ಕಟ್ಟಡ

ಚೀನಾದ ಒಂದು ಕಟ್ಟಡ

ಕಟ್ಟಡ ಮಾಡು ಮತ್ತು ಗೋಡೆಗಳಿಂದ ನಿರ್ಮಿಸಲ್ಪಟ್ಟ ರಚನೆಗಳನ್ನು ಕಟ್ಟಡ ಎನ್ನುತ್ತೇವೆ. ವಾಸ್ತುಶಾಸ್ತ್ರ, ನಿರ್ಮಾಣ (ಕಾಮಗಾರಿ), ಯಂತ್ರವಿಜ್ಞಾನ ಮತ್ತು ಸ್ಥಿರಾಸ್ತಿ ಅಭಿವೃದ್ಧಿಗಳಲ್ಲಿ ಕಟ್ಟಡ ಶಬ್ದವು ಯಾವುದೇ ಅನುಕೂಲ ಅಥವಾ ನಿರಂತರ ಅನುಭೋಗಕ್ಕಾಗಿ ಆಧಾರ ಅಥವಾ ಆಶ್ರಯ ನೀಡಲು ಬಳಸಲಾಗುವ ಅಥವಾ ಉದ್ದೇಶಿಸಲಾದ ಯಾವುದೇ ಮಾನವ ನಿರ್ಮಿತ ರಚನೆಯನ್ನು ನಿರ್ದೇಶಿಸುತ್ತದೆ.ವಸತಿಗೃಹಗಳು, ದಾಸ್ತಾನು ಮಳಿಗೆಗಳು, ವಿವಿಧ ಸಂಘ ಸಂಸ್ಥೆಗಳ ಕಚೇರಿಗಳು ಮುಂತಾದುವೆಲ್ಲವೂ ಕಟ್ಟಡಗಳೇ. ಒಂದು ಕಟ್ಟಡದ ಪ್ರಧಾನಾವಶ್ಯಕತೆಗಳು ಎರಡು-ರಚನಾತ್ಮಕವಾಗಿ ಅದು ಭದ್ರವಾಗಿರಬೇಕು ಮತ್ತು ಹವೆ ಬೆಂಕಿ ನೀರು ಕಳ್ಳಕಾಕರು ಮುಂತಾದ ಪ್ರತಿಬಲಗಳ ವಿರುದ್ಧ ರಕ್ಷಣೆ ಒದಗಿಸಬೇಕು. ಇಂಥ ಕಟ್ಟಡವನ್ನು ಆದಷ್ಟು ಮಿತವ್ಯಯದಿಂದ ರಚಿಸುವುದು ಕಟ್ಟಡ ಉದ್ಯಮದ ಕೆಲಸ. ಇದಕ್ಕೆ ಒಪ್ಪ ಓರಣ ನೀಡುವುದು ಕಲೆಗಾರಿಕೆ. ಕಟ್ಟಡ ರಚನೆಯಲ್ಲಿ ಕನಿಷ್ಠ ಪ್ರಯತ್ನದಿಂದ ಗರಿಷ್ಠ ದಕ್ಷತೆಯನ್ನು ಸಾಧಿಸುವುದೇ ಮಿತವ್ಯಯ ಅಥವಾ ಹಾಳತೆ-ಬಳಸಿದ ವಸ್ತುಗಳು ಗರಿಷ್ಠ ಉಪಯುಕ್ತತೆಯನ್ನು ಕೊಡಬೇಕು; ಪ್ರಯುಕ್ತಿಸಿದ ಜನಬಲ ಗರಿಷ್ಠ ಫಲಿತಾಂಶವನ್ನು ನೀಡಬೇಕು. ಎಂದರೆ ಕೆಲಸಗಾರರ ಮತ್ತು ವಸ್ತುಗಳ ಸಮರ್ಪಕ ಸಮನ್ವಯವೇ ಕಟ್ಟಡದ ಉದ್ಯಮದಲ್ಲಿ ಮಿತವ್ಯಯ.

ಕಟ್ಟಡದ ಪ್ರಧಾನ ಅಂಗಗಳು

ಒಂದು ಕಟ್ಟಡದ ಪ್ರಧಾನ ಅಂಗಗಳು ಹತ್ತು : 1 ಅಡಿಪಾಯ, 2 ಗೋಡೆ, 3 ಅಡ್ಡಗೋಡೆಗಳು, 4 ತಡಿಕೆ, 5 ಮಾಡು, 6 ನೆಲ, 7 ಗಿಲಾವು, 8 ಮಹಡಿಯ ಮೆಟ್ಟಿಲು, 9 ಕಿಟಕಿ, 10. ಬಾಗಿಲು. ಕಟ್ಟಡದ ತಾಂತ್ರಿಕ ಕ್ರಮಗಳು ಸಂಪ್ರದಾಯದಿಂದ ಬಂದಿರಬಹುದು. ಇಲ್ಲವೆ ಈಚೆಗೆ ಬೆಳೆದಿರಬಹುದು. ಈ ಕ್ರಮಗಳ ಸ್ಥೂಲವಿವರಣೆಯನ್ನು ಇಲ್ಲಿ ಕೊಟ್ಟಿದೆ.

ಅಡಿಪಾಯ

The Hôtel de Ville, building in Paris, France

ಕಟ್ಟಡ ಮತ್ತು ಅದರ ಅಡಿಪಾಯದ ಸಂವಿಧಾನ ತಳದ ಮಣ್ಣಿನ ಸ್ವಭಾವವನ್ನೂ ನೆಲದ ಇಳಿಜಾರನ್ನೂ ಅವಲಂಬಿಸಿವೆ. ಸಾಮಾನ್ಯವಾಗಿ ಕಟ್ಟಡದ ಗೋಡೆಗಳ ಕೆಳಗಡೆ ನೀರು ಇಳಿಯದಂಥ ಗಟ್ಟಿಯಾದ ನೆಲ ಸಿಕ್ಕುವವರೆಗೂ (ಕನಿಷ್ಠಪಕ್ಷ 90 ಸೆಂಮೀ ಆದರೂ) ಅಗೆಯಬೇಕು. ವಿಶೇಷ ಸಂದರ್ಭಗಳಲ್ಲಿ ಅಡಿಪಾಯಗಳನ್ನು ನಾಲ್ಕು ನಮೂನೆಗಳಾಗಿ ವಿಂಗಡಿಸಬಹುದು, ತೊಲೆಯ ಅಡಿಪಾಯ, ಕಂಬದ ಅಡಿಪಾಯ, ತೆಪ್ಪದ ಅಡಿಪಾಯ, ದಸಿಯ ಅಡಿಪಾಯ.

Other Languages
Afrikaans: Gebou
Alemannisch: Gebäude
aragonés: Edificio
العربية: مبنى
ܐܪܡܝܐ: ܒܢܝܢܐ
azərbaycanca: Bina
беларуская: Будынак
беларуская (тарашкевіца)‎: Будынак
български: Сграда
বাংলা: ভবন
bosanski: Zgrada
català: Edifici
čeština: Budova
Cymraeg: Adeilad
dansk: Bygning
Deutsch: Gebäude
Ελληνικά: Κτίριο
English: Building
Esperanto: Konstruaĵo
español: Edificio
eesti: Hoone
euskara: Eraikin
فارسی: ساختمان
suomi: Rakennus
Frysk: Bouwurk
Gaeilge: Foirgneamh
galego: Edificio
Avañe'ẽ: Óga yvate
हिन्दी: भवन
hrvatski: Zgrada
magyar: Épület
interlingua: Edificio
Bahasa Indonesia: Bangunan
Ido: Edifico
íslenska: Bygging
italiano: Edificio
日本語: 建築物
Basa Jawa: Wewangunan
ქართული: შენობა
한국어: 건축물
Latina: Aedificium
Lëtzebuergesch: Gebai
ລາວ: ຕຶກ
lietuvių: Statinys
latgaļu: Kuorms
latviešu: Celtne
македонски: Градба
монгол: Байшин
मराठी: इमारत
Bahasa Melayu: Bangunan
Nāhuatl: Calli
Nedersaksies: Bolwark
नेपाल भाषा: भवन
Nederlands: Gebouw
norsk: Bygning
ਪੰਜਾਬੀ: ਇਮਾਰਤ
Norfuk / Pitkern: Bilding
polski: Budynek
پښتو: ودانۍ
português: Edifício
Runa Simi: Wasichay
română: Clădire
armãneashti: Acareti
русский: Здание
русиньскый: Будова
Scots: Biggin
srpskohrvatski / српскохрватски: Građevina
Simple English: Building
slovenčina: Budova
slovenščina: Zgradba
Soomaaliga: Dhisme
српски / srpski: Зграда
svenska: Byggnad
Kiswahili: Jengo
தமிழ்: கட்டிடம்
తెలుగు: భవనము
тоҷикӣ: Бино
ไทย: อาคาร
Tagalog: Gusali
Türkçe: Bina
українська: Будівля
oʻzbekcha/ўзбекча: Bino
Tiếng Việt: Tòa nhà
Winaray: Edifisyo
吴语: 建築物
中文: 建筑物
Bân-lâm-gú: Kiàn-tio̍k-bu̍t
粵語: