ದಿ ಡ ವಿಂಚಿ ಕೋಡ್ (ಚಲನಚಿತ್ರ)

The Da Vinci Code
ಚಿತ್ರ:The da vinci code.jpg
Teaser poster
ನಿರ್ದೇಶನRon Howard
ನಿರ್ಮಾಪಕBrian Grazer
Ron Howard
John Calley
ಲೇಖಕAkiva Goldsman
Dan Brown (Novel)
ಪಾತ್ರವರ್ಗTom Hanks
Audrey Tautou
Ian McKellen
Alfred Molina
Jürgen Prochnow
Paul Bettany
Jean Reno
ಸಂಗೀತHans Zimmer
ಛಾಯಾಗ್ರಹಣSalvatore Totino
ಸಂಕಲನDaniel P. Hanley
Mike Hill
ಸ್ಟುಡಿಯೋImagine Entertainment
ವಿತರಕರುColumbia Pictures
ಬಿಡುಗಡೆಯಾಗಿದ್ದುಮೇ 19, 2006 (2006-05-19)
ಅವಧಿ149 minutes
ದೇಶUnited States
ಭಾಷೆEnglish
French
Spanish
Latin
ಬಂಡವಾಳ$125 million
ಬಾಕ್ಸ್ ಆಫೀಸ್$758,239,851[೧]

ದಿ ಡ ವಿಂಚಿ ಕೋಡ್ 2006ರಲ್ಲಿನ ರಹಸ್ಯ ,ರೋಮಾಂಚಕಾರಿಯಾದ ಅಮೆರಿಕಾಚಲನಚಿತ್ರ.ಇದನ್ನುರೊನ್ ಹೌವರ್ಡ್ ನಿರ್ದೇಶಿಸಿದ್ದಾರೆ. ಇದರ ಚಿತ್ರ ಕಥೆಯನ್ನು ಅಕಿವಾ ಗೊಲ್ಡ್ಸಮನ್ ಬರೆದಿದ್ದು,ಡಾನ್ ಬ್ರೌನ್ ಅವರ ವಿಶ್ವ ವಿಖ್ಯಾತ ಕಾದಂಬರಿ,2003ರಲ್ಲಿ ಅತ್ಯುತ್ತಮ ಮಾರಾಟ ಕಂಡ ದಿ ಡ ವಿಂಚಿ ಕೋಡ್ ನ್ನು ಆಧರಿಸಿದೆ. ಇದು ಹೌವರ್ಡ್ ಅವರ ನಿರ್ಮಾಣದಲ್ಲಿ ಅವರೊಂದಿಗೆ ಜೊನ್ ಕ್ಯಾಲ್ಲಿ ಮತ್ತು ಬ್ರೇನ್ ಗ್ರೇಜರ್ ಕೈಗೂಡಿಸಿದ್ದಾರೆ.ಕೊಲಂಬಿಯಾ ಪಿಕ್ಚರ್ಸ್ ಅವರು ಬಿಡುಗಡೆ ಮಾಡಿದ್ದಾರೆ.ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೇ 19,2006ರಲ್ಲಿ ಬಿಡುಗಡೆಯಾಯಿತು.

ದಿ ಡ ವಿಂಚಿ ಕೋಡ್ ನಲ್ಲಿ ಟಾಮ್ ಹ್ಯಾಂಕ್ಸ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಜ್ಞಾಶಾಸ್ತ್ರಜ್ಞ ರಾಗಿ ರೊಬರ್ಟ್ ಲ್ಯಾಂಗ್ ಡೊನ್ ,ಔಡ್ರಿ ಟೌಟೊ ಅವರು ಸುಂದರ ಲಿಪಿಗಾರನಾಗಿ ಸೊಫಿ ನ್ಬೆವ್ಯು ದ ಫ್ರಾನ್ಸನ ,ಪೊಲಿಸ್ ಕೇಂದ್ರದ ಉಸ್ತುವಾರಿಯಾಗಿ of ಸರ್ ಇವಾನ್ ಮೆಕೆಲ್ಲಿನ್ as ಬ್ರಿಟಿಶ್ ಕ್ರಿಸ್ತನ ರಕ್ತದ ಬಟ್ಟಲು ಇತಿಹಾಸಕಾರ ಸರ್ ಲೇಘ್ ಟೀಬಿಂಗ್ , ಅಲ್ಫ್ರೆಡ್ ಮೊಲಿನಾ ಒಬ್ಬ ಬಿಶಪ್ ನಾಗಿ ಮ್ಯಾನುವಲ್ ಅರಿಂಗ್ ರೊಸಾ , ಜೀನ್ ರೆನೊ ಒಬ್ಬ ಹಡಗಿನ ಕಪ್ತಾನನಾಗಿ ಬೆಜು ಫೆಚೆ ಯು ಒಬ್ಬ ಡೈರೆಕ್ಷನ್ ಸೆಂಟ್ರೇಲ್ ಡೆ ಲಾ ಪೊಲಿಸ್ ಜುಡಿಸಿಯರಿ , ಮತ್ತು ಪೌಲ್ ಬೆಟ್ಟನಿ ಯು ಒಬ್ಬ ಒಪಸ್ ಡ್ಯಿ ಸನ್ಯಾಸಿ ಸಿಲಾಸ್ .ಹೀಗೆ ಪಾತ್ರ ವರ್ಗ ಬೆಳೆಯುತ್ತದೆ.

