ದಿ ಲಾರ್ಡ್ ಆಫ್ ದಿ ರಿಂಗ್ಸ್

ದಿ ಲಾರ್ಡ್ ಆಫ್ ದಿ ರಿಂಗ್ಸ್
250px
Tolkien's own cover designs for the three volumes of the first edition
Volumes:
The Fellowship of the Ring
The Two Towers
The Return of the King
ಲೇಖಕJ. R. R. Tolkien
ದೇಶUnited Kingdom
ಭಾಷೆಟೆಂಪ್ಲೇಟು:English
ಶೈಲಿಅತಿ ಕಾಲ್ಪನಿಕ,
ಸಾಹಸ ಕಾದಂಬರಿ,
ವೀರೋಚಿತ ಪ್ರಣಯ
ಪ್ರಕಾಶಕGeo. Allen & Unwin
ಮಾಧ್ಯಮ ವರ್ಗPrint (Hardback & Paperback)
ಮುಂಚಿತವಾದThe Hobbit

ದಿ ಲಾರ್ಡ್ ಆಫ್ ದಿ ರಿಂಗ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಭಾಷಾಶಾಸ್ತ್ರಜ್ಞ J.R.R. ಟೋಲ್ಕಿನ್ ಅವರ ಪ್ರಸಿದ್ಧ ಅತಿ ಕಾಲ್ಪನಿಕ ಕಾದಂಬರಿ. ಈ ಕಥಾನಕವು ಟೋಲ್ಕಿನ್ ಅವರ ಮುಂಚಿನ, ಕಡಿಮೆ ಸಂಕಿರ್ಣತೆಯುಳ್ಳ ದಿ ಹೊಬ್ಬಿಟ್ (೧೯೩೭) ಎಂಬ ಮಕ್ಕಳ ಕಾಲ್ಪನಿಕ ಕಾದಂಬರಿಯ ಉತ್ತರಾರ್ಧ ಭಾಗವಾದರೂ ತರುವಾಯ ಬೃಹತ್ ಕೃತಿಯಾಗಿ ಅರಳಿತು. ಈ ಕಾದಂಬರಿಯನ್ನು ೧೯೩೭ ಮತ್ತು ೧೯೪೯ರಲ್ಲಿ ,ಹೆಚ್ಚಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಂತಹಂತವಾಗಿ ಬರೆಯಲಾಯಿತು.[೧]

ಸಾಮಾನ್ಯವಾಗಿ ಓದುಗರಿಗೆ ಕೃತಿತ್ರಯ ಎಂದೇ ಪರಿಚಿತವಾದರೂ, ಪ್ರಾರಂಭದಲ್ಲಿ ಎರಡು-ಸಂಪುಟಗಳ ಜೋಡಿಯಲ್ಲಿ ಒಂದು ಸಂಪುಟವಾಗಿದಿ ಸಿಲ್ಮರಿಲ್ಲಿಯೋನ್ ಜೊತೆಗೆ ಹೊರತರಬೇಕೆಂಬುದೆ ಟೋಲ್ಕಿನ್ ಉದ್ದೇಶವಾಗಿತ್ತು. ಆದಾಗ್ಯೂ, ಪ್ರಕಾಶಕರು ಎರಡನೇ ಸಂಪುಟವನ್ನು ಕೈಬಿಟ್ಟು, ೧೯೫೪-೫೫ರಲ್ಲಿ [೨] ಆರ್ಥಿಕ [೨] ಕಾರಣಗಳಿಂದಾಗಿ ಒಂದೇ ಪುಸ್ತಕದ ಬದಲಿಗೆ ಮೂರು ಪುಸ್ತಕಗಳಾಗಿ ದಿ ಲಾರ್ಡ್ ಆಫ್ ದಿ ರಿಂಗ್ಸ್ ಪ್ರಕಟಿಸಿದರು.[೨] ತದನಂತರ ಪುಸ್ತಕವು ಅನೇಕ ಬಾರಿ ಮರುಮುದ್ರಣಗೊಂಡು, ಅನೇಕ ಭಾಷೆಗಳಿಗೆ ತರ್ಜುಮೆಯಾಗಿ ೨೦ನೇ ಶತಮಾನದ ಸಾಹಿತ್ಯಲೋಕದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಕೃತಿಗಳಲ್ಲಿ ಒಂದೆನಿಸಿತು.

