ಅರ್ನಾಲ್ಡ್ ಶ್ವಾರ್ಜಿನೆಗ್ಗರ್

ಅರ್ನಾಲ್ಡ್ ಶ್ವಾರ್ಜಿನೆಗ್ಗರ್
ArnoldSchwarzeneggerSDJun10.jpg
Schwarzenegger in June 2010

38th Governor of California
ಹಾಲಿ
ಅಧಿಕಾರ ಸ್ವೀಕಾರ 
November ೧೭, ೨೦೦೩
LieutenantCruz Bustamante (೨೦೦೩–೨೦೦೭)
John Garamendi (೨೦೦೭–೨೦೦೯)
ಪೂರ್ವಾಧಿಕಾರಿGray Davis

Chairman of the President's Council on Physical Fitness and Sports
ಅಧಿಕಾರ ಅವಧಿ
೧೯೯೦ – January ೨೦, ೧೯೯೩
ವೈಯುಕ್ತಿಕ ಮಾಹಿತಿ
ಜನನ(1947-07-30) ಜುಲೈ ೩೦, ೧೯೪೭(ವಯಸ್ಸು ೭೦)
Thal, Styria, Austria
ರಾಷ್ಟ್ರೀಯತೆAustrian/American
ರಾಜಕೀಯ ಪಕ್ಷRepublican
ಸಂಗಾತಿ(ಗಳು)Maria Shriver (೧೯೮೬–present)
ಮಕ್ಕಳುKatherine (born 1989)
Christina (born 1991)
Patrick (born 1993)
Christopher (born 1997)
ವಾಸಸ್ಥಾನBrentwood, Los Angeles, California
ಅಭ್ಯಸಿಸಿದ ವಿದ್ಯಾಪೀಠUniversity of Wisconsin–Superior
ವೃತ್ತಿರಾಜಕಾರಣಿ
ಉದ್ಯೋಗದೇಹಧಾಡ್ಯಪಟು, ನಟ, ಉದ್ಯಮಿ, ರಾಜಕಾರಣಿ
ಧರ್ಮRoman Catholic
ಸಹಿ
ಜಾಲತಾಣgov.ca.gov
schwarzenegger.com
ಮಿಲಿಟರಿ ಸೇವೆ
ಸೇವೆ/ಶಾಖೆAustrian Army
ವರ್ಷಗಳ ಸೇವೆ೧೯೬೫

ಅರ್ನಾಲ್ಡ್ ಅಲೋಯಿಸ್ ಶ್ವಾರ್ಜಿನೆಗ್ಗರ್ (English pronunciation: /ˈʃwɔrtsənɛɡər/German: [ˈaɐnɔlt ˈaloʏs ˈʃvaɐtsənˌʔɛɡɐ]ಜುಲೈ ೩೦, ೧೯೪೭ರಲ್ಲಿ ಜನನ); ಆಸ್ಟ್ರಿಯಾ ಅಮೇರಿಕದ ದೇಹಧಾಡ್ಯಪಟು, ನಟ, ಉದ್ಯಮಿ ಮತ್ತು ರಾಜಕಾರಣಿ ಆಗಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ೩೮ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಲಿದ್ದಾರೆ. ತನ್ನ ಹದಿನೈದರ ಹರಯದಿಂದಲೇ ಶ್ವಾರ್ಜಿನೆಗ್ಗರ್ ದೈಹಿಕ ಕಸರತ್ತುಗಳನ್ನು ಆರಂಭಿಸಿದರು. ೨೨ನೇ ವಯಸ್ಸಿನಲ್ಲಿಯೇ ಮಿ.ಯುನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು ಮತ್ತು ಮಿ.ಒಲಂಪಿಯಾ ಸ್ಪರ್ಧೆಯಲ್ಲಿ ಸತತವಾಗಿ ಏಳು ಬಾರಿ ವಿಜೇತರಾದರು. ನಿವೃತ್ತಿಯನ್ನು ಘೋಷಿಸಿ ಬಹಳಷ್ಟು ವರ್ಷಗಳಾಗಿದ್ದರೂ ದೇಹಧಾಡ್ಯ ಕ್ರೀಡಾಕ್ಷೇತ್ರದಲ್ಲಿ ಶ್ವಾರ್ಜಿನೆಗ್ಗರ್ ಮುಖ ಚಿರಪರಿಚಿತವಾಗಿಯೇ ಉಳಿದಿದೆ. ಈ ಕ್ರೀಡೆಯ ಬಗ್ಗೆ ಶ್ವಾರ್ಜಿನೆಗ್ಗರ್ ಸಾಕಷ್ಟು ಪುಸ್ತಕಗಳನ್ನು ಮತ್ತು ಅನೇಕ ಲೇಖನಗಳನ್ನು ಸಹ ಬರೆದಿದ್ದಾರೆ. ಶ್ವಾರ್ಜಿನೆಗ್ಗರ್ ಹಾಲಿವುಡ್‌ನ ಸಾಹಸಮಯ ಚಿತ್ರಗಳಿಂದ ವಿಶ್ವವಿಖ್ಯಾತಿಯನ್ನು ಪಡೆದರು. ಕ್ಯಾನನ್ ದಿ ಬಾರ್ಬೇರಿಯನ್ ಮತ್ತು ದಿ ಟರ್ಮಿನೇಟರ್ ಗಳಂತಹ ಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳು ಇವರಿಗೆ ಜನಮನ್ನಣೆಯನ್ನು ದೊರೆಕಿಸಿಕೊಟ್ಟವು. ಅವರು ದೇಹಧಾಡ್ಯ ಬೆಳೆಸಿಕೊಳ್ಳುವ ದಿನಗಳಲ್ಲಿ ದಿ "ಆಸ್ಟ್ರಿಯನ್ ಓಕ್" ಮತ್ತು ದಿ "ಸ್ಟೆರಿಯನ್ ಓಕ್" ಎಂಬ ಅಡ್ಡಹೆಸರನ್ನು ಹೊಂದಿದ್ದರು. ನಟನಾಗಿ ವೃತ್ತಿಜೀವನ ಮಾಡುವಾಗ "ಅರ್ನಾಲ್ಡ್ ಸ್ಟ್ರಾಂಗ್" ಮತ್ತು "ಅರೈನ್" ಎಂದು ಕರೆಯಲ್ಪಡುತ್ತಿದ್ದರು. ತೀರಾ ಇತ್ತೀಚೆಗೆ "ಗವರ್ನೇಟರ್" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದರು (ಗವರ್ನರ್ ಮತ್ತು ಅವರ ಚಲನಚಿತ್ರದ ಪಾತ್ರವಾದ ದಿ ಟರ್ಮಿನೇಟರ್ ಇವೆರಡರ ಮಿಶ್ರಣವಾದ ಹೆಸರು).[೧] ಗ್ಯಾರಿ ಡೇವಿಸ್ ಅವರ ಗವರ್ನರ್ ಹುದ್ದೆಗಾಗಿ ನಡೆದ ವಿಶೇಷ ಮರು ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಸದಸ್ಯನಾಗಿ ಈತ ೨೦೦೩ರ ಅಕ್ಟೋಬರ್೭ ರಂದು ಆಯ್ಕೆಗೊಂಡರು. ಡೇವಿಸ್‌ರವರ ಆಡಳಿತದ ಅವಧಿಯಲ್ಲಿ ಉಳಿದಿದ್ದ ಕಾಲವನ್ನು ಪೂರ್ಣಗೊಳಿಸಲು, ಶ್ವಾರ್ಜಿನೆಗ್ಗರ್ ೨೦೦೩ರ ನವೆಂಬರ್ ೧೭ರಂದು ಪ್ರಮಾಣವಚನವನ್ನು ಸ್ವೀಕರಿಸಿದರು. ಶ್ವಾರ್ಜಿನೆಗ್ಗರ್ ಅವರು ನವೆಂಬರ್ ೧೭, ೨೦೦೬ರಲ್ಲಿ ನಡೆದ ಕ್ಯಾಲಿಪೋರ್ನಿಯ ಸರ್ಕಾರದ ೨೦೦೬ ಚುನಾವಣೆಯಲ್ಲಿ ಮರು ಆಯ್ಕೆಗೊಂಡು ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆಯನ್ನು ಸಲ್ಲಿಸಿದರು. ಈ ಚುನಾವಣೆಯಲ್ಲಿ ಅವರು ಕ್ಯಾಲಿಪೋರ್ನಿಯ ರಾಜ್ಯದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದ ಡೆಮಾಕ್ರಾಟ್ ಪಕ್ಷದ ಫಿಲ್ ಅಂಜೆಲೈಡ್ಸ್‌ರನ್ನು ಸೋಲಿಸಿಸರು. ಶ್ವಾರ್ಜಿನೆಗ್ಗರ್ ೨೦೦೭ರ ಜನವರಿ ೫ರಂದು ಎರಡನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು.[೨] ವಿಶ್ವವನ್ನು ರೂಪಿಸಲು ಸಹಾಯ ಮಾಡುತ್ತಿರುವವರು ಎಂದು ಟೈಮ್ ಪತ್ರಿಕೆ ಪ್ರಕಟಿಸಿದ ೨೦೦೪ ಮತ್ತು ೨೦೦೭ರಲ್ಲಿ ಪ್ರಕಟಿಸಿದ ಟೈಮ್ ೧೦೦ ಪಟ್ಟಿಯಲ್ಲಿ ಇವರ ಹೆಸರು ಸಹ ಸೇರ್ಪಡೆಗೊಂಡಿತ್ತು.[೩][೪] ಶ್ವಾರ್ಜಿನೆಗ್ಗರ್ ಮರಿಯಾ ಶ್ರೈವರ್ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗಳಿಗೆ ನಾಲ್ಕು ಮಕ್ಕಳಿದ್ದಾರೆ.

ಬಾಲ್ಯ

ಶ್ವಾರ್ಜಿನೆಗ್ಗರ್ ಆಸ್ಟ್ರಿಯಾ ದೇಶದ ತಹಾಲ್‌ ಎಂಬ ಗ್ರಾಮದಲ್ಲಿ ಜನಿಸಿದರು. ಈ ಗ್ರಾಮವು ಸ್ಟ್ಯರಿಯಾದ ರಾಜಧಾನಿಯಾದ ಗ್ರಾಜ್ ಪ್ರಾಂತ್ಯದ ಗಡಿಪ್ರದೇಶದಲ್ಲಿದೆ. ಅವರಿಗೆ ಅರ್ನಾಲ್ಡ್ ಅಲೋಯಿಸ್ ಶ್ವಾರ್ಜಿನೆಗ್ಗರ್ ಎಂದು ಹೆಸರನ್ನಿಡಲಾಯಿತು.[೫] ಸ್ಥಳಿಯ ಪೋಲೀಸ್ ಮುಖ್ಯಸ್ಥನಾದ ಗುಸ್ತಾವ್ ಶ್ವಾರ್ಜಿನೆಗ್ಗರ್ (೧೯೦೭ – ೧೯೭೨) ಮತ್ತು ಆತನ ಹೆಂಡತಿಯಾದ ಅರೀಲಿಯಾ ಜಾರ್ಡನಿಯರು (೧೯೨೨ – ೧೯೯೮) ಅರ್ನಾಲ್ಡ್‌ನ ಪೋಷಕರು. ಇವರಿಬ್ಬರು ೧೯೪೫ರ ಅಕ್ಟೋಬರ್ ೨೦–ರಂದು ಮದುವೆಯಾದರು. ಆಗ ಗುಸ್ತಾವ್ ೩೮ ವರ್ಷ ವಯಸ್ಸಿನವನಾಗಿದ್ದು ಮತ್ತು ಅರುಲಿಯಾ ೨೩ನೇ ವಯಸ್ಸಿನ ವಿಧವೆಯಾಗಿದ್ದು ಮೈನ್‌ಹಾರ್ಡ್ ಎಂಬ ಮಗನನ್ನು ಹೊಂದಿದ್ದಳು. ಶ್ವಾರ್ಜಿನೆಗ್ಗರ್ ಪ್ರಕಾರ ಈತನ ತಂದೆ-ತಾಯಿಗಳಿಬ್ಬರು ತುಂಬಾ ಶಿಸ್ತಿನವರಾಗಿದ್ದರು. "ಆಸ್ಟ್ರಿಯಾದಲ್ಲಿನ ಜೀವನ ನಮಗೆ ಅದೊಂದು ವಿಭಿನ್ನ ಪ್ರಪಂಚವಾಗಿತ್ತು. ನಾವು ಯಾವುದೇ ತಪ್ಪನ್ನು ಮಾಡಿದರೆ ಅಥವಾ ನಮ್ಮ ತಂದೆ-ತಾಯಿಯ ಮಾತನ್ನು ಮೀರಿದರೆ, ಖಂಡಿತಾ ಏಟು ಬೀಳುತ್ತಿತ್ತು."[೬] ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಸೇವೆ ಸಲ್ಲಿಸುತ್ತಲಿದ್ದ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದು ದೊಡ್ಡವನಾದ.[೭] ತನ್ನ ಎರಡು ಮಕ್ಕಳ ಪೈಕಿ ಹಿರಿಯ ಮಗನಾದ ಮೈನ್‌ಹಾರ್ಡ್‌ನ ಮೇಲೆಯೇ ಗುಸ್ತಾವ್‌ಗೆ ಹೆಚ್ಚು ಒಲವಿತ್ತು.[೮] ಅರ್ನಾಲ್ಡ್ ತನ್ನ ಮಗನಲ್ಲ ಎಂಬ ತಳಪಾಯವಿಲ್ಲದ ತನ್ನ ಸಂದೇಹದಿಂದಾಗಿ ಅವನ ಮಕ್ಕಳ ಬಗೆಗಿನ ಈ ಪಕ್ಷಪಾತವು "ದೃಢವಾಗಿ ವ್ಯಕ್ತವಾಗುತಿತ್ತು".[೯] "ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅಥವಾ ಅದನ್ನು ಕೇಳುವ ತಾಳ್ಮೆಯೂ ಸಹ ನನ್ನ ತಂದೆಗೆ ಇರಲಿಲ್ಲ.... ನಮ್ಮಿಬ್ಬರ ಮಧ್ಯೆ ಗೋಡೆ ಇದೆ; ನಿಜವಾದ ಗೋಡೆ ಇದೆ," ಎಂದು ಶ್ವಾರ್ಜಿನೆಗ್ಗರ್ ತನ್ನ ತಂದೆಯ ಬಗ್ಗೆ ಹೇಳಿಕೊಂಡಿದ್ದರು.[೭] ಶ್ವಾರ್ಜಿನೆಗ್ಗರ್ ತನ್ನ ತಾಯಿಯ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಮತ್ತು ಆಕೆ ಸಾಯುವವರೆಗೂ ಆಕೆಯ ಜೊತೆ ಸಂಪರ್ಕದಲ್ಲಿದ್ದ.[೧೦] ನಂತರದ ದಿನಗಳಲ್ಲಿ ಶ್ವಾರ್ಜಿನೆಗ್ಗರ್ ತನ್ನ ತಂದೆಯ ಯುದ್ಧಕಾಲದ ಸಾಧನೆಯ ಬಗ್ಗೆ ಸಂಶೋಧಿಸುವ ಕಾರ್ಯವನ್ನು ಸೈಮನ್ ವೈಸೆನ್‌ಥಾಲ್ ಸೆಂಟರ್ ಗೆ ವಹಿಸಿದ. ಈ ಸಂಶೋಧನೆಯ ಪ್ರಕಾರ ಗುಸ್ತಾವ್ ನಾಜಿ ಪಕ್ಷದಲ್ಲಿ ಮತ್ತು ಎಸ್‌ಎನಲ್ಲಿ ಸದಸ್ಯತ್ವ ಹೊಂದಿದ್ದನಾದರೂ ಆ ಪಕ್ಷಗಳ ಯಾವುದೇ ಘೋರಕೃತ್ಯದಲ್ಲಿ ಭಾಗಿಯಾದ ಕುರಿತು ಯಾವುದೇ ಸಾಕ್ಷಿಗಳು ದೊರೆಯಲಿಲ್ಲ.[೮] ಶಾಲೆಯಲ್ಲಿ ಶ್ವಾರ್ಜಿನೆಗ್ಗರ್‌ನ ಬುದ್ಧಿವಂತಿಕೆ ಸಾಮಾನ್ಯವಾಗಿದ್ದರೂ, ತರಗತಿಯಿಂದ ಹೊರಗಡೆ ಈತನ ನಡುವಳಿಕೆಯು "ಉತ್ಸಾಹದಾಯಕವಾದುದಾಗಿದ್ದು, ಆತ ವಿನೋದ ಪ್ರವೃತ್ತಿಯವ ಮತ್ತು ಲವಲವಿಕೆಯಿಂದ ಕೊಡಿದವನಾಗಿರುತ್ತಿದ್ದ".[೭] ಅವರ ಕುಟುಂಬದಲ್ಲಿ ಹಣದ ಸಮಸ್ಯೆಯಿತ್ತು. ಶ್ವಾರ್ಜಿನೆಗ್ಗರ್ ತಮ್ಮ ಮನೆಗೆ ರೆಫ್ರಿಜಿರೇಟರ್‌ನ್ನು ತಂದದ್ದೇ ತಮ್ಮ ಯೌವನದ ದಿನಗಳ ಪ್ರಮುಖಾಂಶಗಳಲ್ಲಿ ಒಂದು ಎಂದು ನೆನಪು ಮಾಡಿಕೊಳ್ಳುತ್ತಾರೆ.[೯] ಶ್ವಾರ್ಜಿನೆಗ್ಗರ್ ಹುಡುಗನಾಗಿದ್ದಾಗ, ಹೆಚ್ಚಾಗಿ ತಮ್ಮ ತಂದೆಯ ಪ್ರಭಾವಕ್ಕೆ ಒಳಪಟ್ಟು ಸಾಕಷ್ಟು ಆಟಗಳನ್ನು ಆಡಿದ್ದರು.