ಗಡಿಯಾರ
English: Clock

ಲಂಡನ್‌ನ, ರಾಜ’ರ ಕ್ರಾಸ್ ರೈಲು ನಿಲ್ದಾಣದಲ್ಲಿನ ರೈಲು ನಿಲ್ದಾಣದ ಜಗುಲಿಯ ಗಡಿಯಾರ.

ಗಡಿಯಾರವು ಸಮಯವನ್ನು ನಿರ್ದೇಶಿಸುವ ಸೂಚಿಸುವ, ಕಾಪಾಡುವ ಮತ್ತು ಒಂದು ಸಾಧನವಾಗಿದೆ. ಕ್ಲಾಕ್ ಎಂಬ ಪದವು ಅಂತಿಮವಾಗಿ ( ಡಚ್, ಉತ್ತರ ಪ್ರೆಂಚ್ ಮತ್ತು ಮಧ್ಯಕಾಲೀನ ಲ್ಯಾಟೀನ್ ಮೂಲಕ) ಸೆಲ್ಟಿಕ್ ಪದಗಳಾದ ಕ್ಲಾಗನ್ ಮತ್ತು ಕ್ಲೋಕ್ಕಾ ಎಂಬ ಪದಗಳಿಂದ ಬಂದಿದ್ದು ಇದರ ಅರ್ಥ ಘಂಟೆ ಎಂದಾಗಿದೆ. ಕಾಲಮಾನ ಶಾಸ್ತ್ರಜ್ಞರು ಮತ್ತು ಇತರ ವಿಶೇಷ ವ್ಯಕ್ತಿಗಳಿಗೆ ಗಡಿಯಾರ ಎಂಬ ಪದವು ಘಂಟೆಯನ್ನು ಮೊಳಗಿಸುವ ಘಂಟೆಗಳ ಸಮೂಹದ ಅಥವಾ ಜಾಗಟೆಯ ಮೂಲಕ ಕಾಲದ ಅವಧಿಗಳನ್ನು ಸೂಚಿಸುವ ಒಂದು ಯಾಂತ್ರಿಕ ಸಾಧನವಷ್ಟೆ.[dubious ] ಅಂತಹ ಯಾಂತ್ರಿಕತೆಯನ್ನು ಹೊಂದದೇ ಇರುವ ಮೌನವಾದ ಉಪಕರಣವೇ ಟೈಮ್ ಪೀಸ್ .[೧] ಈ ದಿನಗಳ ಸಾಮಾನ್ಯ ಬಳಕೆಯಲ್ಲಿ "ಕ್ಲಾಕ್" ಎಂಬುದು ಸಮಯ ನೋಡಲು ಮತ್ತು ಅಳೆಯಲು ಬಳಸುವ ಸಾಧನಕ್ಕೆ ಅನ್ವಯವಾಗುತ್ತದೆ. ಒಬ್ಬ ವ್ಯಕ್ತಿ ಬಳಸುವ ವಾಚ್‌ಗಳು ಮತ್ತು ಇತರ ಟೈಮ್ ಪೀಸ್‌ಗಳು ಕ್ಲಾಕ್‌ಗಳಿಗಿಂತ ಭಿನ್ನವಾಗಿರುತ್ತವೆ.[೨]

ರಾಜವೈಭವದ ಸಮೀಕ್ಷಾಮಂದಿರದಲ್ಲಿನ ಗಡಿಯಾರ, ಗ್ರೀನ್‌ವಿಚ್
ಪುರಾತನ ಚೈನಾದವರ ಧೂಪ ಗಡಿಯಾರದ ಪ್ರತಿರೂಪ

ಗಡಿಯಾರವು ಮಾನವನ ಅತ್ಯಂತ ಪುರಾತನ ಅನ್ವೇಷಣೆಗಳಲ್ಲಿ ಒಂದು. ಇದನ್ನು ದಿನ ; ತಿಂಗಳು; ಮತ್ತು ವರ್ಷಗಳ ಸ್ವಾಭಾವಿಕ ಮೂಲಮಾನಗಳನ್ನು ಮೊಟಕುಗೊಳಿಸಿ, ಸಮಯದ ಅಂತರಗಳನ್ನು ನಿರಂತರವಾಗಿ ಅಳೆಯುವ ಉದ್ದೇಶಕ್ಕಾಗಿ ರಚಿಸಲಾಯಿತು. ಸಹಸ್ರಾರು ವರ್ಷಗಳಿಂದ ಹಲವಾರು ವೈವಿಧ್ಯಮಯ ಭೌತಿಕ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತಿರುವ ಸಾಧನಗಳೇ, ಇಂದು ಗಡಿಯಾರಗಳಾಗಿ ಅಭಿವೃದ್ಧಿ ಹೊಂದಿವೆ.

ಪರಿವಿಡಿ

ಸನ್‌ಡಯಲ್‌ಗಳು ಮತ್ತು ಇತರ ಸಾಧನಗಳು.

ಪ್ರಾಚೀನಕಾಲದಲ್ಲಿ ಸೂರ್ಯನ ಸಹಾಯದಿಂದ ದಿನದ ಸಮಯವನ್ನು ಅಳೆಯಲು ಸನ್ ಡಯಲ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಒಂದು ಸುರಚಿತ ಸನ್‌ಡಯಲ್ ಸ್ಥಳೀಯ ಸೌರಕಾಲಮಾನವನ್ನು ನಿಷ್ಕೃಷ್ಟವಾಗಿ ಸೂಚಿಸಬಲ್ಲದು. ಆಧುನಿಕ ಯುಗದವರೆಗೂ ಸನ್‍ಡಯಲ್‌ಗಳು ಗಡಿಯಾರದ ಕೆಲಸವನ್ನು ನಿರ್ವಹಿಸುವುದನ್ನು ಮುಂದುವರೆಸಿದವು. ಹೇಗೂ ಇದರ ಪ್ರಾಯೋಗಿಕ ಮಿತಿಗಳು- ಇದಕ್ಕೆ ಸೂರ್ಯನ ಬೆಳಕು ಅಗತ್ಯವಿದ್ದು ರಾತ್ರಿಯ ವೇಳೆಗಳಲ್ಲಿ ಅಸಮರ್ಪಕವಾಗುತ್ತಿದ್ದವು. ಇದು ಕಾಲಮಾನವನ್ನು ಅಳೆಯಲು ಇತರ ತಂತ್ರಜ್ಞಾನಗಳ ಬೆಳವಣಿಗೆಯನ್ನು ಉತ್ತೇಜಿಸಿತು.

ಕಾಲಹರಣವನ್ನು ಅಂದಾಜು ಮಾಡಲು ಮೇಣದಬತ್ತಿ ಗಡಿಯಾರಮತ್ತು ಊದಿನ ಕಡ್ದಿಗಳನ್ನು ಸರಿಸುಮಾರಾಗಿ ನಿಗದಿತ ವೇಗದಲ್ಲಿ ಸುಡುವಂತೆ ಮಾಡಲಾಗುತ್ತಿತ್ತು. ಒಂದು ಗಾಜಿನ ಪಾತ್ರೆಯಲ್ಲಿ, ಉತ್ತಮ ಗುಣಮಟ್ಟದ ಮರಳು ಒಂದು ಚಿಕ್ಕ ರಂದ್ರದ ಮೂಲಕ ನಿಗದಿತ ದರದಲ್ಲಿ ಸತತವಾಗಿ ಸುರಿಯುವಂತೆ ಮಾಡಿ ನಿಖರವಲ್ಲದ ಪೂರ್ವನಿಗದಿತ ಕಾಲಾವಧಿಯನ್ನು ಅಂದಾಜು ಮಾಡಲಾಗುತ್ತಿತ್ತು.

ಜಲ ಗಡಿಯಾರಗಳು

ಅಳತೆಗೋಲು ಮಾದರಿಯ ಸು ಸಾಂಗ್’ರ ಖಗೋಳಶಾಸ್ತ್ರದ ಗದಿಯಾರ ಗೋಪುರ, ಇದನ್ನು 11ನೆಯ ಶತಮಾನದಲ್ಲಿ ಚೈನಾದ ಕೈಫಂಗ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ದೊಡ್ಡ ನೀರಿನಗಾಲಿ, ಸರಪಳಿ ಚಾಲನೆ, ಮತ್ತು ವಿಮೋಚನಾವೆಗದ ಯಂತ್ರಕ್ರಿಯೆಯ ಮೂಲಕ ನಡೆಸಲಾಗಿತ್ತು.

