ಅನಿತಾ ದೇಸಾಯಿ

Anita Desai
ಜನನ Anita Mazumdar
(1937-06-24) 24 ಜೂನ್ 1937 (age 80)ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�".
ಮಸ್ಸೂರಿ, ಗಡ್ವಾಲ್ ಕಿಂಗ್ಡಮ್ (ಇಂದಿನ ಭಾರತ)
ವೃತ್ತಿ ಬರಹಗಾರ್ತಿ, ಪ್ರಾಧ್ಯಾಪಕಿ
ರಾಷ್ಟ್ರೀಯತೆ ಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ ದೆಹಲಿ ವಿಶ್ವವಿದ್ಯಾಲಯ
ಕಾಲ 1963–ಪ್ರಸ್ತುತ
ಪ್ರಕಾರ/ಶೈಲಿ ಕಲ್ಪನೆ
ಮಕ್ಕಳು ಕಿರಣ್ ದೇಸಾಯಿ

ಅನಿತಾ ಮಜುಂದಾರ್ ದೇಸಾಯಿ ಅವರು ೨೪ ಜೂನ್ ೧೯೩೭ರಂದು ಜನಿಸಿದರು. ಇವರು ಉತ್ತಮ ಬರಹಗಾಳಿಂದಾಗಿ ಎಂಬ ಕಾರಣಕ್ಕೆ ಅವರು ಬೂಕರ್ ಪ್ರಶಸ್ತಿಗೆ ಮೂರು ಬಾರಿ ಆಯ್ಕೆಯಾಗಿದ್ದರು. "ಅವರ ಫೈಯರ್ ಆನ್ ದಿ ಮೌಂಟೇನ್" ಕಾದಂಬರಿಗೆ ೧೯೭೮ರಂದು, ಭಾರತದ ರಾಷ್ಟ್ರೀಯ ಅಕಾಡೆಮಿ ಲೆಟರ್ಸ್ ಇಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅವರ "ದಿ ವಿಲೇಜ್ ಬೈ ದಿ ಸೀ" ಕೃತಿಗೆ ಬ್ರಿಟಿಷ್ ಗಾರ್ಡಿಯನ್ ಪ್ರಶಸ್ತಿ ದೊರೆಯಿತು.

ಆರಂಭಿಕ ಜೀವನ

ಅನಿತಾ ಮಜುಂದಾರ್ ಜರ್ಮನ್ ತಾಯಿ ಟೋನಿ ನೈಮ್ ಮತ್ತು ಬಂಗಾಳಿ ಉದ್ಯಮಿ ಡಿ. ಎನ್. ಮಜುಂದಾರ್ ಅವರ ಮಗಳಾಗಿ ಭಾರತದ ಮಸ್ಸೂರಿಯಲ್ಲಿ ಜನಿಸಿದರು. ಅವರು ಮನೆಯಲ್ಲಿ ಜರ್ಮನ್ ಮಾತನಾಡುತ್ತಿದ್ದರು ಹಾಗು ಹೊರಗೆ ಬೆಂಗಾಳಿ, ಉರ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರು ಪ್ರಾಯಸ್ಥವಾಗುವವರೆಗೂ ಜರ್ಮನಿಯನ್ನು ನೋಡಲು ಹೋಗಿರಲಿಲ್ಲಿ. ಅನಿತಾ ದೇಸಾಯಿ ಅವರು ಶಾಲೆಯಲ್ಲಿ ಇಂಗ್ಲಿಷ್ ಓದಲು ಮತ್ತು ಬರೆಯಲು ಕಲಿತದ್ದರಿಂದ ಇಂಗ್ಲಿಷ್ ಅವರ ಸಾಹಿತ್ಯ ಭಾಷೆಯಾಯಿತು. ಅವರು ಏಳನೇ ವಯಸ್ಸಿನಲ್ಲಿ ಇಂಗ್ಲೀಷ್‌ನಲ್ಲಿ ಬರೆಯಲು ಆರಂಭಿಸಿದರು ಮತ್ತು ಒಂಭತ್ತನೆ ವಯಸ್ಸಿನಲ್ಲಿ ಅವರ ಮೊದಲ ಕಥೆ ಪ್ರಕಟವಾಯಿತು. ಅವರು ದೆಹಲಿಯ ಕ್ವೀನ್ ಮೇರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದರು ಮತ್ತು ೧೯೫೭ರಲ್ಲಿ ಮಿರಾಂಡಾ ಹೌಸಾಫ್ ದಿ ಯೂನಿವರ್ಸಿಟಿ ಆಫ್ ದೆಹಲಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದರು. ಇದರ ಮುಂದಿನ ವರ್ಷದಲ್ಲೇ ಅವರು ಅಶ್ವಿನ್ ದೇಸಾಯಿ ಅವರನ್ನು ಮದುವೆಯಾದರು. ಅಶ್ವಿನ್ ದೇಸಾಯಿ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯ ನಿರ್ದೇಶಕ ಮತ್ತು "ಬಿಟ್ವಿನ್ ಎಟರ್ನಿಟಿಸ್: ಐಡಿಯಾಸ್ ಆನ್ ಲೈಫ್ ಅಂಡ್ ದಿ ಕಾಸ್ ಮೋಸ್" ಪುಸ್ತಕವನ್ನು ಬರೆದಿದ್ದಾರೆ. ಅನಿತಾರವರಿಗೆ ನಾಲ್ಕು ಮಕ್ಕಳಿದ್ದಾರೆ, ಅದರಲ್ಲಿ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿಕಾರ ಕಿರಣ್ ದೇಸಾಯಿಯವರು ಒಬ್ಬರು. ಅವರು ತಮ್ಮ ಮಕ್ಕಳನ್ನು ವಾರಾಂತ್ಯಗಳಲ್ಲಿ ತುಲ್(ಅಳಿಭಾಗ್ ಬಳಿ) ಕರೆದೊಯ್ಯುತ್ತಿದ್ದರು, ಅಲ್ಲಿ ಅನಿತಾ ರವರು ದಿ ವಿಲೇಜ್ ಬೈ ದಿ ಸೀ ಕಾದಂಬರಿಯನ್ನು ಬರೆದರು. ಅವರ ಈ ಕೆಲಸಕ್ಕೆ ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ ಪ್ರಶಸ್ತಿಯನ್ನು ಬ್ರಿಟಿಷ್ ಮಕ್ಕಳ ಬರಹಗಾರರ ಒಂದು ಸಮಿತಿ ತೀರ್ಮಾನಿಸಲ್ಪಟ್ಟಿತು.

Other Languages
Deutsch: Anita Desai
English: Anita Desai
español: Anita Desai
français: Anita Desai
italiano: Anita Desai
Nederlands: Anita Desai
polski: Anita Desai
русский: Десаи, Анита
svenska: Anita Desai