[೭] ಇವರ ಫುಟ್‌ಬಾಲ್ ತರಬೇತುದಾರರು ಇವರ ತಂಡವನ್ನು ಸ್ಥಳಿಯ ಜಿಮ್‌ಗೆ ಕರೆದುಕೊಂಡು ಹೋದಾಗ, ಅಂದರೆ ೧೯೬೦ರಲ್ಲಿ ಇವರು ಮೊದಲ ಬಾರಿಗೆ ಬಾರ್‌ಬೆಲ್‌ನ್ನು ಎತ್ತಿದ್ದರು.[೫] ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಶ್ವಾರ್ಜಿನೆಗ್ಗರ್ ಫುಟ್‌ಬಾಲ್‌ನ ಬದಲಾಗಿ ದೇಹಧಾಡ್ಯವನ್ನೇ ತನ್ನ ವೃತ್ತಿಯನ್ನಾಗಿ ಆಯ್ದುಕೊಂಡರು.[೧೧][೧೨] ಶ್ವಾರ್ಜಿನೆಗ್ಗರ್ರನ್ನು ನೀವು ನಿಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ವೈಟ್‌ಲಿಫ್ಟಿಂಗ್‌ನ್ನು ಆರಂಭಿಸಿದಿರಾ ಎಂದು ಪ್ರಶ್ನೆಯನ್ನು ಕೇಳಿದಾಗ ಅವರು: "ವೈಟ್‌ಲಿಫ್ಟಿಂಗ್‌ ಅನ್ನು ನಾನು ನಿಜವಾಗಿಯೂ ಹದಿನೈದನೇ ವಯಸ್ಸಿನಲ್ಲಿದ್ದಾಗ ಆರಂಭಿಸಿದೆ, ಆದರೆ ಅದಕ್ಕೂ ಮುಂಚಿತವಾಗಿ ನಾನು ಫುಟ್‌ಬಾಲ್‌ನಂತಹ ಇತರೆ ಆಟಗಳನ್ನು ಆಡುವಾಗ ವೈಟ್‌ಲಿಫ್ಟಿಂಗ್‌ನ್ನು ಮಾಡುತ್ತಿದ್ದೆ. ಅಂತಹ ಸಂದರ್ಭದಲ್ಲಿ ನನಗೆ ನನ್ನ ದೇಹ ಸದೃಢವಾಗುತ್ತಲಿದೆ, ನನ್ನ ಶಕ್ತಿ-ಸಾಮರ್ಥ್ಯ ಹೆಚ್ಚುತ್ತಿದೆ ಎನ್ನುವ ಭಾವನೆ ಮೂಡುತ್ತಿತ್ತು. ಹಾಗಾಗಿ ನಾನು ಜಿಮ್‌ಗೆ ತೆರಳಲು ಪ್ರಾರಂಭಿಸಿದೆ ಮತ್ತು ಒಲಂಪಿಕ್‌ನಲ್ಲಿ ಭಾಗವಾಹಿಸುವ ಸಲುವಾಗಿ ಭಾರ ಎತ್ತುವುದನ್ನು ಆರಂಭಿಸಿದೆ" ಎಂದು ಪ್ರತಿಕ್ರಿಯಿಸುತ್ತಾರೆ.[೬] ಆದರೂ, ಅವರ ಅಧಿಕೃತ ಅಂತರ್ಜಾಲ ತಾಣದಲ್ಲಿ ಅವರ ಜೀವನ ಚರಿತ್ರೆಯಲ್ಲಿ ಈ ರೀತಿಯ ಉಲ್ಲೇಖವಿದೆ: "ಡ್ಯಾನ್ ಫಾರ್‌ಮರ್ ಎನ್ನುವವನ ಜೊತೆಗೂಡಿ ತನ್ನ ೧೪ನೇ ವಯಸ್ಸಿನಲ್ಲಿ ವೈಟ್‌ಲಿಫ್ಟಿಂಗ್ ಮಾಡುವ ತರಬೇತಿಯ ಯೋಜನೆಯನ್ನು ಆಳವಾಗಿ ಆತ ಪ್ರಾರಂಭಿಸಿರು. ತನ್ನ ೧೫ನೇ ವಯಸ್ಸಿನಲ್ಲಿ ಮನಃಶಾಸ್ತ್ರವನ್ನು ಅಭ್ಯಾಸಮಾಡಿದರು(ದೇಹದ ಮೇಲೆ ಮನಸ್ಸು ಬೀರುವ ಪ್ರಭಾವ ಎಷ್ಟು ಶಕ್ತಿಶಾಲಿಯಾದದ್ದು ಎಂಬುದರ ಬಗ್ಗೆ ಹೆಚ್ಚಾಗಿ ತಿಳಿಯಲು) ಮತ್ತು ೧೭ನೇ ವಯಸ್ಸಿನಲ್ಲಿ ಅಧಿಕೃತವಾಗಿ ತನ್ನ ಕ್ರೀಡಾ ವೃತ್ತಿಜೀವನವನ್ನು ಆರಂಭಿಸಿದರು.[೧೩] ೨೦೦೧ರಲ್ಲಿ ಭಾಷಣ ಮಾಡುವಾಗ ಒಮ್ಮೆ "ನಾನು ೧೪ನೇ ವಯಸ್ಸಿನಲ್ಲಿದ್ದಾಗ ನನ್ನ ಸ್ವಂತ ಯೋಜನೆಯನ್ನು ರೂಪಿಸಿಕೊಂಡೆ" ನನ್ನ ತಂದೆಗೆ ನಾನು ಅವನಂತೆ ಪೊಲೀಸ್‌ ಅಧಿಕಾರಿಯಾಗಬೇಕು ಎಂಬ ಆಸೆಯಿದ್ದಿತು. ನನ್ನ ತಾಯಿ ನಾನು ವ್ಯಾಪಾರದ ಶಾಲೆಗೆ ಹೋಗಬೇಕು ಎಂದು ಬಯಸಿದ್ದರು" [೧೪] ಎಂದು ಹೇಳಿದ್ದರು. ಶ್ವಾರ್ಜಿನೆಗ್ಗರ್ ಗ್ರಾಜ್‌ನಲ್ಲಿನ ಜಿಮ್‌ಗೆ ಭೇಟಿ ನೀಡುತ್ತಿದ್ದರು, ಮತ್ತು ಸ್ಥಳಿಯ ಚಲನಚಿತ್ರಮಂದಿರಗಳಿಗೆ ರೆಜ್ ಪಾರ್ಕ್, ಸ್ಟಿವ್ ರೀವ್ಸ್ ಮತ್ತು ಜಾನಿ ವೈಸ್‌ಮ್ಯುಲ್ಲರ್‌ರಂತಹ ದೇಹಧಾಡ್ಯ ಮಾದರಿ ಕ್ರೀಡಾಪಟುಗಳನ್ನು ನೋಡುವುದಕ್ಕಾಗಿಯೇ ಹೋಗುತ್ತಿದ್ದರು. "ರೆಜ್ ಪಾರ್ಕ್ ಮತ್ತು ಸ್ಟಿವ್ ರೀವಿಸ್ರಂತಹ ವ್ಯಕ್ತಿಗಳಿಂದ ನಾನು ಸ್ಪೂರ್ತಿಗೊಂಡೆ." [೬] ೨೦೦೦ರಲ್ಲಿ ರೀವಿಸ್ ನಿಧನರಾದಾಗ ಶ್ವಾರ್ಜಿನೆಗ್ಗರ್: "ನಾನು ಯುವಕನಾಗಿದ್ದಾಗಿನಿಂದಲೂ ಸ್ಟಿವ್ ರೀವಿಸ್‌ರನ್ನು ನೋಡುತ್ತಲೇ ಬೆಳೆದೆ" ಎಂದು ಅವರನ್ನು ಪ್ರೀತಿಯಿಂದ ನೆನಸಿಕೊಂಡರು. ಅವರ ಗುರುತರ ಜೊತೆಯು ನನಗೆ ಯಾವುದು ಸಾಧ್ಯವೋ ಅದನ್ನು ಗುರುತಿಸಲು ಸಹಾಯ ಮಾಡಿತು, ನನ್ನ ಸುತ್ತ ಮುತ್ತಲಿರುವ ಜನರು ನನ್ನ ಕನಸನ್ನು ಗುರುತಿಸಲಿಲ್ಲ... ಸ್ಟಿವ್ ರೀವಿಸ್ ಅದೃಷ್ಟದ ಬೆಂಬಲದಿಂದಾಗಿ ನಾನು ಮಾಡಿರುವ ಎಲ್ಲಾ ಸಾಧನೆಗಳ ಭಾಗವಾಗಿದ್ದಾರೆ. [೧೫] ೧೯೬೧ರಲ್ಲಿ ಶ್ವಾರ್ಜಿನೆಗ್ಗರ್ ಮಿ.