ಜಗ್ವಾರ್ ಕಾರ್ ಗಳು

Jaguar Cars Limited
ಪ್ರಕಾರPrivate Limited Company
ಸ್ಥಾಪನೆ4 September 1922 (as Swallow Sidecar Company)
ಸಂಸ್ಥಾಪಕ(ರು)Sir William Lyons and William Walmsley
ಮುಖ್ಯ ಕಾರ್ಯಾಲಯCoventry, England, Great Britain
ಪ್ರಮುಖ ವ್ಯಕ್ತಿ(ಗಳು)Ratan Tata, Chairman
David Smith, CEO
Mike O'Driscoll, Managing Director
ಉದ್ಯಮAutomotive
ಉತ್ಪನAutomobiles
ಮಾಲೀಕ(ರು)Tata Motors
ಉದ್ಯೋಗಿಗಳು10,000[೧]
ಪೋಷಕJaguar Land Rover
ಅಂತರಜಾಲ ತಾಣJaguar.com

ಜಗ್ವಾರ್ ಟೆಂಪ್ಲೇಟು:Pronounced ಎಂಬ ಹೆಸರಿನಿಂದಲೇ ಪ್ರಚಲಿತವಾಗಿರುವ ಜಗ್ವಾರ್ ಕಾರ್ಸ್ ಲಿಮಿಟೆಡ್ ,ಇಂಗ್ಲೆಂಡ್ ನ ಕೋವೆಂಟ್ರಿಯಲ್ಲಿ ತನ್ನ ಕೇಂದ್ರಕಚೇರಿಯನ್ನು ಹೊಂದಿರುವಂತಹ ಬ್ರಿಟಿಷ್ ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಕೈಗಾರಿಕೆಯಾಗಿದೆ. ಅದು ಟಾಟಾ ಮೋಟಾರ್ಸ್ ಲಿಮಿಟೆಡ್ ನವರು ಮಾರ್ಚ್ 2008ರಿಂದ ಸಂಪೂರ್ಣ ಮಾಲಿಕತ್ವ ಹೊಂದಿರುವ ಭಾರತೀಯ ಕಂಪನಿಯ ಒಂದು ಅಂಗವಾಗಿದ್ದು, ಅದನ್ನು ಜಗ್ವಾರ್ ಲ್ಯಾಂಡ್ ರೋವರ್ ವ್ಯಾಪಾರದ ಒಂದು ಭಾಗವಾಗಿ ನಡೆಸಿಕೊಂಡುಬರಲಾಗಿದೆ.[೨]

ಜಗ್ವಾರ್ ಸ್ವಾಲೋ ಸೈಡ್ ಕಾರ್ ಕಂಪನಿ ಎಂಬ ಹೆಸರಿನಲ್ಲಿ ಸರ್ ವಿಲಿಯಮ್ ಲಿಯಾನ್ಸ್ ರಿಂದ 1922ರಲ್ಲಿ ಸ್ಥಾಪನೆಗೊಂಡು ಮೊದಲಿಗೆ ಮೋಟರ್ ಸೈಕಲ್ ಸೈಡ್ ಕಾರ್ ಗಳ ಉತ್ಪಾದನೆಯಲ್ಲಿ ತೊಡಗಿಕೊಂಡು, ನಂತರ ಪ್ಯಾಸೆಂಜರ್(ಪ್ರಯಾಣಿಕರ) ಕಾರ್ ಗಳನ್ನು ತಯಾರಿಲು ತೊಡಗಿತು. ಎರಡನೆಯ ಮಹಾಯುದ್ಧದ ನಂತರ SS ಎಂಬ ಅಕ್ಷರಗಳು(ಇನಿಷಿಯಲ್ ಗಳು) ಅನೈಚ್ಛಿಕವಾದ ಅ[ಆರ್ಥಗಳಿಗೆ ಎಡೆಮಾಡಿಕೊಡುತ್ತಿತ್ತೆಂಬ ಕಾರಣದಿಂದ ಕಂಪನಿಯ ಹೆಸರನ್ನು ಜಗ್ವಾರ್ ಎಂದು ಬದಲಿಸಲಾಯಿತು.[೩] 1960ರಿಂದ ಹಲವಾರು ಮಾಲೀಕರ ಕೈಬದಲಾವಣೆಗೊಳಗಂಡನಂತರ, ಜಗ್ವಾರ್ ಅನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನ ಪಟ್ಟಿಯಲ್ಲಿ ದಾಖಲಾಗಿಸಲಾಗಿದ್ದು, 1989ರಲ್ಲಿ ಫೋರ್ಡ್ ಕಂಪನಿಯು ಅದನ್ನು ತನ್ನದಾಗಿಸಿಕೊಳ್ಳುವ ತನಕ ಅದು FTSE 100 ಇಂಡೆಕ್ಸ್ ನ ಭಾಗವಾಗಿಯೇ ಆಗಿದ್ದಿತು.[೪] ಜಗ್ವಾರ್ ಹರ್ ಮೆಜೆಸ್ಟಿ ರಾಣಿ ಎಲಿಝಬೆತ್ ಮತ್ತು ಹಿಸ್ ರಾಯಲ್ ಹೈನೆಸ್ ರಾಜಕುಮಾರ ಚಾರ್ಲ್ಸ್ ರಿಂದ ರಾಯಲ್ ವಾರಂಟ್ (ರಾಜ ಪ್ರಶಂಸಾಸ್ವೀಕೃತಿ) ಸಹ ಪಡೆದಿದೆ.[೫]

