ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್

ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್
Otto Fritz Meyerhof.jpg
ಅಟ್ಟೊ ಫ್ರಿಟ್ಝ್
ಜನನಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್
೧೨ ಏಪ್ರಿಲ್ ೧೮೮೪ರ
ಜರ್ಮನಿ
ರಾಷ್ಟ್ರೀಯತೆಅಮೇರಿಕ

ಜರ್ಮನಿಯಲ್ಲಿ ಹುಟ್ಟಿದ ಅಮೇರಿಕದ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಟ್ಟೊ ಫ್ರಿಟ್ಝ್ ಮೇಯೆರ್ಹೋಫ್‌ರವರು ೧೮೮೪ರ ಏಪ್ರಿಲ್ ೧೨ರಂದು ಜರ್ಮನಿಯ ಹ್ಯಾನೋವರ್ನಲ್ಲಿ ಜನಿಸಿದರು.[೧] ನಮ್ಮ ದೇಹದಲ್ಲಿ ಆಹಾರದಿಂದ ಉತ್ಪತ್ತಿಯಾದ ಶಕ್ತಿ ಬಿಡುಗಡೆಯಾಗುತ್ತದೆ ಮತ್ತು ಅದು ಹೇಗೆ ಜೀವಕೋಶಗಳಲ್ಲಿ ಉಪಯೋಗಿಸಲ್ಪಡುತ್ತದೆ ಎನ್ನುವ ವಿಷಯದ ಬಗ್ಗೆ ಮೇಯೆರ್ಹೋಫ್‌ರವರು ತಮ್ಮ ಪ್ರಯೋಗಗಳನ್ನು ಕೇಂದ್ರಿಕರಿಸಿದರು. ಉಪಾಪಚನ ಕ್ರಿಯೆಗೆ ಬಳಸಲಾಗುವ ಗ್ಲೈಕೋಜೆನ್ (glycogen) ಪ್ರಮಾಣವನ್ನು ಕಂಡುಹಿಡಿದ ಮೇಯೆರ್ಹೋಫ್‌ರವರು ಸ್ನಾಯುಗಳಲ್ಲಿ ಸಂಕುಚನ ಕ್ರಿಯೆಯಿಂದ ಉತ್ಪತ್ತಿಯಾದ ಲ್ಯಾಕ್ಟಿಕ್ ಆಮ್ಲ (lactic acid), ಸ್ನಾಯುಗಳ ಎಳೆತಕ್ಕೆ ಅನುಪಾತವಾಗಿರುತ್ತದೆ ಎಂಬುದಾಗಿ ಅವರು ಕಂಡುಹಿಡಿದರು. ಸ್ನಾಯುಗಳ ಪುನಃಚೇತನ ಕ್ರಿಯೆಯ ಅವಧಿಯಲ್ಲಿ ಲ್ಯಾಕ್ಟಿಕ್ ಆಮ್ಲದ ಸುಮಾರು ಶೇಕಡ ೨೦ರಿಂದ ೨೫ ಭಾಗ ಉತ್ಕರ್ಷಣೆಗೆ (oxidation) ಒಳಗಾಗುತ್ತದೆ ಮತ್ತು ಆ ಉತ್ಕರ್ಷಣೆಯಿಂದ ಉತ್ಪತ್ತಿಯಾದ ಶಕ್ತಿ ಲ್ಯಾಕ್ಟಿಕ್ ಆಮ್ಲದ ಉಳಿದ ಭಾಗವನ್ನು ಮತ್ತೆ ಗ್ಲೈಕೋಜನ್ ಆಗಿ ಪರಿವರ್ತಿಸುತ್ತದೆ ಎಂಬುದಾಗಿಯೂ ಅವರು ಕಂಡುಹಿಡಿದರು. ಮೇಯೆರ್ಹೋಫ್‌ರವರ ಈ ಸಂಶೋಧನೆಗಳಿಗೆ ೧೯೨೨ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಅವರಿಗೆ (ಆರ್ಕಿಬಾಲ್ಡ್ ಹಿಲ್‌ರವರ ಜೊತೆ) ನೀಡಲಾಯಿತು. ಮೇಯೆರ್ಹೋಫ್‌ರವರ ಈ ಸಂಶೋಧನೆಗಳು ಕಾರ್ಲ್ ಫರ್ಡಿನಾಂಡ್ ಕೋರಿ (೧೮೯೬-೧೯೮೪) iತ್ತು ಗೆರ್ಟಿ ಥೆರೇಸಾ ಕೋರಿ (೧೮೯೬-೧೯೫೭) (ಕೋರಿ ದಂಪತಿಗಳು) ನಡೆಸಿದ ಇಂತಹುದೇ ಸಂಶೋಧನೆಗಳಿಗೆ ನಾಂದಿಯಾಯಿತು. ಆ ದಂಪತಿಗಳೂ ಸಹ ೧೯೪೭ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಗಳಿಸಿದರು. ಮೇಯೆರ್ಹೋಫ್‌ರವರು ೧೯೫೧ರ ಅಕ್ಟೋಬರ್ ೬ರಂದು ಅಮೇರಿಕದಲ್ಲಿ ನಿಧನರಾದರು.[೨]

Other Languages
العربية: أوتو مايرهوف
беларуская: Ота Меергоф
български: Ото Майерхоф
Bahasa Indonesia: Otto Meyerhof
Plattdüütsch: Otto Fritz Meyerhof
Simple English: Otto Fritz Meyerhof
slovenščina: Otto Fritz Meyerhof
svenska: Otto Meyerhof
Kiswahili: Otto Meyerhof
українська: Отто Меєргоф
oʻzbekcha/ўзбекча: Otto Fritz Meyerhof
Tiếng Việt: Otto Fritz Meyerhof