ದಿ ಡ ವಿಂಚಿ ಡ ಕೋಡ್ 2006ರ ಕ್ಯಾನ್ನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೇ 17ರಲ್ಲಿ ಮೊದಲ ಪ್ರದರ್ಶನ [೨]ಕಂಡಿತು. ದಿ ಡ ವಿಂಚಿ ಕೋಡ್ ಮೇ 18,2006ರಲ್ಲಿ ಹಲವಾರು ದೇಶಗಳಲ್ಲಿ ಬಿಡುಗಡೆಯಾಯಿತಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊಲಂಬಿಯಾ ಪಿಕ್ಚರ್ ನವರ ಮೂಲಕ ಬಿಡುಗಡೆಯಾಯಿತು.

ವಿವಾದಾತ್ಮಕ ಮತ್ತು ನಿಖರವಲ್ಲದ ಐತಿಹಾಸಿಕ ವ್ಯಾಖ್ಯಾನಗಳಿಂದಾಗಿ ಮತ್ತು ಕ್ಯಾಥೊಲಿಕ್ ವಿರೋಧಿ ಅಂಶಗಳನ್ನು ಒಳಗೊಂಡಿದೆ ಎನ್ನುವ ಪಕಾರು ಎದ್ದಿತು.ಈ ಸಿನೆಮಾ ವಿವಾದಂತೆ ಡಾನ್ ಬ್ರೌನ್ ಕಾದಂಬರಿ ಕೂಡಾ ರೊಮನ್ ಕ್ಯಾಥೊಲಿಕ್ ಚರ್ಚ್ ನವರು ಕಟುವಾಗಿ ಟೀಕಿಸಿತು. [೩]ಕೆಲವು ಚರ್ಚ್ ಸದಸ್ಯರು ಜನಸಾಮಾನ್ಯರು ಈ ಚಲನಚಿತ್ರವನ್ನು ಬಹಿಷ್ಕರಿಸಬೇಕೆಂದು ಮನವಿ [೩]ಮಾಡಿದರು. ಅದರ ಪ್ರಾರಂಭಿಕ ಪ್ರದರ್ಶನಗಳು ಪ್ರತಿಭಟಿಸಲ್ಪಟ್ಟವು,ಮೊದಲ ಟೀಕಾಕಾರರು ಇದನ್ನು ಋಣಾತ್ಮಕವಾಗಿಯೇ ಪರಿಗಣಿಸಿದರು. ವಾದ-ವಿವಾದಗಳ ಪ್ರಕಾರ ಈ ಪ್ರತಿಕ್ರಿಯೆಗಳು ಸಣ್ಣ ಪ್ರಮಾಣದ ಋಣಾತ್ಮಕವನ್ನಲ್ಲದೇ ಬಾಕ್ಸ್ ಆಫಿಸ್ ನಲ್ಲಿಯೂ ಪರಿಣಾಮವಾಗಿತು.ದಿ ಡ ವಿಂಚಿ ಕೋಡ್ ಅತಿ ಹೆಚ್ಚು ಗಳಿಕೆ ಅಂದರೆ $230 ದಶಲಕ್ಷ ಡಾಲರ್ ನ್ನು ಪ್ರಾರಂಭದ ವಾರದಲ್ಲಿ ಆಗಿದ್ದಿದೆ.ಇಡೀ ಚಲನಚಿತ್ರ ಇತಿಹಾಸದಲ್ಲೇ ವಾರಾಂತ್ಯದಲ್ಲಿ ತೆರೆ ಕಂಡ ಮೂರನೆಯ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಸದ್ಯ ಇದು ಏಳನೆಯ ಅತಿ ದೊಡ್ಡ ಆರಂಭಿಕ ಗಳಿಕೆಯ ಚಲನಚಿತ್ರವಾಗಿದೆ. ವಿಶ್ವಾದ್ಯಂತ ಅತಿ ಒಟ್ಟಾರೆ ಆದಾಯ ಗಳಿಕೆಯ ಎರಡನೆಯ ಅತಿ ದೊಡ್ಡ 2006ರಲ್ಲಿನ ಚಿತ್ರವೆನಿಸಿದೆ.ನವೆಂಬರ್ 2,2006ರಲ್ಲಿ$$758,239,851 ಆದಾಯಕ್ಕೆ ಮಾದರಿಯಾಗಿದೆ. ಅದೇ ಸಮಯದಲ್ಲಿ ನಿರ್ದೇಶಕ ರೊನ್ ಹೌವರ್ಡ್ ಮತ್ತು ನಟ ಟಾಮ್ ಹ್ಯಾಂಕ್ಸ್ ಅವರು ಈ ಹಿಂದೆ ಎರಡು ಚಿತ್ರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ,1984ರಲ್ಲಿ ಸ್ಪ್ಲಾಶ್ ಮತ್ತು 1995ರಲ್ಲಿ ಅಪೊಲೊ 13 . ದಿ ಡ ವಿಂಚಿ ಕೋಡ್ ನ ಆರಂಭಿಕ ನಿರ್ಮಾಣ ಪ್ರಸಂಗದಲ್ಲಿ ಅದರ ಯಶಸ್ವಿಗಾಗಿ ಅವರ ಕೊಡುಗೆ,ಎಂಜೆಲ್ಸ್ &ಡೆಮೊನ್ಸ್ ಗಾಗಿ ಮುಂದಾಲೋಚನೆಗಳು ತೀವ್ರ ಪ್ರಮಾಣದ್ದಾಗಿದ್ದವು.ಇನ್ನುಡಾನ್ ಬ್ರೌನ್ ನ ಮೂರನೆಯ ಪುಸ್ತಕವನ್ನು ಆಧರಿಸಿ ಇನ್ನೊಂದು ಚಲನಚಿತ್ರ ತಯಾರಿಕೆಗೆ ಅವರು ಮುಂದಾಗಿದ್ದಾರೆ.ಆತನ ರಾಬರ್ಟ್ ಲ್ಯಾಂಗ್ ಡೊನ್ ,ಟ್ರೈಲೊಜಿ (ಮೂರು ಚಕ್ರ ಸರಣಿ),ಮತ್ತುದಿ ಲಾಸ್ಟ್ ಸಿಂಬಾಲ್ . ದಿ ಡ ವಿಂಚಿ ಕೋಡ್ ಚಿತ್ರವು ಅವರಿಬ್ಬರ ಅತ್ಯಂತ ಯಶಸ್ವಿ ಕೊಡುಗೆಯಾಗಿದ್ದು ಆದರೆ ಹಣದುಬ್ಬರಕ್ಕೆ ಹೊಂದಾಣಿಕೆಯಾಗದಂತಹದ್ದು ಎಂದು [೪]ಪರಿಗಣಿಸಲಾಗುತ್ತದೆ.

ಚಿತ್ರದ ಸಂಗೀತದ ಧ್ವನಿ ಪಥವನ್ನು ಹ್ಯಾನ್ಸ್ ಜಿಮ್ಮರ್ ಸಂಯೋಜಿಸಿದ್ದಾರೆ. ಇದನ್ನು ಬೆಸ್ಟ್ ಒರಿಜಿನಲ್ ಸ್ಕೊರ್ ಗಾಗಿ 2007ರ ಗೊಲ್ಡನ್ ಗ್ಲೋಬ್ ಅವಾರ್ಡ್ ಗಾಗಿ ನಾಮನಿರ್ದೇಶನ ಮಾಡಲಾಯಿತು.

ಕಥಾವಸ್ತು

ಜಾಕ್ವೆಸ್ ಸೌನಿಯರ್ ಎಂಬ ಮನುಷ್ಯ ಒಂದು ರಹಸ್ಯ ಪಾತ್ರದ ಬೆನ್ನಟ್ಟುತ್ತಾನೆ,ಇದು ಸಿಲಿಯಾಸ್ ಪಾತ್ರ ಇದರ ಉಗಮ ಪ್ಯಾರಿಸ್ ನಲ್ಲಿನ ಲೌವ್ರೆಯಲ್ಲಿನ ಗ್ರ್ಯಾಂಡ್ ಗ್ಯಾಲರಿಯಲ್ಲಾಗುತ್ತದೆ. ಸಿಲಿಯಾಸ್ ಪ್ರೈಯೊರಿಯ(ಮಠ ಮಾನ್ಯದ) ಜಾಗವನ್ನು ಅಂದರೆ ಕ್ಲೆಫ್ ಡೆ ವೊಟೆ "ಪ್ರಮುಖ ಗುರುತು-ಕಲ್ಲು"ನ್ನು ಬೇಡಿಕೆಯೊಡ್ಡುತ್ತಾನೆ. ಕೊನೆಯಲ್ಲಿ ಸೌನೆಯರೆ ಹೆದರಿಕೆಯಿಂದಾಗಿ ಈ ಪ್ರಮುಖ ಕಲ್ಲನ್ನು ಚರ್ಚ್ ಆಫ್ ಸೇಂಟ್ ಸಲ್ಪೈಸ್ ,ಅಂದರೆ "ಕಮಲದಡಿಯಲ್ಲಿ"ಇಡಲಾಗಿದ್ದನ್ನು ಒಪ್ಪಿಕೊಳ್ಳುತ್ತಾನೆ. ಸಿಲಾಸ್ ಆತನನ್ನು ಅಭಿನಂದಿಸುತ್ತಾನೆ,ಅಲ್ಲದೇ ಆತನ ಹೊಟ್ಟೆಗೆ ಗುಂಡಿಟ್ಟು ಸಾಯಿಸುತ್ತಾನೆ.

ಅದೇ ಸಂದರ್ಭದಲ್ಲಿ ಸಂಜ್ಞಾಶಾಸ್ತ್ರಜ್ಞ ರೊಬರ್ಟ್ ಲ್ಯಾಂಗ್ ಡೊನ್ ಮತ್ತು ಟೊಮ್ ಹ್ಯಾಂಕ್ಸ್ ಅವರು AUPನ ಅಥಿತಿ ಸಂಜ್ಞಾಶಾಸ್ತ್ರ ಮತ್ತು ಪವಿತ್ರ ಸ್ತ್ರೀ ಕುರಿತ ಉಪನ್ಯಾಸಕರಾಗಿ ಪ್ಯಾರಿಸ್ಸಿಗೆ ಬಂದಿರುತ್ತಾರೆ.ಅವರನ್ನು ಈ ಹತ್ಯೆ ಅಪರಾಧ ನಡೆದ ಸ್ಥಳಕ್ಕೆ ಫೆಂಚ್ ಪೊಲಿಸರು ಲೌವ್ರೆಗೆ ಹೋಗುವಂತೆ ಸೂಚಿಸುತ್ತಾರೆ. ಸಾಯುತ್ತಿದ್ದ ಸೌನೆಯರ್ ತನ್ನ ದೇಹ,ತಿಳಿ ಕಪ್ಪು ಬಣ್ಣ ಮತ್ತು ರಕ್ತ ಉಪಯೋಗಿಸಿದ ಗೋಜುಗೋಜಲಾದ ಆಕಾರವನ್ನು ಸೃಷ್ಟಿಸಿರುವುದನ್ನು ಆತ ಪತ್ತೆಹಚ್ಚುತ್ತಾನೆ. ಕಪ್ತಾನ ಬೆಜು ಫೆಚೆ ಜೀನ್ ರೆನೊ ಆತನನ್ನು ಈ ಗಾಢವಾದ ವಿಚಾರದ ಬಗ್ಗೆ ಅರ್ಥ ಹೇಳುವಂತೆ ಕೇಳುತ್ತಾನೆ.

