ಗಾಂಧಾರ

Gandhara
1500 BC–500 BC
Approximate boundaries of the Gandharan Empire, in present-day northern Pakistan, and northeast Afghanistan.
ರಾಜಧಾನಿ Not specified
ಸರ್ಕಾರ Monarchy
ಐತಿಹಾಸಿಕ ಯುಗ Ancient Era
 -  ಸ್ಥಾಪಿತ 1500 BC
 -  ಸ್ಥಾಪನೆ ರದ್ದತಿ 500 BC
ಇಂದು ಇವುಗಳ ಭಾಗ   Afghanistan
  Pakistan

ಗಾಂಧಾರ ಆಧುನಿಕ ಉತ್ತರ ಪಾಕಿಸ್ತಾನ ಹಾಗೂ ಈಶಾನ್ಯ ಅಫ್ಘಾನಿಸ್ತಾನದ ರಾಜ್ಯಗಳಲ್ಲಿನ ಸ್ವಾತ್ ಹಾಗೂ ಕಾಬುಲ್ ನದಿ ಕಣಿವೆಗಳು ಮತ್ತು ಪೋಠೋಹಾರ್ ಪ್ರಸ್ಥಭೂಮಿಯಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ಪುರುಷಪುರ ಹಾಗೂ ತಕ್ಷಶಿಲಾ ಅದರ ಮುಖ್ಯ ನಗರಗಳಾಗಿದ್ದವು. ಗಾಂಧಾರ ರಾಜ್ಯವು ವೈದಿಕ ಯುಗದಲ್ಲಿ (ಕ್ರಿ.ಪೂ ೧೫೦೦-೫೦೦) ಅಸ್ತಿತ್ವದಲ್ಲಿತ್ತು.

Ancient Indian kingdoms, 600 B.C.

ಇತಿವೃತ್ತ

  • ಪ್ರಾಚೀನ ಭಾರತದ ವಾಯವ್ಯ ಭಾಗದಲ್ಲಿ ಹಬ್ಬಿದ್ದ ಪ್ರದೇಶ. ಈ ಪ್ರದೇಶದ ಜನರನ್ನೂ ಗಾಂಧಾರರೆಂದು ಕರೆಯುತ್ತಿದ್ದದ್ದುಂಟು. ಇದರ ಮೇರೆಗಳು ಅಸ್ಪಷ್ಟವಾಗಿದ್ದುವಲ್ಲದೆ ಇದರ ವಿಸ್ತಾರ ಕಾಲಕಾಲಕ್ಕೆ ಬದಲಾಯಿಸುತ್ತಿತ್ತೆಂದು ತೋರುತ್ತದೆ. ಗಾಂಧಾರದ ಉಲ್ಲೇಖ ಮೊದಲು ಋಗ್ವೇದ ದಲ್ಲಿ ದೊರಕುತ್ತದೆ. ಅನಂತರದ ಬ್ರಾಹ್ಮಣಗಳು, ಪುರಾಣಗಳು ಮತ್ತು ಬೌದ್ಧ ಗ್ರಂಥಗಳಲ್ಲೂ ಇದರ ಪ್ರಸ್ತಾಪವಿದೆ.
  • ನಿಶ್ಚಿತ ಚಾರಿತ್ರಿಕ ದಾಖಲೆಗಳಲ್ಲಿ ಗಾಂಧಾರದ ಹೆಸರು ಮೊದಲು ಕಾಣಸಿಗುವುದು ಪರ್ಷಿಯದ ದೊರೆ ೧ನೆಯ ಡೇರಿಯಸನ (ಪ್ರ.ಶ.ಪು. ೫೨೨-೪೮೬) ಬೇಹಿಸ್ತಾನ್ ಶಾಸನದಲ್ಲಿ. ಹಿಂದೂಕುಷ್ ಪರ್ವತಶ್ರೇಣಿಯ ದಕ್ಷಿಣಕ್ಕಿದ್ದ ಪ್ರದೇಶಕ್ಕೆ ಗಾಂಧಾರವೆಂಬ ಹೆಸರಿತ್ತೆಂದು ಆ ಕಾಲದ ಇತರ ಆಧಾರಗಳಿಂದ ಸ್ಥೂಲವಾಗಿ ತಿಳಿಯುತ್ತದೆ.
  • ಯುವಾನ್ ಚಾಂಗ್ ಮತ್ತು ಇತರ ಚೀನೀ ಯಾತ್ರಿಕರ ಇತಿವೃತ್ತಗಳಲ್ಲಿ ಗಾಂಧಾರದ ಪ್ರಸಿದ್ಧ ನಗರಗಳು ಮತ್ತು ಬೌದ್ಧ ಕೇಂದ್ರಗಳನ್ನು ವಿಶೇಷವಾಗಿ ವಿವರಿಸಿರುವುದರಿಂದ, ಆ ಪ್ರದೇಶದ ಅಂದಿನ ವ್ಯಾಪ್ತಿಯನ್ನು ಊಹಿಸಬಹುದು. ಇವುಗಳ ಪ್ರಕಾರ ಗಾಂಧಾರ ಈಗಿನ ಉತ್ತರ ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಪಶ್ಚಿಮದಿಂದ ಪೆಷಾವರ್ ತಗ್ಗಿನವರೆಗಿನ ಪ್ರದೇಶವನ್ನೂ ಪಶ್ಚಿಮೋತ್ತರದಲ್ಲಿ ಈಗಿನ ಆಫ್ಘಾನಿಸ್ತಾನದ ಸ್ವಾತ್ ಮತ್ತು ಕಾಬುಲ್ ಕಣಿವೆಯ ಪ್ರದೇಶವನ್ನೂ ಒಳಗೊಂಡಿತ್ತೆಂದು ತಿಳಿಯುತ್ತದೆ.
  • ತಕ್ಷಶಿಲೆ (ಪಾಕಿಸ್ತಾನದ ರಾವಲ್ಪಿಂಡಿ ಜಿಲ್ಲೆಯಲ್ಲಿರುವ ಈಗಿನ ಟ್ಯಾಕ್ಸಿಲ) ಗಾಂಧಾರದ ರಾಜಧಾನಿ ಯಾಗಿತ್ತು. ಪುಷ್ಕಳಾವತಿಯೂ (ಪಾಕಿಸ್ತಾನದ ಪೆಷಾವರ್ ಜಿಲ್ಲೆಯಲ್ಲಿರುವ ಚಾರ್ಸದ) ಕೆಲಕಾಲ ರಾಜಧಾನಿಯಾಗಿತ್ತು. ಅಕ್ಬರನ ಕಾಲದ ಐನ್-ಇ-ಆಕ್ಬರಿ ಗ್ರಂಥದ ಪ್ರಕಾರ ಅಂದಿನ ಗಾಂಧಾರ ಕಾಶ್ಮೀರ ಮತ್ತು ಅಟ್ಟಕ್ ಮಧ್ಯದ ಪ್ರದೇಶವಾಗಿದ್ದಿತು.
  • ಈಗ ಆಫ್ಘಾನಿಸ್ತಾನದಲ್ಲಿರುವ ಕಂದಹಾರ್ ನಗರದ ಹೆಸರಿನಲ್ಲಿ ಹಳೆಯ ಗಾಂಧಾರ ಪ್ರಾಂತ್ಯದ ಸ್ಮರಣೆ ಉಳಿದುಬಂದಿದೆ. ಗಾಂಧಾರದ ಮುಂಡಿಗಕ್, ಬೆಗ್ರಾಮ್, ಹಡ್ಡ, ತಕ್ಷಶಿಲಾ, ಚಾರ್ಸದ ಮುಂತಾದ ಅನೇಕ ಪ್ರಾಚೀನ ನೆಲೆಗಳಲ್ಲಿ ಉತ್ಖನನಗಳು ನಡೆದಿವೆ. ಮುಂಡಿಗಕ್ ನಲ್ಲಿ ಪ್ರ.ಶ.ಪು. 4ನೆಯ ಸಹಸ್ರಮಾನದಿಂದ ಚಾರಿತ್ರಿಕ ಕಾಲದವರೆಗೂ ಪ್ರಚಲಿತವಿದ್ದ ಸಂಸ್ಕೃತಿಗಳು ಬೆಳಕಿಗೆ ಬಂದಿವೆ.
Other Languages
Afrikaans: Gandhara
العربية: غاندارا
български: Гандхара
català: Gandhara
čeština: Gandhára
dansk: Gandhara
Deutsch: Gandhara
Ελληνικά: Γανδάρα
English: Gandhara
Esperanto: Gandaro
español: Gandhara
euskara: Gandhara
فارسی: گنداره
suomi: Gandhara
français: Gandhara
ગુજરાતી: ગાંધાર
עברית: גנדהארה
hrvatski: Gandara
magyar: Gandhára
Bahasa Indonesia: Gandhara
日本語: ガンダーラ
ქართული: განდჰარა
한국어: 간다라
lietuvių: Gandhara
മലയാളം: ഗാന്ധാരം
मराठी: गांधार
नेपाली: गान्धार
Nederlands: Gandhara
norsk nynorsk: Gandhara
norsk: Gandhara
ਪੰਜਾਬੀ: ਗੰਧਾਰ
polski: Gandhara
پنجابی: گندھارہ
پښتو: گندهارا
português: Gandara
русский: Гандхара
संस्कृतम्: गान्धरः (जनपदः)
Scots: Gandhara
srpskohrvatski / српскохрватски: Gandara
සිංහල: ගාන්ධාර
slovenščina: Gandara
svenska: Gandhara
українська: Гандхара
اردو: گندھارا
oʻzbekcha/ўзбекча: Gandhara
Tiếng Việt: Càn-đà-la
中文: 健馱邏國
文言: 健陀羅
Bân-lâm-gú: Gandhara Kok