ಮಡಿಲಗಣಕ ಅಥವಾ ಲ್ಯಾಪ್‌ಟಾಪ್

IBM ಥಿಂಕ್‌ಪ್ಯಾಡ್ R51 ಲ್ಯಾಪ್‌ಟಾಪ್


ಲ್ಯಾಪ್‌ಟಾಪ್ ಎಂಬುದು ಖಾಸಗಿ ಕಂಪ್ಯೂಟರ್, ಅದನ್ನು ವಿನ್ಯಾಸಗೊಳಿಸಿರುವುದು ಸಂಚಾರಿ ಬಳಕೆಗೆ ಮತ್ತು ಅದು ಸಣ್ಣ ಹಾಗೂ ಹಗುರ ಇದ್ದು ಬಳಸುವವರು ತಮ್ಮ ಮಡಿಲ ಮೇಲಿಟ್ಟುಕೊಂಡು ಉಪಯೋಗಿಸಬಹುದಾಗಿದೆ.[೧] ಡೆಸ್ಕ್ ಟಾಪ್ ಕಂಪ್ಯೂಟರ್ ನೊಳಗಡೆ ಏನೇನು ಸಂಯೋಜನೆಗೊಂಡಿವೆಯೋ ಅವುಗಳಲ್ಲಿ ಬಹುತೇಖ ಲ್ಯಾಪ್‌ಟಾಪ್ ನಲ್ಲೂ ಇದೆ. ಮುಖ್ಯವಾಗಿ ಪ್ರದರ್ಶಕ, ಕೀಲಿ ಮಣೆ, ಗುರಿ ಸಾಧಕ, (ಟ್ರ್ಯಾಕ್‌ಪ್ಯಾಡ್ ಎಂದೂ ಕರೆಯಲ್ಪಡುವ ಟಚ್‌ಪ್ಯಾಡ್, ಮತ್ತು/ಅಥವಾ ಪಾಯ್ನ್‌ಟಿಂಗ್ ಸ್ಟಿಕ್), ಧ್ವನಿಪೆಟ್ಟಿಗೆಗಳು,ಮತ್ತು ಸಣ್ಣ ಹಾಗು ಹಗೂರವಾದ ಬ್ಯಾಟರಿ ಇರುತ್ತದೆ. ಪುನರಾವೇಶಿಸಬಲ್ಲ ಬ್ಯಾಟರಿ (ಅಳವಡಿಸಿದ್ದರೆ) ಅದನ್ನು AC ಅಡಾಪ್ಟರ್ ನಿಂದ ಆವೇಶಿಸಿರಲಾಗುತ್ತದೆ ಮತ್ತು ಲ್ಯಾಪ್‌ಟಾಪ್ ಅನ್ನು ಎರಡು ರಿಂದ ಮೂರು ಗಂಟೆವರೆಗೆ ಆರಂಭದ ಅವಧಿಯಲ್ಲಿ ಬಳಸಲಾಗುವಂತೆ ಆವೇಶಿಸಿರಲಾಗುತ್ತದೆ,ಇದು ಕಂಪ್ಯೂಟರ್ ಅನ್ನು ಎಷ್ಟು ಪ್ರಮಾಣಕ್ಕೆ ಸಂಯೋಜಿಸಿದ್ದಾರೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.


