ಜಾಗತೀಕರಣ

ಜಾಗತೀಕರಣವು ವಿಶ್ವದ ಹಲವು ಸಂಸ್ಕ್ರತಿಗಳ ಮೇಲೆ ಮಹತ್ತರ ಪರಿಣಾಮ ಬೀರಿದೆ.

ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ.

ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.[೧]. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.[೨] ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.

ವ್ಯಾಖ್ಯಾನ

1897ರಲ್ಲಿ "ಕಾರ್ಪೋರೇಟ್ ದೈತ್ಯರು" ಎಂಬ ಪದವನ್ನು ಪ್ರಯೋಗಿಸಿದ ಅಮೆರಿಕದ ಖ್ಯಾತ ವಾಣಿಜ್ಯೋದ್ಯಮಿಯಾಗಿದ್ದು ಸಚಿವರಾದ ಚಾರ್ಲ್ಸ್ ತೇಜ್ ರಸ್ಸೆಲ್ರಿಂದ ಜಾಗತೀಕರಣದ ಇತ್ತೀಚಿನ ವ್ಯಾಖ್ಯಾನವು ಬರೆಯಲ್ಪಟ್ಟಿದೆ. [೩]1960ರ ನಂತರದಲ್ಲಿ ಆರ್ಥಿಕ ತಜ್ಞರು ಮತ್ತು ಇತರ ಸಮಾಜ ವಿಜ್ಞಾನಿಗಳು ಈ ಶಬ್ದವನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸಿದರು. 1980ರ ಉತ್ತರಾರ್ಧದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಿಂದ ಇದು ವ್ಯಾಪಕವಾಗಿ ಬಳಸಲ್ಪಟ್ಟಿತು. ಇದರ ಬಳಕೆ ಪ್ರಾರಂಭವಾದಂದಿನಿಂದ ಜಾಗತೀಕರಣದ ಪರಿಕಲ್ಪನೆಯ ಕುರಿತಾಗಿ ಬಹಳಷ್ಟು ಸ್ಪರ್ಧಾತ್ಮಕ ವಿವರಣೆ ಮತ್ತು ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. [೪]

ದಿ ಯುನೈಟೆಡ್ ನೇಶನ್ಸ್ ಬಿಲ್ಡಿಂಗ್

ದಿ ಯುನೈಟೆಡ್ ನೇಶನ್ಸ್ ಇಎಸ್‌ಸಿಡಬ್ಲ್ಯೂಎ ಉಲ್ಲೇಖಿಸಿದಂತೆ ಜಾಗತೀಕರಣವು " ಒಂದು ವ್ಯಾಪಕವಾದ ಪರಿಕಲ್ಪನೆಯಾಗಿದ್ದು ವಿವಿಧ ರೀತಿಯಲ್ಲಿ ಇದನ್ನು ವಿವರಿಸಬಹುದಾಗಿದೆ. ಆರ್ಥಿಕ ಸಂದರ್ಭದಲ್ಲಿ ಉಪಯೋಗಿಸಿದಾಗ ಇದು ಸರಕುಗಳು, ಬಂಡವಾಳಗಳ, ಸೇವೆ ಮತ್ತು ಶ್ರಮದ ಹರಿವಿನ ಸೌಲಭ್ಯಕ್ಕೆ ರಾಷ್ಟ್ರೀಯ ಗಡಿಯ ಮಿತಿಯನ್ನು ತೆಗೆಯುತ್ತದೆ ಮತ್ತು ಕಡಿಮೆಗೊಳಿಸುತ್ತದೆ. ಆದರೂ ಶ್ರಮಕ್ಕೆ ಸಂಬಂಧಪಟ್ಟ ಕೆಲವು ಪ್ರತಿಬಂಧಗಳು ಶ್ರಮದ ಹರಿವಿಗೆ ಕುರಿತಾದಂತೆ ಇನ್ನೂ ಇದೆ. ಜಾಗತೀಕರಣವು ಹೊಸ ವಿದ್ಯಮಾನವಲ್ಲ. ಇದು 90ರ ದಶಕದ ಉತ್ತರಾರ್ಧದಿಂದ ಪ್ರಾರಂಭವಾಯಿತು, ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಕುಂಟಿತಗೊಂಡ ಜಾಗತೀಕರಣ ಪ್ರಕ್ರಿಯೆಯು ಇಪ್ಪತ್ತನೇ ಶತಮಾನದ ಮೂರನೇ ಭಾಗದವರೆಗೂ ಮುಂದುವರೆದಿದೆ. ಜಾಗತಿಕರಣ ಹರಡುವಿಕೆಯು ಕುಂಟಿತವಾಗಲು ಕಾರಣ ಹಲವು ದೇಶಗಳು ತಮ್ಮ ದೇಶದ ಪ್ರಮುಖ ಉದ್ಯಮಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜಾಗತೀಕರಣಕ್ಕೆ ವಿರುದ್ಧವಾದ ಕೆಲವು ನಿಯಮಗಳನ್ನು ಜಾರಿಗೆ ತಂದವು. ಏನೇ ಆದರೂ ಜಾಗತೀಕರಣವು ವೇಗವಾಗಿ ಬೆಳೆದದ್ದು ಇಪ್ಪತ್ತನೇ ಶತಮಾನದ ನಾಲ್ಕನೇ ಭಾಗದ ಅವಧಿಯಲ್ಲಿ. . . "[೫]