ಸಿಲಾಸ್ ಹೇಳುವಂತೆ ಒಬ್ಬ ಅಸ್ಪಷ್ಟ ಈ ಮನುಷ್ಯ "ದಿ ಟೀಚರ್ " ,ಅಲ್ಲದೇ ಪ್ರಮುಖ ಕಲ್ಲನ್ನು ಕಾಯುವ ನಾಲ್ವಾನ್ನೂ ಆತ ಕೊಂದಿರುತ್ತಾನೆ ಎಂದು ಆತ ಗುಟ್ಟು ಹೊರಗೆಡುವುತ್ತಾನೆ,ಇವರೆಲ್ಲರೂ ಒಂದೇ ಸ್ಥಳದಲ್ಲಿದ್ದರು ಎಂದು ವಿಶ್ಲೇಷಿಸುತ್ತಾನೆ. ಆತ ಲೋಹದ ರೋಮದ ದಿರಸನ್ನು ತನ್ನ ತೊಡೆಯ ಮೇಲೆ ಧರಿಸಿರುತ್ತಾನೆ.ನಂತರ ತನ್ನ ಕೊಲೆಯ ಪಶ್ಚಾತ್ತಾಪಕ್ಕಾಗಿ ತಾನೇ ಚಾವಟಿ ಏಟಿನಿಂದ ಬೀಸಿಕೊಳ್ಳುತ್ತಾನೆ ಬಿಶಪ್ ಮ್ಯಾನ್ಯುವಲ್ ಅರಿಂಗಾರೊಸಾ ಅವರಿಂದ ಅಭಿನಂದಿಸಲ್ಪಟ್ಟು ಸಿಲಾಸ್ ಸೇಂಟ್ -ಸಲ್ಪೈಸ್ ಗೆ ಪಯಣಿಸುತ್ತಾನೆ.ನಂತರ ಆತ ಹಿರಿಯ ಕ್ರೈಸ್ತ ಸನ್ಯಾಸಿಯಲ್ಲಿ ಉಳಿದುಕೊಳ್ಳುತ್ತಾನೆ;ಏಕಾಂಗಿ,ಆತ ಚರ್ಚ್ ನ ಕೆಳಭಾಗದಲ್ಲಿ ಅಗೆದು JOB 38:11 ಎಂಬ ಕಲ್ಲನ್ನು ಹೊರತೆಗೆಯುತ್ತಾನೆ. "ಆತ ಹಿರಿಯ ಸನ್ಯಾಸಿನಿಯ ಅಭಿಮುಖವಾಗಿ ನಿಲ್ಲುತ್ತಾನೆ,ಈ ಉವಾಚ ಆಗ ಬರುತ್ತದೆ:"ಹೀದರ್ ಟು ಶಾಲ್ಟ್ ದೌ ಕಮ್ ಬಟ್ ನೊ ಫರ್ದರ್ "(ಇಲ್ಲಿವರೆಗೆ ಮಾತ್ರ ದೇವರ ಪರವಾನಿಗೆ ಇದೆ ಮುಂದೆ ಇಲ್ಲ) ತಾನು ಮೋಸಹೋದನೆಂಬುದನ್ನು ಅರಿತ ಸಿಲಾಸ್ ಕೋಪದಿಂದ ಸನ್ಯಾಸಿನಿಯನ್ನು ಕೊಲ್ಲುತ್ತಾನೆ.

ಸೊಫಿ ನೆವೆಯು ಔಡ್ರೆಯ್ ಟೌಟೊ,ಒಬ್ಬ ಗೂಢಲಿಪಿಶಾಸ್ತ್ರಜ್ಞ ಫ್ರೆಂಚ್ ಪೊಲಿಸ್ ರೊಂದಿಗೆ ಪ್ರವೇಶಿಸಿದ ಲೌವ್ರೆಗೆ, ಆಗ ಸಣ್ಣ ಮಾಹಿತಿಯನ್ನು ಲ್ಯಾಂಗ್ ಡೊನ್ ಬಿಟ್ಟುಹೋದದ್ದು ಗೊತ್ತಾಗುತ್ತದೆ.ಅಲ್ಲದೇ ಆ ದಾರಿಯು ಪುರುಷರಿರುವ ಕೊಠಡಿಗೆ ಆತನನ್ನು ಕೊಂಡೊಯ್ಯುತ್ತದೆ. ಅಲ್ಲಿ ಸೊಫಿ ಆತನನ್ನು ಭೇಟಿಯಾಗಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ,ಯಾರೊ ಅಪರಿಚಿತರು ತನ್ನ ಜಾಕೆಟ್ ನಲ್ಲಿ ಸ್ಲಿಪ್ ವೊಂದನ್ನು ಬಿಟ್ಟಿದ್ದನ್ನು ವಿವರಿಸುತ್ತಾನೆ.ಹೀಗಾಗಿ ಆತನನ್ನು ಕೊಲೆಯಲ್ಲಿ ಪ್ರಾಥಮಿಕ ಸಂಶಯಿತ ವ್ಯಕ್ತಿಎಂದು ಹೇಳಲಾಗುತ್ತದೆ.("ಪಿ.ಎಸ್ ರಾಬರ್ಟ್ ಲ್ಯಾಂಗ್ ಡೊನ್ ಅಲ್ಲಿ ಸಿಗುತ್ತಾನೆ") ಸೊಫಿ ನಂಬಿಗೆಯಂತೆ ಸೌನೆಯೆರೆಯು ತನ್ನ ಮೊಮ್ಮಗಳು ಸಣ್ಣ ರಹಸ್ಯವೊಂದನ್ನು ನೀಡಲು ಸಿದ್ದಳಾಗಿದ್ದಳು.ಹೀಗೆ ಲ್ಯಾಂಗ್ ಡೊನ್ ನನ್ನು ಇಲ್ಲಿಗೆ ತಂದು ಇದರ ರಹಸ್ಯವನ್ನು ಭೇದಿಸಲು ಆತನ ಸಹಾಯಕ್ಕಾಗಿ ಯತ್ನಿಸಲಾಗುತಿತ್ತು.

