ಗರ್ಭಧಾರಣೆ
English: Pregnancy

Pregnant woman

ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ.[೧].ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು.[೨].ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ. ತಪ್ಪಿದ ಋತುಚಕ್ರ, ಕೋಮಲ ಸ್ತನಗಳು, ಸ್ತನಗಳ ವೃದ್ಧಿ, ಮೊಲೆತೊಟ್ಟು ಕಪ್ಪು ವರ್ಣಕ್ಕೆ ತಿರುಗುವುದು, ವಾಕರಿಕೆ ಮತ್ತು ವಾಂತಿ, ಹಸಿವು ಮತ್ತು ಪದೇ ಪದೇ ಮೂತ್ರವಿಸರ್ಜನೆ ಇವು ಗರ್ಭಧಾರಣೆಯ ಲಕ್ಷಣಗಳು.[೩] ಗರ್ಭ ಇರುವುದು ಗರ್ಭ ಪರೀಕ್ಷೆಯ ಮೂಲಕ ನಿರ್ಧರಿಸಲ್ಪಡುತ್ತದೆ.[೪]

ಸಂಭೋಗ ಕ್ರಿಯೆಯಿಂದ ವೀರ್ಯ ಯೋನಿಯೊಳಹೊಕ್ಕ ಸಮಯದಲ್ಲಿ ಅಂಡಾಣು ಗರ್ಭಕೋಶನಾಳದೊಳಗಿದ್ದರೆ (ಫೆಲೋಪಿಯನ್ ಟ್ಯೂಬ್) ಅಥವಾ 12-24 ಗಂಟೆಗಳ ಬಳಿಕವಾದರೂ ಅದು ಬರುವ ಹಾಗಿದ್ದರೆ ಮಾತ್ರ ಅದರೊಡನೆ ಪುರುಷಾಣುವಿನ ಮಿಲನ ಸಾಧ್ಯ. ಪ್ರತಿ ಸಂಭೋಗ ಕ್ರಿಯೆಯೂ ಸ್ತ್ರೀಯಲ್ಲಿ ಗರ್ಭಾವಸ್ಥೆಯನ್ನು ಉಂಟುಮಾಡದೆ ಇರುವುದಕ್ಕೂ ಸಾಮಾನ್ಯವಾಗಿ ಮಾಸಿಕಚಕ್ರದ ಸುಮಾರು ಮಧ್ಯಕಾಲದಲ್ಲಿ ಮಾತ್ರ ಸಂಭೋಗದಿಂದ ಗರ್ಭಧಾರಣೆಯಾಗುವುದಕ್ಕೂ ಇದೇ ಕಾರಣ. ಸ್ತ್ರೀಯರಲ್ಲಿ ಪ್ರತಿ ತಿಂಗಳೂ (28 ದಿವಸಗಳ ಚಾಂದ್ರಮಾನ ತಿಂಗಳು) ಒಂದು ಅಂಡಾಣು ಅಂಡಾಶಯದಿಂದ ಕಳಿತು ಹೊರಬೀಳುತ್ತದೆ. ಮೇಲೆ ಹೇಳಿದಂತೆ 12-24 ಗಂಟೆಗಳ ಒಳಗೇ ಅದು ಪುರುಷಾಣುವಿನೊಡನೆ ಮಿಲನಗೊಂಡರೆ ಆಗ ಗರ್ಭಾವಸ್ಥೆಯುಂಟಾಗುತ್ತದೆ. ಇಲ್ಲದಿದ್ದರೆ ಅಂಡಾಣು ನಿಧಾನವಾಗಿ ಮುಂದಕ್ಕೆ ನೂಕಲ್ಪಡುತ್ತ ಗರ್ಭಕೋಶವನ್ನು ತಲಪಬಹುದು. ಆಮೇಲೋ ಅಥವಾ ಇನ್ನೂ ಮುಂಚೆಯೋ ಅದು ನಶಿಸಿಹೋಗುತ್ತದೆ. ಗರ್ಭಾವಸ್ಥೆ ಉಂಟಾಗದ ಇಂಥ ಸನ್ನಿವೇಶದಲ್ಲಿ ಅಂಡಾಣು ಅಂಡಾಶಯದಿಂದ ಹೊರಬಿದ್ದ 14 ದಿವಸಗಳ ತರುವಾಯ ಸ್ತ್ರೀಯಲ್ಲಿ ರಜಸ್ರಾವವಾಗುತ್ತದೆ. ಗರ್ಭಾವಸ್ಥೆ ಉಂಟಾದರೆ ರಜಸ್ರಾವವಾಗುವುದಿಲ್ಲ. ಆದ್ದರಿಂದ ಹೆಂಗಸು ಮುಟ್ಟಾಗುವುದು ಆಕೆ ಬಸಿರಾಗದೆ ಹೋದುದರ ಸೂಚನೆ ಮತ್ತು ಪರಿಣಾಮವಾಗಿರುತ್ತದೆ. ಹೆಂಗಸಿನ ಜೀವಮಾನದಲ್ಲಿ ಗರ್ಭಧಾರಣಾ ಸೌಲಭ್ಯ ಸುಮಾರು 15ನೆಯ ವರ್ಷದಿಂದ ಸುಮಾರು 50ನೆಯ ವರ್ಷ ವಯಸ್ಸಿನ ತನಕ ಕಾಣಬರುತ್ತದೆ. ಅಂದರೆ ಹುಡುಗಿ ಮೈನೆರೆದು ಪ್ರೌಢಳಾದಾಗಿನಿಂದ ವಯಸ್ಕ ಹೆಂಗಸಿನಲ್ಲಿ ಮುಟ್ಟು ನಿಲ್ಲುವತನಕ ಸಂತಾನ ಪ್ರಾಪ್ತಿ ಸೌಲಭ್ಯ ಉಂಟು. ರಜಸ್ಸ್ರಾವಕ್ಕೂ ಗರ್ಭಧಾರಣೆ ಗರ್ಭಾವಸ್ಥೆಗಳಿಗೂ ಇರುವ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಾದರೆ ಹೆಂಗಸಿನಲ್ಲಿ ಪ್ರಜನನ ಕ್ರಿಯೆಯ ಸ್ಥೂಲಪರಿಚಯವಿರಬೇಕು.

ಪ್ರಜನನ ಕ್ರಿಯೆ ಜನನಾಂಗಗಳಿಂದ ಜರುಗಿಸಲ್ಪಡುವ ದೇಹಕಾರ್ಯ ಸ್ತ್ರೀಯಲ್ಲಿ ಪ್ರಧಾನ ಜನನಾಂಗಗಳೆಂದರೆ ಕಿಬ್ಬೊಟ್ಟೆಯಲ್ಲಿರುವ (ಪೆಲ್ವಿಕ್ ಕ್ಯಾವಿಟಿ) ಎಡ ಮತ್ತು ಬಲ ಅಂಡಾಶಯಗಳು ಮತ್ತು ಅವುಗಳ ನಡುವೆ ಇರುವ ಗರ್ಭಕೋಶ. ಅಂಡಾಶಯಗಳ ಸನಿಹದಲ್ಲಿ ಪ್ರಾರಂಭವಾಗುವ ಗರ್ಭಕೋಶನಾಳಗಳು ಗರ್ಭಕೋಶವನ್ನು ಸೇರುತ್ತವೆ. ಗರ್ಭಕೋಶ ಗೇರುಹಣ್ಣಿನ ಆಕಾರದಲ್ಲಿರುತ್ತದೆ. ಅದರ ಕಂಠ ಯೋನಿಯೊಳಕ್ಕೆ ಚಾಚಿಕೊಂಡಿರುತ್ತದೆ. ಯೋನಿಗೆ ಸಂಪರ್ಕವನ್ನು ಉಂಟುಮಾಡುವ ಭಾಗವಿದು. ಅಲ್ಲದೇ ಇದು ಗರ್ಭಕೋಶದೊಳಕ್ಕೂ ಹೊರಗಡೆಗೂ ಸಂಪರ್ಕವನ್ನು ಉಂಟುಮಾಡುತ್ತದೆ. ಹುಡುಗಿ ಮೈನೆರೆದಾಗ ಈ ಭಾಗಗಳಲ್ಲಿ ಮತ್ತು ಅನುಷಂಗಿಕ ಅಂಗಗಳಲ್ಲಿ ಮುಖ್ಯವಾಗಿ ಸ್ತನಗಳಲ್ಲಿ ಚಟುವಟಿಕೆ ಮತ್ತು ಕ್ರಿಯಾಶಕ್ತಿ ಮೂಡಿ ಬಂದು ವಿಶಿಷ್ಟ ಕ್ರಮವನ್ನು ಅನುಸರಿಸಿ ಜರುಗುವ ಕ್ರಿಯೆ ಕಂಡುಬರುತ್ತದೆ. ಇದರ ಅವಧಿ ಸಾಮಾನ್ಯವಾಗಿ 28 ದಿವಸಗಳು ಅಥವಾ ಒಂದು ಚಾಂದ್ರಮಾನ 30ಗಳು ರಜಸ್ಸ್ರಾವ ಈ ಚಕ್ರೀಯ ಕ್ರಿಯೆಯಲ್ಲಿ ಪ್ರಧಾನವಾಗಿ ವ್ಯಕ್ತವಾಗುವ ಘಟ್ಟವಾದುದರಿಂದ ಇದನ್ನು ಮಾಸಿಕ ಚಕ್ರವೆಂದು ಕರೆದು, ಚಕ್ರವನ್ನು ರಜಸ್ಸ್ರಾವದ ಮೊದಲನೆಯ ದಿವಸದಿಂದ ಎಣಿಸುವುದು ರೂಢಿಯಾಗಿದೆ. ಈ ಕ್ರಿಯೆಗೆ ತಲೆಚಿಪ್ಪಿನೊಳಗೆ ಮಿದುಳಿನ ತಳಭಾಗದಿಂದ ತೊಟ್ಟಿನ ಮೂಲಕ ನೇತುಬಿದ್ದಿರುವ ಪಿಟ್ಯುಟರಿ ಗ್ರಂಥಿಯ ಮುಂಭಾಗದ ಎಸ್.