ಆಸ್ಟ್ರಿಯಾ ಆಗಿದ್ದ ಕುರ್ಟ್ ಮರ್ನ್ಯಲ್ ಅವರನ್ನು ಭೇಟಿ ಮಾಡಿದ, ಅವರು ಅವನಿಗೆ ಗ್ರಾಜ್‌ನಲ್ಲಿರುವ ಜಿಮ್‌ನಲ್ಲಿ ತರಬೇತಿಯನ್ನು ನೀಡುತ್ತೇನೆ ಎಂದು ಅವನನ್ನು ಆಹ್ವಾನಿಸಿದ್ದರು.[೫] ತನ್ನ ಯವ್ವನದಲ್ಲಿ ಆತ ಎಂತಹ ಸಮರ್ಪಣಾ ಭಾವದವನೆಂದರೆ ವಾರಾಂತ್ಯಗಳಲ್ಲಿ ಮುಚ್ಚಿರುತ್ತಿದ್ದ ಸ್ಥಳಿಯ ಜಿಮ್‌ಗಳಿಗೆ ಹೋಗಿ ದೈಹಿಕ ತಾಲೀಮು ಮಾಡುತ್ತಿದ್ದ." ತಾಲೀಮು ಮಾಡುವುದರಿಂದ ನಾನು ತಪ್ಪಿಸಿಕೊಂಡರೆ ಅದು ನನ್ನನ್ನು ಅಸ್ವಸ್ಥನನ್ನಾಗಿ ಮಾಡುತ್ತಿತ್ತು... ನನಗೆ ತಿಳಿದಿತ್ತು, ನಾನೇನಾದರೂ ತಾಲೀಮು ಮಾಡುವುದನ್ನು ತಪ್ಪಿಸಿದರೆ ಕನ್ನಡಿಯಲ್ಲಿ ನನ್ನ ಮುಖವನ್ನು ನಾನೇ ಮರುದಿನ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ." [೬] ಒಬ್ಬ ಹುಡುಗನಾಗಿ ಮೊದಲ ಬಾರಿಗೆ ಸಿನಿಮಾ ನೋಡಿದ್ದು ಯಾವ ರೀತಿಯ ಅನುಭವನ್ನು ನೀಡಿತು ಎಂದು ಕೇಳಿದ ಪ್ರಶ್ನೆಗೆ ಶ್ವಾರ್ಜಿನೆಗ್ಗರ್ "ನಾನು ತುಂಬಾ ಚಿಕ್ಕವನಾಗಿದ್ದೆ, ಆದರೂ ನನಗೆ ನೆನಪಿದೆ ನನ್ನ ತಂದೆ ಅವರ ಜೊತೆ ನನ್ನನ್ನು ಆಸ್ಟ್ರಿಯಾದ ಚಲನಚಿತ್ರಮಂದಿರಗಳಲ್ಲಿ ಹೊಸ ಸೀರಿಯಲ್‌ಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು" ಎಂದು ಪ್ರತಿಕ್ರಿಯಿಸಿದರು. ನಾನು ನೋಡಿದ ನಿಜವಾದ ಮೊದಲ ಚಲನಚಿತ್ರವೆಂದರೆ, ನನಗೆ ಸರಿಯಾಗಿ ನೆನಪಿಲ್ಲ, ಜಾನ್ ವೈನ್‌ನ ಸಿನಿಮಾ ಇರಬಹುದು." [೬] ೧೯೭೧ರಲ್ಲಿ ಶ್ವಾರ್ಜಿನೆಗ್ಗರ್‌ನ ಸಹೋದರ ಮೈನ್‌ಹಾರ್ಡ್‌ ಕಾರು ಅಪಘಾತದಲ್ಲಿ ಮರಣ ಹೊಂದಿದ.[೫] ಆ ಸಂದರ್ಭದಲ್ಲಿ ಮೈನ್‌ಹಾರ್ಡ್ ಕುಡಿದಿದ್ದ ಮತ್ತು ಅಫಘಾತದಲ್ಲಿ ತಕ್ಷಣ ಮೃತಪಟ್ಟ. ಶ್ವಾರ್ಜಿನೆಗ್ಗರ್ ಅಣ್ಣನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ.[೯] ಮೈನ್‌ಹಾರ್ಡ್, ಎರಿಕಾ ನ್ಯಾಪ್ ಎನ್ನುವವಳನ್ನು ಮದುವೆಯಾಗಿದ್ದ ಮತ್ತು ಅವರಿಗೆ ಪ್ಯಾಟ್ರಿಕ್ ಎನ್ನುವ ಮೂರು ವರ್ಷದ ಮಗನಿದ್ದ. ಶ್ವಾರ್ಜಿನೆಗ್ಗರ್ ಪ್ಯಾಟ್ರಿಕ್‌ನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ನೀಡುತ್ತಿದ್ದ ಮತ್ತು ಆತ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಲು ಸಹಾಯಮಾಡಿದ.[೯] ನಂತರದ ವರ್ಷದಲ್ಲಿ ಗುಸ್ತಾವ್ ಪಾರ್ಶ್ವವಾಯುವು ಬಂದು ಮರಣಹೊಂದಿದ.[೫] ಪಂಪಿಂಗ್‌ ಐರನ್‌ ಸಿನೆಮಾದಲ್ಲಿ ಶ್ವಾರ್ಜ್‌ನೆಗ್ಗರ್ ತಾನು ದೇಹದಾರ್ಡ್ಯತೆಯ ಸ್ಪರ್ಧೆಗೆ ಭಾಗವಹಿಸಲು ತಾಲೀಮು ನಡೆಸುತ್ತಿದ್ದರಿಂದ ತನ್ನ ತಂದೆಯ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾನೆ. ಸಿನೆಮಾ ಬಿಡುಗಡೆಯಾದ ನಂತರದಲ್ಲಿ ಅವನು ಮತ್ತು ಅವನ ಸಿನೆಮಾ ನಿರ್ದೇಶಕ ಇಬ್ಬರೂ ತಾವು ಪಂಪಿಂಗ್‌ ಐರನ್‌ ಸಿನೆಮಾದಲ್ಲಿ ಶ್ವಾರ್ಜ್‌ನೆಗ್ಗರ್‌ನ ಜೀವನವನ್ನು ಆಧಾರವಾಗಿರಿಸಿಕೊಳ್ಳದೆ ಬೇರೊಬ್ಬ ದೇಹದಾರ್ಡ್ಯ ಪಟುವಿನ ಜೀವನವನ್ನು ಆಧಾರವಾಗಿರಿಸಿಕೊಂಡು ಅದನ್ನು ನಿರ್ಮಿಸಿದ್ದೆವು. ಒಬ್ಬ ವ್ಯಕ್ತಿ ತನ್ನ ಕ್ರೀಡೆಯಲ್ಲಿ ಎಷ್ಟು ಆಳವಾಗಿ ಹೋಗಬಹುದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಹಾಗೂ ಈ ಸಿನೆಮಾದಲ್ಲಿ ವಿವಾದವನ್ನು ಉದ್ದೀಪನಗೊಳಿಸುವ ಉದ್ದೇಶದಿಂದಾಗಿ ಶ್ವಾರ್ಜ್‌ನೆಗ್ಗರ್ ಪಾತ್ರವನ್ನು ಹೆಚ್ಚು ತಟಸ್ಥ ಮತ್ತು ಯಂತ್ರದಂತೆ ನಿರ್ಮಿಸಲಾಗಿತ್ತು.[೧೬] ಆತನ ಮೊದಲ ನಿಜವಾದ ಗೆಳತಿ ಬಾರ್ಬರಾ ಬೇಕರ್ ಪ್ರಕಾರ, ಆತ ಅವಳಿಗೆ ತನ್ನ ತಂದೆಯ ಸಾವಿನ ಕುರಿತು ಯಾವುದೇ ಭಾವುಕತೆಯಿಲ್ಲದೇ ಹೇಳಿಕೊಂಡ ಮತ್ತು ಆತ ಯಾವತ್ತೂ ತನ್ನ ಅಣ್ಣನ ಕುರಿತು ಮಾತನಾಡಲೇ ಇಲ್ಲ[೧೭]. ಕಾಲ ಕಳೆದಂತೆ, ಆತ ತನ್ನ ತಂದೆಯ ಅಂತ್ಯಸಂಸ್ಕಾರಕ್ಕೆ ಯಾಕೆ ಭೇಟಿ ನೀಡಲಿಲ್ಲ ಎಂಬ ಕುರಿತು ಮೂರು ರೀತಿಯಾದ ಕಾರಣಗಳನ್ನು ನೀಡಿದ್ದಾನೆ.[೯] ಫಾರ್ಚೂನ್ ನಿಯತಕಾಲಿಕೆಗೆ ೨೦೦೪ ರಲ್ಲಿ ನೀಡಿದ ಸಂದರ್ಶನದಲ್ಲಿ ಶ್ವಾರ್ಜ್‌ನೆಗ್ಗರ್ ತನ್ನ ತಂದೆಯಿಂದ "ಈಗ ಬಾಲ ಹಿಂಸೆ ಎಂದು ಯಾವುದನ್ನು ಕರೆಯಬಹುದೋ ಅಂತಹುದನ್ನು" ಅನುಭವಿಸಿದ್ದೇನೆ ಎಂದು ಹೇಳಿದ್ದ:[೧೮][೧೯]

My hair was pulled. I was hit with belts. So was the kid next door. It was just the way it was. Many of the children I've seen were broken by their parents, which was the German-Austrian mentality. They didn't want to create an individual. It was all about conforming. I was one who did not conform, and whose will could not be broken. Therefore, I became a rebel. Every time I got hit, and every time someone said, 'you can't do this,' I said, 'this is not going to be for much longer, because I'm going to move out of here. I want to be rich. I want to be somebody.'

ಆರಂಭಿಕ ಪ್ರೌಢಾವಸ್ಥೆ

ಶ್ವಾರ್ಜಿನೆಗ್ಗರ್ ಅವರು ವರ್ಷದ ೧೮ ವರ್ಷದ ಎಲ್ಲಾ ಆಸ್ಟ್ರೇಲಿಯನ್ ಪುರುಷರು ಅಗತ್ಯವಾಗಿ ಸಲ್ಲಿಸಬೇಕಾದ ಒಂದು ವರ್ಷದ ಸೇವೆಯನ್ನು ಸಲ್ಲಿಸಲು ೧೯೬೫ರಲ್ಲಿ ಆಸ್ಟ್ರೇಲಿಯನ್‌ ಸೇನೆಯಲ್ಲಿ ದುಡಿದರು.[೫][೧೩] ಅವರು ೧೯೬೫ರಲ್ಲಿ ಜೂನಿಯರ್‌ ಮಿ.ಯುರೋಪ್‌ ಸ್ಪರ್ಧೆಯಲ್ಲಿ ಜಯಗಳಿಸಿದರು.[೧೨] ಶ್ವಾರ್ಜಿನೆಗ್ಗರ್ ಅವರು ಪ್ರಾಥಮಿಕ ತರಬೇತಿ ಪಡೆಯುವ ಅವಧಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು AWOL ಗೆ ಹೋದರು, ಮತ್ತು ಸೇನೆಯ ಜೈಲಿನಲ್ಲಿ ಒಂದು ವಾರ ಕಳೆದಿದ್ದರು: "ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಚ್ಚು ಅರ್ಥಪೂರ್ಣ ಎನ್ನಿಸಿದ ಕಾರಣ ನಾನು ಬೇರೆ ಸನ್ನಿವೇಶಗಳ ಕುರಿತು ಆಲೋಚಿಸಲಿಲ್ಲ." ಅವರು ಗ್ರಾಜ್‌ನ ಸ್ಟೆರಿಯರ್‌ ಹಾಫ್‌ ಹೋಟೆಲ್‌ನಲ್ಲಿ (ಎರಡನೇ ಬಾರಿ ಅವರು ನೆಲೆಸಿದ್ದ ಸ್ಥಳ) ಮತ್ತೊಂದು ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ಜಯಗಳಿಸಿದರು. ಅವರು ತನ್ನನ್ನು ಪ್ರಸಿದ್ಧಿಗೊಳಿಸಿದಂತಹ ಯುರೋಪಿನ ಉತ್ತಮ ದೇಹದಾರ್ಢ್ಯ ಮನುಷ್ಯನೆಂದು ಚುನಾಯಿಸಲ್ಪಟ್ಟರು. " ಮಿ.ಯುನಿವರ್ಸ್‌ ಬಿರುದು ಶ್ರೀಮಂತಿಕೆಯನ್ನು ಪಡೆದಂತಹ ಅಮೇರಿಕಾಕ್ಕೆ– ಹೋಗಲು ಮತ್ತು ನಾನು ಸ್ಟಾರ್ ಆಗಲು ಅವಕಾಶ ಮಾಡಿಕೊಡುವಂತಹ ದಾರಿಯಾಗಿತ್ತು".[೧೪] ಶ್ವಾರ್ಜಿನೆಗ್ಗರ್ ಅವರು ಲಂಡನ್ನಿನ ನಬ್ಬಾ ಮಿ.ಯುನಿವರ್ಸ್‌ ಸ್ಪರ್ಧೆಗೆ ಹಾಜರಾಗಲು, ೧೯೬೬ರಲ್ಲಿ ತನ್ನ ಮೊದಲ ವಿಮಾನ ಪ್ರವಾಸವನ್ನು ಮಾಡಿದರು.[೧೩] ಅವರು ಮಿ.ಯೂನಿವರ್ಸ್‌ ಸ್ಪರ್ಧೆಯಲ್ಲಿ ಅಮೇರಿಕಾದ ವಿಜೇತ ಚೆಸ್ಟರ್ ಯಾರ್ಟನ್‌ನ ದೈಹಿಕ ಔನ್ನತ್ಯವನ್ನು ಹೊಂದಿರದ ಕಾರಣ ಎರಡನೆಯವರಾಗಬೇಕಾಯಿತು.