ಭೇಧಿಸುವ ಸಲಕರಣೆಯನ್ನು ತೆಗೆದು ಈ ಜೋಡಿಯು,ಲೌವ್ರೆಯನ್ನು ಭೇಧಿಸಲು ಆರಂಭಿಸಿತು.ಸೌನೆರೆ ಹಿಂದೆ ಬಿಟ್ಟು ಹೋದ ರೇಖಾಚಿತ್ರದ ಅನಾಗ್ರಮ್ ಸಂದೇಶವನ್ನು ಹುಡುಕಲು ಆರಂಭಿಸಲಾಯಿತು. ಇವುಗಳಲ್ಲಿ ಬಹುತೇಕವುಗಳು ಲಿಯಿನಾರ್ಡೊ ಡ ವಿಂಚಿಯ ಕಲೆಗೆ ಸಂಬಂಧಪಟ್ಟಿದ್ದವು,ನಂತರ ಈ ಜೋಡಿಗೆ ಮಡೊನ್ನಾ ಆಫ್ ರಾಕ್ಸ್ ಹಿಂದುಗಡೆ ಫ್ಲೆಯರ್ -ಡೆ-ಲಿಸ್ ಯೊಂದಿಗೆ ಕೀಲಿಕೈ ದೊರೆಯುತ್ತದೆ.

ಫ್ರೆಂಚ್ ಪೊಲಿಸ್ ರಿಂದ ಬೆನ್ನಟ್ಟಿ ಮತ್ತು ಯುನೈಟೆಡ್ ಸ್ಟೇಟ್ಸ್ ಎಂಬೆಸ್ಸಿಯಿಂದ ಈ ಜೋಡಿ ಬೊಯಿಸ್ ಡೆ ಬೌಲೊಗ್ನೆ ಗೆ ಪರಾರಿಯಾಗುತ್ತದೆ,ಅಲ್ಲಿ ಲ್ಯಾಂಗ್ ಡೊನ್ ಆ ಕೀಲಿಕೈಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾನೆ. ಅದರಲ್ಲಿ ಒಂದು ಬದಿಯಲ್ಲಿ ಕೆಲವು ಕೆತ್ತನೆ ಬರಹ-ವಿಳಾಸವನ್ನು ಆತ ಗಮನಿಸುತ್ತಾನೆ. ಆ ವಿಳಾಸವು ಅವರನ್ನು ಡಿಪಾಸಿಟರಿ ಬ್ಯಾಂಕ್ ಆಫ್ ಜುರಿಚ್ ಅಲ್ಲಿ ಆ ಕೀಲಿಯನ್ನು ಸುರಕ್ಷೆಯ ಠೇವಣಿ ಬಾಕ್ಸ್ ಗಾಗಿ ಬಳಸಲಾಗುತ್ತದೆ.

ಈ ಬ್ಯಾಂಕಿನಲ್ಲಿ ಅವರು ಸೌನೆರೆಯೆ ಠೇವಣಿ ಬಾಕ್ಸ್ (ಪೆಟ್ಟಿಗೆ)ದೊರೆಯುತ್ತದೆ,ಅದನ್ನು ಹತ್ತು ಅಂಕಿಗಳ ಫಿಬೊನಾಕಿ ನಂಬರ್ (1123581321)ನ್ನು ಅನುಕ್ರಮವಾಗಿ ಬಳಸಿ ತೆಗೆಯಲಾಗುತ್ತದೆ. ಆ ಪೆಟ್ಟಿಗೆಯ ಒಳಭಾಗದಲ್ಲಿ ಒಂದು ರೊಸ್ ವುಡ್ ನಿಂದ ಮಾಡಿದ ಪೆಟ್ಟಿಗೆಯನ್ನು ನೋಡುತ್ತಾರೆ,ಇದರಲ್ಲಿ ಕ್ರಿಪ್ಟೆಕ್ಸ್ :ಒಂದು ಸಿಲಿಂಡರ್ ಆಕೃತಿಯ ಒಳಭಾಗದಲ್ಲಿ ಸ್ವರಾಕ್ಷರಗಳ ಡಯಲ್ ಮಾಡುವುದರ ಜೊತೆಗೆ 5-ಅಕ್ಷರಗಳ ಕೋಡ್ ವರ್ಡ್ ಬಳಕೆಯಲ್ಲಿನ ತೆಳು ಕಾಗದ ದಲ್ಲಿನ ಸಂದೇಶದ ಮೂಲಕ್ಕೆ ಹೋಗುತ್ತದೆ. ಬಲಪ್ರಯೋಗದಿಂದ ಅದರಲ್ಲಿನ ಕ್ರಿಪ್ಟೆಕ್ಸ್ ಒಡೆಯಬಹುದಲ್ಲದೇ ಅಲ್ಲಿರುವ ದ್ರಾಕ್ಷಾರಸದ ಸಣ್ಣ ಬಾಟಲಿಯು ಒಡೆದು ಅದು ಚರ್ಮದ ಕಾಗದದ ಮೇಲೆ ಚೆಲ್ಲಿದರೆ ಅದರಲ್ಲಿನ ಸಂದೇಶವು ಹಾಳಾಗಬಹುದೆಂಬ ಹೆದರಿಕೆ ಇತ್ತು.