ಎಸ್.ಎಚ್., ಎಲ್.ಎಚ್. ಮತ್ತು ಎಲ್.ಟಿ.ಎಚ್ ಗಳೆಂಬ ಅಂತಃಸ್ರಾವಗಳೇ ಕಾರಣ. ಇವು ಅಂಡಾಶಯಗಳ ಮೇಲೆ ಪ್ರಭಾವ ಬೀರಿ ಅವನ್ನು ಕಾರ್ಯೋನ್ಮುಖಗೊಳಿಸುತ್ತವೆ. ಎಡ ಅಥವಾ ಬಲ ಅಂಡಾಶಯಗಳಲ್ಲಿ ಯಾವುದಾದರೂ ಒಂದು (ಯಾವುದು ಎನ್ನುವುದು ಕೇವಲ ಅನಿರ್ದಿಷ್ಟ) ಅಂಡಾಶಯದಿಂದ ಸಾಮಾನ್ಯವಾಗಿ ಒಂದು ಅಂಡಾಣು ಸುಮಾರು 2 ವಾರಗಳಲ್ಲಿ ಬಲಿತು ಹಣ್ಣಾಗುವುದಕ್ಕೆ ಈ ಎರಡು ವಾರಗಳು ಪಿಟ್ಯುಟರಿಯಿಂದ ಉತ್ಪತ್ತಿಯಾಗುವ ಎಫ್.ಎಸ್.ಎಚ್. ಕಾರಣ. ಇದೇ ಕಾರಣದಿಂದಲೇ ಈ ಎರಡು ವಾರಗಳಲ್ಲೂ ಅಂಡಾಶಯದಿಂದ ಈಸ್ಟ್ರೋಜೆನ್ನೆಂಬ ಅಂತಃಸ್ರಾವ ಉತ್ಪತ್ತಿಯಾಗುತ್ತದೆ. ಈಸ್ಟ್ರೋಜಿನ್ ಮುಖ್ಯವಾಗಿ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಭಾವ ಬೀರಿ ಅವುಗಳ ವೃದ್ಧಿಯನ್ನು ಉಂಟುಮಾಡುವುದು. ಎರಡು ವಾರಗಳ ತರುವಾಯ ಪಿಟ್ಯುಟರಿ ಎಫ್.ಎಸ್.ಎಚ್. ಬದಲು ಎಲ್.ಎಚ್ ಮತ್ತು ಎಲ್.ಟಿ.ಎಚ್ಗಳನ್ನು ಸ್ರವಿಸುತ್ತದೆ. ಇವುಗಳ ಪ್ರಭಾವವೂ ಅಂಡಾಶಯಗಳ ಮೇಲೆಯೇ ಪ್ರಧಾನವಾಗಿರುವುದು. ಈ ಕಾಲದ ಪ್ರಾರಂಭದಲ್ಲಿ ಅಂದರೆ ಸುಮಾರು 14ನೆಯ ದಿವಸವೇ ಬಲಿತು ಹಣ್ಣಾದ ಅಂಡಾಣು ಅಂಡಾಶಯದಿಂದ ಹೊರಬಿದ್ದು ಗರ್ಭಕೋಶ ನಾಳದೊಳಕ್ಕೆ ಹೀರಲ್ಪಟ್ಟು ಅದರೊಳಗೆ ಗರ್ಭಕೋಶದೆಡೆಗೆ ನೂಕಲ್ಪಡುತ್ತಿರುತ್ತದೆ. ಅಂಡಾಣುವಿದ್ದ ಸ್ಥಳ ರೂಪಾಂತರಗೊಂಡು ಕಾರ್ಪಸ್ ಲೂಟಿಯಂ ಮುಂದಕ್ಕೆ 14 ದಿವಸಗಳ ಪರ್ಯಂತ ಪ್ರೊಜೆಸ್ಟಿರಾನ್ ಎಂಬ ಅಂತಃಸ್ರಾವವನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕೆ ಪಿಟ್ಯುಟರಿಯ ಎಲ್.ಟಿ.ಎಚ್. ಕಾರಣ ಪ್ರೊಜೆಸ್ಟಿರಾನ್ ಕೂಡ ಗರ್ಭಕೋಶ ಮತ್ತು ಸ್ತನಗಳ ಮೇಲೆ ಪ್ರಧಾನವಾಗಿ ಪ್ರಭಾವ ಬೀರಿ ಅವುಗಳ ವೃದ್ಧಿತ ಸ್ಥಿತಿ ಉಪಯುಕ್ತ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಎರಡು ವಾರಗಳ ಕೊನೆಯಲ್ಲಿ ಪಿಟ್ಯುಟರಿ ಎಲ್.ಎಚ್ ಮತ್ತು ಎಲ್.ಟಿ.ಎಚ್ ಅನ್ನು ಸ್ರವಿಸುವ ಬದಲು ಪುನಃ ಎಫ್.ಎಸ್.