ಬ್ರಿಸ್ಟಲ್‌

ಲುಅ ದೋಷ: bad argument #1 to 'gsub' (string is not UTF-8).

ಚಿತ್ರ:Bristol UK world wind.jpg
NASA ವರ್ಲ್ಡ್‌ ವಿಂಡ್‌ ಉಪಗ್ರಹದಿಂದ ಬ್ರಿಸ್ಟಲ್‌ ಸುತ್ತಮುತ್ತಲ ವೆಸ್ಟರ್ಲಿಯ ಛಾಯಾಚಿತ್ರಣ.

ಬ್ರಿಸ್ಟಲ್‌ // ನೈಋತ್ಯ ಇಂಗ್ಲೆಂಡ್‌ನಲ್ಲಿರುವ ನಗರ, ಏಕೀಕೃತ ಆಡಳಿತ ಪ್ರದೇಶ ಹಾಗೂ ವಿಧ್ಯುಕ್ತ ಕೌಂಟಿಯಾಗಿದೆ. 2009ರಲ್ಲಿ, ಏಕೀಕೃತ ಆಡಳಿತಕ್ಕೆ ಅಂದಾಜು ಜನಸಂಖ್ಯೆ 433,100ರಷ್ಟಿತ್ತು [೩] ಹಾಗೂ ಸುತ್ತಲಿರುವ ಬೃಹತ್‌ ನಗರ ವಲಯದಲ್ಲಿ 1,006,600 ನಿವಾಸಿಗಳು ಎಂದು ಅಂದಾಜು ಮಾಡಲಾಗಿದೆ. ಬ್ರಿಸ್ಟಲ್‌ ಇಂಗ್ಲೆಂಡ್‌ನ ಆರನೆಯ ಹಾಗೂ ಯುನೈಟೆಡ್‌ ಕಿಂಗ್ಡಮ್‌ನ ಎಂಟನೆಯ ಅತಿ ಜನನಿಬಿಡ ನಗರವಾಗಿದೆ.[೪] ಇಂಗ್ಲಿಷ್‌ ಪ್ರಮುಖ ನಗರಗಳು‌ ಎನ್ನುವ ಸಮುದಾಯದಲ್ಲಿ ಇದೂ ಸಹ ಒಂದು ಹಾಗೂ ನೈಋತ್ಯ ಇಂಗ್ಲೆಂಡ್‌ನ ಅತಿ ಜನನಿಬಿಡ ನಗರವಾಗಿದೆ.

1155ರಲ್ಲಿ ಬ್ರಿಸ್ಟಲ್‌ ರಾಜಮನೆತನದ ಸನ್ನದು ಸ್ವೀಕರಿಸಿತು ಹಾಗೂ 1373ರಲ್ಲಿ ಕೌಂಟಿ ಸ್ಥಾನಮಾನವನ್ನು ನೀಡಲಾಯಿತು. ಹದಿಮೂರನೆಯ ಶತಮಾನದಿಂದ, ಅರ್ಧ ಸಹಸ್ರಮಾನದ ಕಾಲ, ತೆರಿಗೆ ಸ್ವೀಕಾರದ ವಿಚಾರದಲ್ಲಿ [೫] ಲಂಡನ್‌ ನಂತರ ಬ್ರಿಸ್ಟಲ್, ಯಾರ್ಕ್‌ ಮತ್ತು ನಾರ್ವಿಚ್‌ಒಂದಿಗೆ‌ ಅತ್ಯುತ್ತಮ ಮೂರು ಇಂಗ್ಲಿಷ್‌ ನಗರಗಳಲ್ಲಿ ಒಂದಾಗಿತ್ತು. ನಂತರ, 18ನೆಯ ಶತಮಾನದ ಅಪರಾರ್ಧದಲ್ಲಿ ಕೈಗಾರಿಕಾ ಕ್ರಾಂತಿ ನಡೆದಾಗ ಲಿವರ್ಪೂಲ್‌, ಬರ್ಮಿಂಗ್ಹ್ಯಾಮ್‌ ಮತ್ತು ಮ್ಯಾಂಚೆಸ್ಟರ್‌ ನಗರಗಳು ತ್ವರಿತ ಅಭಿವೃದ್ಧಿ ಹೊಂದಿದವು. ಬ್ರಿಸ್ಟಲ್‌ ಗಡಿಯಲ್ಲಿ ಸಾಮರ್ಸೆಟ್‌ ಮತ್ತು ಗ್ಲೌಸೆಸ್ಟರ್ಷೈರ್‌ ಕೌಂಟಿಗಳಿವೆ. ಜೊತೆಗೆ ಅಗ್ನೇಯ ಹಾಗೂ ಉತ್ತರ ದಿಕ್ಕುಗಳಲ್ಲಿ ಕ್ರಮವಾಗಿ ಬಾತ್‌ ಮತ್ತು ಗ್ಲೌಸೆಸ್ಟರ್‌ ಎಂಬ ಐತಿಹಾಸಿಕ ನಗರಗಳ ಸಮೀಪವಿದೆ. ನಗರವನ್ನು ಏವನ್‌ ನದಿಯ ತೀರದ ಸುತ್ತಲೂ ನಿರ್ಮಿಸಲಾಗಿದೆ. ಸೆವೆರ್ನ್‌ ನದೀಮುಖದಲ್ಲಿ ಬಹಳ ಕಿರಿದಾದ ಕಡಲತೀರವಿದೆ. ಇದು ಬ್ರಿಸ್ಟಲ್‌ ಕಡಲ್ಗಾಲುವೆಯೊಳಗೆ ಹರಿಯುತ್ತದೆ.

