ಪ್ರೀಮಿಯರ್‌ ಲೀಗ್‌‌

ಪ್ರೀಮಿಯರ್‌ ಲೀಗ್‌‌
150px
ದೇಶಇಂಗ್ಲೆಂಡ್ England
ಒಕ್ಕೂಟUEFA
ಸ್ಥಾಪಿಸಲಾಯಿತು20 February 1992
ತಂಡಗಳ ಸಂಖ್ಯೆ20
ಪಿರಮಿಡ್ನಲ್ಲಿನ ಮಟ್ಟಗಳು1
ಗೆ ಗಡೀಪಾರುFootball League Championship
ದೇಶೀಯ ಕಪ್(ಗಳು)FA Cup, League Cup
ಅಂತರರಾಷ್ಟ್ರೀಯ ಕಪ್ (ಗಳು)Champions League, Europa League
ಕೊನೆಯ ಚಾಂಪಿಯನ್ಶಿಪ್ಗಳುManchester United
(2008–09)
ಹೆಚ್ಚಿನ ಚಾಂಪಿಯನ್ಶಿಪ್ಗಳುManchester United (11)
ಟಿವಿ ಪಾಲುದಾರರುSky Sports, PremierLeague.com
2009–10 Premier League

ಪ್ರೀಮಿಯರ್‌ ಲೀಗ್‌‌ ಎಂಬುದು ಅಸೋಸಿಯೇಷನ್‌ ಫುಟ್‌ಬಾಲ್‌‌ ಕ್ಲಬ್‌ಗಳ ಒಂದು ಆಂಗ್ಲ ವೃತ್ತಿಪರ ಲೀಗ್‌‌. ಆಂಗ್ಲ ಫುಟ್‌ಬಾಲ್‌‌ ಲೀಗ್‌‌ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಇದು, ರಾಷ್ಟ್ರದ ಪ್ರಾಥಮಿಕ ಫುಟ್‌ಬಾಲ್‌‌ ಸ್ಪರ್ಧೆಯಾಗಿದೆ. 20 ಕ್ಲಬ್‌ಗಳು ಭಾಗವಹಿಸುವ ಈ ಸ್ಪರ್ಧೆಯು, ಬಡತಿ ಹಾಗೂ ವರ್ಗಾವಣೆಯ ವ್ಯವಸ್ಥೆಯಲ್ಲಿ ದ ಫುಟ್‌ಬಾಲ್‌‌ ಲೀಗ್‌‌ನೊಂದಿಗೆ ಕೆಲಸ ಮಾಡುತ್ತದೆ. ಪ್ರೀಮಿಯರ್‌ ಲೀಗ್‌‌ ಒಂದು ಸಂಸ್ಥೆಯಾಗಿದ್ದು ಅದರ 20 ಸದಸ್ಯ ಕ್ಲಬ್‌ಗಳು ಷೇರುದಾರರಾಗಿ ವರ್ತಿಸುತ್ತವೆ. ಕ್ರೀಡಾಋತುಗಳು ಆಗಸ್ಟ್‌ನಿಂದ ಮೇವರೆಗೆ ನಡೆಯುತ್ತಿದ್ದು, ಪ್ರತಿ ತಂಡವು 38 ಪಂದ್ಯಗಳನ್ನಾಡುತ್ತಾ ಒಟ್ಟಾರೆ ಕ್ರೀಡಾಋತುವಿನಲ್ಲಿ 380 ಪಂದ್ಯಗಳು ನಡೆಯುತ್ತವೆ. ಬಹಳಷ್ಟು ಪಂದ್ಯಗಳನ್ನು ಶನಿವಾರಗಳು ಹಾಗೂ ಭಾನುವಾರಗಳಂದು ನಡೆಸಲಾಗುತ್ತದಾದರೂ, ಕೆಲ ಪಂದ್ಯಗಳನ್ನು ವಾರದ ದಿನಗಳ ಸಂಜೆಯಲ್ಲಿ ನಡೆಸಲಾಗುತ್ತದೆ. ಬಾರ್ಕ್ಲೇಸ್‌‌ ಬ್ಯಾಂಕ್‌ ಇದನ್ನು ಪ್ರಾಯೋಜಿಸುತ್ತದಾದರಿಂದ ಅಧಿಕೃತವಾಗಿ ಬಾರ್ಕ್ಲೇಸ್‌‌ ಪ್ರೀಮಿಯರ್‌ ಲೀಗ್‌‌ ಎಂದೇ ಕರೆಸಿಕೊಳ್ಳುತ್ತದೆ.

