टर
hrvatski: Manchester
magyar: Manchester
Հայերեն: Մանչեստր
Bahasa Indonesia: Manchester
Interlingue: Manchester
íslenska: Manchester
italiano: Manchester
ქართული: მანჩესტერი
Qaraqalpaqsha: Manchester
Taqbaylit: Manchester
қазақша: Манчестер
ភាសាខ្មែរ: មែនឈេសទ័រ
한국어: 맨체스터
Кыргызча: Манчестер
Latina: Mancunium
Lingua Franca Nova: Manchester
Limburgs: Manchester
lietuvių: Mančesteris
latviešu: Mančestra
македонски: Манчестер
монгол: Манчестер
मराठी: मँचेस्टर
Bahasa Melayu: Manchester
မြန်မာဘာသာ: မန်ချက်စတာမြို့
مازِرونی: منچستر
Nedersaksies: Mesjester (Engeland)
Nederlands: Manchester
norsk nynorsk: Manchester
norsk: Manchester
Nouormand: Manchêtre
occitan: Manchester
ਪੰਜਾਬੀ: ਮਾਨਚੈਸਟਰ
polski: Manchester
Piemontèis: Manchester
پنجابی: مانچسٹر
português: Manchester
Runa Simi: Manchester
română: Manchester
armãneashti: Manchester
русский: Манчестер
sardu: Manchester
sicilianu: Manchester
Scots: Manchester
srpskohrvatski / српскохрватски: Manchester
Simple English: Manchester
slovenčina: Manchester
slovenščina: Manchester
Soomaaliga: Manchester
shqip: Manchester
српски / srpski: Манчестер
svenska: Manchester
Kiswahili: Manchester
ślůnski: Manchester
తెలుగు: మాంచెస్టర్
Tagalog: Manchester
Türkçe: Manchester
татарча/tatarça: Mançester
ئۇيغۇرچە / Uyghurche: Manchéstér
українська: Манчестер
اردو: مانچسٹر
oʻzbekcha/ўзбекча: Manchester
vèneto: Manchester
vepsän kel’: Mančester
Tiếng Việt: Manchester
Volapük: Manchester
Winaray: Manchester
吴语: 曼彻斯特
მარგალური: მანჩესტერი
ייִדיש: מאנטשעסטער
Zeêuws: Manchester
中文: 曼彻斯特
Bân-lâm-gú: Manchester
粵語: 曼徹斯特