ಬ್ರಿಸ್ಟಲ್ ಈ ವಲಯದಲ್ಲಿ ಅತಿದೊಡ್ಡ ಸಾಂಸ್ಕೃತಿಕ, ಉದ್ಯೋಗ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ನಗರದ ಆರಂಭಿಕ ದಿನಗಳಿಂದಲೂ ಇದರ ಏಳ್ಗೆಯು ಸಮುದ್ರದೊಂದಿಗೆ ಸಂಬಂಧ ಹೊಂದಿದೆ. ವಾಣಿಜ್ಯ ಉದ್ದೇಶದ ಬ್ರಿಸ್ಟಲ್‌ ಬಂದರು ಮೂಲತಃ ನಗರ ಕೇಂದ್ರವಾಗಿತ್ತು. ನಂತರ ಇದನ್ನು ಏವನ್ಮೌತ್‌ನಲ್ಲಿರುವ ಸೆವರ್ನ್‌ ನದೀಮುಖಕ್ಕೆ ವರ್ಗಾಯಿಸಲಾಯಿತು. ರಾಯಲ್‌ ಪೋರ್ಟ್‌ಬ್ಯುರಿ ಡಾಕ್‌ ನಗರದ ಗಡಿಯ ಪಶ್ಚಿಮ ಬದಿಯಲ್ಲಿದೆ. ಇನ್ನಷ್ಟು ಇತ್ತೀಚೆಗಿನ ವರ್ಷಗಳಲ್ಲಿ ಅರ್ಥಿಕತೆಯು ಕ್ರಿಯಾತ್ಮಕ ಮಾಧ್ಯಮ, ವಿದ್ಯುನ್ಮಾನ ಮತ್ತು ಅಂತರಿಕ್ಷಯಾನ ಉದ್ದಿಮೆಗಳನ್ನು ಅವಲಂಬಿಸಿದೆ. ನಗರ ಕೇಂದ್ರದ ಹಡಗುಕಟ್ಟೆಗಳನ್ನು ಪರಂಪರೆ ಮತ್ತು ಸಂಸ್ಕೃತಿಯ ಕೇಂದ್ರಗಳನ್ನಾಗಿ ಪುನಶ್ಚೇತನಗೊಳಿಸಲಾಗಿದೆ.[೬] ಜಗತ್ತಿನಲ್ಲಿ ಬ್ರಿಸ್ಟಲ್‌ ಎಂಬ ಹೆಸರಿನ ಇನ್ನೂ 34 ಇತರೆ ಜನನಿಬಿಡ ಸ್ಥಳಗಳಿವೆ. ಇವುಗಳಲ್ಲಿ ಬಹಳಷ್ಟು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿದೆ, ಜೊತೆಗೆ, ಪೆರು, ಕೆನಡಾ, ಜಮೈಕಾ ಮತ್ತು ಕೋಸ್ಟ ರಿಕಾ ದೇಶಗಳಲ್ಲಿವೆ. ಇವೆಲ್ಲವೂ ಸಹ ಬಹುಶಃ ಮೂಲ ನಗರದ ಹೆಸರನ್ನು ನೆನಪಿಸುತ್ತವೆ.[೭][೮]

ಇತಿಹಾಸ

ಷೈರ್‌ಹ್ಯಾಂಪ್ಟನ್‌ ಮತ್ತು ಸೇಂಟ್‌ ಆನ್ಸ್‌ನಲ್ಲಿ ಪತ್ತೆಯಾದ ಸುಮಾರು 60,000 ವರ್ಷಗಳಷ್ಟು ಹಿಂದಿನ ಕಾಲದ ಪುರಾತತ್ವ ಅವಶೇಷಗಳು ಪುರಾತನ ಶಿಲಾಯುಗದಿಂದಲೂ ಬ್ರಿಸ್ಟಲ್‌ನಲ್ಲಿ ಮಾನವ ಚಟುವಟಿಕೆ ನಡೆಯುತ್ತಿದ್ದುದಕ್ಕೆ ಸಾಕ್ಷ್ಯ ಒದಗಿಸಿದೆ.[೯] ನಗರದ ಬಳಿ ಏವನ್‌ ಗಾರ್ಜ್‌ ಬದಿಯಲ್ಲಿರುವ ಲೀ ವುಡ್ಸ್‌ ಮತ್ತು ಕ್ಲಿಫ್ಟನ್‌ ಡೌನ್‌ ಹಾಗೂ ಹೆನ್ಬರಿ ಹತ್ತಿರ ಕಿಂಗ್ವೆಸ್ಟನ್‌ ಹಿಲ್‌ನಲ್ಲಿ ಕಬ್ಬಿಣ ಯುಗ ಕಾಲದ ಬೆಟ್ಟದ ಮೇಲಿನ ಕೋಟೆಗಳಿವೆ.[೧೦] ರೋಮನ್‌ ಯುಗದಲ್ಲಿ ಅಬೊನಾ ಎಂಬ ವಸಾಹತು ಸ್ಥಳವಿತ್ತು.[೧೧] ಈಗ ಸೀ ಮಿಲ್ಸ್ ಎಂದು ಹೆಸರುಪಡೆದಿರುವ ಇದು‌ ರೋಮನ್‌ ರಸ್ತೆಯ ಮೂಲಕ ಬಾತ್‌ನೊಂದಿಗೆ ಸಂಪರ್ಕ ಹೊಂದಿದೆ. ಇನ್ನೊಂದು ವಸಾಹತು ಇಂದಿನ ಇನ್ಸ್‌ ಕೋರ್ಟ್‌ ಬಳಿಯಿದೆ. ಈ ಪ್ರದೇಶದುದ್ದಕ್ಕೂ ಪ್ರತ್ಯೇಕವಾದ ರೋಮನ್‌ ವಿಲ್ಲಾಗಳು ಮತ್ತು ಸಣ್ಣ ರೋಮನ್‌ ಕೋಟೆಗಳು ಮತ್ತು ವಸಾಹತುಗಳಿದ್ದವು.[೧೨] ಬ್ರಿಗ್‌ಸ್ಟೋ (Brycgstow) (ಹಳೆಯ ಇಂಗ್ಲಿಷ್‌ನಲ್ಲಿ. 'ಸೇತುವೆಯ ಹತ್ತಿರದ ಸ್ಥಳ' ಎಂದರ್ಥ) [೧೩] 11ನೆಯ ಶತಮಾನದ ಆರಂಭದಿಂದಲೂ ಆಸ್ತಿತ್ವದಲ್ಲಿದ್ದು, ನಾರ್ಮನ್‌ ಜನರ ಆಳ್ವಿಕೆಯಲ್ಲಿ ದಕ್ಷಿಣ ಇಂಗ್ಲೆಂಡ್‌ನಲ್ಲೇ ಅತಿ ಭದ್ರ ಕೋಟೆಗಳಲ್ಲಿ ಒಂದನ್ನು ಹೊಂದಿತ್ತು.[೧೪]

