ಅಕಶೇರುಕ

ಅಕಶೇರುಕಕ್ಕೆ ಒಂದು ಉದಾಹರಣೆ

ಅಕಶೇರುಕ ಕಶೇರು (ಬೆನ್ನೆಲುಬು) ಇಲ್ಲದ ಪ್ರಾಣಿಗಳು (ಇನ್ವರ್ಟಿಬ್ರೇಟ್ಸ್). ಅಕಶೇರುಕವೆಂಬ ಪದದ ಪರಿಮಿತಿಯಲ್ಲಿ ಪ್ರಪಂಚದಲ್ಲಿರುವ ಪ್ರಾಣಿ ಸಾಮ್ರಾಜ್ಯದ ಶೇ.೯೭ರಷ್ಟು ಪ್ರಾಣಿಗಳು ಸೇರುತ್ತವೆ.[೧] ಇವುಗಳಲ್ಲಿ ಹೆಚ್ಚಿನವು ಭೂವಾಸಿಗಳು. ಜಲವಾಸಿಗಳು ಭೂವಾಸಿಗಳಿಗಿಂತ ಕಡಿಮೆಯೆನ್ನಬಹುದಾದರೂ ವೈವಿಧ್ಯದಲ್ಲಿ ಮಾತ್ರ ಭೂವಾಸಿಗಳಿಗಿಂತ ಜಲವಾಸಿಗಳದೇ ಮೇಲುಗೈ.ಒಂದು ದಶಲಕ್ಷಕ್ಕಿಂತ ಹೆಚ್ಚಾಗಿರುವ ಈ ಪ್ರಾಣಿ ಪ್ರಭೇದಗಳನ್ನು ವಿಂಗಡಿಸುವುದು ಬಹಳ ಕಷ್ಟ. ಏಕೆಂದರೆ ವೈಜ್ಞಾನಿಕ ವರ್ಗೀಕರಣಕ್ಕೆ ವೈಜ್ಞಾನಿಕ ತತ್ವಗಳ ಆಧಾರವಿರಬೇಕು. ಪ್ರಪ್ರಥಮವಾಗಿ ಅರಿಸ್ಟಾಟಲ್ ಈ ಪ್ರಾಣಿವರ್ಗ ವನ್ನು ಎರಡು ಭಾಗಗಳಾಗಿ ವಿಂಗಡಿಸಿದ. ಆತನ ವರ್ಗೀಕರಣ ದಂತೆ, ಅಕಶೇರುಕ ಗಳು ರಕ್ತರಹಿತ ಜೀವಿಗಳು. ರಕ್ತರಹಿತ ಹಾಗೂ ರಕ್ತವುಳ್ಳ ಜೀವಿಗಳನ್ನು ಪುನಃ ನಾನಾ ಶಾಖೆಗಳನ್ನಾಗಿ ವಿಭಾಗಿಸಲಾಗಿದೆ. ಲಿನೀಯಸ್ ಎಂಬುವನು ಜೀವಪ್ರಭೇದಗಳನ್ನು ಅಕಶೇರುಕಗಳು ಮತ್ತು ಕಶೇರುಕಗಳು ಎಂದು ವಿಭಾಗಿಸಿ ಅಕಶೇರುಕ ಜೀವಿಗಳನ್ನು ಜಂತುಹುಳುಗಳ ವರ್ಗ, ಕೀಟಗಳ ವರ್ಗ ಎಂದು ಎರಡು ಭಾಗಗ ಳಾಗಿ ವಿಂಗಡಿಸಿದ. ಹತ್ತೊಂಬತ್ತ ನೆಯ ಶತಮಾನದಲ್ಲಿ ಲೆಮಾರ್ಕ್ ಅಕಶೇರುಕ ಜೀವಿಗಳನ್ನು ಅವುಗಳ ಬಾಹ್ಯರಚನಾಧಾರಗಳ ಮೇಲೆ ಹತ್ತು ವರ್ಗಗಳಾಗಿ ವಿಂಗಡಿಸಿದ್ದಾನೆ. ಈ ಹತ್ತು ವರ್ಗಗಳೆಂದರೆ 1. ಇನ್ ಫ್ಯೂಜೋರಿಯ 2. ಪಾಲಿಪ್ಸ್ 3. ರೇಡಿಯೇಟ್ಸ್ 4. ವರ್ಮಿಸ್ 5. ವಲಯವಂತಗಳು 6. ಅರಾಕ್ನಿಡ 7. ಕ್ರಸ್ಟೇಷಿಯ 8. ಕೀಟಗಳು 9. ಸಿರಿಪೀಡಿಯ 10. ಮೃದ್ವಂಗಿಗಳು (ಮಾಲಸ್ಕ). ಲೆಮಾರ್ಕ್ನ ಸಮಕಾಲೀನನಾದ ಕೂವಿಯೋ ಪ್ರಾಣಿ ಪ್ರಪಂಚವನ್ನು ಕಶೇರುಕಗಳು, ಆರ್ಟಿಕ್ಯುಲೇಟ, ಮೃದ್ವಂಗಿಗಳು, ರೇಡಿಯೇಟ ಎಂಬ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ. ಆದರೆ ಇವನ ಮೊದಲ ಮೂರು ಭಾಗಗಳು ಬಳಕೆಯಲ್ಲುಳಿದರೂ ನಾಲ್ಕನೆಯ ಭಾಗ ಬದಲಾಗಲೇ ಬೇಕಾಯಿತು. ಕೂವಿಯೋ ಆದಮೇಲೆ ಬಂದ ವಿಜ್ಞಾನಿಗಳು ಅಕಶೇರುಕ ಗಳ ವರ್ಗೀಕರಣಕ್ಕೆ ಯತ್ನಿಸಿ ದರು. ಜರ್ಮನಿ ದೇಶದ ಜೀವವಿಜ್ಞಾನಿಗಳಾದ ಶೀಬಾಲ್್ಡ ಮತ್ತು ಲ್ಯೂಕರ್ಟ್ ಅವರಲ್ಲಿ ಮುಖ್ಯರು. ಶೀಬಾಲ್ಡ್ ಏಕ ಕೋಶಿಕ ಜೀವಿಗಳನ್ನು ಕಂಡು ಹಿಡಿದು ಅವುಗಳಿಗಾಗಿಯೇ ಪ್ರೋಟೋಜೊóೕವ ಎಂಬ ವಂಶವನ್ನು ಹೆಸರಿಸುತ್ತಾನೆ. ಜೊತೆಗೆ ಸಂಧಿಪದಿಗಳವರ್ಗವನ್ನು ಊರ್ಜಿತಗೊಳಿಸುತ್ತಾನೆ. ಲ್ಯೂಕರ್ಟ್ ರೇಡಿಯೇಟ ವಿಭಾಗವನ್ನು ಸೀಲೆಂಟರೇಟ ಮತ್ತು ಎಕೈನೊಡರ್ಮೆಟ ಎಂಬ ಎರಡು ಭಾಗಗಳಾಗಿ ವಿಭಾಗಿಸಿದ. ಮುಂದೆ ಬಂದ ವಿಜ್ಞಾನಿಗಳು ಬ್ರಾಕಿಯೊಪೋಡ, ಬ್ರಯೋಜೋóವ ಹಾಗು ಟ್ಯೂನಿಕೇಟ್ ವರ್ಗಗಳನ್ನು ಮೃದ್ವಂಗಿಗಳ ಗುಂಪಿನಿಂದ ಬೇರ್ಪಡಿಸಿದರು. ಮಿಲ್ನೇ ಎಡ್ವರ್ಡ್ ಎಂಬವನು ಟ್ಯೂನಿಕೇಟ ಜೀವಿಗಳಿಗೆ ಟ್ಯೂನಿಕೇಟ್ ಎಂಬ ಪ್ರತ್ಯೇಕ ವಂಶದ ಅರ್ಹತೆಯನ್ನು ಕೊಟ್ಟ. ಕ್ಲಾಸ್ ಎಂಬ ಜರ್ಮನ್ ವಿಜ್ಞಾನಿ ಇಡೀ ಪ್ರಾಣಿ ಪ್ರಪಂಚವನ್ನು 1. ಪ್ರೋಟೋ ಜೊóೕವ 2. ಸೀಲೆಂಟರೇಟ 3. ಎಕೈನೊಡರ್ಮೆಟಾ 4. ವರ್ಮಿಸ್ 5. ಆತಾರ್್ರಪೊಡ 6. ಮೃದ್ವಂಗಿಗಳು (ಮಾಲಸ್ಕ) 7. ಮೆಲಸ್ಕಾಯಿಡಿಯ 8. ಟ್ಯೂನಿಕೇಟ್ 9. ಕಶೇರುಕ ಎಂಬ ಒಂಬತ್ತು ವರ್ಗಗಳನ್ನಾಗಿ ವಿಂಗಡಿಸಿದನು. ಮುಂದೆ ಬಂದ ವಿಜ್ಞಾನಿಗಳು ಪೋರಿಪೆóರ ಮತ್ತು ಹೆಮಿಕಾರ್ಡೇಟ ವಂಶಗಳನ್ನು ಕ್ಲಾಸ್‍ನ ವಿಭಜನೆಗೆ ಸೇರಿದರು. ಮುಂದೆ ವರ್ಮಿಸ್ ಗುಂಪನ್ನು, ಪ್ಲಾಟಿಹೆಲ್ಮೆನ್ಥೀಸ್, ನ್ಯಾಮರಟೈನ, ಆಸ್ಕಿಹೆಲ ಮೆನ್ಥೀಸ್ ಹಾಗೂ ಖಂಡಗಳುಳ್ಳ ಪ್ರಾಣಿಗಳಾದ ಆನೆಲಿಡ ಎಂಬ ವಂಶಗಳನ್ನು ಪ್ರತಿಪಾದಿಸುತ್ತಾರೆ. ಅತ್ಯಂತ ಆಧುನಿಕ ಅಭಿಪ್ರಾಯದಂತೆ ಇಂದು ಪ್ರಾಣಿ ಪ್ರಪಂಚದಲ್ಲಿ 20 ರಿಂದ 30 ವಂಶಗಳನ್ನು ಗುರುತಿಸಬಹುದು. ಆದುದರಿಂದ ಈ ವರ್ಗೀಕರಣದಲ್ಲಿ ಎಲ್ಲದರಲ್ಲಿಯೂ ಒಂದೇ ರೀತಿಯ ಸಾಮ್ಯವನ್ನು ಹುಡುಕುವುದು ಕಷ್ಟ. ಇಂದು ಹೈಮನ್ ಎಂಬಾಕೆಯ ವರ್ಗೀಕರಣ ಪ್ರಚಲಿತವಾಗಿದೆ.1. ಪ್ರೋಟೋಜೋóವ 2. ಮೀಸೋಜೋóವ 3. ಪೋರಿಫೆರ 4. ನೈಡೇರಿಯ 5. ಟಿನೊಫೊರ 6. ಪ್ಲಾಟಿಹೆಲ್ಮನ್ಥಿಸ್ 7. ರಿಂಕೊಸೀಲ್ 8. ಎಂಟೊಪ್ರಾಕ್ಟ 9. ಆಕ್ಯಾಂತೊ ಕಿಫಾಲಾ 10. ಆಸ್ಕಿಹೆಲ್ಮೆನ್ಥೀಸ್ 11. ಮೃದ್ವಂಗಿಗಳು (ಮಾಲಸ್ಕ) 12. ಸೈಫನ್ಕುಲಿಡ 13. ಎಕಿಯುರಾಯ್ಡಿಯ 14. ಆನೆಲಿಡ 15. ಆಥೊರ್್ರಪೋಡ 16. ಎಕ್ಟೊಪ್ರಾಕ್ಟ 17. ಪೋರೋನಿಡ 18. ಬ್ರಾಕಿಯೊಪೊಡ 19. ಎಕೈನೋಡರ್ಮ್ಯೇಟ 20. ಪೋಗೊನೊ ಫೋರ 21. ಕೀಟೋಗ್ನಾಥ ಎಂಬ 21 ವಂಶಗಳಾಗಿ ಆಕೆ ವರ್ಗೀಕರಿಸಿರುವಳು. ಅಕಶೇರುಕ ಪ್ರಾಣಿಗಳಿಗೆ ಸಂಬಂಧಿಸಿದ ಈ ವರ್ಗೀಕರಣವನ್ನು ಸಾಮಾನ್ಯವಾಗಿ ಇಂದು ಬಹಳಷ್ಟು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.