ಪಳೆಯುಳಿಕೆ

ಮೂರು ಸಣ್ಣ ಸಾಲಿಗ್ರಾಮ ಪಳೆಯುಳಿಕೆಗಳು; ಪ್ರತಿಯೊಂದೂ ಸರಿಸುಮಾರಾಗಿ 1.5 ಸೆಂ.ಮೀ.ಯಷ್ಟು ಅಗಲವಾಗಿವೆ.
ಅಟಾಹ್‌ನ ಗ್ರೀನ್‌ ರಿವರ್‌ ಸ್ತರಕ್ಕೆ ಸೇರಿದ ಪ್ರಿಸ್ಕಾಕ್ಯಾರಾ ಲಿಯೋಪ್ಸ್‌ ಎಂಬ ಈಯಸೀನ್‌‌ ಕಾಲದ ಪಳೆಯುಳಿಕೆ ಮೀನು
ಶಿಲಾರೂಪದ ಮರಅಂತರ್‌‌ಖನಿಜ ನಿಕ್ಷೇಪಣ ಪ್ರಕ್ರಿಯೆಯಲ್ಲಿ ಮರ ಮತ್ತು ತೊಗಟೆಯ ಆಂತರಿಕ ರಚನೆಯನ್ನು ಕಾಯ್ದುಕೊಂಡುಹೋಗಲಾಗುತ್ತದೆ.

ಪಳೆಯುಳಿಕೆಗಳು ('ಫಾಸಿಲ್ಸ್‌‌' ಎಂಬ ಪದವು ಲ್ಯಾಟಿನ್‌‌ ಭಾಷೆಯ ಫಾಸಸ್‌ ಎಂಬ ಪದದಿಂದ ಬಂದಿದ್ದು, ಅಕ್ಷರಶಃ ಇದು "ಅಗೆಯುವಿಕೆಗೆ ಒಳಗಾಗಿರುವ" ಎಂಬ ಅರ್ಥವನ್ನು ನೀಡುತ್ತದೆ) ಪ್ರಾಚೀನ ಕಾಲಕ್ಕೆ ಅಥವಾ ತೀರಾ ಹಿಂದಿನ ಕಾಲಕ್ಕೆ ಸೇರಿರುವ ಪ್ರಾಣಿಗಳು, ಸಸ್ಯಗಳು, ಮತ್ತು ಇತರ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳು ಅಥವಾ ಕುರುಹುಗಳು ಆಗಿವೆ. ಆವಿಷ್ಕರಿಸಲ್ಪಟ್ಟ ಮತ್ತು ಆವಿಷ್ಕರಿಸಲ್ಪಡದ ಎರಡೂ ಪ್ರಕಾರಗಳಿಗೆ ಸೇರಿದ ಪಳೆಯುಳಿಕೆಗಳ ಪೂರ್ಣತೆ, ಮತ್ತು ಜೀವ್ಯವಶೇಷಗಳುಳ್ಳ (ಪಳೆಯುಳಿಕೆಯನ್ನು-ಒಳಗೊಂಡಿರುವ) ಬಂಡೆಯ ಸ್ತರಗಳು ಮತ್ತು ಸಂಚಿತ ಪದರಗಳಲ್ಲಿನ (ಸ್ತರಶ್ರೇಣಿಗಳು) ಅವುಗಳ ಇರಿಸುವಿಕೆಯು ಪಳೆಯುಳಿಕೆಯ ದಾಖಲೆ ಎಂದು ಕರೆಸಿಕೊಳ್ಳುತ್ತದೆ. ಭೂವೈಜ್ಞಾನಿಕ ಕಾಲದ ಉದ್ದಗಲಕ್ಕೂ ಇದ್ದ ಪಳೆಯುಳಿಕೆಗಳ ಅಧ್ಯಯನ, ಅವು ಹೇಗೆ ರೂಪುಗೊಂಡವು, ಮತ್ತು ವರ್ಗಗಳ (ಜೀವಿವಿಕಾಸದ) ನಡುವಿನ ವಿಕಸನೀಯ ಸಂಬಂಧಗಳ ಸ್ವರೂಪವೆಂಥದು ಇವೇ ಮೊದಲಾದ ವಿಷಯಗಳು, ಪ್ರಾಗ್ಜೀವಶಾಸ್ತ್ರ ವಿಜ್ಞಾನದ ಕೆಲವೊಂದು ಅತ್ಯಂತ ಪ್ರಮುಖ ಕಾರ್ಯಚಟುವಟಿಕೆಗಳಾಗಿವೆ.