[೧೩] ೧೯೬೬ರ ಸ್ಪರ್ಧೆಯಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಚಾರ್ಲ್ಸ್‌ "ವ್ಯಾಗ್‌" ಬೆನ್ನಟ್‌ ಅವರು ಶ್ವಾರ್ಜಿನೆಗ್ಗರ್‌ನ ಪ್ರಭಾವಕ್ಕೊಳಗಾಗಿದ್ದರು ಮತ್ತು ಅವನಿಗೆ ತರಬೇತಿ ನೀಡುವುದಾಗಿ ವಾಗ್ದಾನ ಮಾಡಿದ್ದರು. ಶ್ವಾರ್ಜಿನೆಗ್ಗರ್ ಅವರಲ್ಲಿ ಕಡಿಮೆ ಹಣವಿದ್ದ ಸಂದರ್ಭದಲ್ಲಿ, ಬೆನ್ನೆಟ್‌ ಅವರು ಇಂಗ್ಲೆಂಡ್‌ ದೇಶದ ಲಂಡನ್ನಿನ ಫಾರೆಸ್ಟ್‌ ಗೇಟ್‌ನಲ್ಲಿ ತನ್ನ ಎರಡು ಜಿಮ್‌ಗಳಲ್ಲಿ ಒಂದರ ಮೇಲಿದ್ದ ತನ್ನ ತುಂಬಿದ ಕುಟುಂಬದ ಮನೆಯಲ್ಲಿ ತಂಗಲು ಅವರನ್ನು ಆಹ್ವಾನಿಸಿದ್ದರು. ಯಾರ್ಟನ್‌ನ ಕಾಲಿನ ಲಕ್ಷಣವು ಅತ್ಯುತ್ತಮವಾಗಿದೆ ಮತ್ತು ಬೆನ್ನೆಟ್‌ನಿಂದ ತರಬೇತಿ ಕಾರ್ಯಕ್ರಮದಲ್ಲಿ ತಯಾರಿಸಲ್ಪಟ್ಟಂತಹ ಶ್ವಾರ್ಜಿನೆಗ್ಗರ್ ಅವರು ತನ್ನ ಕಾಲುಗಳಲ್ಲಿ ಶಕ್ತಿ ಮತ್ತು ಬಲದ ಲಕ್ಷಣವನ್ನು ಉತ್ತಮಗೊಳಿಸಿಕೊಳ್ಳಲು ಗಮನವಹಿಸಬೇಕೆಂದು ತೀರ್ಪು ನೀಡಲಾಗಿತ್ತು. ಲಂಡನ್ನಿನ ಈಸ್ಟ್‌ ಎಂಡ್‌ನಲ್ಲಿ ತಂಗಿದ್ದದ್ದು ಶ್ವಾರ್ಜಿನೆಗ್ಗರ್ ತನ್ನ ಆರಂಭಿಕ ಇಂಗ್ಲೀಷ್‌ ಭಾಷೆ ಗ್ರಹಿಕೆಯನ್ನು ಉತ್ತಮಪಡಿಸಿಕೊಳ್ಳಲು ಸಹಾಯಕವಾಗಿತ್ತು.[೨೦][೨೧] ೧೯೬೭ರಲ್ಲಿ ತರಬೇತಿಯನ್ನು ಪೂರೈಸಿದ್ದ, ಶ್ವಾರ್ಜಿನೆಗ್ಗರ್ ಅವರು ಮೊದಲ ಬಾರಿಗೆ ತಮ್ಮ ೨೦ನೇ ವಯಸ್ಸಿನಲ್ಲಿ ಯಂಗೆಸ್ಟ್‌-ಎವರ್ ಮಿ.ಯೂನಿವರ್ಸ್‌ ಬಿರುದನ್ನು ಗಳಿಸಿದರು.[೧೩] ಮುಂದೆ ಅವರು ಮತ್ತೂ ಮೂರು ಸಮಯಗಳಲ್ಲಿ ಬಿರುದನ್ನು ಗಳಿಸಿದರು[೧೨]. ಶ್ವಾರ್ಜಿನೆಗ್ಗರ್ ಅವರು ಮುನಿಕ್‌ಗೆ ಮತ್ತೆ ವಿಮಾನದಲ್ಲಿ ಮರಳಿದರು,ಅಲ್ಲಿ ಅವರು ನಿತ್ಯ ನಾಲ್ಕರಿಂದ ಆರು ಗಂಟೆಗಳವರೆಗೆ ತರಬೇತಿ ಪಡೆಯುತ್ತಿದ್ದರು, ವ್ಯವಹಾರ ಶಾಲೆಗೆ ಹಾಜರಾಗುತ್ತಿದ್ದರು ಮತ್ತು ಹೆಲ್ತ್‌ ಕ್ಲಬ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ೧೯೬೮ರಲ್ಲಿ ಲಂಡನ್‌ಗೆ ತನ್ನ ಮತ್ತೊಂದು ಮಿ.ಯುನಿವರ್ಸ್‌ ಬಿರುದನ್ನು ಪಡೆಯಲು ಹಿಂದಿರುಗಿದರು.[೧೩] ಅವರು "ನಾನು ಅತ್ಯಂತ ಪ್ರಖ್ಯಾತ ನಟನಾಗಲು ಹೋಗುತ್ತಿದ್ದೇನೆ!" ಎಂದು ಮುನಿಕ್‌ನಲ್ಲಿ ತನ್ನ ಸ್ನೇಹಿತನಾಗಿದ್ದ ರಾಗರ್ ಸಿ.ಫೀಲ್ಡ್‌ಗೆ ಅನೇಕ ಬಾರಿ ಹೇಳಿದ್ದರು.

ಯುಎಸ್‌ಗೆ ಸ್ಥಳಾಂತರ

1984ರಲ್ಲಿ ಶ್ವಾರ್ಜಿನೆಗ್ಗರ್ ಅವರು ಅಧ್ಯಕ್ಷ ರೊನಾಲ್ಡ್‌ ರೇಗಾನ್‌ ಅವರೊಂದಿಗೆ

ಶ್ವಾರ್ಜಿನೆಗ್ಗರ್ ಅವರು ಅಲ್ಪಸ್ವಲ್ಪ ಇಂಗ್ಲೀಷ್‌ ಮಾತನಾಡುತ್ತಿದ್ದ ತನ್ನ ೨೧ನೇ ವಯಸ್ಸಿನಲ್ಲಿ ಸೆಪ್ಟೆಂಬರ್ ೧೯೬೮ನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಸ್ಥಳಾಂತರಗೊಂಡರು.[೫][೧೨] "ಸ್ವಾಭಾವಿಕವಾಗಿ, ನಾನು ಈ ದೇಶಕ್ಕೆ ಬಂದಾಗ ನನ್ನ ಉಚ್ಛಾರಣೆ ಬಹಳ ಕೆಟ್ಟದಾಗಿತ್ತು ಮತ್ತು ಗಡುಸಾಗಿತ್ತು. ನಾನು ನಟನೆಯನ್ನು ಮುಂದುವರಿಸಲು ಆರಂಭಿಸಿದಾಗ ಇದು ಅಡಚಣೆಯಾಯಿತು."[೬] ಅಲ್ಲಿ ಅವರು ಕ್ಯಾಲಿಫೊರ್ನಿಯಾದ, ಸ್ಯಾಂಟಾ ಮೋನಿಕಾದಲ್ಲಿ ಜೋ ವೈಡರ್‌ನಿಂದ ಗೋಲ್ಡ್ಸ್‌ ಜಿಮ್‌ನಲ್ಲಿ ತರಬೇತಿ ಪಡೆದರು. ೧೯೭೩ರಲ್ಲಿ ಮೊತ್ತಮೊದಲಿನ ಗೋಲ್ಡ್‌’ಸ್‌ ಜಿಮ್‌ ಲೊಗೊವನ್ನು ವಿನ್ಯಾಸಗೊಳಿಸಿದ್ದಂತಹ ವೃತ್ತಿದಾಯಕ ವ್ರೆಸ್ಲರ್‌(ಮಲ್ಲ) ಆದ ರಿಕ್‌ ಡ್ರಾಸಿನ್ ಅವರು ೧೯೭೦ರಿಂದ ೧೯೭೪ರವರೆಗೆ ಶ್ವಾರ್ಜಿನೆಗ್ಗರ್ ರವರ ವೈಟ್‌ ಟ್ರೈನಿಂಗ್‌ ಜೊತೆಗಾರರಲ್ಲಿ ಒಬ್ಬರಾಗಿದ್ದರು.[೨೨] ಶ್ವಾರ್ಜಿನೆಗ್ಗರ್ ಅವರು ವೃತ್ತಿದಾಯಕ ವ್ರೆಸ್ಲರ್ "ಸೂಪರ್‌ಸ್ಟಾರ್‌" ಬಿಲ್ಲಿ ಗ್ರಹ್ಯಾಮ್‌ನೊಂದಿಗೆ ಉತ್ತಮ ಸ್ನೇಹಿತರೂ ಸಹ ಆಗಿದ್ದರು. ೧೯೭೦ರಲ್ಲಿ ತನ್ನ ೨೩ನೇ ವಯಸ್ಸಿನಲ್ಲಿ, ಅವರು ತನ್ನ ಪ್ರಥಮ ಮಿ.