ಸಸ್ಕಿಯ ಸಸ್ಸೆನ್ ಹೇಳುವಂತೆ "ಜಾಗತೀಕರಣದ ಒಂದು ಉತ್ತಮ ಲಕ್ಷಣ ಎಂದರೆ ಇದು ಹಲವು ಸೂಕ್ಷ್ಮ-ಪ್ರಕ್ರಿಯೆಗಳ ಮೂಲಕ ರಾಷ್ಟ್ರ್ರೀಯ ಎಂದುಕೊಂಡ ವಿಷಯಗಳನ್ನು, ಉದಾಹರಣೆಗೆ ನಿಯಮಗಳು, ಬಂಡವಾಳವಾಳ, ರಾಜಕೀಯ ವಿಷಯಾಸಕ್ತಿ, ನಗರ ಸ್ಥಳ, ಐಹಿಕ ಚೌಕಟ್ಟು ಅಥವಾ ಯಾವುದೇ ರೀತಿಯ ಚಟುವಟಿಕೆ ಮತ್ತು ಕಾರ್ಯಕ್ಷೇತ್ರಗಳನ್ನು ರಾಷ್ಟ್ರೀಕರಣದಿಂದ ಮುಕ್ತಗೊಳಿಸಿ ಅಂತರಾಷ್ಟ್ರೀಕರಣ ಪ್ರಕ್ರಿಯೆಗೆ ತೊಡಗುತ್ತದೆ.[೬]

ಕ್ಯಾಟೋ ಇನ್ಸ್‌ಟಿಟ್ಯೂಟ್‌ನ ಟಾಮ್ ಜಿ.ಪಾಮರ್ ಜಾಗತೀಕರಣವನ್ನು ವಿವರಿಸುತ್ತಾ " ಪ್ರಾದೇಶಿಕ ಬಲವಂತದ ನಿರಾಕರಣೆ ಅಥವಾ ಒಪ್ಪಿಗೆಯು ಗಡಿಯಲ್ಲಿನ ವಿನಿಮಯ ಮತ್ತು ಸಮನ್ವಯದ ಅಧಿಕ್ಯ ಮತ್ತು ಉತ್ಪಾದನೆಯ ಜಾಗತಿಕ ವ್ಯವಸ್ಥೆ ಮತ್ತು ವಿನಿಮಯವನ್ನೊಳಗೊಂಡ ಪರಿಣಾಮವಾಗಿದೆ."[೭]

ಜಾಗತಿಕ ವ್ಯಾಪಾರ, ಹೊರಗುತ್ತಿಗೆ, ಸರಣಿಪೂರಣ ಮತ್ತು ರಾಜಕೀಯ ಶಕ್ತಿಯು ಕೆಟ್ಟ ಮತ್ತು ಒಳ್ಳೆಯ ಈ ಎರಡೂ ಹಿನ್ನೆಲೆಯಿಂದ ಜಗತ್ತನ್ನು ಶಾಶ್ವತವಾಗಿ ಬದಲಾಯಿಸಿರುವುದನ್ನು ಜಗದ ಏಕತಾನತೆಯ ವಾದದ ಮೂಲಕ ಥಾಮಸ್ ಎಲ್.ಫ್ರೀಡ್‌ಮನ್ ಪರೀಕ್ಷಿಸಿದ್ದಾರೆ.

