ಉಗ್ರರಾಷ್ಟ್ರಾಭಿಮಾನ

ಉಗ್ರರಾಷ್ಟ್ರಾಭಿಮಾನ- ಅತಿಯೂ ವಿವೇಚನಾರಹಿತವೂ ಅನ್ಯಾಕ್ರಮಣ ಶೀಲವೂ ಆದ ಸ್ವದೇಶಪ್ರೇಮ (ಷೋವಿನಿಸಂ),

  • ಹಿನ್ನೆಲೆ

ಹಿನ್ನೆಲೆ

ಫ್ರೆಂಚ್ ಯೋಧ ನಿಕೊಲಸ್ ಷೋವಿನ್ ಎಂಬವನ ಹೆಸರಿನಿಂದ ಷೋವಿನಿಸಂ ಎಂಬ ಆಂಗ್ಲಪದ ಬಂತು. ಫ್ರೆಂಚ್ ಮಹಾಕ್ರಾಂತಿಯ ಕದನಗಳಲ್ಲೂ ನೆಪೊಲಿಯಾನಿಕ್ ಯುದ್ಧಗಳಲ್ಲೂ ಈತ ಭಾಗವಹಿಸಿ ಪದೇ ಪದೇ ಗಾಯಗೊಂಡು ಕೊನೆಗೆ ನಿವೃತ್ತನಾದ. ಈತನಿಗೆ ನೆಪೋಲಿಯನ್ನನಲ್ಲಿ ತೀವ್ರ ಭಕ್ತಿ. 1815ರ ಅನಂತರ ಫ್ರಾನ್ಸಿನಲ್ಲಿ ಅನೇಕರಿಗೆ ಸೈನ್ಯ ಶಕ್ತಿಯಲ್ಲಿ ಅಗಾಧವಾದ ವಿಶ್ವಾಸ ಬೆಳೆದಿತ್ತು. ನೆಪೋಲಿಯನ್ನನ ನಾಯಕತ್ವದಲ್ಲಿ ಆ ದೇಶ ಸಾಧಿಸಿದ ವಿಜಯಗಳಿಂದ ಸೈನಿಕ ನಾಯಕರನೇಕರು ಉನ್ಮತ್ತರಾಗಿದ್ದರು. ದೇಶೋನ್ನತಿಗಾಗಿ ಏನು ಬೇಕಾದರೂ ಮಾಡಬಹುದು: ತಪ್ಪಿನ ಪ್ರಶ್ನೆಯೇ ಉದ್ಬವಿಸುವುದಿಲ್ಲ-ಎಂಬ ಧೋರಣೆ ಇವರಲ್ಲಿ ಬೆಳೆಯಿತು. ಇಂಥ ಪಂಥಕ್ಕೆ ಆದರ್ಶ ಪುರುಷನಾದ ಷೋವಿನ್ನನ ಹೆಸರೇ ಈ ಪಂಥಕ್ಕೂ ಬಂತು.

ಮುಂದೆ 1830ರ ದಶಕದಲ್ಲಿ ಈ ಬಗೆಯ ಆಕ್ರಮಣಶೀಲ ಸೈನಿಕರಶೌರ್ಯ ಫ್ರಾನ್ಸಿನಲ್ಲಿ ಬಹಳ ಲೇವಡಿಗೆ ಗುರಿಯಾಯಿತು. ಇದರ ಬಗ್ಗೆ ಟೀಕೆ, ವಿಡಂಬನೆ, ವ್ಯಂಗ್ಯಚಿತ್ರಗಳು ಪುಂಖಾನುಪುಂಖವಾಗಿ ಬಂದುವು. ಈ ಸೈನಿಕರು ಇಡೀ ದೇಶವನ್ನೆ ಸೈನಿಕ ಪಾಳೆಯನ್ನಾಗಿ ಪರಿವರ್ತಿಸುತ್ತಿದ್ದಾರೆಂದು ನಾಗರಿಕ ನಾಯಕರನೇಕರು ಈ ಮನೋಭಾವವನ್ನು ಪ್ರತಿಭಟಿಸಿದರು.

ಮುಂದೆ ಇತರ ದೇಶಗಳಲ್ಲೂ ಈ ಪದ ಬಳಕೆಗೆ ಬಂತು, ಸ್ವಜನಾಂಗಾಭಿಮಾನ, ವಂಶಾಭಿಮಾನ - ಮುಂತಾದವು ಅತಿಯಾದರೆ ಅವನ್ನೂ ಷೋವಿನಿಸಂ ಎಂದು ಕರೆಯುವುದು ರೂಢಿಗೆ ಬಂದಿದೆ. ಜಿಂಗೊಯಿಸಂ ಎಂಬುದನ್ನು ಅನೇಕ ವೇಳೆ ಷೋವಿನಿಸಂಗೆ ಸಮಾನಪದವಾಗಿ ಬಳಸಲಾಗುತ್ತಿದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Other Languages
Alemannisch: Chauvinismus
العربية: شوفينية
مصرى: شوڨينيه
azərbaycanca: Şovinizm
беларуская: Шавінізм
беларуская (тарашкевіца)‎: Шавінізм
български: Шовинизъм
bosanski: Šovinizam
català: Xovinisme
нохчийн: Шовинизм
کوردی: شۆڤینیزم
čeština: Šovinismus
Deutsch: Chauvinismus
Ελληνικά: Σωβινισμός
English: Chauvinism
Esperanto: Ŝovinismo
español: Chovinismo
eesti: Šovinism
euskara: Chauvinismo
فارسی: شوونیسم
suomi: Sovinismi
français: Chauvinisme
galego: Chauvinismo
עברית: שוביניזם
hrvatski: Šovinizam
magyar: Sovinizmus
հայերեն: Շովինիզմ
Bahasa Indonesia: Sauvinisme
italiano: Sciovinismo
日本語: 排外主義
ქართული: შოვინიზმი
қазақша: Шовинизм
한국어: 쇼비니즘
Кыргызча: Шовинизм
Limburgs: Chauvinisme
lietuvių: Šovinizmas
македонски: Шовинизам
Bahasa Melayu: Cauvinisme
مازِرونی: شوونیسم
Nederlands: Chauvinisme
norsk nynorsk: Sjåvinisme
ਪੰਜਾਬੀ: ਸ਼ੋਵੇਨਿਜ਼ਮ
polski: Szowinizm
پښتو: شوننېزم
português: Chauvinismo
română: Șovinism
русский: Шовинизм
русиньскый: Шовінізм
Scots: Chauvinism
srpskohrvatski / српскохрватски: Šovinizam
slovenčina: Šovinizmus
српски / srpski: Шовинизам
svenska: Chauvinism
Türkçe: Şovenizm
татарча/tatarça: Шовинизм
українська: Шовінізм
Tiếng Việt: Chủ nghĩa Sô vanh
მარგალური: შოვინიზმი
中文: 沙文主义
Bân-lâm-gú: Chauvin-chú-gī