ಇಸ್ಪೀಟೆಲೆ

ಬೈಸಿಕಲ್ ಬ್ರಾಂಡ್ ನಿಂದ ಕೆಲವು ವಿಶೇಷವಾದ ಆಂಗ್ಲೋ ಅಮೇರಿಕನ್ ಇಸ್ಪೀಟೆಲೆಗಳು

ಇಸ್ಪೀಟೆಲೆ ಯು ದಪ್ಪ ಕಾಗದ, ತೆಳುವಾದ ರಟ್ಟು, ಅಥವಾ ತೆಳುವಾದ ಪ್ಲ್ಯಾಸ್ಟಿಕ್‌ನಿಂದ ವಿಶೇಷವಾಗಿ ಸಿದ್ಧಪಡಿಸಿದ ಚೂರು. ವಿವಿಧ ವಿನ್ಯಾಸಗಳಿಂದ ಚಿತ್ರಿತವಾಗಿದೆ ಮತ್ತು ಇಸ್ಪೀಟೆಲೆಯ ಆಟಗಳನ್ನು ಆಡಲು ಒಂದು ಕಟ್ಟಿನಂತೆ(ಸೆಟ್) ಬಳಸಲಾಗುತ್ತದೆ. ಇಸ್ಪೀಟೆಲೆಗಳು ಕೈಯಲ್ಲಿ ಹಿಡಿಯಲು ಅನುಕೂಲವಾಗಲೆಂದು ಒಂದು ಮಾದರಿಯಲ್ಲಿ ಅಂಗೈನಷ್ಟು ಗಾತ್ರವಿರುತ್ತದೆ. ಇಸ್ಪೀಟೆಲೆಗಳ ಸಂಪೂರ್ಣ ಕಟ್ಟನ್ನು ಪ್ಯಾಕ್ ಅಥವಾ ಡೆಕ್ ಎಂದು ಕರೆಯಲಾಗುತ್ತದೆ. ಆಟದ ಸಂದರ್ಭದಲ್ಲಿ ಆಟಗಾರ ಒಂದು ಬಾರಿಗೆ ಹೊಂದಿರುವ ಇಸ್ಪೀಟೆಲೆಗಳ ಉಪಕಟ್ಟನ್ನು ಸಾಮಾನ್ಯವಾಗಿ ಹ್ಯಾಂಡ್ ಎಂದು ಕರೆಯಲಾಗುತ್ತದೆ. ಇಸ್ಪೀಟೆಲೆಗಳ ಕಟ್ಟನ್ನು ಇಸ್ಪೀಟಾಟದ ವಿವಿಧ ಬಗೆಯ ಆಟಗಳಲ್ಲಿ ಬಳಸಬಹುದು. ಇವುಗಳಲ್ಲಿ ಕೆಲವು ಜೂಜಾಟವನ್ನು ಒಳಗೊಂಡಿರುತ್ತವೆ. ಏಕೆಂದರೆ ಇಸ್ಪೀಟೆಲೆಗಳು ಪ್ರಮಾಣಕವಾಗಿರುತ್ತವೆ ಮತ್ತು ಸಾಮಾನ್ಯವಾಗಿ ದೊರೆಯುತ್ತವೆ. ಅಲ್ಲದೇ ಇವುಗಳನ್ನು ಜಾದೂ ತಂತ್ರಗಳು ಇಸ್ಪೀಟು ಕಣಿ, ಸಂಕೇತಿಕರಣ, ಬೋರ್ಡ್ ಆಟಗಳು ಅಥವಾ ಇಸ್ಪೀಟೆಲೆಗಳಿಂದ ಮನೆಕಟ್ಟುವ ಆಟದಂತಹ ಇತರ ಬಳಕೆಗಳಲ್ಲಿಯೂ ಅಳವಡಿಸಲಾಗುತ್ತದೆ. ಪ್ರತಿಯೊಂದು ಇಸ್ಪೀಟೆಲೆಯ ಮುಂಭಾಗವು (ಅಥವಾ "ಮುಖ") ಡೆಕ್ ನಲ್ಲಿ ಒಂದು ಇಸ್ಪೀಟೆಲೆಯಿಂದ ಮತ್ತೊಂದನ್ನು ಪ್ರತ್ಯೇಕಗೊಳಿಸುವ ಗುರುತುಗಳನ್ನು ಒಳಗೊಂಡಿರುತ್ತದೆ ಹಾಗು ಆಡಲಿರುವ ಆಟದ ನಿಯಮಗಳ ಅನ್ವಯ ಅದರ ಬಳಕೆಯನ್ನು ನಿರ್ಧರಿಸುತ್ತದೆ. ಯಾವುದೇ ನಿರ್ದಿಷ್ಟ ಡೆಕ್‌ನಲ್ಲಿ ಪ್ರತಿಯೊಂದು ಇಸ್ಪೀಟೆಲೆಯ ಹಿಂಭಾಗ ಎಲ್ಲಾ ಇಸ್ಪೀಟೆಲೆಗಳಲ್ಲಿಯೂ ಒಂದೇ ತೆರನಾಗಿರುತ್ತದೆ ಹಾಗು ಸಾಮಾನ್ಯವಾಗಿ ಒಂದೇ ವಿಧವಾದ ಬಣ್ಣವನ್ನು ಅಥವಾ ನಿರ್ದಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಇಸ್ಪೀಟೆಲೆಗಳ ಹಿಂಭಾಗವನ್ನು ಕೆಲವೊಮ್ಮೆ ಜಾಹೀರಾತುಗಳಿಗಾಗಿ ಬಳಸಲಾಗುತ್ತದೆ. ಬಹುಪಾಲು ಆಟಗಳಿಗೆ ಇಸ್ಪೀಟೆಲೆಗಳನ್ನು ಡೆಕ್ ರೂಪದಲ್ಲಿ ಜೋಡಿಸಲಾಗಿರುತ್ತದೆ ಹಾಗು ಅವುಗಳ ಕ್ರಮವನ್ನು ಕಲಸುವ(ಶಫ್ಲಿಂಗ್) ಮೂಲಕ ಯಾದೃಚ್ಛಿಕೀಕರಣ(ರಾಂಡಮೈಜ್) ಮಾಡಲಾಗುತ್ತದೆ.

ಇತಿಹಾಸ

ಆರಂಭಿಕ ಇತಿಹಾಸ

ಚೀನೀಯರ ಇಸ್ಪೀಟೆಲೆ, ದಿನಾಂಕ ಸುಮಾರು 1400 AD, ಮಿಂಗ್ ರಾಜಮನೆತನಕ್ಕೆ ಸೇರಿದ್ದು ,ಟರ್ಪನ್ ನ ಸಮೀಪದಲ್ಲಿ ಕಂಡುಬಂದಿದೆ.ಇದರ ಅಳತೆ 9.5 by 3.5 cm

ಇಸ್ಪೀಟೆಲೆಗಳು , 9ನೇ ಶತಮಾನದ ಪೂರ್ವಾರ್ಧದಲ್ಲಿ ಚೀನಾದ ಟ್ಯಾಂಗ್ ರಾಜಮನೆತನದ(618–907) ಆಳ್ವಿಕೆಯ ಕಾಲದಲ್ಲಿ ರಾಜಕುಮಾರಿಯ ಬಂಧುಗಳು "ಎಲೆ ಆಟವನ್ನು" ಆಡುವ ಸಂದರ್ಭದಲ್ಲಿ ಕಾಣಿಸಿಕೊಂಡವು.[೧][೨][೩] ಟ್ಯಾಂಗ್ ರಾಜಮನೆತನದ ಸು E ಎಂಬ ಲೇಖಕ (885ರಲ್ಲಿ ಜಿನ್ ಶಿ ಪದವಿಯನ್ನು ಪಡೆದ)ತಿಳಿಸಿರುವ ಪ್ರಕಾರ, ಟ್ಯಾಂಗ್‌ನ ಇಜಾಂಗ್ ಚಕ್ರವರ್ತಿ (r. 860–874) ಯ ಮಗಳಾದ ರಾಜಕುಮಾರಿ ಟಾಂಗ್ ಚಾಂಗ್ (?–870), ವೈ ಕುಲದ ಸದಸ್ಯರೊಂದಿಗೆ ಕಾಲವನ್ನು ಕಳೆಯಲು ಎಲೆ ಆಟವನ್ನು ಆಡುತ್ತಿದ್ದಳು .[೪] ಸಾಂಗ್ ರಾಜಮನೆತನ (960–1279)ದ ವಿದ್ವಾಂಸನಾದ ಉಯಂಗ್ ಶಿಯು (1007–1072) ಟ್ಯಾಂಗ್ ರಾಜಮನೆತನದ ಮಧ್ಯಾವಧಿಯಲ್ಲಿ ಇಸ್ಪೀಟೆಲೆಯ ಆಟಗಳು ಅಸ್ತಿತ್ವದಲ್ಲಿತ್ತು ಹಾಗು ಬರೆಯುವ ಸಾಧನವಾಗಿ ಕಾಗದದ ಸುರುಳಿಗಳ ಬದಲಿಗೆ ಹಾಳೆಗಳು ಅಥವಾ ಪುಟಗಳ ಬಳಕೆಯ ಏಕಕಾಲದ ಅಭಿವೃದ್ಧಿಯೊಂದಿಗೆ ಇವುಗಳ ಆವಿಷ್ಕಾರವಾಯಿತು ಎಂದು ತಿಳಿಸಿದ್ದಾರೆ.[೪][೫] ಯೆಜಿ ಗೆಕ್ಸಿ ಎಂದು ಕರೆಯಲಾಗುವ ಪುಸ್ತಕವನ್ನು ಟ್ಯಾಂಗ್ ಯುಗಕ್ಕೆ ಸೇರಿದ ಮಹಿಳೆ ಬರೆದಿದ್ದಾಳೆ. ತರುವಾಯದ ರಾಜಮನೆತನಗಳ ಚೀನೀ ಬರಹಗಾರರು ಈ ಕುರಿತು ವಿಮರ್ಶೆ ಮಾಡಿದ್ದಾರೆ.[೫] ಪ್ರಾಚೀನ ಚೀನಾದ "ಹಣದ ಕಾರ್ಡ್ ಗಳು" ನಾಲ್ಕು "ಸೂಟ್"(ಚಿಹ್ನೆ)ಗಳನ್ನು ಹೊಂದಿರುತ್ತದೆ: ನಾಣ್ಯಗಳು (ಅಥವಾ ನಗದು), ನಾಣ್ಯಗಳ ಶ್ರೇಣಿ (ಇವುಗಳನ್ನು ಕಚ್ಚಾ ಚಿತ್ರಗಳಿಂದ ಕಡ್ಡಿಗಳೆಂದು ತಪ್ಪಾಗಿ ಅರ್ಥೈಸಲಾಗಿದೆ), ಮಿರಿಯಡ್ಸ್(ಹತ್ತುಸಾವಿರ)(ನಾಣ್ಯಗಳ ಅಥವಾ ನಾಣ್ಯಗಳ ಶ್ರೇಣಿಗಳು), ದಹಲಾ ಅಥವಾ ಹತ್ತು ಮಿರಿಯಡ್‌ಗಳು(ಇಲ್ಲಿ ಮಿರಿಯಡ್ 10000) ಭಾವಲಿಪಿಗಳ ಮೂಲಕ ಇವನ್ನು ಪ್ರತಿನಿಧಿಸಲಾಗುತ್ತದೆ. ಮೊದಲನೆಯ ಮೂರು ಸೂಟ್‌ಗಳಲ್ಲಿ 2–9 ಸಂಖ್ಯೆಗಳು ಮತ್ತು "ಟೆನ್ಸ್ ಆಫ್ ಮಿರಿಯಡ್‌"ನಲ್ಲಿ 1 -9 ಸಂಖ್ಯೆಗಳಿರುತ್ತವೆ. ಮೊದಲ ಇಸ್ಪೀಟೆಲೆಗಳು ವಾಸ್ತವ ಪೇಪರ್ ಕರೆನ್ಸಿಯಾಗಿತ್ತೆಂದು ವಿಲ್ಕಿನ್‌ಸನ್ ಹೇಳುತ್ತಾರೆ. ಅವು ಟ್ರೇಡಿಂಗ್ ಕಾರ್ಡ್ ಆಟಗಳ ರೀತಿಯಲ್ಲಿ ಆಟವಾಡುವುದಕ್ಕೆ ಮತ್ತು ಬಾಜಿ ಕಟ್ಟುವ ಆಟ ಹೀಗೆ ಎರಡೂ ಆಟಗಳಿಗೆ ಸಾಧನಗಳಾಗಿತ್ತು. ಆಧುನಿಕ ಮಹಜಾಂಗ್ ಟೈಲ್ಸ್ ಗಳ ಮೇಲಿರುವ ವಿನ್ಯಾಸವು ಹಿಂದಿನ ಇಸ್ಪೀಟೆಲೆಗಳಿಂದ ವಿಕಸಿಸಿದ ವಿನ್ಯಾಸಗಳಾಗಿವೆ. ಆದರೂ ಹಿಂದೆ ಮುದ್ರಿಸಲಾದ ಇಸ್ಪೀಟೆಲೆಗಳ ಮೊದಲನೆಯ ಡೆಕ್ ಚೀನದ ಡಾಮಿನೊ ಡೆಕ್ . ಈ ಇಸ್ಪೀಟೆಲೆಗಳಲ್ಲಿ ನಾವು ಜೋಡಿ ಪಗಡೆಗಳ ಎಲ್ಲ 21ಸಂಯೋಜನೆಗಳನ್ನು ನೋಡಬಹುದು. 11ನೇ ಶತಮಾನದಲ್ಲಿ ಸಂಪಾದಿಸಲಾದ ಕುಯಿ-ತೆನ್-ಲು ಎಂಬ ಚೀನೀ ಪುಸ್ತಕದಲ್ಲಿ ಮೊದಲು ಮುದ್ರಿತ ಪುಸ್ತಕಕ್ಕೆ ಸಮಕಾಲಿಕವಾಗಿ ಡಾಮೀನೊಸ್ ಇಸ್ಪೀಟೆಲೆಗಳನ್ನು ಟ್ಯಾಂಗ್ ರಾಜಮನೆತನದ ಸಂದರ್ಭದಲ್ಲಿಯೇ ಮುದ್ರಿಸಲಾಗಿದೆ ಎಂದು ನಮಗೆ ತಿಳಿಯುತ್ತದೆ. ಪಾಯ್ (牌) ಎಂಬ ಚೀನೀ ಪದವನ್ನು ಕಾಗದ ಇಸ್ಪೀಟೆಲೆಗಳು ಮತ್ತು ಆಟದ ಬಿಲ್ಲೆಗಳು ಎರಡನ್ನೂ ವಿವರಿಸಲು ಬಳಸಲಾಗುತ್ತದೆ.

