ಆದಾಯ
English: Income

ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಒಂದು ಘಟಕ ಅಥವಾ ವ್ಯಕ್ತಿಯು ಗಳಿಸುವ ಬಳಕೆ ಮತ್ತು ಉಳಿತಾಯದ ಅವಕಾಶ. ಇದನ್ನು ಸಾಮಾನ್ಯವಾಗಿ ವಿತ್ತೀಯ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗುತ್ತದೆ.[೧] ಆದರೆ, ಮನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲಿ, ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲ ವೇತನಗಳು, ಸಂಬಳಗಳು, ಲಾಭಗಳು, ಬಡ್ಡಿ ಪಾವತಿಗಳು, ಬಾಡಿಗೆಗಳು ಮತ್ತು ಪಡೆದ ಗಳಿಕೆಗಳ ಇತರ ರೂಪಗಳ ಮೊತ್ತ. ಸಾರ್ವಜನಿಕ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ, ಈ ಪದವು ವಿತ್ತೀಯ ಮತ್ತು ವಿತ್ತೀಯವಲ್ಲದ ಉಪಯೋಗ ಸಾಮರ್ಥ್ಯದ ಶೇಖರಣೆಯನ್ನು ಸೂಚಿಸಬಹುದು. ವಿತ್ತೀಯ ಉಪಯೋಗ ಸಾಮರ್ಥ್ಯವನ್ನು ಒಟ್ಟು ಆದಾಯದ ಪ್ರತಿನಿಧಿಯಾಗಿ ಬಳಸಲಾಗುತ್ತದೆ.

ಬಹುತೇಕ ಪ್ರತಿ ದೇಶದಲ್ಲಿ ತಲಾವಾರು ಆದಾಯವು ಸ್ಥಿರವಾಗಿ ಹೆಚ್ಚಾಗುತ್ತಿದೆ. ಜನರು ಅಧಿಕ ಆದಾಯವನ್ನು ಹೊಂದಿರುವುದಕ್ಕೆ ಅನೇಕ ಅಂಶಗಳು ಕೊಡುಗೆ ನೀಡುತ್ತವೆ ಉದಾಹರಣೆಗೆ ಶಿಕ್ಷಣ, ಜಾಗತೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ಶಾಂತಿಯಂತಹ ಅನುಕೂಲಕರ ರಾಜಕೀಯ ಪರಿಸ್ಥಿತಿಗಳು. ಆದಾಯದಲ್ಲಿ ಹೆಚ್ಚಳವು ಜನರು ಕಡಿಮೆ ಗಂಟೆಗಳು ಕೆಲಸಮಾಡಲು ಆಯ್ದುಕೊಳ್ಳಲು ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಅಭಿವೃದ್ಧಿಹೊಂದಿದ ದೇಶಗಳು ಅಧಿಕ ಆದಾಯಗಳನ್ನು ಹೊಂದಿರುತ್ತವೆ ಮತ್ತು ಅಭಿವೃದ್ಧಿಶೀಲ ದೇಶಗಳು ಕಡಿಮೆ ಆದಾಯಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ.

ಆದಾಯ ಅಸಮಾನತೆಯು ಅಸಮಾನ ರೀತಿಯಲ್ಲಿ ಆದಾಯವು ಹಂಚಿಕೆಯಾಗಿರುವ ಮಟ್ಟವನ್ನು ಸೂಚಿಸುತ್ತದೆ. ಇದನ್ನು ಲೊರೆಂಜ಼್ ವಕ್ರರೇಖೆ ಮತ್ತು ಜಿನಿ ಗುಣಾಂಕ ಸೇರಿದಂತೆ ವಿವಿಧ ವಿಧಾನಗಳಿಂದ ಅಳೆಯಬಹುದು. ಸ್ವಲ್ಪ ಪ್ರಮಾಣದ ಅಸಮಾನತೆಯು ಅಗತ್ಯ ಮತ್ತು ಅಪೇಕ್ಷಣೀಯ, ಆದರೆ ಅತ್ಯಧಿಕ ಅಸಮಾನತೆಯು ದಕ್ಷತೆಯ ಸಮಸ್ಯೆಗಳು ಮತ್ತು ಸಾಮಾಜಿಕ ಅನ್ಯಾಯವನ್ನು ಉಂಟುಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಒಪ್ಪುತ್ತಾರೆ. ನಿವ್ವಳ ರಾಷ್ಟ್ರೀಯ ಆದಾಯದಂತಹ ಅಂಕಿಅಂಶಗಳಿಂದ ಅಳೆಯಲಾದ ರಾಷ್ಟ್ರೀಯ ಆದಾಯವು ಅರ್ಥವ್ಯವಸ್ಥೆಯಲ್ಲಿನ ಜನರು, ಸಂಸ್ಥೆಗಳು ಮತ್ತು ಸರ್ಕಾರದ ಒಟ್ಟು ಆದಾಯವನ್ನು ಅಳೆಯುತ್ತದೆ.

ಇತಿಹಾಸದಾದ್ಯಂತ, ಅನೇಕರು ನೈತಿಕತೆ ಮತ್ತು ಸಮಾಜದ ಮೇಲೆ ಆದಾಯದ ಪ್ರಭಾವದ ಬಗ್ಗೆ ಬರೆದಿದ್ದಾರೆ. ವೈಯಕ್ತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ನಿರಂತರ ಆದಾಯದ ಬೆಳವಣಿಗೆಯಲ್ಲಿ ವ್ಯಕ್ತವಾದ ವಸ್ತುದ್ರವ್ಯದ ಪ್ರಗತಿ ಮತ್ತು ಸಮೃದ್ಧಿಯು ಯಾವುದೇ ಬಗೆಯ ನೈತಿಕತೆಯನ್ನು ಜೀವಂತವಾಗಿರಿಸುವುದಕ್ಕೆ ಅನಿವಾರ್ಯ ಅಡಿಪಾಯವನ್ನು ಒದಗಿಸುತ್ತದೆ ಎಂದು ಕೆಲವು ವಿದ್ವಾಂಸರು ತೀರ್ಮಾನಕ್ಕೆ ಬಂದಿದ್ದಾರೆ. ಈ ವಾದವನ್ನು ಆ್ಯಡಮ್ ಸ್ಮಿತ್ ಸ್ಪಷ್ಟವಾಗಿ ನೀಡಿದನು.

  • ಉಲ್ಲೇಖಗಳು

ಉಲ್ಲೇಖಗಳು

  1. Smith's financial dictionary. Smith, Howard Irving. 1908. Income is defined as, "Revenue; the amount of money coming to a person or a corporation (usually interpreted as meaning annually) whether as payment for services or as interest or other profit from investment."
Other Languages
Afrikaans: Inkomste
العربية: دخل مالي
تۆرکجه: گلیر
беларуская: Даход
български: Доход
বাংলা: আয়
català: Ingrés
Cymraeg: Incwm
dansk: Indkomst
Deutsch: Einkommen
Ελληνικά: Εισόδημα
English: Income
Esperanto: Rento
español: Ingreso
euskara: Irabazi
فارسی: درآمد
français: Revenu
עברית: הכנסה
हिन्दी: आय
hrvatski: Dohodak
հայերեն: Եկամուտ
italiano: Reddito
日本語: 収入
қазақша: Табыс
한국어: 수입 (회계)
Latina: Reditus
lietuvių: Pajamos
latviešu: Ienākumi
Bahasa Melayu: Pendapatan bersih
မြန်မာဘာသာ: ဝင်ငွေ
नेपाली: आय
Nederlands: Inkomen
norsk: Inntekt
ਪੰਜਾਬੀ: ਆਮਦਨ
polski: Dochód
português: Renda
română: Venit
русский: Доход
sicilianu: Ngressu
Scots: Income
srpskohrvatski / српскохрватски: Prihod
Simple English: Income
svenska: Inkomst
Kiswahili: Kipato
தமிழ்: வருவாய்
Tagalog: Kita
Türkçe: Gelir
татарча/tatarça: Керем
українська: Дохід
中文: 收入