ಲ್ಯಾಪ್‌ಟಾಪ್‌ಗಳನ್ನು ದೊಡ್ಡ ನೋಟ್‌ಬುಕ್ ಕಾಣಿಸುವಂತೆ ರೂಪಿಸಲಾಗಿದೆ, ಅದರ ದಪ್ಪ 0.7–1.5 inches (18–38 mm) ರಿಂದ ಇರುತ್ತದೆ ಮತ್ತು ಅಳತೆ 10x8 ಇಂಚುಗಳಿಂದ (27x22cm, 13" ಪ್ರದರ್ಶಕ) 15x11 ಇಂಚುಗಳವರೆಗೂ (39x28cm, 17" ಪ್ರದರ್ಶಕ) ಮತ್ತು ಅದಕ್ಕೂ ಹೆಚ್ಚಿನ ಅಳತೆಯಲ್ಲೂ ಸಿಗುತ್ತದೆ. ಆಧುನಿಕ ಲ್ಯಾಪ್‌ಟಾಪ್‌ಗಳು 3 to 12 pounds (1.4 to 5.4 kg) ತೂಕವುಳ್ಳದಾದರೆ;ಹಳೆಯವು ಭಾರವೇ ಇರುತ್ತಿದ್ದವು. ಅನೇಕ ಲ್ಯಾಪ್‌ಟಾಪ್‌ಗಳನ್ನು, ಅವುಗಳ ಪರದೆ ಮತ್ತು ಕೀಲಿಮಣೆಯ ರಕ್ಷಣೆಗಾಗಿ ಮಗುಚುವಿಕೆ ಆಕಾರದ ಅಂಶವನ್ನು ಅಳವಡಿಸಿ ವಿನ್ಯಾಸಗೊಳಿಸಿರುತ್ತಾರೆ. ಆಧುನಿಕ ಟ್ಯಾಬ್ಲೆಟ್ ಲ್ಯಾಪ್‌ಟಾಪ್‌ಗಳು ಕೀಲಿಮಣೆಯ ನೆಲೆ ಮತ್ತು ಪ್ರದರ್ಶಕಗಳ ನಡುವೆ ತಿರುಪುಕೀಲನ್ನು ಅಳವಡಿಸಲಾಗಿದೆ ಹೇಗೆಂದರೆ ಪ್ರದರ್ಶಕವನ್ನು ಮಗುಚಿದಾಗ ಅದು ಕೀಲಿಮಣೆಯ ನೆಲೆ ಮೇಲೆ ಮಗುಚಿ ಊರಬೇಕೆನ್ನುವ ಹಾಗೆ.


ಮೂಲಭೂತವಾಗಿ ಲ್ಯಾಪ್‌ಟಾಪ್‌ಗಳನ್ನು "ಪರಿಣಿತ ವಲಯಗಳಲ್ಲಿ" ವಿಶೇಷವಾಗಿ "ಮಿಲಿಟರಿ, ಆಂತರಿಕ ವರಮಾನ ಸೇವೆ, ಕರಣಿಕಗಳಲ್ಲಿ ಮತ್ತು ಮಾರಾಟ ಪ್ರತಿನಿಧಿಗಳು ಬಳಸುವೆಡೆಗಳಲ್ಲಿ" ಮಾತ್ರ ಉಪಯೋಗಿಸಲಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಇದೊಂದು "ಸಣ್ಣ ಗೂಡಿನ ವ್ಯಾಪಾರದಷ್ಟು" ಮಾತ್ರ ಆಗಬಹುದೆಂದು ಭಾವಿಸಲಾಗಿತ್ತು. ಆದರೆ ಇವತ್ತು ವ್ಯಾಪಾರ ವಹಿವಾಟುಗಳಲ್ಲಿ ಡೆಸ್ಕ್‌ಟಾಪ್‌ಗಳಿಗಿಂತ ಲ್ಯಾಪ್‌ಟಾಪ್‌ಗಳ ಸಂಖ್ಯೆಯೇ ಅಧಿಕವಾಗಿ ಬಳಸಲ್ಪಡುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯರಿಗೆ ಲ್ಯಾಪ್‌ಟಾಪ್ ಬಳಕೆ ಒಂದು ಅನಿವಾರ್ಯವಾಗಿಬಿಟ್ಟಿದೆ.

