ಫ್ರೆಡ್ರಿಕ್ ಎಂಗೆಲ್ಸ್

ಫ್ರೆಡ್ರಿಕ್ ಎಂಗೆಲ್ಸ್ 1820-1895. ಸಾಮೂಹಿಕ ಸ್ವಾಮ್ಯವಾದಿ (ಕಮ್ಯೂನಿಸ್ಟ್). ಶ್ರಮಜೀವಿಗಳ ನಾಯಕ. ಕಾರ್ಲ್ ಮಾರ್ಕ್ಸ್ ನೊಡನೆ ಸಹಕರಿಸಿ ಚಾರಿತ್ರಿಕ ಭೌತವಾದ ಬೆಳೆಸಿದವನು.

ಬಾಲ್ಯ

ಜರ್ಮನಿಯ ಬಾರ್ಮೆನ್ ಕೈಗಾರಿಕಾ ಪಟ್ಟಣದಲ್ಲಿ 1820ರ ನವೆಂಬರ್ 28ರಂದು ಜನಿಸಿದ; ಲಂಡನ್ನಿನಲ್ಲಿ ಸತ್ತ ತಂದೆಯ ಎಂಟು ಮಕ್ಕಳ ಪೈಕಿ ಎಂಗೆಲ್ಸನೇ ಹಿರಿಯ. ತಂದೆ ಹತ್ತಿಗಿರಣಿಯೊಂದರ ಒಡೆಯ; ಇನ್ನೊಂದರ ಪಾಲುದಾರ; ವ್ಯವಹಾರವಿದೆ. ಎಂಗೆಲ್ಸ್ ಬೆಳೆದದ್ದು ಸಾಂಪ್ರದಾಯಿಕ ಮತದ ವಾತಾವರಣದಲ್ಲಿ. ಬಾರ್ಮೆನ್, ಎಲ್ಬರ್‍ಫೆಲ್ಡ್‍ಗಳಲ್ಲಿ ಈತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ ಮೇಲೆ ನ್ಯಾಯಶಾಸ್ತ್ರ ವ್ಯಾಸಂಗ ಮಾಡಬೇಕೆಂಬ ಉದ್ದೇಶದಿಂದ ಮೊದಲು ತನ್ನ ತಂದೆಯ ಉದ್ಯಮದಲ್ಲೂ ಅನಂತರ ಬ್ರೆಮೆನ್‍ನಲ್ಲೂ ವ್ಯಾಪಾರ ಸಮಸ್ಯೆಗಳನ್ನು ಕುರಿತು ಅಧ್ಯಯನ ನಡೆಸಿದ. ಆಮೇಲೆ ಒಂದು ವರ್ಷ ಸೈನ್ಯಸೇವೆಯನ್ನೂ ಸಲ್ಲಿಸಿದ್ದುಂಟು. ಅದೇ ಸಂದರ್ಭದಲ್ಲಿ ಬಲಿಗನ್ ವಿಶ್ವವಿದ್ಯಾಲಯದಲ್ಲಿ ಮತಧರ್ಮಗಳ ಇತಿಹಾಸವನ್ನು ವಿಶೇಷ ಅಧ್ಯಯನದ ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡಿದ. ಅಲ್ಲಿ ಶೆಲ್ಲಿಂಗನ ವಿಜ್ಞಾನ ವಿರೋಧಿ ನಿಲುವನ್ನು ಅಂಧಶ್ರದ್ಧೆ ಮತ್ತು ಗುಲಾಮಿ ಭಕ್ತಿಯೆಂದು ಕಟುವಾಗಿ ಟೀಕಿಸಿದ ಎಂಗೆಲ್ಸ್. 1842ರಲ್ಲಿ ಮತ್ತೆ ತನ್ನ ವಾಣಿಜ್ಯ ತರಬೇತಿ ಮುಂದುವರಿಸಿ ತಂದೆಯ ಪ್ರತಿನಿಧಿಯಾಗಿ ಮ್ಯಾಂಚೆಸ್ಟರಿನಲ್ಲಿ (ಇಂಗ್ಲೆಂಡ್) ನೆಲೆಸಿ ಅರಳೆಯ ವ್ಯಾಪಾರದಲ್ಲಿ ನಿರತನಾದ. ಅದು ಹೆಚ್ಚು-ಕಡಿಮೆ ಎಂಗೆಲ್ಸನ ಬಾಳು ಕವಲೊಡೆದ ಕಾಲ. ಆಗಲೆ ಎಂಗೆಲ್ಸ್ ಹತ್ತಾರು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿಕೊಂಡಿದ್ದ.

ಮಧ್ಯಮವರ್ಗದ ಕ್ಯಾಲ್ವಿನಿಸ್ಟ್ ದೈವಜ್ಞಾನಿಗಳ ಶ್ರದ್ಧಾಭಕ್ತಿ ಪುರಸ್ಸರವಾದ ತೃಪ್ತ ಮನೋಭಾವವೂ ಕುಡುಕ ಕಾರ್ಮಿಕವರ್ಗದ ಕಷ್ಟನಿಷ್ಠುರಗಳೂ ಎಳೆವಯಸ್ಸಿನ ಎಂಗೆಲ್ಸನ ಮೇಲೆ ತೀವ್ರ ಪರಿಣಾಮ ಬೀರಿದವು. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಈತ ಆಸ್ವಾಲ್ಡ್ ಎಂಬ ಲೇಖನ ನಾಮದಿಂದ ಈ ಪರಿಸ್ಥಿತಿಯನ್ನು ಬಣ್ಣಿಸಿ ಬರೆದ. ಆಗಲೇ ಎಂಗೆಲ್ಸನ ಬರೆವಣಿಗೆಯ ಶಕ್ತಿ ಪ್ರಕಟವಾಯಿತು. ಕ್ರಮಕ್ರಮವಾಗಿ ಎಂಗೆಲ್ಸ್ ಮತಶ್ರದ್ಧೆಯ ಮನೋಭಾವದಿಂದ ಸಿಡಿದು ದೂರ ಸಾಗಿದ. 1842ರಲ್ಲಿ ಇದು ಸಂಪೂರ್ಣವಾಯಿತು. ಈ ದೃಷ್ಟಿಯಿಂದಲೂ ಆ ವರ್ಷ ಎಂಗೆಲ್ಸನ ಬಾಳಿನಲ್ಲಿ ಮಹತ್ತ್ವದ್ದು. ವಿಶ್ವವಿದ್ಯಾನಿಲಗಳಿಂದ ಯಾವ ದೊಡ್ಡ ಪದವಿಯನ್ನೂ ಪಡೆಯದೆ ತನ್ನ ಮೇಧಾವಿತನವನ್ನು ಬೆಳಗಿಸಿರುವ ಮಹಾನ್ ಚಿಂತಕರ ಸಾಲಿನಲ್ಲಿ ಎಂಗೆಲ್ಸ್‍ಗೆ ಖಚಿತವಾದ ಸ್ಥಾನವಿದೆ.

Other Languages
Afrikaans: Friedrich Engels
aragonés: Friedrich Engels
asturianu: Friedrich Engels
azərbaycanca: Fridrix Engels
башҡортса: Фридрих Энгельс
беларуская: Фрыдрых Энгельс
беларуская (тарашкевіца)‎: Фрыдрых Энгельс
български: Фридрих Енгелс
brezhoneg: Friedrich Engels
čeština: Friedrich Engels
Esperanto: Friedrich Engels
français: Friedrich Engels
Gàidhlig: Friedrich Engels
客家語/Hak-kâ-ngî: Friedrich Engels
hornjoserbsce: Friedrich Engels
Kreyòl ayisyen: Friedrich Engels
Bahasa Indonesia: Friedrich Engels
íslenska: Friedrich Engels
Basa Jawa: Friedrich Engels
Lëtzebuergesch: Friedrich Engels
Lingua Franca Nova: Friedrich Engels
lietuvių: Friedrich Engels
македонски: Фридрих Енгелс
Bahasa Melayu: Friedrich Engels
မြန်မာဘာသာ: ဖရစ်ဒရစ် အန်းဂဲ
Nederlands: Friedrich Engels
norsk nynorsk: Friedrich Engels
Piemontèis: Friedrich Engels
português: Friedrich Engels
Runa Simi: Friedrich Engels
rumantsch: Friedrich Engels
sicilianu: Friedrich Engels
srpskohrvatski / српскохрватски: Friedrich Engels
Simple English: Friedrich Engels
slovenčina: Friedrich Engels
slovenščina: Friedrich Engels
српски / srpski: Фридрих Енгелс
татарча/tatarça: Фридрих Энгельс
українська: Фрідріх Енгельс
oʻzbekcha/ўзбекча: Engels Fridrix
Tiếng Việt: Friedrich Engels
მარგალური: ფრიდრიხ ენგელსი
Bân-lâm-gú: Friedrich Engels
粵語: 恩格斯