ಕಡಲ ಗಿಣಿ

ಒಂದು ಜಾತಿಯ ಕಡಲ ಗಿಣಿ

ಕಡಲ ಗಿಣಿ

ಕೆರಾಡ್ರಿಫಾರ್ಮಿಸ್ ಗಣದ ಆಲ್ಸಿಡೀ ಕುಟುಂಬಕ್ಕೆ ಸೇರಿದ ಹಕ್ಕಿ (ಪಫಿನ್). ಇದರ ಆಕಾರ ಗಿಣಿಯಂತಿದ್ದು ಕಡಲ ಸಮೀಪದಲ್ಲಿ ವಾಸಮಾಡುವುದರಿಂದ ಇದಕ್ಕೆ ಈ ಹೆಸರು. ಇದು ಸದಾ ನೀರಿನಲ್ಲಿ ಬೆಂಡಿನಂತೆ ತೇಲುತ್ತ-ಮುಳುಗುತ್ತ ಕಾಲ ಕಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶದಲ್ಲಿ ಇದು ಸಾಮಾನ್ಯ. ಇದು ಆಕ್ ಹಕ್ಕಿಯ ಸಂಬಂಧಿ. ಇದರ ಕಾಲುಗಳು ಬಹಳ ಹಿಂದಕ್ಕಿರುವುದರಿಂದ ಭೂಮಿಯ ಮೇಲೆ ನಿಂತಾಗ ಕುಳಿತ ಮನುಷ್ಯನಂತೆ ಕಾಣುವುದು. ಹಕ್ಕಿ ದೊಡ್ಡ ಗಾತ್ರದ್ದು. ತಲೆಯೂ ಸಹ ಶರೀರಕ್ಕೆ ಹೋಲಿಸಿದರೆ ಮಿತಿಮೀರಿ ಬೆಳೆದಂತೆ ಕಾಣುತ್ತದೆ. ತಲೆಯ ಇಕ್ಕೆಡೆಗಳಲ್ಲಿ ಬಿಳಿಮಚ್ಚೆಯಿದೆ. ಕಣ್ಣಿನ ಹಿಂಭಾಗದಲ್ಲಿ ಬಂಗಾರದ ಬಣ್ಣದ ಪುಕ್ಕಗಳಿವೆ. ಕೊಕ್ಕು ತುಂಬ ದೊಡ್ಡದಾಗಿದ್ದು ಮುಖವಾಡದಂತೆ ಕಾಣುತ್ತದೆ. ಇದರಿಂದಾಗಿ ಹಕ್ಕಿ ಅಷ್ಟು ಆಕರ್ಷಕವಾಗಿಲ್ಲ. ಕೊಕ್ಕಿನ ವಿಚಿತ್ರವಾದ ರಚನೆಗೆ ಕಾರಣ ಗೊತ್ತಿಲ್ಲ. ಇದು ಸಮುದ್ರದಡದಲ್ಲಿ ಗೂಡನ್ನು ಕಟ್ಟಿ ಮೊಟ್ಟೆಯಿಡುತ್ತದೆ. ಸಮುದ್ರದಲ್ಲಿ ಸಿಗುವ ಮೀನು ಮುಂತಾದ ಪ್ರಾಣಿಗಳು[೧][೨]

Other Languages
Afrikaans: Papegaaiduiker
العربية: بفن
تۆرکجه: فراترکولا
беларуская: Тупікі
বাংলা: পাফিন
brezhoneg: Poc'han
català: Fraret
Cebuano: Fratercula
čeština: Papuchalk
Deutsch: Lunde
English: Puffin
Esperanto: Fraterkulo
español: Fratercula
suomi: Lunnit
føroyskt: Lundar
français: Fratercula
Gaeilge: Puifín
Gàidhlig: Buthaid
עברית: תוכי ים
magyar: Fratercula
íslenska: Lundar
italiano: Fratercula
latviešu: Tuklīši
Plattdüütsch: Seepapagoyen
Nederlands: Papegaaiduikers
norsk: Lunder
polski: Fratercula
پنجابی: پفن
português: Papagaio-do-mar
русский: Тупики
Simple English: Puffin
svenska: Lunnesläktet
தமிழ்: கடல் கிளி
українська: Тупик
Tiếng Việt: Hải âu cổ rụt
Winaray: Fratercula
中文: 海鸚