ಇಂದು ಜಗ್ವಾರ್ ಕಾರ್ ಗಳನ್ನು ವಿನ್ಯಾಸಗೊಳಿಸುವುದು ಜಗ್ವಾರ್ ಲ್ಯಾಂಡ್ ರೋವರ್ ನವರ ವಾರ್ವಿಕ್ ಷೈರ್ ನ ಕೊಂವೆಂಟ್ರಿಯಲ್ಲಿರುವ ವ್ಹಿಟ್ಲೀ ಪ್ಲಾಂಟ್ ಮತ್ತು ವಾರ್ವಿಕ್ ಷೈರ್ ನ ಗೇಡನ್ ಗಳ ಎಂಜಿನಿಯರಿಂಗ್ ಕೇಂದ್ರಗಳಲ್ಲಾದರೆ, ಇದರ ತಯಾರಿಕೆಯು ಜಗ್ವಾರ್ ಲ್ಯಾಂಡ್ ರೋವರ್ ನ ಎರಡು ಪ್ಲಾಂಟ್(ಕಾರ್ಖಾನೆ)ಗಳಾದ ಬರ್ಮಿಂಗ್ ಹ್ಯಾಂ ನ ಕ್ಯಾಸಲ್ ಬ್ರೋವಿಚ್ ಅಸೆಂಬ್ಲಿ ಪ್ಲಾಂಟ್ ಮತ್ತು ಲಿವರ್ ಪೂಲ್ ಬಳಿಯಿರುವ ಹೇಲ್ವುಡ್ ಬಾಡಿ & ಅಸೆಂಬ್ಲಿ ಗಳಲ್ಲಿ ನಡೆಯುತ್ತವೆ.

ಇತಿಹಾಸ

1922ರಲ್ಲಿ ಇಬ್ಬರು ಮೋಟಾರ್ ಸೈಕಲ್ ವ್ಯಾಮೋಹಿಗಳಾದ ಸರ್ ವಿಲಿಯಂ ಲಿಯಾನ್ಸ್ ಮತ್ತು ವಿಲಿಯಮ್ ವಾಲ್ಮ್ ಸ್ಲೇ ಯವರಿಂದ ಸ್ವಾಲೋ ಸೈಡ್ ಕಾರ್ ಕಂಪನಿ ಎಂಬ ಹೆಸರಿನಲ್ಲಿ ಸ್ಥಾಪಿತವಾದ ಈ ಕಂಪನಿಯ ಉತ್ಪಾದನೆಗಳಲ್ಲಿ, SS ಜಗ್ವಾರ್ ಎಂಬ ಹೆಸರು ಮೊದಲು ಗೋಚರವಾದದ್ದು 1935ರ 2.5 ಲೀಟರ್ ಸಲೂನ್ ಎಂಬ [೬]ಕ್ರೀಡೆಗಾಗಿ ವಿನ್ಯಾಸಗೊಳಿಸಿದ SS 90 ಮತ್ತು SS 100ಗಳಲ್ಲಿ.

1945ರಲ್ಲಿ "SS" ಅಕ್ಷರಗಳು ಗರ್ಮನಿಯ SS ಮಿಲಿಟರಿ ಆರ್ಗನೈಸೇಷನ್ ನ ಹೆಸರಿನಲ್ಲಿಯೂ ಸೇರಿದ್ದುದರಿಂದ, ಅದರ ಪ್ರಚಾರವು ಬಹಳವೇ ಆಗಿದ್ದುದರಿಂದ ಮತ್ತು ಆ ಅಕ್ಷರಗಳನ್ನು ಇಡೀ ಬ್ರಿಟನ್ನಿನಲ್ಲಿ ಬಹಳವೇ ಹಳಿಯಲ್ಪಡುತ್ತಿದ್ದುದರಿಂದ, ಎರಡನೆಯ ಮಹಾಯುದ್ಧ ಕೊನೆಯಾಗುವವೇಳೆಗೆ ಆ ಅಕ್ಷರಗಳನ್ನು ತೆಗೆದುಹಾಕಿ ಇಡೀ ಕಂಪನಿಯನ್ನು ಜಗ್ವಾರ್ ಎಂದೇ ಹೆಸರಿಸಲಾಯಿತು.[೭] ಯುದ್ಧದ ನಂತರ ಹಣದ ಮುಗ್ಗಟ್ಟು ಇದ್ದುದರಿಂದ ಜಗ್ವಾರ್ ತನ್ನ ಮೋಟಾರ್ ಪ್ಯಾನಲ್ಸ್ ಗಳ ಕಾರ್ಖಾನೆ ಮತ್ತು ಆವರಣವನ್ನು ಈ ಕಂಪನಿಯೇ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚು ಉಜ್ವಲವಾಗಿದ್ದ 1930ರ ದಶಕದಲ್ಲಿ ತಮ್ಮದಾಗಿಸಿಕೊಂಡಿದ್ದ ರೂಬೆರಿ ಓವನ್ ಎಂಬ ಆಕುಂಚಿತ ಉಕ್ಕಿನ ಭಾಗಗಳನ್ನು ಉತ್ಪಾದಿಸುವ ಕಂಪನಿಗೆ ಮಾರಿತು.[೮] ಅದೇನೇ ಇರಲಿ, ಯುದ್ಧ ಮುಗಿದ ತಕ್ಷಣದ ದಿನಗಳಲ್ಲಿ ತಯಾರಿಸಿದ ಮಾಡೆಲ್ ಗಳಿಂದ ಜಗ್ವಾರ್ ತಕ್ಕಮಟ್ಟಿನ ಆರ್ಥಿಕ ಯಶಸ್ಸನ್ನು ಗಳಿಸಿತು:ಕೋವೆಂಟ್ರಿಯಲ್ಲಿದ್ದಂತಹ ಇತರೆ ವಾಹನ ತಯಾರಕ ಸಂಸ್ಥೆಗಳಿಗೂ ಈ ಕಾಲ ತ್ರಾಸದಾಯಕವಾಗೇ ಇದ್ದುದರಿಂದ ಜಗ್ವಾರ್ ಕಂಪನಿಯು ಅಲ್ಲಿನವರೆಗೂ ತಮಗೆ ಆರು ಸಿಲಿಂಡರ್ ಗಳ ಎಂಜಿನ್ ಅನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು ಜಾನ್ ಬ್ಲ್ಯಾಕ್ ರವರ ಸ್ಟಾಂಡರ್ಡ್ ಮೋಟಾರ್ ಕಂಪನಿಯಿಂದ ಖರೀದಿಸಲು ಸಾಧ್ಯವಾಯಿತು.[೮]