A yellow water taxi on the water between stone quaysides. The far bank has large buildings and in the distance is a three arch bridge.
ಬಂದರಿನುದ್ದಕ್ಕೂ ಹಾದುಹೋಗಿರುವ ಬ್ರಿಸ್ಟಲ್‌ ಸೇತುವೆ.

ಪಟ್ಟಣದ ಸುತ್ತುಗೊಡೆಯಾಚೆ, ಮೂಲ ಬ್ರಿಸ್ಟಲ್‌ ಸೇತುವೆ ಪಕ್ಕದಲ್ಲಿ, ಫ್ರೋಮ್‌ ಮತ್ತು ಏವನ್‌ ನದಿಗಳ ಮೂಲ ಸಂಗಮ ಸ್ಥಳದ ಸುತ್ತಲ ಪ್ರದೇಶದಲ್ಲೇ ಈ ಬಂದರು 11ನೆಯ ಶತಮಾನದಲ್ಲಿ ಅಭಿವೃದ್ಧಿ ಹೊಂದಲಾರಂಭಿಸಿತು.[೧೫] 12ನೆಯ ಶತಮಾನದಲ್ಲಿ ಬ್ರಿಸ್ಟಲ್‌ ಪ್ರಮುಖ ಬಂದರಾಗಿತ್ತು. ಇಂಗ್ಲೆಂಡ್‌ ಜತೆ ಐರ್ಲೆಂಡ್‌ನ ವ್ಯಾಪಾರದ ಬಹಳಷ್ಟು ಭಾಗವನ್ನು ಈ ಬಂದರು ನಿಭಾಯಿಸಿತು. 1247ರಲ್ಲಿ, ಹೊಸ ಕಲ್ಲಿನ ಸೇತುವೆಯನ್ನು ನಿರ್ಮಿಸಲಾಯಿತು. 1760ರ ದಶಕದ ಕಾಲಾವಧಿಯಲ್ಲಿ, ಈ ಕಲ್ಲಿನ ಸೇತುವೆ ಬದಲಿಗೆ ಪ್ರಸಕ್ತದ ಬ್ರಿಸ್ಟಲ್‌ ಸೇತುವೆ ನಿರ್ಮಿಸಲಾಯಿತು.[೧೬] ಈ ಪಟ್ಟಣಕ್ಕೆ ಸುತ್ತಮುತ್ತಲ ಹೊರವಲಯ ಪ್ರದೇಶಗಳನ್ನು ವ್ಯಾಪ್ತಿಗೆ ಸೇರಿಸಿಕೊಂಡು 1373ರಲ್ಲಿ ತನ್ನ ಅರ್ಹತೆಯಲ್ಲೇ ಒಂದು ಕೌಂಟಿಯೆಂದೆನಿಸಿತು.[೧೭] ಈ ಅವಧಿಯಲ್ಲಿ ಬ್ರಿಸ್ಟಲ್‌ ಹಡಗು ನಿರ್ಮಾಣ ಮತ್ತು ಉತ್ಪಾದನೆಯ ಕೇಂದ್ರವಾಯಿತು. ಹಲವು ಸಾಗರೋತ್ತರ ಯಾತ್ರೆಗಳಿಗೆ ಬ್ರಿಸ್ಟಲ್‌ ಆರಂಭ ಸ್ಥಳವಾಗಿತ್ತು. ಇದರಲ್ಲಿ ಪ್ರಮುಖವಾಗಿ 1497ರಲ್ಲಿ ಜಾನ್‌ ಕೆಬಟ್‌ ಉತ್ತರ ಅಮೆರಿಕಾ ಶೋಧನಾ ಯಾತ್ರೆ ಆರಂಭಿಸಿದ್ದು ಬ್ರಿಸ್ಟಲ್‌ನಿಂದಲೇ.[೧೮]

A stone built Victorian Gothic building with two square towers and a central arched entrance underneath a circular ornate window. A Victorian street lamp stands in front of the building and on the right part of a leafless tree, with blues skies behind.
ಬ್ರಿಸ್ಟಲ್‌ ಪ್ರಧಾನ ಇಗರ್ಜಿಯ ಪಶ್ಚಿಮ ಮುಂಭಾಗ