ಜಾಗತೀಕರಣವು ತೀವ್ರವಾಗುತ್ತಿದ್ದಂತೆ, ವಾಣಿಜ್ಯಿಕ ಸಂಸ್ಥೆ ಮತ್ತು ಪದ್ಧತಿ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿದೆ ಎಂದೂ ಅವರು ವಾದಿಸುತ್ತಾರೆ.[೮]


ಹೆಚ್ ಎಸ್ ಬಿ ಸಿ ವಿಶ್ವದಲ್ಲೆ ದೊಡ್ಡ ಲೇವಾದೇವಿ ಸಂಸ್ಥೆಯಾಗಿದ್ದು ಜಗತ್ತಿನ ಎಲ್ಲೆಡೆ ಕಾರ್ಯ ನಿರ್ವಹಿಸುತ್ತದೆ.


ನೋಮ್ ಚೊಮ್‌ಸ್ಕಿ ವಾದಿಸುತ್ತಾ, ಜಾಗತೀಕರಣ ಪದವ‍ನ್ನು ಧಾರ್ಮಿಕ ಸಂವೇದನೆಗೆ ಕೂಡ ಬಳಸಲಾಗುತ್ತಿದೆ. ಇದನ್ನು ನವಮುಕ್ತ ರೀತಿಯಾದ ಆರ್ಥಿಕ ಜಾಗತೀಕರಣವನ್ನು ವಿವರಿಸಲು ಬಳಸುತ್ತಾರೆ.[೯]

ಹರ್ಮನ್ ಈ.ಡಾಲಿ ವಾದಿಸುತ್ತಾ ಕೆಲವು ಬಾರಿ ಅಂತರರಾಷ್ಟ್ರೀಕರಣ ಮತ್ತು ಜಾಗತೀಕರಣ ಶಬ್ದಗಳನ್ನು ಪರಸ್ಪರ ಪರ್ಯಾಯ ಪದಗಳಾಗಿ ಉಪಯೋಗಿಸಲ್ಪಡುತ್ತಿವೆ. ಆದರೆ ಇವೆರಡರ ಮಧ್ಯೆ ಬಹುಮುಖ್ಯ ಸಾಂಪ್ರದಾಯಿಕ ವ್ಯತ್ಯಾಸಗಳಿವೆ. ಅಂತರರಾಷ್ಟ್ರೀಕರಣವನ್ನು ಅಂತರರಾಷ್ಟ್ರೀಯ ವ್ಯಾಪಾರ, ಸಂಬಂಧ, ಒಪ್ಪಂದ ಇತ್ಯಾದಿಗಳನ್ನು ಸೂಚಿಸಲು ಬಳಸಲಾಗುತ್ತದೆ. ರಾಷ್ಟ್ರಗಳ ಮಧ್ಯೆ ಬಂಡವಾಳ ಮತ್ತು ಕಾರ್ಮಿಕರ ವಿನಿಮಯದ ಸಾದ್ಯತೆಗೆ ಇದು ಎಡೆ ಮಾಡಿಕೊಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹಾಯೆಕ್ ಫೌಂಡೇಶನ್‌ನ ಅಡ್ರಿಯನ್ ರಾವಿಯರ್ ಅವರು ಜಾಗತೀಕರಣ ಪ್ರಕ್ರಿಯೆಯ ಸಾರಾಂಶವನ್ನು "ಜಾಗತೀಕರಣವು ಮಾರುಕಟ್ಟೆಯಲ್ಲಿ ಸಹಜವಾಗಿ ಉದ್ಭವಿಸುವ ಒಂದು ಕ್ರಿಯೆಯಾಗಿದ್ದು ಅಂತರರಾಷ್ಟ್ರೀಯ ಶ್ರಮ ಹಂಚಿಕೆ, ವೈಯಕ್ತಿಕ ಸ್ವಾತಂತ್ರ್ಯಕ್ಕಿರುವ ನಿರ್ಬಂಧ ನಿವಾರಣೆ, ಸಾರಿಗೆ ಹಾಗೂ ಸಂವಹನದ ವೆಚ್ಚವನ್ನು ಕಡಿಮೆ ಮಾಡುವ ಮತ್ತು ವ್ಯಕ್ತಿಗಳನ್ನು ಪರಸ್ಪರ ಒಟ್ಟುಗೂಡಿಸುವ ಮೂಲಕ ಅತ್ಯುತ್ತಮ ಸಮಾಜ ನಿರ್ಮಾಣವನ್ನು ಇದು ಮಾಡುತ್ತದೆ." ಎಂದು ವಿವರಿಸುತ್ತಾರೆ. [೧೦]

