ಗಿನಿಯಿಲಿ
English: Guinea pig

Domestic Guinea pig
Two adult Guinea Pigs (Cavia porcellus).jpg
Conservation status
Domesticated
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ:Animalia
ವಂಶ:Chordata
ವರ್ಗ:Mammalia
ಗಣ:Rodentia
ಉಪಗಣ:Hystricomorpha
ಕುಟುಂಬ:Caviidae
ಉಪಕುಟುಂಬ:Caviinae
ಕುಲ:Cavia
ಪ್ರಭೇದ:C. porcellus
ದ್ವಿಪದ ಹೆಸರು
Cavia porcellus
(Linnaeus, 1758)
ಸಮಾನಾರ್ಥಕಗಳು

Mus porcellus
Cavia cobaya
Cavia anolaimae
Cavia cutleri
Cavia leucopyga
Cavia longipilis

ಗಿನಿಯಿಲಿ (ಕೆವಿಯಾ ಪೊರ್ಸೆಲಸ್‌ (Cavia porcellus) ) ಕೇವೀಡೇ (Caviidae)ವಂಶ ಹಾಗೂ ಕೇವಿಯಾ (Cavia) ಕುಲಕ್ಕೆ ಸೇರಿದ ದಂಶಕ ಪ್ರಾಣಿ. ಇದನ್ನು ಕೇವಿ (Cavy) ಎಂದು ಸಹ ಕರೆಯಲಾಗಿದೆ. ಇಂಗ್ಲಿಷ್‌ ಭಾಷೆಯಲ್ಲಿ 'ಗಿನಿ ಪಿಗ್ (Guinea Pig)‌' ಎಂಬುದು ಇದರ ಸಾಮಾನ್ಯನಾಮವಾದರೂ, ಇದು ಹಂದಿಗಳ ಕುಟುಂಬಕ್ಕೆ ಸೇರಿಲ್ಲ. ಜೊತೆಗೆ ಇವು ಗಿನಿ ದೇಶದ ಮೂಲದ ಪ್ರಾಣಿಗಳೂ ಅಲ್ಲ. ಅವು ಆಂಡಿಸ್‌ ಪರ್ವತ ವಲಯದಲ್ಲಿ ಉಗಮಿಸಿದವು. ಜೀವರಸಾಯನಶಾಸ್ತ್ರ ಮತ್ತು ಸಂಕರೀಕರಣವನ್ನು ಆಧರಿಸಿದ ಅಧ್ಯಯನದ ಪ್ರಕಾರ, ಕೇವಿಗೆ ಬಹಳ ನಿಕಟ ಸಂಬಂಧ ಹೊಂದಿದ ಕೇವಿಯಾ ಅಪೆರೆರಾ , ಕೇವಿಯಾ ಫಲ್ಗಿಡಾ , ಅಥವಾ ಕೇವಿಯಾ ಷುಡೀ ಯಂತಹ ಜಾತಿಗಳ ಸಾಕುಪ್ರಾಣಿ ಸಂತತಿ ಎನ್ನಲಾಗಿದೆ. ಹಾಗಾಗಿ, ಇವು ಸಹಜವಾಗಿ ಅರಣ್ಯದಲ್ಲಿ ಕಾಣಸಿಗದು.[೧][೨] ದಕ್ಷಿಣ ಅಮೆರಿಕಾ ಸ್ಥಳೀಯ ಪಂಗಡಗಳ ಜಾನಪದ ಸಂಸ್ಕೃತಿಯಲ್ಲಿ ಗಿನಿಯಿಲಿಗೆ ಪ್ರಮುಖ ಸ್ಥಾನವಿದೆ. ಅದನ್ನು ವಿಶಿಷ್ಟವಾಗಿ ಆಹಾರ ಮೂಲವಲ್ಲದೆ, ಜಾನಪದ ಔಷಧ ಮತ್ತು ಸಮುದಾಯ ಧಾರ್ಮಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ.[೩] 1960ರ ದಶಕದಿಂದಲೂ, ದಕ್ಷಿಣ ಅಮೆರಿಕಾ ಖಂಡದಾಚೆ ಈ ಪ್ರಾಣಿಯ ಬಳಕೆ ಹೆಚ್ಚಿಸುವ ಯತ್ನಗಳು ನಡೆಯುತ್ತಿವೆ.[೪]