ಯುರೋಪ್‌ಗೆ ಇದರ ಪರಿಚಯ

14ನೇ ಶತಮಾನದ ಉತ್ತರಾರ್ಧದ ಮೊದಲು ಯುರೋಪ್ ನಲ್ಲಿ ಇಸ್ಪೀಟೆಲೆಗಳು ಇದ್ದವು ಎಂದು ಅರ್ಥಕೊಡುವ ಪುರಾವೆಗಳು[ ] ವ್ಯಾಪಕವಾಗಿ ಸುಳ್ಳು ಪುರಾವೆಗಳೆಂದು ಪರಿಗಣಿಸಲ್ಪಟ್ಟಿವೆ: ವೋರ್‌ಸೆಸ್ಟರ್ (1240)[೬] ಮಂಡಳಿಯ 38 ನೇ ಶಾಸನವನ್ನು ಸಾಮಾನ್ಯವಾಗಿ ಇಸ್ಪೀಟೆಲೆಗಳ ಸಾಕ್ಷ್ಯವಾಗಿ ಉಲ್ಲೇಖಿಸಲಾಗಿದೆ. ಇಸ್ಪೀಟೆಲೆಗಳು 13 ನೇ ಶತಮಾನದ ಮಧ್ಯಾವಧಿಯಲ್ಲಿಯೇ ಇಂಗ್ಲೆಂಡ್ ಗೆ ಪರಿಚಿತವಾಗಿದ್ದವು ಎನ್ನುವುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ. ಆದರೆ ಅಲ್ಲಿ ಪ್ರಸ್ತಾಪಿಸಲಾಗಿರುವ ಡಿ ರೆಗೆ ಎಟ್ ರೆಜಿನಾ (ರಾಜ ಮತ್ತು ರಾಣಿಗೆ ಸಂಬಂಧಪಟ್ಟ ಆಟ) ಆಟಗಳು ಬಹುತೇಕ ಚೆಸ್ ಆಟವಿರಬಹುದೆಂದು ಈಗ ಭಾವಿಸಲಾಗಿದೆ. 11 ನೇ ಶತಮಾನದ ಜವಳಿಯ ಹಿನ್ನೆಲೆಯಲ್ಲಿ ಹಾರ್ಟ್ಸ್,ಕ್ಲಬ್ಸ್,ಡೈಮಂಡ್ಸ್ ಮತ್ತು ಸ್ಪೇಡ್ಸ್ ಚಿತ್ರಗಳನ್ನು ಕಾಣಬಹುದು. ಇದು ಕಾನ್ ಸ್ಟ್ಯಾಂಟಿನೋಪಲ್ ನಲ್ಲಿ ನಿರ್ಮಿಸಿದ ಬಿಷಪ್ ಗುನ್ಥರ್ ಶವಚ್ಛಾದನ ಎಂದು ಹೆಸರಾಯಿತು. ಈಗ ಇದು ಬ್ಯಾಮ್ ಬರ್ಗ್‌ನ ಮುಖ್ಯಚರ್ಚ್‌ನಲ್ಲಿದೆ. 1278 ರ ಪೂರ್ವಾರ್ಧದಲ್ಲಿಯೇ ಇಸ್ಪೀಟೆಲೆಗಳು ಯುರೋಪ್ ನಲ್ಲಿ ಸಾಮಾನ್ಯವಾಗಿ ತಿಳಿದಿದ್ದ ಪಕ್ಷದಲ್ಲಿ ಪೆಟ್ರಿಯಾರ್ಕ್ ಆಟವನ್ನು ನಿರೂಪಿಸುವ ತನ್ನ ಕೃತಿDe remediis utriusque fortunae (ಒಳ್ಳೆಯ ಮತ್ತು ಕೆಟ್ಟ ಅದೃಷ್ಟಗಳಿಗೆ ಪರಿಹಾರ) ಯಲ್ಲಿ ಒಮ್ಮೆಯೂ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನೇಪಲ್ಸ್ ನ ಲೂಯಿಸ್ II ರಾಜನಿಗಾಗಿ ನಿರ್ಮಿಸಲಾದ, ರಾಜನ ಜತೆ ಆಸ್ಥಾನಿಕರು ಇಸ್ಪೀಟು ಆಡುವ ಸೂಕ್ಷ್ಮ ಚಿತ್ರಕಲೆಯನ್ನು ರೋಮನ್ ಡು ರಾಯ್ ಮೆಲಿಯಡಸ್ ಡೆ ಲಿಯೋನಾಯ್ಸ್ (c. 1352)ನಲ್ಲಿ ಕಾಣಬಹುದು.[ಸೂಕ್ತ ಉಲ್ಲೇಖನ ಬೇಕು] ಇಸ್ಪೀಟೆಲೆಗಳು 14 ನೇ ಶತಮಾನದ ಉತ್ತರಾರ್ಧದಲ್ಲಿ ಬಹುಶಃ ಈಜಿಪ್ಟ್‌ನ ಮಾಮುಲಕ್ ನಿಂದ ಮೊದಲಿಗೆ ಯುರೋಪ್‌ಗೆ ಪ್ರವೇಶ ಮಾಡಿತು. ಈ ಇಸ್ಪೀಟೆಲೆಗಳ ಸೂಟ್‌ಗಳು(ಚಿಹ್ನೆ ಮತ್ತು ಬಣ್ಣದ ಎಲೆಗಳು) ( ಕತ್ತಿಗಳು, ಏಣಿ ಮೆಟ್ಟಿಲುಗಳು , ಕಪ್‌ಗಳು ಮತ್ತು ನಾಣ್ಯಗಳ ಟ್ಯಾರೋ ಸೂಟ್‌ಗಳು(ಬಿಲ್ಲೆಗಳು, ಮತ್ತು ಪಂಚಕೋನಿಯಆಕೃತಿಗಳು ಎಂದೂ ಕೂಡ ಹೆಸರಾಗಿದೆ) ಮತ್ತು ಸಾಂಪ್ರದಾಯಿಕ ಇಟಲಿ, ಸ್ಪೇನ್ ಮತ್ತು ಪೋರ್ಚುಗೀಸ್ ಡೆಕ್‌ಗಳಲ್ಲಿ ಈಗಲೂ ಬಳಸುವ ಸೂಟ್‌ಗಳಿಗೆ ಹೋಲಿಕೆಯಾಗುತ್ತವೆ. ಸ್ವಿಜರ್ಲೆಂಡ್‌ನ ಬರ್ನ್‌ನಲ್ಲಿ 1367ರಲ್ಲಿ ಇವುಗಳ ಬಳಕೆಯನ್ನು ನಿಷೇಧಿಸಿದ ಬಗ್ಗೆ ಪ್ರಥಮ ದಾಖಲೆಯ ಸಾಕ್ಷ್ಯ ಸಿಗುತ್ತದೆ. ಯುರೋಪ್ ನಲ್ಲಿ ಇಸ್ಪೀಟೆಲೆಗಳ ವ್ಯಾಪಕವಾದ ಬಳಕೆ 1377 ನಂತರದ ದಿನಗಳಲ್ಲಿ ಖಚಿತವಾಗಿ ಕಂಡುಬಂದಿದೆ.[೭] ಮ್ಯಾಮಲೂಕ್ ಡೆಕ್ ನಾಲ್ಕು "ಸೂಟ್"ಗಳನ್ನು ಹೊಂದಿರುವ 52 ಇಸ್ಪೀಟೆಲೆ ಗಳನ್ನು ಒಳಗೊಂಡಿರುತ್ತದೆ: ಪೋಲೋ ದಾಂಡುಗಳು, ನಾಣ್ಯಗಳು, ಕತ್ತಿಗಳು ಮತ್ತು ಕಪ್‌ಗಳು. ಪ್ರತಿಯೊಂದು ಸೂಟ್ 10ಚಿಹ್ನೆಗಳಿರುವ ಎಲೆಗಳು(ಇಸ್ಪೀಟೆಲೆಗಳನ್ನು ಅವುಗಳು ತೋರಿಸುವ ಅನೇಕ ಸೂಟ್ ಸಂಕೇತಗಳು ಅಥವಾ ಚುಕ್ಕೆಗಳ ಮೂಲಕ ಗುರುತಿಸಲಾಗುತ್ತದೆ) ಮತ್ತು ಮಾಲಿಕ್ (ರಾಜ) ನೈಬ್ ಮಾಲಿಕ್ (ವೈಸ್ ರಾಯ್ ಅಥವಾ ಉಪರಾಜ) ಮತ್ತು ಥಾನಿ ನೈಬ್ ಮಾಲಿಕ್ (ವೈಸ್‌ರಾಯ್ ಅಥವಾ ಡೆಪ್ಯೂಟಿ ಅಧೀನ)ನಂತಹ ಚಿತ್ರವಿರುವ ಮೂರು "ದರ್ಬಾರು(ಕೋರ್ಟ್) ಎಲೆಗಳನ್ನು" ಒಳಗೊಂಡಿರುತ್ತದೆ. ಮ್ಯಾಮಲೂಕ್ ದರ್ಬಾರು ಎಲೆಗಳು ಅಮೂರ್ತ ವಿನ್ಯಾಸಗಳನ್ನು ತೋರಿಸುತ್ತವೆ. ಮನುಷ್ಯರ(ಕನಿಷ್ಠ ಬದುಕಿರುವ ಪ್ರಭೇದಗಳ ಮಾದರಿಯಲ್ಲಿಲ್ಲ) ಚಿತ್ರವನ್ನು ಹೊಂದಿರದಿದ್ದರೂ ಅವು ಮಿಲಿಟರಿ ಆಧಿಕಾರಿಗಳ ಹೆಸರನ್ನು ಒಳಗೊಂಡಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಮ್ಯಾಮಲೂಕ್ ಇಸ್ಪೀಟೆಲೆಗಳ ಸಂಪೂರ್ಣ ಪ್ಯಾಕ್ ಅನ್ನು ಲಿಯೋ ಮೆಯರ್ ಎಂಬುವವನು 1939[೮] ರಲ್ಲಿ ಇಸ್ತನ್ ಬುಲ್ ನ ಟಾಪ್ಕಪಿ ಅರಮನೆಯಲ್ಲಿ ಶೋಧಿಸಿದನು. ನಿರ್ದಿಷ್ಟವಾದ ಈ ಸಂಪೂರ್ಣ ಪ್ಯಾಕ್ 1400 ನೇ ಇಸವಿಗಿಂತ ಮೊದಲು ತಯಾರಿಸಲಾಗಿಲ್ಲ. ಆದರೆ ಸಂಪೂರ್ಣ ಡೆಕ್ 12 ನೇ ಅಥವಾ 13 ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಖಾಸಗಿ ಸಂಗ್ರಹದ ಚೂರಿನೊಂದಿಗೆ ಸಾಮ್ಯತೆಯನ್ನು ಹೊಂದಿತ್ತು. ಆಟಕ್ಕೆ ಸಂಬಂಧಿಸಿದಂತೆ ಇದು ಸಂಪೂರ್ಣವಾದ ಡೆಕ್ ಅಲ್ಲ. ಆದರೆ ಮೂರು ಪ್ಯಾಕ್‌ಗಳ ಒಂದೇ ಶೈಲಿಯ ಎಲೆಗಳನ್ನು ಹೊಂದಿತ್ತು[೯] ಗಾಂಜಿಫಾ ಆಟಕ್ಕೆ ಬಳಸುವ ಭಾರತೀಯ ಎಲೆಗಳ ವಿನ್ಯಾಸದ ಮೇಲೆ ಈ ಎಲೆಗಳು ಪ್ರಭಾವ ಬೀರಿವೆಯೆ ಅಥವಾ ಈ ಎಲೆಗಳ ಮೇಲೆ ಭಾರತೀಯ ಎಲೆಗಳು ಪ್ರಭಾವ ಬೀರಿವೆಯೆ ಎಂಬುದು ತಿಳಿದಿಲ್ಲ. ಭಾರತೀಯ ಎಲೆಗಳು ಅನೇಕ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ: ಅವುಗಳು ವೃತ್ತಾಕಾರದಲ್ಲಿದ್ದು ಸಾಮಾನ್ಯವಾಗಿ ಕೈಯಿಂದ ಚಿತ್ರಿತವಾಗಿದ್ದು, ಸಂಕೀರ್ಣವಾದ ವಿನ್ಯಾಸವನ್ನು ಹೊಂದಿರುತ್ತವೆ. ಅಲ್ಲದೇ ನಾಲ್ಕು ಸೂಟ್‌‌ಗಳಿಗಿಂತ ಹೆಚ್ಚು ಸೂಟ್‌ಗಳನ್ನು ಒಳಗೊಂಡಿರುತ್ತವೆ (ಅನೇಕ ಬಾರಿ ಮೂವತ್ತೆರಷ್ಟು ಹೊಂದಿರುತ್ತವೆ.18 ನೇ ಮತ್ತು 19 ನೇ ಶತಮಾನದ ನಡುವೆ ರಾಜಸ್ಥಾನದ ಮೇವಾರ್ ನಗರದಲ್ಲಿ ಚಿತ್ರಿಸಲಾಗಿರುವ, ಡ್ಯುಚೆಸ್ ಸ್ಪೈಲ್ಕಾರ್ಟೀನ್-ಮ್ಯೂಸಿಯಂ ನಲ್ಲಿರುವ ಪ್ಯಾಕ್ ನಂತೆ 32 ರಷ್ಟಿರುತ್ತದೆ. ಆಡಲು ಬಳಸುತ್ತಿದ್ದ ಡೆಕ್‌ಗಳು ಎಂಟರಿಂದ ಇಪ್ಪತ್ತು ಸೂಟ್‌ಗಳನ್ನು ಹೊಂದಿತ್ತು.

