ಜನಾಂಗಶಾಸ್ತ್ರ (ಎಥನಾಲಜಿ)

ಎಥನಾಲಜಿ (ಇದು ಗ್ರೀಕ್‌ ἔθνος ಮೂಲದಿಂದ ಬಂದಿದ್ದು ಎಥೊನೊಸ್‌ ಅಂದರೆ "ಜನರು,ದೇಶ,ಕಾಲದ ಗತಿ"ಎಂದಾಗುತ್ತದೆ) ಇದು ಅಂಥ್ರೊಪೊಲೊಜಿ(ಮಾನವ ಶಾಸ್ತ್ರ)ಇದರ ಒಂದು ಶಾಖೆಯಾಗಿದ್ದು ಮಾನವನ ಮೂಲ, ಹಂಚಿಕೆ, ತಂತ್ರಜ್ಞಾನ, ಧರ್ಮ, ಭಾಷೆ ಮತ್ತು ಜನಾಂಗದ, ಕುಲದ ಮತ್ತು/ಅಥವಾ ರಾಷ್ಟ್ರೀಯ ಮಾನವಿಯ ಮೌಲ್ಯಗಳ ಹಂಚಿಕೆಯ ಸಾಮಾಜಿಕ ವ್ಯವಸ್ಥೆಯನ್ನು ತುಲನಾತ್ಮಕವಾಗಿ ವಿಮರ್ಷಿಸುತ್ತದೆ.[೧]

ವೈಜ್ಞಾನಿಕ ಶಿಸ್ತು

ಎಥನೊಗ್ರಾಫಿ ಎಂಬ ಮಾನವ ಶಾಸ್ತ್ರದ ವಿಭಾಗವನ್ನು ಹೋಲಿಸಿದರೆ,ಸಂಸ್ಕ್ರತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುವ ಒಂದು ಗುಂಪಿನ ಕುರಿತಾದ ಅಧ್ಯಯನದಲ್ಲಿ ಜನಾಂಗಶಾಸ್ತ್ರದ ವಿವರಣೆಕಾರರು ಅಧ್ಯಯನದ ವಿವರಣೆಗಳನ್ನು ಒಟ್ಟುಗೂಡಿಸಿ ವಿವಿಧ ಸಂಸ್ಕ್ರತಿಯೊಂದಿಗೆ ತುಲನೆ ಮಾಡಿ ನೋಡುತ್ತಾರೆ. ಎಥನಾಲಜಿ ಶಬ್ಧವನ್ನು ಮೊದಲು ಬಳಸಿದ ಗೌರವವು ಅದಾಮ್‌ ಫ್ರಾಂಜ್‌ ಕೊಲ್ಲಾರ್‌ ಇವರಿಗೆ ಸಲ್ಲಬೇಕು ಏಕೆಂದರೆ ಅವರು 1783 ವಿಯೆನ್ನಾದಲ್ಲಿ ಬಿಡುಗಡೆಯಾದ ತಮ್ಮ ಹಿಸ್ಟೋರೈ ಇವ್ರಿಸ್ವೆವ್‌ ಪಿವಿಬ್ಲಿಕಿ ರೆಗನಿ ವಿಎನ್‌ಗೆರೈ ಅಮೊನಿಟೆಟ್ಸ್‌ನಲ್ಲಿ (Historiae ivrisqve pvblici Regni Vngariae amoenitates) ಉಲ್ಲೇಖಿಸಿದ್ದಾರೆ.[೨] ಕೊಲ್ಲಾರ್‌ ಅವರಿಗೆ ಭಾಷಾಜ್ಞಾನದ ಮತ್ತು ಸಂಸ್ಕ್ರತಿಯ ಆಸಕ್ತಿಯು, ಅವರ ಮೂಲ ಸ್ಥಾನವಾದ ಹಂಗೇರಿಯ ಮಲ್ಟಿ ಲಿಂಗ್ಯುಯಲ್‌ ಕಿಂಗ್‌ಡಮ್‌ನಲ್ಲಿರುವವರಿಗೂ ಮತ್ತು ಇದರ ಮೂಲವು ಸ್ಲೊವಾಸ್ಕಿಯಾಗಿದೆ. ಮಾತನಾಡುವವರಿಗೂ ಮನಸ್ಥಾಪಗಳಾಗಿ, ನಂತರ [[ಆಟಮನ್ ಸಾಮ್ರಾಜ್ಯ| ಬಾಲ್ಕನ್‌ನ ರಾಜನಾದ ಒಟ್ಟೋಮನ್‌]]ನಿಂದ ಅವರೆಲ್ಲಾ ಸ್ಥಳಾಂತರ ಹೊಂದಿದ ಪರಿಸ್ಥಿಯನ್ನು ಕಂಡು ಆಸಕ್ತಿಗಳು ಕೆರಳಿತು.[೩]

