ಅಮೆರಿಕ

  1. REDIRECT Template:Infobox continent
ಸಿಐಎ ರಾಜಕೀಯ ನಕ್ಷೆ ಮೂಲಕ ಅಮೆರಿಕಾದಲ್ಲಿನ ಸಮಾನಾಂತರ-ಪ್ರದೇಶಗಳ ಭವಿಷ್ಯದ ಅಂದಾಜು

ಅಮೆರಿಕಸ್ ಅಥವಾ ಅಮೆರಿಕ ವು,[೧][೨]Spanish: Américaಪೋರ್ಚುಗೀಸ್:AméricaFrench: AmériqueDutch: Amerika ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.[೨][೩] ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ).

ಇತಿಹಾಸ

ರಚನೆ

ಗೊಂಡ್ವಾನಾಲ್ಯಾಂಡ್ ಬೃಹತ್ ಖಂಡದಲ್ಲಿದ್ದ ದಕ್ಷಿಣ ಅಮೆರಿಕವು 135 [[ಮಿಲಿಯನ್ ವರ್ಷಗಳ ಹಿಂದೆ (ಎಂಎ)|ಮಿಲಿಯನ್ ವರ್ಷಗಳ ಹಿಂದೆ (ಎಂಎ)]]ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು.[೪] 15 ಮಿಲಿಯನ್ ವರ್ಷಗಳ ಆರಂಭದಲ್ಲಿ, ವೆಸ್ಟ್ ಇಂಡೀಸ್ ದ್ವೀಪ ಮತ್ತು ಪೆಸಿಫಿಕ್ ಸಾಗರದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. ಮಧ್ಯ ಅಮೆರಿಕದ ದ್ವೀಪ ಸಮುದಾಯದ ಕಣಿವೆಗಳಲ್ಲಿ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು ಪನಾಮಾ ಭೂಸಂಧಿಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು.[೫]

ವಸಾಹತು

ಶಿಲಾಯುಗದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ.[೬] 17 ಸಾವಿರ ವರ್ಷಗಳ ಹಿಂದೆ, ಶಾಶ್ವತ ಹಿಮ ಪದರ ಆವೃತವಾದ ಪರಿಣಾಮವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ ಸೈಬೀರಿಯಾ ಮತ್ತು ಈಗಿನ ಅಲಸ್ಕಾ ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ.[೬][೭] ಅಲ್ಲದೆ, ಇವರು ಲಾರೆಂಟೈಡ್ ಮತ್ತು ಕಾರ್ಡಿಲ್ಲೆರನ್ ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ಹಿಮಮುಕ್ತ ಮಾರ್ಗಗಳಲ್ಲಿ ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ ಸಸ್ತನಿಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ.[೮] ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ ಪ್ರಾಚೀನ ದೋಣಿಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದರು.[೯] ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್‍ನಷ್ಟು ಏರಿಕೆಯಾದಸಮುದ್ರ ಮಟ್ಟದ ಆಧಾರದ ಮೇಲೆ ಒದಗಿಸಲಾಗಿದೆ.[೧೦] ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ ( ಪೂರ್ವ ಅಲಸ್ಕಾ)ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ.[೧೧][೧೨][೧೩] ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. ಮಧ್ಯ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ.[೧೩][೧೪] ಎಸ್ಕಿಮೊ ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ ಆರ್ಕ್ಟಿಕ್ ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ.[೧೫] ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, ಸ್ಕಾಂಡಿನೇವಿಯಾದ ವಸಾಹತುಗಾರರು(ವೈಕಿಂಗ್ ಸೆಟ್ಲರ್ಸ್) 982 ರಲ್ಲಿ ಗ್ರೀನ್ ಲ್ಯಾಂಡ್ ಮತ್ತು ವಿನ್ ಲ್ಯಾಂಡ್ಗೆ ಬರಲಾರಂಭಿಸಿದರು.[೧೬] ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು.[೧೭]

ಪೂರ್ವ-ಕೊಲಂಬಿಯಾ ಯುಗ

ಆರ್ಕಾನ್ಸಾಸ್‌ನಿಂದ ಮೆಸ್ಸೆಸಿಪ್ಪಿಯಾದ ಸ್ಥಳ,ಪಾರ್ಕಿನ್ ಸ್ಥಳ,ಸಿರ್ಕಾ 1539.ಹರ್ಬ್ ರೋಯ್‌ನಿಂದ ವಿವರಣೆ.