ಪುಸ್ತಕದ ಶೀರ್ಷಿಕೆಯು ಕಥಾನಕದ ಪ್ರಮುಖ ಪ್ರತಿನಾಯಕ, ಕರಾಳ ದೊರೆ ಸೌರಾನ್ ಬಗ್ಗೆ ಉಲ್ಲೇಖಿಸುತ್ತದೆ. ಅವನು ಪೂರ್ವಕಾಲದಲ್ಲಿ ಬೇರೆ ಶಕ್ತಿಶಾಲಿ ಉಂಗುರಗಳ ಮೇಲೆ ಆಳ್ವಿಕೆ ಮಾಡಲು ತನ್ನದೇ ಆದ ಒಂದು ಉಂಗುರವನ್ನು ಸೃಷ್ಟಿಸಿದ. ಅದನ್ನು ಭೂಮಿಯ ಮಧ್ಯಭಾಗವನ್ನು ಜಯಿಸಿ ಆಳುವ ತನ್ನ ದಂಡಯಾತ್ರೆಯ ಅಂತಿಮ ಅಸ್ತ್ರದಂತೆ ಬಳಸಲು ಯೋಜಿಸಿದ. ಮೇಲ್ನೋಟಕ್ಕೆ ಇಂಗ್ಲಿಷ್ ಗ್ರಾಮಾಂತರ ಪ್ರದೇಶಕ್ಕಿಂತ ಭಿನ್ನವಾದ ಹಾಬಿಟ್(ಕುಬ್ಜ)ಜನಾಂಗದ ನಾಡಾದ ಶೈರ್ ನಿಂದ ಆರಂಭವಾಗುವ ಕಥಾನಕ, ವಿಶೇಷವಾಗಿ ಹಾಬಿಟ್ ಜನಾಂಗದ ಫ್ರೋಡೊ ಬ್ಯಾಗಿನ್ಸ್,ಸ್ಯಾಮ್‌ವೈಸ್ ಗಾಮ್ಗೀ(ಸ್ಯಾಮ್),ಮೆರಿಯಾಡಾಕ್ ಬ್ರಾಂಡಿಬಕ್(ಮೆರಿ)ಮತ್ತು ಪೆರೆಗ್ರಿನ್ ಟುಕ್(ಪಿಪ್ಪಿನ್) ಪಾತ್ರಧಾರಿಗಳ ಮೂಲಕ ಉಂಗುರಕ್ಕಾಗಿ ಯುದ್ಧದ ಮಾರ್ಗ ಹಿನ್ನೆಲೆಯಲ್ಲಿ ಮಧ್ಯ-ಭೂಮಿಯಲ್ಲಿ ವ್ಯಾಪಿಸುತ್ತದೆ.

ಟೋಲ್ಕಿನ್‌ರ ಇತರ ಕೃತಿಗಳಂತೆ ದಿ ಲಾರ್ಡ್ ಆಫ್ ದಿ ರಿಂಗ್ಸ್ ಕೂಡ ಅದರ ವಸ್ತುವಿಷಯ ಮತ್ತು ಅವುಗಳ ಉಗಮಗಳ ಬಗ್ಗೆ ವ್ಯಾಪಕ ವಿಶ್ಲೇಷಣೆಗೆ ಒಳಪಟ್ಟಿದೆ. ಸ್ವತಃ ಪ್ರಧಾನ ಕೃತಿಯಾಗಿದ್ದರೂ,೧೯೧೭ರಿಂದೀಚೆಗೆ ಟೋಲ್ಕೀನ್ ನಿರ್ವಹಿಸಿದ ದೊಡ್ಡ ಕೆಲಸದಲ್ಲಿ ಕಡೆಯ ಬೆಳವಣಿಗೆಯಾಗಿದೆ. ಈ ಪ್ರಕ್ರಿಯೆಯನ್ನು ಪುರಾಣಸೃಷ್ಟಿ ಎಂದು ಅವರು ಬಣ್ಣಿಸಿದ್ದಾರೆ.[೩]