ಮಾನವಶಾಸ್ತ್ರದ ಗುರಿಗಳು ಮಾನವನ ಇತಿಹಾಸದಲ್ಲಿ ಬದಲವಣೆಯನ್ನು ಕಂಡಿವೆ.ಮತ್ತು ಬದಲಾಗದೇ ಸ್ಥಿರವಾಗಿರುವ ಸಂಸ್ಕೃತಿಯ ಸೂತ್ರನಿರೂಪಣೆಯಲ್ಲಿ ನಿಷಿದ್ಧ ರಕ್ತಸಂಬಂದದಲ್ಲಿ ಸಂಭಂದವನ್ನು ಹೊಂದಿದವರನ್ನು ಬಹಿಷ್ಕರಿಸುವುದು ಮತ್ತು ಅವರ ಸಂಸ್ಕಾರವನ್ನು ಬದಲಾಯಿಸುವುದು. ಮತ್ತು ಹಲವಾರು ತತ್ವಶಾಸ್ತ್ರಜ್ಞರಿಂದ ವಿಮರ್ಷಿಸಲ್ಪಟ್ಟ (ಹೆಗೆಲ್‌, ಮಾರ್ಕ್ಸ್‌, ರಚನಾವಾದ, ಮುಂತಾದವು) ಸಮಾಜಿಕರಣದಿಂದ "ಮಾನವ ಸಂಸ್ಕಾರ"ಎಂಬ ತತ್ವವಾಗಿದೆ. ಇನ್ನು ಕೆಲವು ಮಾನವಶಾಸ್ತ್ರವು ಹಲವು ವಯಕ್ತಿಕ ಶೈಕ್ಷಣಿಕ ಉಪಬೋಧೆ ಗಳ ತಳಹದಿಯಲ್ಲಿ ಬೆಳೆದುಬಂದವುಗಳಾಗಿವೆ. ಇದರೊಂದಿಗೆ ಮಾನವ ಶಾಸ್ತ್ರವು ಅಮೇರಿಕಾದಲ್ಲಿ ತನ್ನ ಪ್ರಾಭಲ್ಯವನ್ನು ಸ್ಥಾಪಿಸಿದ್ದರೆ ಸಾಮಾಜಿಕ ಮಾನವ ಶಾಸ್ತ್ರ ವು ಯುರೋಪ್‌ನಲ್ಲಿ ತನ್ನ ಪ್ರಾಭಲ್ಯವನ್ನು ಸಾಧಿಸಿದ್ದು ಕೆಲವು ಬಾರಿ ಮಾನವನ ಗುಂಪು ಅಧ್ಯಯನಕ್ಕೆ ಸಹಕಾರಿಯಾಗಿದೆ. ವಿಶೇಷವಾಗಿ ಯೂರೋಪ್‌ನಲ್ಲಿ ಜನಾಂಗಶಾಸ್ತ್ರವನ್ನು ಒಂದು ಶೈಕ್ಷಣಿಕ ಕ್ಷೇತ್ರ ಎಂದು ಹದಿನೆಂಟನೆಯ ಶತಮಾನದವರೆಗೂ ಅದನ್ನು ವರ್ಗೀಕರಿಸಲಾಗಿತ್ತು. ಕೆಲವೊಮ್ಮೆ ಇದನ್ನು ಮಾನವ ಗುಂಪಿನ ಇತರೆ ವಿಷಯಗಳ ಅಧ್ಯಯನದಂತೆ ಎಂದು ಇದನ್ನು ಪರಿಗಣಿಸಲಾಗುತ್ತಿತ್ತು.

