ನೋವು

ನೋವು ಸಂವೇದನವಾಹಕ ನರಗಳ ಮೂಲಕ ಪ್ರವಹಿಸಿ ಅನುಭವಕ್ಕೆ ಬರುವ ಅಹಿತಕರ ಅನುಭವ; ದೇಹಕ್ಕೆ ಒದಗಿರುವ ಯಾವುದೊ ಅಪಾಯವನ್ನು ತಿಳಿಸುವ ಸಂಕೇತ.ನೋವು ಎಡವಿ ಕಾಲ್ಬೆರಳನ್ನು ತಾಕಿಸಿಕೊಳ್ಳುವುದು, ಕೈಬೆರಳನ್ನು ಸುಟ್ಟುಕೊಳ್ಳುವುದು, ಒಂದು ಗಾಯಕ್ಕೆ ಆಯೋಡಿನ್‌ನಂತಹ ನಂಜುನಿವಾರಕವನ್ನು ಹಚ್ಚುವುದು, ಮತ್ತು ನಗಿಸುವ ಮೂಳೆಗೆ (ಫನಿ ಬೋನ್) ತಾಕಿಸಿಕೊಳ್ಳುವಂತಹ ಅನುಭವಗಳಲ್ಲಿ ಸಾಮಾನ್ಯವಾದ ಅಪ್ರಿಯವಾದ ಅನಿಸಿಕೆ. ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ದ ಸ್ಟಡಿ ಆಫ್ ಪೆಯ್ನ್ ನೋವನ್ನು "ವಾಸ್ತವಿಕ ಅಥವಾ ಸಂಭಾವ್ಯಸಾಧ್ಯ ಅಂಗಾಂಶ ಹಾನಿಗೆ ಸಂಬಂಧಿಸಿದ, ಅಥವಾ ಅಂತಹ ಹಾನಿಗೆ ಸಂಬಂಧಿಸಿದಂತೆ ವರ್ಣಿಸಲಾಗುವ ಒಂದು ಅಪ್ರಿಯವಾದ ಸಂವೇದನಶೀಲ ಮತ್ತು ಭಾವುಕ ಅನುಭವ" ಎಂದು ವ್ಯಾಖ್ಯಾನಿಸುತ್ತದೆ. ನೋವು ನಮ್ಮನ್ನು ಅಪಾಯದ ಅಥವಾ ಅಪಾಯದ ಸಾಧ್ಯತೆಯಿರುವ ಸನ್ನಿವೇಶಗಳಿಂದ ಹಿಮ್ಮೆಟ್ಟುವಂತೆ, ವಾಸಿಯಾಗುವವರೆಗೆ ಹಾನಿಗೊಳಗಾದ ದೇಹಭಾಗವನ್ನು ಸಲಹುವಂತೆ, ಮತ್ತು ಭವಿಷ್ಯದಲ್ಲಿ ಅಂತಹ ಸಂದರ್ಭಗಳಿಂದ ದೂರವಾಗಿರುವಂತೆ ಪ್ರೇರಿಸುತ್ತದೆ. ನೋವಿನಿಂದ ಮುಕ್ತಿಹೊಂದಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮದ್ದು, ಔಷಧಗಳು ದೊರೆಯುತ್ತವೆ.ದೈಹಿಕ ನೋವಿಗೆ ಚಿಕಿತ್ಸೆ ಪಡೆಯಬಹುದು ಆದರೆ ಮಾನಸಿಕ ನೋವಿಗೆ ಯಾವ ಚಿಕಿತ್ಸೆಯೂ ಇಲ್ಲ. ಅಪಾಯ ನಿವಾರಣೆಗೆ ತಕ್ಕ ಪ್ರತಿಕ್ರಿಯೆಯನ್ನು ಏರ್ಪಡಿಸಿಕೊಳ್ಳಲು ಸಾಧನವಾಗಿ ನೋವು ಉಪಯುಕ್ತ ಸಂವೇದನೆ ಆಗಿದ್ದರೂ ಅದು ಮನಸ್ಸಿನ ನೆಮ್ಮದಿಯನ್ನು ಕೆದಕಿ ಶಾಂತಿಯನ್ನು ಹಾಳುಮಾಡುತ್ತದೆ. ಅದರ ತೀವ್ರತೆ ಹೆಚ್ಚಾದಂತೆಲ್ಲ ಮನಸ್ಸಿನ ಕಾತರ. ದುಗುಡ, ಕಳವಳ ಕೂಡ ಹೆಚ್ಚಾಗಿ ಮುಖದ ಮಾಂಸಖಂಡಗಳು ಸಂಕೋಚಿಸಿ ಕಣ್ಣುಗಳು ಕೋರೈಸುವುದು. ಬೆವರುವುದು, ರಕ್ತದ ಒತ್ತಡ ಹೆಚ್ಚಾಗುವುದು. ಅಲ್ಲದೆ ಹೃದಯ ಬಡಿತದ ದರ ತೀವ್ರವಾಗುವುದು ಕಂಡುಬರುತ್ತವೆ. ಕೆಲವು ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಆಗುವುದೂ ಉಂಟು. ಈ ಗೌಣ ಪರಿಣಾಮಗಳಿಂದ ನೋವು ದೇಹಕ್ಕೆ ಅನುಕೂಲ ಸಂವೇದನೆಯಾಗಿರುವ ಬದಲು ಅನೇಕ ವೇಳೆ ಅನಾನುಕೂಲ ಸಂವೇದನೆಯಾಗಿ ಪರಿಣಮಿಸುತ್ತದೆ.