ಮೇಲ್ಕಂಡ ವರ್ಗೀಕರಣ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಹೆಕೆಲ್ ಎಂಬವನು ಪ್ರಾಣಿಪ್ರಪಂಚವನ್ನು ಎರಡು ಭಾಗಗಳಾಗಿ ವಿಭಾಗಿಸಿದ್ದ. ಈತನ ಪ್ರಕಾರ ಏಕ ಕೋಶಜೀವಿಗಳೇ ಒಂದು ಪಂಗಡ. ಏಕಕೋಶ ಜೀವಿಗಳನ್ನು ಪ್ರೋಟೋಜೊóೕವ ಎಂತಲೂ ಬಹುಕೋಶ ಜೀವಿಗಳನ್ನು ಮೆಟಜೊóೕವ ಎಂತಲೂ ಆತ ಹೆಸರಿಸಿದ್ದ.ಮೆಟಜೊóೕವ ಪಂಗಡವನ್ನು ಅವುಗಳ ಅಂತಸ್ತಿಗೆ ತಕ್ಕಂತೆ ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಥಮ ವಿಭಾಗವನ್ನು ಮಿಸೊಜೊóವವೆಂದು ಕರೆಯಲಾಯಿತು. ಇದರಲ್ಲಿ 50 ಪ್ರಭೇದಗಳಿವೆ. ಇವು ಅತ್ಯಂತ ಸೂಕ್ಷ್ಮ ಜೀವಿಗಳಾಗಿದ್ದು ಇವುಗಳ ಶರೀರ ಜೀವಕೋಶಗಳ ಒಂದೇ ಪದರವನ್ನು ಹೊಂದಿದೆ. ಇವುಗಳ ಜೀವಕೋಶ ಏಕಕೋಶ ಜೀವಿಗಳಾದ ಪ್ರೋಟೋಜೊóೕವಗಳಂತೆ ತಮ್ಮ ಕ್ರಿಯೆಗಳನ್ನು ನಡೆಸುತ್ತದೆ.ಎರಡನೆಯ ವಿಭಾಗ ಪ್ಯಾರಾಜೊóೕವ. ಈ ವಿಭಾಗದಲ್ಲಿ 5,000 ಪ್ರಭೇದಗಳಿವೆ. ಇವುಗಳೇ ಸ್ಪಂಜು ಪ್ರಾಣಿಗಳು. ಇವನ್ನು ಪೊರಿಫೆರ ಎಂಬ ವಂಶಕ್ಕೆ ಸೇರಿಸಲಾಗಿದೆ. ಮೂಲಭೂತವಾಗಿ ಈ ಪ್ರಾಣಿಗಳು ಕೆಲವೇ ರೀತಿಯ ಜೀವಕೋಶಗಳನ್ನು ಹೊಂದಿವೆ. ಇವುಗಳಲ್ಲಿ ಅತಿ ಮುಖ್ಯವಾದುವೆಂದರೆ ಅಮಿಬಾಯಿಡ್ ಕೋಶಗಳು. ಕೊರಳುಪಟ್ಟಿ ಹಾಗೂ ಶಿಲಿಕೆಗಳುಳ್ಳ ಕೋಶಗಳು. ಅಮಿಬಾಯಿಡ್ ಕೋಶಗಳು ಮುಂದೆ ವಿಭೇದೀಕರಣ ಕ್ಕೊಳಗಾಗಿ ಪ್ರಬುದ್ಧ ಸ್ಪಂಜು ಪ್ರಾಣಿಯ ವಿವಿಧ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತವೆ. ಈ ಪ್ರಾಣಿಗಳಲ್ಲಿ ಜೀವಕೋಶಗಳು ಬಹಳ ಕನಿಷ್ಠಮಟ್ಟದಲ್ಲಿ ತಮ್ಮ ಹೊಂದಾಣಿಕೆಯನ್ನು ಪ್ರದರ್ಶಿಸುತ್ತವೆ. ಜೀವಕೋಶಗಳು ಪ್ರಾಣಿಯ ಶರೀರದಿಂದ ಅತಿ ಸುಲಭವಾಗಿ ಬೇರ್ಪಟ್ಟು ಶರೀರದ ಬೇರೆಕಡೆಗೆ ಕಾಣಬಹುದು. ಹೀಗಾಗಿ ಈ ಪ್ರಾಣಿಗಳಲ್ಲಿ ನಿಜವಾದ ಅಂಗಾಂಶಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದ್ದುದರಿಂದ ಇವುಗಳ ಶರೀರವನ್ನು ಜೀವಕೋಶಗಳ ಸಮುದಾಯ ಮಾತ್ರವೆಂದು ಹೇಳಬಹುದು. ಮೂರನೆಯ ವಿಭಾಗವೇ ಯೂಮೆಟಜೊóೕವ. ಇದರಲ್ಲಿ ಜೀವ ಪ್ರಭೇದದ ಎಲ್ಲ ವಂಶಗಳೂ ಸೇರುತ್ತವೆ. ಈ ಎಲ್ಲ ವಂಶಗಳಲ್ಲಿಯೂ ಜೀವಕೋಶಗಳು ವಿಭೇದೀಕರಣ ಕ್ಕೊಳಪಟ್ಟು ಅತ್ಯಂತ ಉನ್ನತ ಹಾಗು ಕ್ಲಿಷ್ಟ ಅವಸ್ಥೆಗಳನ್ನು ತಲುಪಿರವುದು ಕಂಡುಬರುತ್ತದೆ. ಉದಾಹರಣೆಗೆ, ನರಮಂಡಲದ ಕೋಶಗಳು, ಮಾಂಸಖಂಡದ ಕೋಶಗಳು-ಇತ್ಯಾದಿ. ಈ ಜೀವಕೋಶಗಳು ನಿರ್ದಿಷ್ಟವಾದ ಅಂಗಕಟ್ಟು ಹಾಗೂ ಅಂಗಗಳಾಗಿರುವುದನ್ನು ಕಾಣಬಹುದು. ಯೂಮೆಟಜೊóವ ಪಂಗಡದ ಅತ್ಯಂತ ಕೆಳ ದರ್ಜೆಯ ವಂಶವೆಂದರೆ ರೇಡಿಯಲ್ ಸಿಮೆಟ್ರಿಯನ್ನು ಹೊಂದಿರುವ ಸೀಲೆಂಟರೇಟ ವಂಶ.ಈ ಎಲ್ಲ ವಂಶಗಳ ಉಗಮ ಇಂದಿಗೂ ಸರಿಯಾಗಿ ತಿಳಿದುಬಂದಿಲ್ಲ. ಏಕೆಂದರೆ ಈ ಜೀವಿಗಳ ಪ್ರಾಚೀನ ಅವಶೇಷಗಳು ಸಾಕಷ್ಟು ಮಟ್ಟಿಗೆ ದೊರೆತಿಲ್ಲ. ಮೃದುದೇಹ ಹೊಂದಿದ್ದ ಈ ಜೀವಿಗಳ ಅವಶೇಷಗಳು ಭೂಮಿಯಲ್ಲಿ ಉಳಿಯಲಾರದೆ ಕರಗಿಹೋಗಿವೆ. ಜೀವಪ್ರಭೇದದ ಕೆಲವು ಮುಖ್ಯ ವಂಶದ ಜೀವಿಗಳ ಅವಶೇಷಗಳು ಕೇಂಬ್ರಿಯನ್ ಕಾಲದಿಂದ ಸಿಕ್ಕಿವೆ. ಹೀಗೆ ಸಿಕ್ಕಿರುವ ಪಳೆಯುಳಿಕೆಗಳ ಆಧಾರದಿಂದ ನಾವು ಒಂದು ವಂಶದ ಜೀವಿಗಳಿಗೂ ಮತ್ತೊಂದು ವಂಶದ ಜೀವಿಗಳಿಗೂ ಇರುವ ಸಾಮ್ಯ ಹಾಗು ವ್ಯತ್ಯಾಸಗಳನ್ನು ತಿಳಿದು ಅವುಗಳಿಗಿರುವ ಸಂಬಂಧವನ್ನು ಕಂಡುಕೊಳ್ಳಬೇಕಾಗಿದೆ. ಹ್ಯಾಟಚೆಕ್ (1888) ಈ ಜೀವಿಗಳ ವಂಶಾವಳಿಯನ್ನು ಎರಡು ದಾರಿಗಳಲ್ಲಿ ಗುರುತಿಸುತ್ತಾನೆ. ಈ ಎರಡು ದಾರಿಗಳನ್ನು ಮುಖ್ಯವಾಗಿ ಆ ಜೀವಿಗಳ ಕೇಂದ್ರ ನರಮಂಡಲದ ಬೆಳೆವಣಿಗೆಯ ಸಹಾಯದಿಂದ ಕಂಡುಕೊಳ್ಳಲಾಗಿದೆ. ದ್ವಿಪಾಶರ್್ವಸಮಾಂಗತೆಯನ್ನು ಹೊಂದಿರುವ ಮೆಟಜೊóೕವ ಜೀವಿಗಳಲ್ಲಿ ನರಮಂಡಲ ಎರಡು ರೀತಿಯದಾಗಿದೆ. ಒಂದನೆಯ ರೀತಿಯ ನರಮಂಡಲ ಜೀವಿಯ ಅಧೋಭಾಗದಲ್ಲಿದ್ದರೆ, ಎರಡನೆಯ ರೀತಿಯದು ಜೀವಿಯ ಊಧರ್್ವಭಾಗದಲ್ಲಿದೆ. ಈ ರೀತಿಯ ಇಬ್ಬಗೆಯ ಬೆಳೆವಣಿಗೆಯನ್ನು ಭ್ರೂಣದ ಬೆಳೆವಣಿಗೆಯ ಪ್ರಥಮ ಹಂತಗಳಲ್ಲಿ ಕಾಣಬಹುದು. ಈ ವ್ಯತ್ಯಾಸಕ್ಕೆ ಬ್ಲಾಸ್ಟೊಪೋರ್ ಎಂಬ ರಂಧ್ರ ಮುಚ್ಚಿಕೊಳ್ಳುವುದೇ ಕಾರಣ. ಈ ರಂಧ್ರ ಯಾವಾಗಲೂ ಭ್ರೂಣದ ಒಂದು ಕೊನೆಯಿಂದ ಮುಚ್ಚಿಕೊಳ್ಳಲಾರಂಭಿಸುತ್ತದೆ.