ಬೇಸಿಗೆ

A field in summer.
ಟೆಂಪ್ಲೇಟು:Weather

ಸಮಶೀತೋಷ್ಣವಲಯದ ನಾಲ್ಕೂ ಋತುಗಳಲ್ಲಿ ವಸಂತ ಹಾಗೂ ಶರತ್ಕಾಲದ ನಡುವೆ ಬೇಸಿಗೆ ಯೆಂಬುದು ಅತಿ ಬೆಚ್ಚನೆಯ ಕಾಲವಾಗಿದೆ. ದೀರ್ಘಾವಧಿಯ ಹಗಲು ಹಾಗೂ ಅಲ್ಪಾವಧಿಯ ಇರುಳು ಬೇಸಿಗೆ ಕಾಲದ ವೈಶಿಷ್ಟ್ಯವಾಗಿದೆ. ಖಗೋಳವಿಜ್ಞಾನ ಮತ್ತು ವಲಯವಾರು ಹವಾಮಾನ ವಿಜ್ಞಾನಗಳನ್ನು ಆಧರಿಸಿ, ಋತುಗಳು ವಿವಿಧ ವಲಯಗಳಲ್ಲಿ ವಿವಿಧ ದಿನಾಂಕಗಳಂದು ಆರಂಭವಾಗುತ್ತವೆ. ಆದರೂ, ದಕ್ಷಿಣ ಗೋಲಾರ್ಧದಲ್ಲಿ ಬೇಸಿಗೆಯಾಗಿದ್ದರೆ ಉತ್ತರ ಗೋಲಾರ್ಧದಲ್ಲಿ ಚಳಿಗಾಲವಿರುತ್ತದೆ; ದಕ್ಷಿಣ ಗೋಲಾರ್ಧದಲ್ಲಿ ಚಳಿಗಾಲವಿದ್ದರೆ ಉತ್ತರ ಗೋಲಾರ್ಧದಲ್ಲಿ ಬೇಸಿಗೆ ಕಾಲವಿರುತ್ತದೆ. ಉಷ್ಣವಲಯ ಹಾಗೂ ಉಪ-ಉಷ್ಣವಲಯಗಳಲ್ಲಿ ಬೇಸಿಗೆಯಂದು ಮಳೆಯಾಗುವುದು. ಬೇಸಿಗೆ ಕಾಲದಂದು ಉಷ್ಣವಲಯದ ಚಂಡಮಾರುತಗಳು ಉಗಮಿಸಿ ಉಷ್ಣ ಮತ್ತು ಉಪ-ಉಷ್ಣವಲಯದ ಸಾಗರಗಳಲ್ಲಿ ಅಳೆಯುತ್ತವೆ. ಖಂಡಗಳ ಒಳನಾಡುಗಳಲ್ಲಿ, ಅಪರಾಹ್ನ ಅಥವಾ ಸಂಜೆಯ ವೇಳೆ ಆಲಿಕಲ್ಲು ಸಹಿತ ಗುಡುಗು-ಬಿರುಗಾಳಿ-ಮಳೆ ಸಂಭವಿಸಬಹುದು. ಅತಿಬೆಚ್ಚನೆಯ ಹವಾಮಾನ ಮತ್ತು ದೀರ್ಘಾವದಿಯ ದಿನಗಳ ಕಾರಣ, ಬೇಸಿಗೆಯ ಕಾಲದಲ್ಲಿ ಶಾಲೆಗಳಿಗೆ ರಜೆಯಿರುತ್ತದೆ.

