ಟಿವಿ (ದೂರದರ್ಶನ) ಜಾಹೀರಾತುಗಳು

1928 ರಲ್ಲಿ ದೂರದರ್ಶನವು ತನ್ನ ಪ್ರಾಯೋಗಿಕ ಹಂತದಲ್ಲಿಯೇ ಇತ್ತು, ಆದರೆ ಭವಿಷ್ಯದಲ್ಲಿ ಸರಕುಗಳನ್ನು ಮಾರಾಟ ಮಾಡುವ ಸಂಭಾವ್ಯ ವಿಚಾರ ಆಲೋಚನೆಯಲ್ಲಿತ್ತು.

ದೂರದರ್ಶನ ಪ್ರಕಟಣೆ ಅಥವಾ ದೂರದರ್ಶನ ಜಾಹೀರಾತುಗಳು , ಅನೇಕ ವೇಳೆ ಕೇವಲ ಜಾಹೀರಾತು, ಪ್ರಸ್ತಾವ, ಆಡ್ ಅಥವಾ ಆಡ್-ಫಿಲ್ಮ್ (ಇಂಡಿಯಾ)-ಇದು ಒಂದು ಸಂಸ್ಥೆಯಿಂದ ವೀಕ್ಷಕರಿಗೆ ಒಂದು ಸಂದೇಶ ವನ್ನು ರವಾನಿಸುವ ಸಲುವಾಗಿ ನಿರ್ಮಿಸಲ್ಪಟ್ಟ ಮತ್ತು ಅದಕ್ಕಾಗಿ ಹಣ ನೀಡಲ್ಪಟ್ಟ ಒಂದು ದೂರದರ್ಶನ ಕಾರ್ಯಕ್ರಮವಾಗಿದೆ. ಜಾಹೀರಾತು ನಿರ್ಮಾಣದ ಗುರು ಹ್ಯಾಡ್ಲಿಯವರ ಪ್ರಕಾರ ಜಾಹೀರಾತು ಪ್ರದರ್ಶನಕ್ಕೆ ಯರೊಬ್ಬರೂ ಕೂಡ ಎಮ್‌ಪಿಟಿ ಯ ಅಧ್ಯಯನ ಮಾಡುವ ಅವಶ್ಯಕತೆಯಿಲ್ಲ. ಜಾಹೀರಾತು ಆದಾಯವು ಹೆಚ್ಚ ಖಾಸಗಿ ಮಾಲಿಕತ್ವದಲ್ಲಿರುವ ದೂರದರ್ಶನ ಸಂಪರ್ಕಜಾಲಗಳಿಗೆ ಬಂಡವಾಳ ಹೂಡಿಕೆಗೆ ಗಣನೀಯ ಪ್ರಮಾಣದ ಆದಾಯವನ್ನು ಒದಗಿಸುತ್ತದೆ. ಪ್ರಸ್ತುತದಲ್ಲಿ ದೂರದರ್ಶನ ಪ್ರಕಟಣೆಗಳ ವ್ಯಾಪಕ ಪ್ರಮಾಣವು ಸಂಕ್ಷಿಪ್ತ ಜಾಹೀರಾತುಗಳು ಒಳಗೊಂಡಿ ರುತ್ತದೆ, ಇದು ಕೆಲವು ಸೆಕೆಂಡ್‌ಗಳಿಂದ ಹಲವಾರು ನಿಮಿಷಗಳವರೆಗೂ ಇರುತ್ತದೆ (ಅದೇ ರೀತಿಯಾಗಿ ಕಾರ್ಯಕ್ರಮದ ದೀರ್ಘತೆಯು ಇನ್‌ಫಾರ್ಮೆಷಿಯಲ್ (ಸಣ್ಣ ಡಾಕ್ಯುಮೆಂಟರಿ) ಕೂಡ ಆಗಿರುತ್ತದೆ) ಈ ರೀತಿಯ ಜಾಹೀರಾತುಗಳು ದೂರದರ್ಶನದ ಸಂಶೋಧನೆಯ ನಂತರದಿಂದ ಹಲವಾರು ವಿಧದ ಸರಕುಗಳು, ಸೇವೆಗಳು ಮತ್ತು ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಬಳಸಿಕೊಳ್ಳಲ್ಪಟ್ಟವು. ವೀಕ್ಷಕರ ಮೇಲೆ ವಾಣಿಜ್ಯ ಜಾಹೀರಾತುಗಳ ಪರಿಣಾಮವು ಯಶಸ್ವಿಯಾಗಲ್ಪಟ್ಟಿದೆ ಮತ್ತು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಂತೆ ಹಲವಾರು ದೇಶಗಳಲ್ಲಿ, ದೂರದರ್ಶನ ಪ್ರಚಾರ ಜಾಹೀರಾತುಗಳು ರಾಜಕೀಯ ಪ್ರಚಾರಕ್ಕೆ ಅನಿವಾರ್ಯ ಎಂಬುದಾಗಿ ಪರಿಗಣಿಸಲ್ಪಟ್ಟಿವೆ. ಇತರ ದೇಶಗಳಲ್ಲಿ, ಅಂದರೆ ಫ್ರಾನ್ಸ್‌ನಂತಹ ದೇಶಗಳಲ್ಲಿ, ದೂರದರ್ಶನಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಣೆಯು ವ್ಯಾಪಕ ನಿರ್ಬಂಧವನ್ನು ವಿಧಿಸಲ್ಪಟ್ಟಿದೆ,[೧] ಮತ್ತು ನಾರ್ವೇಯಂತಹ ದೇಶಗಳು ಈ ರಾಜಕೀಯ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಿವೆ.

ಪರಿವಿಡಿ

Other Languages