ಹಳೆಯ ಬರವಣಿಗೆಗಳ ಪ್ರಭಾವದ ಜೊತೆಗೆ ದಿ ಲಾರ್ಡ್ ಆಫ್ ದಿ ರಿಂಗ್ಸ್ ನ ಕಥೆಯು ಭಾಷಾಶಾಸ್ತ್ರ , ಪುರಾಣ, ಧಾರ್ಮಿಕ ಮತ್ತು ಕೈಗಾರೀಕರಣದ ಪ್ರಭಾವಗಳ ಬಗ್ಗೆ ಲೇಖಕರಿಗಿರುವ ಅಪ್ರಿಯತೆ ಹಾಗು ಟೋಲ್ಕಿನ್ನರ ಮುಂಚಿನ ಕಾಲ್ಪನಿಕ ಕೃತಿಗಳು ಹಾಗೂ ಮೊದಲ ವಿಶ್ವಯುದ್ದರಲ್ಲಿ ಅವರ ಅನುಭವಗಳು ಸಹ ಮಿಳಿತವಾಗಿವೆ.[೪]

ದಿ ಲಾರ್ಡ್ ಆಫ್ ದಿ ರಿಂಗ್ಸ್ ನ ದೀರ್ಘಕಾಲದ ಜನಪ್ರಿಯತೆಯು ಜನಪ್ರಿಯ ಸಂಸ್ಕೃತಿಯಲ್ಲಿ ಅನೇಕ ಉಲ್ಲೇಖಗಳಿಗೆ, ಟೋಲ್ಕಿನ್ನರ ಕೃತಿಗಳ ಅಭಿಮಾನಿಗಳಿಂದ ಅನೇಕ ಸಂಘಗಳ ಸ್ಥಾಪನೆಗೆ[೫] ಮತ್ತು ಟೋಲ್ಕಿನ್ ಹಾಗು ಅವರ ಕೃತಿಗಳ ಬಗ್ಗೆ ಅನೇಕ ಪುಸ್ತಕಗಳು ಪ್ರಕಟವಾಗುವುದಕ್ಕೆ ದಾರಿ ಕಲ್ಪಿಸಿದವು. ದಿ ಲಾರ್ಡ್ ಆಫ್ ದಿ ರಿಂಗ್ಸ್ ಕಲೆ, ಸಂಗೀತ, ಚಲನಚಿತ್ರಗಳು, ದೂರದರ್ಶನ, ವಿಡಿಯೊ ಆಟಗಳು ಹಾಗು ತರುವಾಯದ ಸಾಹಿತ್ಯಕ್ಕೆ ಸ್ಪೂರ್ತಿ ನೀಡಿದೆ ಮತ್ತು ಮುಂದೆಯೂ ಸ್ಪೂರ್ತಿ ನೀಡುತ್ತಿದೆ. ದಿ ಲಾರ್ಡ್ ಆಫ್ ದಿ ರಿಂಗ್ಸ್ ನ ಪ್ರಶಸ್ತಿ ವಿಜೇತರೂಪಾಂತರಗಳು ರೇಡಿಯೋಗೆ ,ನಾಟಕಕ್ಕೆ ಮತ್ತು ಚಲನಚಿತ್ರ ನಿರ್ಮಾಣಕ್ಕೆ ಬಳಕೆಯಾಗಿವೆ.

Other Languages
Alemannisch: Der Herr der Ringe
العربية: سيد الخواتم
беларуская: Уладар Пярсцёнкаў
беларуская (тарашкевіца)‎: Уладар Пярсьцёнкаў
čeština: Pán prstenů
客家語/Hak-kâ-ngî: Mô-kài
עברית: שר הטבעות
Bahasa Indonesia: The Lord of the Rings
日本語: 指輪物語
한국어: 반지의 제왕
Ripoarisch: Dr Herr dr Ringe
Кыргызча: Шакектер ээси
Lëtzebuergesch: The Lord of the Rings
Lingua Franca Nova: La Senior de la Anelos
lietuvių: Žiedų valdovas
Bahasa Melayu: The Lord of the Rings
эрзянь: Сурксазор
norsk nynorsk: Ringdrotten
Runa Simi: Siwikunap Apun
srpskohrvatski / српскохрватски: The Lord of the Rings
Simple English: The Lord of the Rings
slovenščina: Gospodar prstanov
Kiswahili: Bwana wa Mapete
українська: Володар перснів
吴语: 指环王
中文: 魔戒
Bân-lâm-gú: Chhiú-chí Ông
粵語: 魔戒