ಬುದ್ಧಿಮಾಂದ್ಯತೆ

Dementia
Classification and external resources
ICD- 10 00.- 07.
ICD- 9 290-294
DiseasesDB 29283
MedlinePlus 000739
MeSH D003704


ಬುದ್ಧಿಮಾಂದ್ಯತೆ (ಇದನ್ನು "ಬುದ್ಧಿವಂಚಿತ" ಎಂದು ಅರ್ಥೈಸಲಾಗುತ್ತದೆ) ಯೊಂದು ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಗಂಭೀರವಾದ ಕಾಯಿಲೆಯಾಗಿದೆ. ಇದು ಒಂದೇ ಪ್ರಮಾಣದಲ್ಲಿರಬಹುದು, ಅಂದರೆ ವಿಶಿಷ್ಟವಾದ ಸಂಪೂರ್ಣವಾದ ಮೆದುಳಿನ ಗಾಯದಿಂದ ಉಂಟಾಗಿರುವುದು, ಅಥವಾ ಮುಂದುವರಿಯುವಂತಹುದು, ಅಂದರೆ ದೇಹಕ್ಕೆ ಆಗಿರುವ ಹಾನಿ ಅಥವಾ ರೋಗದ ಪರಿಣಾಮವಾಗಿ ಅರಿವಿನ ಕಾರ್ಯಕ್ಷಮತೆಯಲ್ಲಿ ಸಾಮಾನ್ಯವಾಗಿ ನಿರೀಕ್ಷಿಸಿದ ವೃದ್ಯಾಪ್ಯಕ್ಕಿಂತ ಮೊದಲೇ ಇಳಿತವುಂಟಾಗುತ್ತದೆ. ವಯಸ್ಕರಲ್ಲಿ ಬುದ್ಧಿ ಮಾಂದ್ಯತೆಯ ಪ್ರಮಾಣ ಹೆಚ್ಚಾಗಿರುವುದು ಹೌದಾದರೂ, ಇದು ಸಾಮಾನ್ಯವಾಗಿ ಪ್ರೌಢಾವಸ್ಥೆಯ ಯಾವುದೇ ಹಂತದಲ್ಲೂ ಕಾಣಿಸಿಕೊಳ್ಳಬಹುದು. ಆಂಗಿಕ ಮೆದುಳಿನ ರೋಗಲಕ್ಷಣಾವಳಿ ಅಥವಾ ನಿಷ್ಕ್ರಿಯತೆಯಂತಹ ಚಿಹ್ನೆಗಳು ಮುಪ್ಪಿನವರಿಗಿಂತ ಕಡಿಮೆ ವಯಸ್ಸಿನವರಲ್ಲಿ ಕಾಣುವುದನ್ನು ಬೇರೆ ಬೇರೆ ವಯಸ್ಸಿಗೆ ತಕ್ಕಂತೆ ವಿವಿಧ ರೀತಿಯ ಹೆಸರುಗಳನ್ನು ನೀಡಲಾಗಿದೆ. 19ನೇ ಶತಮಾನದ ಅಂತ್ಯದ ಹೊತ್ತಿಗೆ ಬುದ್ಧಿ ಮಾಂದ್ಯತೆ ಒಂದು ದೊಡ್ಡ ಚಿಕಿತ್ಸಾ ಪರಿಕಲ್ಪನೆಯಾಯಿತು.[4]