ಆನೆಲಿಡ ವಂಶದ ಪ್ರಾಣಿಗಳಲ್ಲಿ ಈ ರಂಧ್ರ ಉದ್ದವಾದ ತೆರೆಯಂತಾಗಿ ಭ್ರೂಣದ ಅಧೋಭಾಗದಲ್ಲಿ ಒಂದು ಗೆರೆ ಇದ್ದಂತೆ ಕಂಡುಬರುತ್ತದೆ. ಇದು ಹಿಂದಿನ ತುದಿಯ ಭಾಗದಿಂದ ಮುಚ್ಚಿಕೊಳ್ಳಲಾರಂಭಿಸಿ ಮುಂದುವರಿಯುತ್ತ ಬಂದು ಕೊನೆಗೆ ಮುಂಭಾಗದಲ್ಲಿ ಉಳಿದುಕೊಂಡು ಮುಂದೆ ಜೀವಿಯ ಬಾಯಿಯಾಗುತ್ತದೆ. ಈ ರೀತಿಯ ಭ್ರೂಣ ಬೆಳೆವಣಿಗೆಯನ್ನು ಹೊಂದಿರುವ ಎಲ್ಲ ಜೀವಿಗಳನ್ನೂ ಪ್ರೋಟೊಸ್ಟೋಮಿಯ ಎಂಬ ಗುಂಪಿಗೆ ಸೇರಿಸಲಾಗಿದೆ. ಇಲ್ಲಿ ಬ್ಲಾಸ್ಟೊಪೋರ್ ಪ್ರಬುದ್ಧ ಜೀವಿಯ ಬಾಯಾಗುತ್ತದೆ. ಈ ಜೀವಿಯಲ್ಲಿ ಆಸನದ್ವಾರ ಹೊರಚರ್ಮದ ಸಹಾಯದಿಂದ ಮುಂದೆ ಪ್ರತ್ಯೇಕವಾಗಿ ಉದಯವಾಗುತ್ತದೆ. ಪ್ರೋಟೊಸ್ಟೋಮಿಯ ಗುಂಪಿಗೆ ಸೇರಿದ ಜೀವಿಗಳಲ್ಲಿ ಕೆಲವು ತಮ್ಮ ಮೊಟ್ಟೆಗಳಲ್ಲಿ ಯೋಕ್ ಪದಾರ್ಥಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಉದಾಹರಣೆಗೆ, ಕೀಟವರ್ಗ ಹಾಗು ಅರ್ಯಾಕ್ನಿಡ. ಈ ಜೀವಿಗಳಲ್ಲಿ ಒಳಚರ್ಮ ಗ್ಯಾಸ್ಟೃಲೇಷನ್ನಿನಿಂದ ಉತ್ಪತ್ತಿಯಾಗುವುದಿಲ್ಲ. ಆದುದರಿಂದ ಈ ಜೀವಿಗಳಲ್ಲಿ ಬ್ಲಾಸ್ಟೊಪೋರ್ ಇಲ್ಲ. ಇವುಗಳು ಪ್ರೊಟೊಸ್ಟೋಮಿಯ ಗುಂಪಿಗೆ ಹೇಗೆ ಸೇರಿವೆಯೆಂದರೆ ಅವುಗಳ ಶರೀರ ಒಳರಚನೆಗೂ ಆನೆಲಿಡ ಜೀವಿಗಳ ಶರೀರದ ಒಳರಚನೆಗೂ ಅತ್ಯಂತ ಹೆಚ್ಚಿನ ಸಾಮ್ಯ ಹಾಗೂ ಸಂಬಂಧವಿದೆ.ಇನ್ನುಳಿದ ದ್ವಿಪಾಶರ್್ವಸಮಾಂಗತೆಯುಳ್ಳ ಜೀವಿಗಳ ಭ್ರೂಣದಲ್ಲಿ ಬ್ಲಾಸ್ಟೊಪೋರ್ ಆ ಜೀವಿಯ ಮುಂತುದಿಯ ಕಡೆಯಿಂದ ಮುಚ್ಚಿಕೊಳ್ಳಲಾರಂಭಿಸಿ ಬಾಲದ ಕಡೆಗೆ ಮುಂದುವರಿಯುತ್ತ ಹೋಗುತ್ತದೆ. ಕೊನೆಗೆ ಈ ಜೀವಿಯ ಬ್ಲಾಸ್ಟೊಪೋರ್ ಕೊನೆ ಆಸನದ್ವಾರವಾಗಿ ಉಳಿಯುತ್ತದೆ. ಈ ರೀತಿಯ ಬೆಳೆವಣಿಗೆಯುಳ್ಳ ಜೀವಿಗಳನ್ನು ಡ್ಯುಟಿರೊಸ್ಟೋಮಿಯ ಎಂದು ಕರೆಯುತ್ತಾರೆ.ಈ ರೀತಿಯ ಬೆಳೆವಣಿಗೆಯುಳ್ಳ ಜೀವಿಗಳಲ್ಲಿ ನರಮಂಡಲ ಬ್ಲಾಸ್ಟೊಪೋರ್ ಹತ್ತಿರವಿರುವ ಹೊರಚರ್ಮದ ಕೋಶಗಳಿಂದ ಬೆಳೆದು ಬರುತ್ತದೆ. ಈ ಬ್ಲಾಸ್ಟೊಪೋರ್ ಮುಚ್ಚಿಕೊಳ್ಳುವಿಕೆಗನುಗುಣವಾಗಿ ನರಮಂಡಲದ ಸ್ಥಾನ ಪ್ರೋಟಿರೊಸ್ಟೋಮಿಯದಲ್ಲಿ ಜೀವಿಯ ಅಧೋಭಾಗಕ್ಕೂ ಡ್ಯುಟಿರೊಸ್ಟೋಮಿಯದಲ್ಲಿ ಊಧರ್್ವಭಾಗಕ್ಕೂ ಪಲ್ಲಟಗೊಳ್ಳುತ್ತದೆ. ಆದುದರಿಂದ ಪ್ರೋಟೆರೊಸ್ಟೋಮಿಯ ಜೀವಿಗಳನ್ನು ಅಕಶೇರುಕಗಳೆಂತಲೂ ಡ್ಯುಟಿರೊಸ್ಟೋಮಿಯ ಜೀವಿಗಳನ್ನು ಕಶೇರುಕಗಳೆಂತಲೂ ಭ್ರೂಣ ಬೆಳೆವಣಿಗೆಯ ಕಾಲದಲ್ಲೇ ಗುರುತಿಸಬಹುದು. ಹೆಮಿಕಾರ್ಡೇಟ ಮತ್ತು ಎಕೈನೊಡರ್ಮೇಟ ಇವಕ್ಕೆ ಹೊರತಾಗಿವೆ.ಮೇಲೆ ಹೇಳಿದ ಎರಡು ವಿಭಾಗಗಳಲ್ಲಿಯೂ ಮಧ್ಯಚರ್ಮದ ಬೆಳೆವಣಿಗೆಯಲ್ಲಿಯೂ ವ್ಯತ್ಯಾಸಗಳನ್ನು ಕಾಣಬಹುದು. ಡ್ಯುಟಿರೊಸ್ಟೋಮಿಯದಲ್ಲಿ ಮಧ್ಯಚರ್ಮ ಆರಕೆಂಟೆರಾನ್ ಗೋಡೆಯಿಂದ ಬೇರ್ಪಟ್ಟು ಬೆಳೆಯುತ್ತದೆ. ಪ್ರೋಟಿರೊಸ್ಟೋಮಿಯದಲ್ಲಿ ಈ ರೀತಿಯ ಬೆಳೆವಣಿಗೆ ಇಲ್ಲ. ಪ್ರೋಟಿರೊಸ್ಟೋಮಿಯ ತನ್ನ ಅಸ್ಥಿ ರಚನೆಗಳನ್ನು ಹೊರ ಚರ್ಮದಿಂದ ಬೆಳೆಸಿಕೊಳ್ಳುತ್ತದೆ. ಆದುದರಿಂದ ಇದರ ಅಸ್ಥಿ ಹೊರ ಅಸ್ಥಿಯಾಗಿ ಈ ಜೀವಿಯನ್ನು ರಕ್ಷಿಸುತ್ತದೆ. ಡ್ಯುಟಿರೊಸ್ಟೋಮಿಯದಲ್ಲಿ ಕಂಡುಬರುವ ಒಳ ಅಸ್ಥಿ ಮಧ್ಯಚರ್ಮದಿಂದ ಬೆಳೆಯುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ ಕೈಟಿನ್ ಎಂಬ ಪಾಲಿಸ್ಯಾಕರೈಡ್ ರಾಸಾಯನಿಕ ವಸ್ತು ಪ್ರೋಟಿರೊಸ್ಟೋಮಿಯ ಜೀವಿಗಳಲ್ಲಿ ಕಂಡುಬರುತ್ತದೆ. ಈ ಕೈಟಿನ್ ವಸ್ತುವನ್ನು ಉತ್ಪಾದನೆ ಮಾಡುವ ಶಕ್ತಿ ಡ್ಯುಟಿರೊಸ್ಟೋಮಿಯಕ್ಕೆ ಇಲ್ಲ.