ಬೇಸಿಗೆ ಕಾಲದ ಸಮಯ

ಖಗೋಳ ಶಾಸ್ತ್ರದ ದೃಷ್ಟಿಯಿಂದ, ವಿಷುವತ್ಸಂಕ್ರಾಂತಿಗಳು ಮತ್ತು ಅಯನ ಸಂಕ್ರಾಂತಿಗಳು ಋತುಗಳ ಮಧ್ಯದಲ್ಲಿರುವವು. ಆದರೆ, ಸರಾಸರಿ ಉಷ್ಣಾಂಶಗಳ ಆಧಾರದ ಮೇಲೆ ವ್ಯತ್ಯಾಸವಾಗಬಹುದಾದ ಋತುವಾರು ಮಂದಗತಿಯ ಕಾರಣ, ಋತುವಿನ ಹವಾಲಕ್ಷಣದ ಆರಂಭವು ಖಾಗೋಳಿಕ ಋತುವಿನ ಆರಂಭದ ಹಲವು ವಾರಗಳ ನಂತರ ಸಂಭವಿಸುತ್ತದೆ. [೧] ಪವನಶಾಸ್ತ್ರಜ್ಞರ ಪ್ರಕಾರ, ಉತ್ತರ ಗೋಲಾರ್ಧದಲ್ಲಿ ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳುಗಳು ಹಾಗೂ ದಕ್ಷಿಣ ಗೋಲಾರ್ಧದಲ್ಲಿ ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಬೇಸಿಗೆ ಕಾಲವು ಸಂಭವಿಸುತ್ತದೆ. [೨] ಬೇಸಿಗೆ ಕಾಲದ ಈ ಪವನಶಾಸ್ತ್ರೀಯ ವ್ಯಾಖ್ಯಾನವು, ದೀರ್ಘಾವದಿಯ, ಅತಿ ಬೆಚ್ಚಗಿನ ಹಗಲು ಮತ್ತು ಅಲ್ಪಾವಧಿಯ ಇರುಳನ್ನು ಹೊಂದಿರುವ ಋತುವೆಂಬ ಸಾಮಾನ್ಯ ಅನಿಸಿಕೆಗೆ ಸರಿಹೊಂದುತ್ತದೆ. ಖಾಗೋಳಿಕ ದೃಷ್ಟಿಯಿಂದ, ದಿನಗಳ ಅವಧಿಯು ವಿಷುವತ್ಸಂಕ್ರಾಂತಿಯಿಂದ ಅಯನ ಸಂಕ್ರಾಂತಿಯ ವರೆಗೆ ದೀರ್ಘಗೊಳ್ಳುತ್ತವೆ. ಅಯನ ಸಂಕ್ರಾಂತಿಯ ನಂತರ ಬೇಸಿಗೆಯ ದಿನಗಳು ಕ್ರಮತಃ ಕಡಿಮೆಯಾಗುತ್ತವೆ. ಇದರಿಂದಾಗಿ ಪವನಶಾಸ್ತ್ರೀಯ ಬೇಸಿಗೆಯು ಅತಿ ದೀರ್ಘಾವಧಿಯ ಹಗಲಿನತ್ತ ಸಾಗಿ, ಅಂದಿನಿಂದ ಹಗಲಿನ ಅವಧಿಯು ಕಡಿಮೆಯಾಗುತ್ತಾ ಹೋಗುತ್ತದೆ. ಬೇಸಿಗೆಯ ಹಗಲಿನ ಅವಧಿಯು ವಸಂತದ ಹಗಲಿನ ಅವಧಿಗಿಂತಲೂ ಹೆಚ್ಚಾಗಿರುತ್ತದೆ.


ಆಸ್ಟ್ರಿಯಾ, ಡೆನ್ಮಾರ್ಕ್‌ ಮತ್ತು ಅಂದಿನ USSRನಲ್ಲಿ ಋತುಗಳನ್ನು ಪವನಶಾಸ್ತ್ರೀಯವಾಗಿ ಅಳೆಯಲಾಗಿದೆ. ಇದೇ ರೀತಿಯನ್ನು ಯುನೈಟೆಡ್‌ ಕಿಂಗ್ಡಮ್‌ನಲ್ಲಿಯೂ ಸಹ ಬಳಸಲಾಗಿದೆ. ಇಲ್ಲಿ ಬೇಸಿಗೆ ಋತು ಮೇ ತಿಂಗಳ ಮಧ್ಯದಿಂದ ಆಗಸ್ಟ್ ತಿಂಗಳ ಮಧ್ಯದ ವರೆಗೆ ಎಂದು ತಿಳಿಯಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಷುವತ್ಸಂಕ್ರಾಂತಿಗಳು ಮತ್ತು ಅಯನಸಂಕ್ರಾಂತಿಗಳನ್ನು ಆಧರಿಸಿದ ವ್ಯಾಖ್ಯಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಹಲವು ವಲಯಗಳಲ್ಲಿ ಖಂಡೀಯ ಹವಾಗುಣಗಳನ್ನು ಹೊಂದಿದ್ದು, ಸುಮಾರು ಆರು ವಾರಗಳವರೆಗಿನ ಉಷ್ಣಾಂಶ ಮಂದಗತಿ ಇರುತ್ತದೆ.