ದುರದೃಷ್ಟವಶಾತ,ಅಲ್ಲಿನ ರಕ್ಷಣಾ ಸಿಬ್ಬಂದಿಯು ಪೊಲಿಸ್ ರನ್ನು ಕರೆದಿದ್ದರಿಂದ ಅವರು ಅಲ್ಲಿಂದ ಜಾಗಾ ಖಾಲಿ ಮಾಡಬೇಕಾಯಿತು. ಬ್ಯಾಂಕ್ ಮ್ಯಾನೇಜರ್ ಅಂಡ್ರೆ ವೆರ್ನೆಟ್ ಅವರೆಲ್ಲರನ್ನು ಪ್ರಯಾಣಿಕರಾಂತೆ ಸಶಸ್ತ್ರ ವಾಹನದಲ್ಲಿ ಕೂಡಿಸಿಕೊಂಡು ಪೊಲಿಸ್ ನ ನಿಯಮಿತ ತಪಾಸಣೆಯಿಂದ ಪಾರು ಮಾಡುತ್ತಾನೆ. ಈ ವಾಹನದ ಹಿಂದುಗಡೆ ಲ್ಯಾಂಗ್ಡೊನ್ ಮತ್ತು ನೆವೆಯು ಅವರದು ಕ್ರಿಪ್ಟೆಕ್ಸ್ ಬಗ್ಗೆ ಸುದೀರ್ಘ ಚರ್ಚೆ ಸಾಗಿತ್ತು,ನೆವೆಯು ಹೇಳುವ ಪ್ರಕಾರ ಅವಳ ತಾತಾ ಕ್ರಿಪ್ಟೆಕ್ಸ್ ಗಳನೊಳಗೊಂಡ ಆಟಗಳನ್ನು ತನ್ನೊಂದಿಗೆ ಆದಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಲ್ಯಾಂಗ್ಡೊನ್ ಪ್ರಕಾರ ಕ್ರಿಪ್ಟೆಕ್ಸ್ ನಲ್ಲಿ ಮೌಲ್ಯಯುತ ಮಾಹಿತಿ ಇರಬಹುದು ಅಥವಾ ತಾವು ಹುಡಕಳು ಪ್ರಯತ್ನಿಸುವುದಕ್ಕೆ ಮತ್ತೊಂದು ಸುಳಿವು ದೊರೆಯಬಹುದು ಎಂದು ಅಂದಾಜಿಸಿದ್ದನು. ಅದೇ ಸಂದರ್ಭದಲ್ಲಿ ಆಕಸ್ಮಾತಾಗಿ ನಿಂತ ವಾಹನದಲ್ಲಿ ವರ್ನೆಟ್ ಗನ್ನೊಂದನ್ನು ಹಿಡಿದು ಆ ಕ್ರಿಪ್ಟೆಕ್ಸ್ ನ್ನು ನೀಡುವಂತೆ ಹೆದರಿಸುತ್ತಾನೆ. ಲ್ಯಾಂಗ್ಡೊನ್ ವೆರ್ನೆಟ್ ನನ್ನು ತನ್ನ ತಂತ್ರದ ಮೂಲಕ ಗನ್ನನ್ನು ಕೆಳಕ್ಕೆ ಬೀಳಿಸುತ್ತಾನೆ,ಆಗ ಆತ ಮತ್ತು ಸೊಫಿಯೆ ಅವರು ತಮ್ಮ ಕೈಯಲ್ಲಿ ಕ್ರಿಪ್ಟೆಕ್ಸ್ ಬಾಕ್ಸ್ ನ್ನು ಹಿಡಿದು ಪರಾರಿಯಾದರು.