USನಲ್ಲಿ 2008ರಲ್ಲಿ ಡೆಸ್ಕ್‌ಟಾಪ್‌ಗಳಿಗಿಂತ ಲ್ಯಾಪ್‌ಟಾಪ್‌ಗಳು ಅಧಿಕವಾಗಿ ಮಾರಾಟವಾಗಿದೆ ಮತ್ತು ಇದು ಹೀಗೇ ಮುಂದುವರೆದರೆ 2009[ಸೂಕ್ತ ಉಲ್ಲೇಖನ ಬೇಕು]ರ ತರುವಾಯ ವಿಶ್ವ ಮಾರುಕಟ್ಟೆಯಲ್ಲೂ ಇದೇ ಮೈಲಿಗಲ್ಲು ಮುಟ್ಟಲಾಗುತ್ತದೆ ಎಂದು ಭವಿಷ್ಯ[] ಕಾಣಲಾಗಿದೆ.ಇತಿಹಾಸ

ಎಪ್ಸಾನ್ HX-20

1970ರ ಆರಂಭದಲ್ಲಿ ಖಾಸಗಿ ಕಂಪ್ಯೂಟರ್ ಶಕ್ಯವಾದ ಹಾಗೆಯೇ ಒಯ್ಯಬಲ್ಲ, ಎತ್ತಿಕೊಂಡು ಓಡಾಡಬಲ್ಲ ಖಾಸಗಿ ಕಂಪ್ಯೂಟರಿನ ಆಲೋಚನೆ ಉದ್ಭವವಾಯಿತು. "ಖಾಸಗಿಯಾದ, ಒಯ್ಯಬಲ್ಲ ಮಾಹಿತಿಯ ಕುಶಲ ನಿರ್ವಾಹಕ" ವನ್ನು 1968[೨]ರಲ್ಲಿ ಜೆರಾಕ್ಸ್ PARCನಲ್ಲಿ ಅಲ್ಲಾನ್ ಕೇಯ್ ಊಹಿಸಿದ್ದು ಮತ್ತು ಆತ ಅದನ್ನು 1972ರಲ್ಲಿ " ಡೈನಾಬುಕ್"[೩] ಎನ್ನುವ ಲೇಖನದಲ್ಲಿ ವಿವರಿಸಿದ್ದ.


1973ರಲ್ಲಿ IBM SCAMP ಯೋಜನೆ (ಸ್ಪೆಷಲ್ ಕಂಪ್ಯೂಟರ್ APL ಮೆಶೀನ್ ಪೋರ್ಟಬಲ್),ಅನ್ನು ಪ್ರದರ್ಶನ ಮಾಡಲಾಯಿತು. ಇದರ ಮೂಲರೂಪವು PALM ((Put All Logic In Microcode) ಪ್ರೊಸೆಸರ್ ಅಡಿಪಾಯದ ಮೇಲೆ ರೂಪಿಸಲಾಗಿದೆ.


IBM 5100 ಎನ್ನುವ ವಾಣಿಜ್ಯ ಉಪಯೋಗದ ಒಯ್ಯಬಲ್ಲ ಕಂಪ್ಯೂಟರನ್ನು ಸೆಪ್ಟೆಂಬರ್ 1975ರಲ್ಲಿ ಕಾಣಿಸಲಾಯಿತು ಮತ್ತು SCAMP ಮೂಲರೂಪದ ಅಡಿಪಾಯವನ್ನು ಹೊಂದಿದೆ.[೪]


8-ಬಿಟ್ CPU ಯಂತ್ರಗಳು ವ್ಯಾಪಕವಾಗಿ ಅಂಗೀಕೃತವಾದಾಗ ಒಯ್ಯಬಲ್ಲ ಕಂಪ್ಯೂಟರ್‌ಗಳ ಸಂಖ್ಯೆ ಅಧಿಕವಾಯಿತು. ಓಸ್ಬೋರ್ನ್ 1, 1981ರಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಜಿಲ್ಲಾಗ್ Z80ವನ್ನು ಉಪಯೋಗಿಸಲಾಯಿತು ಮತ್ತು ಅದರ ತೂಕ 23.5 pounds (10.7 kilograms).

