ಚೀನಿಯರ ಸಾಂಪ್ರದಾಯಿಕ ಔಷಧಿ

ಈ ಲೇಖನ ಚೀನೀ ಭಾಷೆಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಚೀನೀ ಅಕ್ಷರಗಳು ಬದಲಿಗೆ ಪ್ರಶ್ನಾರ್ಥಕ ಚಿನ್ಹೆ, ಚೌಕಗಳು ಅಥವಾ ಇನ್ನಾವುದೇ ಚಿನ್ಹೆಗಳು ಕಾಣಬಹುದು.

ಸಾಂಪ್ರದಾಯಿಕ ಚೀನಿಯರ ಔಷಧಿ ಎಂದರೆ (中医 , pinyin: zhōng yī),ಈ ಸ್ವರೂಪವನ್ನು ಸಾಮಾನ್ಯವಾಗಿ ಸಂಕ್ಷಿಪ್ತ ರೂಪದಲ್ಲಿ TCM ) ಎಂದು ಕರೆಯುತ್ತಾರೆ, ಇದೊಂದು ಸಾಂಪ್ರದಾಯಿಕ ಔಷಧಿ ಪದ್ದತಿಯಾಗಿದ್ದು ಮೂಲದಲ್ಲಿ ಚೀನೀಯರದ್ದಾದರೂ ಪೂರ್ವ ಏಷ್ಯಾದ್ಯಂತ ಆಚರಣೆಯಲ್ಲಿದೆ. ಈ TCM ವಿವಿಧ ವೈದ್ಯಕೀಯ ಮಾದರಿಗಳನ್ನು ಪಾಶ್ಚಾತ್ಯ ಔಷಧಿಗಿಂತಲೂ ಅಧಿಕ ಉತ್ತಮ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ:ಆಧುನಿಕ ಔಷಧಿ ಗುರುತಿಸುವ ಎಲ್ಲಾ ಮಾನವ ಅಂಗಾಂಗಗಳನ್ನು ಅವುಗಳ ರಚನೆಯನ್ನು ವಿಧಿಬದ್ದವಾಗಿ ಗುರುತಿಸುತ್ತದೆ.ಈ ಸಾಂಪ್ರದಾಯಿಕತೆಯಲ್ಲಿ ಅದೇ ತೆರನಾದ ಕಾರ್ಯ ಚಟುವಟಿಕೆಗಳನ್ನು ಅದು ಗುರುತಿಸಿ ಅಧ್ಯಾತ್ಮ ತತ್ವ ಮೀಮಾಂಸೆಗಳ ಮೇಲೆ ತನ್ನ ವೈದ್ಯಕೀಯತೆಗೆ ಕಾರ್ಯರೂಪ ನೀಡುತ್ತದೆ.ಆದರೆ ಇಂಥ ತಾತ್ವಿಕ ಆಧಾರಗಳನ್ನು ಆಧುನಿಕ ವೈದ್ಯಕೀಯ ವಿಜ್ಞಾನವು ಮಾನ್ಯ ಮಾಡುವುದಿಲ್ಲ. ಆದರೆ TCM ಪೂರ್ವ ಏಷ್ಯಾದಾದ್ಯಂತ ಸಾಮಾನ್ಯ ವೈದ್ಯಕೀಯ ಸುರಕ್ಷಿತತೆಯಂತೆಯೇ ಆಚರಣೆಯಲ್ಲಿದೆ.ಇದನ್ನು ಪಾಶ್ಚಿಮಾತ್ಯ ಜಗತ್ತಿನಲ್ಲಿ ಪರ್ಯಾಯ ವೈದ್ಯಕೀಯ ಪದ್ದತಿಯೆಂದು ಪರಿಗಣಿಸಲಾಗುತ್ತದೆ. TCM ಔಷಧೋಪಚಾರ ಪದ್ದತಿಯು ವ್ಯಾಪಕವಾಗಿ ಚೀನೀಯರ ಗಿಡಮೂಲಿಕೆ ಔಷಧಿ,ಸೂಜಿಚಿಕಿತ್ಸೆ, ಆಹಾರ ಪದ್ದತಿ ಅವಲಂಬಿತ, ಮತ್ತು ತುಯಿ ನಾ ಅಂಗಮರ್ದನ ಚಿಕಿತ್ಸಾ ಪದ್ದತಿಯನ್ನು ಆಧರಿಸಿದೆ.