ಲ್ಯಾಂಗ್ಡೊನ್ ಸಲಹೆ ಪ್ರಕಾರ ಆತ ತಮ್ಮ ಸ್ನೇಹಿತರಾದ ಲೇಘ್ ಟೀಬಿಂಗ್ ಇವಾನ್ ಮೆಕ್ ಮ್ಯಾಕೆಲೆನ್ ಅವರನ್ನು ಕ್ರಿಪ್ಟೆಕ್ಸ್ ತೆರೆಯಲು ಸಹಾಯ ಪಡೆಯಬಹುದೆಂದರು. ಲೇಘ್ ಟೇಬಿಂಗ್ ಪವಿತ್ರ ಬಟ್ಟಲನ್ನು ಪಡೆಯಲು ಉತ್ಸುಕನಾಗಿದ್ದ,ಇದು ನೈಜ ಬಟ್ಟಲಲ್ಲ ಆದರೆ ಮೇರಿ ಮ್ಯಾಗ್ಡೇಲೆನೆ ಬದಲಾಗಿ ಇದಕ್ಕೆ ಪೂರಕವಾದದ್ದು ಎಂದು ಆತ ನಂಬಿದ್ದ.ಜಿಸಸ್ ನ ಅನುಯಾಯಿಗಳು ತಮ್ಮ ನೇತಾರ ಸತ್ತ ನಂತರ ಮಹಿಳೆಯನ್ನು ಅನುಸರಿಸಲು ಸಿದ್ದರಿರಲಿಲ್ಲ ಎಂಬುದನ್ನು ಆತ ಮನಗಂಡಿದ್ದ. ಆ ವೇಳೆಯಲ್ಲಿ ಮೇರಿಯು ಗರ್ಭಿಣಿಯಾಗಿದ್ದಳು;ಟೀಬಿಂಗ್ ಸೊಫೆಗೆ ಹೇಳುವಂತೆ ಜಿಸಸ್ ನ ಉತ್ತರಾಧಿಕಾರಿಗಳನ್ನು ರಕ್ಷಿಸಲು ರಹಸ್ಯ ಸಮಾಜವೊಂದು ರಚನೆಯಾಗಿದೆ. ಜಾಕ್ವೆಸ್ ಸೌನೆಯೆರೆ ಕೂಡಾ ಈ ಸಮಾಜದ ಒಂದು ಭಾಗವೆಂದು ನಂಬಲಾಗಿದೆ.ಇದೂ ಅಲ್ಲದೇ ಟೀಬಿಂಗ್ ,ಸೊಫೆಯಿ ಇದನ್ನು ಸೇರುವಂತೆ ಮಾಡಲು ತರಬೇತಿ ನೀಡುತ್ತಿದ್ದಾನೆಂದು ಆತ ಸಂಶಯಪಟ್ಟಿದ್ದ. ಇದೇ ವೇಳೆಗೆ ಸಿಲಾಸ್ ಟೀಬಿಒಂಗ್ ನ ಬಂಗಲೆಯನ್ನು ಒಡೆದು ಒಳಹೊಕ್ಕು ಕ್ರಿಪ್ಟೆಕ್ಸ್ ನ್ನು ಕದಿಯಲು ಯತ್ನಿಸುತ್ತಾನೆ. ಟೀಬಿಂಗ್ ತನ್ನ ಕೋಲಿನಿಂದ ಆತನನ್ನು ಅಟ್ಟಾಡಿಸಿ ಸಿಲಾಸ್ ನನ್ನು ಹೊರದಬ್ಬುತ್ತಾನೆ,ಮತ್ತೆ ಅವರು ಅಡುಗೆಯವ,ರೆಮಿ ಜೀನ್ ಮತ್ತು ಸಿಲಾಸ್ ನೊಂದಿಗೆ ಪರಾರಿಯಾಗುತ್ತಾರೆ. ಆ ಗುಂಪು ಟೀಬಿಂಗ್ ನ ವಿಮಾನದಲ್ಲಿ ಪರಾರಿಯಾಗುತ್ತದೆ,ಮುಂದಿನ ಸುಳಿವು ಲಂಡನ್ ನಲ್ಲಿರುವುದನ್ನು ಅದು ಗಮನಿಸಿರುತ್ತದೆ.

ರೆಮಿ ಜೀನ್ ನಿಜವಾಗಿಯೂ ದಿ ಟೀಚರ್ ನ ಅನುಯಾಯಿಯಾಗಿರುತ್ತಾನೆಂಬುದು ಗೊತ್ತಾಗುತ್ತದೆ,ಹೀಗಿರುವಾಗ ಆತನನ್ನು ರಹಸ್ಯ ಮನುಷ್ಯನೊಬ್ಬ ಆತನನ್ನು ಕೊಂದು ಸಿಲಾಸ್ ನನ್ನು ಮುಕ್ತಗೊಳಿಸುತ್ತಾನೆ. ಸಿಲಾಸ್ ನ ಮೇಲೆ ಪೊಲಿಸ್ ರು ದಾಳಿ ಮಾಡುತ್ತಾರೆ,ಇಲ್ಲಿ ನಡೆಯುವ ಗುಂಡಿನ ದಾಳಿಯಲ್ಲಿ ಆಕಸ್ಮಿಕವಾಗಿ ಬಿಶಪ್ ಮ್ಯಾನುವಲರಿಂಗೊರೊಸಾ ಅವರ ಮೇಲೆ ಗುಂಡು ಹಾರಿಸುತ್ತಾನೆ. ಆತನ ದುಖದಲ್ಲಿ ಸಿಲಾಸ್ ಪೊಲಿಸರ ನೆರವಿನ ಆತ್ಮಹತ್ಯಾ ಪ್ರಕರಣದಲ್ಲಿ ಸಾವನ್ನಪ್ಪುತ್ತಾನೆ,ಅರಿಂಗಾರೊಸಾನನ್ನು ಆಸ್ಪತ್ರೆಗೆ ಒಯ್ಯಲಾಗುತ್ತದೆ,ಮಿತ್ರದ್ರೋಹದ ಕಾರಣದಿಂದಾಗಿ ಫೆಚೆನಿಂದ ಆತ ಬಂಧನಕ್ಕೊಳಗಾಗುತ್ತಾನೆ.


ಈ ರಹಸ್ಯವನ್ನು ಭೇಧಿಸಲು ಅದಕ್ಕೆ ಪರಿಹಾರ ಹುಡುಕಲು ಹೋದಂತೆ ಲ್ಯಾಂಗ್ಡೊನ್ ಟೀಬಿಂಗ್ ನಿಂದ ಮಿತ್ರದ್ರೋಹಕ್ಕೆ ಒಳಗಾಗುತ್ತಾನಲ್ಲದೇ ಆತನೇ ದಿ ಟೀಚರ್ ಎಂಬುದು ಬಹಿರಂಗಗೊಳ್ಳುತ್ತದೆ. ಟೀಬಿಂಗ್ ,ಮೇರಿ ಮ್ಯಾಗ್ಡೇಲ್ ಳ ಅವಶೇಷಗಳನ್ನು ಹುಡುಕಲು ಬಂದಿದ್ದ,ಅದರಿಂದ ಪವಿತ್ರ ಸ್ತ್ರೀ ಬಗ್ಗೆ ಸರಿಯಾಗಿದ್ದಾನೆಯೇ ಎಂದು ಪುರಾವೆ ಹುಡುಕುತ್ತಿರುವುದಾಗ ಆತ ಹೇಳುತ್ತಾನೆ.ಲ್ಯಾಂಗ್ಡೊಡ್ ಈ ರಹಸ್ಯವನ್ನು ಭೇಧಿಸದಿದ್ದರೆ ತಾನು ಸೊಫೆಯನ್ನು ಗುಂಡು ಹಾಕಿ ಕೊಲ್ಲುವುದಾಗಿ ಹೆದರಿಸಿದ. ಕೂಡಲೇ ಲ್ಯಾಂಗ್ಡೊನ್ ಕ್ರಿಪ್ಟೆಕ್ಸ್ ನ್ನು ಗಾಳಿಯಲ್ಲಿ ಎಸೆಯುವ ಮೂಲಕ ತನ್ನ ಪ್ರತಿಕ್ರಿಯೆ ತೋರಿದ. ಟೀಬಿಂಗ್ ಅದನ್ನು ಹಿಡಿಯಲು ಪ್ರಯತ್ನಿಸಿದ ಆದರೆ ಅದು ನೆಲಕ್ಕೆ ಅಪ್ಪಳಿಸಿತು. ಅದರಲ್ಲಿನ ದ್ರಾಕ್ಷಾರಕ್ಷದ ಚಿಕ್ಕ ಬಾಟಲಿ ಒಡೆಯಿತು.ಅದೇ ವೇಳೆಗೆ ಅಲ್ಲಿನ ಕಾಗದ ಪತ್ರದ ಮೇಲೆ ಹರಡಿ,ಅದನ್ನು ಹಾಳು ಮಾಡಿತು.

ಟೀಬಿಂಗ್ ನ ಬಂಧನದ ನಂತರ ಲ್ಯಾಂಗ್ಡೊನ್ ಅದನ್ನು ಎಸೆಯುವಕ್ಕಿಂತ ಮುಂಚೆ ಅದರೊಳಗಿನ ಕೋಡ್ ('Apple') ರಹಸ್ಯವನ್ನು ಪಡೆದುಕೊಂಡಿದ್ದ ಎಂದು ಗೊತ್ತಾಯಿತು. ಈ ಸುಳಿವನ್ನು ಪಡೆದ ಅವರು ಈ ಹಿಂದೆ ಅಡಗಿಸಿಟ್ಟ ಮ್ಯಾಗ್ಡ್ ಲೆನ್ ಳ ಅವಶೇಷಗಳಿರುವ ಸ್ಕಾಟ್ ಲ್ಯಾಂಡ್ ನ ರೊಸ್ಲಿನ್ ಚಾಪೆಲ್ ಗೆ ಪಯಣ ಬೆಳೆಸಿದರು. ಅಲ್ಲಿ ಅವರು ಅವಳನ್ನು ರಕ್ಷಿಸಿದ ರಹಸ್ಯ ಸಂಘಟನೆಯ ಸದಸ್ಯರನ್ನು ಭೇಟಿ ಮಾಡಿದರು. ಇಲ್ಲಿ ಸೊಫೆಯೆನೇ ಮ್ಯಾಗ್ಡೆಲೆನೆಯ ನಿಜವಾದ ಉತ್ತಾರಾಧಿಕಾರಿ,ಆದ್ದರಿಂದ ಈತನೇ ಸದ್ಯದ ಜಿಸಸ್ ಕ್ರಿಸ್ತನ ಉತ್ತರಾಧಿಕಾರಿ. ಅವಳನ್ನು ಅವರು ಸುರಕ್ಷಿತವಾಗಿ ಇಡುವುದಾಗಿ ಪಣ ತೊಟ್ಟರು. ಲ್ಯಾಂಗ್ಡೊನ್ ಮತ್ತು ಸೊಫೆಯೆ ಕೆಲವೇ ಸಮಯದಲ್ಲಿ ಅಲ್ಲಿಂದ ಬೇರೆಯಾದರು.

ಲ್ಯಾಂಗ್ಡೊನ್ ಆಕಸ್ಮಿತವಾಗಿ ಮುಖ ಕ್ಷೌರ ಮಾಡಿಕೊಳ್ಳುವಾಗ ಗಾಯ ಮಾಡಿಕೊಂಡಾಗ ಅಲ್ಲಿನ ರಕ್ತ ರೊಸ್ ಲೈನ್ ನ ಗೋಚರತೆ ಆಗಿ ಉಳಿಯುತ್ತದೆ. ಆತ ರೊಸ್ ಲೈನ್ ನನ್ನು ಹಿಂಬಾಲಿಸಿ ಪವಿತ್ರ ಸ್ತ್ರೀಯ ಸ್ಥಳವನ್ನು ಗುರ್ತಿಸಿದ.ಅದನ್ನು ಲೌವ್ರೆನಲ್ಲಿ ಪಿರಾಮಿಡ್ ನ ಕೆಳಗೆ ಹೂಳಲಾಯಿತು. ಲ್ಯಾಂಗ್ಡೊನ ಮೇರಿ ಮ್ಯಾಗ್ಡೆಲೆನೆ ಶಿಖರದ ಮೇಲೆ ಮೊಳಕಾಲೂರಿ ಈ ಮೊದಲು ಟೆಂಪ್ಲರ್ ನೈಟ್ಸ್ ಮಾಡಿದಂತೆ ಮಾಡಿದ.

Other Languages
žemaitėška: Da Vinčė kuods
Bahasa Indonesia: The Da Vinci Code (film)
Lingua Franca Nova: La Sifra de Vinci (filma)
polski: Kod da Vinci
srpskohrvatski / српскохрватски: The Da Vinci Code (film)