ಅಗತ್ಯ

ಅಗತ್ಯ ಎಂದರೆ ಒಂದು ಜೀವಿಗೆ ಆರೋಗ್ಯವಂತ ಜೀವನ ಜೀವಿಸಲು ಬೇಕಾದುದು. ಅಗತ್ಯವೆಂದರೆ ಅಪಕ್ರಿಯೆ ಅಥವಾ ಮರಣದಂತಹ ಸ್ಪಷ್ಟ ಪ್ರತಿಕೂಲ ಪರಿಣಾಮ ಉಂಟುಮಾಡುವ ಒಂದು ಕೊರತೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಅಗತ್ಯವೆಂದರೆ ಸುರಕ್ಷಿತ, ಸ್ಥಿರ ಮತ್ತು ಆರೋಗ್ಯವಂತ ಜೀವನಕ್ಕೆ ಬೇಕಾದುದು (ಉದಾ. ಆಹಾರ, ನೀರು, ವಸತಿ). ಅಗತ್ಯ ಒಂದು ಆಸೆ, ಬಯಕೆ ಅಥವಾ ಆಕಾಂಕ್ಷೆಯೂ ಆಗಿರಬಹುದು. ಅಗತ್ಯಗಳಿಗೆ ಕೊಳ್ಳುವ ಶಕ್ತಿಯ ಬೆಂಬಲವಿದ್ದಾಗ, ಅವುಗಳಿಗೆ ಆರ್ಥಿಕ ಬೇಡಿಕೆಗಳಾಗುವ ಸಾಮರ್ಥ್ಯವಿರುತ್ತದೆ.

ಒಂದು ಜೀವಿಗೆ ಜೀವಿಸಲು ನೀರು, ಗಾಳಿ, ಆಹಾರ ಮತ್ತು ಪಾರಿಸರಿಕ ಅಪಾಯಗಳಿಂದ ಸುರಕ್ಷತೆಯಂತಹ ಮೂಲಭೂತ ಅಗತ್ಯಗಳು ಬೇಕಾಗುತ್ತವೆ. ಮೂಲಭೂತ ಅಗತ್ಯಗಳ ಜೊತೆಗೆ, ಮಾನವರಿಗೆ ಸಾಮಾಜಿಕ ಅಥವಾ ಸಮಾಜ ಸಂಬಂಧಿ ಸ್ವರೂಪದ ಅಗತ್ಯಗಳೂ ಇರುತ್ತವೆ ಏಕೆಂದರೆ ಮಾನವನು ಬೆರೆಯುವುದು ಅಥವಾ ಕುಟುಂಬ ಘಟಕ ಅಥವಾ ಗುಂಪಿಗೆ ಸೇರಬೇಕಾಗುತ್ತದೆ. ಅಗತ್ಯಗಳು ವಸ್ತುನಿಷ್ಠ ಮತ್ತು ಭೌತಿಕವಿರಬಹುದು, ಉದಾಹರಣೆಗೆ ಆಹಾರದ ಅಗತ್ಯ, ಅಥವಾ ಮಾನಸಿಕ ಮತ್ತು ವ್ಯಕ್ತಿನಿಷ್ಠವಿರಬಹುದು, ಉದಾಹರಣೆಗೆ ಆತ್ಮಾಭಿಮಾನದ ಅಗತ್ಯ.

ಅಗತ್ಯಗಳು ತತ್ವಶಾಸ್ತ್ರ, ಜೀವಶಾಸ್ತ್ರ, ಮನೋವಿಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವ್ಯಾಪಾರೋದ್ಯಮ ಮತ್ತು ರಾಜಕಾರಣದ ಕ್ಷೇತ್ರಗಳಲ್ಲಿ ಆಸಕ್ತಿಯ ವಿಷಯವಾಗಿವೆ ಮತ್ತು ಸಾಮಾನ್ಯ ತಲಾಧಾರವನ್ನು ರೂಪಿಸುತ್ತವೆ.