TCM ವಿಧಾನದಲ್ಲಿ ಅನಾರೋಗ್ಯವೆಂದರೆ ಅಂಗಾಂಗ ಚಟುವಟಿಕೆಗಳಲ್ಲಿನ ಅಸಮತೋಲನವೆಂದು ವಿಶ್ಲೇಷಿಸಲಾಗಿದೆ. (脏腑 -ಝಾಂಗ್-ಫು)ಇದು ಡಾವೊಸ್ಟ್ ಎಂಬ ಚೀನಿಯರ ವೈದ್ಯಕೀಯ ವೃತ್ತಿ ಶಿಕ್ಷಣದ ಆಧಾರವಾಗಿದೆ,ಇದರಲ್ಲಿ ಯಿನ್ ಮತ್ತು ಯಾಂಗ್ ಪರಿಕಲ್ಪನೆಗಳು ಅಡಕವಾಗಿವೆ.ಇನ್ನುಳಿದ ನಂಬಿಕೆಯ ಪದ್ದತಿಗಳೆಂದರೆ ಯು ಜಿಂಗ್ಸ್ ನ ಐದಂಶಗಳು ಅಥವಾ ಆರು ಅಧಿಕತಮಗಳು (六淫, ಲಿಯು ಯಿನ್, ಎಂದು ಸಾಮಾನ್ಯವಾಗಿ ಇದನ್ನು ಆರು ಬಹಿರ್ವರ್ಧಿತ ವ್ಯಾಧಿಜನಕ ಅಂಶಗಳೆಂದು ಪರಿಗಣಲಾಗುತ್ತದೆ.) ಮನುಷ್ಯನ ಶರೀರದಲ್ಲಿರುವ ವಿವಿಧ ಅವಯವ-ಅಂಗಾಂಗಳು ಒಂದಕ್ಕೊಂದು ಆಂತರಿಕ ಸಂಭಂಧಗಳನ್ನು ಹೊಂದಿವೆ.ಒಂದು ವಿಧಾನವು ಮತ್ತೊಂದನ್ನು ದುರ್ಬಲಗೊಳಿಸಬಹುದು ಅಥವಾ ಅತಿರೇಕಕ್ಕೀಡು ಮಾಡಬಹುದು. ಇದನ್ನು ಅನಾರೋಗ್ಯ ಅಥವಾ ಅಸ್ವಸ್ಥ ಶರೀರದ ಪ್ರಮುಖ ಅಂಶವೆನ್ನಲಾಗಿದೆ. TCM ವೃತ್ತಿಪರರು ಶರೀರ ಅಂಗಾಂಗಳನ್ನು ಪುನಃಶ್ಚೇತನಗೊಳಿಸಿ ಅವುಗಳನ್ನು ಮತ್ತೆ ಸಮತೋಲನಕ್ಕೆ ತರಲು ಗಿಡಮೂಲಿಕೆಗಳನ್ನು ಬಳಸುತ್ತಾರೆ ಅಥವಾ ಅತಿರೇಕದ ಅಂಗಾಂಗಗಳನ್ನು ಸಿದ್ದಾಂತದ ಮೇರೆಗೆ ಶಾಂತಗೊಳಿಸುತ್ತಾರೆ.ಇದೇ ಔಷಧಿ ಪದ್ದತಿಯನ್ನು ನೇರವಾಗಿ ಉಚ್ಛ್ರಾಯ ಸ್ಥಿತಿಗಳ ಬಳಕೆ ಇಲ್ಲವೆ ಕಿಗೊಂಗ್,ತೈಜಿಕ್ವಾನ್ ಅಥವಾ ಅಂಗಮರ್ದನದ ಮೂಲಕ ದೇಹದ ಸಮಸ್ತ ಸಮತೋಲನಕ್ಕೆ ಕ್ರಮ ಕೈಗೊಳ್ಳುತ್ತಾರೆ.

ಆಧುನಿಕ TCM ಪದ್ದತಿಗೆ 1950 ರ ಸುಮಾರಿಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಮಾವೊ ಜೆಡಾಂಗ್ ಇವರ ಮಾರ್ಗದರ್ಶನದಲ್ಲಿ ಹೊಸರೂಪ ನೀಡಿತು. ಇದಕ್ಕೆ ಮೊದಲು ಚೀನಿಯರ ಈ ಔಷಧಿ ಪದ್ದತಿಯು ಆಯಾ ಕುಟುಂಬದ ಪರಂಪರೆಯ ವಿಧಾನಗಳ ಮೇಲೆ ಅವಲಂಬಿತವಾಗಿತ್ತಲ್ಲದೇ ಸೀಮಿತ ಆಚರಣೆಯಾಗಿತ್ತು. ಇಲ್ಲಿ "ಕ್ಲಾಸಿಕಲ್ ಚೀನೀಸ್ ಮೆಡಿಸಿನ್"(CCM)ಅಂದರೆ ಶಾಸ್ತ್ರೀಯ ಚೀನಿಯರ ಔಷಧಿ ಎಂಬ ಪದವು ಇಂತಹ ಔಷಧೋಪಚಾರದ ಸಿದ್ದಾಂತಗಳು ಮತ್ತು ಪದ್ದತಿಗಳು ಕಿಂಗ್ ಆಡಳಿತದ (1911)ಅವಧಿಯಲ್ಲಿ ಜಾರಿಯಲ್ಲಿದ್ದವೆಂದು ಕಾಣಸಿಗುತ್ತವೆ.

ಪರಿವಿಡಿ

Other Languages
العربية: الطب الصيني
Mìng-dĕ̤ng-ngṳ̄: Dṳ̆ng-ĭ
贛語: 中醫
日本語: 中国医学
한국어: 중의학
srpskohrvatski / српскохрватски: Tradicionalna kineska medicina
Tiếng Việt: Đông y
中文: 中医学
文言: 中醫
Bân-lâm-gú: Tiong-i
粵語: 中醫