14ನೆಯ ಶತಮಾನದೊಳಗೆ, ಲಂಡನ್‌ ನಂತರ ಬ್ರಿಸ್ಟಲ್‌ ಯಾರ್ಕ್‌ ಮತ್ತು ನಾರ್ವಿಚ್‌ ನಗರಗಳೊಂದಿಗೆ, ಇಂಗ್ಲೆಂಡ್‌ನ ಮೂರು ಅತಿ ದೊಡ್ಡ ಮಧ್ಯಯುಗೀಯ ಪಟ್ಟಣಗಳಾಗಿದ್ದವು. 1348-49 ಇಸವಿಯ ಕಾಲಾವಧಿಯಲ್ಲಿ ಬ್ಲ್ಯಾಕ್‌ ಡೆತ್‌ ಸಂಭವಿಸುವ ಮುನ್ನ ಇಲ್ಲಿ ಸುಮಾರು 15,000-20,000 ನಿವಾಸಿಗಳಿದ್ದರು.[೧೯] ಪ್ಲೇಗ್‌ ರೋಗ ಸಂಭವಿಸಿದ ಕಾರಣ ಬ್ರಿಸ್ಟಲ್‌ ಜನಸಂಖ್ಯೆ ಬೆಳವಣಿಗೆಯಲ್ಲಿ ದೀರ್ಘಾವಧಿಯ ಸ್ಥಗಿತ ಕಂಡಿತು. 15ನೆಯ ಮತ್ತು 16ನೆಯ ಶತಮಾನಗಳುದ್ದಕ್ಕೂ ಜನಸಂಖ್ಯೆಯು 10,000-12,000ರ ಶ್ರೇಣಿಯಲ್ಲಿಯೇ ಉಳಿದುಕೊಂಡಿತು. ಬ್ರಿಸ್ಟಲ್‌ ಡಯಸೀಸ್‌ನ್ನು 1542ರಲ್ಲಿ ಸ್ಥಾಪಿಸಲಾಯಿತು.[೨೦] ರಾಬರ್ಟ್‌ ಫಿಟ್ಜ್‌ಹಾರ್ಡಿಂಗ್‌ 1140ರಲ್ಲಿ ಸಂಸ್ಥಾಪಿಸಿದ ಮುಂಚಿನಸೇಂಟ್‌ ಆಗಸ್ಟೀನ್‌ ಅಬ್ಬೆಯು ಬ್ರಿಸ್ಟಲ್‌ ಪ್ರಧಾನ ಇಗರ್ಜಿಯಾಯಿತು.[೨೧] ಸಾಂಪ್ರದಾಯಿಕವಾಗಿ, ಪಟ್ಟಣವು ನಗರ ಎಂದು ಸ್ಥಾನಮಾನಪಡೆಯುವುದಕ್ಕೆ ಇದು ಸಮನಾಗಿದೆ. 1640ರ ದಶಕದ ಕಾಲಾವಧಿಯಲ್ಲಿ ನಡೆದ ಇಂಗ್ಲಿಷ್‌ ಅಂತರ್ಯುದ್ಧ ಸಮಯದಲ್ಲಿ, ರಾಯಲಿಸ್ಟ್‌ ಸೇನಾ ಪಡೆಯು, ರಾಯಲ್‌ ಫೊರ್ಟ್‌ ಎಂಬ ನಗರದ ಕೊನೆಯ ಸಂಸದೀಯ ಭದ್ರಕೋಟೆಗೆ ಮುತ್ತಿಗೆ ಹಾಕಿ ಜಯಿಸಿದ ನಂತರ, ಬ್ರಿಸ್ಟಲ್‌ನ್ನು ಕೈವಶ ಮಾಡಿಕೊಂಡಿತು.[೨೨]

17ನೇ ಶತಮಾನದಲ್ಲಿ ಇಂಗ್ಲೆಂಡ್‌‍‌ನ ಅಮೆರಿಕನ್ ವಸಾಹತುಗಳ ಹೆಚ್ಚಳ ಹಾಗೂ 18ನೆಯ ಶತಮಾನದಲ್ಲಿ, ಆಫ್ರಿಕನ್ನರನ್ನು ಗುಲಾಮಗಿರಿಗಾಗಿ ಅಮೆರಿಕಕ್ಕೆ ಸಾಗಿಸಲು ಅಟ್ಲಾಂಟಿಕ್‌ ವ್ಯಾಪಾರದಲ್ಲಿ ಇಂಗ್ಲೆಂಡ್‌ನ ಪಾಲಿನ ತ್ವರಿತ ವಿಸ್ತರಣೆಯೊಂದಿಗೆ, ಪುನರ್ನವೀಕೃತ ಅಭಿವೃದ್ಧಿಯಾಯಿತು. ಲಿವರ್ಪೂಲ್‌ನೊಂದಿಗೆ ಬ್ರಿಸ್ಟಲ್‌ ಸಹ ತ್ರಿಕೋನೀಯ ವಹಿವಾಟಿನ ಕೇಂದ್ರವಾಯಿತು. ಈ ವಹಿವಾಟಿನ ಮೊದಲ ಹಂತದಲ್ಲಿ, ತಯಾರಿಸಲಾದ ಸರಕನ್ನು ಪಶ್ಚಿಮ ಆಫ್ರಿಕಾಗೆ ರವಾನಿಸಲಾಯಿತು. ಇವುಗಳನ್ನು ಆಫ್ರಿಕನ್ನರಿಗಾಗಿ ವಿನಿಮಯ ಮಾಡಿಕೊಳ್ಳಲಾಯಿತು. ನಂತರ ಎರಡನೇ ಹಂತ ಅಥವಾ ಮಧ್ಯಾವಧಿ ಸಾಗಣೆಯಲ್ಲಿ ಆಫ್ರಿಕನ್‌ ಬುಡಕಟ್ಟು ಜನಾಂಗದವರನ್ನು ಕ್ರೂರ ಸ್ಥಿತಿಗಳಲ್ಲಿ ಅಟ್ಲಾಂಟಿಕ್‌ ಸಾಗರದಾಚೆ ಸಾಗಿಸಲಾಯಿತು.[೨೩] ತ್ರಿಕೋನೀಯ ವಹಿವಾಟಿನ ಮೂರನೆಯ ಹಂತದಲ್ಲಿ, ಸಕ್ಕರೆ, ತಂಬಾಕು, ಬೆಲ್ಲದ ಮದ್ಯ, ಅಕ್ಕಿ ಮತ್ತು ಹತ್ತಿಯಂತಹ [೨೩] ತೋಟದ ಉತ್ಪಾದನೆಗಳನ್ನು ಒಯ್ದು ತರಲಾಯಿತು. ಜೊತೆಗೆ, ಕಡಿಮೆ ಸಂಖ್ಯೆಯಲ್ಲಿ ಗುಲಾಮರನ್ನೂ ಸಹ ಕರೆತಂದು, ಶ್ರೀಮಂತರ ಮನೆಗಳಿಗೆ ಮನೆಯಾಳುಗಳನ್ನಾಗಿ ಬಳಸಲಾಯಿತು. ಅಂತಿಮವಾಗಿ ಕೆಲವು ಗುಲಾಮರು ಸ್ವಾತಂತ್ರ್ಯ ಪಡೆದದ್ದೂ ಉಂಟು.[೨೪] 1700ರಿಂದ 1807ರ ವರೆಗೆ, ಗುಲಾಮರ ವಹಿವಾಟು ಉತ್ತುಂಗದಲ್ಲಿದ್ದಾಗ, ಬ್ರಿಸ್ಟಲ್‌ನಲ್ಲಿ ಸುಮಾರು 2,000ಕ್ಕೂ ಹೆಚ್ಚು ಗುಲಾಮರ ಹಡಗುಗಳನ್ನು ಸಿದ್ಧಪಡಿಸಲಾಯಿತು. ಆಫ್ರಿಕಾದಿಂದ ಅಂದಾಜು ಅಂಕಿಅಂಶಗಳ ಪ್ರಕಾರ ಅರ್ಧ ದಶಲಕ್ಷದಷ್ಟು ಜನರನ್ನು ಅಮೆರಿಕಾಗೆ ಸಾಗಿಸಿ ಗುಲಾಮಗಿರಿಗೆ ಒಡ್ಡಲಾಯಿತು.[೨೫] ಸೆವೆನ್‌ ಸ್ಟಾರ್ಸ್‌ ಎಂಬ ಪಥಿಕಗೃಹವು ಇಂದಿಗೂ ಇದೆ.[೨೬] ಗುಲಾಮಗಿರಿ ರದ್ದತಿವಾದಿ ಥಾಮಸ್‌ ಕ್ಲಾರ್ಕ್ಸನ್‌ ಇಲ್ಲಿ ಗುಲಾಮ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿದ್ದನು.