ಜಗ್ವಾರ್ ನ ಸುದೀರ್ಘ ಮೋಟಾರ್ ಕ್ರೀಡಾ ಇತಿಹಾಸದಲ್ಲಿ ಎರಡು ಅತ್ಯಂತ ಹೆಮ್ಮೆ ಪಡುವ ಕ್ಷಣಗಳೆಂದರೆ ಅಂದಿಗೆ ಖ್ಯಾತಿಯ ಗಂಧವೂ ಇಲ್ಲದಿದ್ದ ಸ್ಕಾಟಿಷ್ ರೇಸಿಂಗ್ ತಂಡವಾದ ಎಕ್ಯೂರೀ ಎಕೋಸೇಯ ದೆಸೆಯಿಂದ ಲೆ ಮಾನ್ಸ್ 24 ಗಂಟೆಗಳ ರೇಸ್ ಅನ್ನು ಮೊದಲು 1956ರಲ್ಲಿ ಗೆದ್ದದ್ದು, ಮತ್ತೆ 1957ರಲ್ಲಿ ಗೆದ್ದದ್ದು; ಎಕ್ಯೂರೀ ಎಕೋಸೆಯ ಹೆಸರು ನಂತರದ ದಿನಗಳಲ್ಲಿ ಪ್ರಖ್ಯಾತವಾದ ಕಾರ್ ವಿನಾಶಕ ರೇಸ್ ನಲ್ಲಿ ಡೇವಿಡ್-ಗೋಲಿಯಾಥ್ ರ ರೀತಿಯಲ್ಲಿ ಎರಡು ಬಾರಿ ವಿಜಯಗಳಿಸುವುದರ ಮೂಲಕ ದಂತಕಥೆಯೇ ಆಗಿಬಿಟ್ಟಿತು.


ತನ್ನ ಮನೋಹರವಾದ ವಿನ್ಯಾಸಗಳನ್ನು ಹೊಂದಿದ ಕ್ರೀಡಾ ಕಾರ್ ಗಳು ಮತ್ತು ಐಷಾರಾಮಿ ಸಲೂನಗ ಗಳ ಮೂಲಕ 1950ರ ದಶಕದಲ್ಲಿ ಜಗ್ವಾರ್,pronounced /ˈdʒæɡjuːər/ (U.K.) ಅಥವಾ pronounced /ˈdʒæɡwɑr/ (U.S.),[೯]ಎಲ್ಲೆಡೆಯೂ ಮನೆಮಾತಾಯಿತು. 1951ರಲ್ಲಿ ಜಗ್ವಾರ್ ಕಂಪನಿಯು ಅನತಿಕಾಲದಲ್ಲೇ ಅದರ ಮುಖ್ಯ ಕಾರ್ಖಾನೆಯಾಗಿ ಸ್ಥಾಪಿತವಾದಂತಹ ಕಾರ್ಖಾನೆಯನ್ನು ಡೈಮ್ಲರ್ ಮೋಟಾರ್ ಕಂಪನಿ[೧೦]( ಡೈಮ್ಲರ್-ಬೆಂಝ್ ಎಂದು ತಪ್ಪು ತಿಳಿಯುವಂತಹುದಲ್ಲ)ಯಿಂದ ಭೋಗ್ಯಕ್ಕೆ ತೆಗೆದುಕೊಂಡಿತು ಮತ್ತು 1960ರಲ್ಲಿ ಡೈಮ್ಲರ್ ಕಂಪನಿಯನ್ನು ಅದರ ಮೂಲಸಂಸ್ಥೆಯಾದ ಬರ್ಮಿಂಗ್ ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿ(BSA)ಯಿಂದ ಖರೀದಿಸಿತು. 1960ರ ದಶಕದ ಪಶ್ಷಿಮಾರ್ಧದಿಂದ ಡೈಮ್ಲರ್ ಅನ್ನು ಜಗ್ವಾರ್ ನ ಅತ್ಯಂತ ಐಷಾರಾಮಿ ಸಲೂನ್ ಗಳಿಗೆ ಬ್ರ್ಯಾಂಡ್ ಹೆಸರಾಗಿ ಬಳಸಲಾಯಿತು.[೧೧]