ಯುರೋಪಿನಾದ್ಯಂತ ವಿಸ್ತರಣೆ ಮತ್ತು ಹಿಂದಿನ ವಿನ್ಯಾಸದ ಬದಲಾವಣೆಗಳು

ಇಟಾಲಿಯನ್ ಇಸ್ಪೀಟೆಲೆಗಳು ಸ್ಯಾಂಕಾಯ್ ರೀತಿಯ ಬೋಗುಣಿಯಂತಿದೆ. 15 ನೇ ಶತಮಾನದ ಮಧ್ಯಾವಧಿಯಲ್ಲಿ ಉತ್ತರ ಇಟಲಿಯಲ್ಲಿ ಕಂಡುಬಂದವು.

14 ನೇ ಶತಮಾನದ ಉತ್ತರಾರ್ಧದಲ್ಲಿ ಇಸ್ಪೀಟೆಲೆಗಳ ಬಳಕೆಯು ವೇಗವಾಗಿ ಯುರೋಪಿನಾದ್ಯಂತ ಹರಡಿತು. ದಾಖಲೆಗಳಲ್ಲಿ ಪ್ರಸ್ತಾಪಿಸಲಾದ ಇಸ್ಪೀಟೆಲೆಗಳು ಸ್ಪೇನ್‌ನಲ್ಲಿ 1371ರ ದಿನಾಂಕದಿಂದ ಹಿಡಿದು ಸ್ವಿಜರ್ಲೆಂಡ್ ನಲ್ಲಿ 1377 ಫ್ಲೋರೆನ್ಸ್ ಮತ್ತು ಪ್ಯಾರೀಸ್ ಸೇರಿದಂತೆ ಅನೇಕ ಸ್ಥಳಗಳಲ್ಲಿ 1380 ನೆ ಇಸವಿಗಳಿಂದ ಕೂಡಿದೆ.[೧೦][೧೧] 1369 ರ ಪ್ಯಾರಿಸ್ ಶಾಸನದಲ್ಲಿ [ಆಟದ ಬಗ್ಗೆಯೇ?] ಇಸ್ಪೀಟೆಲೆಗಳ ಬಗ್ಗೆ ಉಲ್ಲೇಖಿಸಿಲ್ಲ, ಆದರೆ 1377ನೇ ಪರಿಷ್ಕರಣೆಯು ಅದನ್ನು ಪ್ರಸ್ತಾಪಿಸಿದೆ. ಬ್ರಾಬಾಂಟ್ ಡಚಸ್ ಮತ್ತು ಲಕ್ಸೆಂಬರ್ಗ್ ಡ್ಯೂಕ್ ವೆನ್ಕೆಸ್ಲಾಸ್ 1 ಲೆಕ್ಕ ಪುಸ್ತಕಗಳಲ್ಲಿ 1379 ಮೇ 14ರ ದಾಖಲೆಯಲ್ಲಿ ಹೀಗೆ ಕೊಡಲಾಗಿದೆ: ಮೆಸ್ಯರ್ ಮತ್ತು ಮೇಡಂಗೆ ಎಂಟೂವರೆ ಮಟನ್ಸ್ ಮೌಲ್ಯದ ನಾಲ್ಕು ಪೀಟರ್ಸ್, ಎರಡು ಫಾರ್ಮ್ಸ್‌ಗಳನ್ನು ಇಸ್ಪೀಟೆಲೆಗಳ ಪ್ಯಾಕು ಖರೀದಿಗೆ ನೀಡಲಾಗಿದೆ. ಫ್ರಾನ್ಸ್ ನ ಚಾರ್ಲ್ಸ್ VI ನ ನಿವಾಸದಲ್ಲಿದ್ದ ಖಜಾಂಚಿ ಚಾರ್ಲ್ಸ್ ಅಥವಾ ಚಾರ್ಬೊಟ್ ಪೌಪಾರ್ಟ್, 1392 ಅಥವಾ 1393 ರ ಅವನ ಲೆಕ್ಕ ಪುಸ್ತಕದಲ್ಲಿ ಮೂರು ಸೆಟ್ ಎಲೆಗಳಿಗೆ ಚಿತ್ರಬಿಡಿಸಿರುವುದಕ್ಕಾಗಿ ಕೊಟ್ಟ ಹಣವನ್ನು ದಾಖಲಿಸಿದ್ದಾನೆ.[೧೨] ಹಿಂದೆ ಇದ್ದ ಇಸ್ಪೀಟೆಲೆಗಳನ್ನು ಚಾಲ್ಸ್ VI ನಿಗೆ ವಿನ್ಯಾಸ ಗೊಳಿಸಿದಂತೆ ಕೈಯಿಂದ ನಿರ್ಮಿಸಲಾಗುತ್ತಿದ್ದು, ಇದು ದುಬಾರಿಯಾಗಿತ್ತು. ಪಡಿಯಚ್ಚು ಮುದ್ರಿತ ಇಸ್ಪೀಟೆಲೆಗಳ ಡೆಕ್ ಗಳು 15 ನೇ ಶತಮಾನದಲ್ಲಿ ಕಾಣಿಸಿಕೊಂಡವು. ಕ್ರೈಸ್ತ ಯುರೋಪ್ ನಲ್ಲಿ 1400 ರ ಸುಮಾರಿಗೆ ಬಟ್ಟೆಗಳನ್ನು ಸಿಂಗರಿಸಲು ಬಳಸುತ್ತಿದ್ದ ಪಡಿಯಚ್ಚು ಮುದ್ರಿಸುವ ತಂತ್ರವನ್ನು ಕಾಗದದ ಮೇಲೆ ಮುದ್ರಿಸಲು ವರ್ಗಾಯಿಸಲಾಯಿತು. ಅಲ್ಲಿ ಕಾಗದದ ಮೊಟ್ಟ ಮೊದಲನೆಯ ತಯಾರಿಕೆ ದಾಖಲಾದ ಸ್ವಲ್ಪ ಸಮಯದಲ್ಲೇ ಇದನ್ನು ಬಳಸಲಾಯಿತು. ಇಸ್ಲಾಂ ಸ್ಪೇನ್ ನಲ್ಲಿ ಇದು ಅತೀ ಹಳೆಯದಾಗಿತ್ತು. 1418 ನೇ ಇಸವಿಗೆ ಸೇರಿರುವ ಪಡಿಯಚ್ಚು ಯುರೋಪ್‌ನ ಅತ್ಯಂತ ಪ್ರಾಚೀನ ಪಡಿಯಚ್ಚಾಗಿದೆ. 1423 ಕ್ಕಿಂತ ಮೊದಲು ಮುದ್ರಿತ ಇಸ್ಪೀಟೆಲೆಗಳ ಉದಾಹರಣೆಗಳು ಉಳಿದುಕೊಂಡಿಲ್ಲ. ಆದರೆ ಉಲ್ಮ್, ನ್ಯುರೆಂಬರ್ಗ್, ಮತ್ತು ಆಗಸ್ ಬರ್ಗ್ ನಲ್ಲಿ ವೃತ್ತಿಪರ ಇಸ್ಪೀಟೆಲೆಗಳ ತಯಾರಕರು ಸುಮಾರು 1418 ರಿಂದ 1450[೧೩] ವರೆಗೆ ಮುದ್ರಿತ ಡೆಕ್ ಗಳನ್ನು ಸೃಷ್ಟಿಸಿದ್ದಾರೆ. ಈ ಅವಧಿಯ ಪಡಿಯಚ್ಚುಗಳ ಸಾಮಾನ್ಯ ಬಳಕೆಗಳಾಗಿ ಇಸ್ಪೀಟೆಲೆಗಳು ಭಕ್ತಿ ಚಿತ್ರಗಳ ಜತೆ ಕೂಡ ಪೈಪೋಟಿ ನಡೆಸಿತು. ಹಿಂದೆ ಇದ್ದ ಪಡಿಯಚ್ಚಿನ ಬಹುಪಾಲು ಎಲ್ಲಾ ವಿಧಗಳನ್ನು ಮುದ್ರಿಸಿದ ನಂತರ ಕೈಯಿಂದ ಅಥವಾ 1450 ರ ನಂತರ ಬಂದ ಸ್ಟೆನ್ಸಿಲ್ ಗಳಿಂದ ಬಣ್ಣಹಾಕಲಾಗುತ್ತಿತ್ತು. 15 ನೇ ಶತಮಾನದ ಈ ಇಸ್ಪೀಟೆಲೆಗಳಿಗೆ ಪ್ರಾಯಶಃ ಬಣ್ಣಹಾಕಲಾಗಿತ್ತು. ಹೊಸದಾಗಿ ಆವಿಷ್ಕರಿಸಿದಂತಹ ಪಡಿಯಚ್ಚನ್ನು ಕೆತ್ತಿ ಮುದ್ರಿಸುವ ತಂತ್ರದೊಡನೆ ಇಸ್ಪೀಟೆಲೆಗಳ ಮಾಸ್ಟರ್ 1430ರ ದಶಕದಿಂದ ಜರ್ಮನಿಯಲ್ಲಿ ಕೆಲಸಮಾಡಿದರು. ಮಾಸ್ಟರ್ ES ಮತ್ತು ಮಾರ್ಟೀನ್ ಸ್ಕೊನ್ ಗೌರ್ ರವರನ್ನು ಒಳಗೊಂಡಂತೆ ಇತರ ಅನೇಕ ಪ್ರಮುಖ ಕೆತ್ತನೆಗಾರರು ಇಸ್ಪೀಟೆಲೆಗಳನ್ನು ತಯಾರಿಸಿದ್ದಾರೆ. ಕೆತ್ತನೆಯು ಪಡಿಯಚ್ಚಿಗಿಂತ ಅತ್ಯಂತ ದುಬಾರಿಯಾಗಿದೆ. ಅಲ್ಲದೇ ಕೆತ್ತಲಾದ ಇಸ್ಪೀಟೆಲೆಗಳು ತುಲನಾತ್ಮಕವಾಗಿ ಅಸಾಮಾನ್ಯವಾಗಿರುತ್ತವೆ. ಯುರೋಪ್ ನಲ್ಲಿ 15 ನೇ ಶತಮಾನದಲ್ಲಿ ಇಸ್ಪೀಟೆಲೆಗಳ ಸೂಟ್‌ಗಳು ವೈವಿದ್ಯಮಯವಾಗಿತ್ತು;ಐದು ಸೂಟ್‌ಗಳು ಸಾಮಾನ್ಯವಾಗಿದ್ದರೂ ಇತರೆ ರಚನೆಗಳು ತಿಳಿದಿದ್ದರೂ, ಸಾಮಾನ್ಯವಾಗಿ ಡೆಕ್‌ನಲ್ಲಿ ನಾಲ್ಕು ಸೂಟ್‌ಗಳಿರುತ್ತಿದ್ದವು. ಜರ್ಮನಿಯಲ್ಲಿ ಹಾರ್ಟ್ಸ್ (Herz/Dolle/Rot), ಬೆಲ್ಸ್(Schall), ಲೀವ್ಸ್(Grün), ಮತ್ತು ಅಕಾರ್ನ್ಸ್ (Eichel) ಪ್ರಮಾಣಬದ್ಧ ಸೂಟ್ ಗಳಾದವಲ್ಲದೇ, ಈ ಡೆಕ್ ಗಳನ್ನು ಪೂರ್ವ ಮತ್ತು ಆಗ್ನೇಯ ಜರ್ಮನ್ ನಲ್ಲಿ ಆಡುವ ಸ್ಕೇಟ್, ಸ್ಕಾಫ್ ಕೊಪ್ಫ್, ಡೊಪೆಲ್ ಕೊಪ್ಫ್, ಮತ್ತು ಇತರ ಆಟಗಳಲ್ಲಿ ಇನ್ನೂ ಕೂಡ ಬಳಸಲಾಗುತ್ತಿದೆ. 15 ನೇ ಶತಮಾನದ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಇಸ್ಪೀಟೆಲೆಗಳಲ್ಲಿ ಕತ್ತಿ , ದಂಡ(ಅಥವಾ ತೆಳುಕೋಲು), ಕಪ್‌ಗಳು ಮತ್ತು ನಾಣ್ಯಗಳನ್ನು (ಅಥವಾ ಉಂಗುರ) ಬಳಸಲಾಗಿದೆ. ಟ್ಯಾರೊ 15 ನೇ ಶತಮಾನದಲ್ಲಿ ಇಟಲಿಯಲ್ಲಿ ಆವಿಷ್ಕರಿಸಲಾಗಿದ್ದು, ಹೆಚ್ಚುವರಿ ತುರುಫೆಲೆಯನ್ನು(ಏಕ್ಸ್ ಟ್ರಾ ಟ್ರಂಪ್ ಕಾರ್ಡ್) ಒಳಗೊಂಡಿದೆ. ಈಗ ಪ್ರಪಂಚದ ಬಹುಪಾಲು ಭಾಗಗಳಲ್ಲಿ ಬಳಸುತ್ತಿರುವ ನಾಲ್ಕು ಸೂಟ್‌ಗಳೆಂದರೆ ಫ್ರಾನ್ಸ್ ನಲ್ಲಿ 1480ರಲ್ಲಿ ಹುಟ್ಟಿದಸ್ಪೇಡ್ಸ್, ಹಾರ್ಟ್ಸ್, ಡೈಮಂಡ್ಸ್, ಮತ್ತು ಕ್ಲಬ್ಸ್ ಎಲೆಗಳಾಗಿವೆ. ಟ್ರೆಫಲ್ (ಕ್ಲಬ್) ಬಹುಶಃ ಓಕ್ ಮರದ ಎಲೆಗಳಿಂದ ನಕಲು ಮಾಡಿರಬಹುದು ಹಾಗು ಪಿಕ್ (ಸ್ಪೇಡ್) ಜರ್ಮನ್ ಸೂಟ್‌ಗಳ ಎಲೆಚಿತ್ರದಿಂದ ತೆಗೆದುಕೊಂಡಿರಬಹುದು. ಆದರೂ "ಪೀಕ್" ಮತ್ತು "ಸ್ಪೇಡ್" ನ ಹೆಸರುಗಳು, ಇಟಲಿ ಸೂಟ್‌ಗಳ ಕತ್ತಿಯಿಂದ ಹುಟ್ಟಿರಬಹುದು.[೧೪] ಇಂಗ್ಲೆಂಡ್ ನಲ್ಲಿ ಅಂತಿಮವಾಗಿ ಫ್ರೆಂಚ್ ಸೂಟ್ ಗಳನ್ನು ಬಳಸಿದರೂ ಕೂಡ ಪ್ರಾಚೀನ ಡೆಕ್(ಪ್ಯಾಕ್)ಗಳು ಇಟಾಲಿಯನ್ ಸೂಟ್ [ಚಾಟೋ, ಕೊಂಡಿಯನ್ನು ಒದಗಿಸಿಲ್ಲ] ಗಳನ್ನು ಹೊಂದಿದ್ದವು.[ಸೂಕ್ತ ಉಲ್ಲೇಖನ ಬೇಕು] 15 ನೇ ಶತಮಾನದಲ್ಲಿಯೂ ಕೂಡ ಯುರೋಪಿಯನ್ನರು ಯುರೋಪ್ ನ ರಾಜಮನೆತನವನ್ನು ಮತ್ತು ಸೇವಕರನ್ನು ಪ್ರತಿನಿಧಿಸಲು ದರ್ಬಾರು ಇಸ್ಪೀಟೆಲೆಗಳನ್ನು(ಕೋರ್ಟ್ ಕಾರ್ಡ್) ಮೂಲತಃ "ರಾಜ""ಷೆವಲಿಯರ್" (ನೈಟ್) ಮತ್ತು "ನೇವ್ "(ಅಥವಾ ಸೇವಕ)ಆಗಿ ಬದಲಿಸಿದರು. 1440 ರ ದಶಕದಲ್ಲಿ ಜರ್ಮನ್ ಪ್ಯಾಕ್‌ನ ಎರಡು ಸೂಟ್‌ಗಳಲ್ಲಿ ರಾಜರ ಬದಲಿಗೆ ರಾಣಿಯರು ಅಧಿಕ ಮೌಲ್ಯದ ಇಸ್ಪೀಟೆಲೆಯಾಗಿ ಸ್ಥಾನ ಪಡೆದರು. ಐವತ್ತಾರು ಎಲೆಗಳ ಡೆಕ್ ಒಳಗೊಂಡಿರುವ ರಾಜ, ರಾಣಿ, ನೈಟ್ ಮತ್ತು ವ್ಯಾಲೆಟ್‌ಗಳು(ಫ್ರೆಂಚ್ ಟ್ಯಾರೊ ದರ್ಬಾರು)ಸಾಮಾನ್ಯವಾಗಿವೆ. ಫ್ರಾನ್ಸ್‌ನಲ್ಲಿ ರೂಯೆನ್ ಉತ್ಪಾದನಾ ಕೇಂದ್ರದಲ್ಲಿ 16ನೇ ಶತಮಾನದಲ್ಲಿ ವಿನ್ಯಾಸಗೊಳಿಸಿದ ಕೋರ್ಟ್ ಕಾರ್ಡ್‌ಗಳು ಇಂಗ್ಲೆಂಡ್‌ನಲ್ಲಿ ಪ್ರಮಾಣಕ ವಿನ್ಯಾಸವಾಯಿತು. ಫ್ರಾನ್ಸ್‌ನಲ್ಲಿ ಪ್ಯಾರಿಸ್ ವಿನ್ಯಾಸವು ಪ್ರಮಾಣಕ ವಿನ್ಯಾಸವಾಯಿತು. ಅನಂತರ ಪ್ಯಾರಿಸ್ ಮತ್ತು ರೊಯನೈಸ್ ದರ್ಬಾರ್ ಎಲೆಗಳಿಗೆ ಐತಿಹಾಸಿಕ ಮತ್ತು ಪೌರಾಣಿಕ ನಾಯಕ ಮತ್ತು ನಾಯಕಿಯರ ಹೆಸರಿಡಲಾಯಿತು. ಪ್ಯಾರಿಸ್ ನ ಹೆಸರುಗಳು ಹಾಗು ರೊಯನೈಸ್ ವಿನ್ಯಾಸದ ಎಲೆಗಳು ಕೂಡ ಆಧುನಿಕ ಬಳಕೆಯಲ್ಲಿ ಅತ್ಯಂತ ಸಾಮಾನ್ಯವಾದವು.