ಒಲಂಪಿಯಾ ಬಿರುದನ್ನು ನ್ಯೂಯಾರ್ಕ್‌ನಲ್ಲಿ ಪಡೆದರು ಮತ್ತು ನಂತರದಲ್ಲಿ ಒಟ್ಟಾರೆಯಾಗಿ ಏಳು ಬಾರಿ ಆ ಬಿರುದನ್ನು ಪಡೆದರು.[೧೩] ಶ್ವಾರ್ಜಿನೆಗ್ಗರ್ ಅವರು, ತಮ್ಮ ವಿಸಾದ ಅವಧಿಯಲ್ಲಿನ ಉಲ್ಲಂಘನೆಯ ಕಾರಣದಿಂದಾಗಿ ೧೯೬೦ರ ನಂತರ ಅಥವಾ ೧೯೭೦ಕ್ಕೂ ಮುಂಚೆ ಕೆಲವು ವಿಷಯಗಳಲ್ಲಿ ಕಾನೂನು ಬಾಹಿರ ವಲಸಿಗನಾಗಿದ್ದಿರಬಹುದು.[೨೩] ಶ್ವಾರ್ಜಿನೆಗ್ಗರ್ ಅವರು ೧೯೬೯ರಲ್ಲಿ ಇಂಗ್ಲೀಷ್‌ ಉಪಾದ್ಯಾಯಿನಿಯಾದ ಬಾರ್ಬರಾ ಔಟ್‌ಲ್ಯಾಂಡ್‌ ಬೇಕರ್ ಅವರನ್ನು ಭೇಟಿಯಾಗಿದ್ದರು, ಅವರೊಂದಿಗೆ ೧೯೭೪ರವರೆಗೆ ವಾಸಿಸಿದ್ದರು.[೨೪] ಅವರು ೧೯೭೭ರಲ್ಲಿ ಬಾರ್ಬರಾ ಅವರೊಂದಿಗಿನ ಜೀವನದ ಕುರಿತು ತಮ್ಮ ಆತ್ಮಕತೆಯಲ್ಲಿ ಮಾತನಾಡಿದ್ದರು: "ಮೂಲತಃ ಹೀಗೆ: ಅವಳು ತುಂಬ ಸಮತೋಲನವುಳ್ಳ ಮಹಿಳೆಯಾಗಿದ್ದು, ಸಾಮಾನ್ಯ, ಸ್ಥಿರವಾದ ಜೀವನ ಬಯಸುವಂತಹ ಮಹಿಳೆಯಾಗಿದ್ದಳು, ಆದರೆ ನಾನು ಸಮತೋಲನವುಳ್ಳ ಮನುಷ್ಯನಲ್ಲ ಮತ್ತು ನಾನು ಸಾಮಾನ್ಯ ಜೀವನದ ಕಲ್ಪನೆಗಳನ್ನು ದ್ವೇಷಿಸಿದ್ದೆ".[೨೪] "ಶ್ವಾರ್ಜಿನೆಗ್ಗರ್ ಅವರದು ಉತ್ಸಾಹಭರಿತ ವ್ಯಕ್ತಿತ್ವ, ಒಟ್ಟಾರೆಯಾಗಿ ಅಕರ್ಷಕ‌, ಸಾಹಸಿ ಮತ್ತು ದೇಹದಾರ್ಢ್ಯವುಳ್ಳವರಾಗಿದ್ದರು" ಎಂದು ಹೇಳಿದ ಬೇಕರ್, "ಸಂಬಂಧದ ಅಂತ್ಯದಲ್ಲಿ ಆತ ಸಹಿಸಲಸಾಧ್ಯನಾದ– ಮತ್ತು ತನ್ನ ಸುತ್ತ ಪ್ರಪಂಚವೇ ಸುತ್ತುವಂತೆ ದುರಹಂಕಾರವನ್ನು– ತುಂಬಿಕೊಂಡರು",[೨೫] ಎಂದು ಅವರು ವಿವರಿಸಿದ್ದಾರೆ. ಬೇಕರ್ ಅವರು ತಮ್ಮ ಆತ್ಮಕತೆಯನ್ನು ೨೦೦೬ರಲ್ಲಿ ಅರ್ನಾಲ್ಡ್‌ ಆ‍ಯ್‌೦ಡ್‌ ಮಿ: ಇನ್‌ ದ ಶಾಡೋ ಆಪ್‌ ದ ಆಸ್ಟ್ರೀಯನ್‌ ಓಕ್‌ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಗೊಳಿಸಿದರು.[೨೬] ಆದಾಗ್ಯೂ ಬೇಕರ್ ಅವರು ಆ ಪುಸ್ತಕದಲ್ಲಿ, ತನ್ನ ಮಾಜಿ ಪ್ರೇಮಿಯ ಕುರಿತು ಹೊಗಳಿಕೆಯಾಗಿರದಂತೆ ಚಿತ್ರಿಸಿದ್ದರು. ಶ್ವಾರ್ಜಿನೆಗ್ಗರ್ ಅವರು ಪ್ರಸ್ತಾವನೆ ಬರೆಯುವ ಮೂಲಕ ತಮ್ಮ ಕುರಿತು ಎಲ್ಲವನ್ನೂ ಹೇಳುವ ಆ ಪುಸ್ತಕಕ್ಕೆ ತಮ್ಮ ಕೊಡುಗೆ ನೀಡಿದರು ಮತ್ತು ಮೂರು ಗಂಟೆಗಳ ಮಟ್ಟಿಗೆ ಬೇಕರ್ ಅವರನ್ನು ಭೇಟಿ ಮಾಡಿದ್ದರು ಸಹಾ.[೨೬] ಅವರ ಆತನಿಂದ ಪ್ರತ್ಯೇಕವಾದ ನಂತರ ಆತನ ವಿಶ್ವಾಸರಾಹಿತ್ಯದ ಕುರಿತು ತಿಳಿದುಕೊಂಡಿದ್ದನ್ನು ಮತ್ತು ಆತನ ರಭಸದ ಮತ್ತು ಭಾವೋದ್ರಿಕ್ತ ಪ್ರೇಮ ಜೀವನದ ಕುರಿತು ಬೇಕರ್ ಹೇಳಿಕೊಂಡಿದ್ದಾರೆ.[೨೬] ಶ್ವಾರ್ಜಿನೆಗ್ಗರ್ ಅವರು ತಾವಿಬ್ಬರೂ ಆ ಘಟನೆಗಳನ್ನು ನೆನಪಿಸಿಕೊಳ್ಳುವ ರೀತಿ ಬೇರೆಯೇ ಆಗಿರುವ ಸಾಧ್ಯತೆಯಿದೆ ಎಂದು ಸ್ಪಷ್ಟಗೊಳಿಸಿದರು.[೨೬] ಈ ಜೋಡಿಗಳು ಆತ ಯುಎಸ್‌ ಅನ್ನು ತಲುಪಿದ ನಂತರ ಆರರಿಂದ ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಭೇಟಿಯಾದರು,–ತಮ್ಮ ಮೊದಲ ಭೇಟಿಯಲ್ಲಿ ಕಿರುತೆರೆಯಲ್ಲಿ ಅಪೊಲೊ ಮೂನ್‌ ಲ್ಯಾಂಡಿಂಗ್‌ ಅನ್ನು ವೀಕ್ಷಿಸಿದ್ದರು. ಅವರು ಮೂರೂವರೆ ವರ್ಷಗಳವರೆಗೆ ಸ್ಯಾಂಟಾ ಮೊನಿಕಾದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ವಾಸವಿದ್ದರು ಮತ್ತು ತಮ್ಮಲ್ಲಿದ್ದ ಸ್ವಲ್ಪ ಹಣವಿದ್ದುದರಿಂದಾಗಿ ನಿತ್ಯವೂ ಅವರು ಬೀಚ್‌ಗೆ ಭೇಟಿ ನೀಡುತ್ತಿದ್ದರು ಅಥವಾ ಮನೆಯ ಹಿಂಬಾಗದಲ್ಲಿಯೇ ಅಡಿಗೆ ಮಾಡಿ ಔತಣ ಆಚರಿಸುತ್ತಿದ್ದರು.