ಜಗ್ವಾರ್ ಬ್ರಿಟಿಷ್ ಮೋಟಾರ್ ಕಾರ್ಪೊರೇಷನ್ (BMC),ದ ಆಸ್ಟಿನ್- ಮಾರಿಸ್ ಕಂಬೈನ್ ಗಳೊಡನೆ ಮಿಳಿತವಾಗಿ 1966ರಲ್ಲಿ ಬ್ರಿಟಿಷ್ ಮೋಟಾರ್ ಹೋಲ್ಡಿಂಗ್ಸ್(BMH)ನ ಉಗಮಕ್ಕೆ ಕಾರಣವಾಯಿತು. ಮೊದಲೇ ರೋವರ್ ಮತ್ತು ಸ್ಟಾಂಡರ್ಡ್ ಟ್ರಯಂಫ್ ಗಳನ್ನು ತನ್ನದಾಗಿಸಿಕೊಂಡಿದ್ದ ಲೇಲ್ಯಾಂಡ್ ನೊಡನೆ ಮಿಳಿತವಾದುದರ ಪರಿಣಾಮವಾಗಿ 1968ರಲ್ಲಿ ಸ್ಥಾಪಿತವಾದ ಕಂಪನಿಯೇ ಬ್ರಿಟಿಷ್ ಲೇಲ್ಯಾಂಡ್ ಮೋಟಾರ್ ಕಾರ್ಪೊರೇಷನ್(BLMC). ಹಣಕಾಸಿನ ಮುಗ್ಗಟ್ಟು ಮತ್ತು ರೈಡರ್ ವರದಿಯ ಪ್ರಕಟಣೆಯು 1975ರಲ್ಲಿ ರಾಷ್ಟ್ರೀಕರಣಕ್ಕೆ ಎಡೆಮಾಡಿಕೊಟ್ಟಿತು ಮತ್ತು ಕಂಪನಿಯು ಬ್ರಿಟಿಷ್ ಲೇಲ್ಯಾಂಡ್ ಲಿಮಿಟೆಡ್ ಎಂದು ಪುನರ್ನಾಮಗೊಂಡಿತು.(ನಂತರ ಸರಳವಾಗಿ BL plc ಎಂದಾಯಿತು).[೧೨]

1970ರ ದಶಕದಲ್ಲಿ ಜಗ್ವಾರ್ ಮತ್ತು ಡೈಮ್ಲರ್ ಮಾರ್ಕ್ವಿಸ್ BLನ ಪರಿಣಿತ ಕಾರ್ ವಿಭಾಗ ಅಥವಾ ಜಗ್ವಾರ್ ರೋವರ್ ಟ್ರಯಂಫ್ ಲಿಮಿಟೆಡ್ನ ಒಂದು ಭಾಗವಾಗಿದ್ದು, 1980ರಲ್ಲಿ ಕಂಪನಿಯ ರೂಪರೇಷೆಗಳು ಮರುನಿರ್ಮಿತವಾದಾಗ BL ವಾಲ್ಯುಮ್ ಕಾರ್ ತಯಾರಿಕಾ ವಿಭಾಗದ ಬಹುತೇಕ ಅಂಶವು ಆಸ್ಟಿನ್ ರೋವರ್ ಗ್ರೂಪ್ ಆಗಿ ಮಾರ್ಪಟ್ಟುದರ ಪರಿಣಾಮವಾಗಿ ಜಗ್ವಾರ್ ಅದರಿಂದ ಹೊರಗುಳಿಯುವಂತಾಯಿತು. 1984ರಲ್ಲಿ ಜಗ್ವಾರ್ ಅನ್ನು ಒಂದು ಪ್ರತ್ಯೇಕ ಕಂಪನಿಯಾಗಿಯೇ ಸ್ಟಾಕ್ ಮಾರ್ಕೆಟ್ ನಲ್ಲಿ ಹರಿಯಬಿಡಲಾಯಿತು (ನಮೂದಿಸಲಾಯಿತು) - ಥ್ಯಾಚೆರ್ ಸರ್ಕಾರದ ಹಲವಾರು ಖಾಸಗೀಕರಣಗಳಲ್ಲಿ ಇದೂ ಒಂದು.[೧೩]

ಫೋರ್ಡ್ ಕಂಪನಿಯ ಮಾಲೀಕತ್ವ (1989-2008)

