ಅಣುರೋಹಿತ

ಮೆಟಲ್ ಹ್ಯಾಲೈಡ್‍ನ ಅಣುರೋಹಿತ

ರಾಸಾಯನಿಕ ಕ್ರಿಯೆಗೆ ಒಳಗಾಗಿ ಉರಿಯುತ್ತಿರುವ ಅನಿಲಗಳ ಜ್ವಾಲೆಯ ಬೆಳಕಿನ ರೋಹಿತ (ಉದಾ:ಗಾಳಿಯಲ್ಲಿ ಉರಿಯುತ್ತಿರುವ ಕಲ್ಲಿದ್ದಲಿನ ಅನಿಲ) ಅವಿಚ್ಛಿನ್ನವಾಗಿ ಇರುವುದಿಲ್ಲ. ಅದು ಪ್ರಕಾಶಮಾನವಾದ ಗೆರೆಗಳ ಪರಂಪರೆಯಿಂದ ಅಥವಾ ಪಟ್ಟಿಗಳಿಂದ ಕೂಡಿರುವಂತೆ ಕಾಣುತ್ತದೆ. ಇದು ಅಣುರೋಹಿತದ (ಮೊಲಿಕ್ಯುಲರ್ ಸ್ಪೆಕ್ಟ್ರಮ್) ವೈಶಿಷ್ಟ್ಯ. ಪರಮಾಣುರೋಹಿತ ಹೀಗಿರುವುದಿಲ್ಲ. ಅಲ್ಲಿ ಗೆರೆಗಳು ವಿಚ್ಛಿನ್ನವಾಗಿರುವುವು. ಪರಮಾಣುರೋಹಿತವನ್ನು ರೇಖಾರೋಹಿತ (ಲೈನ್ ಸ್ಪೆಕ್ಟ್ರಮ್) ಎಂದೂ ಅಣುರೋಹಿತವನ್ನು ಪಟ್ಟಿರೋಹಿತ (ಬ್ಯಾಂಡ್ ಸ್ಪೆಕ್ಟ್ರಮ್) ಎಂದೂ ಕರೆಯುತ್ತಾರೆ.ಅಣುರೋಹಿತಗಳ ಅಭ್ಯಾಸ ಭೌತ ಮತ್ತು ರಸಾಯನಶಾಸ್ತ್ರಗಳ ಬೆಳೆವಣಿಗೆಗೂ ಅಣುಗಳ ರಚನಾಕ್ರಮವನ್ನು ವಿವರಿಸುವುದರಲ್ಲಿಯೂ ಪ್ರಮುಖ ಪಾತ್ರವಹಿಸಿದೆ. ಖಭೌತಶಾಸ್ತ್ರದಲ್ಲಿ ಮತ್ತು ಉಷ್ಣಚಲನಶಾಸ್ತ್ರದಲ್ಲಿ ಇದರ ಉಪಯೋಗ ಗಮನಾರ್ಹವಾಗಿದೆ.

Other Languages
aragonés: Espectro atomico
العربية: طيف الانبعاث
беларуская: Эмісійны спектр
Ελληνικά: Εκπομπή
Esperanto: Energia spektro
فارسی: طیف گسیلی
Kreyòl ayisyen: Espèk emisyon
Bahasa Indonesia: Spektrum pancar
Bahasa Melayu: Spektrum pancaran
Nederlands: Emissielijn
norsk nynorsk: Emisjonsspekter
srpskohrvatski / српскохрватски: Emisioni spektar
Simple English: Emission spectrum
српски / srpski: Emisioni spektar
українська: Емісійний спектр
oʻzbekcha/ўзбекча: Atom spektrlari
Tiếng Việt: Quang phổ phát xạ
中文: 發射光譜