ಇದಕ್ಕೆ ಬ್ಯಾಟರಿ ಇರಲಿಲ್ಲ, ಮತ್ತು ಇದರಲ್ಲಿ  5" 
CRT ಪರದೆ ಮತ್ತು ಇಬ್ಬಗೆಯ 5¼" ಏಕ ಸಾಂದ್ರತೆಯ ಫ್ಲಾಪೀ ಡ್ರೈವ್‌ಗಳು ಇವೆ. ಇದೇ ವರ್ಷದಲ್ಲಿ ಮೊದಲ ಲ್ಯಾಪ್‌ಟಾಪ್ ಗಾತ್ರದ ಒಯ್ಯಬಲ್ಲ ಕಂಪ್ಯೂಟರ್ 
ಎಪ್ಸಾನ್ HX-20 ಅನ್ನು ಘೋಶಿಸಲಾಯಿತು.[೫] ಎಪ್ಸಾನ್‌ಗೆ 
LCD ಪರದೆ, ಪುನರಾವೇಶಗೊಳಿಸಬಲ್ಲ ಬ್ಯಾಟರಿ ಮತ್ತು 1.6 kg (3.5 lb) ಚಾಸಿಸ್‌ನಲ್ಲಿ ಕ್ಯಾಲ್ಕುಲೇಟರ್ ಗಾತ್ರದ ಪ್ರಿಂಟರ್ ಇರುತ್ತದೆ. 
ಟ್ಯಾಂಡಿ/ರೇಡಿಯೋಶ್ಯಾಕ್ ಮತ್ತು 
HP ಎರಡೂ ಕಂಪನಿಗಳು ವಿವಿಧ ವಿನ್ಯಾಸದ ಒಯ್ಯಬಲ್ಲ ಕಂಪ್ಯೂಟರ್‌ಗಳನ್ನು ಈ ಅವಧಿಯಲ್ಲಿ ಉತ್ಪಾದಿಸಿತು.[೬][೭]


ಮಗುಚುವಿಕೆ ಆಕಾರದ ಅಂಶವುಳ್ಳ ಮೊದಲ ಲ್ಯಾಪ್‌ಟಾಪ್ 1982ರಲ್ಲಿ ಪ್ರತ್ಯಕ್ಷವಾಯಿತು. 8150 US$ GRiD ಕಾಂಪಾಸ್ 1100 ಅನ್ನು NASAದಲ್ಲಿ, ಮಿಲಿಟರಿಯಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ ಬಳಸಲಾಯಿತು. ಗೆವಿಲಾನ್ SC ಎನ್ನುವ ಮೊದಲ ನೋ‌ಟ್‌ಬುಕ್, 1983ರಲ್ಲಿ ಲ್ಯಾಪ್‌ಟಾಪ್ ಹೆಸರಲ್ಲಿ ಬಿಡುಗಡೆಯಾಯಿತು.[೮] 1983ರ ತರುವಾಯ ಲ್ಯಾಪ್‌ಟಾಪ್ ತಾಂತ್ರಿಕತೆಯಲ್ಲಿ ಹೊಸ ಆವಿಷ್ಕಾರಗಳಾದವು ಅವುಗಳಲ್ಲಿ {0ಟಚ್‌ಪ್ಯಾಡ್{/0} ( ಗೆವಿಲಾನ್ SC, 1983), ಪಾಂಯ್ನ್‌ಟಿಂಗ್ ಸ್ಟಿಕ್ (IBM ಥಿಂಕ್‌ಪ್ಯಾಡ್ 700, 1992) ಮತ್ತು ಕೈ ಬರಹ ಗುರುತಿಸುವ (ಲಿನಸ್ ವ್ರೈಟ್- ಟಾಪ್,[೯] 1987).