 An engraving showing at the top a sailing ship and paddle steamer in a harbour, with sheds and a church spire. On either side arched gateways, all above a scroll with the word "Bristol". Below a street scene showing pedestrians and a horse drawn carriage outside a large ornate building with a colonnade and arched windows above. A grand staircase with two figures ascending and other figures on a balcony. A caption reading "Exterior, Colston Hall" and Staircase, Colston Hall". Below, two street scenes and a view of a large stone building with flying buttresses and a square tower, with the caption "Bristol cathedral". At the bottom views of a church interior, a cloister with a man mowing grass and archways with two men in conversation.
ಬ್ರಿಸ್ಟಲ್‌ ಸುತ್ತಲಿನ ದೃಶ್ಯಗಳನ್ನು ಸೂಚಿಸುವ 1873ರ ಇಸವಿಯ ಕೆತ್ತನೆ.

ಹದಿನೈದನೆಯ ಶತಮಾನದಿಂದಲೂ, ಬ್ರಿಸ್ಟಲ್‌ನ ಬೆಸ್ತರು ನ್ಯೂಫೌಂಡ್ಲೆಂಡ್‌ನ ಗ್ರ್ಯಾಂಡ್‌ ಬ್ಯಾಂಕ್ಸ್‌ನಲ್ಲಿ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದರು.[೨೭] ಹದಿನೇಳನೆಯ ಶತಮಾನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ನ್ಯೂಫೌಂಡ್ಲೆಂಡ್‌ನಲ್ಲೇ ಖಾಯಂ ಆಗಿ ಬೀಡುಬಿಟ್ಟು, ಬ್ರಿಸ್ಟಲ್ಸ್‌ ಹೋಪ್‌ ಮತ್ತು ಕೂಪರ್ಸ್‌ ಕೋವ್‌ನಲ್ಲಿ ವಸಾಹತು ಸ್ಥಾಪಿಸಿದರು. ಬ್ರಿಸ್ಟಲ್‌ ದೃಢ ಕಡಲ ಸಂಪರ್ಕ ಹೊಂದಿದ್ದು, ನಗರದಲ್ಲಿ ಕಡಲ ಸುರಕ್ಷೆಯು ಪ್ರಮುಖ ವಿಚಾರವಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ, 'ನಾವಿಕನ ಮಿತ್ರ' ಸ್ಯಾಮುಯಲ್‌ ಪ್ಲಿಮ್ಸಾಲ್‌ ಸಾಗರಗಳನ್ನು ಸುರಕ್ಷಿತಗೊಳಿಸಲು ಅಭಿಯಾನ ನಡೆಸಿದನು. ಹಡಗುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸರಕು ತುಂಬಿಸಿರುವುದನ್ನು ನೋಡಿ ಆತನಿಗೆ ಆಘಾತವಾಗಿತ್ತು. ಹಡಗುಗಳಿಗೆ ಪ್ಲಿಮ್ಸಾಲ್‌ ಗೆರೆ ( ಸರಕುಹಡಗಿನ ಮೇಲೆ ಹಾಕುವ ಗುರುತಿನ ಗೆರೆ) ಕಡ್ಡಾಯವಾಗಿ ಹಾಕಿಸುವಲ್ಲಿ ಸಫಲನಾದ.[೨೮]

