ಋತುಚಕ್ರ

ಋತುಚಕ್ರ

ಋತುಚಕ್ರಪ್ರತಿ ತಿಂಗಳು ಗರ್ಭಕೋಶದ ಒಳಪದರು ಗರ್ಭದಾರಣೆಗೆ ಸಿದ್ಧವಾಗುತ್ತದೆ. ಪ್ರಜನನ ಸಾಮರ್ಥ್ಯ ಹೊಂದಿದ ಕಾಲದಾದ್ಯಂತ ಎಂದರೆ ಸ್ತ್ರೀ ಋತುಮತಿಯಾದ ಕಾಲದಿಂದ ಋತುಬಂಧದ ವರೆಗೆ-ಗರ್ಭವತಿಯಾದಾಗ ಮತ್ತು ಹೆರಿಗೆಯಾದ ಕೆಲವು ತೊಂಗಳನ್ನು ಹೊರತುಪಡಿಸಿ ಪ್ರತಿ ತಿಂಗಳು ರಜಸ್ರಾವವನ್ನು ತೋರ್ಪಡಿಸುತ್ತಾಳೆ. ಗರ್ಭ ತೆಳೆಯದ್ದಿದ್ದರೆ ಬರಲಿರುವ ಸಂತಾನಕ್ಕಾಗಿ ನೆಲೆಯೊದಗಿಸಲು ರೂಪುಗೊಂಡ ಈ ಪದರು ಕಳಚಿ ಬಿದ್ದು ಈ ಕಾರ್ಯವನ್ನು ಪುನರಾರಂಭಿಸುತ್ತದೆ. ಹೀಗೆ ಚಕ್ರದಂತೆ ಜರುಗುವ ಈ ಕಾರ್ಯ ಪಿಟ್ಯುಟರಿ ಮತ್ತು ಅಂಡಾಶಯ ಹೊರಹಾಕುವ ರಸದೂತಗಳ ಅಧೀನವರ್ತಿಯಾಗಿದೆ.ಹುಡುಗಿ ೧೨ರಿಂದ ೧೪ ವರುಷ ವಯಸ್ಕಳಾದಾಗ ಮೊದಲ ಬಾರಿ ರಜಸ್ರಾವವನ್ನು ತೋರಿಸಿ ಮೈನೆರೆತು ದೊಡ್ಡವಳಾಗುತ್ತಾಳೆ. ಆಕೆಯ ದೈಹಿಕ ತೂಕ, ದೇಹ ಪುಷ್ಟಿ, ಆನುವಂಶಿಕತೆ ಮತ್ತು ಆರೋಗ್ಯ - ಈ ಎಲ್ಲ ಅಂಶಗಳು ಆಕೆ ಪುಷ್ಪವತಿಯಾಗುವುದರ ಮೇಲೆ ಪ್ರಭಾವ ಬೀರುತ್ತವೆ [೧]. ಚಕ್ರವು ೪೫-೫೦ ವರುಷಗಳ ವಯೋಮಾನದವರೆಗೂ ಜರುಗುತ್ತ ಸಾಗುತ್ತದೆ. ಸಾಮಾನ್ಯವಾಗಿ ಋತುಚಕ್ರ ೨೮ ದಿನಗಳದ್ದಾಗಿದ್ದರೂ ಕೆಲವರು ಮಾತ್ರ ಕರಾರುವಾಕ್ಕಾಗಿ ಅದನ್ನು ತೋರಿಸಬಲ್ಲರು. ಅನೇಕರಲ್ಲಿ ೨೮ ದಿನಗಳ ಚಕ್ರದಲ್ಲಿ ಕೆಲವು ದಿನಗಳು ಹೆಚ್ಚು ಕಡಿಮೆಯಾಗಿರುತ್ತವೆ [೨]. ಋತುಚಕ್ರವು ಮೂರು ಘಟ್ಟಗಳ ಮೂಲಕ ಸಾಗಿ ಬರುತ್ತದೆ. ಮೊದಲನ್ಘಟ್ಟ ರಜಸ್ರಾವದ್ದು. ಅದರ ಅವಧಿ ಒಂದು ವಾರದ್ದು. ಎರಡನೇ ಘಟ್ಟ ಬೆಳವಣಿಗೆಯದ್ದು. ಅದರ ಕಾಲಾವಧಿ ಒಂದು ವಾರ. ಮೂರನೇ ಘಟ್ಟ ಸ್ರವಿಕೆಯ ಘಟ್ಟ. ಅದು ಎರಡು ವಾರಗಳ ಕಾಲಾವಧಿಯದ್ದು.

Other Languages
Alemannisch: Menstruationszyklus
العربية: دورة شهرية
azərbaycanca: Heyz
français: Cycle menstruel
हिन्दी: मासिक धर्म
Kreyòl ayisyen: Sik menstriyèl
italiano: Ciclo mestruale
한국어: 월경 주기
Bahasa Melayu: Kitaran haid
Nederlands: Menstruatiecyclus
português: Ciclo menstrual
Runa Simi: K'ikuy
română: Ciclu menstrual
srpskohrvatski / српскохрватски: Menstrualni ciklus
Simple English: Menstrual cycle
slovenščina: Menstruacijski ciklus
Basa Sunda: Siklus ménstruasi
తెలుగు: ఋతుచక్రం
татарча/tatarça: Менструаль цикл
Tiếng Việt: Chu kỳ kinh nguyệt
中文: 月經週期