ಪ್ರೋಟೋಜೊóೕವ ವಂಶದ ಜೀವಿಗಳು ಅತ್ಯಂತ ಕೆಳಮಟ್ಟದವು. ಇವು ಕಶಗಳನ್ನು ಹೊಂದಿರುವ ಆಲ್ಗೆಗಳಂಥ ಸಸ್ಯಗಳ ವರ್ಗದಿಂದ ಹುಟ್ಟಿ ಬಂದಿರಬೇಕು. ಏಕೆಂದರೆ ಕಶಗಳನ್ನು ಹೊಂದಿರುವ ಏಕಕೋಶ ಸಸ್ಯಗಳಿಗೂ ಏಕಕೋಶ ಪ್ರಾಣಿಗಳಿಗೂ ಬಹಳ ಸಾಮ್ಯವಿದೆ. ಯುಗ್ಲಿನ ಎಂಬುದು ಪ್ರಾಣಿ ಹಾಗು ಸಸ್ಯಗಳೆರಡಕ್ಕೂ ಮಧ್ಯಸ್ಥಜೀವಿಯಾಗಿ ಇಂದಿಗೂ ಇದೆ. ಇಂದು ಪ್ರೋಟೋಜೊóೕವ ವರ್ಗ 20,000 ಕ್ಕಿಂತಲೂ ಹೆಚ್ಚಿನ ಪ್ರಭೇದಗಳನ್ನು ಹೊಂದಿದೆ. ಈ ವಂಶದಲ್ಲಿ ಅನೇಕ ವರ್ಗಗಳಿವೆ. ಮಿಥ್ಯಪಾದಗಳು, ಕಶಗಳು ಹಾಗು ಶಿಲಕೆಗಳು ಈ ಪ್ರಾಣಿಗಳಲ್ಲಿ ಕಂಡುಬರುವ ಒಂದು ವಿಶಿಷ್ಟ ಲಕ್ಷಣ. ಪ್ರೋಟಿರೊಸ್ಪಾಂಜಿಯ ಎಂಬ ಏಕಕೋಶಕ ಜೀವಿ ಅತ್ಯಂತ ಸಾಮಾನ್ಯದರ್ಜೆಯ ಸ್ಪಂಜ್ ಪ್ರಾಣಿಗಳನ್ನು ಹೋಲುತ್ತದೆ. ಪ್ರೋಟೋಜೋóವ ಜೀವಿಗಳಲ್ಲಿ ವೈವಿಧ್ಯ ಹೆಚ್ಚು. ಕಶಗಳುಳ್ಳ ವರ್ಗದಲ್ಲಿ ಬಹಳ ರೀತಿಯ ಹಾಗೂ ಬಹಳ ಪರಿಸರಗಳಲ್ಲಿ ವಾಸಿಸುವ ಜೀವಿಗಳು ಕಂಡುಬಂದಿವೆ. ಇವುಗಳಲ್ಲಿ ಪರತಂತ್ರ ಜೀವಿಗಳು, ಸಹಜೀವನ ನಡೆಸುವ ಜೀವಿಗಳು ಇವೆ. ಕಶವುಳ್ಳ ಈ ಏಕಕೋಶಕ ಜೀವಿಗಳೆಲ್ಲವನ್ನೂ ಫ್ಲಾಜೆಲ್ಲೇಟ ಎಂಬ ವರ್ಗಕ್ಕೆ ಸೇರಿಸಲಾಗಿದೆ.ಸಾರ್ಕೊಡೈನ ಎಂಬ ಇನ್ನೊಂದು ವರ್ಗಕ್ಕೆ ಅಮೀಬ ಹಾಗೂ ಅದರ ಸಂಬಂಧಿಗಳನ್ನು ಸೇರಿಸಲಾಗಿದೆ. ಅಮೀಬ ಪ್ರೋಟಿಯಸ್ ಈ ವರ್ಗದ ಒಂದು ಉತ್ತಮ ಉದಾಹರಣೆ. ಪರತಂತ್ರ ಜೀವಿಗಳು ಈ ವರ್ಗದಲ್ಲಿ ಕಂಡುಬರುತ್ತವೆ. ಸಮುದ್ರವಾಸಿಗಳಾದ ಸಾರ್ಕೊಡೈನ ವರ್ಗದಲ್ಲಿ ಅತ್ಯಂತ ಮನೋಹರವಾದ ರಕ್ಷಾಕವಚಗಳು ಕಂಡುಬರುವುದುಂಟು. ಈ ವರ್ಗದ ಜೀವಿಗಳು ಪುರ್ವಕೇಂಬ್ರಿಯನ್ ಕಾಲದಿಂದಲೂ ಇದ್ದುವೆಂದು ತಿಳಿದುಬರುತ್ತದೆ.ಮತ್ತೊಂದು ವರ್ಗವಾದ ಸ್ಪೋರೋಜೊóೕವ ಸಂಪುರ್ಣವಾಗಿ ಪರತಂತ್ರ ಜೀವಿಗಳನ್ನು ಹೊಂದಿದೆ. ಮಲೇರಿಯ ಕಾಯಿಲೆಯನ್ನು ತರುವ ಪ್ಲಾಸ್ಮೋಡಿಯಮ್ ಜೀವಿ ಉತ್ತಮ ಉದಾಹರಣೆ.ಪ್ರೋಟೋಜೊóೕವ ವಂಶದಲ್ಲಿ ಅತ್ಯಂತ ಕ್ಲಿಷ್ಟ ಹಾಗೂ ಉನ್ನತ ಮಟ್ಟದ ಬೆಳೆವಣಿಗೆಯನ್ನು ಹೊಂದಿರುವ ಜೀವಿಗಳೆಂದರೆ ಸಿಲಿಯೇಟ ಎಂಬ ವರ್ಗದವು. ಇವು ಪ್ರೋಟೋಜೊóೕವ ವಂಶದಿಂದ ಬೇರ್ಪಡಿಸಿ ಪ್ರತ್ಯೇಕ ವಂಶವನ್ನೇ ಇದಕ್ಕಾಗಿ ಸೃಷ್ಟಿಸಬಹುದಾದ ಮಟ್ಟಿಗೆ ಬೆಳೆದಿವೆ. ಇವುಗಳಲ್ಲಿ ಉತ್ತಮಮಟ್ಟದ ಶರೀರ ಸೌಷ್ಠವ ಕಂಡುಬರುತ್ತದೆ. ಇವು ಆಹಾರ ಸೇವನೆಗೆ ಪ್ರತ್ಯೇಕವಾದ ಒಂದು ರಂಧ್ರವನ್ನು ಹೊಂದಿವೆ. ಇದನ್ನು ಬಾಯಿ ಎಂದು ಹೇಳಬಹುದು. ಇವುಗಳ ಚಲನಾಂಗಗಳು ಶಿಲಿಕೆಗಳು. ಈ ಜೀವಿಗಳು ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆಧುನಿಕ ತಳಿವಿಜ್ಞಾನಕ್ಕೆ ಈ ಜೀವಿಗಳು ಅದ್ಭುತ ಸಲಹೆಯನ್ನು ನೀಡಿವೆ. ಕಾಂಜುಗೇಷನ್ ಎಂಬ ಒಂದು ವಿಧವಾದ ಲೈಂಗಿಕ ಸಂತಾನೋತ್ಪತ್ತಿ ಈ ಜೀವಿಗಳ ಒಂದು ವೈಶಿಷ್ಟ್ಯ. ಪ್ರಾಣಿಪ್ರಪಂಚದ ಇನ್ನಾವ ಜೀವವರ್ಗಗಳಲ್ಲಿಯೂ ಈ ರೀತಿಯ ಸಂತಾನೋತ್ಪತ್ತಿ ಇಲ್ಲ. ಪ್ಯಾರಮೀಸಿಯಮ್, ವರ್ಟಿಸೆಲ್ಲ ಮುಂತಾದುವುಗಳು ಈ ವರ್ಗದ ಉತ್ತಮ ಉದಾಹರಣೆಗಳು. ಸೀಲಿಯೇಟ ವರ್ಗಕ್ಕೆ ಹತ್ತಿರದ ಸಂಬಂಧಿಗಳೆಂದರೆ ಸಕ್ಟೊರಿಯ ಜೀವಿಗಳು. ಇವುಗಳ ಜೈóಗೋಟಿನ ಬೆಳೆವಣಿಗೆಯ ಹಂತದಲ್ಲಿ ಶಿಲಿಕೆಗಳನ್ನು ಬೆಳೆಸಿಕೊಂಡು ಚಲಿಸಲಾರಂಭಿಸಿ ಕೊನೆಗೆ ಒಂದು ಕಡೆ ನೆಲೆಯಾಗಿ ನಿಂತು ಆ ನೆಲಕ್ಕೆ ಅಂಟಿಕೊಂಡು, ಶಿಲಿಕೆಗಳನ್ನು ಕಳೆದುಕೊಂಡು ಸಕ್ಟೊರಿಯಾ ಜೀವಿಯಾಗುತ್ತದೆ.ಪ್ರೋಟೋಜೊóೕವ ಪ್ರಾಣಿಗಳನ್ನು ಬಿಟ್ಟರೆ ಅಕಶೇರುಕವರ್ಗದಲ್ಲಿ ಸ್ಪಂಜ್ ಪ್ರಾಣಿಗಳಿಗೆ ಎರಡನೆಯ ಸ್ಥಾನ. ಈ ಪ್ರಾಣಿಗಳನ್ನು ಪೋರಿಫರ ಎಂಬ ವಂಶಕ್ಕೆ ಸೇರಿಸಲಾಗಿದೆ. ಇದರಲ್ಲಿ 5,000 ಪ್ರಭೇದಗಳಿವೆ. ಈ ಪ್ರಾಣಿಗಳನ್ನು ಕೆಳದರ್ಜೆಯ ಪ್ರಾಣಿಗಳೆಂದೇ ಪರಿಗಣಿಸಲಾಗಿದೆ. ಕಾರಣವೆಂದರೆ, ಈ ಜೀವಿಗಳ ಶರೀರ ಜೀವಕೋಶಗಳ ಒಂದು ಸಹಕಾರ ಸಂಘದಂತಿದೆ. ಏಕೆಂದರೆ ಈ ಜೀವಿಗಳಲ್ಲಿ ಬಹುಕೋಶಜೀವಿಗಳಲ್ಲಿ ಕಂಡುಬರುವ ಅಂಗಕಟ್ಟುಗಳ ರಚನೆಯಿಲ್ಲ. ಇದರ ಪ್ರತಿಯೊಂದು ಜೀವಕೋಶವೂ ಸ್ವತಂತ್ರವಾಗಿ ಬದುಕಬಲ್ಲ ಶಕ್ತಿಯನ್ನು ಹೊಂದಿದೆ. ಆದುದರಿಂದ ಈ ಜೀವಿಗಳನ್ನು ವಿಕಾಸ ತಜ್ಞರು ಇನ್ನೂ ಕನಿಷ್ಠಹಂತದಲ್ಲಿರುವ ಜೀವಿಗಳೆಂದೇ ತೀರ್ಮಾನಿಸುತ್ತಾರೆ. ಈ ಜೀವಿಗಳು ಎಂದರೆ ಅವು ಹೊಂದಿರುವ ಶರೀರದೊಳಗಿನ ಕ್ಲಿಷ್ಟ ಹಾಗೂ ಸಂಯುಕ್ತ ಕಾಲುವೆಗಳು, ಅಲ್ಲದೆ ಅವುಗಳು ಉತ್ಪಾದಿಸುವ ಮುಳ್ಳಿನಂತಿರುವ ಅಸ್ಥಿರಚನೆಗಳು. ಈ ಜೀವಿಗಳು ನಿರ್ಲಿಂಗ ಹಾಗೂ ಲೈಂಗಿಕರೀತಿಯ ಸಂತಾನೋತ್ಪತ್ತಿಯನ್ನು ಮಾಡಬಲ್ಲುವು. ಬಹುಕೋಶ ಜೀವಿಗಳಿಂದ ಸ್ವಲ್ಪಮಟ್ಟಿಗೆ ದೂರಸರಿದಿರುವ ಈ ಜೀವಿಗಳು ವಿಕಾಸದ ಹಾದಿಯಲ್ಲಿನ ಒಂದು ಕವಲುದಾರಿ. ಇವುಗಳಲ್ಲಿ ವಿಕಶಸದ ಹಿನ್ನಡೆಯನ್ನು ಕಾಣುತ್ತೇವೆ. ವಿಕಾಸ ಇಲ್ಲಿ ತಟಸ್ಥಗೊಂಡಿದೆ. ಅಕಶೇರುಕಗಳ ಮೀಸೋಜೋóವ ವಂಶ ಕೇವಲ 50 ಪ್ರಭೇದಗಳನ್ನು ಹೊಂದಿದೆ. ಅಕಶೇರುಕ ಪ್ರಪಂಚದ ವಿಕಾಸವೃಕ್ಷದಲ್ಲಿ ಈ ಜೀವಿಗಳ ನಿರ್ದಿಷ್ಟ ಸ್ಥಾನ ಇನ್ನೂ ನಿರ್ಧಾರವಾಗಿಲ.