1760ರ ಸುಮಾರಿಗೆ ಲಿವರ್ಪೂಲ್‌ ನಗರದಿಂದ ಪೈಪೋಟಿ, 1793ರಲ್ಲಿ ಫ್ರಾನ್ಸ್‌ ಜೊತೆಗಿನ ಯುದ್ಧದಿಂದ ಅಸ್ತವ್ಯಸ್ತಗೊಂಡ ಕಡಲ ವಾಣಿಜ್ಯ ಹಾಗೂ 1807ರಲ್ಲಿ ರದ್ದಾದ ಗುಲಾಮ ಪ್ಯಾಪಾರದಿಂದಾಗಿ, ಉತ್ತರ ಇಂಗ್ಲೆಂಡ್‌ ಮತ್ತು ವೆಸ್ಟ್‌ ಮಿಡ್ಲೆಂಡ್ಸ್‌‌ನಲ್ಲಿನ ನೂತನ ತಯಾರಿಕಾ ಉದ್ದಿಮೆಗಳೊಂದಿಗೆ ಸರಿಸಮನಾಗಿ ಹೆಜ್ಜೆಹಾಕಲು ನಗರವು ವಿಫಲವಾಯಿತು. ಬಹಳಷ್ಟು ಉಬ್ಬರವಿಳಿತದ ಏವನ್‌ ಗಾರ್ಜ್‌ನುದ್ದಕ್ಕೂ ಇರುವ ಹಾದಿಯು ಮಧ್ಯಯುಗದಲ್ಲಿ ಬಂದರನ್ನು ಬಹಳ ಸುರಕ್ಷಿತವಾಗಿಸಿತು. ಆದರೆ ವಿಲಿಯಮ್‌ ಜೆಸೊಪ್‌ ವಿನ್ಯಾಸ ಮಾಡಿ, 1804-09ರಲ್ಲಿ ನಿರ್ಮಿಸಿದ ಫ್ಲೋಟಿಂಗ್‌ ಹಾರ್ಬರ್‌ ವಿಫಲವಾಗಿದ್ದರಿಂದ ಹೊರೆಯಾಗಿ ಪರಿಣಮಿಸಿತು. ಈ ಯೋಜನೆಯ ಹೆಚ್ಚಿನ ವೆಚ್ಚದಿಂದಾಗಿ ಮಿತಿಮೀರಿದ ಬಂದರು ಬಾಕಿಗಳಿಗೆ ದಾರಿ ಕಲ್ಪಿಸಿತು.[೨೯] ಅದೇನೇ ಇರಲಿ, 1801ರಲ್ಲಿ ಬ್ರಿಸ್ಟಲ್‌ನ ಜನಸಂಖ್ಯೆಯು 66,000 ಇದ್ದದ್ದು, 19ನೆಯ ಶತಮಾನದಲ್ಲಿ ಐದು ಪಟ್ಟು ಹೆಚ್ಚಾಯಿತು. ಹೊಸ ಉದ್ದಿಮೆಗಳು ಮತ್ತು ಬೆಳೆಯುತ್ತಿರುವ ಹೊಸ ವಾಣಿಜ್ಯಕ್ಷೇತ್ರಗಳು ಇದಕ್ಕೆ ಪೂರಕವಾದವು.[೩೦] ಇದು ನಿರ್ದಿಷ್ಟವಾಗಿ, ಪ್ರಖ್ಯಾತ ವಿಕ್ಟೋರಿಯನ್‌ ಇಂಜಿನಿಯರ್‌ ಇಸಾಂಬಾರ್ಡ್‌ ಕಿಂಗ್ಡಮ್‌ ಬ್ರೂನೆಲ್‌ರೊಂದಿಗೆ ಸಂಬಂಧಿಸಿದೆ. ಇವರು ಬ್ರಿಸ್ಟಲ್‌ ಮತ್ತು ಲಂಡನ್‌ ಪ್ಯಾಡಿಂಗ್ಟನ್‌ ನಡುವಣ ಗ್ರೇಟ್‌ ವೆಸ್ಟರ್ನ್‌ ರೇಲ್ವೆ, ಎಸ್‌ಎಸ್‌ ಗ್ರೇಟ್‌ ಬ್ರಿಟನ್‌ ಮತ್ತು ಎಸ್‌ಎಸ್‌ ಗ್ರೇಟ್‌ ವೆಸ್ಟರ್ನ್‌ ಎಂಬ ಬ್ರಿಸ್ಟಲ್-ನಿರ್ಮಿತ ಸಾಗರಗಮ್ಯ ಎರಡು ಹಬೆ-ಚಾಲಿತ ಹಡಗುಗಳು ಹಾಗೂ ಕ್ಲಿಫ್ಟನ್‌ ತೂಗುಸೇತುವೆ ವಿನ್ಯಾಸ ಮಾಡಿದ್ದರು. 1739ರಲ್ಲಿ ಜಾನ್‌ ವೆಸ್ಲೆ ಬ್ರಿಸ್ಟಲ್‌ನಲ್ಲಿ ನ್ಯೂ ರೂಮ್‌ ಎಂಬ ಮೊಟ್ಟಮೊದಲ ಮೆಥಡಿಸ್ಟ್‌ ಖಾಸಗಿ ಇಗರ್ಜಿ (ಚ್ಯಾಪೆಲ್) ಸಂಸ್ಥಾಪಿಸಿದರು. 1793 [೩೧] ಮತ್ತು 1831ರಲ್ಲಿ ಗಲಭೆಗಳು ಸಂಭವಿಸಿದವು. ಮೊದಲಿನ ಪ್ರತಿಭಟನೆಯು ಬ್ರಿಸ್ಟಲ್‌ ತೂಗುಸೇತುವೆ ಬಳಸಲು ನೀಡಬೇಕಾದ ಸುಂಕ ಜಾರಿಗೊಳಿಸುವ ಕಾಯಿದೆಯ ನವೀಕರಣದ ವಿರುದ್ಧ ಆರಂಭವಾಯಿತು. ಸುಧಾರಣಾ ಮಸೂದೆಯ ತಿರಸ್ಕಾರದ ವಿರುದ್ಧ ಎರಡನೆಯದು ಗಲಭೆಗಳಾದವು.[೩೨]

An old ordnance survey map of Bristol, showing roads, railways, rivers and contours.
1946ರ ಇಸವಿಯ ಬ್ರಿಸ್ಟಲ್‌ ನಕ್ಷೆ