ಕ್ಲೆಪ್ಸಿಡೆ (sg: ಕ್ಲೆಪ್ಸಿಡ್ರಾ ), ಎಂದು ಕರೆಯಲ್ಪಡುವ ಜಲಗಡಿಯಾರವು ಸನ್‌ಡಯಲ್‌ಗಳಂತೆ ಪ್ರಾಯಶಃ ಬಹಳ ಹಳೆಯಕಾಲದಲ್ಲಿ ಬಳಸುತ್ತಿದ್ದ ಗಡಿಯಾರಗಳಾಗಿದ್ದು, ಉದ್ದನೆಯ ಸರಳನ್ನು ಮತ್ತು ದಿನದಕಾಲಮಾನವನ್ನು ಅಳೆಯುವ ಹೋಲಿಕೆ ಕಡ್ಡಿಯನ್ನು ಬಿಟ್ಟರೆ ಉಳಿದ ಎಲ್ಲಾ ರೀತಿ ಸನ್‌ಡಯಲ್‌ನ್ನೇ ಹೋಲುತ್ತಿತ್ತು. ಅವುಗಳ ಅಧಿಕ ಪ್ರಾಚೀನತೆಯಿಂದಾಗಿ, ಅವುಗಳ ಅಸ್ತಿತ್ವ ಎಲ್ಲಿ ಮತ್ತು ಹೇಗೆ ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಸುಮಾರು 16ಬಿಸಿ ಶತಮಾನದಲ್ಲಿ ಬೋಗುಣಿಯಾಕರದ ಸರಳ ರೂಪದ ಜಲಗಡಿಯಾರವು ಬ್ಯಾಬಿಲೋನಿಯಾ ಮತ್ತು ಈಜಿಪ್ಟ್ಗಳಲ್ಲಿ ಇದ್ದವು ಎಂದು ತಿಳಿದು ಬಂದಿದೆ. ಪ್ರಪಂಚದ ಇತರ ಭಾಗಗಳಾದಚೀನ, ಮತ್ತು ಭಾರತದಲ್ಲೂ ಸಹ ಜಲಗಡಿಯಾರಗಳು ಇದ್ದವು ಎನ್ನುವುದಕ್ಕೆ ಪುರಾವೆಗಳು ದೊರೆತಿವೆ.ಆದರೆ ಯಾವ ಕಾಲದಲ್ಲಿ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಕೆಲವು ಲೇಖರ ಪ್ರಕಾರ ಗಡಿಯಾರಗಳು ಪ್ರಪಂಚದ ಈ ಭಾಗಗಳಲ್ಲಿ ಸುಮಾರು 4000 ಬಿಸಿಯಿಂದಲೂ ಬಳಕೆಯಲ್ಲಿದ್ದವು ಎಂದು ಅಭಿಪ್ರಾಯ ಪಟ್ಟಿದ್ದಾರೆ.[೩]

ಆಂಡ್ರೋನಿಕಸ್ ಸೈರಸ್, ಎಂಬ ಗ್ರೀಕ್ ಖಗೋಳ ಶಾಸ್ತ್ರಜ್ಞ 1 ಬಿ.ಸಿಯಲ್ಲಿ ಅಥೆನ್ಸ್‌ನ ಮಾರುತಗಳ ಗೋಪುರದ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಂಡನು.[೪]

ಗ್ರೀಕ್ ಮತ್ತು ರೋಮನ್ ನಾಗರೀಕತೆಗಳು ಸಂಕೀರ್ಣ ಚಲನಾಚಕ್ರವುಳ್ಳ,[೫] ಜಲಗಡಿಯಾರಗಳನ್ನು ಮೊಟ್ಟಮೊದಲಬಾರಿಗೆ ವಿನ್ಯಾಸಗೊಳಿಸಿದ್ದರ ಕೀರ್ತಿ ಅವುಗಳಿಗೆ ಸಲ್ಲುತ್ತದೆ. ಇವುಗಳಿಗೆ ಕಾಲ್ಪನಿಕ ಸ್ವಯಂಚಾಲಿತ ವ್ಯವಸ್ಥೆಯನ್ನು ಸಂಪರ್ಕಿಸಲಾಗಿದ್ದು, ಅವುಗಳ ನಿಷ್ಕೃಷ್ಟತೆಯನ್ನು ಹೆಚ್ಚಿಸಿದವು. ಈ ಉನ್ನತಗಳು ಬೆಜಾಂಟಿಯಂ ಮತ್ತು ಇಸ್ಲಾಮ್ ಕಾಲಮಾನಗಳಿಗೆ ರವಾನೆಯಾಗಿದ್ದು, ನಂತರ ಯೂರೋಪ್ನ್ನೂ ಸಹ ತಲುಪಿದವು. 725 ಎ.ಡಿ.ಯಲ್ಲಿ ಸ್ವತಂತ್ರವಾಗಿ ಚೇನಾದೇಶದವರು ತಮ್ಮದೇ ಆದ ಉನ್ನತೀಕರಿಸಿದ ಜಲಗಡಿಯಾರಗಳನ್ನು ಕಂಡು ಹಿಡಿದರು. ಅವರ ಈ ಆಲೋಚನೆಗಳು ಕೊರಿಯಾ ಮತ್ತು ಜಪಾನ್‌ಗೂ ತಲುಪಿದವು.

12ನೆಯ ಶತಮಾನದ, ಆಲ್-ಜಝಾರಿಯ ಸ್ವಯಂಚಾಲಿತ ಗಡಿಯಾರ. .

ಕೆಲವು ಜಲಗಡಿಯಾರದ ವಿನ್ಯಾಸಗಳನ್ನು ಸ್ವತಂತ್ರವಾಗಿ ಮಾಡಲಾಯಿತು ಮತ್ತು ಕೆಲವು ಆಲೋಚನೆಗಳು ವ್ಯಾಪಾರಗಳ ಮೂಲಕ ಹರಡಿಕೊಂಡವು. ಪೂರ್ವ-ನವೀನ ಸಮಾಜಗಳಲ್ಲಿ ಈಗಿನ ಕೈಗಾರಿಕಾ ಸಮಾಜಗಳಲ್ಲಿದ್ದಂತೆ ಕಾಲವನ್ನು ನಿಖರವಾಗಿ ಪಾಲಿಸುವ ಅವಶ್ಯಕತೆಯಿರಲಿಲ್ಲ. ಆಗಿನ ಕಾಲದಲ್ಲಿ ಕೆಲಸದ ಅಥವಾ ವಿಶ್ರಾಂತಿಯ ಪ್ರತಿಯೊಂದು ಗಂಟೆಯನ್ನೂ ಅಷ್ಟೊಂದು ಪ್ರಮುಖ್ಯವಾಗಿ ನಿಭಾಯಿಸದೇ, ಕೆಲಸವನ್ನು ಪರಿಸ್ಥಿತಿಗಳಿಗೆ ತಕ್ಕಂತೆ ಪ್ರಾರಂಬಿಸುವುದು ಅಥವಾ ಅಂತ್ಯಗೊಳಿಸಲಾಗಿತ್ತಿತ್ತು. ಇದಕ್ಕೆ ಬದಲಾಗಿ, ಪ್ರಾಚೀನ ಸಮಾಜಗಳಲ್ಲಿ ನೀರಿನ ಗಡಿಯಾರಗಳನ್ನು ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರ ದಲ್ಲಿ ಬಳಸುತ್ತಿದ್ದರು. ಈ ಪ್ರಾಚೀನ ಗಡಿಯಾರಗಳನ್ನು ಸನ್ ಡಯಲ್ಗಳ ಜೊತೆಬಳಸಲಾಗುತ್ತಿತ್ತು. ಆಧುನಿಕ ಗಡಿಯಾರಗಳ ನಿಷ್ಕೃಷ್ಟತೆಯ ಮಟ್ಟ ತಲುಪುವವರೆಗೂ, ಮಿಲಿಯಾಂತರ ವರ್ಷಗಳವರೆಗೂ, ಜಲಗಡಿಯಾರಗಳನ್ನೇ ಅತ್ಯಂತ ನಿಖರ ಕಾಲಮಾಪಕಗಳಾಗಿ ಬಳಸಲಾಗುತ್ತಿತ್ತು.17ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ಇದಕ್ಕಿಂತ ನಿಖರವಾದ ಲೋಲಕ ಗಡಿಯಾರ ಗಳು ಬಂದನಂತರ ಇವುಗಳ ಬಳಕೆ ಕಡಿಮೆಯಗುತ್ತಾ ಬಂತು.

797 (ಪ್ರಾಯಶಃ801), ರಲ್ಲಿ ಬಾಗ್ದಾದ್ನ ಅಬ್ಬಾಸಿದ್ ಕಲೀಫನಾದ ಹರೂನ್ ಆಲ್-ರಷೀದ್, ಚಾರ್ಲಿ ಮ್ಯಾಗ್ನೆಯವರಿಗೆ ಅಬುಲ್ ಅಬ್ಬಾಸ್ ಎಂಬ ಏಷ್ಯಿಯಾದ ಆನೆಯನ್ನು ಕೊಡುಗೆಯಾಗಿ ಕೊಟ್ಟನು. ಇದರೊಂದಿಗೆ ಒಂದು ಜಲಗಡಿಯಾರದ ಮಾದರಿಯನ್ನೂ ಸಹ ಅವರಿಗೆ ಕೊಡಲಾಯಿತು.

ಆಲ್-ಜಝಾರಿ (1206 AD) ಅವರ ಹಸ್ತಪ್ರತಿಯಲ್ಲಿನ ಆನೆ ಗಡಿಯಾರ, ದಿ ಬುಕ್ ಆಫ್ ನಾಲೆಡ್ಜ್ ಆಫ್ ಇಂಜಿನೀಯರ್ಸ್ ಮೆಕಾನಿಕಲ್ ಡಿವೈಸೆಸ್ ನಿಂದ ಪಡೆದದ್ದು.[೬]

13ನೇ ಶತಮಾನದಲ್ಲಿ ಆಲ್-ಜಝಾರಿ, ಎಂಬ ಅಭಿಯಂತರನು ದಿಯಾರ್-ಬಾಕರ್‌ನಅರ್ತುಕಿಡ್ ದೊರೆಯಾದ ನಾಸಿರ್ ಆಲ್-ದಿನ್‌ಗಾಗಿ ಹಲವಾರು ಗಾತ್ರದ ಮತ್ತು ಆಕಾರದ ಗಡಿಯಾರಗಳನ್ನು ನಿರ್ಮಿಸಿದನು. ಈ ಪುಸ್ತಕವು ನೀರಿನ ಗಡಿಯಾರವನ್ನೊಳಗೊಂಡಂತೆ 6 ವರ್ಗಗಳ 50 ಯಾಂತ್ರಿಕ ಉಪಕರಣಗಳ ಬಗ್ಗೆ ವಿವರಣೆ ನೀಡಿತ್ತು. ಅತ್ಯಂತ ಜನಪ್ರಿಯ ಗಡಿಯಾರಗಳೆಂದರೆ ಎಲಿಫ್ಯಾಂಟ್, ಸ್ಕ್ರೈಬ್ ಮತ್ತು ಗೋಡೆ ಗಡಿಯಾರಗಳು ಇವೆಲ್ಲವುಗಳನ್ನೂ ಯಶಸ್ವಿಯಾಗಿ ಪುನರ್‌ನಿರ್ಮಿಸಲಾಯಿತು. ಈ ಭವ್ಯವಾದ ಗಡಿಯಾರಗಳ ಕಾಲ ಸೂಚಕಗಳಾಗಿ ಅಷ್ಟೇ ಅಲ್ಲದೆ , ಅರ್ಟಕ್‌ನ ಘನತೆ, ಭವ್ಯತೆ ಮತ್ತು ಸಂಪತ್ತಿನ ಸಂಕೇತಗಳಾಗಿವೆ.

ಪ್ರಾಚೀನ ಯಾಂತ್ರಿಕ ಗಡಿಯಾರಗಳು

ಯೂರೋಪಿನ 13ನೇ ಶತಮಾನದಿಂದ ಮೊದಲಯಾವುದೇ ಗಡಿಯಾರಗಳು ಲಭ್ಯವಿರಲಿಲ್ಲ. ಆದರೆ ಚರ್ಚ್‌ಗಳಲ್ಲಿರುವ ಕೆಲವು ದಾಖಲೆಗಳು ಗಡಿಯಾರದ ಪ್ರಾಚೀನ ಇತಿಹಾಸವನ್ನು ಹೊರಗಿಡುತ್ತವೆ.

ಹೊರೊಲಾಜಿಯಾ ( ಗ್ರೀಕ್‌ನಲ್ಲಿ ὡρα, ಗಂಟೆಮತ್ತು λέγειν, ಹೇಳು ಎಂಬರ್ಥ) ಎಂಬ ಪದವನ್ನು ಈ ಎಲ್ಲಾ ಸಾಧನಗಳನ್ನು ವಿವರಿಸಲು ಬಳಸಲಾಗುತ್ತಿತ್ತು. ಆದರೆ ಈ ಪದದ ಬಳಕೆ ( ಈಗಲೂ ಕೆಲವು ರೋಮನ್ ಭಾಷೆಗಳಲ್ಲಿ ಬಳಸಲಾಗುತ್ತಿದೆ), ಅದರ ಯಾಂತ್ರಿಕತೆಯ ವಾಸ್ತವಿಕ ಸ್ವಭಾವವನ್ನು ಸಮಯಪಾಲಕರಾದ ನಮ್ಮೆಲ್ಲರಿಂದ ಮುಚ್ಚಿಡಲಾಗಿದೆ. ಉದಾಹರಣೆಗೆ,1176ರಲ್ಲಿ ಸೆನ್ಸ್ ಕ್ಯಾಥೆಡ್ರಲ್‍ನಲ್ಲಿ ಒಂದು "ಗಡಿಯಾರ"ವನ್ನು ಪ್ರತಿಷ್ಟಾಪಿಸಲಾಯಿತು.ಆದರೆ ಇದರ ಕಾರ್ಯ ವಿಧಾನ ಇದುವೆರೆಗೂ ತಿಳಿದು ಬಂದಿಲ್ಲ. ಜೋಸಲಿನ್ ಬ್ರೇಕ್ ಲೋಂಡ್, ನಪ್ರಕಾರ 1198ರಲ್ಲಿ ಸೇಂಟ್ ಎಡ್ಮಂಡ್ಸಬರಿ (ಈಗಿನ್ಸ್ ಬರಿ ಸೇಂಟ್ ಎಡ್ಮಂಡ್ಸ)ನ ಒಂದು ಕ್ರೈಸ್ತ ಮಠಕ್ಕೆ ಬೆಂಕಿ ಬಿದ್ದಾಗ , ಅಲ್ಲಿನ ಪಾದ್ರಿಗಳು ಬೆಂಕಿಯನ್ನು ಆರಿಸಲು ಅಲ್ಲಿನ ಜಲಗಡಿಯಾರದತ್ತ ದಾವಿಸಿದರು. ಇದು ಅವರ ಜಲಗಡಿಯಾರವು ಬೆಂಕಿಯನ್ನು ನಂದಿಸುವಷ್ಟು ನೀರನ್ನು ಹೊಂದಿತ್ತು ಎಂಬುದನ್ನು ಸೂಚಿಸುತ್ತದೆ.[೭]

ಒಂದು ಹೊಸ ತಂತ್ರಜ್ಞಾನ

ಕ್ಲಾಕ್ ( ಲ್ಯಾಟಿನ್ ಪದ ಕ್ಲೊಕ್ಕಾ , ಅಂದರೆ ಘಂಟೆ) ಪದವು ಕ್ರಮೇಣವಾಗಿ ಹಾರೊಲೋಜ್ ಎಂಬ ಪದದ ಸ್ಥಾನವನ್ನು ಪಡೆದು, ಘಂಟೆಗಳ ನಾದ ಎಂಬ ಅರ್ಥವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಇದು 13ನೇ ಶತಮಾನದಲ್ಲಿ ಯೂರೋಪ್ನಲ್ಲಿ ಬಳಕೆಯಲ್ಲಿದ್ದ ಯಾಂತ್ರಿಕ ಗಡಿಯಾರಗಳ ಮಾದರಿಯ ಲಕ್ಷಣಗಳನ್ನೂ ಬಿಂಬಿಸುತ್ತದೆ.

ಯೂರೋಪ್‌ನ ಹೊರದೇಶಗಳಲ್ಲೂ ವಿಮೋಚನಾ ಯಾಂತ್ರಿಕತೆಯ ಬಳಕೆ ತಿಳಿದಿತ್ತು. ಮಧ್ಯಕಾಲಿಕ ಚೀನಾದಲ್ಲಿ , ಸಾಂಗ್ ವಂಶದ ಕಾಲಮಾನ ಶಾಸ್ತ್ರಜ್ಞ ಹಾಗೂ ಅಭಿಯಂತರ ಸು-ಸಾಂಗ್ (1020–1101) 1088ರಲ್ಲಿ ತನ್ನ ಕೈಫೆಂಗ್‌ನ ಖಗೋಳ ಗಡಿಯಾರ ಗೋಪುರದಲ್ಲಿ ಈ ತತ್ವವನ್ನು ಅಳವಡಿಸಿದ್ದನು ಎನ್ನಲಾಗಿದೆ.[೮] ಹೇಗೂ, ಆತನ ಖಗೋಳ ಗಡಿಯಾರ ಮತ್ತು ಭ್ರಮಣಾ ಕಂಕಣ ಗೋಳ ನೀರಿನ ಹರಿಯುವಿಕೆಯನ್ನು( ಹೈಡ್ರಾಲಿಕ್ಸ್) ಅವಲಂಬಿಸಿತ್ತು. ಆದರೆ ನಂತರದ ಶತಮಾನಗಳಲ್ಲಿ ಯೂರೋಪಿನ ಕೆಲಸಗಾರರು ಈ ಹಳೆಯ ಪದ್ದತಿಯನ್ನು ತೊರೆದು, ವಿಮೋಚನಾ ಯಾಂತ್ರಿಕತೆಯ ಜೊತೆಯಲ್ಲಿ ಹೆಚ್ಚು ದಕ್ಷತೆಯ ಚಾಲನಸಾಮರ್ಥ್ಯವುಳ್ಳ ತೂಕಗಳನ್ನು ಅಳವಡಿಸಲು ಪ್ರಾರಂಭಿಸಿದರು.

ಎಡಿ 1277ರ ಸ್ಪಾನಿಷ್‌ನ ಪುಸ್ತಕವಾದ ಲಿಬ್ರೊಸ್ ಡೆಲ್ ಸೇಬರ್‌ ನಲ್ಲಿ ವಿವರಿಸಲಾದ ಒಂದು ಪಾದರಸ ಗಡಿಯಾರವು ಅರೇಬಿಯಾದ ಭಾಷಾಂತರ ಮತ್ತು ಭಾವಾರ್ಥಗಳನ್ನು ಒಳಗೊಂಡಿದ್ದು, ಕೆಲವು ಸಮಯಗಳಲ್ಲಿ ಮುಸ್ಲಿಂರಿಗೆ ಯಾಂತ್ರಿಕ ಗಡಿಯಾರಗಳ ಬಗ್ಗೆ ಇದ್ದ ತಿಳುವಳಿಕೆಯನ್ನು ಸೂಚಿಸುತ್ತದೆ. ಈ ಸಾಧನವು ವಾಸ್ತವವಾಗಿ ಒಂದು ಕೊಳವೆಯಾಕಾರದ ಗಡಿಯಾರದಿಂದ ಬೇರ್ಪಟ್ಟಿದ್ದು, ಯಹೂದಿ ಬರಹಗಾರ ರಬ್ಬಿ ಐಸಾಕ್ ಪ್ರಕಾರ ಇದರ ನಿರ್ಮಾಣದ ಕೀರ್ತಿ (ಅಲೆಗ್ಸಾಂಡ್ರಿಯಾದ ಹೆರೋನ್) "ಇರಾನ್" ಗೆ ಸಲ್ಲುತ್ತದೆ.[೯]

1280 ಮತ್ತು 1320ರ ನಡುವೆ, ಗಡಿಯಾರಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳುಮತ್ತು ಚರ್ಚ್‌ಗಳಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ದಾಖಲೆಗಳು ಹೆಚ್ಚಾಗತೊಡಗಿದವು. ಇದು ಪ್ರಾಯಶಃ ಯಾಂತ್ರಿಕ ಗಡಿಯಾರದ ಹೊಸ ವಿನ್ಯಾಸದ ನಿರ್ಮಾಣವನ್ನು ಸೂಚಿಸುವಂತಿತ್ತು. ಆಗಿದ್ದ ಗಡಿಯಾರದ ಯಾಂತ್ರಿಕತೆಯು ಬೀಳುವ ತೂಕಗಳಿಂದ ಚಲನಾ ಸಾಮರ್ಥ್ಯವನ್ನು ಪಡೆಯಲು ನೀರಿನ ಶಕ್ತಿಯನ್ನು ಅಳವಡಿಸಿಕೊಂಡವು. ಈ ಸಾಮರ್ಥ್ಯವನ್ನು ಆವರ್ತಕ ಯಾಂತ್ರಿಕತೆಯ ಕೆಲವು ರೂಪಗಳಿಂದ ನಿಯಂತ್ರಿಸಲಾಯಿತು, ಬಹುಶ: ಇದು ಈಗಿನ ಘಂಟೆ ಶಬ್ದ ಅಥವಾ ಅಲಾರಂ ಸಾಧನಗಳಿಂದ ಬಂದಿರಬಹುದು. ವಿಮೋಚನೆಯ ಈ ನಿಯಂತ್ರಿತ ಸಾಮರ್ಥ್ಯದ ಬಿಡುಗಡೆ ವಾಸ್ತವವಾಗಿ ನೈಜ್ಯ ಯಾಂತ್ರಿಕ ಗಡಿಯಾರಗಳ ಆರಂಭದ ಸಂಕೇತವಾಯಿತು.


ಈ ಯಾಂತ್ರಿಕ ಗಡಿಯಾರಗಳು ಎರಡು ಪ್ರಮುಖ ಉದ್ದೇಶಗಳಿಗಾಗಿ ನಿರ್ಮಾಣಗೊಂಡವು: ಸಹ್ನೆಗಳಿಗೆ ಮತ್ತು ಘೋಷಣೆಗಳಿಗೆ (ಉದಾ: ಸೇವೆಗಳ ಕಾಲಮಾನ ಮತ್ತು ಸಾರ್ವಜನಿಕ ಸಂಗತಿಗಳು) ಮತ್ತು ಸೌರ ಮಂಡಲದ ಮಾದರಿ ರಚನೆಗೆ. ಮೊದಲನೆಯದರ ಉದ್ದೇಶವು ಆಡಳಿತಾತ್ಮಕವಾಗಿದ್ದು, ಎರಡನೆಯದು ಸ್ವಾಭಾವಿಕವಾಗಿ ವಿದ್ವಾಂಸರಲ್ಲಿ ಬರುವ ಖಗೋಳಶಾಸ್ತ್ರ, ವಿಜ್ಞಾನ ಮತ್ತು ಈ ವಿಷಯಗಳು ಹೇಗೆ ಧಾರ್ಮಿಕ ತತ್ವಜ್ಞಾನದ ಕಾಲದೊಂದಿಗೆ ಸೇರಿಕೊಂಡಿವೆ ಎಂಬುದರ ಬಗ್ಗೆ ಆಸಕ್ತಿಗೆ ಸಂಬಂಧಿಸಿದ್ದಾಗಿತ್ತು. ಗ್ರಹೋನ್ನತ ಮಾಪಕಗಳನ್ನು ಖಗೋಳ ಶಾಸ್ತ್ರಜ್ಞರು ಮತ್ತು ಜೋತಿಷ್ಯರಿಬ್ಬರೂ ಬಳಸುತ್ತಿದ್ದರು. ಸೌರವ್ಯೂಹ ಕಾರ್ಯನಿರತ ಮಾದರಿಯನ್ನು ತಯಾರಿಸಲು, ಭ್ರಮಣಾಫಲಕಕ್ಕೆ ಒಂದು ಗಡಿಯಾರವನ್ನು ಅಳವಡಿಸುವುದು ಸಾಮಾನ್ಯವಾಗಿತ್ತು.

ಪ್ರಮುಖವಾಗಿ ಪ್ರಕಟಣೆಗಳನ್ನು ಹೊರಡಿಸುವ ಸಲುವಾಗಿ ಸರಳ ಗಡಿಯಾರಗಳನ್ನು ಗೋಪುರಗಳಲ್ಲಿ ಪ್ರತಿಷ್ಟಾಪಿಸಲಾಯಿತು.ಇಂತಹ ಗಡಿಯಾರಗಳಿಗೆ ಮುಖ ಅಥವಾ ಕೈಗಳ ಅಗತ್ಯವಿರಲಿಲ್ಲ.

ಅವು ನಿಗದಿತ ಪ್ರಾರ್ಥನಾ ಸಮಯಗಳ ಅವಧಿ ಅಥವಾ ಅಧಿಕೃತ ಕಾಲಮಾನ ಗಳನ್ನು ಪ್ರಕಟಿಸುವ ಸಾಮರ್ಥ್ಯ ಹೊಂದಿದ್ದವು. ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಮಯಗಳಲ್ಲಿ ಬದಲಾವಣೆಯಾಗುತ್ತಿದ್ದರಿಂದ, ಅಧಿಕೃತ ಕಾಲಮಾನಗಳ ಅವಧಿಯಲ್ಲಿ ವ್ಯತ್ಯಾಸಗಳು ಕಂಡು ಬಂದವು. ಅತ್ಯಂತ ಸುಸಜ್ಜಿತ ಖಗೋಳ ಗಡಿಯಾರಗಳೆಂದರೆ ಅವು ಚಲನಾ ಗಡಿಯಾರ ಫಲಕ ಅಥವಾ ಕೈಗಳನ್ನು ಹೊಂದಿದ್ದವು. ಅವು ಹಲವಾರು ವ್ಯವಸ್ಥೆಗಳಲ್ಲಿ ಕಾಲ ಸೂಚಿಸುವ ಸಾಮರ್ಥ್ಯ ಹೊಂದಿದ್ದು, ಇಟಲಿ ಕಾಲಮಾನ ಅಧಿಕೃತ ಕಾಲಮಾನ ಮತ್ತು ಖಗೋಳ ಶಾಸ್ತ್ರಜ್ಞರು ಕಾಲವನ್ನು ಅಳೆಯಲು ಬಳಸುವ ಕಾಲಮಾನ ಮುಂತಾದವನ್ನು ಸೂಚಿಸುತ್ತಿದ್ದವು. ಗಡಿಯಾರದ ಎರಡೂ ವಿನ್ಯಾಸಗಳು ಸ್ವಯಂ ಚಾಲನೆ ಯಂತಹ ಮಿತಿಮೀರಿದ ಲಕ್ಷಣಗಳನ್ನು ಗಳಿಸಲು ಪ್ರಾರಂಭಿಸಿದವು.

1283ರಲ್ಲಿ , ಡನ್ ಸ್ಟೇಬಲ್ ಪ್ರಿಯೋರಿಯಲ್ಲಿ ಒಂದು ದೊಡ್ಡ ಗಡಿಯಾರವನ್ನು ಪ್ರತಿಷ್ಟಾಪಿಸಲಾಯಿತು. ಇದರ ಸ್ಥಳ ರೂಡ್ ಸ್ಕ್ರೀನ್‌ನ ಮೇಲ್ಭಾಗದಲ್ಲಿದ್ದು, ಇದು ಜಲಗಡಿಯಾರವಲ್ಲ ಎಂಬುದನ್ನು ಸೂಚಿಸುವಂತಿತ್ತು[ಸೂಕ್ತ ಉಲ್ಲೇಖನ ಬೇಕು]. 1292ರಲ್ಲಿ ಸೆಂಟರ್ ಬರಿ ಕ್ಯಾಥೆಡ್ರಲ್‌ನಲ್ಲಿ "ಒಂದು ದೊಡ್ಡ ಗಡಿಯಾರ"ವನ್ನು ಪ್ರತಿಷ್ಟಾಪಿಸಲಾಯಿತು. 30ವರ್ಷಗಳ ನಂತರ, ಇಂಗ್ಲೆಂಡ್, ಇಟಲಿ ಮತ್ತು ಫ್ರಾನ್ಸ್ ದೇಶಗಳ ಕ್ರೈಸ್ತ ಸಂಸ್ಥೆಗಳಲ್ಲಿ ಗಡಿಯಾರಗಳಿಗೆ ಸಂಬಂದಿಸಿದ ಹಲವಾರು ಸಂಕ್ಷಿಪ್ತ ತಿಳುವಳಿಕೆಗಳನ್ನು ನೀಡಲಾಯಿತು. 1322ರಲ್ಲಿ ನಾರ್ವಿಚ್‌ನಲ್ಲಿ ಒಂದು ದೊಡ್ಡ ಗಡಿಯಾರವನ್ನು ಪ್ರತಿಷ್ಟಾಪಿಸಲಾಯಿತು. ಇದನ್ನು 1273ರಲ್ಲಿ ಪ್ರತಿಷ್ಟಾಪಿಸಲಾದ ಗಡಿಯಾರಕ್ಕೆ ಬದಲಾಗಿ ಹೆಚ್ಚು ವೆಚ್ಚದಲ್ಲಿ ಸ್ಥಾಪಿಸಲಾಯಿತು. ಇದು ಒಂದು ದೊಡ್ಡ ಸ್ವಯಂಚಾಲಿತ ಗಡಿಯಾರ ಫಲಕ ಹಾಗೂ ಘಂಟೆಗಳನ್ನು ಹೊಂದಿತ್ತು. ಈ ಗಡಿಯಾರದ ಪ್ರತಿಷ್ಟಾಪನ ವೆಚ್ಚವನ್ನು ಭರಿಸಲು ಎರಡು ವರ್ಷಗಳಕಾಲ ಇಬ್ಬರು ಸಮಯಪಾಲಕರನ್ನು ನೇಮಿಸಬೇಕಾಯಿತು.[ಸೂಕ್ತ ಉಲ್ಲೇಖನ ಬೇಕು]

ಪ್ರಾಚೀನ ಖಗೋಳ ಗಡಿಯಾರಗಳು.

ವಾಲಿಂಗ್‌ಫೋರ್ಡ್‌ನ ರಿಚಾರ್ಡ್ ಗಡಿಯಾರವನ್ನು ತೋರಿಸುತ್ತಿರುವುದು, ಸಂತ ಅಲ್ಬಾನ್ಸ್ ಅಬ್ಬೆಗೆ ಅವರ ಕೊಡುಗೆ

ಮೇಲೆ ತಿಳಿಸಿದ 1088ರಲ್ಲಿ ಸು ಸಾಂಗ್ ನಿಂದ ರಚಿತವಾದ ಚೀನಾದ ಖಗೋಳ ಗಡಿಯಾರದ ಜೊತೆಗೆ, 1336ರಲ್ಲಿ ರಿಚರ್ಡ್ ವಾಲ್ಲಿಂಗ್ ಫೋರ್ಡ್ ಯೂರೋಪ್‌ನ ಸೇಂಟ್ ಆಲ್ಬನ್ಸ್ ನಲ್ಲಿ ರಚಿಸಿದ ಗಡಿಯಾರ ಮತ್ತು 1348 ರಿಂದ 1364ರವರೆಗೆ ಪಡುವಾ ದಲ್ಲಿ ಗಿಯೊವಾನ್ನಿ ಡಿ ಡೋಂಡಿ ರಚಿಸಿದ ಗಡಿಯಾರಗಳು ಪ್ರಮುಖವಾಗಿವೆ. ಇವು ಬಹಳಕಾಲ ಇರಲಿಲ್ಲ.ಆದರೆ ಇವುಗಳ ವಿನ್ಯಾಸ ಮತ್ತು ರಚನೆಯ ಕುರಿತ ಸಂಪೂರ್ಣವಾದ ವಿವರಗಳು ಇಂದಿಗೂ ಲಭ್ಯವಿದೆ.,[ಸೂಕ್ತ ಉಲ್ಲೇಖನ ಬೇಕು] ಇದರ ಮೂಲಕವಾಗಿ ಆಧುನಿಕ ಪುನರಚನೆಯ ಸಾಧ್ಯವಾಗಿದೆ. ಇವು ಯಾಂತ್ರಿಕ ಗಡಿಯಾರದ ಸಿದ್ದಾಂತ ಎಷ್ಟು ವೇಗವಾಗಿ ಪ್ರಾಯೋಗಿಕ ರಚನೆಗಳಿಗೆ ಬದಲಾವಣೆ ಹೊಂದಿತು ಎಂಬುದನ್ನು ಉದಾಹರಿಸುತ್ತವೆ. ಅವುಗಳ ಇಂತಹ ಅಭಿವೃದ್ದಿಗಳಲ್ಲಿ ಒಂದು ಎಂದರೆ ಖಗೋಳ ಶಾಸ್ತ್ರಜ್ಞರಲ್ಲಿ ಬಾನಿನ ವಿದ್ಯಾಮಾನಗಳನ್ನು ತಿಳಿಯಲು ಇದ್ದ ತವಕ.

ವಾಲ್ಲಿಂಗ್ ಫೋರ್ಡ್ ಗಡಿಯಾರದಲ್ಲಿ ಒಂದು ದೊಡ್ಡ ಗ್ರಹೋನ್ನತಿ ಮಾಪಕ ಮಾದರಿಯ ಗಡಿಯಾದ ಫಲಕವಿದ್ದು, ಅದು ಸೂರ್ಯ, ಚಂದ್ರನ ಆಯುಷ್ಯ, ಹಂತಮತ್ತು ಉಬ್ಬು, ಒಂದು ನಕ್ಷತ್ರದ ನಕಾಶೆ ಮತ್ತು ಪ್ರಾಯಶಃ ಗ್ರಹಗಳನ್ನು ಸೂಚಿಸುತ್ತಿತ್ತು. ಇದರೊಂದಿಗೆ , ಈ ಗಡಿಯಾರಕ್ಕೆ ಒಂದು ಕಾಲನಿಗಧಿತ ಚಕ್ರವಿತ್ತು ಮತ್ತು ಅಷ್ಟೇ ಅಲ್ಲದೆ ಲಂಡನ್ ಸೇತುವೆಯ ಉಬ್ಬರಗಳನ್ನು ತಿಳಿಸಬಲ್ಲ ಸೂಚಕವೊಂದನ್ನು ಅಳವಡಿಸಲಾಗಿತ್ತು. ಪ್ರತಿಯೊಂದು ಗಂಟೆಗೂ ಘಂಟೆಯ ಶಬ್ದ ಬರುತ್ತಿದ್ದು, ಆ ಹೊಡೆತಗಳ ಸಂಖ್ಯೆ ಎಷ್ಟು ಗಂಟೆಗಳು ಎಂಬುದನ್ನು ಸೂಚಿಸುತ್ತಿತ್ತು.

ಡೋಂಡಿ ಗಡಿಯಾರವು ಏಳು ಮುಖಗಳನ್ನು ಹೊಂದಿದ್ದು, ಒಂದು ಮೀಟರ್ ಎತ್ತರವಿತ್ತು. ಇದರ ಗಡಿಯಾರ ಫಲಕವು ನಿಮಿಷಗಳನ್ನೊಳಗೊಂಡಂತೆ ದಿನದ ಸಮಯವನ್ನು ಸೂಚಿಸುತ್ತಿತ್ತು. ಇದರೊಂದಿಗೆ ಎಲ್ಲಾ ಗ್ರಹಗಳ ಚಲನೆಯನ್ನು ಸೂಚಿಸುವ ವ್ಯವಸ್ಥೆ ಇತ್ತು. ಇಷ್ಟೇ ಅಲ್ಲದೆ ಒಂದು ಸ್ವಯಂಚಾಲಿಚ ಕ್ಯಾಲೆಂಡರ್ ಮತ್ತು ಪ್ರತಿ 18 ವರ್ಷಗಳಿಗೆ ಭ್ರಮಿಸುವ ಗ್ರಹಣವನ್ನು ಅಂದಾಜು ಮಾಡಬಲ್ಲ ಚಕ್ರವನ್ನು ಹೊಂದಿತ್ತು.

ಆದರೆ ಇವು ಎಷ್ಟು ನಿಷ್ಕೃಷ್ಟತೆ ಅಥವಾ ನಂಬಿಕೆಯನ್ನು ಹೊದಿದ್ದವು ಎಂಬುದು ಇಂದಿಗೂ ತಿಳಿದು ಬಂದಿಲ್ಲ. ಪ್ರಾಯಶಃ ಅವುಗಳ ಶಿಥಿಲ ಮತು ನಿಖರವಲ್ಲದ ತಯಾರಿಕೆಯಿಂದ ಅವುಗಳನ್ನು ಪ್ರತಿ ದಿನ ಕೈಯಿಂದ ಹೊಂದಿಸಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿತ್ತು.

ನೀರಿನ ಗಡಿಯಾರಗಳನ್ನು ಈಗಲೂ ಕೆಲವು ಸಂದರ್ಭಗಳಲ್ಲಿ ಬಳಸಲಾಗಿತ್ತಿದ್ದು, ಪ್ರಾಚೀನ ಕೋಟೆಗಳು ಮತ್ತು ವಸ್ತುಸಂಗ್ರಹಾಲಯಗಳಂತಹ ಸ್ಥಳಗಳಲ್ಲಿ ಕಾಣಬಹುದಾಗಿದೆ.

1386ರಲ್ಲಿ ನಿರ್ಮಿಸಿದ ಸ್ಯಾಲಿಸ್ ಬರಿ ಕ್ಯಾಥೆಡ್ರಲ್ ಗಡಿಯಾರವು ಪ್ರಂಪಂಚದ ಅತ್ಯಂತ ಹಳೆಯ ಯಾಂತ್ರಿಕ ಗಡಿಯಾರವಾಗಿದ್ದು, ಗಂಟೆಗಳನ್ನು ಸೂಚಿಸುವ ತಂತ್ರಜ್ಞಾನವನ್ನು ಹೊಂದಿದೆ.[೧೦]

ನಂತರದ ಬೆಳವಣಿಗೆಗಳು

ಗಡಿಯಾರದ ತಯಾರಕರು ಹಲವಾರು ವಿಧಾನಗಳಲ್ಲಿ ತಮ್ಮದೇ ಆದ ಕಲೆಯನ್ನು ರೂಡಿಸಿಕೊಂಡರು. ಸಣ್ಣ ಗಡಿಯಾರಗಳನ್ನು ನಿರ್ಮಿಸುವುದು ಯಾಂತ್ರಿಕವಾಗಿ ಒಂದು ಸವಾಲಾಗಿದ್ದು, ನಿಖರತೆಯನ್ನು ಮತ್ತು ಭರವಸೆಯನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಅವಕಾಶ ನೀಡಿತು. ಗಡಿಯಾರಗಳು ಕುಶಲಕೆಲಸವನ್ನು ಪ್ರದರ್ಶಿಸಲು ಪರಿಣಾಮಕಾರಿಯಾದ ಪ್ರದರ್ಶಿತ ವಸ್ತುಗಳಾಗಿದ್ದವು. ಅದೇ ಸಮಯದಲ್ಲಿ ಅವು ಗೃಹ ಬಳಕೆಗೆ ಅನುಕೂಲವಾದ ರಾಶಿ ಉತ್ಪನ್ನಗಳೂ ಆಗಿದ್ದವು. ವಿಮೋಚನಾ ತಂತ್ರಜ್ಞಾನ ವಿಶೇಷವಾಗಿ ಒಂದು ಮುಖ್ಯ ಅಂಶವಾಗಿದ್ದು ಗಡಿಯಾರದ ನಿಷ್ಕೃಷ್ಟತೆಯ ಮೇಲೆ ಪ್ರಭಾವ ಬೀರಿತ್ತು. ಆದ್ದರಿಂದ ಇತರ ಯಾಂತ್ರಿಕತೆಗಳನ್ನು ಪ್ರಯತ್ನಿಸಲಾಗಿತ್ತು.

ಸ್ಪ್ರಿಂಗ್ ಚಾಲಿತ ಗಡಿಯಾರಗಳು 15ನೇ ಶತಮಾನದಲ್ಲಿ ಕಾಣಿಸಿಕೊಂಡವು,[೧೧][೧೨][೧೩] ಇವುಗಳನ್ನು 1511ರಲ್ಲಿ ನರ್ನ್‌ಬೆರ್ಗ್‌ನ ಗಡಿಯಾರ ತಯಾರಕನಾದಪೀಟರ್ ಹೆನ್ ಲಿನ್( ಅಥವಾ ಹೆನ್ಲೆ ಅಥವಾ ಹೆಲೆ) ಕಂಡುಹಿಡಿದನು ಎಂದು ಕೆಲವೊಮ್ಮೆ ತಪ್ಪಾಗಿ ಭಾವಿಸಲಾಗಿದೆ.[೧೪][೧೫][೧೬] ಅತ್ಯಂತ ಪ್ರಾಚೀನ ಗಡಿಯಾರವೆಂದರೆ ಸುಮಾರು 1430ರಲ್ಲಿ ಬರ್ಗುಂಡಿಯ ಡ್ಯೂಕ್ ಆದ ಪೀಟರ್ ದಿ ಗುಡ್ ಗೆ ನೀಡಿದ ಸ್ಪ್ರಿಂಗ್ ಚಾಲಿತ ಚೇಂಬರ್ ಗಡಿಯಾರ. ಇದು ಈಗ ಜೆರ್ಮಾನಿಶೆಸ್ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿದೆ..[೧೨] ಸ್ಪ್ರಿಂಗ್ ಸಾಮರ್ಥ್ಯವು ಗಡಿಯಾರ ತಯಾರಿಕರಿಗೆ ಒಂದು ಹೊಸ ಸವಾಲನ್ನು ಒಡ್ಡಿತು. ಅದು ಏನೆಂದರೆ ಸ್ಪ್ರಿಂಗ್ ತಿರುಗುತ್ತಾ ಇದ್ದಂತೆ ಗಡಿಯಾರದ ಚಲನೆ ಯನ್ನು ಸ್ಥಿರ ದರದಲ್ಲಿ ಹೇಗೆ ಕಾಪಾಡಿಕೊಳ್ಳುವುದು ಎಂಬುದೇ ಆ ಸಮಸ್ಯೆಯಾಗಿತ್ತು. ಇದು 15ನೇ ಶತಮಾನದಲ್ಲಿ ರಾಶಿ ರಹಿತ ಮತ್ತು ಚಕ್ರ ವಿರುವ ಹೊಸ ಗಡಿಯಾರಗಳ ಅವಿಷ್ಕಾರಕ್ಕೆ ಕಾರಣವಾಯಿತು. ಇದರೊಂದಿಗೆ ಆದ ಇನ್ನೂ ಕೆಲವು ಬದಲಾವಣೆಗಳೆಂದರೆ 1760ರಲ್ಲಿ ಅವಿಷ್ಕಾರಗೊಂಡ ಪಿಪಾಯಿ ಆಕಾರದ ' ಘಂಟೆಯಿರುವ ಆಧುನಿಕ ಗಡಿಯಾರ.

ಹಳೆಯಕಾಲದ ಗಡಿಯಾರದ ಫಲಕಗಳಲ್ಲಿ ನಿಮಿಷ ಮತ್ತು ಸೆಕೆಂಡುಗಳನ್ನು ಬಳಸುತ್ತಿರಲಿಲ್ಲ. 1475 ರ ಪೌಲಸ್ ಆಲ್ಮಾನಸ್‌[೧೭] ನ ಒಂದು ಕೈಬರಹದಲ್ಲಿ ನಿಮಿಷಗಳನ್ನು ತೋರಿಸುವ ಡಯಲ್ ವುಳ್ಳ ಒಂದು ಗಡಿಯಾರದ ಬಗ್ಗೆ ಉದಾಹರಣೆಯಿದೆ. 15ನೇ ಶತಮಾನದ ಜರ್ಮನಿಯ ಕೆಲವು ಗಡಿಯಾರಗಳು ನಿಮಿಷ ಮತ್ತು ಸೆಕೆಂಡ್ ಗಳನ್ನು ಸೂಚಿಸುತ್ತಿದ್ದವು.Cite error: Closing </ref> missing for <ref> tag[೧೮] ಈ ಗಡಿಯಾರಗಳು 16ನೇ ಶತಮಾನದ ಖಗೋಳ ಶಾಸ್ತ್ರಜ್ಞನಾದ ಟೈಕೊ ಬ್ರಾಹೆಗೆ ಮೊದಲಿಗಿಂತ ಹೆಚ್ಚು ನಿಖರವಾಗಿ ಖಗೋಳ ಸಂಗತಿಗಳನ್ನು ವೀಕ್ಷಿಸಲು ಸಹಾಯ ಮಾಡಿದವು.

ಟಾಕಿ ಆಲ್-ದಿನ್ ಎಂಬ ಒಬ್ಬ ಒಟ್ಟಾಮನ್ ನ ಅಭಿಯಂತರ ತನ್ನ ಪುಸ್ತಕದಲ್ಲಿ ಒಂದು ಚಾಲಿತ ಚಕ್ರವುಳ್ಳ, ಅಲಾರಮ್ ಇರುವ ಮತ್ತು ಚಂದ್ರನ ಹಂತಗ್ಳನ್ನು ವಿವರಿಸುವ ತೂಕ ಯಂತ್ರಚಾಲಿತ ಖಗೋಳ ಗಡಿಯಾರ ದ ಬಗ್ಗೆ ವಿವರಣೆ ನೀಡಿದ್ದಾನೆ. 1556-1559ರಲ್ಲಿ ಯಾಂತ್ರಿಕ ಗಡಿಯಾರಗಳನ್ನು (ಅಲ್-ಕವಾಕಿಬ್ ಅಲ್-ದುರ್ರಿಯ್ಯಾ ಫಿ ವಾಧ್' ಅಲ್-ಬ್ಯಾಂಕಮಟ್ ಅಲ್-ದಾವ್ರಿಯ್ಯಾ ), ರಚಿಸಲು ಬಳಸುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಗಳ ಬಗ್ಗೆ ಒಂದು ಪುಸ್ತಕವನ್ನು ಪ್ರಕಟಿಸಲಾಯಿತು..[೧೯] ಇದೇ ರಿತಿಯಲ್ಲಿ, 15ನೇ ಶತಮಾನಕ್ಕಿಂತ ಮುಂಚೆ ಯೂರೋಪಿಯನ್ ಅಲಾರಂ ಗಡಿಯಾರಗಳಲ್ಲಿ,[೨೦][೨೧] ಡಯಲ್ ಚಕ್ರದಲ್ಲಿ ಒಂದು ಬೆಣೆಯನ್ನು ಅಳವಡಿಸುವುದರ ಮೂಲಕ ನಿಗಧಿತ ಅವಧಿಯಲ್ಲಿ ಶಬ್ದ ಹೊರಡುವಂತೆ ಮಾಡಲಾಗಿತ್ತು. ಬೇಕಾದ ಸಮಯದಲ್ಲಿ , ನಾದ ಹೊರಡಿಸುವ ಸಾಧನವನ್ನು ಬೆಣೆಯನ್ನು ಕ್ರಿಯಾಶೀಲಗೊಳಿಸುತ್ತಿತ್ತು. ಈ ಗಡಿಯಾರವು ಮೂರು ಡಯಲ್ ಗಳನ್ನು ಹೊಂದಿದ್ದು, ಅದು ಗಂಟೆ, ಡಿಗ್ರಿ ಮತ್ತು ನಿಮಿಷಗಳನ್ನು ಸೂಚಿಸುತ್ತಿತ್ತು, ನಂತರ ಈತನು ಇಸ್ಟಾನ್ ಬುಲ್ ಅಬ್ಸರ್ ವೇಟರಿ ಆಫ್ ಟಾಕ್ಯಿ ಆಲ್-ದಿನ್ (1577–1580), ಗಾಗಿ ಒಂದು ವೀಕ್ಷಣಾ ಗಡಿಯಾರವನ್ನು ತಯಾರಿಸಿದನು. ಇದನ್ನು "ಮೂರು ಡಯಲ್ ಗಳುಳ್ಳ ಗಂಟೆ, ನಿಮಿಷ ಮತು ಸೆಕೆಂಡ್ ಗಳನ್ನು ತೋರಿಸುವ ಗಡಿಯಾರ" ವಿವರಿಸಲಾಗಿತ್ತು. ಇದು 16ನೇ ಶತಮಾನದಲ್ಲಿ ಪ್ರಾಯೋಗಿಕ ಖಗೋಳ ಶಾಸ್ತ್ರದಲ್ಲಿ ಆದ ಪ್ರಮುಖ ಬದಲಾವಣೆಯಾಗಿತ್ತು. ಏಕೆಂದರೆ ಶತಮಾನದ ಪ್ರಾರಂಭದಲ್ಲಿ ಖಗೋಳ ಉದ್ದೇಶಗಳಿಗೆ ಇವುಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಸಾಧ್ಯವಿರಲಿಲ್ಲ.[೨೨]

ಫ್ರೆಂಚ್ ರೊಕೋಕೊ ಆವರ್ಣ ಗಡಿಯಾರಗಳು, (ಸಮಯದ ಪ್ರದರ್ಶನಾಲಯ, ಬೆಸನ್‌ಕಾನ್)

ಲೋಲಕ ಗಡಿಯಾರದ ಅವಿಷ್ಕಾರದೊಂದಿಗೆ 1656ರ ನಂತರ ನಿಷ್ಕೃಷ್ಟತೆಯಲ್ಲಿ ಮುಂದಿನ ಬೆಳವಣಿಗೆಗೆಗಳು ಕಾಣಿಸಿಕೊಂಡವು. 17ನೇ ಶತಮಾನದ ಆರಂಭದಲ್ಲೇ ತೂಗಾಡುವ ಗುಂಡೊಂದನ್ನು ಬಳಸಿ ಕಾಲಸೂಚಕ ಸಾಧನವೊಂದರ ಚಲನೆಯನ್ನು ನಿಯಂತ್ರಿಸುವ ಕಲ್ಪನೆ ಗೆಲಿಲಿಯೋಗೆ ತಿಳಿದಿತ್ತು. ಹೇಗೂ, ಕ್ರಿಶ್ಚಿಯನ್ ಹ್ಯೂಜೆನ್ಸ್ಗೆ ಈ ಅವಿಷ್ಕಾರದ ಕೀರ್ತಿ ಸಲ್ಲುತ್ತದೆ. ಈತನು ಲೋಲಕದ ಉದ್ದ ಮತ್ತು ಕಾಲದ ನಡುವೆ ಇರುವ ಸಂಬಂಧವನ್ನು ತೋರಿಸುವ (ಒಂದು ಸೆಕೆಂಡ್ ಚಲನೆಗೆ 99.38 cm ಅಥವಾ 39.13 ಇಂಚು ಉದ್ದ) ಒಂದು ಗಣಿತ ಸೂತ್ರವನ್ನು ಕಂಡುಹಿಡಿದು ಮೊದಲ ಬಾರಿಗೆ ಲೋಲಕದ ಸಹಾಯದೊಂದಿಗೆ ಕೆಲಸ ಮಾಡುವ ಗಡಿಯಾರವನ್ನು ಕಂಡುಹಿಡಿದನು. 1670ರಲ್ಲಿ ಇಂಗ್ಲೀಷ್ ವಾಚ್ ತಯಾರಕನಾದ ವಿಲಿಯಮ್ ಕ್ಲೆಮೆಂಟ್ ಆಂಕರ್ ಎಸ್ಕೇಪ್‌ಮೆಂಟ್ ಅನ್ನು[ಸೂಕ್ತ ಉಲ್ಲೇಖನ ಬೇಕು] ರಚಿಸಿದನು. ಇದು ಹ್ಯೂಗನ್ಸ್ ನ ಕ್ರೌನ್ ಎಸ್ಕೇಪ್‌ಮೆಂಟ್‌ಗಿಂತ ಹೆಚ್ಚು ಸುಧಾರಿತ ಯಾಂತ್ರಿಕತೆಯಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಕೇವಲ ಒಂದು ಸಂತತಿಯೊಳಗಾಗಿ , ನಿಮಿಷದ ಮುಳ್ಳುಗಳು ಮತ್ತು ನಂತರ ಸೆಕೆಂಡ್ ಮುಳ್ಳುಗಳನ್ನು ಸೇರಿಸಲಾಯಿತು

ಸಮುದ್ರಯಾನದಲ್ಲಿ ನಿಖರವಾಗಿ ಸಮಯಪಾಲನೆ ಮಾಡಲು ಬೇಕಾದ ಪ್ರಮುಖ ಉತ್ತೇಜನವೆಂದರೆ ಗಡಿಯಾರಗಳ ನಿಷ್ಕೃಟತೆ ಮತ್ತು ವಸ್ತು ನಿಷ್ಟತೆಯನ್ನು ಅಭಿವೃದ್ಧಿಗೊಳಿಸುವುದು. ಪ್ರತಿ ದಿನಕ್ಕೆ ಒಂದು ಸೆಕೆಂಡ್‌ನಷ್ಟ ಅಥವಾ ಗಳಿಕೆಯಂತೆ ಒಂದು ಗಡಿಯಾರವನ್ನು ನಾವಿಕನೊಬ್ಬ ಅನುಸರಿಸುವುದಾದರೆ, ಅವನು ಸಮುದ್ರದ ಮೇಲಿನ ಹಡಗೊಂದರ ಸ್ಥಾನವನ್ನು ನಿಖರವಾಗಿ ನಿರ್ಧರಿಸಬಹುದಾಗಿತ್ತು. ವಾಸ್ತವವಾಗಿ ತೂಗಾಡುವ ಕೆಲಸವನ್ನು ಬಿಟ್ಟರೆ ಈ ಗಡಿಯಾರಗಳಿಗೆ ಲೋಲಕದ ಅವಶ್ಯಕತೆ ಇರಲಿಲ್ಲ. ಯಾವುದೇ ವ್ಯಕ್ತಿ ನಿಖರವಾಗಿ ರೇಖಾಂಶವನ್ನು ಗುರುತಿಸಿ ಹೇಳುವುದಾದಲ್ಲಿ ಆತನಿಗೆ ಒಂದು ದೊಡ್ಡ ಬಹುಮಾನವನ್ನು ಕೊಡುವುದಾಗಿ ಹಲವಾರು ಯೂರೋಪಿನ ಸರ್ಕಾರಗಳು ಘೋಷಿಸಿದವು. ಉದಾಹರಣೆಗೆ, ಗ್ರೇಟ್ ಬ್ರಿಟನ್ 20,000 ಪೌಂಡ್‌ಗಳನ್ನು ಕೊಡುವುದಾಗಿ ಹೇಳಿತು. ಇದು ಈಗಿನ ಹಲವಾರು ಮಿಲಿಯನ್ ಡಾಲರ್ ಗಳಿಗೆ ಸಮನಾಗಿದೆ.

ತನ್ನ ಜೀವನವನ್ನೇ ಗಡಿಯಾರಗಳ ನಿಷ್ಕೃಷ್ಟತೆಯ ಅಭಿವೃದ್ಧಿಗಾಗಿ ಮುಡಿಪಾಗಿಟ್ಟ ಜಾನ್ ಹ್ಯಾರಿಸನ್ರಿಗೆ ಕಾಲಾಂತರದಲ್ಲಿ 1761 ರಲ್ಲಿ ಈ ಬಹುಮಾನವನ್ನು ಕೊಡಲಾಯಿತು. ಆತನ H5 ಗಡಿಯಾರ ಹತ್ತು ವಾರಗಳಿಗಿಂತ ಹೆಚ್ಚು ಕೆಲಸ ಮಾಡಿದಲ್ಲಿ 5 ಸೆಕೆಂಡ್‌ಗಳಿಗಿಂತ ಕಡಿಮೆ ತೋರಿಸುತ್ತಿತ್ತು.[೨೩]

ಲೋಲಕ ಗಡಿಯಾರದ ಬಗ್ಗೆ ಇದ್ದ ಉದ್ರೇಕ ಹಲವಾರು ಗಡಿಯಾರ ವಿನ್ಯಾಸಕರನ್ನು ಆಕರ್ಷಿಸಿತು. ಇದು ಗಡಿಯಾರ ಸ್ವರೂಪದ ಮರುರಚನೆಗೆ ಕಾರಣವಾಯಿತು.{1/} ಪ್ರಮುಖವಾಗಿ, ಲೋಲಕ ಮತ್ತು ಇತರ ಭಾಗಗಳನ್ನು ಹೊಂದಿಸಲು ಉದ್ದ ಚೌಕಟ್ಟಿನ ಗಡಿಯಾರಗಳನ್ನು (ಇವುಗಳನ್ನು ಅಜ್ಜನ ಗಡಿಯಾರ ಎಂದೂ ಕರೆಯುವರು) ರಚಿಸಲಾಗಿತ್ತು. 1670 ಅಥವಾ 1671ರಲ್ಲಿ ಈ ವಿಧದ ಗಡಿಯಾರವನ್ನು ರೂಪುಗೊಳಿಸಿದ್ದಕ್ಕೆ ಇಂಗ್ಲೀಷ್ ವಾಚ್ ತಯಾರಕನಾದ ವಿಲಿಯಂ ಕ್ಲೆಮೆಂಟ್‌ಗೆ ಈ ಕೀರ್ತಿ ಸಲ್ಲುತ್ತದೆ. ಈ ಸಮಯದಲ್ಲಿ ಗಡೀಯಾರಗಳ ಚೌಕಟ್ಟುಗಳನ್ನು ಮರದಿಂದ ಮಾಡಲಾಗುತ್ತಿತ್ತು. ಗಡಿಯಾರದ ಫಲಕಗಳಲ್ಲಿ ಎನಾಮಲ್ ಹಾಗೂ ಕೈಯಿಂದ ಬಣ್ಣ ಹಚ್ಚಿದ ಪಿಂಗಾಣಿಗಳನ್ನು ಉಪಯೋಗಿಸಲಾಗುತ್ತಿತ್ತು.

ಫ್ರೆಂಚ್ ಆಂದೋಲನ ಕಾಲದ ಫ್ರೆಂಚ್ ದಶಾಂಕ ಗಡಿಯಾರ

ನವಂಬರ್ 17, 1797ರಲ್ಲಿ, ಏಲಿ ಟೆರ್ರಿ ಒಂದು ಗಡಿಯಾರಕ್ಕಾಗಿ ಪ್ರಪ್ರಥಮ ಬಾರಿಗೆ ಹಕ್ಕುಪತ್ರ ಪಡೆದನು. ಟೆರ್ರಿಯನ್ನು ಅಮೇರಿಕಾದ ಗಡಿಯಾರ ಕೈಗಾರಿಕೆಯ ಸಂಸ್ಥಾಪಕ ಎಂದು ಕರೆಯಲಾಗಿದೆ.

1840ರಲ್ಲಿ ಸ್ಕಾಟಿಷ್ ಗಡಿಯಾರ ತಯಾರಕನಾದ ಅಲೆಕ್ಸಾಂಡರ್ ಬೈನ್, ತನ್ನ ವಿದ್ಯುತ್ ಗಡಿಯಾರಕ್ಕೆ ಹಕ್ಕುಪತ್ರವನ್ನು ಪಡೆದನು. ವಿದ್ಯುತ್ ಗಡಿಯಾರದ ಮುಖ್ಯ ಸ್ಪ್ರಿಂಗ್‌ನ್ನು ಒಂದು ವಿದ್ಯುತ್ ಮೋಟಾರ್ ಅಥವಾ ಒಂದು ವಿದ್ಯುತ್ -ಅಯಸ್ಕಾಂತದಿಂದ ಮತ್ತು ಆರಮೇಚರ್‌ನಿಂದ ಸುತ್ತಲಾಗಿರುತ್ತದೆ. 1841ರಲ್ಲಿ ಈತನು ವಿದ್ಯುತ್ಕಾಂತೀಯ ಲೋಲಕಗಳಿಗೆ ಹಕ್ಕುಪತ್ರವನ್ನು ಮೊದಲ ಬಾರಿಗೆ ಪಡೆದನು.

20ನೇ ಶತಮಾನದಲ್ಲಿ ಎಲೆಕ್ಟ್ರಾನಿಕ್ಸ್‌ನ ಬೆಳವಣಿಗೆಯೊಂದಿಗೆ ಈ ಯಾವುದೇ ಭಾಗಗಳಿಲ್ಲದ ಗಡಿಯಾರಗಳು ಹುಟ್ಟಿಕೊಂಡವು. ಇವುಗಳಲ್ಲಿ ಸಮಯವನ್ನು ಹಲವಾರು ವಿಧಗಳಲ್ಲಿ ಅಳೆಯಬಹುದಾಗಿದೆ. ಶೃತಿಕವೆಯ ಕಂಪನ, ಕ್ವಾರ್ಟ್ಸ್ ಹರಳುಗಳ ಕಾರ್ಯವಿಧಾನ ಅಥವಾ ಪರಮಾಣುಗಳ ಕ್ವಾಂಟಂ ಕಂಪನ ಮುಂತಾದುವು ಸಮಯವನ್ನು ಅಳೆಯುವ ವಿಧಗಳು. ನಂತರ ಬಂದ ಯಾಂತ್ರಿಕ ಗಡಿಯಾರಗಳಲ್ಲೂ ಸಹ ದೊಡ್ಡ ಬ್ಯಾಟರಿಗಳನ್ನು ಅಳವಡಿಸಲು ಪ್ರಾರಂಭಿಸಿ ಕೀಲಿ ಕೊಡುವ ಪದ್ದತಿಯನ್ನು ಕೈಬಿಡಲಾಯಿತು.

Other Languages
адыгабзэ: Сыхьат
Afrikaans: Klokhorlosie
Alemannisch: Uhr
aragonés: Reloch
العربية: ساعة (آلة)
অসমীয়া: ঘড়ী
asturianu: Reló
Atikamekw: Tipahipisimon
azərbaycanca: Saat
تۆرکجه: ساعات
башҡортса: Сәғәт
Boarisch: Uah
žemaitėška: Dzieguorios
беларуская: Гадзіннік
беларуская (тарашкевіца)‎: Гадзіньнік
български: Часовник
বাংলা: ঘড়ি
brezhoneg: Ur
català: Rellotge
Mìng-dĕ̤ng-ngṳ̄: Cṳ̆ng
کوردی: کاتژمێر
čeština: Hodiny
kaszëbsczi: Zédżer
Чӑвашла: Сехет (хатĕр)
Cymraeg: Cloc
dansk: Ur
Deutsch: Uhr
Ελληνικά: Ρολόι
emiliàn e rumagnòl: Arlói
English: Clock
Esperanto: Horloĝo
español: Reloj
eesti: Kell
euskara: Erloju
فارسی: ساعت
suomi: Kello
Võro: Kell
Gaeilge: Clog
贛語:
galego: Reloxo
گیلکی: ساعت
Hausa: Agogo
עברית: שעון
հայերեն: Ժամացույց
interlingua: Horologio
Bahasa Indonesia: Jam (alat)
Interlingue: Horloge
Ilokano: Pagorasan
íslenska: Klukka
italiano: Orologio
日本語: 時計
Patois: Klak
ქართული: საათი
қазақша: Сағат
한국어: 시계
Кыргызча: Саат
Latina: Horologium
Lëtzebuergesch: Auer
lumbaart: Orelogg
ລາວ: ໂມງ
lietuvių: Laikrodis
latviešu: Pulkstenis
македонски: Часовник
മലയാളം: ഘടികാരം
मराठी: घड्याळ
Bahasa Melayu: Jam (alat)
Mirandés: Reloijo
မြန်မာဘာသာ: နာရီ
Plattdüütsch: Klock (Tiet)
नेपाल भाषा: ईलचं
Nederlands: Klok (tijd)
norsk nynorsk: Klokke
occitan: Relòtge
ਪੰਜਾਬੀ: ਘੜੀ
polski: Zegar
پنجابی: گھڑی
پښتو: گړيال
português: Relógio
Runa Simi: Pacha tupuq
română: Ceas
русский: Часы
sicilianu: Rulòggiu
Scots: Knock
سنڌي: گھڙيال
srpskohrvatski / српскохрватски: Sat (predmet)
Simple English: Clock
slovenčina: Hodiny
slovenščina: Ura (naprava)
Soomaaliga: Goorsheegto
shqip: Ora
српски / srpski: Часовник
svenska: Ur
Kiswahili: Saa (ala)
Sakizaya: tuki
தமிழ்: கடிகாரம்
తెలుగు: క్లాక్
Tagalog: Orasan
Türkçe: Saat
татарча/tatarça: Сәгать (корал)
українська: Годинник
اردو: گھنٹا
oʻzbekcha/ўзбекча: Soat (asbob)
vèneto: Rełojo
vepsän kel’: Časud
Tiếng Việt: Đồng hồ
walon: Ôrlodje
Winaray: Relo
吴语: 时钟
ייִדיש: זייגער
中文: 時鐘
Bân-lâm-gú: Sî-cheng
粵語:
isiZulu: Iwashi