ಆದರೂ, ಇತರೆಡೆ, ಋತುಗಳ ಆರಂಭಗಳ ಬದಲಿಗೆ ಮಧ್ಯಹಂತಗಳನ್ನು ಗುರುತಿಸಲು ಅಯನಸಂಕ್ರಾಂತಿಗಳು ಮತ್ತು ವಿಷುವತ್ಸಂಕ್ರಾಂತಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಚೀನೀ ಖಗೋಳವಿಜ್ಞಾನದಲ್ಲಿ, ಬೇಸಿಗೆಯು ಸುಮಾರು ೫ ಮೇ ರಂದು ( jiéqì ( ಸೌರ ಪದ) lìxià (立夏) ಎನ್ನಲಾದ, ಅರ್ಥಾತ್‌ 'ಬೇಸಿಗೆಯ ಸ್ಥಾಪನೆ') ಆರಂಭಗೊಂಡು ಸುಮಾರು ೬ ಆಗಸ್ಟ್‌ ರಂದು ಅಂತ್ಯಗೊಳ್ಳುತ್ತದೆ. ಪಾಶ್ಚಾತ್ಯ ಬಳಕೆಯ ಉದಾಹರಣೆಗೆ, ವಿಲಿಯಮ್‌ ಷೇಕ್‌ಸ್ಪಿಯರ್‌ನ ಎ ಮಿಡ್ಸಮ್ಮರ್‌ ನೈಟ್ಸ್‌ ಡ್ರೀಮ್ ‌ ಎಂಬ ನಾಟಕವನ್ನು ವರ್ಷದ ಅತ್ಯಲ್ಪಾವಧಿಯ ಇರುಳಲ್ಲಿ (ಬೇಸಿಗೆಯ ಅಯನಸಂಕ್ರಾಂತಿ) ನಡೆಸಲಾಗುತ್ತದೆ.

ಐರ್ಲೆಂಡ್‌ನಲ್ಲಿ, ರಾಷ್ಟ್ರೀಯ ಪವನಶಾಸ್ತ್ರೀಯ ಸೇವಾ ಸಂಸ್ಥೆ ಮೆಟ್‌ ಏರಿಯಾನ್‌ ಪ್ರಕಾರ, ಜೂನ್‌, ಜುಲೈ ಮತ್ತು ಆಗಸ್ಟ್‌ ಬೇಸಿಗೆಯ ತಿಂಗಳುಗಳಾಗಿವೆ. ಆದರೂ, ಐರಿಷ್‌ ಪಂಚಾಂಗದ ಪ್ರಕಾರ, ಬೇಸಿಗೆಯು ೧ ಮೇ ರಂದ ಆರಂಭಗೊಂದು, ೧ ಆಗಸ್ಟ್‌ಗೆ ಅಂತ್ಯಗೊಳ್ಳುತ್ತದೆ. ಐರ್ಲೆಂಡ್‌ನ ಶಾಲಾ ಪಠ್ಯಪುಸ್ತಕಗಳು ಬೇಸಿಗೆ ಆರಂಭದ ದಿನಾಂಕ ಕುರಿತು, ೧ ಜೂನ್‌ ಪವನಶಾಸ್ತ್ರೀಯ ವ್ಯಾಖ್ಯಾನದ ಬದಲಿಗೆ, ದಿನಾಂಕ ೧ ಮೇರಿಂದ ಆರಂಭಗೊಳ್ಳುವ ಸಾಂಸ್ಕೃತಿಕ ನಿಯಮವನ್ನು ಅನುಸರಿಸುತ್ತವೆ.


ಮುಂಗಾರು ಮೊದಲು ಆರಂಭವಾಗುವ ದಕ್ಷಿಣ ಮತ್ತು ಅಗ್ನೇಯ ಏಷ್ಯಾ ವಲಯಗಳಲ್ಲಿ ಬೇಸಿಗೆ ಕಾಲವು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಥವಾ ಜೂನ್‌ ತಿಂಗಳ ಆರಂಭದ ವರೆಗೆ ಇರುತ್ತದೆ. ಇದು ವರ್ಷದ ಅತಿ ಬೆಚ್ಚನೆಯ ಋತುವಾಗಿರುತ್ತದೆ. ಮುಂಗಾರು ಮಳೆಯು ಆರಂಭವಾಗುವುದರೊಂದಿಗೆ ಬೇಸಿಗೆಯು ಅಂತ್ಯಗೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆಲವೆಡೆ, ಬೇಸಿಗೆ ಕಾಲವು ಮೇ ತಿಂಗಳ ಕೊನೆಯ ಸೋಮವಾರದಂದು ( ಸ್ಮಾರಕ ದಿನ ವಾರಾಂತ್ಯ) ಆರಂಭಗೊಂಡು, ಸೆಪ್ಟೆಂಬರ್‌ ತಿಂಗಳ ಮೊದಲ ಸೋಮವಾರದಂದು ( http://www.petoskeynews.com/articles/2009/06/19/coming_up/doc4a3a502e0a8de215951583.txt</ref>[೩][೪][೫]