ಬುದ್ಧಿಮಾಂದ್ಯತೆಯೊಂದು ನಿರ್ಧಿಷ್ಟಪಡಿಸಲಾಗದ ಲಕ್ಷಣಾವಳಿಯಾಗಿದ್ದು,(ಚಿಹ್ನೆಹಳು ಮತ್ತು ಕುರುಹುಗಳ ಗುಂಪು) ಜ್ಞಾಪಕಶಕ್ತಿ, ಜಾಗೃತ ಸ್ಥಿತಿ, ಭಾಷೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳನ್ನು ಇದು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಇದನ್ನು ಪರೀಕ್ಷಿಸುವುದಕ್ಕೆ ಕನಿಷ್ಠ ಆರು ತಿಂಗಳು ಆದರೂ ಇರಬೇಕಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಅದರಲ್ಲೂ ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಾಣಿಸಿಕೊಳ್ಳುವ ಅರಿವಿನ ನಿಷ್ಕ್ರೀಯತೆಯನ್ನು ಡೆಲಿರಿಯಂ ಎಂದು ಪರಿಗಣಿಸಬೇಕಾಗುತ್ತದೆ.[6] ಎಲ್ಲ ಮಾದರಿಯ ಸಾಮಾನ್ಯ ಅರಿವಿನ ನಿಷ್ಕ್ರೀಯತೆಗಳಲ್ಲಿ ಉನ್ನತಮಟ್ಟದ ಮಾನಸಿಕ ಕಾರ್ಯಕ್ಷಮತೆಗಳು ಮೊದಲು ಪರಿಣಾಮಕ್ಕೆ ಒಳಗಾಗುತ್ತವೆ. ಸ್ಥಿತಿಯ ನಂತರದ ಹಂತಗಳಲ್ಲಿ, ವಿಶೇಷವಾಗಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು, ಈ ಸಮಯದಲ್ಲಿ ದಿಕ್ಕು ತಪ್ಪಿದಂತವನಾಗುತ್ತಾನೆ. (ಆ ವಾರದಲ್ಲಿನ ದಿನ ಯಾವುದು, ತಿಂಗಳಿನ ದಿನ ಅಥವಾ ಯಾವ ವರ್ಷ ಎನ್ನುವುದು ಕೂಡ ಗೊತ್ತಿರುವುದಿಲ್ಲ), ಸ್ಥಳದಲ್ಲಿ (ಅವರು ಎಲ್ಲಿದ್ದಾರೆ ಎನ್ನುವುದ ಗೊತ್ತಿರುವುದಿಲ್ಲ) ಮತ್ತು ವ್ಯಕ್ತಿಯಾಗಿ (ತಾನು ಯಾರು ಮತ್ತು ತನ್ನ ಸುತ್ತ ಇರುವ ಇತರರು ಯಾರು ಎನ್ನುವುದು ಗೊತ್ತಿರುವುದಿಲ್ಲ). ಕೆಲ ಹಂತಗಳವರೆಗೆ ಇದಕ್ಕೆ ಚಿಕಿತ್ಸೆ ನೀಡಬಹುದಾಗಿದೆಯಾದರೂ, ಸಾಮಾನ್ಯವಾಗಿ ಮುಂದುವರಿಯುತ್ತಿರುವ ಅಥವಾ ಚಿಕಿತ್ಸೆ ನೀಡಲಾಗದ ಸ್ಥಿತಿಗೆ ಹೋಗುವುದನ್ನು ಬುದ್ಧಿ ಮಾಂದ್ಯತೆ ಎಂದು ಕರೆಯುತ್ತಾರೆ.[ ಸೂಕ್ತ ಉಲ್ಲೇಖನ ಬೇಕು]