ಸಾಂಪ್ರದಾಯಿಕ ಪ್ಯಾರಿಸ್ ನ ದರ್ಬಾರ್ ಎಲೆಗಳ ಹೆಸರು
ಕಿಂಗ್ ಆಫ್ ಸ್ಪೇಡ್ಸ್ ಡೇವಿಡ್
ಕಿಂಗ್ ಆಫ್ ಹಾರ್ಟ್ಸ್ ಚಾರ್ಲ್ಸ್ (ಬಹುಶಃ ಚಾರ್ಲ್ ಮ್ಯಾಗ್ನೆ, ಅಥವಾ ಚಾರ್ಲ್ಸ್ VII, ರಾಕಲ್ ಎಂಬುದು ಅವನ ಉಪಪತ್ನಿಯಾದ ಏಜ್ನಸ್ ಸೋರೆಲ್) ಳ ಕಲ್ಪಿತನಾಮವಾಗಿದೆ.
ಕಿಂಗ್ ಆಫ್ ಡೈಮಂಡ್ಸ್

ಜ್ಯೂಲಿಯಸ್‌ ಸೀಸರ್‌

ಕಿಂಗ್ ಆಫ್ ಕ್ಲಬ್ಸ್ ಅಲೆಗ್ಸಾಂಡರ್ ದಿ ಗ್ರೇಟ್
ಕ್ವೀನ್ಸ್ ಆಫ್ ಸ್ಪೇಡ್ಸ್ ಪಲ್ಲಾಸ್
ಕ್ವೀನ್ ಆಫ್ ಹಾರ್ಟ್ಸ್ ಜುಡಿತ್
ಕ್ವೀನ್ ಆಫ್ ಡೈಮಂಡ್ಸ್ ರಾಚೆಲ್ ( ಬೈಬಲಿನ, ಚರಿತ್ರೆಯ (ಮೇಲಿರುವ ಚಾರ್ಲ್ಸ್ ಅನ್ನು ನೋಡಿ), ಅಥವಾ ಪೌರಾಣಿಕವಾಗಿ ಕೆಳಗೆ ಹೇಳಲಾಗಿರುವ ಲ್ಯಾನ್ಸ್‌ಲಾಟ್‌ಗೆ ಸಂಬಂಧಿಸಿದಂತೆ ಸೆಲೆಕ್ಟಿಕ್ ರಾಗ್ನೆಲ್‌ ನ ನೀತಿ ಭ್ರಷ್ಟತೆ)
ಕ್ವೀನ್ ಆಫ್ ಕ್ಲಬ್ಸ್ ಆರ್ಜಿನೆ (ಪ್ರಾಯಶಃ ಇದು ರೆಜಿನಾ ಅಕ್ಷರಪಲ್ಲಟವಾಗಿದೆ.ಇದು ರಾಣಿಯ ಲ್ಯಾಟಿನ್ ಪದವಾಗಿದೆ.ಅಥವಾ ಇದು ಬಹುಶಃ ಪಾಲಿಬಸರ್‌ ಪತ್ನಿ ಮತ್ತು ಆರ್ಗಸ್ ನ ತಾಯಿಯಾದ ಆರ್ಜಿಯವಿರಬಹುದು ).
ನೇವ್ ಆಫ್ ಸ್ಪೇಡ್ಸ್ ಒಜಿಯರ್ ದಿ ಡ್ಯಾನೆ/ಹೊಲ್ಗರ್ ಡ್ಯಾನ್ಸ್ ಕೆ (ಚಾರ್ಲೆ ಮಾಗ್ನೆ ಸೈನಿಕ)
ನೇವ್ ಆಫ್ ಹಾರ್ಟ್ಸ್ ಲಾ ಹೈರ್(ಜೋನ್ ಆಫ್ ಆರ್ಕ್‌ಗೆ ಸಹಸೈನಿಕ ಹಾಗು ಚಾಲ್ಸ್ VIIದರ್ಬಾರಿನ ಸದಸ್ಯ)
ನೇವ್ ಆಪ್ ಡೈಮಂಡ್ಸ್

ಹೆಕ್ಟರ್‌

ನೇವ್ ಆಫ್ ಕ್ಲಬ್ಸ್ ಜೂಡಸ್ ಮ್ಯಾಕಾಬೇಸ್,ಅಥವಾ ಲ್ಯಾನ್ ಸೆಲಾಟ್

ನಂತರದ ವಿನ್ಯಾಸದ ಬದಲಾವಣೆಗಳು

thumb|upright|1895 ರ ವ್ಯಾನಿಟಿ ಫೇರ್ ಡೆಕ್ ನಿಂದ ಪರಿವರ್ತನೆ( ಟ್ರಾನ್ಸ್ ಫಾರ್ಮೇಶನ್) ಇಸ್ಪೀಟೆಲೆಗಳು

ಇಸ್ಪೀಟೆಲೆಗಳನ್ನು ರಾಜಕೀಯ ಹೇಳಿಕೆಗಳಿಗೆ ಸಾಧನಗಳಾಗಿ ಬಳಸಲಾಗುತ್ತದೆ.ಇಲ್ಲಿ, ಫ್ರೆಂಚ್ ಕ್ರಾಂತಿಯ ಇಸ್ಪೀಟೆಲೆಗಳು ಆರಾಧನೆ ಮತ್ತು ಭ್ರಾತೃತ್ವದ ಸ್ವಾತಂತ್ರ್ಯವನ್ನು ಸಂಕೇತಿಸುತ್ತವೆ.

ಪ್ರಾಚೀನ ಆಟಗಳಲ್ಲಿ ಅವರ ಸೂಟ್ ಗಳಲೆಲ್ಲ ರಾಜನ ಎಲೆಗಳೆ ಯಾವಾಗಲು ಅತ್ಯಂತ ಮೌಲ್ಯದ್ದಾಗಿರುತ್ತಿದ್ದವು. ಆದರೂ ಈಗ ಎಕ್ಕ(ಏಸ್) ಎಂದು ಕರೆಲಾಗುತ್ತಿರುವ ಸಾಮಾನ್ಯವಾಗಿ ಕಡಿಮೆ ಮೌಲ್ಯದ ಎಲೆಗೆ 14 ನೇ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ವಿಶೇಷ ಮಹತ್ವ ನೀಡಲಾಯಿತು. ಈ ಕಾರಣದಿಂದಾಗಿ ಕೆಲವೊಮ್ಮೆ ಇದು ಅಧಿಕ ಬೆಲೆಯ ಎಲೆ ಮತ್ತು ಎರಡು ಅಥವಾ ಡ್ಯೂಸ್ ಕನಿಷ್ಠ ಎಲೆಯಾಗುತ್ತಿತ್ತು. ಈ ಪರಿಕಲ್ಪನೆಯನ್ನು ಫ್ರೆಂಚ್ ಕ್ರಾಂತಿಯಿಂದಾಗಿ 18 ನೇ ಶತಮಾನದ ಉತ್ತರಾರ್ಧದಲ್ಲಿ ಇನ್ನಷ್ಟು ತೀವ್ರಗೊಳಿಸಲಾಯಿತು. ರಾಜಮನೆತನದ ಎದುರಿಗೆ ಬಲಾಢ್ಯರಾಗುತ್ತಿರುವ ಕೆಳವರ್ಗದ ಜನರ ಸಂಕೇತವಾಗಿ "ಎಕ್ಕವನ್ನು ಶ್ರೇಷ್ಠ"ವಾಗಿಸಿ ಆಟವಾಡಲು ಪ್ರಾರಂಭಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] "ಎಕ್ಕ" ಎಂಬ ಪದವು ಆಂಗ್ಲೋ-ನಾರ್ಮನ್ ಭಾಷೆಯ ದಾಳಬೀಸು ಎಂಬ ಪದದಿಂದ ಹುಟ್ಟಿದೆ.. ಇದು ಸ್ವತಃ ಲ್ಯಾಟಿನ್ ಆಸ್‌ ನಿಂದ ಹುಟ್ಟಿದೆ.(ನಾಣ್ಯಪದ್ದತಿಯ ಸಣ್ಣ ಘಟಕ) ಮತ್ತೊಂದು ಪಗಡೆಯಾಡುವ ಪದವಾದ, ಟ್ರೇ (3),ವನ್ನು ಕೆಲವೊಮ್ಮೆ ಇಸ್ಪೀಟೆಲೆಯ ಆಟದಲ್ಲಿ ತೋರಿಸಲಾಗುತ್ತದೆ. ಮೂಲೆ ಮತ್ತು ತುದಿಯ ಸೂಚಿಗಳು ಒಂದು ಕೈನಲ್ಲಿ ಬೀಸಣಿಗೆಯ ರೀತಿಯಲ್ಲಿ ಇಸ್ಪೀಟೆಲೆಗಳನ್ನು ಹಿಡಿಯಲು ಅನುಕೂಲ ಕಲ್ಪಿಸುತ್ತದೆ(ಮುಂಚೆ ಬಳಸುತ್ತಿದ್ದ ಎರಡು ಕೈಗಳ ಬದಲಿಗೆ). ಇನ್ ಫೈರೆರನಿಂದ ಮುದ್ರಿತವಾಗಿರುವ ಲ್ಯಾಟಿನ್ ಸೂಟ್ ಗಳನ್ನು ಹೊಂದಿ ಪರಿಚಿತವಾಗಿರುವ ಎಲೆಗಳ ಮೊದಲನೆಯ ಪ್ಯಾಕ್ ಡೆಕ್ ಎನ್ನಲಾಗಿದ್ದು, 1693ರ ಕಾಲಮಾನದ್ದಾಗಿದೆ.(ಅಂತಾರಾಷ್ಟ್ರೀಯ ಇಸ್ಪೀಟೆಲೆಗಳ ಸಮುದಾಯದ ಪತ್ರಿಕೆ 30-1 ಪುಟ 34),ಆದರೆ 18ನೇ ಶತಮಾನದ ಕೊನೆಯಲ್ಲಿ ಮಾತ್ರ ಸಾಮಾನ್ಯವಾಗಿ ಬಳಸಲಾಯಿತು. ಆಂಗ್ಲೊ-ಅಮೆರಿಕನ್ ಡೆಕ್‌ನಲ್ಲಿರುವ ಸೂಚಿಗಳನ್ನು 1875ರಿಂದ ಬಳಸಲಾಯಿತು. ನ್ಯೂಯಾರ್ಕ್ ಕನ್ಸೋಲಿಡೇಟೆಡ್ ಕಾರ್ಡ್ ಕಂಪೆನಿ ಸ್ವೀಜರ್ಸ್ ಎಲೆಗಳಿಗೆ ಸ್ವಾಮ್ಯಹಕ್ಕು ಪಡೆಯಿತು, ಇದು ದೊಡ್ಡ ಮಟ್ಟದಲ್ಲಿ ಹರಡಿದ ಸೂಚಿಗಳಿರುವ ಮೊದಲ ಇಸ್ಪೀಟೆಲೆಗಳಾಗಿವೆ. ಅದೇನೇ ಆದರೂ ಈ ನಾವೀನ್ಯದೊಂದಿಗೆ ಹೊರಬಂದ ಮೊದಲನೆಯ ಡೆಕ್ ಸಾಲ್ಡೀಯ ಸ್ವಾಮ್ಯಹಕ್ಕು ಆಗಿದ್ದು, ಇದನ್ನು 1864 ರಲ್ಲಿ ಸ್ಯಾಮ್ಯುಲ್ ಹಾರ್ಟ್ ಮುದ್ರಿಸಿದರು. ಈ ಸಮಯದ ಮೊದಲು ಇಂಗ್ಲೀಷ್ ಡೆಕ್ ನಲ್ಲಿದ್ದ ಅತ್ಯಂತ ಕೆಳಮಟ್ಟದ ದರ್ಬಾರ್ ಎಲೆಯನ್ನು ಅಧಿಕೃತವಾಗಿ ನೇವ್ (ಜ್ಯಾಕ್) ಎಂದು ಕರೆಯಲಾಗುತ್ತಿತ್ತು. ಆದರೆ ಇದರ ಸಂಕ್ಷಿಪ್ತ ಪದ ("Kn") ಆಗಿದ್ದು, ರಾಜ ನ ಸಂಕ್ಷಿಪ್ತ ಪದವಾದ ("K") ಯೊಂದಿಗೆ ಹೆಚ್ಚಾಗಿ ಹೋಲಿಕೆಯಾಗುತ್ತಿದ್ದ ಕಾರಣ ಈ ಪದವನ್ನು ಸೂಚಿಗಳಿಗೆ ಸರಿಯಾಗಿ ಬದಲಾಯಿಸಲಾಗಲಿಲ್ಲ. ಆದರೂ 1600ರ ದಶಕದಿಂದ ಜ್ಯಾಕಿಗೆ(ನೇವ್) ಆಗಾಗ್ಗೆ ಜಾಕ್ ಎಂದು ಕರೆಯಲಾಯಿತು. ಇದನ್ನು ಇಂಗ್ಲೀಷ್ ರೆನೈಸಾನ್ಸ್ ಇಸ್ಪೀಟೆಲೆಯ ಆಟದ ಆಲ್ ಫೋರ್ಸ್ ನಿಂದ ಎರವಲು ಪಡೆದುಕೊಳ್ಳಲಾಗಿದೆ. ಇದರಲ್ಲಿ ತುರುಫೆಲೆ(ಟ್ರಂಪ್ಸ್)ಯ ನೇವ್‌ಗೆ ಈ ಹೆಸರಿರುತ್ತದೆ. ಆಲ್ ಫೋರ್ಸ್ ಅನ್ನು ಕೆಳವರ್ಗದವರ ಆಟವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಒಂದು ಕಾಲದಲ್ಲಿ ಜಾಕ್ ಪದದ ಬಳಕೆಯನ್ನು ಕೀಳುರೀತಿಯಲ್ಲಿ ನೋಡಲಾಗುತ್ತಿತ್ತು. ಆದರೂ ಸೂಚಿಗಳ ಬಳಕೆ ಇಂಗ್ಲೀಷ್ ಡೆಕ್ ಗಳಲ್ಲಿ ಅಧಿಕೃತವಾಗಿ ಜ್ಯಾಕ್ ಪದದ ಬದಲಿಗೆ ಜಾಕ್ ಎಂಬ ಔಪಚಾರಿಕ ಬದಲಾವಣೆಗೆ ಪ್ರೋತ್ಸಾಹಿಸಿತು. ಇಂಗ್ಲೀಷೇತರ ಭಾಷೆಗಳ ಡೆಕ್ ಗಳಲ್ಲಿ ಈ ರೀತಿಯ ವಿವಾದ ಕಂಡುಬರಲಿಲ್ಲ; ಉದಾಹರಣೆಗೆ ಫ್ರೆಂಚ್ ಟ್ಯಾರೊ ಡೆಕ್ ಅದರ ಕೆಳಮಟ್ಟದ ದರ್ಬಾರ್ ಎಲೆಗಳಿಗೆ ವ್ಯಾಲೆಟ್ ಎಂದು ಹೆಸರಿಸುತ್ತದೆ. ಇದು ನೈಟ್ ಕಾರ್ಡ್‌ಗೆ ಅನುಚರನಾಗಿದ್ದು(52 ಇಸ್ಪೀಟೆಲೆಗಳ ಡೆಕ್‌ನಲ್ಲಿ ಕಾಣುವುದಿಲ್ಲ),ರಾಣಿ ಎಲೆಯ ಜತೆ ರಾಜನ ಎಲೆ ಇರುತ್ತದೆ. ತಲೆಕೆಳಗಾದ ದರ್ಬಾರು ಇಸ್ಪೀಟೆಲೆಗಳ ನಾವೀನ್ಯತೆಯು ಇದನ್ನು ಅನುಸರಿಸಿತು. 1745 ರಲ್ಲಿ ಈ ನಾವೀನ್ಯತೆಯು ಅಜೆನ್ ನ ಫ್ರೆಂಚ್ ತಯಾರಕನದು ಎನ್ನಲಾಯಿತು. ಆದರೆ ಇಸ್ಪೀಟೆಲೆಗಳ ವಿನ್ಯಾಸವನ್ನು ನಿಯಂತ್ರಿಸುವ ಫ್ರೆಂಚ್ ಸರ್ಕಾರ ಈ ನಾವೀನ್ಯತೆಯೊಂದಿಗೆ ಇಸ್ಪೀಟೆಲೆಗಳ ಮುದ್ರಣದ ಮೇಲೆ ನಿಷೇಧ ಹೇರಿತು. 18 ನೇ ಶತಮಾನದ ಉತ್ತರಾರ್ಧದಲ್ಲಿ ಮಧ್ಯ ಯುರೋಪ್ ನಲ್ಲಿ (ಟ್ರಾಪೊಲಾ ಇಸ್ಪೀಟೆಲೆ) ಇಟಲಿಯಲ್ಲಿ (ಟರೊಕ್ ಚಿನೊ ಬೊಲೊಗ್ ನೆಸೆ) ಮತ್ತು ಸ್ಪ್ಯೇನ್ ನಲ್ಲಿ ಈ ನಾವೀನ್ಯತೆಯನ್ನು ಸ್ವೀಕರಿಸಲಾಯಿತು. ಗ್ರೇಟ್ ಬ್ರಿಟನ್ ನಲ್ಲಿ 1799 ರಲ್ಲಿ ಎಡ್ ಮಂಡ್ ಲುಡ್ ಲೊ ಮತ್ತು ಅನ್ನ ವಿಲ್ಕಾಕ್ಸ್ ತಲೆಕೆಳಗಾಗಿರುವ ದರ್ಬಾರ್ಎಲೆಗಳ ಡೆಕ್ ನ ಸ್ವಾಮ್ಯಹಕ್ಕನ್ನು ಪಡೆದರು. 1802 ರಲ್ಲಿ ಥಾಮಸ್ ವೀಲರ್ ಎಂಬುವವನು ಈ ವಿನ್ಯಾಸದೊಂದಿಗೆ ಆಂಗ್ಲೋ ಅಮೇರಿಕನ್ ಪ್ಯಾಕ್ ಮುದ್ರಿಸಿದನು.[೧೫] ತಲೆಕೆಳಗಾದ ದರ್ಬಾರ್ ಎಲೆಗಳು ಆಟಗಾರರು ಎಲೆಯ ಬಲಭಾಗ ಮೇಲೆ ಬರುವಂತೆ ಅದನ್ನು ತಲೆಕೆಳಗಾಗಿ ತಿರುಗಿಸಲು ಪ್ರಚೋದನೆ ನೀಡುವುದಿಲ್ಲ ಎಂದರ್ಥ. ಇದಕ್ಕೆ ಮುಂಚೆ, ಆಟಗಾರ ಎಲೆಯನ್ನು ತಲೆಕೆಳಗೆ ಮಾಡಿದಾಗ, ಇನ್ನಿತರ ಆಟಗಾರರಿಗೆ ಅವನ ಕೈಯಲ್ಲಿರುವ ಎಲೆಯ ಬಗ್ಗೆ ಸುಳಿವು ಸಿಗುವ ಸಾಧ್ಯತೆಯಿತ್ತು. ಈ ನಾವೀನ್ಯತೆಗೆ ಹಿಂದೆ ಇದ್ದ ಸಂಪೂರ್ಣ ಉದ್ದದ ದರ್ಬಾರ್ ಎಲೆಗಳ ವಿನ್ಯಾಸದ ಕೆಲವು ಅಂಶಗಳನ್ನು ಬಿಟ್ಟುಬಿಡುವ ಅಗತ್ಯವಿದೆ. ರಾಜರ ರಾಣಿಯರ ಮತ್ತು ಜ್ಯಾಕ್‌ಗಳ ಸಾಂಪ್ರದಾಯಿಕ ವಿನ್ಯಾಸಗಳು ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ವಿಮೋಚನೆಯ, ಸಮಾನತೆಯ, ಬ್ರಾತೃತ್ವವನ್ನು ಸಂಕೇತಿಸುವ ವಿನ್ಯಾಸಗಳಾದವು. 1793 ರ ಮತ್ತು 1794 ರ ನಡುವಿನ ಫ್ರೆಂಚ್ ನ ಸುಧಾರಣಾವಾದಿ ಸರ್ಕಾರಗಳು ಹಳೆಯ ಆಡಳಿತವನ್ನು ಉರುಳಿಸುತ್ತಿರುವಂತೆ ಸ್ವತಃ ತಮ್ಮನ್ನು ಕಂಡುಕೊಂಡರು. ಉತ್ತಮ ಕ್ರಾಂತಿಕಾರಿ ರಾಜರು ಅಥವಾ ರಾಣಿಯರ ಜತೆ ಆಡದೇ, ಕ್ರಾಂತಿಯ ಆದರ್ಶಗಳ ಜತೆ ಆಡಿದರು. ಇದು ಅಂತಿಮವಾಗಿ ನೆಪೋಲಿಯನ್ ನ ಆಳ್ವಿಕೆಯೊಡನೆ 1805 ರಲ್ಲಿ ಬದಲಾಯಿತು. ಜೋಕರ್ ಅಮೇರಿಕದ ಆವಿಷ್ಕಾರವಾಗಿದೆ. ಇದನ್ನು ಯೂಕರ್ ಆಟದ ಸಲುವಾಗಿ ವಿನ್ಯಾಸಗೊಳಿಸಲಾಯಿತು.ಇದು ಅಮೇರಿಕಾದ ಕ್ರಾಂತಿಕಾರಿ ಯುದ್ಧದ ಸ್ವಲ್ಪ ಕಾಲದ ನಂತರ ಯುರೋಪ್ ನಿಂದ ಅಮೇರಿಕಾದವರೆಗೂ ಹರಡಿತು ಹಾಗೂ 1800 ರ ಹೊತ್ತಿಗೆ ಅತ್ಯಂತ ಜನಪ್ರಿಯವಾಯಿತು. ಯೂಕರ್ ಆಟದಲ್ಲಿ,ಅತ್ಯಧಿಕ ಮೌಲ್ಯದ ಟ್ರಂಪ್ ಕಾರ್ಡ್(ತುರುಫಿನ ಎಲೆ) ಟ್ರಂಪ್‌ಸೂಟ್‌ನ ಜಾಕ್, ಇದನ್ನು ಬಲ ಬೋವರ್ ಎಂದು ಕರೆಯುತ್ತಾರೆ.ಎರಡನೇ ಅತ್ಯಧಿಕ ಮೌಲ್ಯದ ಟ್ರಂಪ್ ಎಡ ಬೋವರ್, ಟ್ರಂಪ್ಸ್ ರೀತಿಯಲ್ಲಿ ಒಂದೇ ಬಣ್ಣದ ಸೂಟ್‌ನ ಜಾಕ್. ಜೋಕರ್‌ನ್ನು 1870ರಲ್ಲಿ ಮೂರನೇ ಟ್ರಂಪ್ ಬೆಸ್ಟ್ ಬೋವರ್‌ ಆಗಿ ಶೋಧಿಸಲಾಯಿತು. ಇದು ಇತರೆ ಎರಡು ಬೋವರ್‌ಗಳಿಗಿಂತ ಹೆಚ್ಚಿನ ಶ್ರೇಯ ಪಡೆಯಿತು. ಈ ಎಲೆಯ ಹೆಸರನ್ನು ಯೂಕರ್ ನ ವಿಭಿನ್ನ ಹೆಸರಾದ ಜುಕರ್ ನಿಂದ ತೆಗೆದುಕೊಳ್ಳಲಾಗಿದೆ ಎಂದು ನಂಬಲಾಗಿದೆ. [೧೬][೧೭] 19 ನೇಯ ಶತಮಾನದಲ್ಲಿ ಟ್ರಾನ್ಸ್ ಫರ್ಮೇಷನ್ ಇಸ್ಪೀಟೆಲೆಎಂದು ಕರೆಯಲಾದ ಒಂದು ಬಗೆಯ ಇಸ್ಪೀಟೆಲೆ ಯುರೋಪ್ ನಲ್ಲಿ ಮತ್ತು ಅಮೇರಿಕಾದಲ್ಲಿ ಜನಪ್ರಿಯವಾಯಿತು. ಒಬ್ಬ ಕಲಾವಿದ ಮುಖರಹಿತ ಎಲೆಗಳ ಚುಕ್ಕೆಯನ್ನು ಕಲಾತ್ಮಕ ವಿನ್ಯಾಸದಲ್ಲಿ ಈ ಇಸ್ಪೀಟೆಲೆಗಳಲ್ಲಿ ಸಂಯೋಜಿಸುತ್ತಾನೆ.

ಸಾಂಕೇತಿಕತೆ

ಜನಪ್ರಿಯ ಐತಿಹ್ಯಗಳು ಇಸ್ಪೀಟೆಲೆಗಳ ಡೆಕ್ ನ ಜೋಡಣೆ ಧಾರ್ಮಿಕ, ಅಬೌತಿಕ ಅಥವಾ ಖಾಗೋಳಿಕ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳುತ್ತವೆ.

Other Languages
Afrikaans: Speelkaart
Ænglisc: Spilcarte
العربية: ورق لعب
مصرى: كوتشينه
asturianu: Baraxa
беларуская: Ігральныя карты
беларуская (тарашкевіца)‎: Гульнёвыя карты
български: Карти за игра
বাংলা: তাস
brezhoneg: Kartoù
bosanski: Igraće karte
čeština: Hrací karta
Чӑвашла: Карт (вăйă)
dansk: Spillekort
Deutsch: Spielkarte
Ελληνικά: Τράπουλα
English: Playing card
Esperanto: Ludkarto
español: Baraja
euskara: Kartak
suomi: Pelikortit
français: Carte à jouer
贛語: 撲克
ગુજરાતી: પત્તા
עברית: קלף משחק
हिन्दी: ताश
Fiji Hindi: Patta
hrvatski: Igraće karte
interlingua: Carta de joco
Bahasa Indonesia: Kartu remi
Iñupiak: Piannaq
íslenska: Spilastokkur
italiano: Carte da gioco
日本語: トランプ
Basa Jawa: Rèmi
ქართული: ბანქო
한국어: 플레잉 카드
Lingua Franca Nova: Cartas
lietuvių: Žaidimo korta
latviešu: Spēļu kārtis
Malagasy: Karatra
монгол: Хөзөр
मराठी: पत्ते
Bahasa Melayu: Daun terup
नेपाली: तास (खेल)
Nederlands: Speelkaart
norsk: Spillkort
polski: Karty
پنجابی: تاش
português: Baralho
română: Carte de joc
саха тыла: Хаарты
srpskohrvatski / српскохрватски: Igraće karte
Simple English: Playing card
slovenčina: Hracia karta
slovenščina: Igralna karta
српски / srpski: Карта (игра)
svenska: Spelkort
తెలుగు: పేకముక్క
Tagalog: Baraha
українська: Колода карт
اردو: تاش پتے
Tiếng Việt: Bộ bài Tây
Winaray: Baraha
吴语: 游戏牌
中文: 遊戲牌
粵語: 遊戲牌