ಫರ್ಡಿನೆಂಡ್ ಡಿ ಸಸ್ಯೂರ್

ಫರ್ಡಿನೆಂಡ್ ಡಿ ಸಸ್ಯೂರ್
ಫರ್ಡಿನೆಂಡ್ ಡಿ ಸಸ್ಯೂರ್
ಜನನನವಂಬರ್ ೨೬, ೧೮೫೭
ಜಿನೆವಾ, ಸ್ವಿಟ್ಝರ್ಲ್ಯಾಂಡ್
ಮರಣಫೆಬ್ರವರಿ ೨೨, ೧೯೧೩
ಸ್ವಿಟ್ಝರ್ಲ್ಯಾಂಡ್
ವೃತ್ತಿಭಾಷಾ ಶಾಸ್ತ್ರಜ್ಞ
ರಾಷ್ಟ್ರೀಯತೆಸ್ವಿಸ್

ಫರ್ಡಿನೆಂಡ್ ಡಿ ಸಸ್ಯೂರ್ (೨೬ ನವೆಂಬರ್ ೧೮೫೭-೨೨ಫೆಬ್ರವರಿ ೧೯೧೩) ೨೦ ನೇ ಶತಮಾನದ ಸ್ವಿಸ್ ನ ಭಾಷಾ ವಿಜ್ಞಾನಿ ಹಾಗೂ ಸಂಕೇತ ವಿಜ್ಞಾನಿ.ಭಾಷಾ ವಿಜ್ಞಾನ ಹಾಗೂ ಸಂಕೇತ ವಿಜ್ಞಾನದ ಬೆಳವಣಿಗೆಯಲ್ಲಿ ಇವನ ಕೊಡುಗೆ ಗಮನಾರ್ಹವಾದದ್ದು. ಇವನನ್ನು ೨೦ ನೇ ಶತಮಾನದ ಭಾಷಾ ವಿಜ್ಞಾನದ ಪಿತಾಮಹನೆಂದು ಪರಿಗಣಿಸಬಹುದು ಹಾಗೂ ಸಂಕೇತ ವಿಜ್ಞಾನದ ಪಿತಾಮಹರುಗಳಲ್ಲಿ (ಚಾರ್ಲ್ಸ್ ಸ್ಯಾಂಡರ್ಸ್ ಫೇರ್ಯ್ಸ್) ಕೂಡ ಒಬ್ಬ.[೧]

ಇವನ ಭಾಷಾಂತರಕಾರರಲ್ಲಿ ಒಬ್ಬನಾದ ರಾಯ್ ಹ್ಯಾರಿಸ್, ಭಾಷಾ ವಿಜ್ಞಾನಕ್ಕೆ ಹಾಗೂ ಭಾಷಾದ್ಯಯನಕ್ಕೆ ನೀಡಿದ ಕೊಡುಗೆಗಳನ್ನು ಈ ಕೆಳಕಂಡಂತೆ ವಿವರಿಸುತ್ತಾನೆ."ಪದಗಳು ಕೇವಲ ಶಬ್ದದ ಗುಂಪು ಅಥವಾ ಸಂವಹನವನ್ನು ಕಾಯ್ದುಕೊಳ್ಳುವಂತವುಗಳು. ಅವುಗಳು ಪ್ರಪಂಚದಲ್ಲಿ ಮಾನವನಿಂದ ರಚಿಸಲ್ಪಟ್ಟ ಹಾಗೂ ಉಚ್ಚಾರಿಸಲ್ಪಟ್ಟ ಸಾಮಾಜಿಕ, ಅಗತ್ಯ ವಾದ ಉಪಕರಣಗಳಿಂದ ಸಂಗ್ರಹಿಸಲ್ಪಟ್ಟ ಉಪಕರಣಗಳು. ಇದು ೨೦ ನೇ ಶತಮಾನದ ಮಾನವಶಾಸ್ತ್ರದ ಎಲ್ಲಾ ಮಿತಿಗಳನ್ನು ಭಾಷಾ ದ್ರುಷ್ಟಿಕೋನದ ಆಳವಾದ......... ಇದು ವಿಶೇಷವಾಗಿ ಭಾಷಾ ವಿಜ್ಞಾನದ,ತತ್ವಶಾಸ್ತ್ರ,ಮನೋವಿಜ್ಞಾನ,ಸಮಾಜಶಾಸ್ತ್ರ,ಹಾಗೂ ಮಾನವಶಾಸ್ತ್ರದಲ್ಲಿ ಗುರುತಿಸಿಕೊಂಡಿದೆ."