ಫೋರ್ಡ್ ಡೇ೯೮ ನೆಲೆಗಟ್ಟಿನ ಮೇಲೆ ಆಧಾರಿತವಾದ S-ಮಾದರಿಯ ಜಗ್ವಾರ್

1989ರಲ್ಲಿ ಫೋರ್ಡ್ ಕಂಪನಿಯು ಯುಎಸ್ ಮತ್ತು ಯುಕೆಯ ಜಗ್ವಾರ್ ಕಂಪನಿಯ ಹೂಡಿಕೆದಾರ(ಪಾಲುದಾರ)ರಿಂದ ಅವರ ಷೇರುಗಳನ್ನು ಕೊಳ್ಳಲು ಮುಂದೆ ಬಂದಿತು; ಫೆಬ್ರವರಿ ೨೮, 1990ರಂದು ಜಗ್ವಾರ್ ನ ಹೆಸರನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನ ಪಟ್ಟಿಯಿಂದ ತೆಗೆದುಹಾಕಲಾಯಿತು.[೧೪] 1999ರಲ್ಲಿ ಅದು ಆಸ್ಟನ್ ಮಾರ್ಟಿನ್, ವೋಲ್ವೋ ಕಾರ್ಸ್ಗಳೊಡನೆ, ಮತ್ತು 200ದಿಂದ ಲ್ಯಾಂಡ್ ರೋವರ್ನೊಡನೆ, ಫೋರ್ಡ್ ನ ನೂತನ ಪ್ರೀಮಿಯರ್ ಆಟೋಮೋಟಿವ್ ಗ್ರೂಪ್ನ ಒಂದು ಅಂಗವಾಯಿತು ನಂತರದ ದಿನಗಳಲ್ಲಿ ಆಸ್ಟನ್ ಮಾರ್ಟಿನ್ಅನ್ನು 2007ರಲ್ಲಿ ಮಾರಿಬಿಡಲಾಯಿತು. ಫೋರ್ಡ್ 1989ರಲ್ಲಿ ಜಗ್ವಾರ್ ಅನ್ನು ಕೊಂಡು, 2008ರಲ್ಲಿ ಅದನ್ನು ಮಾರುವುದರ ಅವಧಿಯಲ್ಲಿ ಅದು ಡಿಯರ್ ಬಾರ್ನ್-ಸ್ಥಾಪಿತ ವಾಹನ ತಯಾರಕರಿಗೆ ಯಾವುದೇ ವಿಧವಾದ ಲಾಭವನ್ನೂ ಸಂಪಾದಿಸಿಕೊಡಲಿಲ್ಲ.


ಫೋರ್ಡ್ ಮೇ 200ದಲ್ಲಿ ಲ್ಯಾಂಡ್ ರೋವರ್ ಅನ್ನು ಕೊಂಡಾಗಿನಿಂದಲೂ ಅದು ಜಗ್ವಾರ್ ನೊಡನೆ ನಿಕಟವಾದ ಸಂಬಂಧವನ್ನು ಇರಿಸಿಕೊಂಡೇ ಇತ್ತು. ಹಲವಾರು ದೇಶಗಳಲ್ಲಿ ಈ ಎರಡೂ ಕಂಪನಿಗಳು ಮಾರಾಟ ಮತ್ತು ವಿತರಣಾಜಾಲವನ್ನು ಒಂದೇ ಸ್ಥಳದಲ್ಲಿ ಒಟ್ಟಿಗೇ ಹಂಚಿಕೊಂಡು ನಡೆಸುತ್ತಾರೆ(ವ್ಯಾಪಾರಕೇಂದ್ರಗಳನ್ನು ಹಂಚಿಕೊಳ್ಳುವುದೂ ಒಳಗೊಂಡಂತೆ), ಮತ್ತು ಕೆಲವು ಮಾಡಲ್ ಗಳು ಒಂದೇ ರೀತಿಯಾದ ಬಿಡಿಭಾಗಗಳನ್ನು ಹಂಚಿಕೊಂಡಿವೆ; ಹಂಚಿಕೊಂಡಂತಹ ಏಕೈಕ ಉತ್ಪಾದನಾ ಸೌಲಭ್ಯವು ಹೇಲ್ ವುಡ್ ಎಂಬ X-ಮಾದರಿ ಮತ್ತು ಫ್ರೀಲ್ಯಾಂಡರ್ 2 ಗಳು ಹಂಚಿಕೊಂಡತಹವಾಗಿದ್ದಾಗ್ಯೂ ಈ ಇತರೆ ಹಂಚಿಕೊಳ್ಳುವಿಕೆಗಳು ಮುಂದುವರೆದಿವೆ. ಆದಾಗ್ಯೂ, ವ್ಯವಸ್ಥಾರೀತ್ಯಾ ಎರಡೂ ಕಂಪನಿಗಳು ಫೋರ್ಡ್ PAGಯಲ್ಲಿಯೇ ಸೂಕ್ತವಾದ ರೀತಿಯಲ್ಲಿ ಮೇಳೈಸಿ ಒಂದು ವ್ಯವಸ್ಥಾರೀತಿಯನ್ನು ಅನುಸರಿಸಿಕೊಂಡುಬಂದವು.