ಎರಡನೆಯ ಮಹಾಯುದ್ಧದಲ್ಲಿ ಸಂಭವಿಸಿದ ಬ್ರಿಸ್ಟಲ್‌ ಬ್ಲಿಟ್ಜ್‌ನಲ್ಲಿ ಲುಫ್ಟ್‌ವಾಫ್‌ ಬಾಂಬ್‌ ದಾಳಿಯ ಪರಿಣಾಮವಾಗಿ ಬ್ರಿಸ್ಟಲ್‌ನ ನಗರ ಕೇಂದ್ರಕ್ಕೆ ತೀವ್ರ ಹಾನಿಯಾಯಿತು.[೩೩] ಸೇತುವೆ ಮತ್ತು ಕೋಟೆಯ ಹತ್ತಿರವಿರುವ ಮೂಲ ಕೇಂದ್ರ ವ್ಯಾಪಾರ ಕ್ಷೇತ್ರವು ಇಂದು ಒಂದು ಸ್ಮಾರಕ ಉದ್ಯಾನವನವಾಗಿದೆ. ಇದರಲ್ಲಿ ಬಾಂಬ್‌ ದಾಳಿಯಲ್ಲಿ ಹಾಳಾದ ಎರಡು ಇಗರ್ಜಿಗಳು ಮತ್ತು ಕೋಟೆಯ ಕೆಲ ಅವಶೇಷಗಳನ್ನು ಕಾಣಬಹುದು. ಸನಿಹದಲ್ಲಿರುವ, ಬಾಂಬ್ ದಾಳಿಗೆ ಗುರಿಯಾದ ಸೇಂಟ್‌ ನಿಕಾಲಸ್‌ ಎಂಬ ಮತ್ತೊಂದು ಇಗರ್ಜಿಯನ್ನು ಪುನಃ ನಿರ್ಮಿಸಿ, ವಸ್ತುಪ್ರದರ್ಶನಾಲಯವಾಗಿ ಪರಿವರ್ತಿಸಲಾಗಿದೆ.ಸೇಂಟ್‌ ಮೇರಿ ರೆಡ್‌ಕ್ಲಿಫ್‌ನ ಎತ್ತರದ ದೇವಪೀಠಕ್ಕಾಗಿ ವಿಲಿಯಮ್‌ ಹೊಗರ್ಥ್‌ 1756ರಲ್ಲಿ ಚಿತ್ರಿಸಿದ ಮೂರಂಕಣ ಕಲಾಕೃತಿಯು ಇದರಲ್ಲಿದೆ. ಸುಮಾರು 1760ರಲ್ಲಿ ನೆಲಸಮವಾದ ನಗರದ ಗೋಡೆಗಳ ಲಾಫರ್ಡ್ಸ್‌ ದ್ವಾರದಿಂದ ಪಡೆದ ಆರ್ನೋಸ್ ಕೊರ್ಟ್‌ ಟ್ರಯಂಫಲ್‌ ಆರ್ಚ್‌ನಲ್ಲಿದ್ದ ಮೊದಲನೆಯ ಕಿಂಗ್‌ ಎಡ್ವರ್ಡ್‌ ಹಾಗೂ ಮೂರನೆಯ ಕಿಂಗ್‌ ಎಡ್ವರ್ಡ್‌ರ ಪ್ರತಿಮೆಗಳನ್ನು ಸ್ಥಳಾಂತರಿಸಿ ಈ ಪ್ರದರ್ಶನಾಲಯದಲ್ಲಿಡಲಾಗಿದೆ. ಜೊತೆಗೆ, ಬ್ರಿಸ್ಟಲ್‌ ಕ್ಯಾಸ್ಲ್‌ನ ಶಿಲ್ಪಿ ರಾಬರ್ಟ್‌, ಹಾಗೂ ನಗರದ ಕೋಟೆಯ ಗೋಡೆಗಳ ನಿರ್ಮಾಪಕ ಕೂಟೆನ್ಸಸ್‌ನ ಬಿಷಪ್‌ ಜಿಯೊಫ್ರಿ ಡಿ ಮಾಂಟ್‌‌ಬ್ರೇರನ್ನು ನಿರೂಪಿಸುವ 13ನೆಯ ಶತಮಾನದ ಮೂರ್ತಿಗಳನ್ನು ಸಹ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.[೩೪]

ಬ್ರಿಸ್ಟಲ್‌ ನಗರ ಕೇಂದ್ರದ ಪುನರ್ನಿರ್ಮಾಣದಲ್ಲಿ ದೊಡ್ಡ ಗಾತ್ರದ, ಕಡಿಮೆ ವೆಚ್ಚದ 1960ರ ದಶಕದ ಕಾಲಾವಧಿಯ ಗಗನಚುಂಬಿ ವಸತಿ ಕಟ್ಟಡಗಳ ಬಳಕೆ, ಬ್ರೂಟಲಿಸ್ಟ್ ವಾಸ್ತುಶೈಲಿ ಹಾಗೂ ರಸ್ತೆಯ ವಿಸ್ತರಣೆ ಕಾರ್ಯಗಳ ಲಕ್ಷಣಗಳಿಂದ ಕೂಡಿದ್ದವು. 1980ರ ದಶಕದ ಕಾಲಾವಧಿಯಿಂದಲೂ, ಕೆಲವು ಮುಖ್ಯರಸ್ತೆಗಳನ್ನು ಮುಚ್ಚಿದ್ದರಿಂದ ಒಂದು ಹೊಸ ಪ್ರವೃತ್ತಿ ಹೊರಹೊಮ್ಮಿದೆ. ಜಾರ್ಜಿಯನ್‌ ಯುಗದ ಕ್ವೀನ್ಸ್‌ ಸ್ಕ್ವೇರ್‌ ಮತ್ತು ಪೋರ್ಟ್‌ಲೆಂಡ್‌ ಸ್ಕ್ವೇರ್ಗಳ ಮರುಸ್ಥಾಪನೆ, ಬ್ರಾಡ್ಮೀಡ್‌ ವ್ಯಾಪಾರ ಪ್ರದೇಶದ ಪುನಶ್ಚೇತನ ಮತ್ತು ನಗರ ಕೇಂದ್ರದ ಅತ್ಯುನ್ನತ ಯುದ್ಧನಂತರದ ಗೋಪುರಗಳಲ್ಲಿ ಒಂದನ್ನು ನೆಲಸಮಗೊಳಿಸಲಾಯಿತು.[೩೫]

ಇಪ್ಪತ್ತನೆಯ ಶತಮಾನದಲ್ಲಿ, ನಗರದಿಂದ 7 miles (11.3 km) ಪ್ರವಾಹ ದಿಕ್ಕಿನಲ್ಲಿ, ಏವನ್ಮೌತ್‌ ಡಾಕ್ಸ್ ಮತ್ತು ರಾಯಲ್‌ ಪೊರ್ಟ್‌ಬ್ಯೂರಿ ಡಾಕ್‌‌ಗೆ ಸೇರಿದ ಧಕ್ಕೆ(ಹಡಗುಕಟ್ಟೆ)ಗಳನ್ನು ತೆಗೆದಿದ್ದರಿಂದಾಗಿ ಇತ್ತೀಚಿನ ದಶಕಗಳಲ್ಲಿ ಹಳೆಯ ಕೇಂದ್ರೀಯ ಹಡಗುಕಟ್ಟೆ ಪ್ರದೇಶದ ('ಫ್ಲೋಟಿಂಗ್‌ ಹಾರ್ಬರ್‌') ಪುನರಾಭಿವೃದ್ಧಿಗೆ ಅವಕಾಶ ನೀಡಿದೆ. ಆದರೂ, ಹಡಗುಕಟ್ಟೆಗಳ ಮುಂದುವರಿದ ಅಸ್ತಿತ್ವವು ಅಪಾಯದಲ್ಲಿತ್ತು, ಏಕೆಂದರೆ ಇದನ್ನು ಆಸ್ತಿಪಾಸ್ತಿ ಎಂದು ಪರಿಗಣಿಸುವ ಬದಲಾಗಿ ಒಂದು ಪರಿತ್ಯಕ್ತ ಕೈಗಾರಿಕಾ ಸ್ಥಳ ಎಂದು ಭಾವಿಸಲಾಗಿತ್ತು. ಆದರೂ, 1996ರಲ್ಲಿ ಹಡಗುಕಟ್ಟೆಗಳ ಸುತ್ತಮುತ್ತಲೂ ಮೊಟ್ಟಮೊದಲ ಇಂಟರ್ನ್ಯಾಷನಲ್‌ ಫೆಸ್ಟಿವಲ್‌ ಆಫ್‌ ದಿ ಸೀನ ಆಯೋಜನೆಯಿಂದಾಗಿ ಹಡಗುಕಟ್ಟೆಯ ಪ್ರದೇಶವು ತನ್ನ ಹೊಸ ವಿರಾಮ ಸ್ಥಳದ ಪಾತ್ರದಲ್ಲಿ ನಗರದ ಮುಖ್ಯಲಕ್ಷಣವಾಗಿ ದೃಢಪಟ್ಟಿತು.[೩೬]

Other Languages
Afrikaans: Bristol
አማርኛ: ብርስተል
aragonés: Bristón
Ænglisc: Bricgstōw
العربية: برستل
asturianu: Brístol
azərbaycanca: Bristol
беларуская: Брысталь
беларуская (тарашкевіца)‎: Брыстал
български: Бристъл
brezhoneg: Bristol
bosanski: Bristol
català: Bristol
čeština: Bristol
Cymraeg: Bryste
dansk: Bristol
Deutsch: Bristol
Zazaki: Bristol
Ελληνικά: Μπρίστολ
English: Bristol
Esperanto: Bristolo
español: Brístol
eesti: Bristol
euskara: Bristol
فارسی: بریستول
suomi: Bristol
Gaeilge: Briostó
Gàidhlig: Bristol
galego: Bristol
Gaelg: Bristol
Hausa: Bristol
עברית: בריסטול
हिन्दी: ब्रिस्टल
hrvatski: Bristol
magyar: Bristol
Հայերեն: Բրիստոլ
Bahasa Indonesia: Bristol
Interlingue: Bristol
Ido: Bristol
íslenska: Bristol
italiano: Bristol
日本語: ブリストル
ქართული: ბრისტოლი
қазақша: Бристоль
한국어: 브리스틀
kernowek: Bristol
Latina: Bristolium
Lëtzebuergesch: Bristol (England)
lumbaart: Bristol
lietuvių: Bristolis
latviešu: Bristole
македонски: Бристол
മലയാളം: ബ്രിസ്റ്റൽ
मराठी: ब्रिस्टल
Mirandés: Bristol
مازِرونی: بریستول
norsk nynorsk: Bristol
norsk: Bristol
Nouormand: Bristo
ਪੰਜਾਬੀ: ਬਰਿਸਟਲ
polski: Bristol
Piemontèis: Bristol
پنجابی: برسٹل نگر
português: Bristol
Runa Simi: Bristol
română: Bristol
русский: Бристоль
sicilianu: Bristullu
Scots: Bristol
davvisámegiella: Bristol
srpskohrvatski / српскохрватски: Bristol
Simple English: Bristol
slovenščina: Bristol
shqip: Bristol
српски / srpski: Бристол
svenska: Bristol
Kiswahili: Bristol
ślůnski: Bristol
Tagalog: Bristol
Türkçe: Bristol
Twi: Bristol
ئۇيغۇرچە / Uyghurche: Bristol
українська: Бристоль
اردو: برسٹل
oʻzbekcha/ўзбекча: Bristol
Tiếng Việt: Bristol
West-Vlams: Bristol
Volapük: Bristol
Winaray: Bristol
ייִדיש: בריסטאל
Yorùbá: Bristol
Bân-lâm-gú: Bristol
粵語: 碧仙桃