ಅಮೆರಿಕ ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, ಅಮೆರಿಕ ಇತಿಹಾಸ ಮತ್ತು ಪೂರ್ವ ಇತಿಹಾಸದ ಎಲ್ಲಾ ಕಾಲಮಾನಗಳನ್ನು ಪೂರ್ವ ಕೊಲಂಬಿಯಾ ಯುಗ ಒಳಗೊಂಡಿತ್ತು. ಪೂರ್ವ ಆಧುನಿಕ ಕಾಲದಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ ಮೂಲ ನೆಲೆಯನ್ನೂ ಇದು ಒಳಗೊಂಡಿದೆ. ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, ಮೆಸೊಅಮೆರಿಕ (ಮೆಸೋಅಮೇರಿಕಾ) ಅಂದರೆ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ ಓಲ್ಮ್ಯಾಕ್, ದ ಟಾಲ್ಟೆಕ್, ದ ಟಿಯೋಟಿಹುಅಕ್ಯಾನೊ, ದ ಝಾಪೊಟೆಕ್, ದ ಮಿಕ್ಸ್‌ಟೆಕ್, ದ ಆಝ್‌ಟೆಕ್, ಮತ್ತು ದ ಮಾಯಾ) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ ಆಂಡೆಸ್ (ಇಂಕಾ, ಮೊಚೆ, ಚಿಬ್‌ಚಾ, ಕೇನರೀಸ್). ಪೂರ್ವ ಕೊಲಂಬಿಯಾದ ಬಹಳಷ್ಟು ನಾಗರಿಕತೆಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, ಕೃಷಿ, ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು ಪುರಾತನ ವಸ್ತು ಶಾಸ್ತ್ರದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ.[೧೮] ಅಮೇರಿಕ ಮತ್ತು ಯೂರೋಪಿನ ಸ್ಥಳೀಯ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಯೂರೋಪ್ ಯುದ್ಧ ಅಥವಾ ಕದನದ ಸಂದರ್ಭದಲ್ಲಿನ ಅಮೆರಿಕ ನಾಗರಿಕತೆಯು ಹಲವು ಹೃದಯಸ್ಪರ್ಶಿ ಸಾಧನೆಯ ಸಿದ್ಧಿಗಳನ್ನು ಹೊಂದಿತ್ತು. ಉದಾಹರಣೆಗೆ, ಆಝ್ ಟೆಕ್ ( ಸೆಂಟ್ರಲ್ ಮೆಕ್ಸಿಕೊದಲ್ಲಿ ಆಝ್‌ಟೆಕ್ ಜನಾಂಗೀಯರು ಹೊಂದಿದ್ದ ನಾಗರೀಕತೆ) ಜನಾಂಗೀಯರು ಟೆನೊಕ್ ಟಿಟ್ಲನ್ ಹೆಸರಿನಲ್ಲಿ ಸುಂದರ ನಗರವನ್ನು ನಿರ್ಮಿಸಿದ್ದರು. ಅದೀಗ ಮೆಕ್ಸಿಕೊ ನಗರದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಆಕರ್ಷಕ ಪುರಾತನ ತಾಣವಾಗಿ ಗಮನ ಸೆಳೆದಿದೆ. ಅಮೆರಿಕ ನಾಗರಿಕತೆಯು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲೂ ತನ್ನದೇ ಆದ ವಿಶೇಷ ಛಾಪು ಹೊತ್ತಿದೆ.[೧೯]