Other Languages
Аҧсшәа: Аҧхын
адыгабзэ: Гъэмаф
Afrikaans: Somer
Alemannisch: Sommer
አማርኛ: ሞቄ ወቅት
aragonés: Verano
العربية: صيف
ܐܪܡܝܐ: ܩܝܛܐ
asturianu: Branu
Aymar aru: Panqara phaxsi
azərbaycanca: Yay
تۆرکجه: یای
башҡортса: Йәй
Boarisch: Summa
žemaitėška: Vasara
беларуская: Лета
беларуская (тарашкевіца)‎: Лета
български: Лято
भोजपुरी: गरमी (सीजन)
বাংলা: গ্রীষ্ম
བོད་ཡིག: དབྱར་ཁ།
brezhoneg: Hañv
bosanski: Ljeto
català: Estiu
Mìng-dĕ̤ng-ngṳ̄: Iĕk-tiĕng
کوردی: ھاوین
Nēhiyawēwin / ᓀᐦᐃᔭᐍᐏᐣ: Nipin
čeština: Léto
kaszëbsczi: Lato
Чӑвашла: Çулла
Cymraeg: Haf
dansk: Sommer
Deutsch: Sommer
Zazaki: Amnan
dolnoserbski: Lěśe
डोटेली: गृष्म ऋतु
Ελληνικά: Καλοκαίρι
emiliàn e rumagnòl: Istê
English: Summer
Esperanto: Somero
español: Verano
eesti: Suvi
euskara: Uda
فارسی: تابستان
suomi: Kesä
Võro: Suvi
føroyskt: Summar
français: Été
Nordfriisk: Somer
furlan: Istât
Frysk: Simmer
Gaeilge: Samhradh
galego: Verán
Avañe'ẽ: Arahaku
ગુજરાતી: ઉનાળો
Gaelg: Sourey
עברית: קיץ
hrvatski: Ljeto
hornjoserbsce: Lěćo
Kreyòl ayisyen: Lete
magyar: Nyár
Հայերեն: Ամառ
interlingua: Estate
Bahasa Indonesia: Musim panas
Interlingue: Estive
Ilokano: Kalgaw
ГӀалгӀай: Ахка
Ido: Somero
íslenska: Sumar
italiano: Estate
日本語:
la .lojban.: crisa
Basa Jawa: Mangsa panas
ქართული: ზაფხული
қазақша: Жаз
한국어: 여름
Перем Коми: Гожум
Ripoarisch: Sommer
kurdî: Havîn
коми: Гожӧм
Кыргызча: Жай
Latina: Aestas
Lëtzebuergesch: Summer
лакку: Гъи
лезги: Гад
lumbaart: Istàt
lietuvių: Vasara
latviešu: Vasara
олык марий: Кеҥеж
македонски: Лето
മലയാളം: ഗ്രീഷ്മം
монгол: Зун
मराठी: उन्हाळा
кырык мары: Кӓнгӹж
Bahasa Melayu: Musim panas
မြန်မာဘာသာ: နွေရာသီ
مازِرونی: تابستون
Nāhuatl: Xopantlah
Napulitano: Staggione
Nedersaksies: Zoemer
नेपाली: गृष्म ऋतु
नेपाल भाषा: ताल्ला
Nederlands: Zomer
norsk nynorsk: Sommar
norsk: Sommer
Nouormand: Êté
occitan: Estiu
Livvinkarjala: Kezä
Ирон: Сæрд
ਪੰਜਾਬੀ: ਗਰਮੀ (ਰੁੱਤ)
Norfuk / Pitkern: Sama
polski: Lato
پنجابی: گرمیاں
پښتو: دوبی
português: Verão
Runa Simi: Ruphay mit'a
română: Vară
armãneashti: Vearâ
русский: Лето
саха тыла: Сайын
sicilianu: Astati
Scots: Simmer
سنڌي: اونهارو
srpskohrvatski / српскохрватски: Ljeto
Simple English: Summer
slovenčina: Leto
slovenščina: Poletje
Soomaaliga: Xagaa
српски / srpski: Лето
svenska: Sommar
Kiswahili: Majira ya joto
తెలుగు: వేసవి కాలం
тоҷикӣ: Тобистон
Türkmençe: Tomus
Tagalog: Tag-init
Setswana: Selemo
Türkçe: Yaz
татарча/tatarça: Җәй
ئۇيغۇرچە / Uyghurche: ياز
українська: Літо
oʻzbekcha/ўзбекча: Yoz
vèneto: Istà
vepsän kel’: Keza
Tiếng Việt: Mùa hạ
West-Vlams: Zomer
walon: Esté
Winaray: Katpaso
吴语: 夏天
хальмг: Зун
მარგალური: ზარხული
ייִדיש: זומער
中文: 夏季
文言:
Bân-lâm-gú: Joa̍h-thiⁿ
粵語: 夏天