್ಲ ರಚನಾದೃಷ್ಟಿಯಿಂದ ಇವು ಬಹಳ ಸಾಮಾನ್ಯದರ್ಜೆಯ ಬಹುಕೋಶಜೀವಿಗಳು. ಒಂದೇ ಜೀವಕೋಶಗಳ ಒಂದು ಪದರವನ್ನು ಹೊಂದಿ ಶರೀರದೊಳಗಡೆ ಸಂತಾನೋತ್ಪಿತ್ತಿಯನ್ನು ಮಾಡುವ ಶಕ್ತಿಯುಳ್ಳ ಜೀವಕೋಶಗಳನ್ನು ಹೊಂದಿರುವ ಈ ಜೀವಿಗಳು ಸೀಲೆಂಟರೇಟ ವಂಶದ ಪ್ಲಾನುಲ ಎಂಬ ಲಾರ್ವವನ್ನು ಹೋಲುತ್ತವೆ. ಮೀಸೋಜೋನ ಪರತಂತ್ರ ಜೀವಿಗಳು ಸಮುದ್ರ ಜೀವಿಗಳಾದ ಟರ್ಬೆಲೇರಿಯ ಹಾಗೂ ಮತ್ತಿತರ ಹೀವಿಗಳ ಶರೀರದೊಳಗೆ ವಾಸಿಸುತ್ತವೆ. ಡೈಸಿಮ, ಕೊನೋಸಿಮ, ಡೆಕ ಇವುಗಳು ಮೀಸೋಜೋವ ವರ್ಗಕ್ಕೆ ಸೇರಿದ ಜೀವಿಗಳು.ಅಕಶೇರುಕಗಳ ಯೂಮೆಟಜೊóವ ಗುಂಪನ್ನು ಎರಡು ಭಾಗವಾಗಿ ವಿಂಗಡಿಸಿರುತ್ತಾರೆ. ಇದರಲ್ಲಿ ಮೊದಲನೆಯದು ಸೀಲೆಂಟರೇಟ ಮತ್ತು ಎರಡನೆಯದು ಬೈಲೆಟೇರಿಯ. ಸೀಲೆಂಟರೇಟ ವಿಭಾಗವನ್ನು ನೈಡೇರಿಯ ಹಾಗೂ ಟಿನೊಫೊರ ಎಂಬ ಎರಡು ವಂಶಗಳಾಗಿ ಪ್ರತ್ಯೇಕಿಸುತ್ತಾರೆ.ನೈಡೇರಿಯ ವರ್ಗದ ಜೀವಿಗಳು ಕೆಳದರ್ಜೆಯ ಯೂಮೆಟಜೋóವ. ನೈಡೇರಿಯ 8,900 ಪ್ರಭೇದಗಳನ್ನು ಹೊಂದಿದೆ. ಇವು ಇಪ್ಪದರ ಜೀವಿಗಳು. ಇವುಗಳ ಶರೀರದಲ್ಲಿ ಮುಖ್ಯವಾಗಿ ಪಾಲಿಪ್ ಮತ್ತು ಮೆಡ್ಯುಸ ಎಂಬ ಎರಡು ಬಗೆಯುಂಟು. ಈ ಪ್ರಾಣಿಗಳಲ್ಲಿ ಕುಟುಕು ಕಣಗಳೆಂಬ ವಿಶಿಷ್ಟರೀತಿಯ ಜೀವಕೋಶಗಳಿದ್ದು ಈ ಜೀವಿಗಳ ರಕ್ಷಣೆಯ ಕಾರ್ಯಕ್ಕೆ ನೆರವಾಗುತ್ತವೆ. ಸಂತಾನ ಪರ್ಯಾಯಚಕ್ರ (ಆಲ್ಟರೇಷನ್ ಆಫ್ ಜನರೇಷನ್್ಸ) ಈ ಜೀವಿಗಳ ವಿಶಿಷ್ಟ ಗುಣ. ಇವುಗಳ ಶರೀರ ಕೊಳವೆಯಾಕಾರದಲ್ಲಿದ್ದು ಬಾಯನ್ನು ಮಾತ್ರ ಹೊಂದಿದೆ. ಶರೀರದಲ್ಲಿ ಇನ್ನಾವ ರಂಧ್ರಗಳೂ ಇಲ್ಲ. ಹೈಡ್ರ, ಅರೀಲಿಯ, ಸೀಅನಿಮನಿ, ಹವಳದ ಪ್ರಾಣಿಗಳು ಇವು ಈ ವಂಶಕ್ಕೆ ಸೇರಿವೆ. ಹವಳದ ಪ್ರಾಣಿಗಳು ಹವಳದ ಗುಡ್ಡಗಳನ್ನು ರಚಿಸುತ್ತವೆ. ಈ ಜೀವಿಗಳು ಅತ್ಯುತ್ತಮ ಪಳೆಯುಳಿಕೆಗಳನ್ನು ಭೂಗರ್ಭದಲ್ಲಿ ಬಿಟ್ಟಿವೆಯಾದ್ದರಿಂದ ಇವುಗಳ ಚರಿತ್ರೆಯನ್ನು ಆರ್ಡೊವೀಸಿಯನ್ ಕಾಲದಿಂದಲೂ ಅಭ್ಯಸಿಸಬಹುದು.ಟಿನೊಫೊರ 80 ಪ್ರಭೇದಗಳನ್ನು ಹೊಂದಿದೆ. ಎಲ್ಲವೂ ಸಮುದ್ರವಾಸಿಗಳು. ಇವುಗಳನ್ನು ಸಾಮಾನ್ಯವಾಗಿ ಕೊಂಬ್ಜೆಲ್ಲೀಸ್ ಎಂದು ಕರೆಯುತ್ತಾರೆ. ಬಾಚಣಿಗೆಯಂತಿರುವ ಶಿಲಿಕೆಗಳ ತಟ್ಟೆಗಳನ್ನು ಇವುಗಳ ಶರೀರದ ಮೇಲೆ ಕಾಣಬಹುದು. ಇವು ವೃತ್ತ ಅಥವಾ ದ್ವಿಪಾಶರ್್ವಸಮಾಂಗತೆಯನ್ನು ಹೊಂದಿವೆ. ಈ ಜೀವಿಗಳಲ್ಲಿ ಕುಟುಕುಗಣಗಳು ಇಲ್ಲ. ಸಂತಾನಪರ್ಯಾಯಚಕ್ರ ಈ ಪ್ರಾಣಿಗಳಲ್ಲಿಲ್ಲ. ಇವುಗಳು ಪುರ್ವ ಕೇಂಬ್ರಿಯನ್ ಕಾಲದಿಂದಲೂ ಇದ್ದು ಉಳಿದು ಬಂದುವೆಂದು ತಿಳಿದುಬರುತ್ತದೆ. ಪ್ಲುರೋಬೇಕಿಯ, ಹಾರ್ಮಿಫೊರ ಮತ್ತು ಟನೊಪ್ಲಾನ ಬೆರಾಯ ಉತ್ತಮ ಉದಾಹರಣೆಗಳು.ಯೂಮೆಟಜೋವದ ಎರಡನೆಯ ವಿಭಾಗವೇ ಬೈಲಟೇರಿಯ. ಬೈಲಟೇರಿಯ ವಿಭಾಗವನ್ನು ಪ್ರೊಟಿರೊಸ್ಟೋಮಿಯ ಮತ್ತು ಡ್ಯುಟಿರೊಸ್ಟೋಮಿಯ ಎಂದು ಎರಡು ಗುಂಪುಗಳಾಗಿ ವಿಭಾಗಿಸಿದೆ.ಪ್ರೊಟಿರೊಸ್ಟೋಮಿಯದಲ್ಲಿ ಎಂಟೊಪ್ರಾಕ್ಟ (60 ಪ್ರಭೇದಗಳನ್ನು ಹೊಂದಿದೆ), ಪ್ರಯಾಪುಲಿಡ (8 ಪ್ರಭೇದಗಳನ್ನು ಹೊಂದಿದೆ), ಆಸ್ಕಿಹೆಲ್ಮೆನ್ಥಿಸ್ (12,500 ಪ್ರಭೇದಗಳನ್ನು ಹೊಂದಿದೆ) ಈ ವಂಶಗಳಿವೆ. ಇವುಗಳ ಸ್ಥಾನಮಾನಗಳು ಇನ್ನೂ ಪುರ್ಣವಾಗಿ ಬಗೆಹರಿದಿಲ್ಲ.ಪ್ಲಾಟಿಹೆಲ್ಮೆಂಜೀಸ್ (12,4000 ಪ್ರಭೇದಗಳನ್ನು ಹೊಂದಿದೆ), ನ್ಯಾಮರಟೈನ (800 ಪ್ರಭೇದಗಳನ್ನು ಹೊಂದಿದೆ), ಮೊಲಸ್ಕ (1,28,000 ಪ್ರಭೇದಗಳನ್ನು ಹೊಂದಿದೆ), ಸೈಫನ್ಕುಲಿಡ (250 ಪ್ರಭೇದಗಳನ್ನು ಹೊಂದಿದೆ), ಎಕೈಯುರಿಡ (159 ಪ್ರಭೇದಗಳನ್ನು ಹೊಂದಿದೆ), ಆನೆಲಿಡ (87,000 ಪ್ರಭೇದಗಳನ್ನು ಹೊಂದಿದೆ), ಒನೈಕೊಫೊರ (70 ಪ್ರಭೇದಗಳನ್ನು ಹೊಂದಿದೆ). ಪೆಂಟಾಸ್ಟೊಮಿಡ (60 ಪ್ರಭೇದಗಳನ್ನು ಹೊಂದಿದೆ), ಟಾರ್ಡಿಗ್ರಾಡ (200 ಪ್ರಭೇದಗಳನ್ನು ಹೊಂದಿದೆ), ಆತಾರ್್ರಪೊಡ (8,50,000 ಪ್ರಭೇದಗಳನ್ನು ಹೊಂದಿದೆ), ಲೊಫೊಫೊರೇಟ (5000 ಪ್ರಭೇದಗಳನ್ನು ಹೊಂದಿದೆ). ಇವುಗಳ ಮೊದಲಿನ ಏಳು ವಂಶಗಳಲ್ಲಿ ಗರ್ಭಕಟ್ಟಿದ ಮೊಟ್ಟೆಯ ವಿಭಜನೆಯನ್ನು ಸುರುಳಿ (ಸುತ್ತು) ರೀತಿಯ ವಿಭಜನೆಯೆಂದು ಪರಿಗಣಿಸಲಾಗಿದೆ. ಇನ್ನುಳಿದವನ್ನು ಮೆಟಮೆರಿಕ್ ಪ್ರೋಟೊಸ್ಟೋಮಿಯ ಎಂದು ಕರೆಯುತ್ತಾರೆ.