ದಿವಾಳಿತನ

Failure of John Law's Mississippi Company led to French national bankruptcy in 1720.

ದಿವಾಳಿತನ ವ್ಯಕ್ತಿ ಅಥವಾ ಸಂಸ್ಥೆ ತನ್ನ ಸಾಲಗಾರರಿಗೆ ಹಣವನ್ನು ಹಿಂದಿರುಗಿಸಲಾಗುವುದಿಲ್ಲವೆಂದು ಕಾನೂನಾತ್ಮಕವಾಗಿ ಘೋಷಿಸುವ ಒಂದು ಪ್ರಕ್ರಿಯೆ. ಒಬ್ಬ ವ್ಯಕ್ತಿ ತನ್ನ ಎಲ್ಲ ಋಣಗಳನ್ನೂ ಸಂದಾಯ ಮಾಡಲು ಆಶಕ್ತನಾಗಿರುವ ಪರಿಸ್ಥಿತಿಯನ್ನು ಅಥವಾ ಅವನ ಆರ್ಥಿಕ ಅವಸ್ಥೆಯನ್ನು ಸೂಚಿಸುವುದರ ಜೊತೆಗೆ, ಅಂಥ ವ್ಯಕ್ತಿಯ ಸ್ವತ್ತಿಗೆ ಬರಬೇಕಾದ ಸೂಕ್ತ ಬೆಲೆ ಬಂದಾಗ್ಯೂ ಅವನ ಎಲ್ಲ ಋಣಗಳನ್ನೂ ಅದರಿಂದ ತೀರಿಸುವುದು ಸಾಧ್ಯವಾಗದೆಂಬುದನ್ನೂ ದಿವಾಳಿತನ ಎಂಬ ಶಬ್ದ ವ್ಯಕ್ತಪಡಿಸುತ್ತದೆ. ಸಂಬಂಧಿತ ಸೂಕ್ತ (ಕಾಂಪಿಟೆಂಟ್) ನ್ಯಾಯಾಲಯವೊಂದು ಒಬ್ಬ ವ್ಯಕ್ತಿಯನ್ನು ದಿವಾಳಿಯೆಂದು ಘೋಷಿಸಿದ ಹೊರತು ಅವನನ್ನು ಹಾಗೆಂದು ಕರೆಯಲಾಗದು.