15ನೇ ಶತಮಾನದಲ್ಲಿ ಯುರೋಪಿಯನ್‌ ಪರಿಶೋಧಕರಿಂದ ನಡೆದ ಅಮೇರಿಕಾದ ಶೋಧನೆಯು ಪಾಶ್ಚಾತ್ಯ ನಾಗರೀಕತೆಯನ್ನು ಇತರ ನಾಗರೀಕತೆಯ ಭಾವನೆಯಂತೆ ವಿಷದೀಕರಿಸಲು ಅನುಕೂಲವಾದವು. ಈ ಪದವನ್ನು "ಅನಾಗರೀಕರು" ಎಂಬ ಪದದೊಂದಿಗೆ ಹೊಂದಿಸಿ ಬಳಸಲಾಗುತ್ತದೆ ಇದನ್ನು ಕಾಮಾತುರ ಕ್ರೂರ ಸ್ವಭಾವದವರು ಅಥವಾ ಅದಕ್ಕೆ ಸಮಾನಾಂತರವಾಗಿ "ಕುಲೀನ ಅನಾಗರೀಕರು" ಎಂಬರ್ಥದಲ್ಲಿಯೂ ಬಳಸಲಾಗುತ್ತದೆ. ಇದನ್ನು ದ್ವಂದ್ವ ಮನಸ್ಥಿತಿಯ ವಿಧಾನದಲ್ಲಿ ನಾಗರೀಕತೆಯನ್ನು ವಾನರರೆಂದು ವರ್ಣಿಸಲಾಯಿತು ಮತ್ತು ಎಥನೋಸೆಂಟ್ರಿಸಮ್‌ನ ಸಮಾನಾಂತರವಾಗಿ ಮೇಲ್ದರ್ಜೆಯ ರಚನಾತ್ಮಕ ವಿರೋಧಗಳು ಕೇಳಿಬಂದವು. ಜನಾಂಗಶಾಸ್ತ್ರದ ಪ್ರಗತಿಯು ಉದಾಹರಣೆಗೆ ಕ್ಲೌಡ್‌ ಲೆವಿ-ಸ್ಟ್ರೌಸ್‌ನ ರಚನಾತ್ಮಕ ಮಾನವ ಶಾಸ್ತ್ರದಂತೆಯೇ ಇದ್ದು, ರೇಖಾತ್ಮಕ ಪ್ರಗತಿಯ ವಿಮರ್ಶೆಗೆ ಒಳಗಾಯಿತು ಅಥವಾ ಇತಿಹಾಸವನ್ನು ಹೊಂದಿದ ಸಮಾಜ ಮತ್ತು ಇತಿಹಾಸವನ್ನು ಹೊಂದಿಲ್ಲದ ಸಮಾಜದ ನಡುವೆ ಹುಸಿ ವಿರೋಧವಾಗಿ ನಿಯಮಿತ ಐತಿಹಾಸಿಕವಾಗಿ ನಿರ್ಧರಿಸಲ್ಪಟ್ಟು ನಿರ್ಧಾರಿತ ಬೆಳವಣಿಗೆಯಾಗುವಂತೆ ಸಂಯೋಜಿಸಲಾಯಿತು.

ಲೆವಿ ಸ್ಟ್ರಸ್‌ ಮೇಲಿಂದ ಮೇಲೆ ಮೊಂಟೆಗ್ನಿಯವರ ನರಭಕ್ಷಣೆಯ ಮೇಲಿನ ಪ್ರಭಂದವನ್ನು ಮೊದಲ ಜನಾಂಗಶಾಸ್ತ್ರಕ್ಕೆ ಉದಾಹರಿಸುತ್ತಿದ್ದರು. ಲೆವಿ ಸ್ಟ್ರೇಸ್‌, ಒಂದು ರಚನಾತ್ಮಕ ವಿಧಾನದಿಂದ ಮಾನವ ಸಮಾಜದಲ್ಲಿ ಬದಲಾಗದೇ ನಿಂತ ವಿಧಾನವಾದ ರಕ್ತ ಸಂಬಂದದಲ್ಲಿ ಸಂಭೋಗ ಸಂಬಂದವನ್ನು ಹೊಂದಿದವರನ್ನು ಸಂಶೋಧಿಸುವ ಗುರಿಯನ್ನು ಹೊಂದಿದ್ದರು. ಆದರೆ ಈ ಸಂಸ್ಕ್ರತಿಯ ಜಾಗತೀಕರಣವನ್ನು 19 ಮತ್ತು 20ನೇ ಶತಮಾನದ ಸಾಮಾಜಿಕ ವಿಮರ್ಶಕರು ಮಾರ್ಕ್ಸ್‌, ನೀತ್ಸೆ, ಪೌಕಾಲ್ಟ್‌, ಆಲ್ತುಸರ್‌ ಮತ್ತು ಡಿಲಿಜ್‌ ಮುಂತಾದವರನ್ನು ಒಳಗೊಂಡಂತೆ ಹಲವರು ಕಟುವಾಗಿ ವಿಮರ್ಷೆಗೆ ಒಳಪಡಿಸಿದರು.