ಮಾಲಸ್ಕ ವಂಶದಲ್ಲಿ 1,28,000 ಪ್ರಭೇದಗಳಿವೆ. ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಪ್ರಭೇದಗಳನ್ನು ಹೊಂದಿರುವ ಎರಡನೆಯ ವಂಶವೇ ಇದು. ಈ ಪ್ರಾಣಿಗಳು ಭೂಮಿ, ಸಿಹಿನೀರು, ಸಮುದ್ರದ ನೀರು-ಈ ಎಲ್ಲೆಡೆಯಲ್ಲಿಯೂ ಪಸರಿಸಿವೆ. ಕೇಂಬ್ರಿಯನ್ ಕಾಲದಿಂದಲೂ ಈ ಪ್ರಾಣಿಗಳ ಅವಶೇಷಗಳು ಸಿಕ್ಕಿವೆ. ಆದರೆ ಇವುಗಳ ಅವಶೇಷಗಳ ಅಭ್ಯಾಸದಿಂದ ವಂಶವಂಶಗಳ ಪರಸ್ಪರ ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ಜ್ಞಾನ ಲಭಿಸಿಲ್ಲ. ಈ ಜೀವಿಗಳ ಶರೀರ 4 ಭಾಗಗಳನ್ನು ಹೊಂದಿದೆ: 1. ಮಾಂಸಖಂಡಗಳಿಂದೊಡ ಗೂಡಿದ ಪಾದ 2. ಶಿರ 3. ಶರೀರ 4. ಮ್ಯಾಂಟಲ್. ಈ ಮ್ಯಾಂಟಲ್ ಜೀವಿಯ ಶರೀರದ ಮೇಲಿರುವ ಅತ್ಯಂತ ಗಟ್ಟಿಯಾದ ಚಿಪ್ಪನ್ನು ಉತ್ಪಾದನೆ ಮಾಡುತ್ತದೆ. ಮೂಲಭೂತವಾಗಿ ಈ ಜೀವಗಳು ಪಾಶರ್್ವಸಮರೂಪತೆಯನ್ನು ಹೊಂದಿರುತ್ತವೆ. ಆದರೆ ಇವು ಪ್ರಬುದ್ಧ ವಂiÀÄಸ್ಸಿಗೆ ಬಂದ ಮೇಲೆ ಈ ಸಮರೂಪತೆ ವ್ಯತ್ಯಾಸಗೊಳ್ಳುತ್ತದೆ. ಈ ಜೀವಿಗಳ ದೇಹವನ್ನು ಮೃದುವಾದ ಚರ್ಮ ಮುಚ್ಚಿರುವುದರಿಂದ ಇವುಗಳ ದೇಹ ಮೃದುವಾಗಿರುತ್ತದೆ. ಖಂಡಗಳ ಉಂಗುರಗಳ ಜೋಡಣೆ ಈ ಪ್ರಾಣಿಗಳ ಶರೀರದಲ್ಲಿ ಇಲ್ಲವೆಂದು ತಿಳಿಯಲಾಗಿತ್ತು. ಆದರೆ ಇಂದು ಖಂಡಗಳನ್ನೊಳಗೊಂಡಿರುವ ಜೀವಿಗಳೂ ಈ ವಂಶದಲ್ಲಿ ಸೇರಿವೆ. ಖೈಟಾನ್ ಎಂಬ ಮೃದ್ವಂಗಿ ಇದಕ್ಕೆ ಒಂದು ನಿದರ್ಶನ. ಬಸವನ ಹುಳು, ಕಪ್ಪೆಚಿಪ್ಪಿನ ಹುಳು, ಶಂಕುವಿನ ಹುಳು, ಆಕ್ಟೊಪಸ್, ನಾಟಿಲಸ್ ಮುಂತಾದುವು ಈ ವಂಶಕ್ಕೆ ಸೇರುತ್ತವೆ.ವಲಯವಂತ ಪ್ರಾಣಿಗಳನ್ನೊಳಗೊಂಡ ವಂಶವನ್ನು ಆನೆಲಿಡ್ ಎಂದು ಕರೆಯುತ್ತಾರೆ. ಇದು ಫ್ರೊಟೊಸ್ಟೋಮಿಯ ಗುಂಪಿನ ಎರಡನೆಯ ಮುಖ್ಯ ಶಾಖೆ. ಎರೆಹುಳುಗಳು, ನೀರಿಸ್ ಹುಳುಗಳು, ಇತ್ಯಾದಿ ಪ್ರಾಣಿಗಳನ್ನೊಳಗೊಂಡಿರುವ ಈ ವಂಶದಲ್ಲಿ 8,700 ಪ್ರಭೇದಗಳಿವೆ. ಈ ಪ್ರಾಣಿಗಳ ಶರೀರ ಉಂಗುರ ಅಥವಾ ಖಂಡಗಳಿಂದ ಮಾಡಲ್ಪಟ್ಟಿದೆ. ಈ ಖಂಡಗಳ ಜೋಡಣೆ ನಿರ್ದಿಷ್ಟವಾಗಿದೆ. ಇವುಗಳಲ್ಲಿ ಶರೀರಾವಕಾಶ (ಸೀಲೋಮ್) ಅತ್ಯುತ್ತಮವಾಗಿ ಬೆಳೆದಿರುವುದು ಕಂಡುಬರುತ್ತದೆ. ಈ ಅವಕಾಶ ಜೀರ್ಣಾಂಗಗಳನ್ನು ಮಾಂಸಖಂಡಗಳಿಂದೊಡಗೂಡಿದ ಶರೀರದ ಗೋಡೆಯಿಂದ ಬೇರ್ಪಡಿಸುತ್ತದೆ. ಈ ಪ್ರಾಣಿಗಳಲ್ಲಿ ಚೆನ್ನಾಗಿ ವೃದ್ಧಿಯಾದ ನರಮಂಡಲವಿದೆ, ಬೆಳೆವಣಿಗೆಯಲ್ಲಿ ಟ್ರೋಕೋಫೊರ್ ಎಂಬ ಲಾರ್ವದ ಅವಸ್ಥೆ ಕಂಡುಬರುತ್ತದೆ. ಶರೀರದ ಮೇಲುಗಡೆ ಬಿರುಗೂದಲುಗಳು ಕಂಡುಬರುತ್ತವೆ. ಪಾಲಿಕೀಟ ಎಂಬ ವರ್ಗ ಈ ವಂಶದ ಅತ್ಯಂತ ಕನಿಷ್ಠ ದರ್ಜೆಯ ಪ್ರಾಣಿಗಳನ್ನು ಹೊಂದಿದೆ. ಈ ಪ್ರಾಣಿಗಳಲ್ಲಿ ಬೈರೇಮಸ್ ಪಾದಗಳು ಕಂಡುಬರುತ್ತವೆ. ಆನೆಲಿಡ್ ವಂಶದಲ್ಲಿ ಹೆಚ್ಚು ವಿಕಾಸ ಹೊಂದಿರತಕ್ಕವು ಎರೆಹುಳುಗಳು. ಇವುಗಳಲ್ಲಿ ಬಿರುಗೂದಲುಗಳಿದ್ದು ಚಲನೆಗೆ ಇವುಗಳಿಂದ ಸಹಾಯ ಒದಗಿದೆ. ಜಿಗಣೆಗಳೂ ಈ ವಂಶಕ್ಕೆ ಸೇರಿವೆ. ಪ್ರೋಟೋಸ್ಟೋಮಿಯ ವರ್ಗದ ಪ್ರಾಣಿಗಳಲ್ಲೆಲ್ಲ ಅತ್ಯಂತ ಉಚ್ಚಾವಸ್ಥೆ ಮುಟ್ಟಿರುವ ವಂಶವೆಂದರೆ ಆತಾರ್್ರಪೊಡ ವಂಶ (ಸಂಧಿಪದಿಗಳು). ಈ ವಂಶದಲ್ಲಿ 8,50,000 ಪ್ರಭೇದಗಳಿವೆ. ಈ ಪ್ರಾಣಿಗಳ ಪ್ರಭೇದದ ಸಂಖ್ಯೆ ಇಡಿ ಪ್ರಾಣಿಪ್ರಪಂಚದ ಪ್ರಭೇದಗಳ 3/4 ರಷ್ಟಿರುತ್ತದೆ. ಈ ವಂಶ ಹೊಂದಿರುವಷ್ಟು ಭೂವಾಸಿ ಪ್ರಭೇದಗಳನ್ನು ಅಕಶೇರುಕ ಪ್ರಾಣಿ ಪ್ರಪಂಚದ ಇನ್ನಾವ ವಂಶವೂ ಹೊಂದಿಲ್ಲ. ಈ ವಂಶಕ್ಕೆ ಸೇರಿರುವ ಪ್ರಾಣಿಗಳು ಎಲ್ಲ ರೀತಿಯ ಪರಿಸರಗಳಲ್ಲೂ ವಾಸಿಸುತ್ತವೆ. ಈ ಪ್ರಾಣಿಗಳ ಶರೀರದ ಮೇಲೆ ಕಠಿಣವಾದ ಕರಟದಂಥ (ಕ್ಯುಟಿಕಲ್) ಕವಚವಿದೆ. ಪ್ರಾಣಿಗಳ ಶರೀರ ಹಾಗೂ ಪಾದಗಳು ಕೀಲುಗಳನ್ನು ಹೊಂದಿವೆ. ಆದುದರಿಂದಲೇ ಇವನ್ನು ಸಂಧಿಪದಿಗಳೆಂದು ಕರೆಯುತ್ತಾರೆ. ಈ ಜೀವಿಗಳು ತಮ್ಮ ಶರೀರದ ಮೇಲಿರುವ ಕ್ಯುಟಿಕಲ್ ಹೊದಿಕೆಯನ್ನು ವಲಯವಂತ ಪ್ರಾಣಿಗಳಿಂದ ಪಡೆದುಕೊಂಡಿವೆ. ಈ ರಕ್ಷಾಕವಚದಿಂದಾಗಿ ಇವುಗಳ ಶರೀರದಿಂದ ಹೊರಹೋಗುವ ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಇವು ಭೂವಾಸಕ್ಕೆ ಹೊಂದಿಕೊಳ್ಳಲು ಬಹಳ ಅನುಕೂಲವಾಯಿತು. ಈ ಪ್ರಾಣಿಗಳ ಶರೀರದೊಳಗೆ ಸಿಲೋಮಿಗೆ ಬದಲು ಹೀಮೋಸೀಲ್ ಎಂಬ ದೇಹಾವಕಾಶವಿದೆ. ಈ ಜೀವಿಗಳ ಶರೀರ ಖಂಡಗಳ ಜೋಡಣೆ ಯಿಂದಲೇ ಆಗಿದೆ. ಈ ಜೋಡಣೆ ಬಾಹ್ಯವಾಗಿ ಅತಿ ಸ್ಪಷ್ಟವಾಗಿ ಕಾಣುತ್ತದೆ. ಏಡಿಗಳು, ಚೇಳುಗಳು, ಜೇಡಗಳು, ನೊಣಗಳು, ಸೊಳ್ಳೆಗಳು, ಜರಿಗಳು ಇತ್ಯಾದಿ ಪ್ರಾಣಿಗಳು ಇದರಲ್ಲಿ ಸೇರಿವೆ. ಪಳೆಯುಳಿಕೆಗಳನ್ನು ಬಿಟ್ಟಿರುವ ಪ್ರಾಚೀನ ಜೀವಿಗಳೂ ಬಹಳ ಉಂಟು. ಇವುಗಳಲ್ಲಿ ಟ್ರೈಲೊಬೈಟ್ ಎಂಬ ವರ್ಗ ಅತಿ ಮುಖ್ಯವಾದದ್ದು. ಆತಾರ್್ರಪೊಡ ವಂಶದ ಪ್ರಾಣಿಗಳ ಬಾಹ್ಯರಚನಾಭ್ಯಾಸದಿಂದ ಕ್ರಸ್ಟೇಷಿಯವರ್ಗ, ಮಿರಿಯೊಪೊಡ ವರ್ಗ ಹಾಗೂ ಇನ್ಸೆಕ್ಟ ವರ್ಗ ಒಂದೇ ಪುರ್ವವಂಶಜರಿಂದ ಹುಟ್ಟಿ ಬಂದಿವೆಯೆಂಬುದು ಅರ್ಥವಾಗುತ್ತದೆ. ಕ್ರಸ್ಟೇಷಿಯ ವರ್ಗದ ಪ್ರಾಣಿಗಳಲ್ಲಿ ಶಿರ ಹಾಗು ಎದೆಯ ಭಾಗಗಳು ಕೂಡಿಕೊಂಡು ಶಿರೋವಕ್ಷವಾಗಿರುವುದು ಸಾಮಾನ್ಯ. ಇವು ಜಲವಾಸಿಗಳು. ಕೇಂಬ್ರಿಯನ್ ಕಾಲದಿಂದಲೂ ಈ ಜೀವಿಗಳ ಅವಶೇಷಗಳು ದೊರೆತಿವೆ. ಆತಾರ್್ರಪೊಡ ವಂಶದಲ್ಲಿ ಅತ್ಯಂತ ಹೆಚ್ಚಿನ ಪ್ರಭೇದಗಳನ್ನು ಹೊಂದಿರುವ ವರ್ಗವೇ ಕೀಟವರ್ಗ. ಇದರಲ್ಲಿ 6,60,000ಕ್ಕಿಂತ ಹೆಚ್ಚು ಪ್ರಭೇದಗಳಿವೆ. ಅತ್ಯಂತ ಉಚ್ಚಮಟ್ಟದ ವಿಕಾಸವನ್ನು ಹೊಂದಿರುವ ಈ ಪ್ರಾಣಿಗಳು ಭೂಮಿ, ನೀರುಗಳೆರಡನ್ನೂ ಆಕ್ರಮಿಸಿಕೊಂಡಿವೆ. ಅರಾಕ್ನಿಡಾ ವರ್ಗದಲ್ಲಿ ಚೇಳುಗಳು ಲಿಮ್ಯುಲಸ್ ಮುಂತಾದವು ಸೇರಿವೆ. ಇವು ಪಳೆಯುಳಿಕೆಗಳನ್ನು ಹೊಂದಿವೆ. ಒಟ್ಟಿನಲ್ಲಿ ಅಕಶೇರುಕ ಪ್ರಾಣಿವರ್ಗದ ಭವ್ಯತೆಯ ಮಜಲನ್ನು ಆತಾರ್್ರಪೊಡ ವಂಶದ ಪ್ರಾಣಿಗಳಲ್ಲಿ ಕಾಣುತ್ತೇವೆ.ಆನೆಲಿಡ ಹಾಗೂ ಆತಾರ್್ರಪೊಡ ವಂಶಗಳೆರಡಕ್ಕೂ ಮಧ್ಯಸ್ಥಜೀವಿಯಾದ, ಆತಾರ್್ರಪೊಡಗಳು ಆನೆಲಿಡ ಜೀವಿಗಳಿಂದಲೇ ಹುಟ್ಟಿ ಬಂದಿವೆಯೆಂಬುದನ್ನು ತೋರಿಸುವ ಜೀವಿ ಪೆರಿಪೇಟಸ್. ಇದು ಒನೈಕೊಫೋರ ವರ್ಗಕ್ಕೆ ಸೇರುತ್ತದೆ. ಇದರಲ್ಲಿ ಆತಾರ್್ರಪೊಡ ಹಾಗು ಆನೆಲಿಡ ಜೀವಿಗಳೆರಡರ ಗುಣಗಳೂ ಇವೆ. ಇದು ಸುಮಾರು 70 ಪ್ರಭೇದಗಳನ್ನು ಹೊಂದಿದೆ. ಈ ಪ್ರಾಣಿ ರೂಪದಲ್ಲಿ ಪಾಲಿಕೀಟ ವರ್ಗದ ಪ್ರಾಣಿಗಳನ್ನು ಹೋಲುತ್ತದೆ. ಇದರ ಶರೀರದ ಮೇಲಿರುವ ಕ್ಯುಟಿಕಲ್ ಪೊರೆ ಆನೆಲಿಡ ಜೀವಿಗಳಲ್ಲಿರುವಂತೆ ತೆಳ್ಳಗಿದೆ. ಮಾಂಸಖಂಡಗಳು ಹಾಗು ಶುದ್ಧೀಕರಣಾಂಗಗಳು ಆ ಪ್ರಾಣಿಯಲ್ಲಿರುವಂತೆಯೇ ಇವೆ. ಇದರ ಜನನಾಂಗದ ನಾಳಗಳು ಶಿಲಿಕೆಗಳನ್ನು ಹೊಂದಿವೆ. ಆತಾರ್್ರಪೊಡ ವಂಶದಲ್ಲಿ ಈ ಶಿಲಿಕೆಗಳಿವೆ. ಇದರ ದವಡೆಗಳು ಹಾಗೂ ಹೀಮೋಸೀಲ್ ಮತ್ತು ರಕ್ತಪರಿಚಲನೆ ಆತಾರ್್ರಪೊಡ ವಂಶದ ಪ್ರಾಣಿಗಳನ್ನು ಹೋಲುತ್ತದೆ. ಉಸಿರಾಟದ ಅಂಗಗಳಾದ ಟ್ರೇಕಿಯ ನಾಳಗಳು ಇದನ್ನು ಆತಾರ್್ರಪೊಡವೆಂದು ಸ್ಥಿರಪಡಿಸುತ್ತವೆ. ಆದುದರಿಂದ ಈ ಜೀವಿ ಆನೆಲಿಡ ವಂಶದಿಂದ ಆತಾರ್್ರಪೊಡ ವಂಶಕ್ಕೆ ವಿಕಾಸದ ಹಾದಿಯಲ್ಲಿ ಪ್ರಯಾಣ ಮಾಡುತ್ತಿದೆಯೊ ಎಂಬಂತಿದೆ.ಪ್ರೋಟೊಸ್ಟೋಮಿಯ ವರ್ಗದಲ್ಲಿ ಮೊದಲೇ ಹೇಳಿರುವ ಮಿಕ್ಕೆಲ್ಲ ವಂಶಗಳು ಅತಿ ಸಾಮಾನ್ಯ ದರ್ಜೆಯ ಜೀವಿಗಳು.ಡ್ಯುಟಿರೊಸ್ಟೋಮಿಯ ವಿಭಾಗದಲ್ಲಿ ಬರುವ ಅಕಶೇರುಕಗಳೆಂದರೆ ಕೀಟೊಗ್ನಾಥ ವಂಶ, ಪೋಗೊನೋಫೊರ ಮತ್ತು ಎನೊಡರ್ಮೆಟ ವಂಶಗಳು. ಇವುಗಳಲ್ಲಿ ಗರ್ಭಕಟ್ಟಿದ ಮೊಟ್ಟೆಯ ವಿಭಜನೆ ಪ್ರೋಟೊಸ್ಟೋಮಿಯ ರೀತಿಯ ಪ್ರಾಣಿಗಳಲ್ಲಿರುವಂತಿಲ್ಲ. ಇಲ್ಲಿ ಬ್ಲಾಸ್ಟೊಪೋರ್ ಗುದದ್ವಾರವಾಗಿ, ಬಾಯಿ ಪ್ರತ್ಯೇಕವಾಗಿ ಉದಯವಾಗುತ್ತದೆ. ಕೀಟೊಗ್ನಾಥದಲ್ಲಿ ಒಂದು ವಿಶಿಷ್ಟರೀತಿಯ ಲಾರ್ವ ಜೀವಿ ಕಂಡುಬರುತ್ತದೆ. ಕೀಟೋಗ್ನಾಥ 50 ಪ್ರಭೇದಗಳನ್ನು ಹೊಂದಿದೆ. ಇವುಗಳನ್ನು ಅಂಬುಳಗಳೆಂದು ಕರೆಯುತ್ತಾರೆ. ಈ ಜೀವಿಗಳು ಅಕಶೇರುಕದ ಪ್ರಬುದ್ಧ ವಂಶಗಳಿಗೆ ಹೆಚ್ಚಿನ ಸಂಬಂಧವನ್ನು ಪ್ರದರ್ಶಿಸುವುದಿಲ್ಲ.ಪೋಗೊನೋಪುರ ವಂಶ 50 ಪ್ರಭೇದಗಳನ್ನು ಹೊಂದಿದೆ. ಇವುಗಳೆಲ್ಲ ಆಳವಾದ ಸಮುದ್ರದಲ್ಲಿ ವಾಸಿಸುತ್ತವೆ. ಇವುಗಳ ಬಗ್ಗೆ ಹೆಚ್ಚಿನ ಸಾಹಿತ್ಯವಿಲ್ಲ. ಇವುಗಳಲ್ಲಿ ಒಂದು ಅಥವಾ ಹೆಚ್ಚು ಟೆಂಟಕಲ್ಗಳು ಕಂಡುಬರುತ್ತವೆ. ಇವುಗಳ ಡಿಂಬಗಳ ಜೀವನ ತಿಳಿದುಬಂದಿಲ್ಲ.