ಕಾಯಿಲೆಯ ಕಾರಣದ ಆಧಾರದ ಮೇಲೆ ಬುದ್ಧಿ ಮಾಂದ್ಯತೆಯ ಲಕ್ಷಣಗಳನ್ನು ಪೂರ್ವ ಸ್ಥಿತಿಗೆ ತರಬಲ್ಲ ಇಲ್ಲವೆ, ಪೂರ್ವಸ್ಥಿತಿಗೆ ತರಲಾಗದಂತಹ ಎಂದು ವರ್ಗೀಕರಿಸಬಹುದಾಗಿದೆ. ಸದ್ಯ ಕಾರಣಗಳಿಂದ ಆಗಿರುವ ಶೇ. 10 ರಷ್ಟು ಬುದ್ಧಿ ಮಾಂದ್ಯತೆಯನ್ನು ಚಿಕಿತ್ಸೆಯ ನೆರವಿನಿಂದ ಪೂರ್ವಸ್ಥಿತಿಗೆ ತರಬಹುದಾಗಿದೆ. ಕಾಯಿಲೆಗೆ ಕಾರಣಗಳು ವಿವಿಧ ರೀತಿಯ ನಿರ್ಧಿಷ್ಟಪಡಿಸಿದ ಪ್ರಕ್ರಿಯೆಗಳನ್ನು ಅಂಗ ಕಾರ್ಯನಿಷ್ಕ್ರೀಯತೆಗಳಾದ ಉಸಿರಾಟದ ತೊಂದರೆ, ಕಾಮಾಲೆ ಅಥವಾ ನೋವುಗಳನ್ನು ಒಳಗೊಂಡಿರುತ್ತವೆ. ಕೆಲವು ದಿನ ಅಥವಾ ವಾರಗಳವರೆಗೆ ಕಾಣಿಸಿಕೊಳ್ಳುವ ಡೆಲಿರಿಯಂನ ಅಲ್ಪಾವಧಿಯ ಲಕ್ಷಣಗಳನ್ನು ಸುಲಭವಾಗಿ ಬುದ್ಧಿ ಮಾಂದ್ಯತೆ ಎಂದು ಗೊಂದಲಕ್ಕೀಡು ಮಾಡುತ್ತವೆ. ಏಕೆಂದರೆ ಅವುಗಳಲ್ಲಿ ಎಲ್ಲ ಲಕ್ಷಣಗಳು ಒಂದೇ ರೀತಿಯದ್ದಾಗಿರುತ್ತದೆ. ಕೆಲ ಬಾರಿ ಡೆಲಿರಿಯಂ, ಸಿಂಪೆಥಿಟಿಕ್ ನರ ವ್ಯವಸ್ಥೆಯ ಅತಿಯಾದ ಚಟುವಟಿಕೆಯಿಂದಾಗಿ ಅಗುತ್ತಿರುತ್ತದೆ. ಆದ್ದರಿಂದ ಇತಿಹಾಸವನ್ನು ಎಚ್ಚರದಿಂದ ಪರಿಶೀಲಿಸಬೇಕಾಗುತ್ತದೆ.[8] ಮಾನಸಿಕ ಖಿನ್ನತೆ ಮತ್ತು ಬುದ್ಧಿ ವಿಕಲ್ಪದಂತಹ ಕೆಲ ಮಾನಸಿಕ ಕಾಯಿಲೆಗಳು ಕೂಡ ಡೆಲಿರಿಯಂ ಮತ್ತು ಬುದ್ಧಿಮಾಂದ್ಯತೆಯ ಲಕ್ಷಣಗಳನ್ನು ಹುಟ್ಟು ಹಾಕುತ್ತವೆ. ಆದ್ದರಿಂದ ಅವುಗಳನ್ನು ವಿಭಜಿಸಿ ನೋಡಲೇಬೇಕು. ಆಲ್ಕೋಹಾಲ್ ನ ಪದೇ ಪದೇ ಉಪಯೋಗ ಮತ್ತು ನಿದ್ರಾಹೀನತೆಯು ರೋಗಿಯನ್ನು ಬುದ್ಧಿ ಮಾಂದ್ಯತೆಯ ಲಕ್ಷಣಗಳಲ್ಲಿ ಒಂದಾಗಿರುವ ಅರಿವಿನ ಕೊರತೆಗೆ ಅವಧಿಗೆ ಮುನ್ನವೇ ತಳ್ಳಬಹುದು.

ರೋಗ ಸೂಚನೆ ಹಾಗೂ ಲಕ್ಷಣಗಳು

ಸಹಪ್ರತಿಬಂಧಕಗಳು

ಬುದ್ಧಿ ಮಾಂದ್ಯತೆ ಕೇವಲ ಜ್ಞಾಪಕ ಶಕ್ತಿ ಸಮಸ್ಯೆಯಲ್ಲ. ಇದರ ಜೊತೆಗೆ ಮಾನಸಿಕ ಮತ್ತು ವರ್ತನೆ ಸಮಸ್ಯೆಗಳು ಬುದ್ಧಿ ಮಾಂದ್ಯತೆಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾಡಬಹುದು. ಇದು ಜೀವನ ಗುಣಮಟ್ಟ, ಆರೈಕೆ ಮಾಡುವವರ ಮೇಲೆ ಪರಿಣಾಮ ಬೀರಬಹುದು, ಮತ್ತು ಸಂಸ್ಥೆಗೆ ಸೇರ್ಪಡೆ ಮಾಡುವುದು ಅಗತ್ಯವಾಗಬಹುದು.