ಕಡಿಮೆ ಶಕ್ತಿಯನ್ನು ಬಳಸುವ ಕೆಲವು CPUಗಳನ್ನು ವಿನ್ಯಾಸಗೊಳಿಸಲಾಯಿತು ಅವುಗಳಲ್ಲಿ (ಇಂಟೆಲ್ 
i386SL, 1990), ಮತ್ತು ಇದಕ್ಕೆ ಪೂರಕ ಬೆಂಬಲವಾಗಿ ಶಕ್ತಿಯನ್ನು ಉಸ್ತುವಾರಿ ಮಾಡುವ (ಇಂಟೆಲ್ 
ಸ್ಪೀಡ್‌ಸ್ಟೆಪ್ ಮತ್ತು AMD 
ಪವರ್‌ನೌ!) 
ಕೆಲವು ವಿನ್ಯಾಸಗಳಲ್ಲಿ ಇದೆ. ಪ್ರದರ್ಶಕವು 1988ರಲ್ಲಿ VGA ರೆಸಲ್ಯೂಷನ್ ಮಟ್ಟವನ್ನು ತಲುಪಿತು (ಕಾಂಪಾಖ್ SLT/286) ಮತ್ತು 256-ಬಣ್ಣಗಳ ಪರದೆಯು 1993ರಷ್ಟು ಹೊತ್ತಿಗೆ (
ಪವರ್‌ಬುಕ್ 165c), ಬಹು ವೇಗವಾಗಿ ಅಭಿವೃದ್ಧಿ ಹೊಂದಿ ದಶ ಲಕ್ಷ ಬಣ್ಣಗಳನ್ನು ಮತ್ತು ಹೆಚ್ಚು ರೆಸಲ್ಯೂಷನ್‌ಗಳನ್ನು ಹೊಂದಲಾಯಿತು.
ಹೆಚ್ಚಿನ ಸಾಮರ್ಥ್ಯದ ಹಾರ್ಡ್ ಡ್ರೈವ್‌ಗಳು ಮತ್ತು ಆಪ್ಟಿಕಲ್ ಸ್ಟೋರೇಜ್ (
CD-ROM ಇದರ ಹಿಂದೆಯೇ CD-R ಮತ್ತು CD-RW ಅಂತಿಮವಾಗಿ DVD-ROM ಮತ್ತು ಬರೆಯಬಲ್ಲ ವಿವಿಧ ಆವಿಷ್ಕಾರಗಳು ಡೆಸ್ಕ್‌ಟಾಪ್‌ಗಳ ತರುವಾಯ ಅತೀ ಶೀಘ್ರವಾಗಿ ಲ್ಯಾಪ್‌ಟಾಪ್‌ಗಳಲ್ಲಿ ಲಭ್ಯವಾಯಿತು.


Other Languages
Afrikaans: Skootrekenaar
አማርኛ: ላፕቶፕ
العربية: حاسوب محمول
مصرى: لاب توب
беларуская: Ноўтбук
भोजपुरी: लैपटाप
bosanski: Laptop
کوردی: لاپتاپ
čeština: Notebook
Чӑвашла: Ноутбук
Cymraeg: Gliniadur
Deutsch: Notebook
English: Laptop
Esperanto: Tekokomputilo
فارسی: لپ‌تاپ
føroyskt: Fartelda
galego: Portátil
Gaelg: Glioonag
客家語/Hak-kâ-ngî: Sú-thì thien-nó
עברית: מחשב נייד
हिन्दी: लैपटॉप
magyar: Laptop
Հայերեն: Նոթբուք
Bahasa Indonesia: Komputer jinjing
íslenska: Fartölva
Basa Jawa: Laptop
ქართული: ლეპტოპი
қазақша: Ноутбук
한국어: 랩톱 컴퓨터
latviešu: Klēpjdators
македонски: Преносен сметач
मराठी: लॅपटॉप
Bahasa Melayu: Komputer riba
مازِرونی: لپ‌تاب
नेपाली: ल्याप्टप
Nederlands: Laptop
ਪੰਜਾਬੀ: ਲੈਪਟਾਪ
polski: Laptop
português: Laptop
română: Laptop
русский: Ноутбук
srpskohrvatski / српскохрватски: Laptop
Simple English: Laptop
slovenčina: Laptop
slovenščina: Prenosnik
shqip: Laptopi
српски / srpski: Лаптоп
Basa Sunda: Léptop
svenska: Bärbar dator
українська: Ноутбук
اردو: لیپ ٹاپ
oʻzbekcha/ўзбекча: Laptop
Tiếng Việt: Máy tính xách tay
Winaray: Laptop
მარგალური: ლეპტოპი
粵語: 手提電腦
isiZulu: Ilaptop