ಅಮೆರಿಕದಲ್ಲಿ ಯೂರೋಪಿಯನ್ನರ ವಸಾಹತು

1492 ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಯಾತ್ರೆ ಕೈಗೊಂಡ ಸ್ವಲ್ಪ ದಿನಗಳ ತರುವಾಯ, ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ಯೂರೋಪಿಯನ್ನರ ವಸಾಹತು ಆರಂಭವಾಯಿತು. ಯೂರೋಪಿಯನ್ನರು ಮತ್ತು ಆಫ್ರಿಕನ್ನರು ತಮ್ಮ ಜೊತೆ ಹೊಸಹೊಸ ರೋಗಗಳನ್ನು ತಂದ ಪರಿಣಾಮವಾಗಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹಲವು ನಿವಾಸಿಗಳು ಸಾವನ್ನಪ್ಪಿದರು,[೨೦][೨೧] ಇದರಿಂದಾಗಿ ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮೂಲ ಅಮೆರಿಕನ್ನರ ಜನಸಂಖ್ಯೆ ಗಣನೀಯವಾಗಿ ಕುಸಿಯಿತು, ಆದಾಗ್ಯೂ ಯೂರೋಪಿಯನ್ನರ ಸಂಪರ್ಕ ಉತ್ತಮವಾಗೇ ಇತ್ತು.[೨೨] ಅಮೆರಿಕ ಮೂಲನಿವಾಸಿಗಳು ಮತ್ತು ಯೂರೋಪಿನ ವಸಾಹತುದಾರರ ನಡುವೆ ವ್ಯಾಪಕ ಸಂಘರ್ಷವೇ ಉಂಟಾಯಿತು. ಇದರ ಪರಿಣಾಮವಾಗಿ, ಡೇವಿಡ್ ಸ್ಟಾನರ್ಡ್ ಎಂಬಾತ ಸ್ಥಳೀಯ ಜನರ ನರಮೇಧಕ್ಕೆ ಕರೆ ನೀಡಿದ.[೨೩] ಪೂರ್ವ ಯೂರೋಪಿಯನ್ ವಲಸೆಗಾರರು ಅಮೆರಿಕದಲ್ಲಿ ಕಾಲೋನಿಗಳನ್ನು ಸ್ಥಾಪಿಸುವ ಸರ್ಕಾರದ ಪ್ರಾಯೋಜಕತ್ವದ ಪ್ರಯತ್ನಗಳಲ್ಲಿ ಪದೇಪದೇ ಭಾಗಿಯಾಗಿದ್ದರು. ಧಾರ್ಮಿಕ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಬರುವವರು ಮತ್ತು ಆರ್ಥಿಕ ಅವಕಾಶ ಅರಸಿ ಬರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚತೊಡಗಿತು. ಮಿಲಿಯನ್ ಗಟ್ಟಲೆ ಜನರನ್ನು ಅಮೆರಿಕಕ್ಕೆ ಬಲತ್ಕಾರವಾಗಿ ಸಾಗಿಸಲಾಯಿತು. ಅವರನ್ನು ಅಮೆರಿಕದಲ್ಲಿ ಗುಲಾಮರು, ಕೈದಿಗಳು ಮತ್ತು ಕರಾರಿನ ಸೇವಕರ ಕೆಲಸಗಳಿಗೆ ದೂಡಲಾಯಿತು.

ಅಭಿದಾನ

ಅಮೆರಿಕಾವನ್ನು ಮೊದಲು ಹೆಸರಿಸಿದ ವಾಲ್ಡ್‌ಸೀಮುಲ್ಲರ್‌ನ ಜಾಗತಿಕ ನಕಾಶೆ,(ಪರಾಗ್ವೇ ಮೇಲಿನ ಮ್ಯಾಪ್‌ನಲ್ಲಿ), ಜರ್ಮನಿ, 1507

ಈ ಭೂಭಾಗಕ್ಕೆ ಅಮೆರಿಕ ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, ಜರ್ಮನ್ ನಕ್ಷೆಗಾರ ಮಾರ್ಟಿನ್ ವಾಲ್ಡ್ ಸೀಮುಲ್ಲರ್, ಫ್ರಾನ್ಸ್ ನ ಸೈಂಟ್-ಡೆಸ್-ವೊಗಸ್ ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ Cosmographiae Introductio ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. ಫ್ಲೋರಂಟೈನ್ ಸಂಶೋಧಕ ಅಮೇರಿಗೋ ವೆಸ್‌ಪುಸಿಯ ಹೆಸರಿನ ಲ್ಯಾಟಿನ್ ರೂಪವೇ ಅಮೇರಿಕಸ್ ವೆಸ್ಪುಸಿಯಸ್ , ಮತ್ತು ಅಮೆರಿಕಸ್ ಪದದ ಸ್ತ್ರೀಲಿಂಗವೇ ಅಮೆರಿಕ .[೨೪][೨೫] ಯುವರಾಜ ಅಮಲರಿಕ್ (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ಅಮೆರಿಗೊ , ಇದರರ್ಥ ಅಮಾಲಿಯ ಆಡಳಿತಗಾರ ಎಂಬುದು. ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ ಸೊಡೆರಿನಿ ಪತ್ರದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ ನವೋದಯ ಯುಗದ ಯಾತ್ರಿಕರ ಗಮನ ಸೆಳೆದ ಕ್ರಿಸ್ಟೋಫರ್ ಕೊಲಂಬಸ್, 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ.[೨೬]