ಇಂಥದೊಂದು ಸಂರಕ್ಷಿಸಲ್ಪಟ್ಟ ಮಾದರಿಯು ಒಂದು ವೇಳೆ ಒಂದಷ್ಟು ಕನಿಷ್ಟ ವಯಸ್ಸಿಗಿಂತಲೂ ಹಳೆಯದಾಗಿದ್ದಲ್ಲಿ, ಅದು ಒಂದು "ಪಳೆಯುಳಿಕೆ" ಎಂದು ಕರೆಸಿಕೊಳ್ಳುತ್ತದೆ; ಮತ್ತು ಈ ಕನಿಷ್ಟ ವಯಸ್ಸು ಬಹುತೇಕ ವೇಳೆ 10,000 ವರ್ಷಗಳಷ್ಟು ಹಿಂದಿರುವ ಇಚ್ಛಾನುಸಾರವಾದ ದಿನಾಂಕವಾಗಿರುತ್ತದೆ.[೧]

ಆದ್ದರಿಂದ, ಹಾಲಸೀನ್‌ ಕಲ್ಪದ ಕಾಲದ ಪ್ರಾರಂಭದಲ್ಲಿನ ಅತ್ಯಂತ ಕಿರಿಯ ಪಳೆಯುಳಿಕೆಯಿಂದ ಮೊದಲ್ಗೊಂಡು, ಹಲವಾರು ಶತಕೋಟಿ ವರ್ಷಗಳಷ್ಟು ಹಳೆಯದಾದ ಆರ್ಕಿಯನ್‌ ಯುಗದ ಮಹಾಕಲ್ಪಕ್ಕೆ ಸೇರಿದ ಅತ್ಯಂತ ಹಳೆಯ ಪಳೆಯುಳಿಕೆಯವರೆಗೆ, ಪಳೆಯುಳಿಕೆಗಳ ವಯಸ್ಸಿನ ವ್ಯಾಪ್ತಿಯಿರುತ್ತದೆ. ಕೆಲವೊಂದು ಬಂಡೆಯ ಸ್ತರಶ್ರೇಣಿಗಳೊಂದಿಗೆ ನಿರ್ದಿಷ್ಟ ಪಳೆಯುಳಿಕೆಗಳು ಸಂಬಂಧಹೊಂದಿದ್ದವು ಎಂಬ ವೀಕ್ಷಣೆಗಳು, 19ನೇ ಶತಮಾನದಲ್ಲಿ ಆರಂಭಿಕ ಭೂವಿಜ್ಞಾನಿಗಳು ಒಂದು ಭೂವೈಜ್ಞಾನಿಕ ಕಾಲಪ್ರಮಾಣವನ್ನು ಗುರುತಿಸುವುದಕ್ಕೆ ಕಾರಣವಾದವು. 20ನೇ ಶತಮಾನದ ಆರಂಭದಲ್ಲಿ ಕಂಡುಬಂದ ರೇಡಿಯೋಮಾಪನದ ಕಾಲನಿರ್ಣಯ ಕೌಶಲಗಳ ಅಭಿವೃದ್ಧಿಯು, ಹಲವಾರು ಸ್ತರಶ್ರೇಣಿಗಳ ಸಂಖ್ಯಾತ್ಮಕ ಅಥವಾ "ಪರಿಪೂರ್ಣ" ವಯಸ್ಸನ್ನು ಮತ್ತು ಅದು ಒಳಗೊಂಡಿದ್ದ ಪಳೆಯುಳಿಕೆಗಳನ್ನು ತನ್ಮೂಲಕ ನಿರ್ಣಯಿಸುವಲ್ಲಿ ಭೂವಿಜ್ಞಾನಿಗಳಿಗೆ ಅವಕಾಶ ನೀಡಿತು.