ಜೂನ್ 11, 2007ರಂದು ಫೋರ್ಡ್ ತಾನು ಲ್ಯಾಂಡ್ ರೋವರ್ ಹಾಗೂ ಜಗ್ವಾರ್ ಗಳನ್ನು ಮಾರಲು ಬಯಸುವುದಾಗಿ ಹೇಳಿ ತತ್ಕಾರಣ ಗೋಲ್ಡ್ ಮನ್ ಸ್ಯಾಕ್ಸ್, ಮೋರ್ಗನ್ ಸ್ಟ್ಯಾನ್ಲೀ ಮತ್ತು HSBCಯವರನ್ನು ಆ ಮಾರಾಟದ ಸಲಹೆಗಾರರಾಗಿ ನೇಮಿಸಿತು. ಮಾರಾಟದ ವಿಷಯವು 2007ರ ಸೆಪ್ಟೆಂಬರ್ ನಲ್ಲಿಯೇ ಘೋಷಿತವಾಗುವುದೆಂಭ ನಿರೀಕ್ಷೆಯಿದ್ದಿತು, ಆದರೆ ಅದು ಮಾರ್ಚ್ 2008ರವರೆಗೂ ವಿಳಂಬಿತವಾಯಿತು. ಖಾಸಗಿ ಬಂಡವಾಳಹೂಡಿಕೆಯ ಸಂಸ್ಥೆಗಳಾದ ಯುಕೆಯ ಆಲ್ಕೆಮಿ ಪಾರ್ಟ್ ನರ್ಸ್, TPG ಕ್ಯಾಪಿಟಲ್, ರಿಪಲ್ ವುಡ್ ಹೋಲ್ಡಿಂಗ್ಸ್(ಇದು ಫೋರ್ಡ್ ನ ಮಾಜಿ ಕಾರ್ಯಕಾರಿ ಸದಸ್ಯ ಸರ್ ನಿಕ್ ಸ್ಕೀಲ್ ರನ್ನೇ ತನ್ನ ಖರೀದಿಗೆ ಸಿದ್ಧವಾದ ಬೆಲೆ(ಬಿಡ್) ಸೂಚಿಸಲು ಮುಖಂಡನಾಗಿ ನಿಯಮಿಸಿಕೊಂಡಿತು)ಯುನೈಟೆಡ್ ಸ್ಟೇಟ್ಸ್ ನ ಸೆರೆಬೆರಸ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಮತ್ತು ಒನ್ ಈಕ್ವಿಟಿ ಪಾರ್ಟ್ನರ್ಸ್( ಜೇಪೀ ಮೋರ್ಗನ್ ಚೇಸ್ ರ ಮಾಲಿಕತ್ವ, ವ್ಯವಸ್ಥಾಪಕ ಮಾಜಿ ಫೋರ್ಡ್ ಕಾರ್ಯಕಾರಿ ಸಮಿತಿಯ ಜೇಕ್ಸ್ ನಝೀರ್)ಭಾರತದ ಟಾಟಾ ಮೊಟಾರ್ಸ್ ಮತ್ತು ಮಹೀದ್ರ ಮತ್ತು ಮಹೀಂದ್ರ (ಭಾರತದ ಒಂದು ವಾಹನ ತಯಾರಿಕಾ ಸಂಸ್ಥೆ)ರವರನ್ನು ಹೊಂದಿದ ಒಂದು ತಂಡ, ಮತ್ತು ಅಪೋಲೋ ಮ್ಯಾನೇಜ್ ಮೆಂಟ್ ಸಂಸ್ಥೆಗಳು ಮೊದಮೊದಲು ಫೋರ್ಡ್ ಮೋಟಾರ್ ಕಂಪನಿಯಿಂದ ಮಾರ್ಕ್ವೀಸ್ ಅನ್ನು ಖರೀದಿಸುವ ಬಯಕೆ ತೋರಿದವು.[೧೫][೧೬]

ಮಾರಾಟದ ವಿಚಾರ ಬಹಿರಂಗವಾಗುವುದಕ್ಕೆ ಮೊದಲೇ ಬ್ರಿಟಿಷ್ ನೆಲ ಅಗೆಯುವ ಉಪಕರಣ JCBಗಳನ್ನು ತಯಾರಿಸುವ ಕಂಪನಿಯ ಅಧ್ಯಕ್ಷರಾದ ಆಂತೋನಿ ಬ್ಯಾಂಫೋರ್ಡ್ ಈ ಕಂಪನಿಯನ್ನು ಖರೀದಿಸುವ ಇರಾದೆ ತೋರಿದ್ದರಾದರೂ, ಜೊತೆಗೆ ಲ್ಯಾಂಡ್ ರೋವರ್ ಅನ್ನೂ ಖರೀದಿಸಬೇಕೆಂದಾಗ ಅದನ್ನು ಬಯಸದ ಅವರು ಖರೀದಿಯ ಯೋಚನೆಗೆ ತಿಲಾಂಜಲಿ ಇತ್ತರು.[೧೭] 2007ರ ಕ್ರಿಸ್ ಮಸ್ ನ ಹಿಂದಿನ ದಿನ, ಮಾರಾಟದಲ್ಲಿನ ಸಂಕೀರ್ಣತೆಗಳು ತಮಗೆ ಒಗ್ಗದ ಕಾರಣ, ಮಹೀಂದ್ರ ಮತ್ತು ಮಹೀಂದ್ರದವರು ಎರಡೂ ಕಂಪನಿಗಳನ್ನು ಖರೀದಿಸುವ ಸ್ಪರ್ಧೆಯಿಂದ ಹೊರಗುಳಿದರು.[೧೮]

ಟಾಟಾ ಮೋಟಾರ್ಸ್ ಮಾಲಿಕತ್ವ (2008ರಿಂದ ಇಂದಿನವರೆಗೆ)