1888ರಲ್ಲಿ ಮೂಲವಾಗಿ ಸ್ಥಾಪಿಸಲಾಗಿದ್ದ, ಲಾಭಕರವಾದ ಕಿರುತೆರೆ ಪ್ರಸಾರಹಕ್ಕುಗಳ ವ್ಯವಹಾರದ ಲಾಭ ಪಡೆಯುತ್ತಿದ್ದ ದ ಫುಟ್‌ಬಾಲ್‌‌ ಲೀಗ್‌ನಿಂದ ಹೊರಬರಲು ಫುಟ್‌ಬಾಲ್‌‌ ಲೀಗ್‌‌ ಫರ್ಸ್ಟ್‌ ಡಿವಿಷನ್‌/ಪ್ರಥಮ ವಿಭಾಗದ ಕ್ಲಬ್‌ಗಳು ತೆಗೆದುಕೊಂಡ ನಿರ್ಧಾರದ ನಂತರ 20 ಫೆಬ್ರವರಿ 1992ರಂದು FA ಪ್ರೀಮಿಯರ್‌ ಲೀಗ್‌‌ ಆಗಿ ಸ್ಪರ್ಧೆಯನ್ನು ರೂಪಿಸಲಾಯಿತು. ಆಗಿನಿಂದ ಪ್ರೀಮಿಯರ್‌ ಲೀಗ್‌‌ ವಿಶ್ವದಲ್ಲೇ ಅತಿ ಹೆಚ್ಚು ನೋಡಲ್ಪಡುವ ಕ್ರೀಡಾ ಲೀಗ್‌‌ ಆಗಿದೆ.[೧] ಇದು ವಿಶ್ವದ ಅತ್ಯಂತ ಲಾಭಕರವಾದ ಫುಟ್‌ಬಾಲ್‌‌ ಲೀಗ್‌‌ ಆಗಿದೆ, 2007–08ರ ಸಾಲಿನಲ್ಲಿ ಒಟ್ಟಾರೆ ಕ್ಲಬ್‌ಗಳ ಆದಾಯವು £1.93 ಶತಕೋಟಿ ($3.15bn)ರಷ್ಟಿತ್ತು.[೨] ಲೀಗ್‌‌ಗಳು ಐರೋಪ್ಯ ಸ್ಪರ್ಧೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ತೋರಿದ ಸಾಧನೆ ಮೇರೆಗೆ ನೀಡಿದ UEFA ಗುಣಾಂಕಗಳಲ್ಲಿ ಸ್ಪೇನ್‌‌'ನ ಲಾ ಲಿಗಾ ಹಾಗೂ ಇಟಲಿ'ಯ ಸೆರೀ Aಗಳನ್ನು ಮೀರಿಸಿ ಪ್ರಥಮ ಸ್ಥಾನ ಪಡೆದಿದೆ.[೩]