ಜಂಗ್‌ಹೆ,ಸಿ‌ನಿಂದ ಅಮೆರಿಕಾ ನಕಾಶೆ1770
Other Languages
Acèh: Amirika
адыгабзэ: Америкэ
Afrikaans: Amerikas
Akan: Amerika
አማርኛ: አሜሪካዎች
aragonés: America
العربية: أمريكتان
ܐܪܡܝܐ: ܐܡܪܝܩܐ
asturianu: América
Aymar aru: Awya Yala
azərbaycanca: Amerika
башҡортса: Америка
Boarisch: Amerika
žemaitėška: Amerėka
Bikol Central: Amerika
беларуская: Амерыка
беларуская (тарашкевіца)‎: Амэрыка
български: Америка
Bislama: Amerika
Bahasa Banjar: Amirika
brezhoneg: Amerika
bosanski: Amerika
буряад: Америкэ
català: Amèrica
Mìng-dĕ̤ng-ngṳ̄: Mī-ciŭ
нохчийн: Америка
Tsetsêhestâhese: Amérika
čeština: Amerika
Cymraeg: Yr Amerig
dansk: Amerika
Deutsch: Amerika
Zazaki: Amerika
dolnoserbski: Amerika
ދިވެހިބަސް: އެމެރިކާބައްރު
Ελληνικά: Αμερική
English: Americas
Esperanto: Ameriko
español: América
eesti: Ameerika
euskara: Amerika
estremeñu: América
Fulfulde: Aameerik
Võro: Ameeriga
français: Amérique
arpetan: Amèrica
furlan: Americhis
Gaeilge: Meiriceá
Gagauz: Amerika
贛語: 美洲
Gàidhlig: Na h-Aimearagan
galego: América
Avañe'ẽ: Amérika
गोंयची कोंकणी / Gõychi Konknni: अमेरिका खंड
ગુજરાતી: અમેરિકા
Hausa: Amurka
עברית: אמריקה
हिन्दी: महाअमेरिका
Fiji Hindi: The Americas
hrvatski: Amerika
hornjoserbsce: Amerika
Kreyòl ayisyen: Amerik
Հայերեն: Ամերիկա
interlingua: America
Bahasa Indonesia: Benua Amerika
Interlingue: America
Igbo: Amerikas
Ilokano: Kaamerikaan
ГӀалгӀай: Америка
Ido: Amerika
íslenska: Ameríka
italiano: America
日本語: アメリカ州
Patois: Amoerkaz
Basa Jawa: Bawana Amérika
ქართული: ამერიკა
Qaraqalpaqsha: Amerika
Taqbaylit: Tamrikt
Kongo: Amelika
қазақша: Америка
kalaallisut: Amerika
ភាសាខ្មែរ: ទ្វីបអាមេរិក
한국어: 아메리카
Перем Коми: Америка
коми: Америка
kernowek: Amerika
Кыргызча: Америка
Latina: America
Ladino: Amerika
Lëtzebuergesch: Amerika (Kontinent)
лезги: Америка
Lingua Franca Nova: America
Limburgs: Amerika
Ligure: Americhe
lumbaart: America
lingála: Ameríka
lietuvių: Amerika
latviešu: Amerika
Basa Banyumasan: Bawana Amerika
мокшень: Америка
Malagasy: Amerika
олык марий: Америка
македонски: Америка
മലയാളം: അമേരിക്കകൾ
монгол: Америк тив
кырык мары: Америка
Bahasa Melayu: Benua Amerika
Mirandés: América
မြန်မာဘာသာ: အမေရိက
مازِرونی: آمریکا قاره
Nāhuatl: Ixachitlan
Napulitano: Amereca
Plattdüütsch: Amerika
norsk nynorsk: Amerika
norsk: Amerika
Nouormand: Améthique
Sesotho sa Leboa: Amerika
occitan: America
Oromoo: Ameerikaas
Ирон: Америкæ
Pangasinan: Amerika
Papiamentu: Amérika
Picard: Anmérikes
polski: Ameryka
Piemontèis: América
Ποντιακά: Αμερικήν
português: América
română: America
русский: Америка
русиньскый: Америка
Kinyarwanda: Amerika
саха тыла: Америка
sardu: Amèrica
Scots: Americae
srpskohrvatski / српскохрватски: Amerike
Simple English: Americas
slovenčina: Amerika (svetadiel)
Gagana Samoa: Amerika
chiShona: America (dzose)
Soomaaliga: Ameerika
српски / srpski: Америке
Sranantongo: Amrika
SiSwati: IMelika
Sesotho: Amerika
Seeltersk: Amerikoa
Basa Sunda: Amérika (buana)
svenska: Amerika
Kiswahili: Amerika
ślůnski: Amerika
tetun: Amérika
тоҷикӣ: Амрико
Türkmençe: Amerika
Tagalog: Kaamerikahan
lea faka-Tonga: ʻAmelika
Türkçe: Amerika
reo tahiti: Marite
ئۇيغۇرچە / Uyghurche: ئامېرىكا قىتئەسى
українська: Америка
اردو: امریکین
oʻzbekcha/ўзбекча: Amerika (qitʼa)
vèneto: Mèrica
vepsän kel’: Amerik
Tiếng Việt: Châu Mỹ
walon: Amerike
Winaray: Kaamerikanhan
Wolof: Aamerig
吴语: 美洲
მარგალური: ამერიკა
ייִדיש: אמעריקע
Yorùbá: Amẹ́ríkà
Vahcuengh: Meijcouh
中文: 美洲
Bân-lâm-gú: Bí-chiu
粵語: 美洲