ಈಗಲೂ ಇರುವ ಜೀವಿಗಳ ರೀತಿಯಲ್ಲಿ, ಅತಿ ಸೂಕ್ಷ್ಮವಾದ ಗಾತ್ರದಿಂದ ಮೊದಲ್ಗೊಂಡು ದೈತ್ಯಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ; ಏಕ ಬ್ಯಾಕ್ಟೀರಿಯಾ ಜೀವಕೋಶಗಳು [೨]ಹೊಂದಿರುವ ಒಂದು ಮೈಕ್ರೋಮೀಟರು ವ್ಯಾಸದ ಗಾತ್ರದಿಂದ, ಡೈನೋಸರ್‌‌‌ಗಳಂಥ ದೈತ್ಯಗಾತ್ರದ ಜೀವಿಗಳವರೆಗೆ ಮತ್ತು ಅನೇಕ ಮೀಟರುಗಳಷ್ಟು ಉದ್ದವಿದ್ದು ಅನೇಕ ಟನ್ನುಗಳವರೆಗೆ ತೂಗುವ ಮರಗಳ ಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ. ಇತ್ತೀಚೆಗಷ್ಟೇ ಸತ್ತ ಜೀವಿಯ ಕೇವಲ ಭಾಗವೊಂದನ್ನು ಒಂದು ಪಳೆಯುಳಿಕೆಯು ಸಾಮಾನ್ಯವಾಗಿ ಸಂರಕ್ಷಿಸುತ್ತದೆ; ಆ ಭಾಗವು ಸಾಮಾನ್ಯವಾಗಿ ಜೀವಿತಕಾಲದಲ್ಲಿ ಆಂಶಿಕವಾಗಿ ಖನಿಜೀಕರಿಸಲ್ಪಟ್ಟಿದ್ದ ಭಾಗವಾಗಿದ್ದು, ಕಶೇರುಕಗಳ ಮೂಳೆಗಳು ಮತ್ತು ಹಲ್ಲುಗಳು ಅಥವಾ ಅಕಶೇರುಕಗಳ ಕೈಟಿನ್‌‌‌‌‌ಯುಕ್ತ ಅಥವಾ ಸುಣ್ಣಯುಕ್ತ ಹೊರಕವಚಗಳು ಇದಕ್ಕೆ ಉದಾಹರಣೆಗಳಾಗಿರುತ್ತವೆ. ಮೃದು ಅಂಗಾಂಶಗಳ ಸಂರಕ್ಷಣೆಯು ಪಳೆಯುಳಿಕೆಯ ದಾಖಲೆಯಲ್ಲಿ ಅಪರೂಪವಾಗಿರುತ್ತದೆ. ಜೀವಿಯೊಂದು ತನ್ನ ಜೀವಿತಕಾಲದಲ್ಲಿ ಬಿಟ್ಟುಹೋಗಿದ್ದ ಗುರುತುಗಳನ್ನೂ ಸಹ ಪಳೆಯುಳಿಕೆಗಳು ಒಳಗೊಂಡಿರಬಹುದು; ಸರೀಸೃಪವೊಂದರ ಪಾದದ ಗುರುತು ಅಥವಾ ಹಿಕ್ಕೆಗಳು (ಪಳೆಯುಳಿಕೆಗಳಾಗಿರುವ ಹಿಕ್ಕೆಗಳು) ಈ ಗುಂಪಿಗೆ ಸೇರುತ್ತವೆ. ಈ ಬಗೆಯ ಪಳೆಯುಳಿಕೆಗಳನ್ನು ಶರೀರದ ಪಳೆಯುಳಿಕೆಗಳು ಎಂಬುದಕ್ಕೆ ತದ್ವಿರುದ್ಧವಾಗಿ, ಕುರುಹಿನ ಪಳೆಯುಳಿಕೆಗಳು (ಅಥವಾ ಹೆಜ್ಜೆಗುರುತಿನ ಪಳೆಯುಳಿಕೆಗಳು ) ಎಂದು ಕರೆಯಲಾಗುತ್ತದೆ. ಅಂತಿಮವಾಗಿ, ಕಣ್ಣಿಗೆ ಕಾಣದ ಆದರೆ ಜೀವರಾಸಾಯನಿಕ ಸಂಕೇತಗಳ ಸ್ವರೂಪದಲ್ಲಿ ಪತ್ತೆಹಚ್ಚಬಹುದಾದ ಕೆಲವೊಂದು ಗುರುತುಕಾರಕಗಳನ್ನು ಗತಜೀವನವು ಬಿಟ್ಟುಹೋಗುತ್ತದೆ; ಇಂಥವುಗಳನ್ನು ರಾಸಾಯನಿಕ ಪಳೆಯುಳಿಕೆಗಳು ಅಥವಾ ಜೈವಿಕ ಗುರುತುಕಾರಕಗಳು ಎಂದು ಕರೆಯಲಾಗುತ್ತದೆ.

ಪರಿವಿಡಿ

Other Languages
Afrikaans: Fossiel
Alemannisch: Fossil
العربية: مستحاثة
asturianu: Fósil
azərbaycanca: Fosil
تۆرکجه: فوسیل
беларуская: Акамянеласці