Other Languages
العربية: ألم
asturianu: Dolor
azərbaycanca: Ağrı
تۆرکجه: آغری(درد)
žemaitėška: Skausmos
беларуская: Боль
беларуская (тарашкевіца)‎: Боль
български: Болка
বাংলা: ব্যথা
bosanski: Bol
català: Dolor
کوردی: ئێش
čeština: Bolest
dansk: Smerte
Deutsch: Schmerz
Ελληνικά: Πόνος
English: Pain
Esperanto: Doloro
español: Dolor
eesti: Valu
euskara: Min
فارسی: درد
suomi: Kipu
français: Douleur
Frysk: Pine
Gaeilge: Pian
galego: Dor
עברית: כאב
हिन्दी: दर्द
hrvatski: Bol (osjećaj)
Kreyòl ayisyen: Doulè
magyar: Fájdalom
հայերեն: Ցավ
Bahasa Indonesia: Nyeri
Ido: Doloro
íslenska: Sársauki
italiano: Dolore
日本語: 疼痛
қазақша: Ауырсыну
한국어: 통증
Latina: Dolor
lietuvių: Skausmas
latviešu: Sāpes
മലയാളം: വേദന
मराठी: वेदना
Bahasa Melayu: Sakit
नेपाली: दुखाई
Nederlands: Pijn
norsk nynorsk: Smerte
norsk: Smerte
occitan: Dolor
ଓଡ଼ିଆ: ଯନ୍ତ୍ରଣା
ਪੰਜਾਬੀ: ਪੀੜ
polski: Ból
português: Dor
Runa Simi: Nanay
română: Durere
русский: Боль
sicilianu: Dogghia
Scots: Pyne
srpskohrvatski / српскохрватски: Bol
Simple English: Pain
slovenčina: Bolesť
slovenščina: Bolečina
chiShona: Kurwadziwa
shqip: Dhimbja
српски / srpski: Бол
svenska: Smärta
தமிழ்: வலி
తెలుగు: నొప్పి
Tagalog: Kirot
Türkçe: Ağrı (tıp)
українська: Біль
Tiếng Việt: Đau
Winaray: Ul-ol
吴语:
ייִדיש: ווייטאג
中文: 疼痛
Bân-lâm-gú: Thiàⁿ
粵語: