ಅಸ್ತಿತ್ವವಾದ

The philosophers Søren Kierkegaard and Friedrich Nietzsche foreshadowed existentialism.

ಅಸ್ತಿತ್ವವಾದ ಎಂಬುದು ಅನೇಕ, 19ನೇ- ಮತ್ತು 20ನೇ-ಶತಮಾನದ ದಾರ್ಶನಿಕರ ಕೃತಿಗೆ ಅನ್ವಯಿಸಲಾಗಿರುವ ಶಬ್ದವಾಗಿದೆ. ಈ ದಾರ್ಶನಿಕರು ತಾವು ಹೊಂದಿದ್ದ ಗಹನವಾದ ಸೈದ್ಧಾಂತಿಕ ಅಭಿಪ್ರಾಯಭೇದಗಳ[೧][೨] ಹೊರತಾಗಿಯೂ, ತತ್ತ್ವಚಿಂತನೆಯ ಆಲೋಚನೆಯ ಗಮನವು ಪ್ರತ್ಯೇಕ ವ್ಯಕ್ತಿಯ ಅಸ್ತಿತ್ವದ ಸ್ಥಿತಿಗಳು ಹಾಗೂ ಅವುಗಳ ಭಾವಗಳು, ವರ್ತನೆಗಳು, ಹೊಣೆಗಾರಿಕೆಗಳು, ಮತ್ತು ಆಲೋಚನೆಗಳೊಂದಿಗೆ ವ್ಯವಹರಿಸುವಂತಿರಬೇಕು ಎಂಬುದನ್ನು ಸಾಮಾನ್ಯವಾಗಿ ಸಮರ್ಥಿಸಿದರು.[೩][೪] 19ನೇ ಶತಮಾನದ ಆರಂಭದ ದಾರ್ಶನಿಕನಾದ ಸೋರೆನ್‌ ಕಿರ್ಕಗಾರ್ಡ್‌ ಎಂಬಾತನನ್ನು ಅಸ್ತಿತ್ವವಾದದ ಜನಕ[೫][೬] ಎಂಬುದಾಗಿ ಮರಣಾನಂತರದಲ್ಲಿ ಪರಿಗಣಿಸಲಾಗಿದೆ. ಈತ ಸಮರ್ಥಿಸಿದ ಪ್ರಕಾರ, ವ್ಯಕ್ತಿಯು ತನ್ನ ಸ್ವಂತದ ಜೀವನಕ್ಕೆ ಅರ್ಥವನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಮತ್ತು ಹತಾಶೆ, ತಲ್ಲಣ, ಅಸಂಬದ್ಧತೆ, ಬುದ್ಧಿವಿಕಲ್ಪ, ಮತ್ತು ಬೇಸರ ಇವೇ ಮೊದಲಾದವನ್ನು ಒಳಗೊಂಡಂತೆ ಇರುವಿಕೆಗೆ ಸಂಬಂಧಿಸಿದಂತಿರುವ ಅನೇಕ ಅಡಚಣೆಗಳು ಮತ್ತು ಗಮನಭಂಗಗಳ ಹೊರತಾಗಿಯೂ ಆ ಜೀವನವನ್ನು ಉತ್ಕಟಭಾವದಿಂದ ಮತ್ತು ಪ್ರಾಮಾಣಿಕವಾಗಿ[೭][೮] ಜೀವಿಸುವುದಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಹೊಣೆಗಾರನಾಗಿರುತ್ತಾನೆ.[೯]ಅಸ್ತಿತ್ವವಾದದ ತರುವಾಯದ ದಾರ್ಶನಿಕರು, ಪ್ರತ್ಯೇಕ ವ್ಯಕ್ತಿಯ ಮೇಲಿನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳುತ್ತಾರಾದರೂ, ಮಟ್ಟಗಳನ್ನು ಬದಲಾಯಿಸುವುದರಲ್ಲಿ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತಾರೆ, ವಿಭಿನ್ನವಾಗಿ ನಿಲ್ಲುತ್ತಾರೆ; ಅಂದರೆ, ಓರ್ವ ವ್ಯಕ್ತಿ ಹೇಗೆ ಸಾಧಿಸುತ್ತಾನೆ ಮತ್ತು ಒಂದು ಪೂರ್ಣತೆಯ ಜೀವನವನ್ನು ಯಾವುದೆಲ್ಲಾ ಘಟಕಗಳು ರೂಪಿಸುತ್ತವೆ, ಯಾವುದೆಲ್ಲಾ ಅಡಚಣೆಗಳನ್ನು ದಾಟಿಕೊಂಡು ಬರಬೇಕಾಗುತ್ತದೆ, ಮತ್ತು ದೇವರ ಅಸ್ತಿತ್ವ[೧೦][೧೧] ಅಥವಾ ಅಸ್ತಿತ್ವವಿರದಿರುವಿಕೆಯ ಸಂಭವನೀಯ ಪರಿಣಾಮಗಳನ್ನು ಒಳಗೊಂಡಂತೆ, ಯಾವುದೆಲ್ಲಾ ಬಾಹ್ಯ ಹಾಗೂ ಆಂತರಿಕ ಅಂಶಗಳು ಸೇರಿಕೊಂಡಿವೆ ಎಂಬುದರ ಕುರಿತು ಸದರಿ ತರುವಾಯದ ದಾರ್ಶನಿಕರು ಒತ್ತುನೀಡುತ್ತಾರೆ.[೧೨][೧೩] ಸಾಂಪ್ರದಾಯಿಕವಾದ ಕ್ರಮಬದ್ಧ ಅಥವಾ ಶೈಕ್ಷಣಿಕ ತತ್ತ್ವಶಾಸ್ತ್ರವು ಶೈಲಿ ಮತ್ತು ಹುರುಳು ಎರಡರಲ್ಲಿಯೂ, ತೀರಾ ಅಮೂರ್ತವಾಗಿದೆ ಮತ್ತು ವಾಸ್ತವವಾದ ಮಾನವ ಅನುಭವದಿಂದ ದೂರದಲ್ಲಿರುವಂಥದ್ದಾಗಿದೆ ಎಂದೂ ಸಹ ಅನೇಕ ಅಸ್ತಿತ್ವವಾದಿಗಳು ಪರಿಗಣಿಸುತ್ತಾರೆ.[೧೪][೧೫] ಮಾನವನ ಪ್ರತ್ಯೇಕ ಅಸ್ತಿತ್ವ ಹಾಗೂ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಪುನಃ ದೃಢಪಡಿಸುವಲ್ಲಿನ ಒಂದು ಮಾರ್ಗವಾಗಿ, ಅಸ್ತಿತ್ವವಾದವು ಜಾಗತಿಕ ಸಮರದ-ನಂತರದ ವರ್ಷಗಳಲ್ಲಿ ಸಂಪ್ರದಾಯಾನುಸಾರಿಯಾಗಿ ಮಾರ್ಪಟ್ಟಿತು.[೧೬]

ಪರಿವಿಡಿ

Other Languages
Afrikaans: Eksistensialisme
Alemannisch: Existenzialismus
አማርኛ: ኅልውነት
العربية: وجودية
مصرى: وجوديه
asturianu: Esistencialismu
azərbaycanca: Ekzistensializm
башҡортса: Экзистенциализм
беларуская: Экзістэнцыялізм
беларуская (тарашкевіца)‎: Экзыстэнцыялізм
čeština: Existencialismus
Cymraeg: Dirfodaeth
Zazaki: Estbiyayenı
Ελληνικά: Υπαρξισμός
Esperanto: Ekzistadismo
español: Existencialismo
français: Existentialisme
Gaeilge: Eiseachas
贛語: 存在主義
Avañe'ẽ: Jeikogua reko
interlingua: Existentialismo
Bahasa Indonesia: Eksistensialisme
íslenska: Tilvistarstefna
italiano: Esistenzialismo
日本語: 実存主義
la .lojban.: zatsi'o
한국어: 실존주의
Bahasa Melayu: Eksistensialisme
Nederlands: Existentialisme
norsk nynorsk: Eksistensialisme
ਪੰਜਾਬੀ: ਅਸਤਿਤਵਵਾਦ
português: Existencialismo
română: Existențialism
srpskohrvatski / српскохрватски: Egzistencijalizam
Simple English: Existentialism
slovenčina: Existencializmus
slovenščina: Eksistencializem
српски / srpski: Egzistencijalizam
Türkçe: Varoluşçuluk
українська: Екзистенціалізм
اردو: وجودیت
oʻzbekcha/ўзбекча: Ekzistensializm
Tiếng Việt: Chủ nghĩa hiện sinh
中文: 存在主义
Bân-lâm-gú: Chûn-chāi-chú-gī
粵語: 存在主義