ಬಹುತೇಕ ಮನಶ್ಶಾಸ್ತ್ರಜ್ಞರಿಗೆ, ಅಗತ್ಯವು ಜೀವಿಯನ್ನು ಒಂದು ಗುರಿ ಸಾಧಿಸಲು ಕಾರ್ಯಮಾಡಲು ಎಚ್ಚರಿಸುವ ಒಂದು ಮನೋವೈಜ್ಞಾನಿಕ ಗುಣಲಕ್ಷಣವಾಗಿದೆ. ಹಾಗಾಗಿ ಇದು ವರ್ತನೆಗೆ ಉದ್ದೇಶ ಮತ್ತು ದಿಕ್ಕು ನೀಡುತ್ತದೆ. ಮನೋವಿಜ್ಞಾನಿ ಮ್ಯಾಸ್ಲೊ ೧೯೪೩ರಲ್ಲಿ ಅಗತ್ಯಗಳ ಒಂದು ಮಾದರಿಯನ್ನು ಪ್ರಸ್ತಾಪಿಸಿದರು. ಜನರು ಮನೋವೈಜ್ಞಾನಿಕ ಅಗತ್ಯಗಳ ಒಂದು ವರ್ಗ ಶ್ರೇಣಿಯನ್ನು ಹೊಂದಿರುತ್ತಾರೆ ಎಂದು ಅವರ ಸಿದ್ಧಾಂತ ಪ್ರಸ್ತಾಪಿಸಿತು. ಇದು ಆಹಾರ, ನೀರು ಮತ್ತು ಭದ್ರತೆಯಂತಹ (ಉದಾ. ವಸತಿ) ಮೂಲಭೂತ ಶಾರೀರಿಕ ಅಥವಾ ಕೆಳ ಕ್ರಮಾಂಕದ ಅಗತ್ಯಗಳಿಂದ ಹಿಡಿದು ಸ್ವಯಂ ವಾಸ್ತವೀಕರಣದಂತಹ ಉನ್ನತ ದರ್ಜೆಯ ಅಗತ್ಯಗಳವರೆಗೆ ವ್ಯಾಪಿಸುತ್ತದೆ. ಜನರು ತಮ್ಮ ಬಹುತೇಕ ಸಂಪನ್ಮೂಲಗಳನ್ನು (ಸಮಯ, ಶಕ್ತಿ ಮತ್ತು ಹಣ) ಈ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ವ್ಯಯಮಾಡುವ ಪ್ರವೃತ್ತಿ ಹೊಂದಿರುತ್ತಾರೆ, ಇದರ ನಂತರ ಉನ್ನತ ದರ್ಜೆಯ ಅಗತ್ಯಗಳಾದ ಸೇರಿಕೆಯ ಅನಿಸಿಕೆ, ಸ್ವಾಭಿಮಾನ ಮತ್ತು ಸ್ವಯಂ ವಾಸ್ತವೀಕರಣ ಅರ್ಥಪೂರ್ಣವಾಗುತ್ತವೆ.[೧] ಮಾನವ ಪ್ರೇರಣೆಗಳನ್ನು ವೈವಿಧ್ಯಮಯ ಸಂದರ್ಭಗಳಲ್ಲಿ ತಿಳಿದುಕೊಳ್ಳಲು ಮ್ಯಾಸ್ಲೊರ ವಿಧಾನ ಒಂದು ಸಾಮಾನ್ಯೀಕೃತ ವಿಧಾನವಾಗಿದೆ, ಆದರೆ ನಿರ್ದಿಷ್ಟ ಸಂದರ್ಭಗಳಿಗೆ ಹೊಂದಿಸಿಕೊಳ್ಳಬೇಕಾಗುತ್ತದೆ.

  • ಉಲ್ಲೇಖಗಳು

ಉಲ್ಲೇಖಗಳು

  1. Neal, C. M., Quester, P. G., Hawkins, D. I., Pettigrew, Grimmer & Davis, Consumer Behaviour: Implications for Marketing Strategy, Sydney, McGraw-Hill Irwin. 2008
Other Languages
العربية: حاجة
беларуская: Патрэбнасць
български: Потребност
català: Necessitat
čeština: Potřeba
dansk: Behov
Deutsch: Bedürfnis
English: Need
Esperanto: Bezono
español: Necesidad
euskara: Behar
فارسی: نیاز
suomi: Tarve
français: Besoin
Gaeilge: Riachtanas
עברית: צורך
hrvatski: Potrebe
Bahasa Indonesia: Kebutuhan
Ido: Bezono
italiano: Bisogno
日本語: ニーズ
ქართული: საჭიროება
Кыргызча: Муктаждык
lietuvių: Poreikis
македонски: Потреба
Nederlands: Behoefte
norsk nynorsk: Behov
norsk: Behov
polski: Potrzeba
română: Necesitate
русский: Потребность
sicilianu: Bisognu
Scots: Need
Simple English: Need
slovenčina: Potreba (ekonómia)
српски / srpski: Потреба
svenska: Behov
Kiswahili: Haja
తెలుగు: అవసరం
татарча/tatarça: Ихтыяҗ
українська: Потреба
oʻzbekcha/ўзбекча: Ehtiyoj
Tiếng Việt: Nhu cầu
中文: 需要