21 ಏಪ್ರಿಲ್‌ 2010ರಂದು, ಪ್ರೀಮಿಯರ್‌ ಲೀಗ್‌‌ ಅಂತರರಾಷ್ಟ್ರೀಯ ವ್ಯಾಪಾರ ವಿಭಾಗದಲ್ಲಿನ ಸಾಧನೆಗೆ ಕ್ವೀನ್‌‌'ಸ್‌ ಅವಾರ್ಡ್‌ ಫಾರ್‌‌ ಎಂಟರ್‌ಪ್ರೈಸ್‌‌/ರಾಣಿಯವರ ಉದ್ದಿಮೆಗಳ ಪ್ರಶಸ್ತಿಯನ್ನು ಘನತೆವೆತ್ತ ರಾಣಿ ಎಲಿಜಬೆತ್‌ IIರಿಂದ ಪಡೆಯಿತು.[೪] ಪ್ರೀಮಿಯರ್‌ ಲೀಗ್‌‌ ಅಂತರರಾಷ್ಟ್ರೀಯ ವ್ಯವಹಾರಕ್ಕೆ ಅದು ನೀಡಿದ ಕೊಡುಗೆ ಹಾಗೂ ಆಂಗ್ಲ ಫುಟ್‌ಬಾಲ್‌‌ ಮತ್ತು ಯುನೈಟೆಡ್‌‌ ಕಿಂಗ್‌ಡಮ್‌‌'ನ ಪ್ರಸಾರೋದ್ಯಮಕ್ಕೆ ಇದು ತಂದುಕೊಡುವ ಮೌಲ್ಯಗಳಿಗಾಗಿ ಮಾನ್ಯತೆ ಪಡೆದಿದೆ.ಅಂತರರಾಷ್ಟ್ರೀಯ ವ್ಯವಹಾರ ಪ್ರಶಸ್ತಿಯು 2007ರಿಂದ 2009ರ ನಡುವಣ ಮೂರು ಸತತ 12-ತಿಂಗಳುಗಳ ಅವಧಿಗಳಲ್ಲಿ ಸಾಗರೋತ್ತರ ವರಮಾನ ಹಾಗೂ ವಾಣಿಜ್ಯ ಯಶಸ್ಸುಗಳಲ್ಲಿ ಗಮನಾರ್ಹ ಮಟ್ಟದ ಬೆಳವಣಿಗೆ ಕಂಡುದುದನ್ನು ಪರಿಗಣಿಸಿತ್ತು.

ಒಟ್ಟಾರೆಯಾಗಿ 43 ಕ್ಲಬ್‌ಗಳು ಪ್ರೀಮಿಯರ್‌ ಲೀಗ್‌‌ನಲ್ಲಿ ಸ್ಪರ್ಧಿಸಿದ್ದವಾದರೂ, ಕೇವಲ ನಾಲ್ಕು ಮಾತ್ರ ಪ್ರಶಸ್ತಿಯನ್ನು ಗೆದ್ದಿವೆ : ಆರ್ಸೆನಲ್‌, ಬ್ಲಾಕ್‌‌ಬರ್ನ್‌ ರೋವರ್ಸ್‌‌, ಚೆಲ್ಸಿಯಾ, ಹಾಗೂ ಮ್ಯಾಂಚೆಸ್ಟರ್‌ ಯುನೈಟೆಡ್‌‌. 2008–09ರ ಕ್ರೀಡಾಋತುವಿನಲ್ಲಿ ಯಾವುದೇ ಪ್ರೀಮಿಯರ್‌ ಲೀಗ್‌‌ ತಂಡವು ಗೆದ್ದ ಅತಿ ಹೆಚ್ಚು ಬಾರಿಯಾದ ಹನ್ನೊಂದನೇ ಬಾರಿ ಪ್ರೀಮಿಯರ್‌ ಲೀಗ್‌‌ ಪ್ರಶಸ್ತಿಯನ್ನು ಗೆದ್ದ ಮ್ಯಾಂಚೆಸ್ಟರ್‌ ಯುನೈಟೆಡ್‌‌ ಪ್ರಸ್ತುತ ಚಾಂಪಿಯನ್ನರು.

ಪರಿವಿಡಿ

Other Languages
Afrikaans: Premier League
Ænglisc: Premier League
asturianu: Premier League
беларуская (тарашкевіца)‎: Прэм’ер-Ліга
čeština: Premier League
Ελληνικά: Πρέμιερ Λιγκ
Esperanto: F.A. Supra Ligo
español: Premier League
føroyskt: Premier League
hrvatski: FA Premier liga
Bahasa Indonesia: Liga Utama Inggris
italiano: Premier League
Lëtzebuergesch: Premier League
Limburgs: Premier League
lietuvių: Premier League
Baso Minangkabau: Liga Utamo Inggirih
Bahasa Melayu: Liga Perdana Inggeris
မြန်မာဘာသာ: ပရီးမီးယားလိဂ်
Nederlands: Premier League
norsk nynorsk: Premier League
português: Premier League
română: Premier League
srpskohrvatski / српскохрватски: Premijer liga
Simple English: English Premier League
slovenčina: FA Premier League
slovenščina: Premier League
Soomaaliga: Premier Leagueka
српски / srpski: Премијер лига
Türkçe: Premier League