ಬೇವಿನ ಎಣ್ಣೆ

ಬೇವಿನ ಗಿಡ
ಬೇವಿನ ಹೂವು
ಬೇವಿನ ಹಳ್ಳು
ಬೇವಿನ ಬೀಜ
ಬೇವಿನ ಎಣ್ಣೆ

ಬೇವಿನ ಎಣ್ಣೆ ಯನ್ನು ಬೇವಿನ ಗಿಡದ ಬೀಜದಿಂದ ತೆಗೆಯುತ್ತಾರೆ. ಬೇವು ಗಿಡ ಮೆಲಿಯೆಸಿ/ಮಾಲ್ವೇಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತೀಯ ಹೆಸರು 'ಅಜಾಡಿರಿಕ್ಟ ಇಂಡಿಕ (Azadirichta Indica). ಬೇವು (ಒಳ್ಳೆ ಬೇವು) ಭಾರತ ಉಪಖಂಡದ ಮೂಲ ವಾಸಿ. ಇದು ಭಾರತದ ಜನ ಜೀವನದಲ್ಲಿ ಹಾಸು ಹೊಕ್ಕಾದ ಮರಗಳಲ್ಲಿ ಒಂದು. ತೀವ್ರ ತರದ ಬರಗಾಲದಲ್ಲಿಯೂ ಬದುಕಿ, ಜನೋಪಯೋಗಿ ಎನಿಸಿದ ಮರ ಇದಾಗಿದೆ. ಬೇವಿನ ಗಿಡವನ್ನು ತೆಲುಗು ಭಾಷೆಯಲ್ಲಿ 'ವೇಪ ' ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನು 'ನೀಮ್' (neem) ಎನ್ನುತ್ತಾರೆ. ಬೇವಿನ ಎಣ್ಣೆಯು ಆಹಾರವಾಗಿ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಬೇವಿನ ಎಣ್ಣೆಯಲ್ಲಿ ಇರುವ ಅಜಾಡಿರಿಕ್ಟನ್ ಯನ್ನು ಟ್ರೈ ಟೆರ್ಪಎಂಟ್ ಕಾರಣವಾಗಿ ಬೇವಿನ ಎಣ್ಣೆಯನ್ನು ಅಡಿಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಬೇವಿನ ಗಿಡ, ಎಲೆ, ತೊಗಟೆ, ಬೀಜ ಎಲ್ಲವೂ ಔಷಧ ಗುಣಗಳನ್ನು ಹೊಂದಿವೆ. ಬರಗಾಲದ ಸಮಯದಲ್ಲಿ ಎಲೆ ಉದುರುತ್ತದೆ. ದಟ್ಟವಾದ ಹಂದರ ತೊಗಟೆ ಸಾಧಾರಣ ಮಂದವಾಗಿ, ಕರಿಬೂದು ಬಣ್ಣವಾಗಿರುತ್ತದೆ. ದಾರ(ನೂಲು)ವು ಕೆಂಪು ಕಂದು ಬಣ್ಣವಿದ್ದು ಸೀಳಿಕೆಗಳಿರುತ್ತವೆ. ಇದು ಮಧ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಇದರ ದಾರವು ಬಹುಪಯೋಗಿ, ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರನ್ನು ಪಡೆದಿದೆ. ಹೂಗಳು ಸಣ್ಣದಾಗಿದ್ದು ಬಿಳಿಯ ಬಣ್ಣ ಇರುತ್ತವೆ. ಒಂದು ಗಿಡದಿಂದ ಒಂದು ಬಾರಿಗೆ ೫೦ ರಿಂದ ೬೦ ಕೇ ಜಿ. ಹಣ್ಣು/ಫಲ ಬರುತ್ತದೆ. ಗಿಡಕ್ಕೆ ೩ ಸಂವತ್ಸರ ಬಂದ ಕೊಡಲೇ ಹೂವು ಬರುತ್ತದೆ. ಹಣ್ಣು ಬರುವುದು ೭ ಸಂವತ್ಸರವಾದ ಮೇಲೆ . ಜನವರಿಯಿಂದ ಆರಂಭವಾಗಿ ಏಪ್ರಿಲ್ ತಿಂಗಳವರೆಗೆ ಹೂವು ಬಿಡುತ್ತದೆ. ಫಸಲು ಮೇ ಆಗಸ್ಟ್ ತಿಂಗಳಲ್ಲಿ ಆಗುತ್ತದೆ. ಹಣ್ಣಿನಲ್ಲಿ ಬೀಜದ ಶಾತ ೪:೧ ಇರುತ್ತದೆ. ಒಣಗಿಸಿದ ಹಣ್ಣಿನೊಳಗೆ ಎಣ್ಣೆ ೨೦-೨೨% ಇರುತ್ತದೆ. ಒಣಗಿದ ಹಣ್ಣಿನಲ್ಲಿ ಬೀಜ ೨೩-೨೫%, ಕಾಳು(kernel) ೪೫% ಇರುತ್ತವೆ. ಬೀಜದ ಸಿಪ್ಪೆ (Shell/hull) ೪.೫%,ಕುಸುರ (pulp) 40%ಇರುತ್ತವೆ. ಬೇವಿನ ಎಣ್ಣೆಯಲ್ಲಿ ಟ್ರಿಟೆರಿಪೆಂಟೆನ್ ೩೨-೨೫೦೦ppm ಇರುತ್ತದೆ. ಹಣ್ಣು ೧-೨ ಸೆಂ.ಮೀ ಉದ್ದ ಇರುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಮಾಗಿದ ಮೇಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಸಿರು ಕಾಯಿ ಕಹಿಯಾಗಿರುತ್ತದೆ. ಹಣ್ಣು ಆದ ಮೇಲೆ ಕಹಿ ಮತ್ತು ಸಿಹಿ ಕೂಡಿದ ಒಗರು ರುಚಿ ಬರುತ್ತದೆ.

Other Languages
العربية: زيت نيم
Deutsch: Niemöl
English: Neem oil
español: Aceite de nim
français: Huile de neem
עברית: שמן נים
മലയാളം: വേപ്പെണ്ണ
తెలుగు: వేప నూనె