ಎಕೈನೊಡರ್ಮೆಟ ವಂಶ ನಕ್ಷÀತ್ರಮೀನುಗಳು, ಸಮುದ್ರದ ಅರ್ಚಿನ್ಗಳು, ಸಮುದ್ರದ ಸೌತೆ-ಇತ್ಯಾದಿ ಜೀವಿಗಳನ್ನು ಒಳಗೊಂಡಿದೆ. ಈ ಪ್ರಾಣಿಗಳು ಆರೀಯ ಸಮಾಂಗತೆಯನ್ನು ಹೊಂದಿವೆ. ಆದರೆ ಇವುಗಳ ಲಾರ್ವ ಜೀವಿಗಳು ಮಾತ್ರ ದ್ವಿಪಾಶರ್್ವಸಮಾಂಗತೆಯನ್ನು ಹೊಂದಿರುತ್ತವೆ. ಆದುದರಿಂದ ಈ ಕೇಂದ್ರ ಸೌಷ್ಠವ ಜೀವಿ ಪ್ರಬುದ್ಧಾವಸ್ಥೆಯನ್ನು ತಲುಪಿದ ಮೇಲೆ ಗಳಿಸಿಕೊಂಡದ್ದು ಎಂದು ಧಾರಾಳವಾಗಿ ಹೇಳಬಹುದು. ಎಕೈನೊಡರ್ಮೇಟ ವಂಶದ ಎಲ್ಲ ಪ್ರಾಣಿಗಳೂ ಸಮುದ್ರವಾಸಿಗಳು. ಈ ಪ್ರಾಣಿಗಳ ಪ್ರಾಚೀನ ಇತಿಹಾಸ ಕೇಂಬ್ರಿಯನ್ ಕಾಲದಿಂದಲೂ ತಿಳಿದುಬಂದಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ವಂಶದ ಜೀವಿಗಳ ಲಾರ್ವ ಜೀವಿ ಹೆಮಿಕಾರ್ಡೇಟ ವಂಶದ ಲಾರ್ವಜೀವಿಯನ್ನು ಹೋಲುತ್ತದೆ. ಈ ಗುಣದಿಂದಾಗಿ ಈ ವಂಶ ಕಶೇರುಕಗಳ ಉದಯಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ತೀರ್ಮಾನಕ್ಕೆ ಬರಲು ಸಹಾಯಮಾಡಿದೆ. ಏಕೆಂದರೆ ಎಕೈನೊಡರ್ಮೇಟ ವಂಶದ ಡೆಪ್ಲುರುಲ ಲಾರ್ವ, ಹೆಮಿಕಾರ್ಡೇಟ ವಂಶದ ಟಾರ್ನೆರಿಯ ಲಾರ್ವಾಕ್ಕೆ ಅತಿ ಹೆಚ್ಚಿನ ಹೋಲಿಕೆಯನ್ನು ತೋರಿಸುತ್ತದೆ. ಎಕೈನೊಡರ್ಮೇಟ ವಂಶದ ಜೀವಿಗಳ ಶರೀರ ಪಂಚ ಬಾಹುಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ. ಇವುಗಳ ಶರೀರದಲ್ಲಿ ಸುಣ್ಣ ಮಿಶ್ರಿತವಾದ ತಟ್ಟೆಗಳು ರಕ್ಷಾಕವಚದಂತಿವೆ. ಆದುದರಿಂದ ಇವುಗಳನ್ನು ಕಠಿಣಚರ್ಮಿಗಳೆನ್ನುತ್ತಾರೆ.

  • ಉಲ್ಲೇಖಗಳು

ಉಲ್ಲೇಖಗಳು

<Refferences\>

  1. May, Robert (16 September 1988). "How Many Species Are There on Earth?. ISBN 0-412-61390-5. Check |isbn= value: invalid character (help). 
Other Languages
Afrikaans: Ongewerweldes
العربية: لافقاريات
asturianu: Invertebráu
azərbaycanca: Onurğasızlar
беларуская: Беспазваночныя
български: Безгръбначни
brezhoneg: Divellkeineg
bosanski: Beskičmenjaci
català: Invertebrat
čeština: Bezobratlí
Cymraeg: Infertebrat
Deutsch: Wirbellose
Ελληνικά: Ασπόνδυλο
English: Invertebrate
Esperanto: Senvertebruloj
español: Invertebrado
eesti: Selgrootud
euskara: Ornogabe
français: Invertébré
galego: Invertebrado
Kreyòl ayisyen: Envètebre
interlingua: Invertebrato
Bahasa Indonesia: Avertebrata
íslenska: Hryggleysingjar
italiano: Invertebrata
日本語: 無脊椎動物
Basa Jawa: Avertebrata
한국어: 무척추동물
kernowek: Divellkeynek
Кыргызча: Омурткасыздар
Latina: Invertebrata
lietuvių: Bestuburiai
македонски: Без’рбетници
മലയാളം: അകശേരുകികൾ
Bahasa Melayu: Invertebrata
Plattdüütsch: Warvellose Deerter
Nederlands: Ongewervelden
norsk nynorsk: Virvellause dyr
occitan: Invertebrata
ਪੰਜਾਬੀ: ਕੰਗਰੋੜਹੀਣ
polski: Bezkręgowce
پنجابی: انکنگریڑے
português: Invertebrados
română: Nevertebrate
संस्कृतम्: अकशेरुकाः
srpskohrvatski / српскохрватски: Beskralježnjaci
Simple English: Invertebrate
slovenčina: Bezstavovce
slovenščina: Nevretenčarji
српски / srpski: Бескичмењаци
Basa Sunda: Invertebrata
తెలుగు: అకశేరుకాలు
тоҷикӣ: Бемуҳраҳо
Tagalog: Imbertebrado
Türkçe: Omurgasızlar
українська: Безхребетні
oʻzbekcha/ўзбекча: Umurtqasizlar
Winaray: Inbertebrado