ಕೊನೆಯದಾಗಿ "ಜಾಗತೀಕರಣವು ಅಂತರದೇಶೀಯ ಕಾರ್ಪೋರೇಷನ್‌ಗಳ ತ್ವರಿತ ವಿಸ್ತರಣೆಯಿಂದಾಗಿ, ಮಾರುಕಟ್ಟೆಯ ಆರ್ಥಿಕತೆಯ ಬೆಳವಣಿಗೆ ಇಲ್ಲವೆ ಕೊನೆಗಾಣುವಿಕೆಯ ಪದ್ಧತಿಪೂರ್ವಕ ಪ್ರವೃತ್ತಿಯ ಫಲಿತಾಂಶವಾಗಿದೆ." ಎಂದು ಟಾಕಿಸ್ ಫೊಟೊಪೌಲೋಸ್ ವಾದಿಸುತ್ತಾರೆ. ಆ ಸಂದರ್ಭದಲ್ಲಿದ್ದ ಇತರೆ ಪ್ರವತ್ತಿಗಳನ್ನು ವ್ಯಾಪಾರಿ ಒಕ್ಕೂಟ ಮತ್ತು ಇತರೆ ರಾಜಕೀಯ ಚಟುವಟಿಕೆಗಳ ಮೂಲಕ ತಡೆಯದ ಪರಿಣಾಮವಾಗಿ ಅದಾಗಲೇ ಹುಟ್ಟಿಕೊಂಡಿದ್ದ ಈ ಪೃವತ್ತಿಯ ಪರಿಣಾಮವು ಜಾಗತೀಕರಣ ಪ್ರಕ್ರಿಯೆಯಾಗಿ ಬದಲಾಯಿತು.