[೧೭] ಆದರೆ ಬೇಕರ್ ಅವರು ಆತನನ್ನು ತಾನು ಮೊದಲು ಭೇಟಿಯಾದಾಗ, "ಆತನಿಗೆ ಸುಸಂಸ್ಕೃತ ಸಮಾಜದ ಕುರಿತು ಹೆಚ್ಚು ಗೊತ್ತಿರಲಿಲ್ಲ ಮತ್ತು ಆತನನ್ನು ನೋಡಿ ನಿರುತ್ಸಾಹಿಯಾಗಿದ್ದೆ". ಆಕೆ ಮುಂದುವರೆದು, "ಆತನು ಸ್ವಪ್ರಯತ್ನದಿಂದ ಬೆಳೆದ ಮನುಷ್ಯನಾಗಿದ್ದು, ಆತನ ಪೋಷಕರು, ಕುಟುಂಬ ಮತ್ತು ತನ್ನ ಸಹೋದರನಿಂದ ಯಾವುದೇ ಪ್ರೋತ್ಸಾಹವನ್ನು ಪಡೆದಿರುವ ಸಾಧ್ಯತೆಯಿಲ್ಲ–" ಎಂದು ಹೇಳಿದ್ದಳು. ಆತ ಆ ಸಾಧನೆಗೆ ಬೇಕಾದ ಉನ್ನತವಾದ ಸಂಕಲ್ಪವನ್ನು ಹೊಂದಿದ್ದನು ಮತ್ತು ಅದು ಬಹಳ ಆಕರ್ಷಕವಾಗಿತ್ತು... ನಾನು ಅರ್ನಾಲ್ಡ್‌ ನನ್ನನ್ನು ಪ್ರೀತಿಸುತ್ತಿದ್ದ ಎಂಬ ನೆನಪಿನಲ್ಲಿಯೇ ನನ್ನ ಸಮಾಧಿಗೆ ಹೋಗುತ್ತೇನೆ."[೧೭] ಶ್ವಾರ್ಜಿನೆಗ್ಗರ್ ಅವರು ೧೯೭೭ರ ಜುಲೈನಲ್ಲಿ ವೆನೀಸ್‌ ಬೀಚ್‌ನಲ್ಲಿ ಬೇವರ್ಲಿ ಹಿಲ್ಸ್‌ನ ಕೇಶ ವಿನ್ಯಾಸಕರ ಸಹಾಯಕಿಯಾಗಿದ್ದ,ತನ್ನ ಎರಡನೇ ಪ್ರೇಮಿ ಸು ಮೋರೇ ಅವರನ್ನು ಭೇಟಿಯಾದರು. ಮೋರೇ ಅವರ ಪ್ರಕಾರ, ದಂಪತಿಗಳು ಮುಕ್ತ ಸಂಬಂಧವನ್ನು ಹೊಂದಿದ್ದರು:"ನಾವಿಬ್ಬರೂ ಎಲ್‌ಎ ನಲ್ಲಿದ್ದಾಗ ಪರಸ್ಪರರಿಗೆ ನಂಬಿಕಸ್ತರಾಗಿದ್ದೆವು... ಆದರೆ ಆತ ಪಟ್ಟಣದಿಂದ ಹೊರಬಂದಾಗ, ನಾವು ನಮಗೇನು ಬೇಕು ಅದನ್ನು ಪಡೆಯಲು ಮುಕ್ತರಾದೆವು".[೯] ಶ್ವಾರ್ಜಿನೆಗ್ಗರ್ ಅವರು ೧೯೭೭ರ ಆಗಸ್ಟ್‌ನಲ್ಲಿ ‍ರಾಬರ್ಟ್‌ ಎಫ್‌.ಕೆನ್ನೆಡಿ ಟೆನ್ನಿಸ್‌ ಟೂರ್ನಮೆಂಟ್‌ ನಲ್ಲಿ ಮರಿಯಾ ಶ್ರೀವರ್ ಅವರನ್ನು ಭೇಟಿಯಾದರು ಮತ್ತು ಮೋರೆ (ಶ್ರೀವರ್‌ಳ ಜೊತೆಗಿನ ಆತನ ಸಂಬಂಧ ತಿಳಿದಂತಹ) ತನ್ನ ಕಡೆಯ ನಿರ್ಧಾರವನ್ನು ಬಹಿರಂಪಡಿಸುವವರೆಗೂ,೧೯೭೮ರ ಆಗಸ್ಟ್‌ವರೆಗೆ ಇಬ್ಬರು ಹೆಂಗಸರ ಜೊತೆಗಿನ ಅವರ ಸಂಬಂಧ ಮುಂದುವರೆದಿತ್ತು.[೯] ಶ್ವಾರ್ಜಿನೆಗ್ಗರ್ ಅವರು ಯು.ಎಸ್‌. ಸ್ಥಳಾಂತರಗೊಳ್ಳಬೇಕೆಂಬುದು ತನ್ನ ೧೦ನೇ ವಯಸ್ಸಿನಿಂದಲೂ ಇದ್ದಂತಹ ತನ್ನ ದೊಡ್ಡ ಕನಸಾಗಿತ್ತು ಎಂದು ಹೇಳಿದ್ದಾರೆ.[೨೭] ಅವರು ಆಸ್ಟ್ರೀಯಾದ "ಕೃಷಿಭೂಮಿ"ಯಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂದು ತನ್ನನ್ನೇ ಕೇಳಿಕೊಳ್ಳುತಿದ್ದರು ಮತ್ತು ದೇಹದಾರ್ಡ್ಯತೆ ತನ್ನನ್ನು "ಅಮೇರಿಕಾಕ್ಕೆ ಕರೆದೊಯ್ಯುವ ಟಿಕೇಟ್‌" ಎಂದು ನಂಬಿದ್ದರು: "ನಾನು ಮಿ.ಯೂನಿವರ್ಸ್‌ ಗಳಿಸಿದರೆ, ಅಮೇರಿಕಾಕ್ಕೆ ಹೋಗಲು ಸಾಧ್ಯವೆಂದು ಖಚಿತಪಡಿಸಿಕೊಂಡಿದ್ದೆ".[೨೭] ೨೦೦೨ರಲ್ಲಿ ಲಾ ವೀಕ್‌ಲೀ ಯು "ಆಸ್ಟ್ರೀಯಾದ ದಪ್ಪ ಉಚ್ಛಾರಣೆ ಮತ್ತು ದೇಹದಾರ್ಡ್ಯತೆಯ ಹಿನ್ನೆಲೆಯಿಲ್ಲದಿದ್ದರೂ ಅದನ್ನು ಮೀರಿ ೧೯೯೦ರಲ್ಲಿ ವಿಶ್ವದಲ್ಲಿ ಅತ್ಯುತ್ತಮ ಸಿನಿಮಾ ನಟನಾಗಿರುವ ಶ್ವಾರ್ಜಿನೆಗ್ಗರ್ ಅವರು ಅಮೇರಿಕಾದ ಅತ್ಯಂತ ಪ್ರಸಿದ್ಧ ವಲಸೆಗಾರ ಆಗಿದ್ದಾರೆ" ಎಂದು ಹೇಳಿದೆ.[೨೭]

Other Languages
azərbaycanca: Arnold Şvartsenegger
Bikol Central: Arnold Schwarzenegger
беларуская (тарашкевіца)‎: Арнольд Шварцэнэгер
客家語/Hak-kâ-ngî: Arnold Schwarzenegger
Bahasa Indonesia: Arnold Schwarzenegger
Qaraqalpaqsha: Arnold Schwarzenegger
Bahasa Melayu: Arnold Schwarzenegger
norsk nynorsk: Arnold Schwarzenegger
srpskohrvatski / српскохрватски: Arnold Schwarzenegger
Simple English: Arnold Schwarzenegger
slovenščina: Arnold Schwarzenegger
oʻzbekcha/ўзбекча: Arnold Schwarzenegger
Tiếng Việt: Arnold Schwarzenegger
Bân-lâm-gú: Arnold Schwarzenegger