ಬುದ್ಧಿ ಮಾಂದ್ಯತೆಯನ್ನು ಹೊಂದಿರುವ ಶೇ. 20ರಿಂದ 30ರಷ್ಟು ವ್ಯಕ್ತಿಗಳಿಗೆ ಮಾನಸಿಕ ಖಿನ್ನತೆ ಕಾಡಬಹುದು. ಮತ್ತು ಶೇ. 20ರಷ್ಟು ವ್ಯಾಕುಲತೆ ಕಾಡಬಹುದು.[12] ಬುದ್ಧಿ ವಿಕಲ್ಪದ (ಹಿಂಸೆಯತ್ತ ವಾಲುವುದು) ಮತ್ತು ಪ್ರತಿರೋಧ/ಆಕ್ರಮಣಶೀಲತೆಯೂ ಕೂಡ ಕೆಲ ಬಾರಿ ಬುದ್ಧಿ ಮಾಂದ್ಯತೆಯೊಂದಿಗೆ ಸೇರ್ಪಡೆಯಾಗಬಹುದು. ಬುದ್ಧಿಮಾಂದ್ಯತೆಯನ್ನು ನಿರ್ಧರಿಸುವುದಕ್ಕೆ ಕಾರಣವಾಗಿರುವ ಇವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಮತ್ತು ಸ್ವತಂತ್ರ ಚಿಕಿತ್ಸೆ ಕೈಗೊಳ್ಳಬೇಕಾದ ಅಗತ್ಯವಿದೆ. [೧]

ತನಗೂ ಮತ್ತು ಇತರರಿಗೂ ಅಪಾಯಕಾರಿ

ಬುದ್ಧಿ ಮಾಂದ್ಯತೆ ಇರುವ ವ್ಯಕ್ತಿಯ ವಾಹನ ಚಾಲನೆ ಮಾಡಿದರೆ ಅದರಿಂದ ಸ್ವತಃ ಮತ್ತು ಇತರರಿಗೂ ಗಂಭೀರವಾದ ಗಾಯ ಮತ್ತು ಸಾವು ಸಂಭವಿಸಬಹುದು ಎಂದು ಕೇನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ವರದಿ ಮಾಡಿದೆ. ವಾಹನ ಚಾಲನೆ ಹೊರಡುವ ಸಂದರ್ಭದಲ್ಲಿ ವೈದ್ಯರು ಸರಿಯಾದ ಚಿಕಿತ್ಸೆಗೆ ಸೂಚಿಸಬೇಕು. [೨]

ಬುದ್ಧಿ ಮಾಂದ್ಯ ಅಥವಾ ಇನ್ನಿತರ ಮಾನಸಿಕ ಅಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳ ಮಾನಸಿಕ ಪರೀಕ್ಷೆಯನ್ನು ನಡೆಸುವುದಕ್ಕೆ ಯುನೈಟೆಡ್ ಸ್ಟೇಟ್ಸ್ ನ ಪ್ಲೋರಿಡಾದ ಬೇಕರ್ ಕಾನೂನು, ನ್ಯಾಯಾಂಗ ಜಾರಿ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುತ್ತದೆ.[ ಸೂಕ್ತ ಉಲ್ಲೇಖನ ಬೇಕು] ಪರರಿಗೂ ಮತ್ತು ಸ್ವತಃಕ್ಕೂ ಅಪಾಯವಾಗಬಲ್ಲದಂತಹ ಎಲ್ಲ ರೀತಿಯ ಮಾನಸಿಕ ಕಾಯಿಲೆಗಳಿಂದ ನರಳುತ್ತಿರುವ ವ್ಯಕ್ತಿಗಳನ್ನು ಪರಿಶೀಲನೆಯ ಉದ್ದೇಶ, ಆರೈಕೆ ಮತ್ತು ಚಿಕಿತ್ಸೆಗಾಗಿ ಯುನೈಟೆಡ್ ಕಿಂಗಡಮ್ ನಲ್ಲಿ ಮೆಂಟಲ್ ಹೆಲ್ತ್ ಆಕ್ಟ್ 1983ರ ಪ್ರಕಾರ ವಶಕ್ಕೆ ತೆಗೆದುಕೊಳ್ಳಬಹುದು. ಒಂದು ವೇಳೆ ರೋಗಿಯ ಸಂಬಂಧಿಕರು ಮತ್ತು ಸ್ನೇಹಿತರು ಆರೈಕೆಯನ್ನು ಖಚಿತಪಡಿಸಿದಲ್ಲಿ ಇದನ್ನು ತಪ್ಪಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಕೊನೆಯದಾಗಿ ರೋಗಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.

ಯುನೈಟೆಡ್ ಕಿಂಗಡಮ್ ನ ಡಿವಿಎಲ್ಎ (ಡ್ರೈವಿಂಗ್ ಆಂಡ್ ವೆಹಿಕಲ್ ಲೈಸೆನ್ಸಿಂಗ್ ಏಜೆನ್ಸಿ) ಪ್ರಕಾರ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿರುವವರು ಅದರಲ್ಲೂ, ಅಲ್ಪಾವಧಿ ಜ್ಞಾಪಕ ಶಕ್ತಿ, ಏಕಾಗ್ರತೆಯ ಕೊರತೆ, ದೂರದೃಷ್ಟಿ ಅಥವಾ ತೀರ್ಮಾನ ತೆಗೆದುಕೊಳ್ಳುವಲ್ಲಿ ಅಸಾಮರ್ಥ್ಯವಿರುವವರು ಬಹುತೇಕ ವಾಹನ ಚಾಲನೆಗೆ ಅರ್ಹರಾಗಿರುವುದಿಲ್ಲ ಎಂದು ಹೇಳುತ್ತದೆ. ಮತ್ತು ಇಂತಹ ಸಂದರ್ಭಗಳಲ್ಲಿ ಡಿವಿಎಲ್ಎಗೆ ಮಾಹಿತಿ ನೀಡಬೇಕು ಇದರಿಂದಾಗಿ ಪರವಾನಗಿಯನ್ನು ರದ್ದುಪಡಿಸಬಹುದಾಗಿದೆ. ಆದರೆ ಅವರು, ಇದನ್ನು ಕಡಿಮೆ ಗಂಭೀರತೆ ಇರುವ ಪ್ರಕರಣಗಳಲ್ಲಿ ಮತ್ತು ಅವಧಿಗೆ ಮುನ್ನ ರೋಗದಿಂದ ಬಳಲುತ್ತಿರುವವರು ಮತ್ತು ಆ ವೈದ್ಯಕೀಯ ವರದಿಗೆ ಇನ್ನೂ ಬರಬೇಕಾದ ಆ ವಾಹನ ಚಾಲಕರು ಪರವಾನಗಿ ನೀಡಲಾಗುತ್ತದೆ.

Other Languages
Alemannisch: Demenz
العربية: خرف
azərbaycanca: Demensiya
беларуская: Дэменцыя
беларуская (тарашкевіца)‎: Дэмэнцыя
български: Деменция
bosanski: Demencija
català: Demència
čeština: Demence
Cymraeg: Gorddryswch
dansk: Demens
Deutsch: Demenz
Zazaki: Demans
Ελληνικά: Άνοια
English: Dementia
Esperanto: Demenco
español: Demencia
eesti: Dementsus
euskara: Dementzia
فارسی: زوال عقل
suomi: Dementia
français: Démence
Frysk: Demintens
Gaeilge: Néaltrú
galego: Demencia
Avañe'ẽ: Tarova
ગુજરાતી: ડિમેન્શિયા
עברית: שיטיון
hrvatski: Demencija
magyar: Demencia
Հայերեն: Մարազմ
Bahasa Indonesia: Demensia
italiano: Demenza
日本語: 認知症
қазақша: Алжу
한국어: 치매
Kurdî: Demenza
Latina: Dementia
Lëtzebuergesch: Demenz
Limburgs: Verkiensje
lietuvių: Silpnaprotystė
latviešu: Plānprātība
македонски: Деменција
മലയാളം: മേധാക്ഷയം
Bahasa Melayu: Demensia
Malti: Demenzja
Nederlands: Dementie
norsk: Demens
polski: Otępienie
پښتو: عقل زوال
português: Demência
русский: Деменция
sicilianu: Demenza
Scots: Dementia
srpskohrvatski / српскохрватски: Demencija
Simple English: Dementia
slovenčina: Demencia
slovenščina: Demenca
Soomaaliga: Xusuusla'aanta
shqip: Demenca
српски / srpski: Деменција
Basa Sunda: Déménsia
svenska: Demens
Kiswahili: Dimenshia
தமிழ்: மறதிநோய்
Tagalog: Demensiya
Türkçe: Demans
українська: Деменція
اردو: زوال عقل
Tiếng Việt: Suy giảm trí nhớ
Vahcuengh: Binghfatmwnh
中文: 失智症
粵語: 痴呆