ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)

ಮೂಲ ಆಲ್ಕೊಹಾಲ್‌ಯುಕ್ತ ಪಾನೀಯ[0] ಈ ಸಂದರ್ಭದಲ್ಲಿ ಬಾರಿನಲ್ಲಿ ಮದ್ಯ ಸಾರಗಳು [1].

ಆಲ್ಕೊಹಾಲ್‌ಯುಕ್ತ ಪಾನೀಯ ವು ಎಥನಾಲನ್ನು ಹೊಂದಿರುವ (ಸಾಮಾನ್ಯವಾಗಿ ಆಲ್ಕೊಹಾಲ್ ಎಂದು ಕರೆಯುವ) ಪಾನೀಯವಾಗಿದೆ. ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಮೂರು ಸಾಮಾನ್ಯ ವಿಧಗಳಾಗಿ ವಿಂಗಡಿಸಲಾಗಿದೆ: ಸಾರಾಯಿ(ಬಿಯರು)ಗಳು, ದ್ರಾಕ್ಷಾರಸ(ವೈನು)ಗಳು, ಮತ್ತು ಮದ್ಯ ಸಾರಗಳು. ಇವುಗಳನ್ನು ಕಾನೂನು ಬದ್ಧವಾಗಿ ಕೆಲವು ದೇಶಗಳಲ್ಲಿ ಸೇವಿಸುತ್ತಾರೆ, ಮತ್ತು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಇದರ ತಯಾರಿಕೆ, ಮಾರಾಟ, ಹಾಗೂ ಸೇವನೆಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸುತ್ತಾರೆ.[೧] ಈ ಕಾನೂನುಗಳು ಕಾನೂನು ಬದ್ಧವಾಗಿ ಆಲ್ಕೊಹಾಲನ್ನು ಕೊಳ್ಳಲು ಅಥವಾ ಸೇವಿಸಲು ವ್ಯಕ್ತಿಯ ಕನಿಷ್ಠ ವಯಸನ್ನು ನಿಗದಿಗೊಳಿಸಿವೆ. ಈ ಕನಿಷ್ಠ ವಯಸ್ಸು ದೇಶ ಮತ್ತು ಮದ್ಯದ ವಿಧವನ್ನಾಧರಿಸಿ 16ರಿಂದ 25 ವರ್ಷಗಳಾಗುತ್ತದೆ. ಹೆಚ್ಚಿನ ದೇಶಗಳು ಇದನ್ನು 18 ವರ್ಷಕ್ಕೆ ನಿಗಧಿಗೊಳಿಸಿವೆ.[೧]

ಆಲ್ಕೊಹಾಲ್‌ ತಯಾರಿಕೆ ಮತ್ತು ಸೇವನೆಯು ಬೇಟೆಗಾರ ವಂಶದ ಜನರಿಂದ ಸುಧಾರಿತ ರಾಜ್ಯ-ರಾಷ್ಟ್ದವರೆಗೂ ಪ್ರಪಂಚದ ಎಲ್ಲಾ ಸಂಸ್ಕೃತಿಯಲ್ಲೂ ಇದೆ.[೨][೩] ಆಲ್ಕೊಹಾಲ್‌ಯುಕ್ತ ಪಾನೀಯವು ಈ ಸಂಸ್ಕೃತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಮುಖ್ಯವಾದ ಭಾಗವಾಗಿದೆ. ಅನೇಕ ಸಂಸ್ಕೃತಿಗಳಲ್ಲಿ ಕುಡಿಯುವುದು, ಮುಖ್ಯವಾಗಿ ಆಲ್ಕೊಹಾಲಿನಿಂದ ನರಗಳ ಮೇಲಾಗುವ ಪರಿಣಾಮಗಳಿಗಾಗಿ ಸಾಮಾಜಿಕ ವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಲ್ಕೊಹಾಲ್‌ ಮಾನಸಿಕ ಕ್ರಿಯಾಕಾರಿ ಮಾದಕ ವಸ್ತುವಾಗಿದ್ದು ನಿದ್ದೆ ಬರಿಸುವ ಪರಿಣಾಮವನ್ನುಂಟುಮಾಡುತ್ತದೆ. ರಕ್ತದಲ್ಲಿ ಆಲ್ಕೊಹಾಲ್‌ ಸಾಂದ್ರತೆ ಹೆಚ್ಚಿದ್ದರೆ ಅದನ್ನು ಕಾನೂನು ಪ್ರಕಾರ ಕುಡಿದಿರುವ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರತಿಕ್ರಿಯಾ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ಆಲ್ಕೊಹಾಲ್‌ ಒಂದು ವ್ಯಸನವಾಗಿದ್ದು, ಆಲ್ಕೊಹಾಲ್‌ನ ಚಟದ ಸ್ಥಿತಿಯನ್ನು ಆಲ್ಕೊಹಾಲಿಸಮ್‌ ಎನ್ನುವರು.

ಪರಿವಿಡಿ

Other Languages
مصرى: خمور
azərbaycanca: Alkoqollu içkilər
žemaitėška: Alkoholėnis gėrėms
беларуская: Алкагольныя напоі
беларуская (тарашкевіца)‎: Сьпіртовы напой
বাংলা: মদ
bosanski: Alkoholno piće
буряад: Архи
Mìng-dĕ̤ng-ngṳ̄: Ciū
Tsetsêhestâhese: Manestôtse
Cymraeg: Diod feddwol
Esperanto: Alkoholaĵo
furlan: Alcul
贛語:
עברית: משקה חריף
हिन्दी: मादक पेय
hrvatski: Alkoholno piće
Bahasa Indonesia: Minuman beralkohol
íslenska: Áfengi
ᐃᓄᒃᑎᑐᑦ/inuktitut: ᐊᖓᔮᕐᓇᖅᑐᖅ
日本語:
한국어:
Latina: Temetum
лакку: ХӀан
lingála: Masanga
मैथिली: दारु
Malagasy: Alkôla
македонски: Алкохолен пијалак
മലയാളം: ലഹരിപാനീയം
मराठी: मद्य
Bahasa Melayu: Arak
Mirandés: Bubida alcólica
Nāhuatl: Octli
नेपाल भाषा: कायेगु त्वँसा
Nederlands: Alcoholische drank
norsk nynorsk: Alkoholhaldig drykk
Livvinkarjala: Alkogoulijuomine
ଓଡ଼ିଆ: ମଦ
português: Bebida alcoólica
русиньскый: Алкогол
саха тыла: Арыгы
srpskohrvatski / српскохрватски: Alkoholno piće
Simple English: Alcoholic drink
slovenčina: Alkoholický nápoj
slovenščina: Alkoholna pijača
Soomaaliga: Khamri
српски / srpski: Алкохолно пиће
svenska: Alkoholdryck
Kiswahili: Pombe
தமிழ்: மதுபானம்
Türkçe: İçki
українська: Спиртні напої
oʻzbekcha/ўзбекча: Alkogolli ichimliklar
vepsän kel’: Alkogoližed jomad
Tiếng Việt: Thức uống có cồn
吴语:
中文:
Bân-lâm-gú: Chiú
粵語: