ಕಿರಿಮೆದುಳು

  1. REDIRECT Template:Infobox brain

ಲ್ಯಾಟಿನ್‌ ಭಾಷೆಯಲ್ಲಿ ಸೆರೆಬೆಲ್ಲಮ್‌‌ ಎಂದು ಕರೆಯಲ್ಪಡುವ ’ಕಿರಿಮೆದುಳು ’ ಮೆದುಳಿನ ಒಂದು ಅಂಗವಾಗಿದ್ದು ಚಲನೆಯ ನಿಯಂತ್ರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಗಮನ ಕೇಂದ್ರೀಕರಿಸುವಿಕೆ ಹಾಗೂ ಭಾಷೆಯಂಥ ಕೆಲವು ಕಾಗ್ನಿಟಿವ್‌ ಕಾರ್ಯಗಳಲ್ಲೂ ಹಾಗೂ ಭಯವನ್ನು ಹದ್ದುಬಸ್ತಿನಲ್ಲಿಡುವ, ಸಂತೋಷದ ಪ್ರತಿಕ್ರಿಯೆಯಂಥ[೧] ಭಾವನಾತ್ಮಕ ಕಾರ್ಯದಲ್ಲೂ ಕಿರಿಮೆದಳು ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಆದರೆ ಅದರ ಪ್ರಾಮುಖ್ಯತೆ ನಮ್ಮ ಗಮನಕ್ಕೆ ಬರುವುದು ಮಾತ್ರ ಚಲನೆಯ ಸಂದರ್ಭದಲ್ಲಿ ಅದು ನಿರ್ವಹಿಸುವ ಪಾತ್ರದಿಂದಾಗಿ. ಹಾಗೆಂದು ಕಿರಿಮೆದುಳು ಯಾವುದೇ ಚಲನೆಯನ್ನು ಪ್ರಾರಂಭಿಸುವುದಿಲ್ಲ, ಆದರೆ ಸಹಯೋಗ, ಕರಾರುವಕ್ಕುತನ, ಖಚಿತ ಸಮಯಪ್ರಜ್ಞೆಗೆ ಅದು ದೊಡ್ಡ ಪ್ರಮಾಣದ ಕೊಡುಗೆ ಸಲ್ಲಿಸುತ್ತದೆ. ಸಂವೇದನಾವಾಹಕ ವ್ಯವಸ್ಥೆಗಳಿಂದ ಹಾಗೂ ಮೆದುಳು ಮತ್ತು ಬೆನ್ನುಹುರಿಯಿಂದ ಸೂಚನೆಗಳನ್ನು ಸ್ವೀಕರಿಸುವುದಲ್ಲದೇ, ಆ ಸೂಚನೆಗಳನ್ನು ಸಾಂದ್ರಗೊಳಿಸಿ ಶಿಸ್ತುಬದ್ಧ ಪರಿಚಲನಾ ಚಟುವಟಿಕೆಯನ್ನು ಅದು ಸಾಧ್ಯವಾಗಿಸುತ್ತದೆ.[೨] ಈ ಶಿಸ್ತುಬದ್ಧಗೊಳಿಸುವ ಕ್ರಿಯೆಯಿಂದಾಗಿ ಕಿರುಮೆದುಳಿಗಾಗುವ ಯಾವುದೇ ಘಾಸಿ ಲಕ್ವದಂಥ ನಿಷ್ಕ್ರಿಯತೆಗೆ ಕಾರಣವಾಗುವುದಿಲ್ಲವಾದರೂ, ಸುಸಂಬದ್ಧ ಚಲನೆ, ಸಮತೋಲನ ಸ್ಥಿತಿ, ದೈಹಿಕ ಭಂಗಿ ಹಾಗೂ ಚಲನಾ ಕಲಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.[೨]

ಅಂಗರಚನಾಶಾಸ್ತ್ರದ ಪರಿಭಾಷೆಗಳನ್ನೇ ಬಳಸುವುದಾದರೆ, ಸೆರೆಬಲಮ್ ಹೆಮಿಸ್ಪಿಯರ್ ಗಳ ಕೆಳಭಾಗಕ್ಕೆ ಅಂಟಿಕೊಂಡಂತಿರುವ ಕಿರಿಮೆದುಳು ಮೇಲ್ನೋಟಕ್ಕೆ ಮೆದುಳಿನ ಕೆಳಭಾಗದಲ್ಲಿ ಅಂಟಿಕೊಂಡಿರುವ ಪ್ರತ್ಯೇಕ ಅಂಗದಂತೆಯೇ ಗೋಚರಿಸುತ್ತದೆ. ದೊಡ್ಡ ಸುರುಳಿ ಆಕಾರದ ಸೆರೆಬ್ರಲ್ ಕಾರ್ಟೆಕ್ಸ್‌ಗೆ ತದ್ವಿರುದ್ಧವಾಗಿ ಕಿರುಮೆದುಳಿನ ಮೇಲ್ಬಾಗ ಸ್ಥಳಾವಕಾಶ ಹೊಂದಿರುವ ಸಮನಾಂತರ ಜಾಡುಗಳಿಂದ ಆವೃತ್ತವಾಗಿದೆ. ಕಿರುಮೆದುಳು ಎಂಬುದು ಸುರುಳಿ ಅಕಾರ್ಡಿಯನ್‌ ವಾದ್ಯದ ತಂತಿಗಳ ರೂಪದಲ್ಲಿ ಸುತ್ತಿಕೊಂಡ ನರಗಳ ಜೀವಕೋಶಗಳ(ಸೆರೆಬೆಲ್ಲಾರ್ ಕಾರ್ಟೆಕ್ಸ್‌) ಒಂದು ತೆಳುವಾದ ಪದರ ಎಂಬ ಅಂಶವನ್ನು ಹೊರಭಾಗದಲ್ಲಿ ಆವರಿಸಿದ ಈ ಸಮನಾಂತರ ಜಾಡುಗಳು ಮರೆಮಾಚುತ್ತವೆ. ಈ ತೆಳುವಾದ ಪದರದೊಳಗೆ ಹಲವು ಬಗೆಯ ನ್ಯೂರಾನ್‌ಗಳು ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುವಗಳೆಂದರೆ ಪರ್ಕಿಂಜೆ ಜೀವಕೋಶಗಳು ಹಾಗೂ ಗ್ರ್ಯಾನ್ಯೂಲ್‌ ಜೀವಕೋಶಗಳು. ಸಂಕೀರ್ಣವಾದ ಈ ನ್ಯೂರಲ್ ಸಂಪರ್ಕಜಾಲ ಸಂಜ್ಞಾ(ಸೂಚನಾ) ಸಾಮರ್ಥ್ಯವನ್ನು ಹೆಚ್ಚಿಸುತ್ತವೆಯಾದರೂ, ಇದು ಹೊರ ಹಾಕುವ ಸೂಚನೆಗಳೆಲ್ಲವೂ ಸಮಗ್ರವಾಗಿ ಕಿರುಮೆದುಳಿನ ಒಳಭಾಗದಲ್ಲಿರುವ ಸೆರೆಬೆಲ್ಲಾರ್ ನ್ಯೂಕ್ಲೀ ಎಡೆಗೆ ನಿರ್ದೇಶಿಸಲ್ಪಡುತ್ತವೆ.

ಚಲನೆಯ ನಿಯಂತ್ರಣದಲ್ಲಿ ಇದು ನಿರ್ವಹಿಸುವ ಪ್ರಮುಖ ಪಾತ್ರದ ಜೊತೆಗೆ ಕಿರುಮೆದುಳು ಹಲವು ಬಗೆಯ ಚಲನೆಯ ತಿಳುವಳಿಕೆಗೆ ಅತ್ಯವಶ್ಯಕವಾಗಿದೆ. ಅವುಗಳಲ್ಲಿ ಸಂವೇದಿಪ್ರೇರಕಗಳ (ಸೆನ್ಸರಿಮೋಟಾರ್) ಸಂಬಂಧದಲ್ಲಾಗುವ ಬದಲಾವಣೆಗಳನ್ನು ಹೊಂದಿಸುವ ಕಾರ್ಯ ಅತ್ಯಂತ ಪ್ರಮುಖವಾದದ್ದು. ಸಿನ್ಯಾಪ್ಟಿಕ್‌ ಪ್ಲಾಸ್ಟಿಸಿಟಿಯ ಪರಿಭಾಷೆಯಲ್ಲಿಯೇ ಕಿರುಮೆದುಳಿನೊಳಗಿನ ಈ ಸಂವೇದಿಪ್ರೇರಕ ಕ್ಯಾಲಿಬ್ರೇಷನ್‌ ಅನ್ನು ವಿವರಿಸಲು ಹಲವಾರು ಸೈದ್ಧಾಂತಿಕ ಮಾದರಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿನ ಹೆಚ್ಚಿನ ಮಾದರಿಗಳನ್ನು ಡೇವಿಡ್ ಮರ್ರ್ ಹಾಗೂ ಜೇಮ್ಸ್‌ ಆಲ್ಬಸ್ ಅವರು ಸಿದ್ಧಪಡಿಸಿದ ಮಾದರಿಗಳಿಂದ ಆಯ್ದುಕೊಳ್ಳಲಾಗಿದೆ. ಆ ಇಬ್ಬರು ಮೇಧಾವಿಗಳ ಮಾದರಿಗಳಿಗೆ ಪ್ರೇರಣೆಯಾಗಿದ್ದು ಸೆರೆಬೆಲ್ಲಾರ್ ಪರ್ಕಿಂಜೆ ಜೀವಕೋಶಗಳು ಎರಡು ಬಗೆಯ ವಿಭಿನ್ನ ಪ್ರಕಾರಗಳ ಸೂಚನೆಗಳನ್ನು ಸ್ವೀಕರಿಸುತ್ತವೆ ಎಂಬ ಅಂಶ. ಒಂದು ಕಡೆ, ಸಮಾನಾಂತರ ಫೈಬರ್ ಗಳಿಂದ ಹೊರ ಹೊಮ್ಮಿದ ಸಾವಿರಾರು ಸೂಚನೆಗಳು, ತೀರಾ ನಿಶ್ಯಕ್ತವಾಗಿರುತ್ತವೆ; ಇನ್ನೊಂದೆಡೆ, ಯಾವುದೋ ಒಂದು ಏಕ ಫೈಬರ್‌ನಿಂದ ಹೊರ ಹೊಮ್ಮಿದ ಸೂಚನೆಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ, ಏಕೈಕ ಕ್ಲೈಂಬಿಂಗ್ ಫೈಬರ್‌ನ ಕ್ರಿಯೆಯ ಸಾಮರ್ಥ್ಯ ಟಾರ್ಗೆಟ್ ಪರ್ಕಿಂಜೆ ಜೀವಕೋಶಗಳು ತಮ್ಮೆಲ್ಲಾ ಸಾಮರ್ಥ್ಯದೊಂದಿಗೆ ಕಾರ್ಯಪ್ರವೃತ್ತವಾಗುವಂತೆ ಮಾಡಬಲ್ಲವು. ಮರ್ರ್-ಆಲ್ಬಸ್‌ ಸಿದ್ಧಾಂತದ ಮೂಲ ಪರಿಕಲ್ಪನೆ ಏನೆಂದರೆ, ಕ್ಲೈಂಬಿಂಗ್ ಫೈಬರ್‌ಗಳು ’ಶಿಕ್ಷಿತ ಸಂಜ್ಞೆ’ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಏಕಕಾಲದಲ್ಲಿ ಕ್ರಿಯಾಶೀಲಗೊಳ್ಳಬಲ್ಲ ಸಮನಾಂತರ ಫೈಬರ್ ಸೂಚನೆಗಳ ಸಾಮರ್ಥ್ಯದಲ್ಲಿ ದೊಡ್ಡ ಪ್ರಮಾಣದ ಹಾಗೂ ದೀರ್ಘಕಾಲೀನ ಬದಲಾವಣೆಯನ್ನು ಹುಟ್ಟು ಹಾಕುತ್ತದೆ. ಸಮನಾಂತರ ಫೈಬರ್ ಸೂಚನೆಗಳಲ್ಲಾಗುವ ದೀರ್ಘಕಾಲೀನ ಒತ್ತಡಗಳನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸಿದಾಗ ಅವುಗಳಿಂದ ದೊರೆತ ಸಾಕ್ಷ್ಯಾಧಾರಗಳು ಈ ಬಗೆಯ ಸಿದ್ಧಾಂತಗಳಿಗೆ ಪೂರಕವಾಗಿದ್ದವಾದರೂ ಅವುಗಳ ಸತ್ಯಾಸತ್ಯತೆ ಇಂದಿಗೂ ಚರ್ಚಾಸ್ಪದವಾಗಿವೆ.

Other Languages
aragonés: Cerebelo
العربية: مخيخ
ܐܪܡܝܐ: ܡܘܚܘܢܐ
беларуская: Мазжачок
български: Малък мозък
brezhoneg: Ilpenn
bosanski: Mali mozak
català: Cerebel
کوردی: مێشکۆڵە
čeština: Mozeček
Deutsch: Kleinhirn
Ελληνικά: Παρεγκεφαλίδα
English: Cerebellum
Esperanto: Cerbeto
español: Cerebelo
eesti: Väikeaju
euskara: Garuntxo
فارسی: مخچه
suomi: Pikkuaivot
français: Cervelet
Gaeilge: Ceirbrín
galego: Cerebelo
עברית: המוח הקטן
hrvatski: Mali mozak
Kreyòl ayisyen: Sèvèl
magyar: Kisagy
հայերեն: Ուղեղիկ
Bahasa Indonesia: Otak kecil
íslenska: Litli heili
italiano: Cervelletto
日本語: 小脳
ქართული: ნათხემი
қазақша: Мишық
한국어: 소뇌
Latina: Cerebellum
lietuvių: Smegenėlės
latviešu: Smadzenītes
монгол: Бага тархи
Bahasa Melayu: Serebelum
مازِرونی: مخچه
Nederlands: Kleine hersenen
norsk nynorsk: Veslehjernen
polski: Móżdżek
português: Cerebelo
română: Cerebel
русский: Мозжечок
Scots: Cerebellum
srpskohrvatski / српскохрватски: Mali mozak
Simple English: Cerebellum
slovenčina: Mozoček
slovenščina: Mali možgani
Soomaaliga: Cerebellum
српски / srpski: Мали мозак
svenska: Lillhjärnan
тоҷикӣ: Мағзча
Tagalog: Serebelyum
Türkçe: Beyincik
ئۇيغۇرچە / Uyghurche: كىچىك مېڭە
українська: Мозочок
oʻzbekcha/ўзбекча: Miyacha
Tiếng Việt: Tiểu não
მარგალური: ნათხემი
中文: 小脑
Bân-lâm-gú: Sió-náu
粵語: 小腦