ಮಾರ್ಸೆಲ್‌ ಗ್ರಿಯುಲ್‌, ಜರ್ಮೆನ್‌ ಡೈಟರ್‌ಲೆನ್‌, ಕ್ಲೌಡ್‌ ಲೆವಿ ಸ್ಟ್ರೌಸ್‌ ಮತ್ತು ಜೀನ್‌ ರೌಚ್‌ ಇವರುಗಳನ್ನೊಳಗೊಂಡು ಜನಾಂಗಶಾಸ್ತ್ರದ ಫ್ರೆಂಚ್‌ ಶಾಲೆಗಳು ಶಿಸ್ತಿನ ಅಭಿವೃದ್ಧಿಗಾಗಿಯೇ 1950ರ ದಶಕದ ಮೊದಲಲ್ಲಿ ಕಾರ್ಯಗಳನ್ನು ಮಾಡುತ್ತಿದ್ದವು.

Other Languages
aragonés: Etnolochía
العربية: علم الأعراق
asturianu: Etnoloxía
azərbaycanca: Etnologiya
Boarisch: Ethnologie
žemaitėška: Etnoluogėjė
беларуская: Этналогія
беларуская (тарашкевіца)‎: Этналёгія
български: Етнология
bosanski: Etnologija
català: Etnologia
čeština: Etnologie
kaszëbsczi: Etnologiô
Cymraeg: Ethnoleg
dansk: Etnologi
Deutsch: Ethnologie
Zazaki: Etnolociye
Ελληνικά: Εθνολογία
English: Ethnology
Esperanto: Etnologio
español: Etnología
eesti: Etnoloogia
euskara: Etnologia
فارسی: نژادشناسی
suomi: Kansatiede
Võro: Etnoloogia
français: Ethnologie
galego: Etnoloxía
Avañe'ẽ: Tekochaukahakuaaty
עברית: אתנולוגיה
hrvatski: Etnologija
Kreyòl ayisyen: Etnoloji
Հայերեն: Էթնոլոգիա
Bahasa Indonesia: Etnologi
italiano: Etnologia
日本語: 民族学
Basa Jawa: Ètnologi
ქართული: ეთნოლოგია
қазақша: Этнология
한국어: 민족학
Latina: Ethnologia
Lëtzebuergesch: Ethnologie
lietuvių: Etnologija
latviešu: Etnoloģija
олык марий: Этнологий
македонски: Етнологија
Bahasa Melayu: Etnologi
Nederlands: Etnologie
norsk nynorsk: Etnologi
norsk: Etnologi
occitan: Etnologia
polski: Etnologia
português: Etnologia
română: Etnologie
русский: Этнология
русиньскый: Етнолоґія
Scots: Ethnology
srpskohrvatski / српскохрватски: Etnologija
Simple English: Ethnology
slovenčina: Etnológia
slovenščina: Etnologija
српски / srpski: Етнологија
svenska: Etnologi
Tagalog: Etnolohiya
Türkçe: Etnoloji
українська: Етнологія
oʻzbekcha/ўзбекча: Etnologiya
Tiếng Việt: Dân tộc học
Winaray: Etnolohiya
中文: 民族学
Bân-lâm-gú: Bîn-cho̍k-ha̍k
粵語: 民族學