ನಂತರ ಅವು ಹೆಚ್ಚುಕಾಲ ವಿಮರ್ಶಾತ್ಮಕವಾಗಿ ಹಾಗೂ ವಿಸ್ತಾರತೆಯನ್ನು ಹೊಂದಿದ್ದು, ಸಸ್ಯೂರ್ ನಿಂದ ಪರಿಚಯಿಸಲ್ಪಟ್ಟ ಸಂಘಟನಾಯಾಮಗಳು ಭಾಷಾ ಸಂಗತಿಗೆ ಸಮಕಾಲೀನ ಮಾರ್ಗಗಳ ಮುಂದುವರಿಕೆಗೆ ಸಹಾಯಕವಾಗಿದೆ.ಫ್ರಾಗ್ ಸ್ಕೂಲ್ನ ಭಾಷಾ ವಿಜ್ಞಾನಿ ಜಾನ್ ಮುಕರೊಸ್ಕಿ ಸಸ್ಯೂರ್ ನ "ಭಾಷಾ ವಿಜ್ಞಾನ ಸಂಕೇತದ ಆಂತರಿಕ ರಚನೆ ಶಬ್ದದ ಆಕರಗಳಿಂದ ಮತ್ತು ಮಾನಸಿಕ ಪ್ರಕ್ರಿಯೆಯಿಂದ ಪ್ರತ್ಯೇಕಿಸಲ್ಪಟ್ಟೈದೆ " ಎಂಬ ಅನ್ವೇಷಣೆಯನ್ನು ತಿಳಿಸಿದ್ದಾನೆ, ಮತ್ತು ಈ ಬೆಳವಣಿಗೆಯಲ್ಲಿ "ಇದರೊಂದಿಗೆ ಹೊಸ ಮಾರ್ಗಗಳು ಕೇವಲ ಭಾಷಾ ವಿಜ್ಞಾನಕ್ಕಲ್ಲದೆ ಮುಂದಿನ ಸಾಹಿತ್ಯದ ಸಿದ್ದಾಂತಕ್ಕೆ ಕೂಡ ತೋರುತ್ತದೆ." ರುಕ್ವಾಯ್ ಹಸನ್ ನ ವಾದ "ಸಸ್ಯೂರ್ ನ ಭಾಷಾ ವಿಜ್ಞಾನ ಸಂಕೇತ ಸಿದ್ದಾಂತದ ಪ್ರಭಾವ ಹೇಗಿತ್ತೆಂದರೆ ಆಧುನಿಕ ಭಾಷಾಶಾಸ್ತ್ರಜ್ನರು ಮತ್ತು ಅವರ ಸಿದ್ದಾಂತಗಳು ಸಸ್ಯೂರ್ ನ ಆಕರವನ್ನು ಹೊಂದಿವೆ:ಅವು ಪೂರ್ವ-ಸಸ್ಯೂರ್ ನ ಕಾಲ,ಸಸ್ಯೂರ್ ನ ಕಾಲ, ಸಸ್ಯೂರ್ ನ ವಿರೋಧ, ಸಸ್ಯೂರ್ ನ ನಂತರ ಅಥವಾ ಸಸ್ಯೂರ್ ನದ್ದಲ್ಲ ಎಂಬುದಾಗಿ ಕಂಡುಬರುತ್ತವೆ.

Other Languages
azərbaycanca: Ferdinand de Sossür
словѣньскъ / ⰔⰎⰑⰂⰡⰐⰠⰔⰍⰟ: Фєрдинандъ дє Соссѷръ
Kreyòl ayisyen: Ferdinand de Saussure
Bahasa Indonesia: Ferdinand de Saussure
Lëtzebuergesch: Ferdinand de Saussure
norsk nynorsk: Ferdinand de Saussure
srpskohrvatski / српскохрватски: Ferdinand de Saussure
slovenščina: Ferdinand de Saussure
српски / srpski: Фердинанд де Сосир
українська: Фердинан де Сосюр
Tiếng Việt: Ferdinand de Saussure
Bân-lâm-gú: Ferdinand de Saussure
粵語: 索雪