български: Вкаменелост
বাংলা: জীবাশ্ম
brezhoneg: Karrekaenn
bosanski: Fosili
català: Fòssil
Mìng-dĕ̤ng-ngṳ̄: Huá-siŏh
čeština: Fosilie
Cymraeg: Ffosil
dansk: Fossil
Deutsch: Fossil
Ελληνικά: Απολίθωμα
English: Fossil
Esperanto: Fosilio
español: Fósil
eesti: Kivistis
euskara: Fosil
فارسی: سنگواره
suomi: Fossiili
français: Fossile
Frysk: Fossyl
Gaeilge: Iontaise
galego: Fósil
עברית: מאובן
हिन्दी: जीवाश्म
hrvatski: Fosil
Kreyòl ayisyen: Fosil
magyar: Fosszília
Bahasa Indonesia: Fosil
Ido: Fosilo
íslenska: Steingervingur
italiano: Fossile
日本語: 化石
Basa Jawa: Fosil
қазақша: Қазындылар
한국어: 화석
Latina: Fossile
Lëtzebuergesch: Fossil
Limburgs: Fossiel
lietuvių: Fosilija
latviešu: Fosilijas
Basa Banyumasan: Fosil
македонски: Фосил
മലയാളം: ജീവാശ്മം
मराठी: जीवाश्म
Bahasa Melayu: Fosil
Plattdüütsch: Fossil
नेपाली: जीवावशेष
Nederlands: Fossiel
norsk nynorsk: Fossil
norsk: Fossil
occitan: Fossil
ଓଡ଼ିଆ: ଜୀବାଶ୍ମ
ਪੰਜਾਬੀ: ਪਥਰਾਟ
português: Fóssil
Runa Simi: Rumiyasqa
română: Fosilă
русский: Фоссилии
Scots: Fossil
سنڌي: فاسل
srpskohrvatski / српскохрватски: Fosil
සිංහල: පොසිල
Simple English: Fossil
slovenčina: Fosília
slovenščina: Fosil
shqip: Fosilet
српски / srpski: Фосил
Basa Sunda: Fosil
svenska: Fossil
Kiswahili: Kisukuku
తెలుగు: శిలాజము
Tagalog: Posil
Türkçe: Fosil
اردو: رکاز
Tiếng Việt: Hóa thạch
West-Vlams: Fossiel
Winaray: Posil
ייִדיש: פאסיל
中文: 化石
Bân-lâm-gú: Hòa-chio̍h
粵語: 化石