ಮಾರುಕಟ್ಟೆಯ ಆರ್ಥಿಕ ಪದ್ದತಿಯಲ್ಲೇ ಇರುವ ಬಹುಮುಖಿ ಹಾಗೂ ಹಿಮ್ಮುಖ ಪ್ರವೃತ್ತಿಯ ವಿದ್ಯಮಾನ ಇದಾಗಿದ್ದು ಅದನ್ನು ಹೀಗೆ ವಿವರಿಸಬಹುದು: ಆರ್ಥಿಕ ಜಾಗತೀಕರಣದಲ್ಲಿಯ ಸರಕು ಸಾಧನಗಳಿಗೆ, ಬಂಡವಾಳ ಮತ್ತು ಶ್ರಮದ ಮಾರುಕಟ್ಟೆಗೆ ಒದಗಿದ ಅನಿಯಂತ್ರಣ ಹಾಗೂ ಮುಕ್ತತೆಯು ನವಮುಕ್ತ ಜಾಗತೀಕರಣಕ್ಕೆ ಕಾರಣವಾಯಿತು. ಅಂತರರಾಷ್ಟ್ರೀಯ ಗಣ್ಯತೆಯಿರುವ ಶಕ್ತಿಯುತ ರಾಷ್ಟ್ರದ ಪರಿಕಲ್ಪನೆಯಿಂದ ಸಮಾನತೆಯ ರಾಷ್ಟ್ರಗಳ ಸಂಸ್ಥಾನವು ಉಂಟಾಗುವ ಪ್ರಕ್ರಿಯೆಯನ್ನು ರಾಜಕೀಯ ಜಾಗತೀಕರಣಕ್ಕೆ ಉದಾಹರಿಸಬಹುದಾಗಿದೆ. ಸಾಂಸ್ಕೃತಿಕ ಜಾಗತೀಕರಣ ಎಂದರೆ ಜಗತ್ತಿನಾದ್ಯಂತ ಸಂಸ್ಕೃತಿಯ ಏಕೀಕರಣ; ಸೈದ್ಧಾಂತಿಕ ಜಾಗತೀಕರಣ, ತಾಂತ್ರಿಕ ಜಾಗತೀಕರಣ, ಸಾಮಾಜಿಕ ಜಾಗತೀಕರಣ ಸಾಮಾಜಿಕ ಜಾಗತೀಕರಣ ಎಂದು ಹೇಳಬಹುದಾಗಿದೆ.

[೧೧]

Other Languages
Afrikaans: Globalisering
Alemannisch: Globalisierung
aragonés: Globalización
العربية: عولمة
asturianu: Globalización
azərbaycanca: Qloballaşma
башҡортса: Глобалләшеү
žemaitėška: Gluobalėzacėjė
беларуская: Глабалізацыя
беларуская (тарашкевіца)‎: Глябалізацыя
български: Глобализация
বিষ্ণুপ্রিয়া মণিপুরী: বিশ্বায়ন
brezhoneg: Bedeladur
bosanski: Globalizacija
کوردی: جیھانگیری
čeština: Globalizace
Cymraeg: Globaleiddio
English: Globalization
Esperanto: Tutmondiĝo
español: Globalización
euskara: Globalizazio
føroyskt: Alheimsgerð
français: Mondialisation
Gaeilge: Domhandú
ગુજરાતી: વૈશ્વિકરણ
हिन्दी: वैश्वीकरण
Fiji Hindi: Vaisvikaran
hrvatski: Globalizacija
Հայերեն: Գլոբալացում
Bahasa Indonesia: Globalisasi
Ilokano: Globalisasion
íslenska: Hnattvæðing
italiano: Globalizzazione
Basa Jawa: Globalisasi
қазақша: Жаһандану
한국어: 세계화
къарачай-малкъар: Глобализация
Latina: Globalizatio
Lëtzebuergesch: Globaliséierung
Limburgs: Globalisering
lietuvių: Globalizacija
latviešu: Globalizācija
Malagasy: Fanatontoloana
македонски: Глобализација
монгол: Даяарчлал
Bahasa Melayu: Globalisasi
Mirandés: Globalizaçon
नेपाल भाषा: हलिमिकरण
Nederlands: Mondialisering
norsk nynorsk: Globalisering
occitan: Globalizacion
ਪੰਜਾਬੀ: ਸੰਸਾਰੀਕਰਨ
polski: Globalizacja
Piemontèis: Mondialisassion
português: Globalização
română: Globalizare
русский: Глобализация
русиньскый: Ґлобалізація
संस्कृतम्: वैश्वीकरणम्
саха тыла: Глобализация
srpskohrvatski / српскохрватски: Globalizacija
Simple English: Globalization
slovenčina: Globalizácia
slovenščina: Globalizacija
српски / srpski: Глобализација
svenska: Globalisering
Kiswahili: Utandawazi
తెలుగు: ప్రపంచీకరణ
тоҷикӣ: Ҷаҳонишавӣ
Tagalog: Globalisasyon
Türkçe: Küreselleşme
татарча/tatarça: Глобальләшү
українська: Глобалізація
Tiếng Việt: Toàn cầu hóa
Winaray: Globalisasyon
中文: 全球化
Bân-lâm-gú: Choân-kiû-hòa
粵語: 全球化