ಎಚ್. ಅನ್ನು ಸ್ರವಿಸುವುದಕ್ಕೆ ಪ್ರಾರಂಭಿಸುತ್ತದೆ. ತನ್ನ ಕ್ರಿಯಾಶಕ್ತಿ ಜರಾಯು ತಾಯಿಯ ಗರ್ಭಕೋಶ ಭಿತ್ತಿಯಿಂದ ಬೇರ್ಪಟ್ಟು ಅದರ ಕಾರ್ಯ ಕ್ಷೀಣಿಸುತ್ತದೆ, ಪ್ರೋಜೆಸ್ಟಿರಾನಿನ ಉತ್ಪತ್ತಿಗೆ ಇದರಿಂದ ಧಕ್ಕೆಯಾಗಿ ಗರ್ಭಾವಸ್ಥೆ ಕೊನೆಗೊಳ್ಳುತ್ತದೆ. ಆದರೆ ಇಷ್ಟರೊಳಗೆ ಭ್ರೂಣ ಬೆಳೆದು ತಾಯಿಯ ನೆರವಿಲ್ಲದೆ ಸ್ವತಂತ್ರವಾಗಿ ಜೀವಿಸಬಲ್ಲ ಮಗುವಾಗಿ ಅದರ ಜನನವಾಗುತ್ತದೆ. ಈ ಜನನಕ್ಕೆ ಪ್ರೋಜೆಸ್ಟಿರಾನಿನ ಉತ್ಪತ್ತಿಯ ನಿಲುಗಡೆ ಮಾತ್ರ ಕಾರಣವಲ್ಲ, ಪಿಟ್ಯುಟರಿ ಗ್ರಂಥಿಯ ಹಿಂಭಾಗದಿಂದ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಎಂಬ ಅಂತಃಸ್ರಾವವೂ ಶಿಶು ಜನನಕ್ಕೆ (ಗರ್ಭಾವಸ್ಥೆಯ ಅಂತ್ಯಕ್ಕೆ) ಮುಖ್ಯವಾಗಿದೆ. ಬಹುಶ ಪ್ರೋಜೆಸ್ಟಿರಾನಿನ ಪ್ರಭಾವಕ್ಕೆ ಒಳಗಾಗಿದ್ದ ಮತ್ತು ಆ ಪ್ರಭಾವ ಹಠಾತ್ತಾಗಿ ನಿಂತುಹೋದ ಗರ್ಭಕೋಶವನ್ನು ಮಾತ್ರ ಆಕ್ಸಿಟೋಸಿನ್ ಉದ್ರೇಕಿಸುತ್ತದೆ. ಹೀಗಾಗಿ 40 ವಾರಗಳ ಗರ್ಭಾವಸ್ಥೆಯ ಕೊನೆಯಲ್ಲಿ ಗರ್ಭಕೋಶ ಸಂಕುಚಿಸಿ ಒಳಗಿರುವ ಶಿಶುವನ್ನು ಹೊರದೂಡುತ್ತದೆ. ಸ್ವಲ್ಪ ಹೊತ್ತಿನಲ್ಲೆ ಬೇರ್ಪಟ್ಟ ಜರಾಯುವನ್ನೂ ಇದೇ ರೀತಿ ಹೊರದೂಡುತ್ತದೆ. ಇದು ಗರ್ಭಾವಸ್ಥೆಯ ಅಂತ್ಯ.


ತ್ರೈಮಾಸಿಕಗಳು

ಗರ್ಭಧಾರಣೆಯನ್ನು ಸಾಮಾನ್ಯವಾಗಿ ಮೂರು ತ್ರೈಮಾಸಿಕಗಳನ್ನಾಗಿ ವಿಂಗಡಿಸಲಾಗುತ್ತದೆ. ಮೊದಲ ತ್ರೈಮಾಸಿಕವು ಗರ್ಭಧರಿಸಿದ ದಿನದಿಂದ 12 ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ. ವೀರ್ಯಾಣು ಮೊಟ್ಟೆಯ ಫಲೀಕರಣ ಮಾಡಿದಾಗ ಗರ್ಭ ಪ್ರಾರಂಭವಾಗುತ್ತದೆ.ನಂತರ ಫಲವತ್ತಾದ ಮೊಟ್ಟೆಯು ಡಿಂಬನಾಳದ ಕೆಳಗೆ ಚಲಿಸಿ ಗರ್ಭಕೋಶದ ಒಳಗೆ ಪ್ರವೇಶಿಸುತ್ತದೆ.ಭ್ರೂಣ ಮತ್ತು ಜರಾಯುವಿನ ರಚನೆಯು ಇಲ್ಲಿ ಆರಂಭವಾಗುತ್ತದೆ.[೧] ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತದ(ಭ್ರೂಣದ ಸ್ವಾಭಾವಿಕ ಸಾವು) ಅತ್ಯಧಿಕ ಅಪಾಯ ಕಂಡುಬರುತ್ತದೆ.[೫] ಎರಡನೇ ತ್ರೈಮಾಸಿಕವು ೧೩ ರಿಂದ ೨೮ ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ. ಎರಡನೇ ತ್ರೈಮಾಸಿಕದ ಮಧ್ಯದಲ್ಲಿ ಭ್ರೂಣದ ಚಲನೆಯನ್ನು ಅನುಭವಿಸಬಹುದು..ಉತ್ತಮ ಗುಣಮಟ್ಟದ ವೈದ್ಯೆಯಿಂದ ಶೇಕಡ ೯೦ಕ್ಕಿಂತ ಹೆಚ್ಚು ಮಕ್ಕಳು 28 ವಾರಗಳಿಗೇ ಗರ್ಭಾಶಯದ ಹೊರಗೆ ಬದುಕಬಲ್ಲವು. ಮೂರನೇ ತ್ರೈಮಾಸಿಕವು 29 ವಾರಗಳಿಂದ 40 ವಾರಗಳ ಅವಧಿಯನ್ನು ಒಳಗೊಂಡಿರುತ್ತದೆ.[೧]

Other Languages
Afrikaans: Swangerskap
Akan: Nyinsɛn
Alemannisch: Schwangerschaft
aragonés: Emprenyatura
العربية: حمل
مصرى: حمل
অসমীয়া: গৰ্ভধাৰণ
asturianu: Embaranzu
azərbaycanca: Hamiləlik
تۆرکجه: حامیله‌لیک
беларуская (тарашкевіца)‎: Цяжарнасьць чалавека
Banjar: Tian
বাংলা: গর্ভধারণ
བོད་ཡིག: མངལ་སྦུམ་པ།
brezhoneg: Dougerez
bosanski: Trudnoća
буряад: Жэрмэһэн
català: Embaràs
Mìng-dĕ̤ng-ngṳ̄: Dái-sĭng
کوردی: دووگیانی
čeština: Těhotenství
Cymraeg: Beichiogrwydd
dansk: Graviditet
Ελληνικά: Εγκυμοσύνη
emiliàn e rumagnòl: Grevdànsa
English: Pregnancy
Esperanto: Gravedeco
español: Embarazo humano
eesti: Rasedus
euskara: Haurdunaldi
فارسی: بارداری
suomi: Raskaus
français: Grossesse
Gaeilge: Toircheas
Gàidhlig: Leatrom
galego: Embarazo
Avañe'ẽ: Tyeguasu
गोंयची कोंकणी / Gõychi Konknni: Gurvachar vo Gorbhest‌ponn
ગુજરાતી: ગર્ભાવસ્થા
עברית: היריון
हिन्दी: गर्भावस्था
Fiji Hindi: Peet me baby
hrvatski: Trudnoća
Kreyòl ayisyen: Grosès
magyar: Terhesség
interlingua: Pregnantia
Bahasa Indonesia: Kehamilan
Igbo: Afọ ime
Ilokano: Panagsikog
íslenska: Meðganga
italiano: Gravidanza
日本語: 妊娠
Patois: Pregnansi
Jawa: Mbobot
ქართული: ორსულობა
Taqbaylit: Tadist
қазақша: Жүктілік
한국어: 임신
kurdî: Avisî
Кыргызча: Кош бойлуулук
Latina: Graviditas
Lëtzebuergesch: Schwangerschaft
Limburgs: Zwangersjap
lingála: Zémi
لۊری شومالی: آندومتر
lietuvių: Nėštumas
latviešu: Grūtniecība
македонски: Бременост
മലയാളം: ഗർഭം
монгол: Жирэмслэлт
Bahasa Melayu: Kehamilan
Dorerin Naoero: Ejeng
नेपाली: गर्भावस्था
Nederlands: Zwangerschap
norsk nynorsk: Svangerskap
Chi-Chewa: Pakati
occitan: Prensa
ਪੰਜਾਬੀ: ਗਰਭ ਅਵਸਥਾ
Kapampangan: Pangabuktut
پنجابی: پریگنینسی
português: Gravidez
Runa Simi: Wiksayay
русиньскый: Тяж
sicilianu: Prinizza
Scots: Pregnancy
srpskohrvatski / српскохрватски: Trudnoća
Simple English: Pregnancy
slovenčina: Gravidita
slovenščina: Nosečnost
chiShona: Nhumbu
Soomaaliga: Uurka
shqip: Shtatzania
српски / srpski: Трудноћа
SiSwati: Kukhulelwa
Sesotho: Boimana
svenska: Graviditet
Kiswahili: Ujauzito
తెలుగు: గర్భం
тоҷикӣ: Бордорӣ
Tagalog: Pagdadalantao
Türkçe: Gebelik
татарча/tatarça: Йөклелек
українська: Вагітність
اردو: حمل (طب)
oʻzbekcha/ўзбекча: Homiladorlik
vèneto: Graviansa
Tiếng Việt: Thai nghén
walon: Poirteure
Winaray: Pagbuburod
吴语: 担桑身
მარგალური: უხენობა
中文: 妊娠
Bân-lâm-gú: Ū-sin
粵語: 娠紀