ಕಾನೂನುಗಳು

ದಿವಾಳಿತನಕ್ಕೆ ಸಂಬಂಧಿಸಿದ ಆಧುನಿಕ ಅಧಿನಿಯಮಗಳು ಒಬ್ಬ ಮನುಷ್ಯನನ್ನು ದಿವಾಳಿಯೆಂದು ಘೋಷಿಸಲು ಅನುಸರಿಸಬೇಕದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಸಾಲದಾತರಿಗೆ ಸಾಲಗಾರರಿಂದ ಬರಬೇಕಾದ ಮೊಬಲಗುಗಳಿಗೆ ಅನುಗುಣವಾಗಿ ಸಾಲಗಾರನ ಸ್ವತ್ತನ್ನು ಅವರಲ್ಲಿ ಹಂಚುವುದಕ್ಕೆ ಏರ್ಪಾಟು ಮಾಡುವುದೂ ಸಾಲಿಗರ ಕೋಟಲೆಯಿಂದ ಸಾಲಗಾರನನ್ನು ವಿಮೋಚನೆಗೊಳಿಸುವುದೂ ದಿವಾಳಿಯಾದವನು ಮತ್ತೆ ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುವುದೂ ಈ ಅಧಿನಿಯಮಗಳ ಉದ್ದೇಶಗಳಾಗಿರುತ್ತವೆ. ದಿವಾಳಿತನದ ಕಾನೂನನ್ನು ಜಾರಿಗೆ ತರುವುದಕ್ಕೆ ಹಿಂದೆ, ಸಾಲ ತೀರಿಸಲಾಗದ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗುತ್ತಿತ್ತು. ಅಂಥವರನ್ನು ಅನೇಕ ವೇಳೆ ಕಾರಾಗೃಹಕ್ಕೆ ಕಳುಹಿಸಲಾಗುತ್ತಿತ್ತು. ಅದರೆ ಹಲವೊಮ್ಮೆ ಇಂಥ ಪರಿಸ್ಥಿತಿ ದುರ್ವರ್ತನೆಗಿಂತ ದುರದೃಷ್ಟದ ಪರಿಣಾಮವೆನಿಸುತ್ತಿದ್ದುದೂ ಉಂಟು. ಆದ್ದರಿಂದ ಅಂಥ ದುರ್ದೈವಿ ಸಾಲಗಾರನು ತನ್ನ ಗತಕಾಲದ ಹೊಣೆಗಳಿಂದ ವಿಮೋಚನೆ ಹೊಂದಿ ಹೊಸದಾಗಿ ಜೀವನವನ್ನಾರಂಭಿಸಲು ಮಾರ್ಗವನ್ನು ಈ ಕಾನೂನು ಒದಗಿಸಿ ಕೊಡುತ್ತದೆ. ಸಾಲದಾತರಿಗೂ ಇದರಿಂದ ಪ್ರಯೋಜನವುಂಟು. ಸಾಲಗಾರನ ಲಭ್ಯವಿರುವ ಸ್ವತ್ತನ್ನು ಸಮನ್ವಯವಾಗಿ (ಎಕ್ವಿಟಬಲ್) ಅವನ ಎಲ್ಲ ಸಾಲದಾತರಿಗೆ ವಿತರಣೆಯಾಗುವಂತೆ ಇದು ಭರವಸೆ ನೀಡುತ್ತದೆ. ದಿವಾಳಿತನದ ಕಾನೂನು ಇಲ್ಲದಿದ್ದಲ್ಲಿ ಸಾಲಗಾರನು ತನ್ನ ಸ್ವತ್ತನ್ನು ಸಾಲಿಗರಲ್ಲಿ ಯಾದೃಚ್ಛಿಕವಾಗಿ ಹಂಚಬಹುದು. ಈ ವಿಚಾರದಲ್ಲಿ ಎಲ್ಲ ಸಾಲದಾತರು ಸಮಾನರಾಗಿ ಪರಿಗಣಿತರಾಗುವಂತೆ-ಒಂದೇ ದರದಲ್ಲಿ ಎಲ್ಲರಿಗೂ ಪಾವತಿಯಾಗುವಂತೆ-ನ್ಯಾಯಾಲಯ ನೋಡಿಕೊಳ್ಳಲು ಕಾನೂನು ಅವಕಾಶ ಮಾಡಿಕೊಡುತ್ತದೆ.

Other Languages
العربية: إفلاس
مصرى: افلاس
azərbaycanca: Müflisləşmə
беларуская: Банкруцтва
български: Банкрут
বাংলা: দেউলিয়া
bosanski: Stečaj
català: Fallida
čeština: Úpadek
dansk: Konkurs
Deutsch: Bankrott
Ελληνικά: Πτώχευση
English: Bankruptcy
Esperanto: Bankroto
español: Quiebra
eesti: Pankrot
فارسی: ورشکستگی
suomi: Konkurssi
עברית: פשיטת רגל
हिन्दी: दिवाला
hrvatski: Stečaj
magyar: Csőd
Հայերեն: Սնանկություն
Bahasa Indonesia: Kebangkrutan
íslenska: Gjaldþrot
italiano: Bancarotta
日本語: 倒産
қазақша: Банкрот
한국어: 파산
Lëtzebuergesch: Bankrott
lietuvių: Bankrotas
latviešu: Bankrots
македонски: Стечај
Bahasa Melayu: Kemuflisan
မြန်မာဘာသာ: ဒေဝါလီခံခြင်း
Nederlands: Faillissement
norsk nynorsk: Konkurs
norsk: Konkurs
polski: Upadłość
پښتو: دېوالي
português: Falência
română: Faliment
Scots: Bankruptcy
srpskohrvatski / српскохрватски: Bankrot
Simple English: Bankruptcy
slovenčina: Bankrot
slovenščina: Stečaj
српски / srpski: Stečaj
svenska: Konkurs
ئۇيغۇرچە / Uyghurche: ۋەيران بولۇش
українська: Банкрутство
اردو: دیوالہ
oʻzbekcha/ўзбекча: Bankrotlik
Tiếng Việt: Phá sản
中文: 破產
Bân-lâm-gú: Phò-sán
粵語: 破產