ಜನವರಿ 1, 2008ರಂದು ಫೋರ್ಡ್ ಅಧಿಕೃತವಾಗಿ ಟಾಟಾ ಮೋಟಾರ್ಸ್ ಕಂಪನಿಯೇ ತಮಗೆ ಸರಿಹೊಂದಿದ ಖರೀದಿದಾರ ರೆಂದು ಘೋಷಿಸಿತು.[೧೯] ಟ್ರ್ಯಾನ್ಸ್ ಪೋರ್ಟ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್(TGWU)- ಅಮಿಕಸ್[೨೦] ಕಂಬೈನ್ ಹಾಗೂ ಫೋರ್ಡ್ ಸಹ ಟಾಟಾ ಮೋಟಾರ್ಸ್ ಈ ಕಂಪನಿ ಕೊಳ್ಳುವುದಕ್ಕೆ ತಮ್ಮ ಸಹಮತ ತೋರಿದವು.[೨೧] ಹರಾಜಿನ ನಿಯಮಗಳ ಪ್ರಕಾರ ಈ ಘೋಷಣೆಯು ಇತರ ಅರ್ಹ ಕಂಪನಿಗಳು ಇದನ್ನು ಕೊಳ್ಳುವುದನ್ನೇನೂ ತಡೆಯುವುದಿಲ್ಲ. ಆದರೆ, ಫೋರ್ಡ್(ಹಾಗೂ ಈ ಯುನೈಟ್ ನ ಪ್ರತಿನಿಧಿಗಳು)ಟಾಟಾ ಮೋಟಾರ್ಸ್ ನೊಂದಿಗೆ ಆಮೂಲಾಗ್ರವಾಗಿ ಚರ್ಚಿಸಿ ಕಾರ್ಮಿಕರ ವಿಷಯಗಳು(ಉದ್ಯೋಗ ಖಚಿತತೆ ಮತ್ತು ಮಾಸಾಶನಗಳು), ತಂತ್ರಾಂಶ(IT ವ್ಯವಸ್ಥೆಗಳು ಮತ್ತು ಎಂಜಿನ್ ತಯಾರಿಕೆ), ಬೌದ್ಧಿಕ ಆಸ್ತಿ[೨೨] ಹಾಗೂ ಖರೀದಿಯ ಬೆಲೆಯ ನಿಷ್ಕರ್ಷೆಗೆ ಅನುವು ದೊರೆಯಿತು.[೨೩] ಫೋರ್ಡ್ ಸಹ ತನ್ನ ಲೆಕ್ಕಪತ್ರಗಳ ಪುಸ್ತಕಗಳನ್ನು ಟಾಟಾದವರ ಸಮಗ್ರವಾದ ಸೂಕ್ಷ್ಮ ಪರಿಶೀಲನೆಗಾಗಿ ತೆರೆಯಿತು.[೨೪] ಮಾರ್ಚ್ 18, 2008ರಂದು ಅಮೆರಿಕದ ಬ್ಯಾಂಕರ್ಸ್ ಆದ ಸಿಟಿಗ್ರೂಪ್ ಮತ್ತು ಜೆಪಿ ಮೋರ್ಗನ್ USD 3 ಬಿಲಿಯನ್ ನಷ್ಟು ಹಣಕ್ಕೆ ಜಾಮೀನಾಗಿ ನಿಲ್ಲಲು ಮುಂದೆಬಂದರೆಂದು ರಾಯಿಟರ್ಸ್ ವರದಿ ಮಾಡಿತು.[೨೫]

ಮಾರ್ಚ್ 26, 2008ರಂದು ಫೋರ್ಡ್ ತನ್ನ ಜಗ್ವಾರ್ ಮತ್ತು ಲ್ಯಾಂಡ್ ರೋವರ್ ಉತ್ಪಾದನೆಗಳನ್ನು ಟಾಟಾ ಮೋಟಾರ್ಸ್ ಗೆ ಮಾರಲು ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡುತ್ತಾ ಈ ಮಾರಾಟವು 2008ರ ಮೊದಲ ಅರ್ಧಭಾದಲ್ಲಿ ಸಮಗ್ರವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆಯೆಂದು ಹೇಳಿತು.[೨೬] ಈ ವ್ಯವಹಾರದಲ್ಲಿ ಇತರ ಮೂರು ಬ್ರಿಟಿಷ್ ಬ್ರ್ಯಾಂಡ್ ಗಳಾದ ಜಗ್ವಾರ್ ದೇ ಆದ ಡೈಮ್ಲರ್, ಮತ್ತು ಇತರ ಎರಡು ಜಡವಾಗಿದ್ದ ಬ್ರ್ಯಾಂಡ್ ಗಳಾದ ಲ್ಯಾಂಚೆಸ್ಟರ್ ಮತ್ತು ರೋವರ್ಗಳ ಹಕ್ಕುಗಳೂ ಸೇರಿದ್ದವು.[೨೭] ಜೂನ್ 2, 2008ರಂದು ಟಾಟಾ ಮೋಟಾರ್ಸ್ ಗೆ £1.7 ಬಿಲಿಯನ್ ಮೊತ್ತಕ್ಕೆ ಈ ಕಂಪನಿಯು ಸಮಗ್ರವಾಗಿ ಮಾರಾಟಗೊಂಡಿತು.[೨೮][೨೯][೩೦]