16ನೆಯ ಶತಮಾನದಲ್ಲಿ ಯುರೋಪಿಯನ್‌ ವ್ಯಾಪಾರಿಗಳು ಗಿನಿಯಿಲಿಯನ್ನು ಪರಿಚಯಿಸಿದಾಗಿಂದಲೂ, ಅದು ಪಾಶ್ಚಾತ್ಯ ಸಮಾಜಗಳಲ್ಲಿ ಮನೆಗಳಲ್ಲಿ ಸಾಕುಪ್ರಾಣಿಯಾಗಿ ಅಪಾರ ಜನಪ್ರಿಯತೆ ಗಳಿಸಿದೆ. ಅವುಗಳ ನಮ್ರ ಗುಣಗಳು, ನಿರ್ವಹಣೆ ಮತ್ತು ಉಣಿಸುವ ಕ್ರಿಯೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಅವುಗಳನ್ನು ಸುಲಭವಾಗಿ ಸಾಕಬಹುದಾದ್ದರಿಂದ, ಗಿನಿಯಿಲಿಗಳು ಜನಪ್ರಿಯ ಸಾಕುಪ್ರಾಣಿಗಳಾಗಿವೆ. ಗಿನಿಯಿಲಿಗಳ ಸ್ಪರ್ಧಾತ್ಮಕ ಸಾಕಣೆಗೆ ಸಂಬಂಧಿತ ಸಂಘಟನೆಗಳು ವಿಶ್ವದಾದ್ಯಂತ ರಚನೆಯಾಗಿವೆ. ತುಪ್ಪಳಗಳ ವಿವಿಧ ಬಣ್ಣ ಮತ್ತು ರಚನೆ ಹೊಂದಿರುವ ಗಿನಿಯಿಲಿಗಳ ವಿಶಿಷ್ಟ ತಳಿಗಳನ್ನು ಸಾಕಣೆಗಾರರು ಬೆಳೆಸಿ ಸಾಕುತ್ತಿದ್ದರು.

17ನೆಯ ಶತಮಾನದಿಂದಲೂ ಗಿನಿಯಿಲಿಗಳ ಮೇಲೆ ಜೀವವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. 19ನೆಯ ಹಾಗೂ 20ನೆಯ ಶತಮಾನಗಳಲ್ಲಿ ಗಿನಿಯಿಲಿಗಳನ್ನು ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಆಗಾಗ್ಗೆ ಮಾದರಿ ಜೀವಿಯಾಗಿ ಬಳಸಲಾಗುತ್ತಿತ್ತು. ಇದರಿಂದಾಗಿ 'ಪ್ರಯೋಗದ ವಿಷಯಗಳಿಗೆ ಗಿನಿಯಿಲಿ (Guinea pig for a test subject)' ಎಂಬ ಆಡುಮಾತು ಬಳಕೆಯಾಗತೊಡಗಿತು. ಆದರೆ ಇಂದು ಗಿನಿಯಿಲಿಗಳ ಬದಲಿಗೆ ಹೆಗ್ಗಣಗಳು ಮತ್ತು ಇಲಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿವೆ. ಇಂದಿಗೂ ಸಹ, ಕಿರಿ-ವಯಸ್ಸಿನ ಮಧುಮೇಹ, ಕ್ಷಯರೋಗ, ರಕ್ತಪಿತ್ತವ್ಯಾಧಿ ಹಾಗೂ ಬಸಿರಿನ ತೊಡಕುಗಳನ್ನು ಅಧ್ಯಯನ ಮಾಡಲು ಗಿನಿಯಿಲಿಗಳನ್ನು ಮಾದರಿಗಳನ್ನಾಗಿ ಬಳಸಲಾಗುತ್ತಿವೆ.

Other Languages
aragonés: Cavia porcellus
Ænglisc: Rætswīn
asturianu: Cavia porcellus
Aymar aru: K'uwisu
azərbaycanca: Dəniz donuzcuğu
беларуская: Марская свінка
беларуская (тарашкевіца)‎: Марская сьвінка
български: Морско свинче
বাংলা: গিনিপিগ
brezhoneg: Razh-Indez
čeština: Morče domácí
Cymraeg: Mochyn cwta
English: Guinea pig
Esperanto: Kobajo
español: Cavia porcellus
eesti: Merisiga
euskara: Akuri
suomi: Marsu
français: Cavia porcellus
Frysk: Kavia
Gaeilge: Muc ghuine
Gàidhlig: Gearra-mhuc
galego: Cobaia
Avañe'ẽ: Apere'a
ગુજરાતી: ગિનિ પિગ
עברית: שרקן
हिन्दी: गिनी पिग
magyar: Tengerimalac
հայերեն: Ծովախոզուկ
interlingua: Cavia porcellus
Bahasa Indonesia: Tikus belanda
Ido: Kobayo
íslenska: Naggrísir
italiano: Cavia porcellus
日本語: モルモット
Basa Jawa: Tikus walanda
ქართული: ზღვის გოჭი
한국어: 기니피그
Lingua Franca Nova: Cavia
Limburgs: Hoescavia
lietuvių: Jūrų kiaulytė
latviešu: Jūrascūciņa
македонски: Морско прасе
Bahasa Melayu: Tikus Belanda
မြန်မာဘာသာ: ပူး
Nāhuatl: Tozantōchtli
नेपाली: गिनी पिग
Nederlands: Huiscavia
norsk nynorsk: Marsvin
norsk: Marsvin
occitan: Cavia
Kapampangan: Dagis sungsung
polski: Kawia domowa
Runa Simi: Quwi
română: Cobai
srpskohrvatski / српскохрватски: Morsko prase
Simple English: Guinea pig
slovenčina: Morča domáce
slovenščina: Morski prašiček
српски / srpski: Морско прасе
Seeltersk: Huusmeerswien
svenska: Marsvin
தமிழ்: கினி எலி
Tagalog: Konehilyo
Türkçe: Kobay
українська: Кавія свійська
Tiếng Việt: Chuột lang nhà
West-Vlams: Spaansche ratte
中文: 豚鼠
粵語: 天竺鼠