ಬಿಡಿಭಾಗಗಳ ಕೈಗಾರಿಕೆಗಳು

ದ ಸ್ವಾಲೋ ಸೈಡ್ ಕಾರ್ ಕಂಪನಿ(SSC) ಮೊದಲಿಗೆ ಬ್ಲ್ಯಾಕ್ ಪೂಲ್ನಲ್ಲಿ ಸ್ಥಾಪಿತವಾಗಿದ್ದು, ನಂತರ, ಆಸ್ಟಿನ್ ಸ್ವಾಲೋ ಕಾರ್ ಗೆ ಬಂದ ಬೇಡಿಕೆಯ ಮಹಾಪೂರವನ್ನು ಆ ಕಾರ್ಖಾನೆಯಲ್ಲಿ ಪೂರೈಸುವುದು ಸಾಧ್ಯವಿಲ್ಲದುದರಿಂದ ಕೋವೆಂಟ್ರಿಯ ಹಾಲ್ ಬ್ರೂಕ್ ಲೇನ್ ಗೆ ಸ್ಥಳಾಂತರಗೊಂಡಿತು.[೩೧] 1951ರಲ್ಲಿ ಕೋವೆಂಟ್ರಿಯ ಕಾರ್ಖಾನೆಯಿಂದಲೂ ಬೇಡಿಕೆ ಪೂರೈಸಲಾಗದ ಮಟ್ಟಕ್ಕೆ ಕಂಪನಿ ಬೆಳೆದಾಗ ಕಂಪನಿಯು, ಯುದ್ಧಕಾಲದಲ್ಲಿ "ಗುಪ್ತ ಕಾರ್ಖಾನೆ"ಗೆ ಸ್ಥಳವಾಗಿದ್ದ, ಡೈಮ್ಲರ್ ಮೋಟಾರ್ ಕಂಪನಿಯವರು ನಡೆಸುತ್ತಿದ್ದ ಬ್ರೌನ್ಸ್ ಲೇನ್ ಗೆ ಸ್ಥಳಾಂತರಗೊಂಡಿತು. ಇಂದು ಜಗ್ವಾರ್ ಕಾರ್ ಗಳ ಜೋಡಣೆಯು ಬರ್ಮಿಂಗ್ ಹ್ಯಾಂನ ಕ್ಯಾಸಲ್ ಬ್ರೋವಿಚ್ ಮತ್ತು ಲಿವರ್ ಪೂಲ್ ನ ಹೇಲ್ ವುಡ್ ಗಳಲ್ಲಿ ನಡೆಯುತ್ತಿದೆ. ಐತಿಹಾಸಿಕ ಬ್ರೌನ್ಸ್ ಲೇನ್ ಪ್ಲ್ಯಾಂಟ್ ತನ್ನ ಚಿಕ್ಕ, ಚೊಕ್ಕ, ಅಂತಿಮ ಉತ್ಪಾದನೆಗಳನ್ನು 2005ರಲ್ಲಿ ಸ್ಥಗಿತಗೊಳಿಸಿತು, ಅದಕ್ಕೆ ಎರಡು ವರ್ಷ ಮುಂಚೆಯೇ X350 XJ ಕ್ಯಾಸಲ್ ಬ್ರೋವಿಚ್ ಗೆ ರವಾನೆಯಾಗಿದ್ದು, XK ಮತ್ತು S-ಮಾದರಿಗಳ ಉತ್ಪಾದನೆಯನ್ನು ಕ್ಯಾಸಲ್ ಬ್ರೋವಿಚ್ ಗೆ ಬಿಟ್ಟುಕೊಡಲಾಯಿತು ಮತ್ತು ಹೊಸ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2ರೊಂದಿಗೆ X-ಮಾದರಿಯ ಕಾರ್ ಗಳ ಉತ್ಪಾದನೆಯನ್ನು ಹೇಲ್ ವುಡ್ ನಲ್ಲಿ ಆರಂಭಿಸಲಾಯಿತು. ಸಣ್ಣದಾದ ಬ್ರೌನ್ಸ್ ಲೇನ್ ಸೈಟ್ ಈಗಲೂ ಜಗ್ವಾರ್ ಲ್ಯಾಂಡ್ ರೋವರ್ ಮತ್ತು ಇತರ ಕಾರ್ ಗಳಿಗೆಂದು ವಿನೀರ್ ಗಳನ್ನು ಮತ್ತು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉತ್ಪಾದಿಸುವುದರಲ್ಲಿ ತೊಡಗಿಕೊಂಡಿದೆ.

Other Languages
العربية: جاغوار (شركة)
asturianu: Jaguar Cars
azərbaycanca: Jaguar (avtomobil)
беларуская (тарашкевіца)‎: Jaguar Cars
български: Ягуар (кола)
català: Jaguar Cars
čeština: Jaguar
Deutsch: Jaguar Cars
English: Jaguar Cars
Esperanto: Jaguar
español: Jaguar Cars
euskara: Jaguar Cars
suomi: Jaguar
galego: Jaguar Cars
magyar: Jaguar Cars
Հայերեն: Jaguar
italiano: Jaguar
қазақша: Jaguar
kurdî: Jaguar Cars
lingála: Jaguar
lietuvių: Jaguar Cars
latviešu: Jaguar Cars
Nāhuatl: Jaguar
Nederlands: Jaguar Cars
Piemontèis: Jaguar
português: Jaguar Cars
română: Jaguar Cars
русский: Jaguar
srpskohrvatski / српскохрватски: Jaguar Cars
Simple English: Jaguar Cars
slovenčina: Jaguar
српски / srpski: Јагуар аутомобили
Türkçe: Jaguar Cars
українська: Jaguar
中文: 捷豹